1056. ಸೌಭಾಗ್ಯ ಲಕ್ಷ್ಮಿ (೧೯೮೭)

ಸೌಭಾಗ್ಯ ಲಕ್ಷ್ಮಿ ಚಿತ್ರದ ಹಾಡುಗಳು 
  1. ಪ್ರಿಯ್ ಪ್ರಿಯ ವಿನೋದವೇ 
  2. ಇನ್ನೂ ಇನ್ನೂ ನೋಡುವಾಸೆ 
  3. ಹೊಸ ಕನಸು 
  4. ಬಾಳಲ್ಲಿ ಜ್ಯೋತಿಯೂ 
  5. ಇನ್ನೆಲ್ಲೂ ನೀನೂ 
  6. ಬಾಳಲ್ಲಿ ಜ್ಯೋತಿಯೂ 
ಸೌಭಾಗ್ಯ ಲಕ್ಷ್ಮಿ (೧೯೮೭) - ಪ್ರಿಯ ಪ್ರಿಯ ವಿನೋದವೇ 
ಸಂಗೀತ : ಎಸ್.ಪಿ.ಬಿ.  ಸಾಹಿತ್ಯ : ಚಿ.ಉದಯಶಂಕರ ಗಾಯನ : ವಾಣಿಜಯರಾಮ ಎಸ್ಪಿಬಿ 

ಹೆಣ್ಣು : ಪ್ರಿಯ ಪ್ರಿಯ ವಿನೋದವೇ ನನ್ನಲ್ಲಿ ಇನ್ನೂ ಕೋಪವೇ
          ಬಿಡು ಬಿಡು ಚೆಲ್ಲಾಟವ ನನ್ನಾಸೆ ಹೇಳುವೇ
ಗಂಡು : ಪ್ರಿಯೆ ಪ್ರಿಯೇ ಇನ್ನೇತಕೇ ನನ್ನನ್ನೂ ಹೀಗೆ ಕಾಡುವೇ
            ನಡಿ ನಡಿ ನೀ ದೂರಕೆ ನಾಳೇ ರಾತ್ರಿ ನೋಡುವೇ

ಹೆಣ್ಣು : ಬಯಸಿ ಬಂದಾಗ ಸೇರದೇ ಹೀಗೇಕೇ ನೂಕುವೇ
         ಈ ಹೆಣ್ಣನು ನೀ ಮನ್ನಿಸು ಓ ನಲ್ಲ ಬೇಡುವೇ
        ಬಯಸಿ ಬಂದಾಗ ಸೇರದೇ ಹೀಗೇಕೇ ನೂಕುವೇ
         ಈ ಹೆಣ್ಣನು ನೀ ಮನ್ನಿಸು ಓ ನಲ್ಲ ಬೇಡುವೇ
ಗಂಡು : ಬರಿ ಮಾತಿಗೇ ಮನಸೋಲದು ನನ್ನಾಸೆ ತೀರದೂ 
ಹೆಣ್ಣು : ಪ್ರಿಯ ಪ್ರಿಯ ವಿನೋದವೇ ನನ್ನಲ್ಲಿ ಇನ್ನೂ ಕೋಪವೇ
          ಬಿಡು ಬಿಡು ಚೆಲ್ಲಾಟವ ನನ್ನಾಸೆ ಹೇಳುವೇ
          ಪ್ರಿಯೆ ಪ್ರಿಯೇ ಇನ್ನೇತಕೇ ನನ್ನನ್ನೂ ಹೀಗೆ ಕಾಡುವೇ
ಗಂಡು :  ನಡಿ ನಡಿ ನೀ ದೂರಕೆ ನಾಳೇ ರಾತ್ರಿ ನೋಡುವೇ 

ಗಂಡು : ಬಳಸಿ ತೋಳಿಂದ ನನ್ನನ್ನೂ ಮುತ್ತೊಂದ ನೀಡದೇ
           ನೀ ಮನ್ನಿಸು ಬಾ ಎಂದರೇ ನಾ ಹೇಗೆ ಸೇರುವೇ
          ಬಳಸಿ ತೋಳಿಂದ ನನ್ನನ್ನೂ ಮುತ್ತೊಂದ ನೀಡದೇ
          ನೀ ಮನ್ನಿಸು ಬಾ ಎಂದರೇ ನಾ ಹೇಗೆ ಸೇರುವೇ
ಹೆಣ್ಣು : ಒಂದೇ ಸತೀ ಬೇಕೆಂದರೇ ನೂರಾದು ನೀಡುವೇ 
ಇಬ್ಬರು : ಇದೇ  ಇದೇ ಆನಂದವೂ ಎಂದೆಂದೂ ಬಾಳ ತುಂಬಲಿ 
             ಸದಾ ಸುಖ ಸಂತೋಷದಿ ಈ ನಮ್ಮ ಜೀವ ತೇಲಲೀ  
            ಇದೇ  ಇದೇ ಆನಂದವೂ
--------------------------------------------------------------------------------------------------------------------------

ಸೌಭಾಗ್ಯ ಲಕ್ಷ್ಮಿ (೧೯೮೭) - ಇನ್ನೂ ಇನ್ನೂ ನೋಡುವಾಸೆ 
ಸಂಗೀತ : ಎಸ್.ಪಿ.ಬಿ.  ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್ಪಿ.ಶೈಲಜಾ ಎಸ್ಪಿಬಿ

ಗಂಡು : ಇನ್ನೂ ಇನ್ನೂ ನೋಡುವಾಸೆ ಇನ್ನೂ ಮಾತನಾಡುವಾಸೇ
           ಪ್ರೇಮ ಇಂದೆಂಥ ಪ್ರೇಮ ಪ್ರೇಮ ಇಂದೆಂಥ ಪ್ರೇಮ
           ಸ್ನೇಹ ಇದೆಂಥ ಸ್ನೇಹ ಮನಸ ಅರಿತೂ ಬೆರೆತು ಅನುದಿನ ಸುಖ ಪಡುವ ಬಯಕೆ
ಹೆಣ್ಣು : ಇನ್ನೂ ಇನ್ನೂ ನೋಡುವಾಸೆ ಇನ್ನೂ ಮಾತನಾಡುವಾಸೇ
           ಪ್ರೇಮ ಇಂದೆಂಥ ಪ್ರೇಮ ಪ್ರೇಮ ಇಂದೆಂಥ ಪ್ರೇಮ
           ಸ್ನೇಹ ಇದೆಂಥ ಸ್ನೇಹ ಮನಸ ಅರಿತೂ ಬೆರೆತು ಅನುದಿನ ಸುಖ ಪಡುವ ಬಯಕೆ
ಗಂಡು : ಇನ್ನೂ ಇನ್ನೂ ನೋಡುವಾಸೆ ಇನ್ನೂ ಮಾತನಾಡುವಾಸೇ
           ಪ್ರೇಮ ಇಂದೆಂಥ ಪ್ರೇಮ ಪ್ರೇಮ ಇಂದೆಂಥ ಪ್ರೇಮ 
ಹೆಣ್ಣು :  ಸ್ನೇಹ ಇದೆಂಥ ಸ್ನೇಹ

ಗಂಡು : ಓ.. ಏನೇನೋ ಹೇಳುವಾಸೇ ಈಗ ಹೀಗೇಕೇ
ಹೆಣ್ಣು : ಓ.. ಏನೇನೋ ಕೇಳುವಾಸೇ ಈಗ ಹೀಗೇಕೇ
ಗಂಡು : ಓ.. ಏನೇನೋ ನೋಡುವಾಸೇ ಈಗ ಹೀಗೇಕೆ
ಹೆಣ್ಣು : ಒಂಟಿ ಬಾಳು ನಲ್ಲ ಹೇಳು ಇನ್ನೇತಕೇ....
ಗಂಡು : ಇನ್ನೂ ಇನ್ನೂ ನೋಡುವಾಸೆ ಇನ್ನೂ ಮಾತನಾಡುವಾಸೇ
           ಪ್ರೇಮ ಇಂದೆಂಥ ಪ್ರೇಮ ಪ್ರೇಮ ಇಂದೆಂಥ ಪ್ರೇಮ 
ಹೆಣ್ಣು :  ಪ್ರೇಮ ಇಂದೆಂಥ ಪ್ರೇಮ ಪ್ರೇಮ ಇಂದೆಂಥ ಪ್ರೇಮ
ಗಂಡು : ಸ್ನೇಹ ಇದೆಂಥ ಸ್ನೇಹ ಮನಸ ಅರಿತೂ ಬೆರೆತು ಅನುದಿನ ಸುಖ ಪಡುವ ಬಯಕೆ
ಗಂಡು : ಇನ್ನೂ ಇನ್ನೂ ನೋಡುವಾಸೆ ಇನ್ನೂ ಮಾತನಾಡುವಾಸೇ
           ಪ್ರೇಮ (ಓ) ಇಂದೆಂಥ ಪ್ರೇಮ
ಗಂಡು : ಓ..  ಓ.  ಓ ...  ಸ್ನೇಹ ಇದೆಂಥ ಸ್ನೇಹ....  

ಹೆಣ್ಣು : ನೀ ಹೀಗೆ ಹಾಡಿ ಹಾಡಿ ಓಡಿ ಬಂದಾಗ ಅಹ್ಹಹ್ಹಹ್ಹ ...
ಗಂಡು : ನೀ ಹೀಗೆ ಹೂವಿನಂತೆ ಒಮ್ಮೆ ನಕ್ಕಾಗ
ಹೆಣ್ಣು : ಹ್ಹ.. ನೀ ಹೀಗೆ ಮೈಯ ಮೈಯ ಸೋಕಿ ನಿಂತಾಗ
ಗಂಡು : ಹೆಣ್ಣೇ ನಿನ್ನ ಅಪ್ಪು ಆಸೆ ಹೀಗೇತಕೆ...
ಹೆಣ್ಣು : ಇನ್ನೂ ಇನ್ನೂ ನೋಡುವಾಸೆ ಇನ್ನೂ ಮಾತನಾಡುವಾಸೇ
           ಪ್ರೇಮ ಇಂದೆಂಥ ಪ್ರೇಮ 
ಗಂಡು :  ಪ್ರೇಮ ಇಂದೆಂಥ ಪ್ರೇಮ
ಹೆಣ್ಣು : ಸ್ನೇಹ ಇದೆಂಥ ಸ್ನೇಹ
ಗಂಡು : ಮನಸ ಅರಿತೂ ಬೆರೆತು ಅನುದಿನ ಸುಖ ಪಡುವ ಬಯಕೆ
ಹೆಣ್ಣು :  ಇನ್ನೂ ಇನ್ನೂ ನೋಡುವಾಸೆ ಇನ್ನೂ ಮಾತನಾಡುವಾಸೇ
           ಪ್ರೇಮ ಇಂದೆಂಥ ಪ್ರೇಮ
ಗಂಡು : ಸ್ನೇಹ ಇದೆಂಥ ಸ್ನೇಹ....  
--------------------------------------------------------------------------------------------------------------------------

ಸೌಭಾಗ್ಯ ಲಕ್ಷ್ಮಿ (೧೯೮೭) - ಹೊಸ ಕನಸು ಚಿಗುರಿ ಮನದಲಿ 
ಸಂಗೀತ : ಎಸ್.ಪಿ.ಬಿ.  ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್ಪಿ.ಶೈಲಜಾ,  ಎಸ್ಪಿಬಿ

ಗಂಡು : ಹೊಸ ಕನಸು ಚಿಗುರಿ ಮನದಲಿ ಹೊಸ ಬಯಕೆ ಅರಳಿ ಎದೆಯಲಿ
            ಹಗಲು ಇರುಳು ದಿನವೂ ಸುಖದ ಕಡಲಲಿ ಹೀತವಾಗಿ
            ತೇಲಾಡುವಾಸೇ ಈಗ ನಿನ್ನನು ಸೇರಿ ಬೇಗ ಸಂತೋಷವೀ ಸದಾ
            ಸಂತೋಷವೀ ಸದಾ
ಹೆಣ್ಣು : ಹೊಸ ಕನಸು ಚಿಗುರಿ ಮನದಲಿ ಹೊಸ ಬಯಕೆ ಅರಳಿ ಎದೆಯಲಿ
            ಹಗಲು ಇರುಳು ದಿನವೂ ಸುಖದ ಕಡಲಲಿ ಹೀತವಾಗಿ
            ತೇಲಾಡುವಾಸೇ ಈಗ ನಿನ್ನನು ಸೇರಿ ಬೇಗ ಸಂತೋಷವೀ ಸದಾ
            ಸಂತೋಷವೀ ಸದಾ

ಹೆಣ್ಣು : ಆಆಆ... ಕಾಣದ ನಿನ್ನನ್ನೂ ಕಂಡಾಗ 
          ಹೇಹೇಹೇ... ನನ್ನನು ನೀ ನೋಡಿ ಬಂದಾಗ 
         ಹೇ.. ನನ್ನ ಕಂಬನಿಯು ಇಂಗಿತು ಅಹ್ಹ.. ಮಾತು ಬಾರದಲೇ ಹೋಯಿತು 
ಗಂಡು: ಬಂಗಾರದಂಥ ಈ ಗೊಂಬೆಯಿಂದ ಬಾಳಲ್ಲಿ ಆನಂದ ನನಗಾಯಿತು 
ಹೆಣ್ಣು : ಹೊಸ ಕನಸು ಚಿಗುರಿ ಮನದಲಿ ಹೊಸ ಬಯಕೆ ಅರಳಿ ಎದೆಯಲಿ
ಗಂಡು :  ಹಗಲು ಇರುಳು ದಿನವೂ ಸುಖದ ಕಡಲಲಿ ಹೀತವಾಗಿ
ಹೆಣ್ಣು : ತೇಲಾಡುವಾಸೇ ಈಗ ನಿನ್ನನು ಸೇರಿ ಬೇಗ ಸಂತೋಷವೀ ಸದಾ
ಗಂಡು : ಸಂತೋಷವೀ ಸದಾ
           
ಗಂಡು: ಆ...ಆಹ್ಹಾ ಕಣ್ಣಲ್ಲಿ ಸಂಗೀತ ನೀ ಹಾಡಿ
          ಓಓಹ್ಹೋಹ್ಹೋ... ಪ್ರೇಮದ ಸಂಕೇತ ನೀ ತೋರಿ
         ನನ್ನ ಮೌನದಲಿ ಕೂಗಿದೆ ಹೇ .. ನಿನ್ನ ವೇದನೆಯ ಹೇಳಿದೇ
ಹೆಣ್ಣು : ನಿನ್ನಂಥ ಜಾಣ ಇನ್ನೆಲ್ಲೂ ಕಾಣೇ ನಿನ್ನಲ್ಲೋ ನಾನಲ್ಲೇ ಎಂದಿಗೂ
ಗಂಡು : ಹೊಸ ಕನಸು ಚಿಗುರಿ ಮನದಲಿ ಹೊಸ ಬಯಕೆ ಅರಳಿ ಎದೆಯಲಿ
ಹೆಣ್ಣು :  ಹಗಲು ಇರುಳು ದಿನವೂ ಸುಖದ ಕಡಲಲಿ ಹೀತವಾಗಿ
ಗಂಡು :  ತೇಲಾಡುವಾಸೇ ಈಗ ನಿನ್ನನು ಸೇರಿ ಬೇಗ ಸಂತೋಷವೀ ಸದಾ
ಹೆಣ್ಣು : ಸಂತೋಷವೀ ಸದಾ
ಇಬ್ಬರು : ಲಲ ಲಲಾ ಲಲ ಲಲಾ ಲಲ ಲಲಾ ಲಲ ಲಲಾ
--------------------------------------------------------------------------------------------------------------------------

ಸೌಭಾಗ್ಯ ಲಕ್ಷ್ಮಿ (೧೯೮೭) - ಬಾಳಲಿ ಜ್ಯೋತಿಯು ಎಂದೂ ಆರದಿರಲಿ 
ಸಂಗೀತ : ಎಸ್.ಪಿ.ಬಿ.  ಸಾಹಿತ್ಯ : ಚಿ.ಉದಯಶಂಕರ ಗಾಯನ : ವಾಣಿಜಯರಾಮ ಎಸ್ಪಿ.ಶೈಲಜಾ, ಕೋರಸ್  

ಕೋರಸ್ : ಆಆಆ.. ಆಆಆ.. ಆಆಆ.. ಆಆಆ.. ಆಆಆ..
ಹೆಣ್ಣು : ಬಾಳಲಿ ಜ್ಯೋತಿಯು ಎಂದೂ ಆರದಿರಲಿ
         ಇರುಳನ್ನೂ ನುಂಗಿ ಶಾಂತಿ ತುಂಬಿ ಸಹನೆ ತುಂಬಿ ಆನಂದವಾ ನೀಡಲಿ
         ಆಆಆ.. ಬಾಳಲಿ ಜ್ಯೋತಿಯು ಎಂದೂ ಆರದಿರಲಿ
         ಇರುಳನ್ನೂ ನುಂಗಿ ಶಾಂತಿ ತುಂಬಿ ಸಹನೆ ತುಂಬಿ ಆನಂದವಾ ನೀಡಲಿ
         ಆಆಆ.. ಬಾಳಲಿ ಜ್ಯೋತಿಯು ಎಂದೂ ಆರದಿರಲಿ

ಕೋರಸ್ : ಆಆಆ.. ಆಆಆ.. ಆಆಆ.. ಆಆಆ.. ಆಆಆ..

ಹೆಣ್ಣು : ಸೌಭಾಗ್ಯ ಲಕ್ಷ್ಮಿ ಬಂದು ಮನೆಯಲ್ಲಿ ನಿಲ್ಲಲ್ಲಿ 
          ಬಂಗಾರ ಗೆಜ್ಜೆ ನಾದ ಮನೆಯಲ್ಲಿ ತುಂಬಲಿ 
         ಆನಂದ ಲಕ್ಷ್ಮಿ ಬಂದು ಮನದಲ್ಲಿ ನಿಲ್ಲಲಿ 
         ಆನಂದ ಗೀತೆ ನಮ್ಮ ಬದುಕಲ್ಲಿ ತುಂಬಲಿ 
         ಒಲವನು ತಂದಾ ಸ್ವಾಮಿ ಸುಖವಾಗಿ ಬಾಳಲಿ 
         ಒಲವನು ತಂದಾ ಸ್ವಾಮಿ ಸುಖವಾಗಿ ಬಾಳಲಿ 
        ವೇದನೇ ಶೋಧನೇ ಇನ್ನೂ ಏತಕೆ ಕಾಪಾಡು ನಮ್ಮನ್ನೂ ತಾಯೀ          
        ಬಾಳಲಿ ಜ್ಯೋತಿಯು ಎಂದೂ ಆರದಿರಲೀ 
         ಇರುಳನ್ನೂ ನುಂಗಿ ಶಾಂತಿ ತುಂಬಿ ಸಹನೆ ತುಂಬಿ ಆನಂದವಾ ನೀಡಲಿ
         ಆಆಆ.. ಬಾಳಲಿ ಜ್ಯೋತಿಯು ಎಂದೂ ಆರದಿರಲಿ 

ಕೋರಸ್ : ತನನನನನಾ ತನನನನನಾ ತನನನನನಾ 
               ತನನನನನಾ ತನನನನನಾ ತನನನನನಾ 
ಹೆಣ್ಣು : ಬದುಕಲ್ಲಿ ಎಂದೂ ನಾನು ನೋವನ್ನೇ ನೋಡಿದೇ 
          ಮುಳ್ಳಲ್ಲಿ ಓಡಿ ಬಂದೇ ಬೆಳಕನ್ನೇ ಕಾಣದೇ 
          ಮುಳ್ಳೆಲ್ಲಾ ಹೂವಿನಂತೇ ಮೃದುವಾಗಿ ಹೋಗಲೀ 
         ಕಣ್ಣೀರು ಇನ್ನೂ ಮುಂದೇ ಪನ್ನಿರೆಯಾಗಲೀ 
         ಈ ನಿನ್ನ ಸ್ನೇಹ ಹೀಗೇ ಹೊಸದಾರಿ ತೋರಲಿ 
         ಈ ನಿನ್ನ ಸ್ನೇಹ ಹೀಗೇ ಹೊಸದಾರಿ ತೋರಲಿ 
        ಕಾಣದ ಭೀತಿಯ ದೂರ ಮಾಡುತಾ ಕಾಪಾಡು ನಮ್ಮನೂ ದೇವೀ            
ಇಬ್ಬರು : ಬಾಳಲಿ ಜ್ಯೋತಿಯು ಎಂದೂ ಆರದಿರಲೀ 
         ಇರುಳನ್ನೂ ನುಂಗಿ ಶಾಂತಿ ತುಂಬಿ ಸಹನೆ ತುಂಬಿ ಆನಂದವಾ ನೀಡಲಿ
         ಆಆಆ.. ಬಾಳಲಿ ಜ್ಯೋತಿಯು ಎಂದೂ ಆರದಿರಲಿ 
--------------------------------------------------------------------------------------------------------------------------

ಸೌಭಾಗ್ಯ ಲಕ್ಷ್ಮಿ (೧೯೮೭) - ಇನ್ನೆಲ್ಲೂ ನೀನೂ ಹೋಗಲಾರೇ ನನ್ನ ದೂರ ಮಾಡಲಾರೆ 
ಸಂಗೀತ : ಎಸ್.ಪಿ.ಬಿ.  ಸಾಹಿತ್ಯ : ಚಿ.ಉದಯಶಂಕರ ಗಾಯನ : ವಾಣಿಜಯರಾಮ ಎಸ್ಪಿಬಿ, ಕೋರಸ್ 

ಹೆಣ್ಣು : ಇನ್ನೆಲ್ಲೂ ನೀನೂ ಹೋಗಲಾರೇ ನನ್ನ ದೂರ ಮಾಡಲಾರೆ
          ಸಂಜೆತನಕ ಇಲ್ಲೇ ನಿಲ್ಲುವೇ
          ನನ್ನಾಸೆಯನ್ನು ಕೇಳಬೇಕು ಕಣ್ಣಲ್ಲಿ ಕಣ್ಣು ಸೇರಬೇಕು
         ಇನ್ನೂ ನಿನ್ನ ನಾನೂ ಬಿಡೇನು ಬಿಡೇನು ಬಿಡೇನು ಚೆಲುವ ಬಿಡೇನು
ಗಂಡು : ಇನ್ನೆಲ್ಲೂ ನಾನು ಹೋಗಲಾರೇ ನಿನ್ನ ದೂರ ಮಾಡಲಾರೆ
          ಸಂಜೆತನಕ ಇಲ್ಲೇ ನಿಲ್ಲುವೇ
          ನಿನ್ನಾಸೆಯನ್ನು ಕೇಳಬೇಕು ಕಣ್ಣಲ್ಲಿ ಕಣ್ಣು ಸೇರಬೇಕು
         ಇನ್ನೂ ನಿನ್ನ ನಾನೂ ಬಿಡೇನು ಬಿಡೇನು ಬಿಡೇನು ಚೆಲುವೇ ಬಿಡೇನು
ಕೋರಸ್ : ಲಾಲಾ ಲಾಲಾ ಲಲ ಲಾಲ ಲಾಲಾ ಲಾಲಾ ಲಲ ಲಾಲ

ಹೆಣ್ಣು : ಪ್ರೀತಿವೆಂಬ ಮಾತಿಗೆ ಅರ್ಥವೇನೋ ಬಲ್ಲೆಯಾ ಮಾತಿನಲ್ಲೇ ಸ್ವರ್ಗ ಕೋರಬೇಡಾ
ಗಂಡು : ಎಲ್ಲಿ ನನ್ನ ನಲ್ಲೆಯೂ ಅಲ್ಲೇ ನನ್ನ ಸ್ವರ್ಗವೂ ಮಾತಿನಲ್ಲಿ ನನ್ನ ಕಾಡಬೇಡ
ಹೆಣ್ಣು : ಇಂಥಾ ಆತ್ಮಾನಂದ ತಂದು ಆನಂದ ದೂರ ಜಾರಿಯೇ ನೀನೂ ನನ್ನಿಂದಾ
ಗಂಡು : ಏಕೆ ಹೀಗೇ ಮಾತಿನಲ್ಲೇ ನನ್ನ ಕೊಲ್ಲುವೇ ನಂಬಿದ ಈ  ನಲ್ಲೆಗೇ ನಾ ಮೋಸ ಮಾಡೇನೂ
ಹೆಣ್ಣು : ಇನ್ನೆಲ್ಲೂ ನೀನೂ ಹೋಗಲಾರೇ ನನ್ನ ದೂರ ಮಾಡಲಾರೆ ಸಂಜೆತನಕ ಇಲ್ಲೇ ನಿಲ್ಲುವೇ
ಗಂಡು : ನಿನ್ನಾಸೆಯನ್ನು (ಆ) ಕೇಳಬೇಕು (ಅಹ್ಹಹ್ ) ಕಣ್ಣಲ್ಲಿ ಕಣ್ಣು (ಅಹ್ಹಹ್ಹ ) ಸೇರಬೇಕು
          ಇನ್ನೂ ನಿನ್ನ ನಾನೂ ಬಿಡೇನು ಬಿಡೇನು ಬಿಡೇನು ಚೆಲುವೇ ಬಿಡೇನು
ಹೆಣ್ಣು : ಎಲ್ಲೂ ನೀನೂ (ಅಹ್ಹಹ್)  ಹೋಗಲಾರೇ (ಲಲ್ಲಲಾಲ) ನನ್ನ ದೂರ (ಓಹೋಹೋ) ಮಾಡಲಾರೆ

ಕೋರಸ್ : ಲಾಲಾ ಲಾಲಾ ಲಲ ಲಾಲ ಲಾಲಾ ಲಾಲಾ ಲಲ ಲಾಲ
ಗಂಡು : ಸಂಜೆಯಾಗಿ ಹೋಗಿದೇ ಹಾಡಿ ಹಾಡಿ ಬಳಲಿದೆ ಹೋಗುವಂತೆ ಹೇಳಬಾರದೇನೂ
ಹೆಣ್ಣು : ಇಂದು ರಾತ್ರಿಯಾಗಲಿ ಹೂವ ಮಂಚ ಹಾಡಲಿ ಅಲ್ಲೀತನಕ ಕಾಯಲಾರೆ ಏನೋ 
ಗಂಡು : ರಾತ್ರಿ ಎಂದಾಗ ನಿನ್ನ ಕಂಡಾಗ ಈಗ ನನ್ನಲ್ಲಿ ಏನೋ ಆವೇಗ
ಹೆಣ್ಣು : ಇಂದು ನೀನು ಚಿನ್ನದಂತ ಮಾತನಾಡಿದೆ ಕಾಣದ ಸಂತೋಷವ ನನ್ನಲ್ಲಿ ತುಂಬಿದೆ 
ಗಂಡು : ಇನ್ನೆಲ್ಲೂ ನಾನು ಹೋಗಲಾರೇ ನಿನ್ನ ದೂರ ಮಾಡಲಾರೆ ಸಂಜೆತನಕ ಇಲ್ಲೇ ನಿಲ್ಲುವೇ
ಹೆಣ್ಣು : ನನ್ನಾಸೆಯನ್ನು ಕೇಳಬೇಕು ಕಣ್ಣಲ್ಲಿ ಕಣ್ಣು ಸೇರಬೇಕು
         ಇನ್ನೂ ನಿನ್ನ ನಾನೂ ಬಿಡೇನು ಬಿಡೇನು ಬಿಡೇನು ಚೆಲುವ ಬಿಡೇನು
ಕೋರಸ್ : ಲಾಲಾ ಲಾಲಾ ಲಲ ಲಾಲ ಲಾಲಾ ಲಾಲಾ ಲಲ ಲಾಲ
--------------------------------------------------------------------------------------------------------------------------

ಸೌಭಾಗ್ಯ ಲಕ್ಷ್ಮಿ (೧೯೮೭) - ಬಾಳಲಿ ಜ್ಯೋತಿಯು ಎಂದೂ ಆರದಿರಲಿ 
ಸಂಗೀತ : ಎಸ್.ಪಿ.ಬಿ.  ಸಾಹಿತ್ಯ : ಚಿ.ಉದಯಶಂಕರ ಗಾಯನ : ವಾಣಿಜಯರಾಮ

ಬಾಳಲಿ ಜ್ಯೋತಿಯು ಎಂದೂ ಆರದಿರಲಿ
ಇರುಳನ್ನೂ ನುಂಗಿ ಶಾಂತಿ ತುಂಬಿ ಸಹನೆ ತುಂಬಿ ಆನಂದವಾ ನೀಡಲಿ
ಬಾಳಲಿ ಜ್ಯೋತಿಯು ಎಂದೂ ಆರದಿರಲಿ

(ಆಆಆ.. ಆಆಆ.. ಆಆಆ.. ಆಆಆ.. ಆಆಆ.. )
ಬದುಕಲ್ಲಿ ಎಂದೂ ನಾನು ನೋವನ್ನೇ ನೋಡಿದೇ 
ಮುಳ್ಳಲ್ಲಿ ಓಡಿ ಬಂದೇ ಬೆಳಕನ್ನೇ ಕಾಣದೇ 
(ಆಆಆ.. ಆಆಆ.. ಆಆಆ.. ಆಆಆ.. ಆಆಆ.. )
ಮುಳ್ಳೆಲ್ಲಾ ಹೂವಿನಂತೇ ಮೃದುವಾಗಿ ಹೋಗಲೀ 
ಕಣ್ಣೀರು ಇನ್ನೂ ಮುಂದೇ ಪನ್ನಿರೆಯಾಗಲೀ 
ಈ ನಿನ್ನ ಸ್ನೇಹ ಹೀಗೇ ಹೊಸದಾರಿ ತೋರಲಿ
ಕಾಣದ ಭೀತಿಯ ದೂರ ಮಾಡುತಾ ಕಾಪಾಡು ನಮ್ಮನೂ ....
ಬಾಳಲಿ ಜ್ಯೋತಿಯು ಎಂದೂ ಆರದಿರಲೀ
ಬಾಳಲಿ ಜ್ಯೋತಿಯು ಎಂದೂ ಆರದಿರಲೀ
--------------------------------------------------------------------------------------------------------------------------

No comments:

Post a Comment