1057. ಪಾತಾಳ ಮೋಹಿನಿ (೧೯೬೫)

ಪಾತಾಳ ಮೋಹಿನಿ ಚಿತ್ರದ ಹಾಡುಗಳು 
  1. ಹಗಲು ಇರುಳೂ 
  2. ಚಿಲಿಪಿಲಿ ಗುಟ್ಟುವ ಹಕ್ಕಿಯ
  3. ಒಹ್ ಮಾವನ ಮಗಳೇ 
  4. ಏನಿದು ಯಾರಿದು 
  5. ಓ ಬ್ರಹ್ಮಚಾರಿ 
  6. ಆನಂದಸಾರ ಪ್ರಭು 
ಪಾತಾಳ ಮೋಹಿನಿ (೧೯೬೫) - ಹಗಲು ಇರುಳೂ ನನಗೊಂದೇ 
ಸಂಗೀತ : ರಾಜನ ನಾಗೇಂದ್ರ, ಸಾಹಿತ್ಯ : ಹುಣುಸೂರ ಕೃಷ್ಣಮೂರ್ತಿ ಗಾಯನ : ಎಸ್. ಜಾನಕೀ 

ಹಗಲು ಇರುಳೂ ನಿನ್ನ ಹಿಂದೇ ತಿರುಗಾಡಿ ಬಲು ನೊಂದೆ
ಹಗಲು ಇರುಳೂ ನಿನ್ನ ಹಿಂದೇ ತಿರುಗಾಡಿ ಬಲು ನೊಂದೆ
ನಿನ್ನ ಕೊಲ್ಲುವ ಆಸೆ ಒಂದೇ ಆದರೆ ನನಗೇ ಗುರಿ ಎಂದೇ
ನಿನ್ನ ಕೊಲ್ಲುವ ಆಸೆ ಒಂದೇ ಆದರೆ ನನಗೇ ಗುರಿ ಎಂದೇ
ಹಗಲು ಇರುಳೂ ನಿನ್ನ ಹಿಂದೇ ತಿರುಗಾಡಿ ಬಲು ನೊಂದೆ
ತಿರುಗಾಡಿ ಬಲು ನೊಂದೆ ತಿರುಗಾಡಿ ಬಲು ನೊಂದೆ

ನೀ ಯಾರೋ ಏನು ಎಂದೂ ನಿನ್ನ ಸ್ನೇಹ ಬೇಡವೆಂದೂ 
ನೀ ಯಾರೋ ಏನು ಎಂದೂ ನಿನ್ನ ಸ್ನೇಹ ಬೇಡವೆಂದೂ 
ನಿನ್ನ ನೀತಿ ನಾನಿರಲಾರೇ ನೆನೆದೂ ನೆನೆದೂ ನೆನೆದೂ 
ನಿನ್ನ ನೀತಿ ನಾನಿರಲಾರೇ ಈ ನೋವ ಸಹಿಸಲಾರೇ 
ಹಗಲು ಇರುಳೂ
ಹಗಲು ಇರುಳೂ ನಿನ್ನ ಹಿಂದೇ ತಿರುಗಾಡಿ ಬಲು ನೊಂದೆ
ತಿರುಗಾಡಿ ಬಲು ನೊಂದೆ ತಿರುಗಾಡಿ ಬಲು ನೊಂದೆ

ಇಹಲೋಕವೆನ್ನ ಬಿಡದು ಪರಲೋಕವಂತೇ ಇಹುದು  
ಇಹಲೋಕವೆನ್ನ ಬಿಡದು ಪರಲೋಕವಂತೇ ಇಹುದು  
ತಲೆಯಾಡಿ ಈ ಪರಿ ಅಲೆದೂ ಅಲೆದೂ ಅಲೆದೂ ಅಲೆದೂ 
ತಲೆಯಾಡಿ ಈ ಪರಿ ಅಲೆದೂ ಬಹು ಕಾರ್ಯ ಹೊಂದಿರುವುದೂ 
ಹಗಲು ಇರುಳೂ
ಹಗಲು ಇರುಳೂ ನಿನ್ನ ಹಿಂದೇ ತಿರುಗಾಡಿ ಬಲು ನೊಂದೆ
ತಿರುಗಾಡಿ ಬಲು ನೊಂದೆ ತಿರುಗಾಡಿ ಬಲು ನೊಂದೆ
ತಿರುಗಾಡಿ ನಾ ನೊಂದೆ 
ನಿನ್ನ ಕೊಲ್ಲುವ ಆಸೆ ಒಂದೇ ಆದರೆ ನನಗೇ ಗುರಿ ಎಂದೇ
ನಿನ್ನ ಕೊಲ್ಲುವ ಆಸೆ ಒಂದೇ ಆದರೆ ನನಗೇ ಗುರಿ ಎಂದೇ
ಹಗಲು ಇರುಳೂ ನಿನ್ನ ಹಿಂದೇ ತಿರುಗಾಡಿ ಬಲು ನೊಂದೆ
ತಿರುಗಾಡಿ ಬಲು ನೊಂದೆ ತಿರುಗಾಡಿ ಬಲು ನೊಂದೆ
ತಿರುಗಾಡಿ ಬಲು ನೊಂದೆ ತಿರುಗಾಡಿ ಬಲು ನೊಂದೆ
-------------------------------------------------------------------------------------------------------------------------

ಪಾತಾಳ ಮೋಹಿನಿ (೧೯೬೫) - ಚಿಲಿಪಿಲಿ ಗುಟ್ಟುವ ಹಕ್ಕಿಯ ಕಂಠದಿ ಇಂಪನು ಇಟ್ಟವನಾರೇ
ಸಂಗೀತ : ರಾಜನ ನಾಗೇಂದ್ರ, ಸಾಹಿತ್ಯ : ಹುಣುಸೂರ ಕೃಷ್ಣಮೂರ್ತಿ ಗಾಯನ : ಎಸ್. ಜಾನಕೀ

ಆಹಾ... ಆಹ್ಹಾ..ಆ ಆಹಾ... ಆಹ್ಹಾ..ಆ ಓಹೋ... ಹೊಯ್ ಹೊಯ್
ಚಿಲಿಪಿಲಿ ಗುಟ್ಟುವ ಹಕ್ಕಿಯ ಕಂಠದಿ ಇಂಪನು ಇಟ್ಟವನಾರೇ
ಹೂವಿನ ಎದೆಯಲಿ ಜೇನನು ತುಂಬಿ ದುಂಬಿಯ ಕರೆಯುವರಾರೇ
ಚಿಲಿಪಿಲಿ ಗುಟ್ಟುವ ಹಕ್ಕಿಯ ಕಂಠದಿ ಇಂಪನು ಇಟ್ಟವನಾರೇ
ಹೂವಿನ ಎದೆಯಲಿ ಜೇನನು ತುಂಬಿ ದುಂಬಿಯ ಕರೆಯುವರಾರೇ
ದುಂಬಿಯ ಕರೆಯುವರಾರೇ   
ಚಿಲಿಪಿಲಿ ಗುಟ್ಟುವ ಹಕ್ಕಿಯ ಕಂಠದಿ ಇಂಪನು ಇಟ್ಟವನಾರೇ 

ಮುತ್ತಿನ ಹಾಸುವ ಮಂಜಿನ ಮಣಿಗಳ ಸುತ್ತಲೂ ಚೆಲ್ಲಿದ ದೊರೆ ಯಾರೇ 
ಮತ್ತನು ಪೋಣಿಸಿ ಭೂಮಿಗೆ ತೊಡಿಸಿ ಚಿತ್ತರ ಕೆತ್ತಿದ ಕಲಿಯಾರೇ ಆಆಆ.. ಓಓಓ 
ಬಣ್ಣ ಬಣ್ಣದ ಕಾಮನಬಿಲ್ಲನ್ನು ಬಾನಲಿ ಬರೆದವನಾರೇ 
ಹೆಣ್ಣಿನ ಕಣ್ಣಿಗೇ ಹಬ್ಬವ ಮಾಡಿ ಹಾಡುತ ಕುಣಿಸುವನಾರೇ 
ಹಾಡುತ ಕುಣಿಸುವನಾರೇ 
ಚಿಲಿಪಿಲಿ ಗುಟ್ಟುವ ಹಕ್ಕಿಯ ಕಂಠದಿ ಇಂಪನು ಇಟ್ಟವನಾರೇ
ಹೂವಿನ ಎದೆಯಲಿ ಜೇನನು ತುಂಬಿ ದುಂಬಿಯ ಕರೆಯುವರಾರೇ
ದುಂಬಿಯ ಕರೆಯುವರಾರೇ   
ಚಿಲಿಪಿಲಿ ಗುಟ್ಟುವ ಹಕ್ಕಿಯ ಕಂಠದಿ ಇಂಪನು ಇಟ್ಟವನಾರೇ.....  
ಆಹಾ... ಆಹ್ಹಾ..ಆ ಓಹೋಹೋ.... ಆಹ್ಹಾ..ಆ ಓಹೋಹೋ... ಹೊಯ್ ಹೊಯ್ 

ಮೋಹವ ಕಂಡು ಮೋಹಿಸಿ ನವಿಲೂ ಕುಣಿಯುವುದೇತಕೆ ತಾ ಮೆಚ್ಚಿ 
ಮೋಡಿಯ ನಾದಕೆ ನಾಗರ ನಲಿದು ಆಡುವುದೇತಕೇ ಹೆಡೆ ಬಿಚ್ಚಿ 
ಎಲ್ಲಿಯ ದೇಹ ಎಲ್ಲಿಯ ಮೋಹ ಯಾರಿಗೇ ತಿಳಿದಿದೆ ಒಳಗುಟ್ಟು 
ಬಲ್ಲವನೆಲ್ಲೋ ಕೂತಿಹ ನಮ್ಮ ನೋಡುತ ಎಲ್ಲವ ಕಣ್ಣಿಟ್ಟೂ 
ನೋಡುತ ಎಲ್ಲವ ಕಣ್ಣಿಟ್ಟೂ 
ಚಿಲಿಪಿಲಿ ಗುಟ್ಟುವ ಹಕ್ಕಿಯ ಕಂಠದಿ ಇಂಪನು ಇಟ್ಟವನಾರೇ
ಹೂವಿನ ಎದೆಯಲಿ ಜೇನನು ತುಂಬಿ ದುಂಬಿಯ ಕರೆಯುವರಾರೇ
ದುಂಬಿಯ ಕರೆಯುವರಾರೇ   
ಚಿಲಿಪಿಲಿ ಗುಟ್ಟುವ ಹಕ್ಕಿಯ ಕಂಠದಿ ಇಂಪನು ಇಟ್ಟವನಾರೇ 
ಆಹಾ... ಆಹ್ಹಾ..ಆ ಆಹಾ... ಆಹ್ಹಾ..ಆ ಓಹೋ...
ಆಹಾ... ಆಹ್ಹಾ..ಆ ಓಹೋ... ಹೊಯ್ ಹೊಯ್ 
-------------------------------------------------------------------------------------------------------------------------

ಪಾತಾಳ ಮೋಹಿನಿ (೧೯೬೫) - ಒಹ್ ಮಾವನ ಮಗಳೇ
ಸಂಗೀತ : ರಾಜನ ನಾಗೇಂದ್ರ, ಸಾಹಿತ್ಯ : ಹುಣುಸೂರ ಕೃಷ್ಣಮೂರ್ತಿ ಗಾಯನ : ಎಸ್. ಜಾನಕೀ, ಪಿ.ಬಿ.ಎಸ್

ಗಂಡು : ಒಹ್ ಮಾವನ ಮಗಳೇ ಮುತ್ತಿನ ಹರಳೇ ಮೋಹದ ನಗೆಯೊಳೇ
            ಮಿಂಚುವ ನಿನ್ನ ಕಣ್ಣ ಅಂಚಿನ ಅರ್ಥವ ಬಿಡಿಸಿ ಹೇಳೇ
ಹೆಣ್ಣು : ಒಹ್ ಮಾವನ ಮಗನೇ ಮಾತಿನ ಮಲ್ಲನೇ ಮೋಹಿಸಿ ಸೆಳೆದೊನೇ
          ಮನಸಿನ ಆಸೆ ಕಣ್ಣು ತಣಿಸಿದೆ ಅರ್ಥವ ತಿಳಿ ನೀನೇ
ಗಂಡು : ಒಹ್ ಮಾವನ ಮಗಳೇ ಮುತ್ತಿನ ಹರಳೇ ಮೋಹದ ನಗೆಯೊಳೇ

ಗಂಡು : ಓಹೋಹೊಹೋ... ಓಓಓ  ಓಹೋಹೊಹೋ... ಓಓಓ
          ನನ್ನದೇ ತುಂಬಾ ನಿಂತಿದೆ ನಿನ್ನ ಸುಂದರ ರೂಪದ ಪ್ರತಿಬಿಂಬ
ಹೆಣ್ಣು : ಓಹೋಹೊಹೋ... ಓಓಓ  ಓಹೋಹೊಹೋ... ಓಓಓ         
          ಚೆನ್ನಿಗ ನಿನ್ನ ಒಲುಮೆಯ ನನ್ನ ಜೀವನ ಸೂತ್ರದ ರಸಕುಂಭ
ಗಂಡು : ಎಂದಿಗೂ ನೀನೇ ಮುಂದೆಯೂ ನೀನೇ ಜನ್ಮ ಜನ್ಮಕೂ ಜೊತೆ ನೀನೇ
ಹೆಣ್ಣು : ಈ ಅನುಬಂಧ ಇಬ್ಬರು ತಂದ ಇಬ್ಬರಿಗಾನಂದ
ಗಂಡು : ಒಹ್ ಮಾವನ ಮಗಳೇ ಮುತ್ತಿನ ಹರಳೇ ಮೋಹದ ನಗೆಯೊಳೇ
            ಮಿಂಚುವ ನಿನ್ನ ಕಣ್ಣ ಅಂಚಿನ ಅರ್ಥವ ಬಿಡಿಸಿ ಹೇಳೇ
ಹೆಣ್ಣು : ಮನಸಿನ ಆಸೆ ಕಣ್ಣು ತಣಿಸಿದೆ ಅರ್ಥವ ತಿಳಿ ನೀನೇ

ಹೆಣ್ಣು : ಓಹೋಹೊಹೋ... ಓಓಓ  ಓಹೋಹೊಹೋ... ಓಓಓ         
          ಹಾರುವ ಹಕ್ಕಿಯ ಜೊತೆಯಲಿ ಸೇರಿ ಹಾಡುತ ಹಾರುವ ಬಾನಲಿ 
ಗಂಡು : ಓಹೋಹೊಹೋ.. ಓಓಓಓ   ಓಹೋಹೊಹೋ.. ಓಓಓಓ           
           ಕಾಮನ ಬಿಲ್ಲಿನ ಮೇಲ್ಗಡೆ ಕುಳಿತು ಕೂಗುವ ಬಾ ಪ್ರಿಯೇ ಜೊತೆಯಲ್ಲಿ 
ಹೆಣ್ಣು : ಸುಂದರ ನಿನ್ನ ಸನ್ನಿದಿಯಂದೇ ಸ್ವರ್ಗ ಸೌಖ್ಯದಾ ಧಣಿಯಂದೇ 
ಗಂಡು: ಇಬ್ಬರ ಜೀವಾ ಬೇರೆನುವಂಥ ಬೇಧವಿಲ್ಲ ಮುಂದೇ.. 
ಹೆಣ್ಣು : ಒಹ್ ಮಾವನ ಮಗನೇ ಮಾತಿನ ಮಲ್ಲನೇ ಮೋಹಿಸಿ ಸೆಳೆದೊನೇ
          ಮನಸಿನ ಆಸೆ ಕಣ್ಣು ತಿಳಿಸಿದೆ ಅರ್ಥವ ತಿಳಿ ನೀನೇ
ಗಂಡು : ಒಹ್ ಮಾವನ ಮಗಳೇ ಮುತ್ತಿನ ಹರಳೇ ಮೋಹದ ನಗೆಯೊಳೇ
ಹೆಣ್ಣು : ಆಹಾಹ್ಹಾ  ಆಹಾಹ್ಹಾ (ಆಆಆ) ಓಹೋಹೊಹೋ...(ಆಆಆ)
          ಹೂಂಹೂಂಹೂಂ (ಓಓಓ) ಓಹೋಹೊಹೋ... ಓಓಓ         
-------------------------------------------------------------------------------------------------------------------------

ಪಾತಾಳ ಮೋಹಿನಿ (೧೯೬೫) - ಏನಿದು ಯಾರಿದು
ಸಂಗೀತ : ರಾಜನ ನಾಗೇಂದ್ರ, ಸಾಹಿತ್ಯ : ಹುಣುಸೂರ ಕೃಷ್ಣಮೂರ್ತಿ ಗಾಯನ : ಎಸ್. ಜಾನಕೀ, ಪಿ.ಬಿ.ಎಸ್.

ಗಂಡು : ಏನಿದು..  ಯಾರಿದು ಎಲ್ಲಾ  ಮಾಯಾಮಯವಾಗಿಹುದು
           ಕನಸೋ ಇದು ನನಸೋ ಕಾಣದೆ ಮತಿ ಮಂಕಾಗಿಹುದು 
           ಏನಿದು..  ಯಾರಿದು ಯಾವುದು ತೋರದು ಎಲ್ಲಾ ಮಾಯಾಮಯವಾಗಿಹುದು
           ಕನಸೋ ಇದು ನನಸೋ ಕಾಣದೆ ಮತಿ ಮಂಕಾಗಿಹುದು 
ಹೆಣ್ಣು : ಕಾಣುವುದೆಲ್ಲಾ ಸತ್ಯವು ಚಿನ್ನ ಕೇಳುತ ಉತ್ತರ ಕಾಡದಿರೆ ರನ್ನ 
          ಮುತ್ತಿನಂತಹ ಸಮಯ ನೀ ವ್ಯರ್ಥ ಮಾಡದಿರು ನನ್ನಿನಿಯಾ 
          ಕಾಣುವುದೆಲ್ಲಾ ಸತ್ಯವು ಚಿನ್ನ

ಗಂಡು : ಬಿಂಕವ ತೋರಿ ಬಳುಕುವೆಯೇ ಬಲ್ಲ ಕುಲುಕಿಸಿ ಕೊರಳನು ಕುಣಿಸುವೆಯೇ
           ಅಂಕೆ ಇಲ್ಲದಾ ಚಂಚಲ ಕಣ್ಗಳ ಬಾಣವ ಬೀರುವೇ ಯಾಕೇ
ಹೆಣ್ಣು : ಓಹೋಹೋ.. ಹೋ  ಹಿಂದಿನ ಜನ್ಮದ ಸಂಗಮಿಯೋ ನೀ ಬಯಸಿದ ಮೋಹದ ಅರಗಿಣಿಯೋ ..
          ಆಗತೀರದ ಆಸೆಯನ್ನೆಲ್ಲಾ ಈಗ ಪಡೆಯಲು ಬಂದಿಹನಲ್ಲಾ
         ಈಗ ಪಡೆಯಲು ಬಂದಿಹನಲ್ಲಾ
ಗಂಡು : ಏನಿದು..  ಯಾರಿದು ಎಲ್ಲಾ  ಮಾಯಾಮಯವಾಗಿಹುದು
           ಕನಸೋ ಇದು ನನಸೋ ಕಾಣದೆ ಮತಿ ಮಂಕಾಗಿಹುದು 
           ಏನಿದು..  ಯಾರಿದು ಯಾವುದು ತೋರದು ಎಲ್ಲಾ ಮಾಯಾಮಯವಾಗಿಹುದು
           ಕನಸೋ ಇದು ನನಸೋ ಕಾಣದೆ ಮತಿ ಮಂಕಾಗಿಹುದು 
ಹೆಣ್ಣು : ಕಾಣುವುದೆಲ್ಲಾ ಸತ್ಯವು ಚಿನ್ನ ಕೇಳುತ ಉತ್ತರ ಕಾಡದಿರೆ ರನ್ನ
          ಮುತ್ತಿನಂತಹ ಸಮಯ ನೀ ವ್ಯರ್ಥ ಮಾಡದಿರು ನನ್ನಿನಿಯಾ
          ಕಾಣುವುದೆಲ್ಲಾ ಸತ್ಯವು ಚಿನ್ನ

ಗಂಡು : ಮಾನಿನಿಯೋ ನೀ ಮೋಹಿನಿಯೋ ಆ ಚಂದಿರ ಲೋಕದ ರೋಹಿಣಿಯೋ
            ನನ್ನದೇ ಸೋತು ತನ್ಮಯವಾಯ್ತು ನಿನ್ನದು ಪ್ರಾಣ ಎನಿಸಿ ಆಯಿತು 
ಹೆಣ್ಣು : ಓಹೋಹೋ.. ಹೋ  ಇಂತಹ ಸ್ನೇಹದ ಮಕರಂದ 
          ನಾವ್ ಸವಿಯುತ  ಬಾಳಿರೇ ಅಣುವಿಂದಾ 
          ಜನ್ಮ ಜನ್ಮದ ಈ ಅನುಬಂಧ ತುಂಬಿ ಹರಿವುದು ಸಂತಸದಿಂದ.. ಆಆಆ..  
         ತುಂಬಿ ಹರಿವುದು ಸಂತಸದಿಂದ.. 
          ಕಾಣುವುದೆಲ್ಲಾ ಸತ್ಯವು ಚಿನ್ನ ಕೇಳುತ ಉತ್ತರ ಕಾಡದಿರೆ ರನ್ನ 
          ಮುತ್ತಿನಂತಹ ಸಮಯ ನೀ ವ್ಯರ್ಥ ಮಾಡದಿರು ನನ್ನಿನಿಯಾ 
ಇಬ್ಬರು : ಅಹ್ಹ ಅಹ್ಹಹ  ಅಹ್ಹ ಅಹ್ಹಹ ಅಹ್ಹ ಅಹ್ಹಹ 
--------------------------------------------------------------------------------------------------------------------------

ಪಾತಾಳ ಮೋಹಿನಿ (೧೯೬೫) - ಓ ಬ್ರಹ್ಮಚಾರಿ ಬಾ ಬಾರೋ ಬ್ರಹ್ಮಚಾರಿ 
ಸಂಗೀತ : ರಾಜನ ನಾಗೇಂದ್ರ, ಸಾಹಿತ್ಯ : ಹುಣುಸೂರ ಕೃಷ್ಣಮೂರ್ತಿ ಗಾಯನ : ಎಲ್.ಆರ್.ಈಶ್ವರಿ, ನಾಗೇಂದ್ರ 

ಹೆಣ್ಣು : ಅಹ್ಹಹ್ಹಹ್ಹಾ... ಹುಂಹೂಂಹುಂಹೂಂ..
          ಓ.. ಬ್ರಹ್ಮಚಾರಿ ಬಾಬಾರೋ ಬ್ರಹ್ಮಚಾರಿ
         ಬಯಸಿ ಬಂದ ಹೆಣ್ಣು ನಾನು ಸುಗಣ ಸುಂದರಿ
        ವಯ್ಯಾರಿ ನಾನು  ನನ ನೋಡು ಒಮ್ಮೆ ಒಂದು ಸಾರಿ
        ಕೋರಿ ಗಲ್ಲ ಕೊಡಲು ಬಂದ ಕಿನ್ನರೀ
ಗಂಡು : ಅಹ್ಹಹ್ಹಾ.. ಯಾವೂರ ಸುಬ್ಬಿ ಇಲ್ಯಾಕೆ ಬಂದೇ ಕೊಬ್ಬಿ
           ಹುಬ್ಬು ಹಾರಿಸಿ ಕರೆದರಿವನು ಉಬ್ಬಿ  ಹೋಗನೇ
           ಸಾಕು ನಿನ್ನದೇನೇ ನೀ ದೂರ ಹೋಗು ಸುಮ್ಮನ್ನೇ
          ಹೋಗದಿದ್ದರೇ ಬೆನ್ನುಮೂಳೆ ಮುರಿವೇನೇ

ಹೆಣ್ಣು : ಯಾಕೋ ನಿನಗೇ ಸಿಟ್ಟು ಸ್ವಲ್ಪ ಕೈಯ್ ಮುಟ್ಟು
          ಮುಟ್ಟು (ಉಹೂಂಹೂಂ)  ಮುಟ್ಟು (ಉಹೂಂಹೂಂ)
          ಮುಟ್ಟು (ಉಹೂಂಹೂಂ)  ಮುಟ್ಟು (ಉಹೂಂಹೂಂಹೂಂಹೂಂ)
         ಯಾಕೋ ನಿನಗೇ ಸಿಟ್ಟು ಸ್ವಲ್ಪ ಕೈಯ್ ಮುಟ್ಟು
         ತಿಳಿದರೇ ಒಳಗುಟ್ಟು ಇರಲಾರೇ ನನ್ನ ಬಿಟ್ಟೂ 
ಗಂಡು : ಬೆಕ್ಕಿನಂತ ಹೆಣ್ಣು ನಿಧಿ ಸುಮದಂತ ಕಣ್ಣು ಅಯ್ಯೋ
           ಸಿಕ್ಕಿ ಬಿದ್ರೆ ನಾನು ನನ ಬಾಯಿಗೆ ಕೆಮ್ಮಣ್ಣು
ಹೆಣ್ಣು : ಓ..ಓ..ಓಹೋಹೋ ಹೆಣ್ಣು ಅಂದರೇ ಹೆದರುಕೊಳ್ಳೋವೆಯಾತಕೋ
ಗಂಡು : ಆಹಾ.. ಅದರ ವಿಷಯ ಹನುಮನಲ್ಲಿ ತಿಳಿದಿಕೋ
ಹೆಣ್ಣು :  ಓ.. ಬ್ರಹ್ಮಚಾರಿ ಬಾಬಾರೋ ಬ್ರಹ್ಮಚಾರಿ
         ಬಯಸಿ ಬಂದ ಹೆಣ್ಣು ನಾನು ಸುಗಣ ಸುಂದರಿ
        ವಯ್ಯಾರಿ ನಾನು  ನನ ನೋಡು ಒಮ್ಮೆ ಒಂದು ಸಾರಿ
        ಕೋರಿ ಗಲ್ಲ ಕೊಡಲು ಬಂದ ಕಿನ್ನರೀ

ಹೆಣ್ಣು : ಮುಡಿದು ತೊಡೆಯಬೇಡಿ ನೀರಲ್ಲಿ ರಗಳೆ ಮಾಡಿ
          ಕುಡಿಸಲು ನಾ ನಿನ್ನ ಮದುವೆಯಾಗು ನನ್ನಾ...
ಗಂಡು : ಅಯ್ಯಯ್ಯಯ್ಯಯ್ಯ.... ಮೆಚ್ಚಿ ಬಂದ್ರೆ ನನ್ನ ತಿನ್ನಬೇಕೂ ತಂಗಳ್ಳನ್ನ
           ಹುಚ್ಚು ಆಸೆ ಬಿಟ್ಟು ಹಿಡ್ಕೋ ಬೇರೆ ಹುಡುಗನನ್ನಾ
ಹೆಣ್ಣು : ಹ್ಹಾ..ಹ್ಹಾ.ಹ್ಹಾ. ಹ್ಹಾ... ಹರಿಯ ಶಾಪ ಹರನ ಶಾಪ ಹೆಣ್ಣಿಗೇ
ಗಂಡು : ಹನುಮ ಮಾತ್ರ ಸೋಲಲ್ಲಿಲ್ಲ ಹೋಗೆ ತಣ್ಣಗೇ          
           ಯಾವೂರ ಸುಬ್ಬಿ ಇಲ್ಯಾಕೆ ಬಂದೇ ಕೊಬ್ಬಿ
           ಹುಬ್ಬು ಹಾರಿಸಿ ಕರೆದರಿವನು ಉಬ್ಬಿ  ಹೋಗನೇ
           ಸಾಕು ನಿನ್ನದೇನೇ ನೀ ದೂರ ಹೋಗು ಸುಮ್ಮನ್ನೇ
          ಓ ಬಿದ್ರೆ ಕಾಲು ಮುರಿದು ಕೈಗೇ ಕೊಡುವೇನೇ
ಹೆಣ್ಣು :  ಓ.. ಬ್ರಹ್ಮಚಾರಿ ಬಾಬಾರೋ ಬ್ರಹ್ಮಚಾರಿ
         ಬಯಸಿ ಬಂದ ಹೆಣ್ಣು ನಾನು ಸುಗಣ ಸುಂದರಿ
        ವಯ್ಯಾರಿ ನಾನು  ನನ ನೋಡು ಒಮ್ಮೆ ಒಂದು ಸಾರಿ
        ಕೋರಿ ಗಲ್ಲ ಕೊಡಲು ಬಂದ ಕಿನ್ನರೀ 
-------------------------------------------------------------------------------------------------------------------------

ಪಾತಾಳ ಮೋಹಿನಿ (೧೯೬೫) - ಆನಂದ ಸಾರ ಪ್ರಭು
ಸಂಗೀತ : ರಾಜನ ನಾಗೇಂದ್ರ, ಸಾಹಿತ್ಯ : ಹುಣುಸೂರ ಕೃಷ್ಣಮೂರ್ತಿ ಗಾಯನ : ಎಸ್. ಜಾನಕೀ

ಆನಂದಸಾರ ಪ್ರಭು
ಆನಂದಸಾರ ಪ್ರಭು ಅರೇ ಆನಂತೀ ಕಾಯೋ ಪ್ರಭೂ ಓ ನಾಗರಾಜ...
ಆನಂದಸಾರ ಪ್ರಭು ಅರೇ ಆನಂತೀ ಕಾಯೋ ಪ್ರಭೂ ಓ ನಾಗರಾಜ...
ಆನಂದಸಾರ ಪ್ರಭು

ವಂದಿತೇ ಫಣಿರಾಜ ದಿನಮಣಿ ತನ ತೇಜ 
ವಂದಿತೇ ಫಣಿರಾಜ ದಿನಮಣಿ ತನ ತೇಜ 
ಸಲಹಯ್ಯ ನಾಗಮಣಿ ನೀನೂ ವಿಮೋಚನಾ ಆಆಆ.... 
ಸಲಹಯ್ಯ ನಾಗಮಣಿ  ನೀನೂ ವಿಮೋಚನಾ 
ದೀನ ಶರಣ್ಯ ನಾಗವರೈಣ್ಯ 
ದೀನ ಶರಣ್ಯ ನಾಗವರೈಣ್ಯ ಕೃಪೆಯ ತೋರುವುದೇ ಓ ನಾಗರಾಜ 
ಆನಂದಸಾರ ಪ್ರಭು ಅರೇ ಆನಂತೀ ಕಾಯೋ ಪ್ರಭೂ ಓ ನಾಗರಾಜ...
ಆನಂದಸಾರ ಪ್ರಭು 

ಮೋಹಕೆ ವಶಳಾಗಿ ಮಾತಿಗೆ ಮರುಳಾಗಿ
ಮೋಹಕೆ ವಶಳಾಗಿ ಮಾತಿಗೆ ಮರುಳಾಗಿ ಒಲಿದೆ ಮಾನವನಾ ನಂಬಿದೇ
ಒಲಿದೆ ಮಾನವನಾ  ನಂಬಿದೇ ನೀಡುವನೆಂದೂ ವರನಾಡೋ ನಲಿಯ
ನೀಡುವನೆಂದೂ ವರನಾಡೋ ನಲಿಯ ಇಂದು ಈ ಫಲವೇ ಓ  ನಾಗರಾಜ
ಆನಂದಸಾರ ಪ್ರಭು ಅರೇ ಆನಂತೀ ಕಾಯೋ ಪ್ರಭೂ ಓ ನಾಗರಾಜ...
ಆನಂದಸಾರ ಪ್ರಭು 
ನಾಗರಾಜ ಹರಿ ನಾಗರಾಜ ನಾಗರಾಜ ಹರಿ ನಾಗರಾಜ 
ನಾಗರಾಜ ಹರಿ ನಾಗರಾಜ ನಾಗರಾಜ ಹರಿ ನಾಗರಾಜ 
-------------------------------------------------------------------------------------------------------------------------

No comments:

Post a Comment