ಡ್ರೈವರ್ ಹನಮಂತು ಚಿತ್ರದ ಹಾಡುಗಳು
- ವಂದೇ ಶಂಭು ಉಮಾಪತಿಂ ಸುರುಗುರುಮ್
- ಸಿಂಗಾರಿ ಎದುರು
- ಭೂಲೋಕ ಅಲೆದರೂ
- ಪಾಪ ಮುದ್ದು ಪಾಪ
ಸಂಗೀತ : ವಿಜಯ ಭಾಸ್ಕರ ಸಾಹಿತ್ಯ : ಚಿ.ಉದಯ ಶಂಕರ ಗಾಯನ : ಪಿ.ಬಿ.ಎಸ್.
ಓಂ... ವಂದೇ ಶಂಭು ಉಮಾಪತಿಂ ಸುರುಗುರುಮ್
ವಂದೇ ಜಗತ ಕಾಣ್ಗಾನಂ ವಂದೇ ಪನ್ನಗ ಭೂಷಣಂ
ಮೃಗಧುರಂ ವಂದೇ ಪಶುಣಾಪತಿಂ
ವಂದೇ ಸೂರ್ಯ ಶಶಾಂಕ ವಂದಿನಯನಂ
ವಂದೇ ಮುಕುಂದ ಪ್ರಿಯಂ
ವಂದೇ ಭಕ್ತಜನಾಶ್ರಯಂ ಚ ವರದಂ
ವಂದೇ ಶಿವಂ ಶಂಕರಂ
ವಂದೇ ಶಿವಂ ಶಂಕರಂ
--------------------------------------------------------------------------------------------------------------------------
ಸಂಗೀತ : ವಿಜಯ ಭಾಸ್ಕರ ಸಾಹಿತ್ಯ : ಚಿ.ಉದಯ ಶಂಕರ ಗಾಯನ : ಎಸ್.ಪಿ.ಬಿ.
ಟೂರ್ರ್ ಟೂರ್ರ್ ಹೇಹೇಹೇಹೇ ....
ಸಿಂಗಾರಿ ಎದುರೂ ಬಂದರಾಯ್ತು ಸಿಂಗಾರಿ ಒಳಗೇ ಕೂತರಾಯ್ತು
ಕಾರು ನಿಲ್ಲೋಲ್ಲಾ... ಬ್ರೇಕ್ ಹಿಡಿಯೊಲ್ಲಾ...
ಯಾರ್ ಮಾತು ಇವಳೂ ಇನ್ನೂ ಕೇಳೋದಿಲ್ಲಾ
ಅಕ್ಕಿ ಪೇಟೆ ಅರಳೆ ಪೇಟೆ ಚಿಕ್ಕ ಪೇಟೆ ಬಳೆ ಪೇಟೆ
ಮಾಮೂಲ ಪೇಟೆ ಕಬ್ಬನ ಪೇಟೆ ಎಲ್ಲೋ ಪೇಟೆ ಇರೋ ಪೇಟೆ
ಸಿಂಗಾರಿ ಎದುರೂ ಬಂದರಾಯ್ತು ಸಿಂಗಾರಿ ಒಳಗೇ ಕೂತರಾಯ್ತು
ಹೇಹೇ... ಹೋಹೋ... ಹ್ಹಾಹ್ಹಾ.. ಹ್ಹುಹ್ಹೂ...
ಎಳೆಯ ಹುಡುಗೂರು ಎದುರಾದಾಗ ಮುಜುಗರ ಈ ಕಾರಿಗೇ
ನಲಿವ ಹುಡುಗಿಯು ಬಳಿ ಬಂದಾಗ ಸಡಗರ ಸಿಂಗಾರಿಗೇ
ನೆಲದಲಿ ಹಾರುವ ಏರೋಪ್ಲೇನ್ ಕತ್ತಲೇ ಮೀರುವಾ ರೋಟಿಜಂನ್
ನೆಲದಲಿ ಹಾರುವ ಏರೋಪ್ಲೇನ್ ಕತ್ತಲೇ ಮೀರುವಾ ರೋಟಿಜಂನ್
ಗಡಗಡ ಎಂದೂ ಗುಡುಗೂಡು ಓಡೋ ಅಂದದ ರಾಣೀ
ಜೈ ಬಜರಂಗ ಬಲಿ
ಸಿಂಗಾರಿ ಎದುರೂ ರಂಪಾಪಪ್ಪಾ ರಂಪಾಪಪ್ಪಾ ಪಪ್ಪಪಪ್ಪಪ್ಪಾ
ರಂಪಾಪಪ್ಪಾ ಪಪ್ಪಪಪ್ಪಪ್ಪಾ ಹೇಹೇ... ಹೇಹೇ... ಹೇಹೇ...
ಶಬರೀಬ ರಿಬಾರೀಬ ರಿಬಾರೀಬ ಶಬರೀಬ ರಿಬಾರೀಬ ರಿಬಾರೀಬ
ಸಿಡಿಲು ಸಿಡಿಯುತಾ ಮಳೆ ಬಂದಾಗ ನಡುಗದೇ ನಲಿದಾಡುತಾ
ಅಕ್ಕಪಕ್ಕದಾ ಜನರ ಮೈಗಳಾ ಸೋಕುತಾ ಮುಂದೋಡುತಾ
ಬಡವನ ಬಾಳಿನ ಬಂಗಾರಿ ಚೆಲುವಿನ ಚಂಚಲ ಸಿಂಗಾರಿ
ಬಡವನ ಬಾಳಿನ ಬಂಗಾರಿ ಚಚಚಚಚಚ ಸಿಂಗಾರಿ
ರಜವನು ಕೇಳದ ದಣಿವಿಗೇ ಸೋಲದ ಮೋಜಿನ ರಾಣಿ
ಅಯ್ಯೋ ಹನಮಂತೂ....
ಸಿಂಗಾರಿ ಎದುರೂ ಬಂದರಾಯ್ತು ಸಿಂಗಾರಿ ಒಳಗೇ ಕೂತರಾಯ್ತು
ಕಾರು ನಿಲ್ಲೋಲ್ಲಾ... ಹೇಹೇಹೇ ಬ್ರೇಕ್ ಹಿಡಿಯೊಲ್ಲಾ... ಹೋಹೊಹೋ
ಯಾರ್ ಮಾತು ಇವಳೂ ಇನ್ನೂ ಕೇಳೋದಿಲ್ಲಾ
ಹೇಹೇಹೇಹೇ... ಹೋಹೋಹೊಹೋ...

ಡ್ರೈವರ್ ಹನಮಂತು (೧೯೮೦) - ಭೂಲೋಕ ಅಲೆದರೂ
ಸಂಗೀತ : ವಿಜಯ ಭಾಸ್ಕರ ಸಾಹಿತ್ಯ : ಚಿ.ಉದಯ ಶಂಕರ ಗಾಯನ : ಎಸ್.ಪಿ.ಬಿ. ಕೋರಸ್
ಕೋರಸ್ : ಲ್ಲಲಾಲಾ ಲಲ್ಲಲ್ಲಲಾ ಲ್ಲಲಾಲಾ ಲಲ್ಲಲ್ಲಲಾ ಲಲಲಾ
ಲಲ ಲಾ ಲಲ್ಲಲ್ಲಲಾ ಲಲಲಾ ಲಾ ಲಾ ಲಾ
ಗಂಡು : ಭೂಲೋಕ ಅಲೆದರೂ ಇಲ್ಲಾ ವೈಕುಂಠ ಹುಡುಕಿದೇ ಇಲ್ಲಾ
ಕೈಲಾಸ ಕಂಡರೂ ಇಲ್ಲಾ ನೀನೆಲ್ಲೂ ಕಾಣಲೇ ಇಲ್ಲಾ
ನಿನ್ನನ್ನೇ ಹುಡುಕಿ ಹುಡುಕಿ ಬಳಲಿ ತೊಳಲಿ ದಣಿದು ಬಂದೇ
ಎಲ್ಲಿರುವೇ ಬಂಗಾರಿ ಬಾ ಬೇಗ ಸಿಂಗಾರಿ
ಭೂಲೋಕ ಅಲೆದರೂ ಇಲ್ಲಾ ವೈಕುಂಠ ಹುಡುಕಿದೇ ಇಲ್ಲಾ .. ಆಆಆ...
ಗಂಡು : ಮನೆಯಲೀ ನನಗೇ ಹೆಂಡತಿ ಇಲ್ಲಾ ಅಡುಗೆಯೂ ಯಾರೂ ಮಾಡುವರಿಲ್ಲಾ
ಸ್ನಾನಕೆ ನೀರು ಕಾಯಿಸೋರು ಇಲ್ಲಾ ಜೊತೆಯಲಿ ಲಾಲಿ ಹಾಡುವರಿಲ್ಲಾ
ಅರಗಿಣಿ ನಿಜ ನುಡಿಯುವೇ ಕೈ ಮುಗಿಯುವೇ ಬಾರೇ...
ಕೋರಸ್ : ಓ ಚಚಚ ಚೈಯ್ಯಾ (ಹೊಯ್ ) ಓ ಚಚಚ ಚೈಯ್ಯಾ (ಹ್ಹಾಂ )
ಓ ಚಚಚ ಚೈಯ್ಯಾ (ಹೊಯ್ ) ಓ ಚಚಚ ಚೈಯ್ಯಾ
ಗಂಡು : ಎಲ್ಲಿರುವೇ ಬಂಗಾರಿ ಬಾ ಬೇಗ ಆಆಆ... ಸಿಂಗಾರಿ
ಗಂಡು : ಆಆಆ... ತೋರಣ ಕಟ್ಟಿದೆ ಚಪ್ಪರ ನೋಡು ಹಾಯ್
ಹೂವನೂ ಚೆಲ್ಲಿದೇ ಮಂಚವ ನೋಡು
ಬಾಗಿಲು ಹಾಕಿದೇ ಕೋಣೆಯ ನೋಡು
ಬೇಗನೇ ಬಂದು ಜೊತೆಯಲಿ ಆಡು
ಅರಗಿಣಿ ನಿಜ ನುಡಿಯುವೇ ಕೈ ಮುಗಿಯುವೇ ಬಾರೇ... ಹೇಹೇಹೇ..
ಕೋರಸ್ : ಓ ಚಚಚ ಚೈಯ್ಯಾ ದುಮ ಚಚಚ ಚೈಯ್ಯಾ
ಓ ಚಚಚ ಚೈಯ್ಯಾ ದುಮ ಚಚಚ ಚೈಯ್ಯಾ
ಗಂಡು : ಅಹ್ಹಹ್ಹಾಹ್ಹಾ ಎಲ್ಲಿರುವೇ ಬಂಗಾರಿ ಬಾ ಬೇಗ .ಸಿಂಗಾರೀ...
ಚಿಣ್ಣರ ಜಗಳ ಆಡಲೇಬೇಕೂ ಎಲ್ಲ ಮರೆತೂ ಮಲಗಲೇ ಬೇಕು
ಅರಗಿಣಿ ನಿಜ ನುಡಿಯುವೇ ಕೈ ಮುಗಿಯುವೇ ಬಾರೇ... ಹೇಹೇಹೇ..
ಕೋರಸ್ : ಓ ಚಚಚ ಚೈಯ್ಯಾ (ಹೊಯ್ ಹೊಯ್ ) ದುಮ ಚಚಚ ಚೈಯ್ಯಾ (ಹ್ಹಾಹ್ಹಾ )
ಓ ಚಚಚ ಚೈಯ್ಯಾ (ಹೊಯ್ ಹೊಯ್ ) ದುಮ ಚಚಚ ಚೈಯ್ಯಾ
ಹೇ.. ಭೂಲೋಕ ಅಲೆದರೂ ಇಲ್ಲಾ ವೈಕುಂಠ ಹುಡುಕಿದೇ ಇಲ್ಲಾ
ಕೈಲಾಸ ಕಂಡರೂ ಇಲ್ಲಾ ನೀನೆಲ್ಲೂ ಕಾಣಲೇ ಇಲ್ಲಾ
ನಿನ್ನನ್ನೇ ಹುಡುಕಿ ಹುಡುಕಿ ಬಳಲಿ ತೊಳಲಿ ದಣಿದು ಬಂದೇ
ಎಲ್ಲಿರುವೇ ಬಂಗಾರಿ ಬಾ ಬೇಗ ಸಿಂಗಾರಿ
--------------------------------------------------------------------------------------------------------------------------
ಡ್ರೈವರ್ ಹನಮಂತು (೧೯೮೦) - ಪಾಪ ಮುದ್ದು ಪಾಪ
ಸಂಗೀತ : ವಿಜಯ ಭಾಸ್ಕರ ಸಾಹಿತ್ಯ : ಚಿ.ಉದಯ ಶಂಕರ ಗಾಯನ : ಮೋಹನ, ವಾಣಿಜಯರಾಂ
ಹೆಣ್ಣು : ಪಾಪ ಮುದ್ದು ಪಾಪ ನೀನೇ ದೇವರ ರೂಪ
ಪಾಪ ಪುಟ್ಟ ಪಾಪ ನೀನೇ ಈ ಮನೆ ದೀಪ
ಗಂಡು : ಪಾಪ ಮುದ್ದು ಪಾಪ ನೀನೇ ದೇವರ ರೂಪ
ಪಾಪ ಪುಟ್ಟ ಪಾಪ ನೀನೇ ಈ ಮನೆ ದೀಪ
ಒಲವಿಂದ ಮಗುವನ್ನು ಮುದ್ದಿಸಿ ಮನದಾಸೆ ಪೂರೈಸಲು
ಗಂಡು : ಕೆಟ್ಟೋರ ಕಣ್ಣೋಟವೂ ಬೆನ್ನಟ್ಟಿಯೇ ಬರದಂತೆಯೇ
ಇಬ್ಬರು : ಆ ದೇವ ಹರಿಸಿ ಕಾಪಾಡಲೀ
ಕೋರಸ್ : ಹ್ಯಾಪಿ ಹ್ಯಾಪಿ ಟೂ ಯೂ ಹ್ಯಾಪಿ ಬರ್ತಡೇ ಟೂ ಯೂ
ಹ್ಯಾಪಿ ಬರ್ತಡೇ ಟೂ ಯೂ
ಹೆಣ್ಣು : ಕಣ್ತುಂಬಾ ನಿನ್ನನೇ ಕಾಣುವಾ ಪ್ರೇಮ ಹಸಿರಾಗಲೀ
ಗಂಡು : ಮನೆತುಂಬಿ ನಿನ್ನನ್ನೇ ಹರಸುವಾ ಪ್ರೀತಿ ಉಸಿರಾಗಲೀ
ಹೆಣ್ಣು : ಸಂತೋಷ ನೀನಗಾಗಲೀ.. ಆನಂದಾ... ನಮಗಾಗಲೀ
ಇಬ್ಬರು : ಪ್ರೇಮಾ ಪ್ರೀತಿ ಒಂದಾಗಲೀ
ಕೋರಸ್ : ಹ್ಯಾಪಿ ಹ್ಯಾಪಿ ಟೂ ಯೂ ಹ್ಯಾಪಿ ಬರ್ತಡೇ ಟೂ ಯೂ
ಹ್ಯಾಪಿ ಬರ್ತಡೇ ಟೂ ಯೂ
ಗಂಡು : ಗಿಣಿಯಂತೇ ಕವಿಯಾಗಿ ನುಡಿಯನೇ ಮುದ್ದಾಗಿ ಹಾಡು ನೀ
ಹೆಣ್ಣು : ಹೂವಂತೇ ಚೆಲುವಾದ ನಗುವ ನೀ ಎಂದೆಂದೂ ತೋರು ನೀ
ಗಂಡು : ಮಾತೆಲ್ಲಾ... ಮುಟ್ಟಾಗಲೀ ಬಾಳೆಲ್ಲಾ.. ಹೊನ್ನಾಗಲೀ
ಇಬ್ಬರು : ಎಂದೂ ನಿನಗೇ ಹೀತವಾಗಲಿ
ಕೋರಸ್ : ಹ್ಯಾಪಿ ಹ್ಯಾಪಿ ಟೂ ಯೂ ಹ್ಯಾಪಿ ಬರ್ತಡೇ ಟೂ ಯೂ
ಹ್ಯಾಪಿ ಬರ್ತಡೇ ಟೂ ಯೂ
--------------------------------------------------------------------------------------------------------------------------
No comments:
Post a Comment