1063. ಮುಯ್ಯಿಗೆ ಮುಯ್ಯಿ (೧೯೭೮)

ಮುಯ್ಯಿಗೆ ಮುಯ್ಯಿ ಚಿತ್ರದ ಹಾಡುಗಳು 
  1. ಇವನಲ್ಲ ಅವನಲ್ಲ 
  2. ಈ ಮೌನ ಏಕೇ ಗೆಳೆಯಾ 
  3. ಈ ಸುಂದರ ಚಂದಿರನಿಂದ 
  4. ನಿನ್ನೇ ಇಲ್ಲಿ ಬರದೇ ಎಲ್ಲಿ ಹೋದೇ 
  5. ಬೆಳ್ಳಿ ಬೆಳ್ಳಿ ಚುಕ್ಕಿ ಬಿಂಕ ತೋರಿ 
ಮುಯ್ಯಿಗೆ ಮುಯ್ಯಿ (೧೯೭೮) - ಇವನಲ್ಲ ಅವನಲ್ಲಾ 
ಸಂಗೀತ : ಸತ್ಯಂ ಸಾಹಿತ್ಯ : ಚಿ.ಉದಯಶಂಕರ  ಗಾಯನ : ಎಸ್.ಜಾನಕೀ 

ಯಾಕ್ಕೂ....ಹೂಆ
ಇವನಲ್ಲ ಅವನಲ್ಲಾ ಇಲ್ಲಿಲ್ಲಾ ಎಲ್ಲೂ ಇಲ್ಲಾ ಅರೇ... ಅರೇ...ಅರೇ...ಅರೇ...
ಅವನೆಲ್ಲಿ ಮಾಯವಾದನೋ ಗೋವಿಂದಾ ಅವನೆಲ್ಲಿ ಕಾಣದಾದನೋ
ಆಂ..  ಇವನಲ್ಲ ಅವನಲ್ಲಾ ಇಲ್ಲಿಲ್ಲಾ ಎಲ್ಲೂ ಇಲ್ಲಾ ಹೇಯ್
ಅವನೆಲ್ಲಿ ಮಾಯವಾದನೋ ಗೋವಿಂದಾ ಅವನೆಲ್ಲಿ ಕಾಣದಾದನೋ
ಗೋವಿಂದಾ ... 

ಆಆಆ... ಹಗಲಲಿ ಕಾಣೋನಲ್ಲ ಇರುಳಲಿ ತರೋನಲ್ಲ 
ಬಂದರೇ ನಿಲ್ಲೋ ನಲ್ಲಾ ತೊಂದರೇ ಬಿಟ್ಟೋನಲ್ಲಾ 
ಆಆಆ... ಹಗಲಲಿ ಕಾಣೋನಲ್ಲ ಇರುಳಲಿ ತರೋನಲ್ಲ 
ಬಂದರೇ ನಿಲ್ಲೋ ನಲ್ಲಾ ತೊಂದರೇ ಬಿಟ್ಟೋನಲ್ಲಾ 
ಕೇಳಿದ್ದೂ ಕೋಡೋನಲ್ಲ ಬೇಕಾದ್ದು ಬಿಡೋನಲ್ಲಾ 
ಅತ್ತೆ ಮಗನಲ್ಲಾ ಮುತ್ತು ಕೊಡದೇ ಹೋಗೋನಲ್ಲಾ 
ಅವನೆಲ್ಲಿ ಮಾಯವಾದನೋ ಗೋವಿಂದಾ ಅವನೆಲ್ಲಿ ಕಾಣದಾದನೋ
ಇವನಲ್ಲ ಅವನಲ್ಲಾ ಇಲ್ಲಿಲ್ಲಾ ಎಲ್ಲೂ ಇಲ್ಲಾ
ಅವನೆಲ್ಲಿ ಮಾಯವಾದನೋ ಗೋವಿಂದಾ ಅವನೆಲ್ಲಿ ಕಾಣದಾದನೋ
ಗೋವಿಂದಾ ... 

ಹೊಯ್ ಹೊಯ್ ಹೊಯ್ ... 
ಯಾರಿಗೂ ಹೆದರೋನಲ್ಲಾ ರೋಷಕೆ ಬೆದರೋನಲ್ಲಾ 
ಒಲಿದರೇ ಬಿಡೋದಿಲ್ಲಾ ಮುನಿದರೇ ಉಳಿಸೋದಿಲ್ಲಾ 
ಯಾರಿಗೂ ಹೆದರೋನಲ್ಲಾ ರೋಷಕೆ ಬೆದರೋನಲ್ಲಾ 
ಒಲಿದರೇ ಬಿಡೋದಿಲ್ಲಾ ಮುನಿದರೇ ಉಳಿಸೋದಿಲ್ಲಾ 
ಪ್ರೀತಿಯ ಕಾಣಿಕೆಯಾ ಕೊಡದೇ ಹೋಗೋನಲ್ಲಾ 
ಅವನೇ ನನಗೆಲ್ಲಾ ಗಲ್ಲಿ ಎಲ್ಲೋ ತಪ್ಪವುದಿಲ್ಲಾ 
ಅವನೆಲ್ಲಿ ಮಾಯವಾದನೋ ಗೋವಿಂದಾ ಅವನೆಲ್ಲಿ ಕಾಣದಾದನೋ
ಇವನಲ್ಲ ಅವನಲ್ಲಾ ಇಲ್ಲಿಲ್ಲಾ ಎಲ್ಲೂ ಇಲ್ಲಾ ಅರೇ... ಅರೇ...ಅರೇ...ಅರೇ...
ಅವನೆಲ್ಲಿ ಮಾಯವಾದನೋ ಗೋವಿಂದಾ ಅವನೆಲ್ಲಿ ಕಾಣದಾದನೋ
ಅವನೆಲ್ಲಿ ಮಾಯವಾದನೋ ಗೋವಿಂದಾ ಅವನೆಲ್ಲಿ ಕಾಣದಾದನೋ
ಗೋವಿಂದಾ ... 
--------------------------------------------------------------------------------------------------------------------------

ಮುಯ್ಯಿಗೆ ಮುಯ್ಯಿ - ಈ ಮೌನ ಏಕೇ ಗೆಳೆಯಾ 
ಸಂಗೀತ : ಸತ್ಯಂ ಸಾಹಿತ್ಯ : ದೊಡ್ಡರಂಗೇಗೌಡ  ಗಾಯನ : ಎಸ್.ಪಿ.ಬಿ., ಪಿ.ಸುಶೀಲಾ 

ಹೆಣ್ಣು : ಈ ಮೌನ ಏಕೆ ಗೆಳೆಯಾ ನಮ್ಮ ಸ್ನೇಹ ಆಸೆ ಗಂಗೆ
          ನನ್ನ ನಿನ್ನ ಪ್ರೇಮ ಸಿಹಿಗಾನ ನಿಜ ಒಲವೇ... ಜೀವನ
         ನಿಜ ಒಲವೇ... ಜೀವನ 
         ಈ ಮೌನ ಏಕೆ ಗೆಳೆಯಾ ನಮ್ಮ ಸ್ನೇಹ ಆಸೆ ಗಂಗೆ
        ನನ್ನ ನಿನ್ನ ಪ್ರೇಮ ಸಿಹಿಗಾನ ನಿಜ ಒಲವೇ... ಜೀವನ
        ನಿಜ ಒಲವೇ... ಜೀವನ 

ಗಂಡು : ಸಾವಿರ ಯೋಚನೆ ಕಾಡುತಿರೆ ಹೊಸ ಆಸರೆಯ ನೀ ಬಯಸುತಿಹೆ
           ಸಾವಿರ ಯೋಚನೆ ಕಾಡುತಿರೆ ಹೊಸ ಆಸರೆಯ ನೀ ಬಯಸುತಿಹೆ
ಹೆಣ್ಣು : ಪ್ರೀತಿಯ ನೇಸರ ಮೂಡಿರಲು ಚೆಲು ಹೂವಿನ ಮಾತಿನ ಬಳುಕಾಗಿ
ಗಂಡು : ಹಗಲಿನಲೀ ಇರುಳಿನಲಿ ನಲುಮೆಯ ಹಾಡಿ ನನ್ನ ಕರೆದೇ ...
          ಈ ಕೋಪ ಏಕೆ ಗೆಳತೀ ನಮ್ಮ ಸ್ನೇಹ ಆಸೆ ಗಂಗೆ         
         ನನ್ನ ನಿನ್ನ ಪ್ರೇಮ ಸಿಹಿಗಾನ ನಿಜ ಒಲವೇ... ಜೀವನ
 ಇಬ್ಬರು : ಆಆಆ.. ನಿಜ ಒಲವೇ... ಜೀವನ 

 ಹೆಣ್ಣು : ದೇಹಕೆ ದಾಹವೂ ಕಾಡಿರಲೂ ಮಧುಪಾನಧಾತನ ಬಳಿ ಬಂದೇ
           ದೇಹಕೆ ದಾಹವೂ ಕಾಡಿರಲೂ ಮಧುಪಾನಧಾತನ ಬಳಿ ಬಂದೇ
ಗಂಡು : ಪ್ರೀತಿಯ ತೇರಿಕೆ ಕಾಣುತಿರೇ ಜೊತೆಯಾಗಲು ನೀ ಬಳಿ ಕರೆದೆ
ಹೆಣ್ಣು : ಕನಸಿನಲಿ ಮನಸಿನಲಿ ಅನುದಿನ ನಾ ನಿನ್ನ ಕಂಡೇ
ಗಂಡು :  ಈ ಕೋಪ ಏಕೆ ಗೆಳತೀ ನಮ್ಮ ಸ್ನೇಹ ಆಸೆ ಗಂಗೆ         
ಹೆಣ್ಣು :  ನನ್ನ ನಿನ್ನ ಪ್ರೇಮ ಸಿಹಿಗಾನ ನಿಜ ಒಲವೇ... ಜೀವನ
 ಇಬ್ಬರು : ಹೇಹೇಹೇ ..  ನಿಜ ಒಲವೇ... ಜೀವನ 
             ನಿಜ ಒಲವೇ... ಜೀವನ 
--------------------------------------------------------------------------------------------------------------------------

ಮುಯ್ಯಿಗೆ ಮುಯ್ಯಿ - ಈ ಸುಂದರ ಚಂದಿರನಿಂದ
ಸಂಗೀತ : ಸತ್ಯಂ ಸಾಹಿತ್ಯ :ವಿಜಯನಾರಸಿಂಹ ಗಾಯನ : ಕೆ.ಜೆ.ಏಸುದಾಸ್, ಎಸ್.ಜಾನಕೀ

ಗಂಡು : ಈ ಸುಂದರ ಚಂದಿರನಿಂದ ಆನಂದದ ಜೀವನ ಬಂಧ
           ಈ ಪ್ರೀತಿಯಲಿ ಈ ಮೋಹದಲಿ ಒಂದಾಗುವ ಚಂದದ ಬಂಧ... ಆಆಆ...
ಹೆಣ್ಣು : ಈ ಸುಂದರ ಚಂದಿರನಿಂದ ಆನಂದದ ಜೀವನ ಬಂಧ
           ಈ ಪ್ರೀತಿಯಲಿ ಈ ಮೋಹದಲಿ ಒಂದಾಗುವ ಚಂದದ ಬಂಧ... ಆಆಆ... 
ಇಬ್ಬರು  : ಈ ಸುಂದರ ಚಂದಿರನಿಂದ ಆನಂದದ ಜೀವನ ಬಂಧ
ಗಂಡು : ಆಆಆ.. ಆಆಆ.. (ಆಆಆ ) ಆಆಆ.. (ಆಆಆ ) ಆಆಆ.. (ಆಆಆ )

ಗಂಡು : ಈ ಬಾಳಿನ ದೋಣಿ ತೇಲುತಿದೆ ಆಕಾಶಕೆ ಆಸೆ ಏರುತಿದೆ
ಹೆಣ್ಣು : ಈ ಪ್ರೇಮಕೆ ಇಂದೇ ಸಂಗಮವು ಅನುರಾಗದೆ ರಾಗ ಸರಿಗಮವು
ಗಂಡು : ಮನಮೋಹಕ ನಮ್ಮೀ ಬಂಧನವು ತನು ನಿನ್ನಲಿ ಇಂದು ತನ್ಮಯವು
           ಈ ಸುಂದರ ಚಂದಿರನಿಂದ ಆನಂದದ ಜೀವನ ಬಂಧ
ಹೆಣ್ಣು : ಈ ಪ್ರೀತಿಯಲಿ ಈ ಮೋಹದಲಿ 
ಗಂಡು : ಒಂದಾಗುವ (ಒಂದಾಗುವ ) ಚಂದದ ಬಂಧ (ಚಂದದ ಬಂಧ)
           ಆಆಆ.. (ಆಆಆ.. ) ಆಆಆ.. (ಆಆಆ.. )
ಇಬ್ಬರು :  ಈ ಸುಂದರ ಚಂದಿರನಿಂದ ಆನಂದದ ಜೀವನ ಬಂಧ

ಹೆಣ್ಣು : ಎಂದೆಂದಿಗೂ ಒಂದೇ ಈ ಜೀವ ಬೇರಾಗದು ನಮ್ಮೀ ರಸಭಾವ
ಗಂಡು : ಎಂದೆಂದಿಗೂ ಒಂದೇ ಈ ಜೀವ ಬೇರಾಗದು ನಮ್ಮೀ ರಸಭಾವ
ಹೆಣ್ಣು : ಉಲ್ಲಾಸವೇ ತುಂಬು ಉಯ್ಯಾಲೆ ಸಂತೋಷದ ಸ್ನೇಹ ಸಂಕೋಲೆ
ಗಂಡು : ಈ ಅಂದಕೆ ಸೋತೆ ನಾನಿಂದು 
ಹೆಣ್ಣು : ಈ ಕೈಗಳ ನಾನು ಬಿಡೆನೆಂದೂ
         ಈ ಸುಂದರ ಚಂದಿರನಿಂದ ಆನಂದದ ಜೀವನ ಬಂಧ
ಗಂಡು : ಈ ಪ್ರೀತಿಯಲಿ ಈ ಮೋಹದಲಿ
ಹೆಣ್ಣು : ಒಂದಾಗುವ (ಒಂದಾಗುವ) ಚಂದದ ಬಂಧ (ಚಂದದ ಬಂಧ)
ಇಬ್ಬರು :  ಈ ಸುಂದರ ಚಂದಿರನಿಂದ ಆನಂದದ ಜೀವನ ಬಂಧ
--------------------------------------------------------------------------------------------------------------------------

ಮುಯ್ಯಿಗೆ ಮುಯ್ಯಿ - ನಿನ್ನೇ ಇಲ್ಲೀ ಬರದೇ ಎಲ್ಲಿ ಹೋದೇ 
ಸಂಗೀತ : ಸತ್ಯಂ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಜಾನಕೀ 

ಹಾಯ್  ನಿನ್ನೇ ಇಲ್ಲಿ ಬರದೇ ಎಲ್ಲಿ ಹೋದೇ
ಚೆನ್ನಾ ನಿನ್ನಾ ಕೂಗಿ ಕೂಗಿ ನೊಂದೇ
ನನ್ನಾ ಹತ್ತಿರ ನೀ ಕಾಣೆಯಾ ನಿನ್ನಾಸೆಯಾ ಪೂರೈಸೆಯಾ ಆಹಾ.. ಆಆಆ...

ಪರಪ್ಪಾ..
ಈ ಮಂಚದೇ ರಾತ್ರಿ ಹೊರಳಾಡಿ ಹೊರಳಾಡಿ ಸೋತೇ
ನೀ ಬಾರದೇ ಮೈ ಬಿಸಿಯಾಗಿ ಬಿಸಿಯಾಗಿ ಬೆಂದೆ
ಇಂದಾದರೂ ನೀ ಬಾರೆಯಾ ಜೊತೆಯಾಗಿ ಇರಲಾರೆಯಾ   .
ನಿನ್ನೇ ಇಲ್ಲಿ ಬರದೇ ಎಲ್ಲಿ ಹೋದೇ
ಚೆನ್ನಾ ನಿನ್ನಾ ಕೂಗಿ ಕೂಗಿ ನೊಂದೇ .. ಆಆಆ... ಹ್ಹಾಂ

ಈ ಅವಸರ ಏಕೇ ಇಲ್ಲಿಲ್ಲಾ ಇಲ್ಲೆಲ್ಲಾ ಅಲ್ಲಾ 
ಬಾ ಅಲ್ಲಿಗೇ ಕೊಡುವೇ ಸುಳ್ಳಲ್ಲಾ ಸುಳ್ಳಲ್ಲಾ ನಲ್ಲಾ 
ನನ್ನಾಟವು ಕಣ್ಣೋಟವೂ ನಿನಗಾಗಿ ಮೈಮಾಟವೂ 
ನಿನ್ನೇ ಇಲ್ಲಿ ಬರದೇ ಎಲ್ಲಿ ಹೋದೇ
ಚೆನ್ನಾ ನಿನ್ನಾ ಕೂಗಿ ಕೂಗಿ ನೊಂದೇ
ನನ್ನಾ ಹತ್ತಿರ ನೀ ಕಾಣೆಯಾ ನಿನ್ನಾಸೆಯಾ ಪೂರೈಸೆಯಾ ಆಹಾ.. ಆಆಆ... 
--------------------------------------------------------------------------------------------------------------------------

ಮುಯ್ಯಿಗೆ ಮುಯ್ಯಿ - ಬೆಳ್ಳಿ ಚುಕ್ಕಿ ಬೆಳ್ಳಿ ಚುಕ್ಕಿ ಬಿಂಕ ತೋರಿ 
ಸಂಗೀತ : ಸತ್ಯಂ ಸಾಹಿತ್ಯ : ವಿಜಯನಾರಸಿಂಹ ಗಾಯನ : ಎಸ್.ಪಿ.ಬಿ, ಪಿ.ಬಿ.ಎಸ್, ಪಿ.ಸುಶೀಲಾ, ಬೆಂಗಳೂರ ಲತಾ 

ಗಂಡು : ಬೆಳ್ಳಿ ಚುಕ್ಕಿ ಬೆಳ್ಳಿ ಚುಕ್ಕಿ ಬಿಂಕ ತೋರಿ ಬೆಳಗೋ ಮುಂಜಾನೇ
           ಜಿಂಗಿ ಚಿಕ್ಕಿ ಜಿಂಗಿ ಚಿಕ್ಕಿ ಸರಸ ಆಡೋ ಹರೆಯಾ ಇಂದೇನೇ
ಹೆಣ್ಣು : ಬೆಳ್ಳಿ ಚುಕ್ಕಿ ಬೆಳ್ಳಿ ಚುಕ್ಕಿ ಬಿಂಕ ತೋರಿ ಬೆಳಗೋ ಮುಂಜಾನೇ
           ಜಿಂಗಿ ಚಿಕ್ಕಿ ಜಿಂಗಿ ಚಿಕ್ಕಿ ಸರಸ ಆಡೋ ಹರೆಯಾ ಇಂದೇನೇ
ಗಂಡು : ಓಹೋಹೊಹೋ... ಅಹ್ಹಹಾಹಾ... ಆಆಆ... 

ಗಂಡು : ಕಣ್ಣು ಕಣ್ಣು ಬೇಟೆ ಆಡಿ ಹೆಣ್ಣು ಗಂಡು ಕೂಟ ಕೂಡಿ 
           ಬಲೆ ಬೀಸಿ ಬಂತು ಯೌವ್ವನಾ... ಆಹಾಹಾಹಾಆಆಅ... 
           ಮರೆಯೆಲ್ಲಾ ಮರೆಯೋ ಜೀವನಾ 
ಹೆಣ್ಣು : ಆಆಆ.. ಅಂದ ಚಂದ ತಂದ ವಸಂತ ಹೂವೂ ಎಂದೂ ಕಾಣದಂತ ನೋವೂ 
          ಇದು ಆಣೆ ನೀನೂ ಬೇಗನೇ... ಜೊತೆ ಕೂಡಿ ಹೀರು ಮಧುವನೇ 
ಗಂಡು : ಹೇ...     ಹೆಣ್ಣು : ಹ್ಹಾ... 
ಗಂಡು : ಒಹೋ.. ಹೆಣ್ಣು : ಹ್ಹಾ..   
ಗಂಡು   : ಬೆಳ್ಳಿ ಚುಕ್ಕಿ ಬೆಳ್ಳಿ ಚುಕ್ಕಿ ಬಿಂಕ ತೋರಿ ಬೆಳಗೋ ಮುಂಜಾನೇ
ಹೆಣ್ಣು :  ಜಿಂಗಿ ಚಿಕ್ಕಿ ಜಿಂಗಿ ಚಿಕ್ಕಿ ಸರಸ ಆಡೋ ಹರೆಯಾ ಇಂದೇನೇ 
ಗಂಡು .:  ಓಹೋಹೊಹೋ... 
ಹೆಣ್ಣು : ಅಹ್ಹಹಾಹಾ... ಆಆಆ... 

ಗಂಡು : ಹಾರಿ ಹಾರಿ ಬಂತು ಹಕ್ಕಿ ನಕ್ಕು ನಕ್ಕು ಎಂಬ ತೊಟ್ಟಿ
            ಇಂಥ ಜೋಡಿ ಎಲ್ಲೂ ಸೇರದೂ... ಆಹಾ ಹಾಆಆ..
            ಬಾಳಿನಲ್ಲಿ  ನೋವೇ ಬಾರದು
ಹೆಣ್ಣು : ಆಆಆ.. ಒಂಟಿ ತಂದೆ ನೀನು ಬಂದೇ ಎಂಥ ಶಿವನ ನೋಡಿ ಬಂದೇ
          ಮನಸೋತು ಬೆಸುಗೆ ಹಾಕಿದೇ..ಏಏಏ ತಂದಾಳೇ ನಮ್ಮ ನಲಿವಿಗೇ
ಗಂಡು : ಹೇ... ಹೆಣ್ಣು : ಹ್ಹಾ...
ಗಂಡು : ಒಹೋ.. ಹೆಣ್ಣು : ಹ್ಹಾ..
ಪಿ.ಬಿ. : ಬೆಳ್ಳಿ ಚುಕ್ಕಿ ಬೆಳ್ಳಿ ಚುಕ್ಕಿ ಬಿಂಕ ತೋರಿ ಬೆಳಗೋ ಮುಂಜಾನೇ
ಹೆಣ್ಣು :  ಜಿಂಗಿ ಚಿಕ್ಕಿ ಜಿಂಗಿ ಚಿಕ್ಕಿ ಸರಸ ಆಡೋ ಹರೆಯಾ ಇಂದೇನೇ 
ಪಿ.ಬಿ.:  ಓಹೋಹೊಹೋ... 
ಹೆಣ್ಣು : ಅಹ್ಹಹಾಹಾ... ಆಆಆ... 

ಪಿ.ಬಿ.: ಝಲ್ಲೂ ಝಲ್ಲೂ ಎಂದು ಗೆಜ್ಜೆ ನಾಟ್ಯವಾಡುವಂತ ಹೆಜ್ಜೇ 
          ಸಿರಿ ಬಂದು ನನ್ನೀ  ಪಾಲಿಗೇ... ಓಹೋಹೊಹೋ.. 
          ಬಳಿ ಬಂತು ನನ್ನೀ  ಬಳಿಗೇ.. 
ಹೆಣ್ಣು : ಓಹೋಹೊಹೋ.. ರಂಗು ರಂಗಿನಾಟದಲ್ಲಿ ಸಂಗ ಸೇರಿ ಹೋದೆ ಇಲ್ಲೀ    
          ಸರಿ ಬೇಗ ನನ್ನೀ ಸ್ನೇಹವಾ ಸುಖದಿಂದ ನಲ್ಮೆ ಆಗುವಾ 
ಗಂಡು : ಹೇ...     ಹೆಣ್ಣು : ಹ್ಹಾ... 
ಗಂಡು : ಒಹೋ.. ಹೆಣ್ಣು : ಹ್ಹಾ..   
ಇಬ್ಬರು : ಬೆಳ್ಳಿ ಚುಕ್ಕಿ ಬೆಳ್ಳಿ ಚುಕ್ಕಿ ಬಿಂಕ ತೋರಿ ಬೆಳಗೋ ಮುಂಜಾನೇ
             ಜಿಂಗಿ ಚಿಕ್ಕಿ ಜಿಂಗಿ ಚಿಕ್ಕಿ ಸರಸ ಆಡೋ ಹರೆಯಾ ಇಂದೇನೇ.. ಆಆಆ..  
             ಬೆಳ್ಳಿ ಚುಕ್ಕಿ ಬೆಳ್ಳಿ ಚುಕ್ಕಿ ಬಿಂಕ ತೋರಿ ಬೆಳಗೋ ಮುಂಜಾನೇ
             ಜಿಂಗಿ ಚಿಕ್ಕಿ ಜಿಂಗಿ ಚಿಕ್ಕಿ ಸರಸ ಆಡೋ ಹರೆಯಾ ಇಂದೇನೇ 
--------------------------------------------------------------------------------------------------------------------------

No comments:

Post a Comment