ಸುಖ ಸಂಸಾರಕ್ಕೆ ೧೨ ಸೂತ್ರಗಳು ಚಿತ್ರದ ಹಾಡುಗಳು
- ಭಾವಯ್ಯ ಭಾವಯ್ಯ ಬಿದ್ದೀರಾ ಹಳ್ಳಕ್ಕೇ
- ನಗೆಯ ಸೂರ್ಯ ಕಾಂತಿಯೇ ನಿನಗೆ ವಂದನೆ
- ರಾಗ ರಂಗು ಮೂಡಿ ಬಂತು ಕಣ್ಣಿನಾಗೇ
- ನನ್ನ ಮರೆಯದಿರು ನನ್ನ ತೊರೆಯದಿರೂ
ಸಂಗೀತ : ಚಕ್ರವರ್ತಿ ಸಾಹಿತ್ಯ : ಆರ್.ಏನ್.ಜಯಗೋಪಾಲ ಗಾಯನ : ಎಸ್.ಪಿ.ಬಿ, ಎಸ್.ಜಾನಕೀ
ಕೋರಸ್ : ಭಾವಯ್ಯ ಭಾವಯ್ಯಾ ಬಿದ್ದೀರಾ ಹಳ್ಳಕ್ಕೇ ಹೋಯ್ಯಾ ತಕ ಥೈಯ್ಯಾ
ನಿನ್ನ ಬಯಕೇ ಅಯ್ಯಾ ಅಯ್ಯಾ
ಭಾವಯ್ಯ ಭಾವಯ್ಯಾ ಬಿದ್ದೀರಾ ಹಳ್ಳಕ್ಕೇ ಈ ನಮ್ಮಾ ಚೆಂದುಳ್ಳಿ ಚೆಲುವೆಯಾ ಅಂದಕ್ಕೆ
ಹೆಣ್ಣು : ಕೋಪವೂ ನೋಡಿಲ್ಲಿ ನಿಮ್ಮ ಮೂಗಿನ ತುದಿಯಲ್ಲಿ ರಂಗೇರಿ ನಿಂತಾಗ ನೀವು ಚೆಂದ ನೋಡೋಕೇ
ಕೋರಸ್ : ಭಾವಯ್ಯ ಭಾವಯ್ಯಾ ಬಿದ್ದೀರಾ ಹಳ್ಳಕ್ಕೇ ಈ ನಮ್ಮಾ ಚೆಂದುಳ್ಳಿ ಚೆಲುವೆಯಾ ಅಂದಕ್ಕೆ
ಹೆಣ್ಣು : ತಪ್ಪಾಯ್ತು ದಮ್ಮಯ್ಯ ನಾ ಬೇಡಲಿ ತಪ್ಪಿನ ಕಾಣಿಕೆಯ ನಾ ನೀಡಲೇ
ಸಂತೋಷ ಕೊಡುವಂತ ಈ ಹೊತ್ತಿಗೇ ಸಂಗಾತಿ ಮೇಲಿಂಥ ಮುನಿಸೇತಕೆ
ಬಾಳು ಎಂಬ ಗಾಡಿಗೆಂದು ಚಕ್ರ ಎರಡಂತೇ
ಕೋರಸ್ : ಲಾಲಲ್ಲಲ್ಲ ಲಲಲ ಲಾಲಲ್ಲಲ್ಲ ಲಲಲ
ಹೆಣ್ಣು : ಹ್ಹಾ.. ಚಕ್ರ ಏರು ಪೇರು ಆಗೇ ಎಲ್ಲಾ ಬರಿದಂತೇ
ಹೇ... ನಕ್ಕಾಗ ಮುತ್ತು ರತ್ನ ಬಿದ್ದು ಹಾಳಾಗ ಹೋಗಲ್ಲಾ
ಎಲ್ಲಾನು ಹೊಂದು ಆಟ ಎಂದೂ ನೋಡಿ ತಪ್ಪಿಲ್ಲಾ
ಬಾಳೊಂದು ಸಂಗೀತ ನಗುವಾಗ ಎಲ್ಲಾ
ಗಂಡು : ಅಮ್ಮಯ್ಯ ಅಮ್ಮಯ್ಯ ಮುತ್ತಂಥ ಅಮ್ಮಯ್ಯ ಥೈಯ್ಯ ತಕ ಥೈಯ್ಯಾ ನಾ ಹಿಡಿದೇ ನಿನ್ನ ಕೈಯ
ಅಮ್ಮಯ್ಯ ಅಮ್ಮಯ್ಯ ಮುತ್ತಂಥ ಅಮ್ಮಯ್ಯ ಬೆಪ್ಪಾದೆ ನೀ ಇಂದೂ ನೀ ಕೇಳೇ ಅಮ್ಮಯ್ಯಾ
ನಾಟಕ ನೋಡಲ್ಲಾ ವೇಷ ಹಾಕಿದೇ ನಾನೆಲ್ಲಾ ಕೆಂಪೇರಿ ನೀ ನಿಂತೇ ಏನೋ ಚೆಂದ ನೋಡೋಕೇ
ಅಮ್ಮಯ್ಯ ಅಮ್ಮಯ್ಯ ಮುತ್ತಂಥ ಅಮ್ಮಯ್ಯ ಬೆಪ್ಪಾದೆ ನೀ ಇಂದೂ ನೀ ಕೇಳೇ ಅಮ್ಮಯ್ಯಾ
ಗಂಡು : ಹೂವಂತ ನಾಜೂಕು ಈ ಹೆಣ್ಣಿಗೇ ಹಾಯ್ ಹಾಯ್ ಸಾಟಿಯೂ ಎಲ್ಲಿನ್ನ ಈ ಕಣ್ಣಿಗೇ
ತಾಳಿಯೂ ಕಟ್ಟೋಕೇ ಹೂಂ ಎಂದರೇ ಅಯ್ಯೋ ಬಂತಲ್ಲ ನೂರಾರು ಹೊಸ ತೊಂದರೇ
ಓಡೋ ಕುದುರೆ ಓಟ ನಮ್ಮ ಹತೋಟಿಯಲ್ಲೇ ಹ್ಹಾ..
ಕೋರಸ್ : ಲಾಲಲ್ಲಲ್ಲ ಲಲಲ ಲಾಲಲ್ಲಲ್ಲ ಲಲಲ
ಗಂಡು : ಅರೇ ಪ್ರೀತಿಯಿಂದ ಬಂದವೇಳೆ ಶರಣಾಗ ಬಲ್ಲೇ
ಅರೆರೆರೆರೇ.. ನಾನೇನೂ ಹುಂಬನಲ್ಲಾ ಪ್ರೀತಿ ಪಾಠ ಕೇಳೋಲ್ಲಾ
ಜಾಣ ಹಂಗೇ ಒಂದು ನೋಟ ಒಂದು ಮಾತು ಸಾಕಲ್ಲಾ
ನೀನನ್ನ ಸಂಗಾತಿ ಸಂದೇಹ ಇಲ್ಲಾ
ಕೋರಸ್ : ಭಾವಯ್ಯ ಭಾವಯ್ಯಾ ಬಿದ್ದೀರಾ ಹಳ್ಳಕ್ಕೇ ಹೋಯ್ಯಾ ತಕ ಥೈಯ್ಯಾನಿನ್ನ ಬಯಕೇ ಅಯ್ಯಾ ಅಯ್ಯಾ
ಭಾವಯ್ಯ ಭಾವಯ್ಯಾ ಬಿದ್ದೀರಾ ಹಳ್ಳಕ್ಕೇ ಈ ನಮ್ಮಾ ಚೆಂದುಳ್ಳಿ ಚೆಲುವೆಯಾ ಅಂದಕ್ಕೆ
ಹೆಣ್ಣು : ಕೋಪವೂ ನೋಡಿಲ್ಲಿ ನಿಮ್ಮ ಮೂಗಿನ ತುದಿಯಲ್ಲಿ ರಂಗೇರಿ ನಿಂತಾಗ ನೀವು ಚೆಂದ ನೋಡೋಕೇ
ಕೋರಸ್ : ಭಾವಯ್ಯ ಭಾವಯ್ಯಾ ಬಿದ್ದೀರಾ ಹಳ್ಳಕ್ಕೇ ಈ ನಮ್ಮಾ ಚೆಂದುಳ್ಳಿ ಚೆಲುವೆಯಾ ಅಂದಕ್ಕೆ
------------------------------------------------------------------------------------------------------------------------
ಸುಖ ಸಂಸಾರಕ್ಕೆ ೧೨ ಸೂತ್ರಗಳು (೧೯೮೪) - ನಗೆಯ ಸೂರ್ಯ ಕಾಂತಿಯೇ ನಿನಗೆ ವಂದನೆ
ಸಂಗೀತ : ಚಕ್ರವರ್ತಿ ಸಾಹಿತ್ಯ : ಆರ್.ಏನ್.ಜಯಗೋಪಾಲ ಗಾಯನ : ಎಸ್.ಪಿ.ಬಿ, ಎಸ್.ಜಾನಕೀ
ಗಂಡು : ನಗೆಯ ಸೂರ್ಯ ಕಾಂತಿಯೇ ನಿನಗೆ ವಂದನೆ
ಚೆಲುವ ಚೈತ್ರ ಮಾಸವೇ ಹೃದಯ ವಂದನೆ
ಶಿಲ್ಪಕಲೆಗೇ ಇಂದೂ ನೀನು ಜೀವಾ ನೀಡಿದೇ...
ಪ್ರಿಯೇ ... ಪ್ರಿಯೇ ... ಪ್ರಿಯೇ ... ಪ್ರಿಯೇ ...
ಹೆಣ್ಣು : ಚಂದ್ರ ಕಿರಣ ಕಾಂತಿಯೇ ನಿನಗೆ ವಂದನೆ
ಬೆಳಗುದಯ ದೀಪವೇ ನನ್ನ ವಂದನೆ
ಪ್ರೀತಿಗೇನೇ ಎಲ್ಲಿ ಹೊಸತು ರಾಗ ಮೀಟಿದೆ
ಪ್ರಿಯಾ.. ಪ್ರಿಯಾ.. ಪ್ರಿಯಾ.. ಪ್ರಿಯಾ..ಪ್ರಿಯಾ.. ಪ್ರಿಯಾ..
ಗಂಡು : ಪ್ರೇಮವೆಂಬ ಕಾವ್ಯ ನೀನು ಕಣ್ಣಲ್ಲೇ ಬರೇ
ಜೀವ ಒಂದೇ ದೇಹ ಎರಡು ನನ್ನಲೇ ಬೇರೇ
ಹೆಣ್ಣು : ರಾಗ ನೀನು ತಾಳವು ನಾನು ನಾವು ಸೇರಲೂ
ಜೀವನದ ಸಂಗೀತ ಹಿತವೂ ಕೇಳಲೂ
ಗಂಡು : ಗಂಧ ಹಚ್ಚೋಕೇ ಈ ಗಲ್ಲ ಹೊತ್ತು
ನನ್ನ ಆವೇಗ ನಿಂಗೇನೂ ಗೊತ್ತೂ (ಅಹ್ಹಹ್ಹಹ್ಹ..)
ನಂಗೇ ಬೇಕಾದ್ದೂ ನೀನೀಗ ಇಟ್ಟು
ನೀನು ನಕ್ಕಾಗ ನಾನಾದೇ ಚಿಕ್ಕೂ
ಧರೆಗೇ ರಂಭೆ ಬಂದಂತೇ ಬಂದ ರೂಪಸಿ
ನಿನಗೇ ವಂದನೆ ಪ್ರಿಯೇ ... ಪ್ರಿಯೇ ... ಪ್ರಿಯೇ ... ಪ್ರಿಯೇ ...
ಹೆಣ್ಣು : ಚಂದ್ರ ಕಿರಣ ಕಾಂತಿಯೇ ನಿನಗೆ ವಂದನೆ
ಗಂಡು : ನಗೆಯ ಸೂರ್ಯ ಕಾಂತಿಯೇ ನಿನಗೆ ವಂದನೆ
ಹೆಣ್ಣು : ಏಳು ಜನ್ಮ ಬಂಧ ಸಂಗ ಭಾವ ಸಂಗಮ
ಹಿಂದೇ ಎಂದೂ ಕಾಣದಂತ ಹರುಷ ಸಂಭ್ರಮ
ಗಂಡು : ಹುಣ್ಣಿಮೆಯೇ ಹೆಣ್ಣಾಗಿ ಬಳಿಗೆ ಬಂದಿತೋ
ತಾರೆಗಳೇ ಕಣ್ಣಾಗಿ ಮಿಂಚಿ ನಕ್ಕೀತೋ
ನನ್ನ ಪ್ರೇಮಕ್ಕೆ ಆಗಿಲ್ಲ ಮುಪ್ಪು ನನ್ನ ಮೀಸೆಗೆ ಬೇಕಿಲ್ಲ ಕಪ್ಪು
ಬೇಗ ನೀ ಬಂದು ನನ್ನನ್ನೂ ಅಪ್ಪು ಏಕೆ ಈ ಲಜ್ಜೇ ಏನಿಲ್ಲ ತಪ್ಪು
ಹೆಣ್ಣು : ಸುಖ ನಿರ್ಮಲಷಯ ಈ ಕಂಡೇ ಬಂದೆ ಬಾಳಲಿ
ನಿನಗೇ ವಂದನೆ ಪ್ರಿಯಾ.. ಪ್ರಿಯಾ.. ಪ್ರಿಯಾ.. ಪ್ರಿಯಾ.. ಪ್ರಿಯಾ..
ಗಂಡು : ನಗೆಯ ಸೂರ್ಯ ಕಾಂತಿಯೇ ನಿನಗೆ ವಂದನೆ
ಹೆಣ್ಣು : ಚಂದ್ರ ಕಿರಣ ಕಾಂತಿಯೇ ನಿನಗೆ ವಂದನೆ
ಗಂಡು : ಶಿಲ್ಪಕಲೆಗೇ ಇಂದೂ ನೀನು ಜೀವಾ ನೀಡಿದೇ...
ಪ್ರಿಯೇ ... ಪ್ರಿಯೇ ... ಪ್ರಿಯೇ ... ಪ್ರಿಯೇ ...
ಹೆಣ್ಣು : ಪ್ರಿಯಾ.. ಪ್ರಿಯಾ.. ಪ್ರಿಯಾ.. ಪ್ರಿಯಾ..ಪ್ರಿಯಾ.. ಪ್ರಿಯಾ..
--------------------------------------------------------------------------------------------------------------------------
ಹೆಣ್ಣು : ಚಂದ್ರ ಕಿರಣ ಕಾಂತಿಯೇ ನಿನಗೆ ವಂದನೆ
ಗಂಡು : ಶಿಲ್ಪಕಲೆಗೇ ಇಂದೂ ನೀನು ಜೀವಾ ನೀಡಿದೇ...
ಪ್ರಿಯೇ ... ಪ್ರಿಯೇ ... ಪ್ರಿಯೇ ... ಪ್ರಿಯೇ ...
ಹೆಣ್ಣು : ಪ್ರಿಯಾ.. ಪ್ರಿಯಾ.. ಪ್ರಿಯಾ.. ಪ್ರಿಯಾ..ಪ್ರಿಯಾ.. ಪ್ರಿಯಾ..
--------------------------------------------------------------------------------------------------------------------------
ಸುಖ ಸಂಸಾರಕ್ಕೆ ೧೨ ಸೂತ್ರಗಳು (೧೯೮೪) - ರಾಗ ರಂಗು ಮೂಡಿ ಬಂತು ಕಣ್ಣಿನಾಗೇ
ಸಂಗೀತ : ಚಕ್ರವರ್ತಿ ಸಾಹಿತ್ಯ : ದೊಡ್ಡರಂಗೇಗೌಡ ಗಾಯನ : ಎಸ್.ಪಿ.ಬಿ, ಎಸ್.ಜಾನಕೀ
ಗಂಡು : ಲಾಲ ಲರಲ ಲಾಲಲಾ ಅಹಹಾ.. ಲರಲ ಲಾಲಲಾ
ಹೆಣ್ಣು : ಲಾಲ ಲಲ ಲಾಲಲಲಲಲ
ರಾಗ ರಂಗು ಮೂಡಿ ಬಂದು ಕಣ್ಣಿನಾಗೇ
ಹೊಯ್ ನೂರೆಂಟು ಆಸೆ ಬಂತು ಬಾಳಿನಾಗೇ
ಗಂಡು : ಮಾತು ಮೌನ ಮೀರಿ ಬೆಳೆದ ಸ್ನೇಹದಾಗೇ
ಅಂಗ ಸಂಗ ತೋರಿ ಬೆಳೆದ ಮೋಹದಾಗೇ
ಹೆಣ್ಣು : ಜೀವ ಭಾವ ಹೊಂದಿಕೊಂಡ ಪ್ರೀತಿಯಾಗೇ
ಏನೇನೋ ಕನಸು ಕಂಡೇ ಪ್ರೇಮದಾಗೇ
ಗಂಡು : ಅಂಟು ನಂಟು ತುಂಬಿ ಬಂದ ನೋಟದಾಗೇ
ನಾವ್ ಒಂದಾಗಿ ಬೆರೆತೆ ಹಾಲುಜೇನಿನಾಗೇ
ಹೆಣ್ಣು : ರಾಗ ರಂಗು ಮೂಡಿ ಬಂದು ಕಣ್ಣಿನಾಗೇ
ಹೊಯ್ ನೂರೆಂಟು ಆಸೆ ಬಂತು ಬಾಳಿನಾಗೇ
ಜೋರಾಗಿ ಹಾರಿ ಹಾರಿ ರಸ ಹೀರೊ ದುಂಬಿಯಂಗೆ ಬಂದೆ ನಾನು
ಹೆಣ್ಣು : ಬಳಿಗೆ ಬಂದು ಸೆರಗ ಸೆಳೆಯೋ ತಂಟೆಗೆ
ಮನಸುಕೊಂಬೇ ಆಸೆ ತಂದ ಮೋಜಿಗೇ
ಬಳಿಗೆ ಬಂದು ಸೆರಗ ಸೆಳೆಯೋ ತಂಟೆಗೆ
ಮನಸುಕೊಂಬೇ ಆಸೆ ತಂದ ಮೋಜಿಗೇ
ಗಂಡು : ಸುಖದಾ ಸಿರಿ ತೋರಿ ಮಿನುಗೋ ನಗೆ ಬೀರಿ
ನೋಡು ಚಂಚಲೆ ಮೆಲ್ಲಗೆ ಅಪ್ಪಿಕೊಂಡೇ
ನಕ್ಕು ನಕ್ಕು ತಪ್ಪದೇ ಒಪ್ಪಿಕೊಂಡೇ
ಹೆಣ್ಣು : ರಾಗ ರಂಗು ಮೂಡಿ ಬಂದು ಕಣ್ಣಿನಾಗೇಹೊಯ್ ನೂರೆಂಟು ಆಸೆ ಬಂತು ಬಾಳಿನಾಗೇ
ಗಂಡು : ಮಾತು ಮೌನ ಮೀರಿ ಬೆಳೆದ ಸ್ನೇಹದಾಗೇ
ನಾವ್ ಒಂದಾಗಿ ಬೆರೆತೆ ಹಾಲುಜೇನಿನಾಗೇ
ನಾವ್ ಒಂದಾಗಿ ಬೆರೆತೆ ಹಾಲುಜೇನಿನಾಗೇ
ಸಂತೋಷ ಹಾದಿಯಾಗೇ ಸೊಗಸಾಗಿ ನಲಿವಾಗ ಏನೂ ಅಂದಾ
ಗಂಡು : ಬೇರೆದೇ ನೀನು ನನ್ನ ಕರೆಯೋ ಧಾಟಿಗೇ ದಿನವೂ ನಾನು ನಿನ್ನ ಅರಿಯೋ ರೀತಿಗೆ
ಬೇರೆದೇ ನೀನು ನನ್ನ ಕರೆಯೋ ಧಾಟಿಗೇ ದಿನವೂ ನಾನು ನಿನ್ನ ಅರಿಯೋ ರೀತಿಗೆ
ಹೆಣ್ಣು : ಒಲವೇ ಬಲೆ ಬೀಸಿ ಒಸುಗೇ ಹೂವೂ ಹಾಸಿ ಎಂದೂ ನಾನು ನಿನ್ನನ್ನೇ ನೆಚ್ಚಿಕೊಂಡೇ
ಹಗಲಿರುಳು ಎನ್ನದೇ ಮೆಚ್ಚಿಕೊಂಡೇ
ಹೆಣ್ಣು : ರಾಗ ರಂಗು ಮೂಡಿ ಬಂದು ಕಣ್ಣಿನಾಗೇ
ಹೊಯ್ ನೂರೆಂಟು ಆಸೆ ಬಂತು ಬಾಳಿನಾಗೇ
ಗಂಡು : ಮಾತು ಮೌನ ಮೀರಿ ಬೆಳೆದ ಸ್ನೇಹದಾಗೇ
ಅಂಗ ಸಂಗ ತೋರಿ ಬೆಳೆದ ಮೋಹದಾಗೇ
ಹೆಣ್ಣು : ಜೀವ ಭಾವ ಹೊಂದಿಕೊಂಡ ಪ್ರೀತಿಯಾಗೇ
ಏನೇನೋ ಕನಸು ಕಂಡೇ ಪ್ರೇಮದಾಗೇ
ಗಂಡು : ಅಂಟು ನಂಟು ತುಂಬಿ ಬಂದ ನೋಟದಾಗೇ
ನಾವ್ ಒಂದಾಗಿ ಬೆರೆತೆ ಹಾಲುಜೇನಿನಾಗೇ
ಹೆಣ್ಣು : ರಾಗ ರಂಗು ಮೂಡಿ ಬಂದು ಕಣ್ಣಿನಾಗೇ
ಹೊಯ್ ನೂರೆಂಟು ಆಸೆ ಬಂತು ಬಾಳಿನಾಗೇ
ಅಂಗ ಸಂಗ ತೋರಿ ಬೆಳೆದ ಮೋಹದಾಗೇ
ಹೆಣ್ಣು : ಜೀವ ಭಾವ ಹೊಂದಿಕೊಂಡ ಪ್ರೀತಿಯಾಗೇ
ಏನೇನೋ ಕನಸು ಕಂಡೇ ಪ್ರೇಮದಾಗೇ
ಗಂಡು : ಅಂಟು ನಂಟು ತುಂಬಿ ಬಂದ ನೋಟದಾಗೇ
ನಾವ್ ಒಂದಾಗಿ ಬೆರೆತೆ ಹಾಲುಜೇನಿನಾಗೇ
ಹೆಣ್ಣು : ರಾಗ ರಂಗು ಮೂಡಿ ಬಂದು ಕಣ್ಣಿನಾಗೇ
ಹೊಯ್ ನೂರೆಂಟು ಆಸೆ ಬಂತು ಬಾಳಿನಾಗೇ
ಗಂಡು : ಮಾತು ಮೌನ ಮೀರಿ ಬೆಳೆದ ಸ್ನೇಹದಾಗೇ
ನಾವ್ ಒಂದಾಗಿ ಬೆರೆತೆ ಹಾಲುಜೇನಿನಾಗೇ
--------------------------------------------------------------------------------------------------------------------------
ನಾವ್ ಒಂದಾಗಿ ಬೆರೆತೆ ಹಾಲುಜೇನಿನಾಗೇ
--------------------------------------------------------------------------------------------------------------------------
ಸುಖ ಸಂಸಾರಕ್ಕೆ ೧೨ ಸೂತ್ರಗಳು (೧೯೮೪) - ನನ್ನ ಮರೆಯದಿರು ನನ್ನ ತೊರೆಯದಿರೂ
ಸಂಗೀತ : ಚಕ್ರವರ್ತಿ ಸಾಹಿತ್ಯ : ಶ್ಯಾಮಸುಂದರ ಕುಲಕರ್ಣಿ ಗಾಯನ : ಎಸ್.ಪಿ.ಬಿ, ಎಸ್.ಜಾನಕೀ
ಗಂಡು : ನನ್ನ ಮರೆಯದಿರೂ (ಚಂ ಚಂಚಂಚಂಚಂಚಂಚಂ)
ನನ್ನ ತೊರೆಯದಿರೂ (ಚಂಚಂಚಂಚಂಚಂಚಂಚಂ)
ನೀ ನನ್ನ ಪ್ರಾಣ ಪ್ರೀತಿ ಇನ್ನೇಕೆ ಯಾರ ಭೀತಿ
ಸೇರೋಣ ಸಂತೋಷದಿ (ಲಾಲಾಲಾ.. )
ಹೆಣ್ಣು : ದೂರ ಸರಿಯದಿರೂ (ಚಂಚಂಚಂಚಂಚಂಚಂಚಂ)
ಯಾರ ನೆನೆಯದಿರೂ (ಚಂಚಂಚಂಚಂಚಂಚಂಚಂ)
ನೀ ನನ್ನ ಜೀವ ಜ್ಯೋತಿ ನಿನ್ನಲ್ಲಿ ಇಟ್ಟೇ ಪ್ರೀತಿ
ಸೇರೋಣ ಸಂತೋಷದಿ (ಲಾಲಾಲಾ.. )
ಗಂಡು : ಮಿಂಚಂತೇ ಬಳಿ ಸುಳಿದವಳೂ ಹೊಂಚಹಾಕಿ ಮನ ಸೆಳೆದವಳೂ
ಪ್ರೇಮದ ಸಂಗೀತ ಶ್ರುತಿಯಾದಳೂ
ಹೆಣ್ಣು : ಕಣ್ಣಲ್ಲೇ ಬಳಿ ಕರೆದವನೂ ಮೈಯೆಲ್ಲಾ ಬಿಸಿ ಎರೆದವನೂ
ಬಾಳಿನ ಉಲ್ಲಾಸ ಸುಧೆಯಾದನೂ
ಗಂಡು : ಆಸೇ ಉಕ್ಕಿದೇ... ಹೆಣ್ಣು : ಅಂಕೇ ಮಿರಿದೇ...
ಗಂಡು : ಮೊಗ್ಗಿನ ಚೆಲುವು ಹಿಗ್ಗಿದೇ ಬಯಕೆ ನುಗ್ಗಿದೇ
ಒಲಿದು ಒಂದಾದ ಬಾಳೆಲ್ಲಾ ಬಂಗಾರವೂ
ಹೆಣ್ಣು : ದೂರ ಸರಿಯದಿರೂ (ಲಾಲರಲರಲಲಲಾ)
ಯಾರ ನೆನೆಯದಿರೂ (ಲಾಲರೇರಾಲಲಲಾ)
ಗಂಡು : ನೀ ನನ್ನ ಪ್ರಾಣ ಪ್ರೀತಿ ಇನ್ನೇಕೆ ಯಾರ ಭೀತಿ
ಹೆಣ್ಣು : ಸೇರೋಣ ಸಂತೋಷದಿ (ಲಾಲಾಲಾ.. )
ಹೆಣ್ಣು : ತಂಗಾಳಿ ಹೀತ ತಂದಿರಲೂ ಸಂಗಾತಿ ಜೋತೆ ಬಂದಿರಲೂ
ಗಂಡು : ಈ ಬಳ್ಳಿ ನಡು ಬಳುಕಿರಲೂ ಲಾವಣ್ಯ ಸಿರಿ ತುಳುಕಿರಲೂ
ಆವೇಗ ಉನ್ಮಾದ ರಂಗೇರಿದೇ
ಹೆಣ್ಣು : ಪ್ರೇಮದ ಆಟಕೆ...
ಗಂಡು : ಅಹ್ಹಹ್ಹಹ್ಹ.. ಏಕೇ ನಾಚಿಕೇ ....ಲಲಲಲ
ಹೆಣ್ಣು : ಬಂಧನ ಸುಖದ ಈ ದಿನ ಬದುಕು ನಂದನ
ಇನಿಯಾ ನಾವಿಂದೂ ಎಂದೆಂದೂ ಒಂದಾಗುವಾ
ಗಂಡು : ನನ್ನ ಮರೆಯದಿರೂ (ಚಂ ಚಂಚಂಚಂಚಂಚಂಚಂ)
ಹೆಣ್ಣು : ನನ್ನ ತೊರೆಯದಿರೂ (ಚಂಚಂಚಂಚಂಚಂಚಂಚಂ)
ಗಂಡು : ನೀ ನನ್ನ ಪ್ರಾಣ ಪ್ರೀತಿ
ಹೆಣ್ಣು : ಇನ್ನೇಕೆ ಯಾರ ಭೀತಿ
ಇಬ್ಬರು : ಸೇರೋಣ ಸಂತೋಷದಿ ಲಾಲಾಲಾ..
--------------------------------------------------------------------------------------------------------------------------
No comments:
Post a Comment