ಸುಬ್ಬಿ ಸುಬ್ಬಕ್ಕ ಸುವ್ವಲಾಲಿ ಚಿತ್ರದ ಹಾಡುಗಳು
- ಸುಬ್ಬಿ ಸುಬ್ಬಕ್ಕ ಸುವ್ವಲಾಲಿ
- ಮಸುಕಾದ ಮನಸಿನ ಆಕಾಶಕೇ
- ಮುನಿದ ಹೆಣ್ಣೇ ಹಾವೂ
- ಯಾವುದ ಮರೆಯಲೀ ಯಾವುದ ಬಯಸಲೀ
ಸಂಗೀತ : ವಿಜಯ ಭಾಸ್ಕರ ಸಾಹಿತ್ಯ : ದೊಡ್ಡರಂಗೇಗೌಡ ಗಾಯನ : ಎಸ್.ಪಿ.ಬಿ, ವಾಣಿಜಯರಾಂ
ಹೆಣ್ಣು : ಸುಬ್ಬೀ... (ಸುಬ್ಬೀ ಸುಬ್ಬೀ ಸುಬ್ಬೀ) ಸುಬ್ಬಕ್ಕಾ (ಸುಬ್ಬಕ್ಕಾ) ಸುವ್ವಲಾಲಿ (ಸುವ್ವಲಾಲಿ)
ಸುಬ್ಬೀ... (ಸುಬ್ಬೀ ಸುಬ್ಬೀ ಸುಬ್ಬೀ) ಸುಬ್ಬಕ್ಕಾ (ಸುಬ್ಬಕ್ಕಾ) ಸುವ್ವಲಾಲಿ (ಸುವ್ವಲಾಲಿ)
ಹೊಂಬಾಳೆ ಹೊಳೆದಂಗೇ ಎಂದೆಂದೂ ನೀ ನಗುವೇ
ಹೂ ರಂಗೀ ತೆನೆಯಂಗೇ ಚೆಂದಾಗಿ ನೀನಿರುವೇ
ಗಂಡು : ನಿನ್ನ ಮಾತು ಚಂದ (ಚಂದ) ನಿನ್ನ ಮೌನ ಅಂದ (ಅಂದ)
ಗಂಡು : ಸುಬ್ಬೀ... (ಸುಬ್ಬೀ ಸುಬ್ಬೀ ಸುಬ್ಬೀ) ಸುಬ್ಬಕ್ಕಾ (ಸುಬ್ಬಕ್ಕಾ) ಸುವ್ವಲಾಲಿ (ಸುವ್ವಲಾಲಿ )
ಗಂಡು : ಬದುಕಾ... ಬವಣೆಯಲೀ... ಸಹನೇ....ಹೇಹೇಹೇ ನಿಲುಕಿಸುವೇ
ನಗೆಯ ಹೊನಲಿನಲೀ.. ಹರುಷಾ..ಆಆಆ ಅರಳಿಸುವೇ
ಹೆಣ್ಣು : ಬಾಳ ತುಂಬಾ ಪ್ರೀತಿ ಕೇಳಿ ಎಲ್ಲಾ ರೀತಿ ತಾಳ್ಮೆ ತೋರಿ
ಬಾಳ ತುಂಬಾ ಪ್ರೀತಿ ಕೇಳಿ ಎಲ್ಲಾ ರೀತಿ ತಾಳ್ಮೆ ತೋರಿ
ಗಂಡು : ನಿನ್ನ ಸ್ನೇಹ ಚಂದಾ (ಚಂದಾ ) ನಿನ್ನ ನೋಟ ಅಂದಾ (ಅಂದಾ )
ಸುಬ್ಬೀ... (ಸುಬ್ಬೀ ಸುಬ್ಬೀ ಸುಬ್ಬೀ) ಸುಬ್ಬಕ್ಕಾ (ಸುಬ್ಬಕ್ಕಾ) ಸುವ್ವಲಾಲಿ (ಸುವ್ವಲಾಲಿ)
ಹೆಣ್ಣು : ಕರುಣೆ ತಿಳಿಯಿತಲಿ ಸನಿಹ ಬೆರೆತಿರು ನೀ
ಒಲವೇ ಕುಣಿಯುತಲೀ ಅಳಲು ಅರಿತಿರುವೇ
ಗಂಡು : ದಾರಿ ದೂರ ನೋವ ಹೀರಿ ಮಣ್ಣ ಮೋಹ ನಲ್ಮೆ ಮೀರಿ
ದಾರಿ ದೂರ ನೋವ ಹೀರಿ ಮಣ್ಣ ಮೋಹ ನಲ್ಮೆ ಮೀರಿ
ಹೆಣ್ಣು : ನಿನ್ನಾ ಗುಣವೇ ಚಂದಾ ( ಚಂದಾ) ನಿನ್ನಾ ಸೊಬಗು ಅಂದಾ (ಅಂದಾ )
ಇಬ್ಬರು: ಸುಬ್ಬೀ... (ಸುಬ್ಬೀ ಸುಬ್ಬೀ ಸುಬ್ಬೀ) ಸುಬ್ಬಕ್ಕಾ (ಸುಬ್ಬಕ್ಕಾ) ಸುವ್ವಲಾಲಿ (ಸುವ್ವಲಾಲಿ)
ಹೊಂಬಾಳೆ ಹೊಳೆದಂಗೇ ಎಂದೆಂದೂ ನೀ ನಗುವೇ
ಹೂ ರಂಗೀ ತೆನೆಯಂಗೇ ಚೆಂದಾಗಿ ನೀನಿರುವೇ
ಗಂಡು : ನಿನ್ನ ಮಾತು ಚಂದ (ಚಂದ) ನಿನ್ನ ಮೌನ ಅಂದ (ಅಂದ)
ಗಂಡು : ಸುಬ್ಬೀ... (ಸುಬ್ಬೀ ಸುಬ್ಬೀ ಸುಬ್ಬೀ) ಸುಬ್ಬಕ್ಕಾ (ಸುಬ್ಬಕ್ಕಾ) ಸುವ್ವಲಾಲಿ (ಸುವ್ವಲಾಲಿ )
--------------------------------------------------------------------------------------------------------------------------
ಸುಬ್ಬಿ ಸುಬ್ಬಕ್ಕ ಸುವ್ವಲಾಲಿ (೧೯೮೦) - ಮಸುಕಾದ ಮನಸಿನ ಆಕಾಶಕೇ
ಸಂಗೀತ : ವಿಜಯ ಭಾಸ್ಕರ ಸಾಹಿತ್ಯ : ದೊಡ್ಡರಂಗೇಗೌಡ ಗಾಯನ : ಎಸ್.ಪಿ.ಬಿ.
ಮಸುಕಾದ ಮನಸಿನ ಆಕಾಶಕೇ ಮಿಂಚುವಾ ಚುಕ್ಕಿಯಂಗೇ ನಾ ಬಂದೇ...
ಮಸುಕಾದ ಮನಸಿನ ಆಕಾಶಕೇ ಮಿಂಚುವಾ ಚುಕ್ಕಿಯಂಗೇ ನಾ ಬಂದೇ
ತುಂಬಿ ಬಂದ ಹರೆಯದ ಅಂಗಳದಾಗೇ ತಿಂಗಳ ಬೆಳಕಿನ ಹಂಗೇ ನೀ ಬಂದೇ
ಮಸುಕಾದ ಮನಸಿನ ಆಕಾಶಕೇ.....
ಬಿರಿದು ನಿಂತ ಭೂಮಿಗೇ ಭರಣಿ ಮಳೆ ಬಂದ ಹಂಗೇ
ಬರಿದಾದ ಹೃದಯಕೇ ಪ್ರೀತಿ ಗಂಗೇ ನಾ ತರುವೇ
ಎಂದೆಂದೂ ನೊಂದು ಬೆಂದ ಬಾಳಿನಾಗೇ
ಎಂದೆಂದೂ ನೊಂದು ಬೆಂದ ಬಾಳಿನಾಗೇ
ಸೋಂಪು ನೀಡಿ ಜೀವಕ್ಕೆ ತಂಪು ತಂದು ಕೊಡುವೇ..ಹೇಹೇಹೇ .. ಏಏಏಏಏ
ಮಸುಕಾದ ಮನಸಿನ ಆಕಾಶಕೇ.....
ಬಂಜಾರದ ಹೊಲದಾಗೇ ತುಂಬೇ ಹೂವಾ ಅರಳಿದ ಹಂಗೇ
ನೋವ ನುಂಗ ಒಡಲಿಗೆ ಜಾಜಿ ತಂಪು ಬೀರುವೇ
ಹಾಳಾಗಿ ಬೀಳು ಬಿದ್ದ ತೋಟದಾಗೇ
ಹಾಳಾಗಿ ಬೀಳು ಬಿದ್ದ ತೋಟದಾಗೇ
ಎಳೆಯ ಬಾಳೆ ಮೂಡೋ ಹಂಗೇ ಆಸೇ ನಿಡುವೇ ..ಹೇಹೇಹೇ .. ಆಆಆಆ..
ಮಸುಕಾದ ಮನಸಿನ ಆಕಾಶಕೇ.....
ಯಾರು ಏನೇ ಅಂದರೂ ಕಾಡಾನೇ ನಡೆದ ಹಂಗೇ
ಬದುಕಿನ ಹಾದಿಯಾಗೇ ಹೆದರದಂಗೇ ನಡೆವೇ
ಯಾವತ್ತೂ ಜೋತೆ ಬಿಟ್ಟೂ ಹೋಗದ ಹಂಗೇ
ಯಾವತ್ತೂ ಜೋತೆ ಬಿಟ್ಟೂ ಹೋಗದ ಹಂಗೇ
ಪುಟ್ಟಮ ಪುಳ್ಳೆ ಅನ್ಕೊಂಡ ಹಂಗೇ ಅಂಟಿಕೊಳ್ಳುವೇ... ಹೇಹೇಹೇ .. ಆಆಆಆ..
ಮಸುಕಾದ ಮನಸಿನ ಆಕಾಶಕೇ ಮಿಂಚುವಾ ಚುಕ್ಕಿಯಂಗೇ ನಾ ಬಂದೇ
--------------------------------------------------------------------------------------------------------------------------
ತುಂಬಿ ಬಂದ ಹರೆಯದ ಅಂಗಳದಾಗೇ ತಿಂಗಳ ಬೆಳಕಿನ ಹಂಗೇ ನೀ ಬಂದೇ
ಮಸುಕಾದ ಮನಸಿನ ಆಕಾಶಕೇ.....
ಸುಬ್ಬಿ ಸುಬ್ಬಕ್ಕ ಸುವ್ವಲಾಲಿ (೧೯೮೦) - ಮುನಿದ ಹೆಣ್ಣೇ ಹಾವೂ
ಸಂಗೀತ : ವಿಜಯ ಭಾಸ್ಕರ ಸಾಹಿತ್ಯ : ವಿಜಯನಾರಸಿಂಹ ಗಾಯನ : ವಾಣಿಜಯರಾಮ
ಮುನಿದ ಹೆಣ್ಣೇ ಹಾವೂ ಒಲಿದ ಹೆಣ್ಣೇ ಹೂವೂ
ಹಗಲ ಹಾವಾಗ ಬಲ್ಲಿ ನಗೆಯ ಹೂವಾಗ ಬಲ್ಲೇ
ಮುನಿದ ಹೆಣ್ಣೇ ಹಾವೂ ಒಲಿದ ಹೆಣ್ಣೇ ಹೂವೂ
ಹಗಲ ಹಾವಾಗ ಬಲ್ಲಿ ನಗೆಯ ಹೂವಾಗ ಬಲ್ಲೇ
ಸೇಡು ಹೆಣ್ಣಿಗೇ ಹೆಸರು ಪ್ರೀತಿ ಹೆಣ್ಣಿನ ಉಸಿರೂ
ಸೇಡು ಹೆಣ್ಣಿಗೇ ಹೆಸರು ಪ್ರೀತಿ ಹೆಣ್ಣಿನ ಉಸಿರೂ
ಬಾಳು ಒಲಿದಾಗ ಹಸಿರೂ ಮನಸು ಮುರಿದಾಗ ಕೆಸರೂ
ಮುನಿದ ಹೆಣ್ಣೇ ಹಾವೂ ಒಲಿದ ಹೆಣ್ಣೇ ಹೂವೂ
ಚೆಲುವು ಹೆಣ್ಣಿನ ಮೋಡಿ ಅದುವೇ ಗಂಡಿಗೆ ಬೇಡಿ
ಚೆಲುವು ಹೆಣ್ಣಿನ ಮೋಡಿ ಅದುವೇ ಗಂಡಿಗೆ ಬೇಡಿ
ಮನೆಗೆ ಬೆಳಕಾದ ಹಣತೇ ಕಿಡಿಯೇ ಹಿಡಿ ಬೂದಿ ಮನೆಯೇ
ಮುನಿದ ಹೆಣ್ಣೇ ಹಾವೂ ಒಲಿದ ಹೆಣ್ಣೇ ಹೂವೂ
ಹಿರಿಯ ಹೆಜ್ಜೆಯ ಇಡುವೇ ತೆರೆಯೇ ಸೀಳುತ ನಡೆವೇ
ಹಿರಿಯ ಹೆಜ್ಜೆಯ ಇಡುವೇ ತೆರೆಯೇ ಸೀಳುತ ನಡೆವೇ
ಛಲದ ಗುರಿಯ ಸೇರಬಲ್ಲೇ ಬಯಕೆ ಗಿರಿಯ ಏರಬಲ್ಲೇ
ಮುನಿದ ಹೆಣ್ಣೇ ಹಾವೂ ಒಲಿದ ಹೆಣ್ಣೇ ಹೂವೂ
ಹಗಲ ಹಾವಾಗ ಬಲ್ಲಿ ನಗೆಯ ಹೂವಾಗ ಬಲ್ಲೇ
--------------------------------------------------------------------------------------------------------------------------
ಸುಬ್ಬಿ ಸುಬ್ಬಕ್ಕ ಸುವ್ವಲಾಲಿ (೧೯೮೦) - ಯಾವುದ ಮರೆಯಲೀ ಯಾವುದ ಬಯಸಲೀ
ಸಂಗೀತ : ವಿಜಯ ಭಾಸ್ಕರ ಸಾಹಿತ್ಯ : ದೊಡ್ಡರಂಗೇಗೌಡ ಗಾಯನ : ವಾಣಿಜಯರಾಮ
ಯಾವುದ ಮರೆಯಲೀ ಯಾವುದ ಬಯಸಲೀ
ನಿನ್ನೆಯ ಮರೆಯಲೀ ನಾಳೆಯ ಕರೆಯಲೀ
ಯಾವುದ ಮರೆಯಲೀ
ನೆನಪಿನ ಬಲೆಗಾಗಿ ಬಿಸಿಲೂ ನೆರಳೂ ನಡೆದೈತೀ ಅರಿಯದ ಏಳುಬೀಳು
ನೆನಪಿನ ಬಲೆಗಾಗಿ ಬಿಸಿಲೂ ನೆರಳೂ ನಡೆದೈತೀ ಅರಿಯದ ಏಳುಬೀಳು
ಆಡಿದ ಚೆಲ್ಲಾಟ ಜಪ್ತಿಗೇ ಬರಲು ನಲುಗೈತೀ ದಿನ ದಿನ ನೊಂದ ಕರುಳೂ
ಯಾವುದ ಮರೆಯಲೀ ಯಾವುದ ಬಯಸಲೀ
ನಿನ್ನೆಯ ಮರೆಯಲೀ ನಾಳೆಯ ಕರೆಯಲೀ
ಯಾವುದ ಮರೆಯಲೀ
ನಿನ್ನೆಯ ಮರೆಯಲೀ ನಾಳೆಯ ಕರೆಯಲೀ
ಯಾವುದ ಮರೆಯಲೀ
ಬಯಕೆಯ ಬಯಲಾಗಿ ಮಾವು ಬೇವೂ ತುಂಬೈತಿ ಬೆಡಗಿನ ಹೂವೂ ಕಾವೂ
ಬಯಕೆಯ ಬಯಲಾಗಿ ಮಾವು ಬೇವೂ ತುಂಬೈತಿ ಬೆಡಗಿನ ಹೂವೂ ಕಾವೂ
ಅರಳಿದ ಹೂವೆಲ್ಲಾ ಹಣ್ಣಾಗಿ ಕೂಗಲೂ ಕಂಡೈತಿ ಒಸೀ ಒಸೀ ಆಸೇ ಗೊಂಚಲೂ
ಯಾವುದ ಮರೆಯಲೀ
ದಾರದ ಒಡಲೆಲ್ಲಾ ಮಾಗಿ ಮಾಗಿ ನಲಿದೈತಿ ಮನಸೆಲ್ಲಾ ಬಾಗಿ ಬಿಗೀ
ದಾರದ ಒಡಲೆಲ್ಲಾ ಮಾಗಿ ಮಾಗಿ ನಲಿದೈತಿ ಮನಸೆಲ್ಲಾ ಬಾಗಿ ಬಿಗೀ
ಬಟ್ಟಿನ ತೊರೆಯೂ ಮತ್ತೆಲ್ಲಾ ತುಂಬಲೂ ಹೊಳೆದೈತಿ ಫಳ ಫಳ ಬಾಳ ಕಡಲು
ಯಾವುದ ಮರೆಯಲೀ ಯಾವುದ ಬಯಸಲೀ
ನಿನ್ನೆಯ ಮರೆಯಲೀ ನಾಳೆಯ ಕರೆಯಲೀ
ಯಾವುದ ಮರೆಯಲೀ
ನಿನ್ನೆಯ ಮರೆಯಲೀ ನಾಳೆಯ ಕರೆಯಲೀ
ಯಾವುದ ಮರೆಯಲೀ
--------------------------------------------------------------------------------------------------------------------------
No comments:
Post a Comment