1066. ಠಕ್ಕ ಬಿಟ್ಟರೇ ಸಿಕ್ಕ (೧೯೭೦)

ಠಕ್ಕ ಬಿಟ್ಟರೇ ಸಿಕ್ಕ ಚಿತ್ರದ ಹಾಡುಗಳು 
  1. ರಮ್ಯ ಜೀವನ 
  2. ಬೆಳೆದ ಗಂಡು ಹೆಣ್ಣು 
  3. ತಾಳೆಯ ಮನದನ್ನೆಯ 
  4. ಹರೆಯ ಹೊರಸೂಸುತ 
ಠಕ್ಕ ಬಿಟ್ಟರೇ ಸಿಕ್ಕ (೧೯೭೦) - ರಮ್ಯ ಜೀವನ    
ಸಂಗೀತ : ವಿಜಯ ಭಾಸ್ಕರ ಸಾಹಿತ್ಯ : ಕುರಾಸೀ ಗಾಯನ : ಪಿ.ಬಿ.ಶ್ರೀನಿವಾಸ 

ರಮ್ಯ ಜೀವನ ಸಂಪೂರ್ಣ ವಿಧಿಯ ಕಲಾ ವಿಧಾನ
ಕೃತಿಯಲ್ಲಿ ತುಂಬಿಲ್ಲಾ ಪಡೆವಲ್ಲಿ ನೀನಿಲ್ಲಾ
ರಮ್ಯ ಜೀವನ ಸಂಪೂರ್ಣ ವಿಧಿಯ ಕಲಾ ವಿಧಾನ
ಕೃತಿಯಲ್ಲಿ ತುಂಬಿಲ್ಲಾ ಪಡೆವಲ್ಲಿ ನೀನಿಲ್ಲಾ
ರಮ್ಯ ಜೀವನ 

ಬಂದ ರೀತಿ ಬೆತ್ತಲೇ ಚಳಿ ಚಳಿ ಹೋಗುವಾಗ ಕತ್ತಲೆ ತಿಳಿ ತಿಳಿ 
ಬಂದ ರೀತಿ ಬೆತ್ತಲೇ ಚಳಿ ಚಳಿ ಹೋಗುವಾಗ ಕತ್ತಲೆ ತಿಳಿ ತಿಳಿ 
ಆಸೆಯೆಲ್ಲಾ ಇಟ್ಟಲೇ ತೋರೆ ತೋರೆ ಆತನನ್ನೇ ಎತ್ತಲೂ ಕರೇ ಕರೇ 
ರಮ್ಯ ಜೀವನ ಸಂಪೂರ್ಣ ವಿಧಿಯ ಕಲಾ ವಿಧಾನ
ಕೃತಿಯಲ್ಲಿ ತುಂಬಿಲ್ಲಾ ಪಡೆವಲ್ಲಿ ನೀನಿಲ್ಲಾ
ರಮ್ಯ ಜೀವನ 

ಜಾರಿತಲ್ಲೇ ನಿನ್ನಯ ನೆರೆ ಹೋರೆ ಆಟವೆಲ್ಲಾ ಆಯಿತು ಅರೇ ಬರೇ 
ಜಾರಿತಲ್ಲೇ ನಿನ್ನಯ ನೆರೆ ಹೋರೆ ಆಟವೆಲ್ಲಾ ಆಯಿತು ಅರೇ ಬರೇ 
ಕೇಳರಾರು ಇಂದಿನ ಸ್ಥಿತಿಗತಿ ದೈವವೊಂದೇ ಮುಂದಿನ ಗತಿ ಮತಿ  
ರಮ್ಯ ಜೀವನ ಸಂಪೂರ್ಣ ವಿಧಿಯ ಕಲಾ ವಿಧಾನ
ಕೃತಿಯಲ್ಲಿ ತುಂಬಿಲ್ಲಾ ಪಡೆವಲ್ಲಿ ನೀನಿಲ್ಲಾ
ರಮ್ಯ ಜೀವನ 
--------------------------------------------------------------------------------------------------------------------------

ಠಕ್ಕ ಬಿಟ್ಟರೇ ಸಿಕ್ಕ (೧೯೭೦) - ಬೆಳೆದ ಗಂಡು ಹೆಣ್ಣು 
ಸಂಗೀತ : ವಿಜಯ ಭಾಸ್ಕರ ಸಾಹಿತ್ಯ : ಕುರಾಸೀ ಗಾಯನ : ಎಲ್.ಆರ್.ಅಂಜಲಿ, ಬಿ.ಕೆ.ಸುಮಿತ್ರಾ

ಪಾಲಿಷ ಪಾಲಿಷ ಬೂಟ ಪಾಲಿಶ ಬನ್ನೀ ಬನ್ನೀ
ಬೆಳೆದ ಗಂಡು ಹೆಣ್ಣು ತಿಳಿಯಬೇಕು ಎರಡೂ
ಮೊಜಿಗೊಂದು ಪಾಲಿಷ ಪಾಡಿಗೊಂದು ಮಾಲಿಷ
ಬೆಳೆದ ಗಂಡು ಹೆಣ್ಣು ತಿಳಿಯಬೇಕು ಎರಡೂ
ಬೂಟಿಗೊಂದು ಪಾಲಿಷ ಬಾಡಿಗೊಂದು ಮಾಲಿಷ

ನಿಮ್ಮ ನಿಮ್ಮ ಖಾಯಿಷ್ ನೋಡಿ ಮಾಡುವೇ ಪಾಲಿಷ್
ನಿಮ್ಮ ನಿಮ್ಮ ಖಾಯಿಷ್ ನೋಡಿ ಮಾಡುವೇ ಪಾಲಿಷ್
ಹೆಣ್ಣು ಗಂಡು ಎಂಬ ಜಾತಿ ಜ್ಯೂತಿಗಿಲ್ಲಾ
ಅಮ್ಮ ಅವ್ವಾ ಅಯ್ಯಾ ಅಪ್ಪಾ ಎಲ್ಲರಿಗೊಂದೇ ಪಾಲಿಷ್
ಬೆಳೆದ ಗಂಡು ಹೆಣ್ಣು ತಿಳಿಯಬೇಕು ಎರಡೂ
ಬೂಟಿಗೊಂದು ಪಾಲಿಷ ಬಾಡಿಗೊಂದು ಮಾಲಿಷ

ಹಿರಿಯ ಕಿರಿಯರೆಂಬ ಬೇಧವೆಂಬುದಿಲ್ಲಾ
ಹಿರಿಯ ಕಿರಿಯರೆಂಬ ಬೇಧವೆಂಬುದಿಲ್ಲಾ
ಕರಿಯಬೇಕು ಕಷ್ಟು ಬರಿಯ ತಲೆಗೇ ಅಷ್ಟೂ
ಲಾಯರ್ ರಾಯರ್ ಮೇಯರಕೆಲ್ಲಾ ಪಕ್ಕಾ ಶೈನಿಂಗ್ ಪಾಲಿಶ್
ಬೆಳೆದ ಗಂಡು ಹೆಣ್ಣು ತಿಳಿಯಬೇಕು ಎರಡೂ
ಬೂಟಿಗೊಂದು ಪಾಲಿಷ ಬಾಡಿಗೊಂದು ಮಾಲಿಷ 

ಕಾಲು ಹಿಡಿಯುವ ಕರ್ಮ ಕೊಟ್ಟೆನೆಂದು ಬ್ರಹ್ಮ 
ಕಾಲು ಹಿಡಿಯುವ ಕರ್ಮ ಕೊಟ್ಟೆನೆಂದು ಬ್ರಹ್ಮ 
ನಾಚಬೇಡ ತಮ್ಮಾ ದುಡಿಮೆಯೊಂದೇ ಧರ್ಮಾ 
ಮೇಲೂ ಕೀಳೂ ಎಲ್ಲಾ ಸುಳ್ಳೂ ಒಳ್ಳೆಯ ಮಾತೆ ಪಾಲಿಶ್ 
ಬೆಳೆದ ಗಂಡು ಹೆಣ್ಣು ತಿಳಿಯಬೇಕು ಎರಡೂ
ಬೂಟಿಗೊಂದು ಪಾಲಿಷ ಬಾಡಿಗೊಂದು ಮಾಲಿಷ 
ಬೆಳೆದ ಗಂಡು ಹೆಣ್ಣು ತಿಳಿಯಬೇಕು ಎರಡೂ
ಬೂಟಿಗೊಂದು ಪಾಲಿಷ ಬಾಡಿಗೊಂದು ಮಾಲಿಷ 
--------------------------------------------------------------------------------------------------------------------------

ಠಕ್ಕ ಬಿಟ್ಟರೇ ಸಿಕ್ಕ (೧೯೭೦) - ಹರೆಯ ಹೊರಸೂಸುತ
ಸಂಗೀತ : ವಿಜಯ ಭಾಸ್ಕರ ಸಾಹಿತ್ಯ : ಕುರಾಸೀ ಗಾಯನ : ಪಿ.ಬಿ.ಶ್ರೀನಿವಾಸ

ಹ ರೆ ಯ ಹೊರಸೂಸುತ ತಂದಿಹ
ಸಾ ನೀ ಧ್ಯ ನಸು ನಾಚದೇ ದೋಚುವ
ಸ ಮ ಯ ಈ ಸುದಿನ ಜನ್ಮದಿನ ಅಪೂರ್ವ ಅಮೂಲ್ಯ ಮಹಾದಿನ
ಹ ರೆ ಯ ಹೊರಸೂಸುತ ತಂದಿಹ
ಸಾ ನೀ ಧ್ಯ ನಸು ನಾಚದೇ ದೋಚುವ
ಸ ಮ ಯ ಈ ಸುದಿನ ಜನುಮದಿನ ಅಪೂರ್ವ ಅಮೂಲ್ಯ ಮಹಾದಿನ
(ಹ್ಯಾಪಿ ಬರ್ತ್ಡೇ ಟೂ ಯೂ ಹ್ಯಾಪಿ ಬರ್ತ್ಡೇ ಟೂ ಯೂ ಹ್ಯಾಪಿ ಬರ್ತ್ಡೇ ಟೂ ಯೂ )

ನೀ ನಿಂದ ನೀರೆಲ್ಲಾ ಹಾಲಾಗಲೀ ನೀನ ಅಂದ ಮಾತೆಲ್ಲಾ ಜೇನಾಗಲೀ 
ನೀ ನಿಂದ ನೀರೆಲ್ಲಾ ಹಾಲಾಗಲೀ ನೀನ ಅಂದ ಮಾತೆಲ್ಲಾ ಜೇನಾಗಲೀ 
ನೀ ತಂದ ಹೂವೆಲ್ಲಾ ಹಣ್ಣಾಗಲಿ ನೀ ಕೊಂಡ ಹೂಮಾಲೆ ಹೊನ್ನಾಗಲೀ 
ಹ ರೆ ಯ ಹೊರಸೂಸುತ ತಂದಿಹ
ಸಾ ನೀ ಧ್ಯ ನಸು ನಾಚದೇ ದೋಚುವ
ಸ ಮ ಯ ಈ ಸುದಿನ ಜನುಮದಿನ ಅಪೂರ್ವ ಅಮೂಲ್ಯ ಮಹಾದಿನ
(ಹ್ಯಾಪಿ ಬರ್ತ್ಡೇ ಟೂ ಯೂ ಹ್ಯಾಪಿ ಬರ್ತ್ಡೇ ಟೂ ಯೂ ಹ್ಯಾಪಿ ಬರ್ತ್ಡೇ ಟೂ ಯೂ )

ಕಣ್ಣಾಸೆ ಕೈಗೂಡಿ ಈಡೇರಲಿ ಹಾರೈಕೆ ಪೂರೈಕೆ ಬೆನ್ನೇರಲಿ 
ಕಣ್ಣಾಸೆ ಕೈಗೂಡಿ ಈಡೇರಲಿ ಹಾರೈಕೆ ಪೂರೈಕೆ ಬೆನ್ನೇರಲಿ 
ಬಾಳೊಂದು ಬಂಗಾರ ಗಣಿಯಾಗಲೀ ಚಿರವಾದ ಸಿಂಗಾರ ಸಿರಿಯಾಗಲೀ 
ಹ ರೆ ಯ ಹೊರಸೂಸುತ ತಂದಿಹ
ಸಾ ನೀ ಧ್ಯ ನಸು ನಾಚದೇ ದೋಚುವ
ಸ ಮ ಯ ಈ ಸುದಿನ ಜನುಮದಿನ ಅಪೂರ್ವ ಅಮೂಲ್ಯ ಮಹಾದಿನ
ಹ ರೆ ಯ ಹೊರಸೂಸುತ ತಂದಿಹ
ಸಾ ನೀ ಧ್ಯ ನಸು ನಾಚದೇ ದೋಚುವ
ಸ ಮ ಯ ಈ ಸುದಿನ ಜನುಮದಿನ ಅಪೂರ್ವ ಅಮೂಲ್ಯ ಮಹಾದಿನ
(ಹ್ಯಾಪಿ ಬರ್ತ್ಡೇ ಟೂ ಯೂ ಹ್ಯಾಪಿ ಬರ್ತ್ಡೇ ಟೂ ಯೂ ಹ್ಯಾಪಿ ಬರ್ತ್ಡೇ ಟೂ ಯೂ )
--------------------------------------------------------------------------------------------------------------------------

ಠಕ್ಕ ಬಿಟ್ಟರೇ ಸಿಕ್ಕ (೧೯೭೦) - ತಾಳೆಯ ಮನದನ್ನೆಯ
ಸಂಗೀತ : ವಿಜಯ ಭಾಸ್ಕರ ಸಾಹಿತ್ಯ : ಕುರಾಸೀ ಗಾಯನ : ಎಲ್.ಆರ್.ಈಶ್ವರೀ

ಈ ಹಾಡಿನ ಎಂಪಿ ೩ ಆಗಲೀ  ವಿಡಿಯೋ ಆಗಲೀ ಲಭ್ಯವಿರುವುದಿಲ್ಲ ಕಾರಣ ಈ ಹಾಡಿನ ಸಾಹಿತ್ಯ ಲಭ್ಯವಿಲ್ಲ
ತಮ್ಮಲ್ಲಿ ಈ ಹಾಡಿನ ಎಂಪಿ ೩ ಆಗಲೀ  ವಿಡಿಯೋ ಆಗಲೀ ಲಭ್ಯವಿದ್ದಲ್ಲಿ ನಮಗೇ ತಿಳಿಸಿರಿ..
--------------------------------------------------------------------------------------------------------------------------

No comments:

Post a Comment