1068. ಮೃತ್ಯು ಪಂಜರದಲ್ಲಿ ಗೂಢಾಚಾರಿ ೫೫೫ (೧೯೭೦)


ಮೃತ್ಯು ಪಂಜರದಲ್ಲಿ ಗೂಢಾಚಾರಿ ೫೫೫ ಚಿತ್ರದ ಹಾಡುಗಳು 
  1. ಹೂವಿನಲ್ಲಿ ಜೇನಂತೇ ನೀರಿನಲ್ಲಿ ಮೀನಂತೇ
  2. ಕಾಮನ ಬಿಲ್ಲಿಂದಿಳಿದು ಕಣ್ಣಲ್ಲೇ ನನ್ನನು ಸೆಳೆದು
ಮೃತ್ಯು ಪಂಜರದಲ್ಲಿ ಗೂಢಾಚಾರಿ ೫೫೫ (೧೯೭೦)  - ಹೂವಿನಲ್ಲಿ ಜೇನಂತೆ 
ಸಂಗೀತ : ಸತ್ಯಂ ಸಾಹಿತ್ಯ : ಗೀತಪ್ರಿಯ ಗಾಯನ : ಪಿ.ಬಿ.ಶ್ರೀನಿವಾಸ 

ಹೂವಿನಲ್ಲಿ ಜೇನಂತೇ ನೀರಿನಲ್ಲಿ ಮೀನಂತೇ ನೀ ಕಂಡೇ ನನ್ನ ಕಣ್ಣಿಗೇ  ಓಓಓಓಓ... ಆಹ್ಹಹ್ಹ್ ...
ಈ ನಿಂಬೇ ಈ ಹೆಣ್ಣಿಗೇ ಓಓಓ  ಈ ನಿಂಬೇ ಈ ಹೆಣ್ಣಿಗೇ
ಹೂವಿನಲ್ಲಿ ಜೇನಂತೆ ನೀರಿನಲ್ಲಿ ಮೀನಂತೇ ನೀ ಕಂಡೇ ನನ್ನ ಕಣ್ಣಿಗೇ ಓಓಓಓಓ... ಆಹ್ಹಹ್ಹ್ ...
ಈ ನಿಂಬೇ ಈ ಹೆಣ್ಣಿಗೇ ಓಓಓ  ಈ ನಿಂಬೇ ಈ ಹೆಣ್ಣಿಗೇ  ಓಓ ಓಯ್

ನಿನ್ನಂಥ ರೂಪಕ್ಕೆ ಈ ಕೋಪವೇ ನಿನ್ನ ಕೊಂಕು ನೋಟಕ್ಕೆ ಈ ಬಿಂಕವೇ 
ಹೇ...  ನಿನ್ನಂಥ ರೂಪಕ್ಕೆ ಈ ಕೋಪವೇ ನಿನ್ನ ಕೊಂಕು ನೋಟಕ್ಕೆ ಈ ಬಿಂಕವೇ
ಹುಸಿಮುನಿಸ ತಾಪಕ್ಕೆ ಬಿಸಿಯುಸಿರ ಶಾಪಕ್ಕೆ ತಣ್ಣೀರು ಬಿಸಿಯಾಯಿತೇ.. ಓಓಓ
ಮೈಯೆಲ್ಲಾ ಮೀಸುಕಾಡಿತೇ  ಓಓಓ ಮೈಯೆಲ್ಲಾ ಮೀಸುಕಾಡಿತೇ
ಹೂವಿನಲ್ಲಿ ಜೇನಂತೆ ನೀರಿನಲ್ಲಿ ಮೀನಂತೇ ನೀ ಕಂಡೇ ನನ್ನ ಕಣ್ಣಿಗೇ ಓಓಓಓಓ... ಆಹ್ಹಹ್ಹ್ ...
ಈ ನಿಂಬೇ ಈ ಹೆಣ್ಣಿಗೇ ಓಓಓ  ಈ ನಿಂಬೇ ಈ ಹೆಣ್ಣಿಗೇ  ಓಓ ಓಯ್
ಏಕಿನ್ನು ಕುಲುಕಾಟ ಕೆಣಕಾಟವೂ ಏತಕ್ಕೆ ಹೀಗೆಲ್ಲಾ ಸೆಣಸಾಟವೂ         
ಹೇಹೇಹೇ ಏಕಿನ್ನು ಕುಲುಕಾಟ ಕೆಣಕಾಟವೂ ಏತಕ್ಕೆ ಹೀಗೆಲ್ಲಾ ಸೆಣಸಾಟವೂ         
ಚಕ್ಕಂದ ಸಾಕಾಯಿತೇ ಚೆಲ್ಲಾಟ ಬೇಕಾಯಿತೇ ನೀ ಸನ್ನೇ ಸಂಕೇತವೇ
ಓಓಓ ಬಿನ್ನಾಣ ಇನ್ನೇತಕೇ ಓಓಓ ಬಿನ್ನಾಣ ಇನ್ನೇತಕೇ
ಹೂವಿನಲ್ಲಿ ಜೇನಂತೆ ನೀರಿನಲ್ಲಿ ಮೀನಂತೇ ನೀ ಕಂಡೇ ನನ್ನ ಕಣ್ಣಿಗೇ ಓಓಓಓಓ... ಆಹ್ಹಹ್ಹ್ ...
ಈ ನಿಂಬೇ ಈ ಹೆಣ್ಣಿಗೇ ಓಓಓ  ಈ ನಿಂಬೇ ಈ ಹೆಣ್ಣಿಗೇ  ಓಓ ಓಯ್
--------------------------------------------------------------------------------------------------------------------------

ಮೃತ್ಯು ಪಂಜರದಲ್ಲಿ ಗೂಢಾಚಾರಿ ೫೫೫ - ಕಾಮನ ಬಿಲ್ಲಿನಿಂದಲಿದಳು 
ಸಂಗೀತ : ಸತ್ಯಂ ಸಾಹಿತ್ಯ : ವಿಜಯನಾರಸಿಂಹ ಗಾಯನ : ಪಿ.ಬಿ.ಶ್ರೀನಿವಾಸ, ಬೆಂಗಳೂರು ಲತಾ 

ಗಂಡು : ಆಆಆ... ಕಾಮನ ಬಿಲ್ಲಿಂದಿಳಿದು ಕಣ್ಣಲ್ಲೇ ನನ್ನನು ಸೆಳೆದು
            ಚೆಲುವಿನಿಂದ ಒಲವು ತಂದ ಹೆಣ್ಣೂ ಯಾರೋ...
            ಓಓಓ... ಕಾಮನ ಬಿಲ್ಲಿಂದಿಳಿದು ಕಣ್ಣಲ್ಲೇ ನನ್ನನು ಸೆಳೆದು
            ಚೆಲುವಿನಿಂದ ಒಲವು ತಂದ ಹೆಣ್ಣೂ ಯಾರೋ... ಓಓಓ
ಹೆಣ್ಣು : ಹಾಡುತ ಮೋಡಿಯ ಹಾಕಿ ನೋಡುತ ಎನ್ನನ್ನು ಕೆಣಕಿ
          ಗೆಲುವಿನಿಂದ ಸೋಲು ತಂದ ಪ್ರೇಮಿ ಯಾರೋ.. ಓಓಓ
         ಹಾಡುತ ಮೋಡಿಯ ಹಾಕಿ

ಗಂಡು : ಹೊಸ ಬಾಳಲ್ಲಿ ಮೂಡಿದ ಬೆಳ್ಳಿ ನೀನೇ ಆಸೇ ಬಳ್ಳಿ 
            ಯೌವ್ವನದಲ್ಲಿ ಈ ನಿಶೆಯಲ್ಲಿ ಬಂದೇ ಅಂದ ಚೆಲ್ಲೀ 
            ನೀನಿರುವಲ್ಲಿ ಮೈಮರೆವಲ್ಲಿ ಆ ಸ್ವರ್ಗ ನಮ್ಮಲ್ಲಿ... 
            ಕಾಮನ ಬಿಲ್ಲಿಂದಿಳಿದು ಕಣ್ಣಲ್ಲೇ ನನ್ನನು ಸೆಳೆದು 
           ಚೆಲುವಿನಿಂದ ಒಲವು ತಂದ ಹೆಣ್ಣೂ ಯಾರೋ..... ಓಓಓ
            ಕಾಮನ ಬಿಲ್ಲಿಂದಿಳಿದು...  

ಹೆಣ್ಣು : ಹೂ ಮನದಲ್ಲಿ ಹೊಂಗನಸಾದೇ ಕಾಡಿ ಬೇಡಿ ಬಂದೇ 
          ಕಾಣಿಕೆ ನಾನೇ ಕೊಳ್ಳುವೆನೇನೇ  ನನ್ನೀ ಪ್ರೇಮದಾಣೆ 
          ಹೂಡಿದೆ ಸಂಚು ಯೌವ್ವನ ಮಿಂಚು ಒಲವೆಲ್ಲಾ ನಮ್ಮದೇ...   
ಗಂಡು : ಕಾಮನ ಬಿಲ್ಲಿಂದಿಳಿದು(ಆಆಆ) ಕಣ್ಣಲ್ಲೇ ನನ್ನನು ಸೆಳೆದು (ಆಆಆ)
            ಚೆಲುವಿನಿಂದ (ಆಆಆ) ಒಲವು ತಂದ (ಆಆಆ) ಹೆಣ್ಣೂ ಯಾರೋ... (ಆಆಆಆಆಆ )
--------------------------------------------------------------------------------------------------------------------------

No comments:

Post a Comment