1071. ಸ್ನೇಹ ಸೇಡು (೧೯೭೮)


ಸ್ನೇಹ ಸೇಡು ಚಿತ್ರದ ಹಾಡುಗಳು
  1. ಸಾಕು ಸಾಕು ಮಾತು ಸಾಕು ಬಾರೇ ಹೆಣ್ಣೇ
  2. ಮಾತ್ತೊಂದ ಒಳ್ಳೇ ಮಾತೊಂದ ಹೇಳಲೇ ನನ್ನ ರಸಿಕ
  3. ಓರೇ ನೋಟ ವೈಯ್ಯಾರಿ ಆಟ
  4. ಬಡವರ ಮಾತಿಗೂ ಚಿನ್ನದಂಥ ಬೆಲೆಯೂ
  5. ಎಂಥ ಸೊಗಸು ಜೀವನಾ
  6. ನಾಗರಾಣಿಯೂ ಹೊರಗೆ ಬಂದಳು
ಸ್ನೇಹ ಸೇಡು (೧೯೭೮) - ಸಾಕು ಸಾಕು ಮಾತು ಬಾರೇ ಹೆಣ್ಣೇ
ಸಂಗೀತ : ಎಸ್.ರಾಜೇಶ್ವರಾವ್ ಸಾಹಿತ್ಯ : ಚಿ.ಉದಯಶಂಕರ ಗಾಯನ : ರಾಮಕೃಷ್ಣ, ಪಿ.ಸುಶೀಲಾ

ಗಂಡು : ಸಾಕು ಸಾಕು ಮಾತು ಸಾಕು ಬಾರೇ ಹೆಣ್ಣೇ
            ಬೇಕೇ ಬೇಕು ಒಂದು ಬೇಕು ಹೇಳಲೇನೇ ನನ್ನಾಸೆ ತಾಳಲಾರೆನೇ...
            ನೀನಿಲ್ಲಿಗೇ ಓಡಿ ಬಂದು ಈ ಕೆನ್ನೆಗೆ ಒಂದೇ ಒಂದು
            ಮುತ್ತೊಂದ ಕೋಡು ಬೇಗನೇ
ಹೆಣ್ಣು : ಸಾಕು ಸಾಕು ಮಾತು ಸಾಕು ತಾಳು ನೀನು
          ಏಕೇ ಏಕೇ ಹೀಗೆ ಮುಂದೆ ಬಂದೆ ನೀನು ನಿನ್ನಾಸೆ ನಾ ಬಲ್ಲೇನೂ...
          ಮೊದಲನೆಯ ರಾತ್ರಿ ನಲ್ಲಾ ನಾ ಕೊಡುವೇ ಕೇಳುವುದೆಲ್ಲಾ
          ಈಗೇನು ಕೊಡಲಾರೆನು

ಗಂಡು : ಆ ರಾತ್ರಿ ಎಂದೋ ಏನೋ ಕಾಯಲಾರೇ ಬಾರೇ ಬೇಗ
ಹೆಣ್ಣು : ನೀನಿಂಥ ತುಂಟನೆಂದು ತಿಳಿಯದೇ ಬಂದೇ ನಾನು ಈಗ
ಗಂಡು : ಏ ರಾತ್ರಿ ಎಂದೋ ಏನೋ ಕಾಯಲಾರೇ ಬಾರೇ ಬೇಗ
ಹೆಣ್ಣು : ನೀನಿಂಥ ತುಂಟನೆಂದು ತಿಳಿಯದೇ ಬಂದೇ ನಾನು ಈಗ
ಗಂಡು : ಆಸೆಯೂ ಬರದೇನು   ಹೆಣ್ಣು : ಆತುರ ಸರಿಯೇನೂ
ಗಂಡು : ನಿನ್ನಿಂದ ನಾ ದೂರ ಇರಲಾರೇನು
ಹೆಣ್ಣು : ಆಹಾ... ಆಹಾ     ಗಂಡು : ಒಹೋ... ಒಹೋ..
ಗಂಡು : ಸಾಕು ಸಾಕು ಮಾತು ಸಾಕು ಬಾರೇ ಹೆಣ್ಣೇ
ಹೆಣ್ಣು :  ಏಕೇ ಏಕೇ ಹೀಗೆ ಮುಂದೆ ಬಂದೆ ನೀನು 

ಗಂಡು : ಸಂಕೋಚ ಏಕೇ ಹೇಳು ನೋಡು ಇಲ್ಲಿ ಯಾರು ಇಲ್ಲ
ಹೆಣ್ಣು : ಬೇಕಿಲ್ಲ ಇಂಥಾ ಆಟ ಸಾಕು ದೂರ ನಿಲ್ಲು ನಲ್ಲ
ಗಂಡು : ಆಆಆ.. ಸಂಕೋಚ ಏಕೇ ಹೇಳು ನೋಡು ಇಲ್ಲಿ ಯಾರು ಇಲ್ಲ
ಹೆಣ್ಣು : ಬೇಕಿಲ್ಲ ಇಂಥಾ ಆಟ ಸಾಕು ದೂರ ನಿಲ್ಲು ನಲ್ಲ
ಗಂಡು : ಬೇಡವೇ ನಿನಗೇನೂ    ಹೆಣ್ಣು : ಸುಮ್ಮನೇ ಹೋಗಿನ್ನೂ
ಗಂಡು : ಆಹಾಹಾ .. ಬಿಡಲಾರೇ ಬಿಡಲಾರೇ ನಾ ನಿನ್ನನ್ನೂ
ಹೆಣ್ಣು : ಆಹಾ..    ಗಂಡು : ಒಹೋ.. ಒಹೋ..
ಗಂಡು : ಸಾಕು ಸಾಕು ಮಾತು ಸಾಕು ಬಾರೇ ಹೆಣ್ಣೇ
            ಬೇಕು ಬೇಕು ಒಂದು ಬೇಕು ಹೇಳಲೇನೇ ನನ್ನಾಸೆ ತಾಳಲಾರೆನೇ
ಹೆಣ್ಣು :  ಮೊದಲನೆಯ ರಾತ್ರಿ ನಲ್ಲಾ ನಾ ಕೊಡುವೇ ಕೇಳುವುದೆಲ್ಲಾ
          ಈಗೇನು ಕೊಡಲಾರೆನು
--------------------------------------------------------------------------------------------------------------------------

ಸ್ನೇಹ ಸೇಡು (೧೯೭೮) - ಮಾತ್ತೊಂದ ಒಳ್ಳೆ ಮಾತೊಂದ
ಸಂಗೀತ : ಎಸ್.ರಾಜೇಶ್ವರಾವ್ ಸಾಹಿತ್ಯ : ಚಿ.ಉದಯಶಂಕರ ಗಾಯನ : ವಾಣಿಜಯರಾಮ

ಮಾತೊಂದ ಮಾತೊಂದ ಒಳ್ಳೆ ಮಾತೊಂದ  ಹೇಳಲೇ ನನ್ನ ರಸಿಕ
ಮಾತೊಂದ ಒಳ್ಳೆ ಮಾತೊಂದ  ಹೇಳಲೇ ನನ್ನ ರಸಿಕ
ಹಿಂದೆಂದೂ ಕೆಳದಿರುವ ಯಾರು ಎಂದು ಹೇಳದಿರುವ
ಹಿಂದೆಂದೂ ಕೆಳದಿರುವ ಯಾರು ಎಂದು ಹೇಳದಿರುವ
ಮಾತೊಂದ ಒಳ್ಳೆ ಮಾತೊಂದ  ಹೇಳಲೇ ನನ್ನ ರಸಿಕ

ತಾವರೇ ಹೂವುಗಳು ನೀರಲ್ಲೇ ಇರಬೇಕು 
ತಾವರೇ ಹೂವುಗಳು ನೀರಲ್ಲೇ ಇರಬೇಕು 
ಕಣ್ಣಲ್ಲೇ ನೋಡಿ ನೋಡಿ ಆನಂದ ಪಡಬೇಕು 
ಕಣ್ಣಲ್ಲೇ ನೋಡಿ ನೋಡಿ ಆನಂದ ಪಡಬೇಕು 
ಹೊಳೆವಾ ತಾರೆಗಳು....
ಹೊಳೆವಾ ತಾರೆಗಳು ಬಾನಿನಲ್ಲೇ ಇರಬೇಕು 
ಹಸಿರು ಎಂದೆಂದೂ ಭೂಮಿಯಲ್ಲೇ ಇರಬೇಕು 
ಅಂದವಾ ನೀನೆಂದು ದೂರದಿಂದ ನೋಡಬೇಕು 
ಮಾತೊಂದ ಒಳ್ಳೆ ಮಾತೊಂದ  ಹೇಳಲೇ ನನ್ನ ರಸಿಕ
ಹಿಂದೆಂದೂ ಕೆಳದಿರುವ ಯಾರು ಎಂದು ಹೇಳದಿರುವ
ಮಾತೊಂದ ಒಳ್ಳೆ ಮಾತೊಂದ  ಹೇಳಲೇ ನನ್ನ ರಸಿಕ 

ಸ್ನೇಹವ ಕೋರುತಿಹ ಸುಂದರ ನಯನಗಳು 
ಸ್ನೇಹವ ಕೋರುತಿಹ ಸುಂದರ ನಯನಗಳು 
ಮೋಹವಾ ತೋರುತಿಹ ಅಂದದ ಆಧರಗಳು 
ಮೋಹವಾ ತೋರುತಿಹ ಅಂದದ ಆಧರಗಳು 
ಬಯಕೆ ಹೇಳುತಿಹ ......
ಬಯಕೆ ಹೇಳುತಿಹ ಅಮೃತ ಕಳಶಗಳು 
ಮನವನು ಕೆಣಕುತಿಹ ಮೈಯ್ಯಿನ ಡೊಂಕುಗಳು 
ಬಾಡದಿ ಸೌಂದರ್ಯ ಸೋಕದೆ ನೀನಿರಲೂ 
ಮಾತೊಂದ ಒಳ್ಳೆ ಮಾತೊಂದ  ಹೇಳಲೇ ನನ್ನ ರಸಿಕ
ಹಿಂದೆಂದೂ ಕೆಳದಿರುವ ಯಾರು ಎಂದು ಹೇಳದಿರುವ
ಹಿಂದೆಂದೂ ಕೆಳದಿರುವ ಯಾರು ಎಂದು ಹೇಳದಿರುವ
ಮಾತೊಂದ ಒಳ್ಳೆ ಮಾತೊಂದ  ಹೇಳಲೇ ನನ್ನ ರಸಿಕ 
--------------------------------------------------------------------------------------------------------------------------

ಸ್ನೇಹ ಸೇಡು (೧೯೭೮) - ಓರೇ ನೋಟ ವೈಯ್ಯಾರಿ ಆಟ
ಸಂಗೀತ : ಎಸ್.ರಾಜೇಶ್ವರಾವ್ ಸಾಹಿತ್ಯ : ಚಿ.ಉದಯಶಂಕರ ಗಾಯನ : ವಾಣಿಜಯರಾಮ

ಓರೇ ನೋಟ ವೈಯ್ಯಾರಿಯಾಟ ಮೈ ಮಾಟ ಸ್ವರ್ಗದಂತೇ
ಓರೇ ನೋಟ ವೈಯ್ಯಾರಿಯಾಟ ಮೈ ಮಾಟ ಸ್ವರ್ಗದಂತೇ
ನನ್ನಂತರಂಗ ಏನೆಂದರೇನು ಏನಾದರೇನು ಚಿಂತೆ... ನಿನಗೇ ... ನಿನಗೇ ...
ಓರೇ ನೋಟ ವೈಯ್ಯಾರಿಯಾಟ ಮೈ ಮಾಟ ಸ್ವರ್ಗದಂತೇ

ಕಡಲ ಮೇಲೆ ಬರಿ ಅಲೆಯ ನಾಟ್ಯ ಕಡಲಾಳ ಭಯದ ಶಿಖರ 
ತನುವ ತುಂಬಾ ಯೌವ್ವನದ ಲಾಸ್ಯ ಮನದಾಳದಲ್ಲಿ ಸಮರಾ.... 
ಕಡಲ ಮೇಲೆ ಬರಿ ಅಲೆಯ ನಾಟ್ಯ ಕಡಲಾಳ ಭಯದ ಶಿಖರ 
ತನುವ ತುಂಬಾ ಯೌವ್ವನದ ಲಾಸ್ಯ ಮನದಾಳದಲ್ಲಿ ಸಮರಾ.... 
ಈ ನೋವ ನೀಗುವ ಅವನ ಕಾಣೇನೇ
ಈ ನೋವ ನೀಗುವ ಅವನ ಕಾಣೇನೇ ಹೃದಯಾಗ್ನಿ ಅವನ ಸುಡದಲ್ಲ ಹಿಡಿದು 
ಕಾಪಾಡಲಾರು ಇಲ್ಲವೇ   
ಓರೇ ನೋಟ ವೈಯ್ಯಾರಿಯಾಟ ಮೈ ಮಾಟ ಸ್ವರ್ಗದಂತೇ

ನನ್ನ ಅರಿತು ಮನದಲ್ಲಿ ಬೆರೆತು ನೆಮ್ಮದಿಯ ಕೊಡುವನಾರು 
ಅಣ್ಣನಾಗೇ ವಾತ್ಸಲ್ಯದಿಂದ ಚೈತನ್ಯ ತರುವನಾರು 
ನನ್ನ ಅರಿತು ಮನದಲ್ಲಿ ಬೆರೆತು ನೆಮ್ಮದಿಯ ಕೊಡುವನಾರು 
ಅಣ್ಣನಾಗೇ ವಾತ್ಸಲ್ಯದಿಂದ ಚೈತನ್ಯ ತರುವನಾರು 
ರಕ್ಷಾ ಬಂಧನ  ಕೂಗಿದೆ ಅಣ್ಣನ ...
ರಕ್ಷಾ ಬಂಧನ ಕೂಗಿದೆ ಅಣ್ಣನ ತಂಗಿಯನ್ನು ಸಂತೈಸೆ 
ಬಳಿಗೆ ಬರದೆಲ್ಲಿ ಇರುವೇ ನೀನು 
ಓರೇ ನೋಟ ವೈಯ್ಯಾರಿಯಾಟ ಮೈ ಮಾಟ ಸ್ವರ್ಗದಂತೇ
ನನ್ನಂತರಂಗ ಏನೆಂದರೇನು ಏನಾದರೇನು ಚಿಂತೆ... ನಿನಗೇ ... ನಿನಗೇ ...
ಓರೇ ನೋಟ ವೈಯ್ಯಾರಿಯಾಟ ಮೈ ಮಾಟ ಸ್ವರ್ಗದಂತೇ
 -------------------------------------------------------------------------------------------------------------------------

ಸ್ನೇಹ ಸೇಡು (೧೯೭೮) - ಬಡವರ ಮಾತಿಗೂ
ಸಂಗೀತ : ಎಸ್.ರಾಜೇಶ್ವರಾವ್ ಸಾಹಿತ್ಯ : ಚಿ.ಉದಯಶಂಕರ ಗಾಯನ : ರಾಮಕೃಷ್ಣ, ಪಿ.ಸುಶೀಲಾ, ಎಸ್ಪಿಬಿ, ಕೋರಸ್

ಕೋರಸ್ : ಭಲೇ ಭಲೇ (ಭಲೇ ಭಲೇ ) ಭಲೇ ಭಲೇ (ಭಲೇ ಭಲೇ )
                ಭಲೇ ಭಲೇ (ಭಲೇ ಭಲೇ ) ಭಲೇ ಭಲೇ (ಭಲೇ ಭಲೇ )
               ಜುಮ್ ತದಿಂ ಜುಮ್ ತದಿಂ ಜುಮ್ ತದಿಂ ಜುಮ್ ತದಿಂ
               ಆಆಆಅ... ಆಆಆಅ...
ಹೆಣ್ಣು : ಬಡವರ ಮಾತಿಗೂ ಚಿನ್ನದಂಥ ಬೆಲೆಯೂ ಬಂದಿತು
          ಬಡವರ ಬಾಳಲು ಭೂಮಿಯಿಂದು ಒಲಿದು ನಿಂತಿತು
          ಬಡತನಕ್ಕೆ ಗೆಲುವಾಯ್ತು ಸಿರಿತನಕ್ಕೆ ಸೋಲಾಯ್ತು
          ನಮ ಚಿಂತೆ ದೂರಾಯಿತು
         ಭಲೇ ಜೂಮ್ ಜೂಮ್ .. (ಭಲೇ ಜೂಮ್ ಜೂಮ್ ..)
         ಭಲೇ ಜೂಮ್ ಜೂಮ್ .. (ಭಲೇ ಜೂಮ್ ಜೂಮ್ ..)
         ಬಡವರ ಮಾತಿಗೂ ಚಿನ್ನದಂಥ ಬೆಲೆಯೂ ಬಂದಿತು
         ಬಡವರ ಬಾಳಲು ಭೂಮಿಯಿಂದು ಒಲಿದು ನಿಂತಿತು
         ಬಡತನಕ್ಕೆ ಗೆಲುವಾಯ್ತು ಸಿರಿತನಕ್ಕೆ ಸೋಲಾಯ್ತು
         ನಮ ಚಿಂತೆ ದೂರಾಯಿತು
         ಭಲೇ ಜೂಮ್ ಜೂಮ್ .. (ಭಲೇ ಜೂಮ್ ಜೂಮ್ ..)
         ಭಲೇ ಜೂಮ್ ಜೂಮ್ .. (ಭಲೇ ಜೂಮ್ ಜೂಮ್ ..)

ಗಂಡು : ಬಡವರಿಗೆ ಪ್ರಾಣವನ್ನೇ ಧಾರೆಯೆರೆದಾ ವೀರನಿವನು
           ಬಡಜನರ ಶಾಂತಿಗಾಗಿ ಜೀವಕೊಡುವ ಶೂರನಿವನೂ
           ಬಡವರಿಗೆ ಪ್ರಾಣವನ್ನೇ ಧಾರೆಯೆರೆದಾ ವೀರನಿವನು
           ಬಡಜನರ ಶಾಂತಿಗಾಗಿ ಜೀವಕೊಡುವ ಶೂರನಿವನೂ
ಹೆಣ್ಣು :  ನಮಗಿವರು ದೇವರಂತೆ ಶ್ರೀರಾಮ ಲಕ್ಷ್ಮಣರಂತೆ
ಎಲ್ಲರು : ನಮಗಿವರು ದೇವರಂತೆ ಶ್ರೀರಾಮ ಲಕ್ಷ್ಮಣರಂತೆ
ಹೆಣ್ಣು : ನನ್ನೀ ಅಣ್ಣ ಜಾಣರ ಜಾಣ ಬಡವರ ಭಾಗ್ಯ ಹೇಹೇಹೇಹೇ
           ನನ್ನೀ ಚೆನ್ನ ಜಾಣರ ಜಾಣ ಬಡವರ ಪುಣ್ಯ
ಎಲ್ಲರು : ಬಡವರ ಮಾತಿಗೂ ಚಿನ್ನದಂಥ ಬೆಲೆಯೂ ಬಂದಿತು       
           ಬಡವರ ಬಾಳಲು ಭೂಮಿಯಿಂದು ಒಲಿದು ನಿಂತಿತು
          ಬಡತನಕ್ಕೆ ಗೆಲುವಾಯ್ತು ಸಿರಿತನಕ್ಕೆ ಸೋಲಾಯ್ತು
          ನಮ ಚಿಂತೆ ದೂರಾಯಿತು
          ಭಲೇ ಜೂಮ್ ಜೂಮ್ .. (ಭಲೇ ಜೂಮ್ ಜೂಮ್ ..)
          ಭಲೇ ಜೂಮ್ ಜೂಮ್ .. (ಭಲೇ ಜೂಮ್ ಜೂಮ್ ..)

ಗಂಡು : ಧರೆಯನ್ನೇ ಕೊಟ್ಟರೂ ಬೆಲೆಗೆ ಇಂಥ ಹೆಣ್ಣು ಸಿಕ್ಕಳೆಂದು
            ನನ್ನನ್ನೇ ನಾನು ಕೊಡುವೇ ನನ್ನ ಒಲಿದು ಬಂದರಿಂದು
           ಧರೆಯನ್ನೇ ಕೊಟ್ಟರೂ ಬೆಲೆಗೆ ಇಂಥ ಹೆಣ್ಣು ಸಿಕ್ಕಳೆಂದು
           ನನ್ನನ್ನೇ ನಾನು ಕೊಡುವೇ ನನ್ನ ಒಲಿದು ಬಂದರಿಂದು
ಹೆಣ್ಣು : ನನ್ನೆರಡು ಕಣ್ಣುಗಳಂತೇ ಇವರಿರಲೂ ಇಲ್ಲ ಚಿಂತೆ
           ನನ್ನೆರಡು ಕಣ್ಣುಗಳಂತೇ ಇವರಿರಲೂ ಇಲ್ಲ ಚಿಂತೆ 
           ಎಲ್ಲೂ ಎಂದು ದರ್ಪಕ್ಕೆ ಇವರು ತಲೆ ಬಾಗಿಸರು .. ಹೇಹೇಹೇಹೇ 
ಗಂಡು : ಪ್ರೀತಿಗೇ ಪ್ರೀತಿ ಸ್ನೇಹಕ್ಕೆ ಸ್ನೇಹ  ದ್ವೇಷಕ್ಕೆ ದ್ವೇಷ ... ಹೈ .. ಹೈ ...  
ಎಲ್ಲರು : ಬಡವರ ಮಾತಿಗೂ ಚಿನ್ನದಂಥ ಬೆಲೆಯೂ ಬಂದಿತು     
          ಬಡವರ ಬಾಳಲು ಭೂಮಿಯಿಂದು ಒಲಿದು ನಿಂತಿತು
          ಬಡತನಕ್ಕೆ ಗೆಲುವಾಯ್ತು ಸಿರಿತನಕ್ಕೆ ಸೋಲಾಯ್ತು
          ನಮ ಚಿಂತೆ ದೂರಾಯಿತು
          ಭಲೇ ಜೂಮ್ ಜೂಮ್ .. (ಭಲೇ ಜೂಮ್ ಜೂಮ್ ..)
          ಭಲೇ ಜೂಮ್ ಜೂಮ್ .. (ಭಲೇ ಜೂಮ್ ಜೂಮ್ ..)
          ಹೊಯ್ಯ್   ಭಲೇ ಜೂಮ್ ಜೂಮ್ 
          ಹೊಯ್ಯ್   ಹೊಯ್ಯ್   ಹೊಯ್ಯ್   ಹೊಯ್ಯ್   ಯ್ಯಯ್ಯಾ ಯ್ಯಾ  
--------------------------------------------------------------------------------------------------------------------------

ಸ್ನೇಹ ಸೇಡು (೧೯೭೮) - ಎಂಥ ಸೊಗಸು ಜೀವನಾ
ಸಂಗೀತ : ಎಸ್.ರಾಜೇಶ್ವರಾವ್ ಸಾಹಿತ್ಯ : ಚಿ.ಉದಯಶಂಕರ ಗಾಯನ : ರಾಮಕೃಷ್ಣ, ಪಿ.ಸುಶೀಲಾ 

ಹೆಣ್ಣು : ಎಂಥ ಸೊಗಸು ಜೀವನಾ... ಎಂಥ ಹರುಷ ಈ ಕ್ಷಣ
ಗಂಡು : ಎಂಥ ಸೊಗಸು ಜೀವನಾ .. ಎಂಥ ಹರುಷ ಈ ಕ್ಷಣ
ಹೆಣ್ಣು : ಬಾಳ ನದಿಯು ಜೇನ ಕಡಲಾ ಬೆರೆತ ಮಹಾ ಸುದಿನಾ
ಇಬ್ಬರು: ಎಂಥ ಸೊಗಸು ಜೀವನಾ .. ಎಂಥ ಹರುಷ ಈ ಕ್ಷಣ

ಹೆಣ್ಣು : ಇಂದು ನಾವು ಇಬ್ಬರೂ     ಗಂಡು : ನಾಳೆ ನೋಡು ಮೂವರೂ 
ಹೆಣ್ಣು : ಇಂಥ ಮಾತು ಏತಕೆ        ಗಂಡು : ಪ್ರೇಮದಾಟಕೇ 
ಹೆಣ್ಣು : ಆಹಾಹಾ...  ಆಆಆ...                   
ಗಂಡು : ಬಳ್ಳಿ ಏಕೇ ಹಿಗ್ಗಿದೇ               ಹೆಣ್ಣು : ಬಯಕೆ ಒಡಲ ತುಂಬಿದೆ 
ಗಂಡು : ಫಲವನೆಂದು ಕೊಡುವುದೇ    ಹೆಣ್ಣು : ಹೋಗಿ ಕಾಡದೇ 
ಇಬ್ಬರು: ಎಂಥ ಸೊಗಸು ಜೀವನಾ .. ಎಂಥ ಹರುಷ ಈ ಕ್ಷಣ 

ಹೆಣ್ಣು : ಮಡಿಲ ಕಂದ ನಗುತಿದೆ       ಗಂಡು : ಆಆಆ.. ಒಡಲೊಳೊಂದು ಕಾದಿದೇ 
ಹೆಣ್ಣು : ಆಆಆ.. ಇನ್ನೂ ಸಾಕು ಎನಿಸಿದೇ      ಗಂಡು : ಆಸೆ ಕೇಳದೇ 
ಹೆಣ್ಣು : ಆಹಾ ಹಾ ಹಾ ಹಾ ... 
ಗಂಡು : ನಾಳೆ ಇವರು ತರುಣರೂ      ಹೆಣ್ಣು : ಆಆಆ.. ನಾವು ಆಗ ಮುದುಕರೂ 
ಗಂಡು : ಆಆಆ.. ವಯಸು ಬರಿಯ ದೇಹಕೆ      ಹೆಣ್ಣು : ಚಪಲವೇತಕೆ 
ಹೆಣ್ಣು : ತಾಯಿ ತಂದೆಯಂತೀಹ ಅತ್ತೆ ಮಾವ ಬಂದರು 
          ನನ್ನ ಹರಿಸಿ ಪ್ರೇಮದಿ ಸ್ವರ್ಗ ಧರೆಗೆ ತಂದರೂ 
ಗಂಡು : ಇಷ್ಟ ಪೂರ್ತಿಯಾಗಿದೆ ಷಷ್ಠಿ ಪೂರ್ತಿ ಬಂದಿದೆ 
           ಆಸೆ ಇನ್ನು ತುಂಬಿದೆ ಅಲ್ಲವೇನೆ ಹೇಳೆಯಾ 
         ಸಾಕು ಸುಮ್ಮನಿರೀ 
--------------------------------------------------------------------------------------------------------------------------

ಸ್ನೇಹ ಸೇಡು (೧೯೭೮) - ನಾಗರಾಣಿಯು ಹೊರಗೆ ಬಂದಳು
ಸಂಗೀತ : ಎಸ್.ರಾಜೇಶ್ವರಾವ್ ಸಾಹಿತ್ಯ : ಚಿ.ಉದಯಶಂಕರ ಗಾಯನ : ವಾಣಿಜಯರಾಮ

ನಾಗರಾಣಿಯು ಹೊರಗೆ ಬಂದಳು ಬೇಟೆಯ ಹುಡುಕುತಲಿ
ರೋಷದಲಿ ಆವೇಷದಲೀ
ನಾಗರಾಣಿಯು ಹೊರಗೆ ಬಂದಳು ಬೇಟೆಯ ಹುಡುಕುತಲಿ
ರೋಷದಲಿ ಆವೇಷದಲೀ
ತನ್ನ ಕೆಣಕಿದ ದುರುಳನ ಪ್ರಾಣವ ಹೀರುವ ಆಸೆಯಲಿ
ರೋಷದಲಿ ಆವೇಶದಲಿ

ಆ ವಿಷ ಸರ್ಪದ ರೋಷದ ಉಸಿರು
ಬುಸ್ ಬುಸ್ ಎನ್ನುತ ಮಾರ್ಮದಿರಲು
ನಡುಗಿತು ಕಡಲು ಗುಡುಗಿತು ಮುಗಿಲು
ಸಿಡಿಯಿತು ಭೂಮಿಯು ಭಯ ಬರಲು
ಪ್ರಳಯವೇ ಬಂದಿತೋ...
ಪ್ರಳಯವೇ ಬಂದಿತೋ ಎನಿಸಿರಲೂ
ನಾಗರಾಣಿಯು ಹೊರಗೆ ಬಂದಳು ಬೇಟೆಯ ಹುಡುಕುತಲಿ
ರೋಷದಲಿ ಆವೇಷದಲೀ

ಚಂಡ ಪ್ರಚಂಡರ ಪುಂಡಡಗಿಸಲು ಗುಂಡಿಗೆ ರಕ್ತವ ಹೀರಿ ನಲಿಯಲೂ 
ಹಿರಿಯುತ ಕತ್ತಿ ಝಳಪಿಸಿ ಎತ್ತಿ ಚಂಡಯ ತಾಳಕೆ ಕುಣಿಯುತಹಿಹಳು 
ಚಾಮುಂಡಿಯ ಹಾಗೇ ನಗುತಿಹಳು  ಅಹ್ಹಹ್ಹಹ್ಹಹ್ಹ.. 
ಬೇಟೆಯ ಎದುರಲಿ ಸಿಕ್ಕಿತು ದ್ವೇಷದ ಕಡಲು ಉಕ್ಕಿತು 
ಆವೇಶದ ಒಡಲು ಕಕ್ಕಿತು ಬಯಸಿದ ಬೇಟೆಯು ದಕ್ಕಿತು 
ನಿನ್ನಾ ಆಯುಷ್ಯವು ಮುಗಿಯಿತು  
--------------------------------------------------------------------------------------------------------------------------

No comments:

Post a Comment