1073. ರಾಜ ನರಸಿಂಹ (೨೦೦೩)


ರಾಜ ನರಸಿಂಹ ಚಿತ್ರದ ಹಾಡುಗಳು 
  1. ಮಹಾರಾಜ ರಾಜನು 
  2. ಪ್ರಿಯಾ ಪ್ರಿಯಾ
  3. ಓ ಮಧುವಂತೀ
  4. ಮಂಡಕ್ಕಿ ತಿನ್ನು ಬಾರೇ 
  5. ನೀನೇ ನೀನೇ ರಾಜ ರಾಜ ನರಸಿಂಹ 
ರಾಜ ನರಸಿಂಹ (೨೦೦೩) - ಮಹಾರಾಜ ರಾಜ ಇವನು
ಸಂಗೀತ : ದೇವಾ ಸಾಹಿತ್ಯ : ಕೆ.ಕಲ್ಯಾಣ ಗಾಯನ : ಸುಜಾತ, ಕೋರಸ್ 


ಕೋರಸ್ : ಚಿನ್ನದ ರಂಗನ ಮುತ್ತಿನ ರಾಣಿ ಚಿಲಿಪಿಲಿ ರಾಣಿ ಮುತ್ತಿನ ರಾಣಿ
                ಮಿಣಮಿಣ ಮಿನುಗುವ ಕಿನ್ನರ ವೇಣಿ ಕಿಲಕಿಲವೇಣಿ ಕಿನ್ನರ ವೇಣಿ 
               ಹಾಯ್ ತಾಯಿ ಇಳಿದು ಬಂದಿತು ಈ ಗೆಜ್ಜೆಗೆ ಮೆರಗು ತಂದಿತು
               ತನುವಿಗೊಂದು ಮೆರಗು ತಂತು ಒಲವಿನ ಹೂಮಳೆ ಚೆಲ್ಲಿತೋ ಅಹ್ಹಹ್ಹಹ್ಹ... 
ಹೆಣ್ಣು : ಮಹಾರಾಜ ರಾಜನು ಇವನು...  
         ಮಹಾರಾಜ ರಾಜನು ಇವನು  ಮನಬೆಳಗೂ ಸೂರ್ಯನು ಇವನು 
         ಅಪರೂಪ ಗುಣಗಳಾ ಪದಗಳಿಗೆ ಸಿಗದವ... ಪದಗಳಿಗೆ ಸಿಗದವ
         ಶ್ರೀರಾಮಚಂದ್ರನಾ ಮರುಜನ್ಮ ಇಲ್ಲಿದೇ
         ಆಹ್ ಕಣ್ಣ ತುಂಬಾ ಕರಗೋ ಗುಣ ಇವ ಕರುಣೆಯ ಬೃಂದಾವನ
        ಮಹಾರಾಜ ರಾಜನು ಇವನು

ಕೋರಸ್ : ನನ್ನನ್ನನ್ನ ನನ್ನನ್ನನ್ನ ಡಿಂಗ ಡಿಂಗ ಡಿಂಗ ಡಿಂಗ ಡಿಂಗ ಡಿಂಗ
               ನನ್ನನ್ನನ್ನ ನನ್ನನ್ನನ್ನ ಡಿಂಗ ಡಿಂಗ ಡಿಂಗ ಡಿಂಗ ಡಿಂಗ ಡಿಂಗ
               ನನ್ನನ್ನನ್ನ ನನ್ನನ್ನನ್ನ ಡಿಂಗ ಡಿಂಗ ಡಿಂಗ ಡಿಂಗ ಡಿಂಗ ಡಿಂಗ
               ನನ್ನನ್ನನ್ನ ನನ್ನನ್ನನ್ನ ಡಿಂಗ ಡಿಂಗ ಡಿಂಗ ಡಿಂಗ ಡಿಂಗ ಡಿಂಗ 
              ಓಓಓಓಓಓಓ... 
ಹೆಣ್ಣು :  ನಡೆಯೋ ನುಡಿಯೋ ಚಿನ್ನ ಹೃದಯ ಹಾಲಿನ ಬಣ್ಣ ಕಾಯೋ ದೈವ ಇಲ್ಲಿದೆ
           ದಾನ ಇವನ ಶಕ್ತಿ ಮಾನ ಇವನ ಮುಕ್ತಿ ಸೋಲೋ ಮಾತು ಎಲ್ಲಿದೇ
           ಪ್ರತಿ ಹೆಜ್ಜೆ ಸಿಂಹದಂತೇ ಮೆರೆಯುವನು ಈ ದೊರೆ
           ಬದುಕಲ್ಲಿ ಬ್ರಹ್ಮನಂತೆ ಬೆಸೆಯುವನು ಆಸರೆ
          ಇವ ಕೋಟಿಗೆ ಒಬ್ಬ ಇವ ಜನ್ಮಕೇ ಒಬ್ಬ ಇವ ಬಾಳಿನ ಕಳಶವು
          ಮಹಾರಾಜ ರಾಜನು ಇವನು  ಮನಬೆಳಗೂ ಸೂರ್ಯನು ಇವನು
         ಅಪರೂಪ ಗುಣಗಳಾ ಪದಗಳಿಗೆ ಸಿಗದವ... ಪದಗಳಿಗೆ ಸಿಗದವ

ಕೋರಸ್ : ದುಂ ತಕಿಟತಕ  ತಕಿಟತಕ  ದುಂ ದುಂ ದುಂ ತಕಿಟತಕ  ತಕಿಟತಕ  
               ದುಂ ತಕಿಟತಕ  ತಕಿಟತಕ  ದುಂ ದುಂ ದುಂ ತಕಿಟತಕ  ತಕಿಟತಕ  
              ಡಿಂಗ ಡಿಂಗ ಡಿಂಗ ಡಿಂಗ ಡಿಂಗ ಡಿಂಗ ಡಿಂಗ ಡಿಂಗ ಡಿಂಗ ಡಿಂಗ 
              ಡಿಂಗ ಡಿಂಗ ಡಿಂಗ ಡಿಂಗ ಡಿಂಗ ಡಿಂಗ ಡಿಂಗ ಡಿಂಗ ಡಿಂಗ ಡಿಂಗ 
             ಡಿಂಗ ಡಿಂಗ ಡಿಂಗ ಡಿಂಗ ಆಆಆಆ.... 
ಹೆಣ್ಣು : ಚೆಲುವೇ ನೋಡು ಚೆಲುವೇ ಇದು ನಮ್ಮ ಲಕ್ಷ್ಮಿ ಮದುವೆ ಆಹಾ.. ಎಂಥ ಸಂಭ್ರಮ
          ಓಲೆ ಝುಮುಕಿ ಕೊಟ್ಟು  ಅರಿಶಿನ ಕುಂಕುಮ ಇಟ್ಟು ತಾಳ ಮೇಳ ಸಂಗಮ
          ಹಸೆಮಣೆಯ ಪ್ರೇಮಗೀತೆ ಶುರುವಾಗೋ ವೇಳೆಯೂ
          ಹೊಸ ಬಾಳ ದಾರಿ ಎಲ್ಲ ಹಸಿರಾಗೋ ವೇಳೆಯೂ
         ಈ ಕಾಯೋನ ಮುಂದೆ ಈ ಕ್ಷಮಿಸೋನ ಮುಂದೆ ಅನುರಾಗವೇ ಪಲ್ಲವಿ
         ಮಹಾರಾಜ ರಾಜನು ಇವನು  ಮನಬೆಳಗೂ ಸೂರ್ಯನು ಇವನು
         ಅಪರೂಪ ಗುಣಗಳಾ ಪದಗಳಿಗೆ ಸಿಗದವ
         ಶ್ರೀರಾಮಚಂದ್ರನಾ ಮರುಜನ್ಮ ಇಲ್ಲಿದೇ
         ಆಹ್ ಕಣ್ಣ ತುಂಬಾ ಕರಗೋ ಗುಣ ಇವ ಕರುಣೆಯ  ಬೃಂದಾವನ
        ಮಹಾರಾಜ ರಾಜನು ಇವನು  
--------------------------------------------------------------------------------------------------------------------------

ರಾಜ ನರಸಿಂಹ (೨೦೦೩) - ಪ್ರಿಯಾ ಪ್ರಿಯಾ ಪ್ರಿಯಾ ಪ್ರಿಯಾ
ಸಂಗೀತ : ದೇವಾ ಸಾಹಿತ್ಯ : ಕೆ.ಕಲ್ಯಾಣ ಗಾಯನ : ಎಸ್.ಪಿ.ಬಿ., ಸಂಗೀತ

ಹೆಣ್ಣು : ಆಆಆಆಅ....
ಗಂಡು : ಪ್ರಿಯಾ ಪ್ರಿಯಾ ಪ್ರಿಯಾ ಪ್ರಿಯಾ
           ವಂದಿಸುವೆ ಮಾತಿಗೆ ಸ್ಪಂದಿಸುವೆ ಪ್ರೀತಿಗೆ
           ನನ್ನುಸಿರ ತುಂಬುವೆ ನಿನ್ನುಸಿರ ಹಾಡಿಗೆ
           ಪ್ರಿಯಾ ಪ್ರಿಯಾ ಪ್ರಿಯಾ ಪ್ರಿಯಾ

ಹೆಣ್ಣು : ಏಳು ಬಣ್ಣ ಸೇರಿ ಮಳೆಯ ಬಿಲ್ಲಾಯಿತು
ಗಂಡು : ಏಳು ಕನಸು ಸೇರಿ ನಿನ್ನಾ ಕಣ್ಣಾಯಿತು
ಹೆಣ್ಣು : ನಿನ್ನ ಕಣ್ಣಲ್ಲಿರೋ ಪ್ರೇಮ ಚಿತ್ರಾವಳಿ
          ನನ್ನ ಕೆನ್ನೆಗೊಂದು ರಂಗಾವಳಿ
ಗಂಡು : ನಿನ್ನ ಕಣ್ಣಲ್ಲಿರೋ ಪ್ರೇಮ ಕರಾವಳಿ
           ನನ್ನ ಬಾಳಿಗೊಂದು ಪ್ರಭಾವಳಿ
ಹೆಣ್ಣು : ಇದು ಕಥೆಯಲ್ಲ ಬರಿ ಕನಸಲ್ಲ  ಸವಿ ನೆನಪುಂಟು ನನ್ನ ಬದುಕೆಲ್ಲ
ಗಂಡು : ಇದು ಜಗವೇ ಕಾಣದ ಮೊದಲ ಸಂಭ್ರಮ ಒಂದಾಗಿರಲಿ ನಮ್ಮ ಜನುಮ
           ಪ್ರಿಯಾ ಪ್ರಿಯಾ ಪ್ರಿಯಾ ಪ್ರಿಯಾ

ಗಂಡು : ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲಿ
ಹೆಣ್ಣು : ಇಬ್ಬರು ಒಬ್ಬರಾಗಿ ನಡೆಯುವ ವೇಳೆಯಲಿ
ಗಂಡು : ಇಲ್ಲಿ ಆಣೆ ಎಂಬ ಕನ್ನಂಬಾಡಿ ಕಟ್ಟಿ ಜೀವ ಕಾವೇರಿ ಆಗೋಣ ಬಾ
ಹೆಣ್ಣು : ಯಾವ ಚರಿತ್ರೆಯು ಕಂಡು ಕೇಳಿಲ್ಲದಾ ಪ್ರೇಮ ಕಸ್ತೂರಿ  ಹಂಚೋಣ ಬಾ
ಗಂಡು : ನಿನ್ನ ಉಸಿರಲ್ಲೇ   ದಿನ ನೆನೆಯುವೆ ನಾ ನಿನ್ನ ನೆನಪಲ್ಲೇ ಉಸಿರಾಡುವೆ ನಾ
ಹೆಣ್ಣು : ನಮ್ದು ಹೃದಯವ ಆಳುವ ಅರಸರ ವಂಶ ಮರೆತಿರಲಾರೆ ಇನ್ನೊಂದು ನಿಮಿಷ
ಗಂಡು :   ಪ್ರಿಯಾ ಪ್ರಿಯಾ ಪ್ರಿಯಾ ಪ್ರಿಯಾ
           ವಂದಿಸುವೆ ಮಾತಿಗೆ ಸ್ಪಂದಿಸುವೆ ಪ್ರೀತಿಗೆ
           ನನ್ನುಸಿರ ತುಂಬುವೆ ನಿನ್ನುಸಿರ ಹಾಡಿಗೆ
           ಪ್ರಿಯಾ ಪ್ರಿಯಾ ಪ್ರಿಯಾ ಪ್ರಿಯಾ
--------------------------------------------------------------------------------------------------------------------------

ರಾಜ ನರಸಿಂಹ (೨೦೦೩) - ಮಧುವಂತಿ ಎದೆಯಾ ಸ್ವರ ತಂತಿ
ಸಂಗೀತ : ದೇವಾ ಸಾಹಿತ್ಯ : ಕೆ.ಕಲ್ಯಾಣ ಗಾಯನ : ಎಸ್.ಪಿ.ಬಿ., ಸುಜಾತ 

ಗಂಡು : ಓಓಓ... .ಮಧುವಂತಿ ಎದೆಯಾ ಸ್ವರ ತಂತಿ
           ಮಧುವಂತಿ ಎದೆಯಾ ಸ್ವರ ತಂತಿ
           ಮನಸಾರೆ ಪ್ರೀತಿಸುವೆ ನಿನ್ನ ಪ್ರೀತಿಯ ಪೂಜಿಸುವೆ ಗೆಳತೀ
           ಆರಂಭ ನೀನು ಆನಂದ ನಿನ್ನದು
          ಓಓಓ... .ಮಧುವಂತಿ ಎದೆಯಾ ಸ್ವರ ತಂತಿ

ಗಂಡು : ಕೋಗಿಲೆಗೆ ಕುಹೂ ದನಿ ಇದೆ ಅದುವೇ ಚೈತ್ರದ ಪ್ರೀತಿಯ ಗುರುತು
ಹೆಣ್ಣು : ಹೂಗಳಲಿ ಜೇನು ಹನಿ ಇದೆ ಅದುವೇ ದುಂಬಿಯ ಸ್ನೇಹದ ಗುರುತು
ಗಂಡು : ಕಡಲಲಿ ತೇಲುವ ಅಲೆಅಲೆಯು ಮುತ್ತುಗಳ ಪ್ರತಿ ಬಿಂಬವ ತಾನೇ
ಹೆಣ್ಣು : ಬಾಳಲಿ ಮಿನುಗುವ ಚುಕ್ಕಿಗಳು ಕನಸಿನ ಪ್ರತಿರೂಪವ ತಾನೇ
ಗಂಡು : ಓಓಓ... ಹೊಗಳಿಕೆಯ ಮೀರಿದಾ ಈ ಪ್ರೀತಿಗೆ ಜಯವಾಗಲಿ
           ಓಓಓ ... ಮಧುವಂತಿ ಎದೆಯಾ ಸ್ವರ ತಂತಿ

ಹೆಣ್ಣು : ಚೆಲುವಿನ ಸವಿ ಸವಿಯುವ  ಸಾವಿರ ಕನಸಿವೆ ಇಲ್ಲಿ
ಗಂಡು : ನಡೆಯುವ ಪ್ರತಿ ಹೆಜ್ಜೆಲೂ ನಿನ್ನ ಒಲವಿನ ಕನ್ನಡಿ ಇರಲಿ
ಹೆಣ್ಣು : ಅಕ್ಕರೆಯ ತೋಟದಲಿ ಅರಳಿರುವಾ ಜೋಡಿ ಬೆಳದಿಂಗಳು ನಾವುಗಳು
ಗಂಡು : ರಾಶಿ ರಾಶಿ ಕನಸಿನ ತೇರಿನಲಿ ಪ್ರೇಮಕಾಶಿ ಸುತ್ತಿ ಬರೋ ಪ್ರೇಮಿಗಳು
ಹೆಣ್ಣು : ಆ ದೇವರೆಂಬುದು ನಿಜವಾದರೆ ನೀನೇ ದೊರೆ
ಗಂಡು : ಓಓಓ .. ಮಧುವಂತಿ ...
--------------------------------------------------------------------------------------------------------------------------

ರಾಜ ನರಸಿಂಹ (೨೦೦೩) - ಮಂಡಕ್ಕಿ ತಿನ್ನು ಬಾರೆ ಮಾವನ ಮಗಳೇ
ಸಂಗೀತ : ದೇವಾ ಸಾಹಿತ್ಯ : ಕೆ.ಕಲ್ಯಾಣ ಗಾಯನ : ಎಸ್.ಪಿ.ಬಿ., ಅನುರಾಧ ಶ್ರೀರಾಮ 


ಗಂಡು : ಮಂಡಕ್ಕಿ ತಿನ್ನು ಬಾರೆ ಮಾವನ ಮಗಳೇ  ಮುತ್ತಿಕ್ಕೂವಾಗ ಬ್ಯಾಡ ರಾಂಗು ರಗಳೆ 
             ಸೊಮಾರ ಸಂತೆಗೆ ಬಾರೆ ಭೀಮನ ಮಗಳೇ ಬಿಗಿದಾಡುವಾಗ ಬ್ಯಾಡ ತಂಟೆ ತರಲೇ 
ಹೆಣ್ಣು : ಕಟ್ಟು ಬಂಡಿಯ ಕಟ್ಟು ಬಂಡಿಯಾ ಹೊತ್ತಾಯಿತು 
          ಹೊತ್ತು ಮುಳುಗುವಾ ಮುಂಚೆ ಹಟ್ಟಿಗೆ ಬಂದ್ರಾಯಿತು 
ಗಂಡು : ಮುಂಜಾನೆ ಹೊತ್ನಾಗೆ ಕೋಳಿ ಕೂಗದಂಗೇ ಹಿತ್ಲಾಗೆ 
ಇಬ್ಬರು : ನೀ ಬಂದೆ ಧೈಯ್ಯಾ ಥಕ್ಕಾ ಮಜ ತಕೋ ತಕೋ
ಗಂಡು : ಮಂಡಕ್ಕಿ ತಿನ್ನು ಬಾರೆ ಮಾವನ ಮಗಳೇ  ಮುತ್ತಿಕ್ಕೂವಾಗ ಬ್ಯಾಡ ರಾಂಗು ರಗಳೆ 
             ಸೊಮಾರ ಸಂತೆಗೆ ಬಾರೆ ಭೀಮನ ಮಗಳೇ ಬಿಗಿದಾಡುವಾಗ ಬ್ಯಾಡ ತಂಟೆ ತರಲೇ 

ಹೆಣ್ಣು : ಚಾಮುಂಡಿಗೆ ಕಾಯಿ ಹೊಡೆದು ಕನಸಾ ಕಟ್ತಿನ ಬಾರೋ 
          ಅಣ್ಣಮ್ಮಂಗೆ ಹರಕೆ ಹೊತ್ತು ಸಾಥೀ ಆಗ್ತಿನ ಬಾರೋ 
ಗಂಡು: ಎಷ್ಟೇ ಆದ್ರೂ ನೀನು ನಮ್ಮ ಕನ್ನಡದಾ ಮಗಳು 
          ನಿನ್ನ ಮಾನಾ ಕಾಯೋಕ್ ಪ್ರಾಣಾ ಕೊಡ್ತಿನ್ ದಿನ ರಾತ್ರಿ ಹಗಲು 
ಹೆಣ್ಣು : ಮೇಲುಕೋಟೆ ಚೆಲುವ ಗೆಳೆಯನಾಣೆ  ನಿನ್ನ ಕೋಟೆಗೆ ರಾಣಿ ಎಂದು ನಾನೇ 
ಗಂಡು : ಓಓಓ ... ನನ್ನುಡುಗಿ ಮೆಲುಡುಗೆ ಯಾಕೆ ಗೊಡವೇ 
           ನಾ ತಾನೇ ನಿನಗೆಂದು ಜೀವನ ಒಡವೆ 
ಹೆಣ್ಣು : ಇಷ್ಟು ಸಾಕು ನನಗಿಷ್ಟೇ ಸಾಕು 
ಗಂಡು : ರಮ್ಯಕೃಷ್ಣ ನಿನ್ನ ಹತ್ರ ರಮ್ಯವಾಗಿ ಇದ್ರೆ ಸಾಕು 
           ಮಂಡಕ್ಕಿ ತಿನ್ನು ಬಾರೆ ಮಾವನ ಮಗಳೇ  ಮುತ್ತಿಕ್ಕೂವಾಗ ಬ್ಯಾಡ ರಾಂಗು ರಗಳೆ 
           ಸೊಮಾರ ಸಂತೆಗೆ ಬಾರೆ ಭೀಮನ ಮಗಳೇ ಬಿಗಿದಾಡುವಾಗ ಬ್ಯಾಡ ತಂಟೆ ತರಲೇ 

ಗಂಡು : ಮಂಡ್ಯಾಲಿರೋ ಸಕ್ಕರೇ ಫ್ಯಾಕ್ಟರಿ ಬರೆದು ಕೊಡ್ತೀನ ಬಾರೆ 
           ಆಸೆ ಪಟ್ರೆ ಮೈಸೂರ ಪ್ಯಾಲೇಸ್ ಬಿಟ್ಟು ಕೊಡ್ತೀನ ಬಾರೇ 
ಹೆಣ್ಣು : ನಿನ್ನ ಹಾರ್ಟ್ ಎಂದು ನಂಗೆ ಶುಗರ್ ಫ್ಯಾಕ್ಟರಿ ಮಾವ್ 
          ನಿನ್ನ್ ಮನಸ್ ಪ್ಯಾಲೇಸಿನಲ್ಲಿ ಎಂದು ಇದ್ರೆ ಸಾಕು ಜೀವ 
ಗಂಡು : ಬೇಲೂರಗೇ ನಿನ್ನ ಹೆಸರ್ ಇಡಿಸುವೆ ಅರೇ ಬೇಕಾದ್ರೇ ಗೋಳಗುಮ್ಮಟ ಕೊಡಿಸುವೇ 
ಹೆಣ್ಣು : ನಿನ್ ಮಾತಿನ ಚೆಲುವೇ ಸಾಕು ಬೇಲೂರು ಯಾಕೆ ಗುಂಡಿಗೆಯ್ ಗುರುತು ಸಾಕು 
          ಗೊಮ್ಮಟ ಯಾಕೇ 
ಗಂಡು : ಏನು ಬೇಕು ಬೇರೇನೂ ಬೇಕು 
ಹೆಣ್ಣು : ಸಿಂಹಾದ್ರಿಯ ಸಿಂಹ ನಿನ್ನ ಹೆಂಡತಿಯಾದ್ರೆ ಸಾಕು 
ಗಂಡು : ರಮ್ಯಕೃಷ್ಣ ನಿನ್ನ ಹತ್ರ ರಮ್ಯವಾಗಿ ಇದ್ರೆ ಸಾಕು 
           ಮಂಡಕ್ಕಿ ತಿನ್ನು ಬಾರೆ ಮಾವನ ಮಗಳೇ  ಮುತ್ತಿಕ್ಕೂವಾಗ ಬ್ಯಾಡ ರಾಂಗು ರಗಳೆ 
           ಸೊಮಾರ ಸಂತೆಗೆ ಬಾರೆ ಭೀಮನ ಮಗಳೇ ಬಿಗಿದಾಡುವಾಗ ಬ್ಯಾಡ ತಂಟೆ ತರಲೇ 
--------------------------------------------------------------------------------------------------------------------------

ರಾಜ ನರಸಿಂಹ (೨೦೦೩) - ನೀನೇ ನೀನೇ ರಾಜ ರಾಜ ನರಸಿಂಹ 
ಸಂಗೀತ : ದೇವಾ ಸಾಹಿತ್ಯ : ಕೆ.ಕಲ್ಯಾಣ ಗಾಯನ : ಎಸ್.ಪಿ.ಬಿ., 

ಕೋರಸ್ : ಲಕ್ಷ್ಮಿ ನರಸಿಂಹ ಉಗ್ರ ನರಸಿಂಹ ಯೋಗ ನರಸಿಂಹ ರಾಜ ನರಸಿಂಹ
               ಗಾಳಿ ನೀರು ಭೂಮಿ ಬೆಂಕಿ ಬಾನು ನೀನು ಎಂಟು ದಿಕ್ಕಿನಲ್ಲೂ ನೀನೇ
               ತಕಿಟ ತಕಿಟ ತಕಿಟ ತಕ ತರಿಕಿಟ ತಕಧಿಮಿ  ತಕಿಟ ತಕಿಟ ತಕಿಟ ತಕ ತರಿಕಿಟ ತಕಧಿಮಿ
              ಓಂ ಓಂ .......
ಗಂಡು : ನೀನೇ ನೀನೇ ರಾಜ ರಾಜ ನರಸಿಂಹ ಲೋಕ ಕಾಯೋ ನೀನೇ ಹರಿಹರಬ್ರಹ್ಮ
           ದಿಕ್ಕು ನೀನಯ್ಯಾ ದಾರಿ ನೀನಯ್ಯಾ ದಾರಿ ದೀಪಾನೂ ನೀನೇ
          ಬೆಳಕು ನೀನಯ್ಯಾ ಬದುಕು ನೀನಯ್ಯಾ ಬದುಕಿನ ಬೆಳಕು ನೀನೇ
ಕೋರಸ್ : ಯಜಮಾನ ಯಜಮಾನ ಜಗಕೆ ಒಬ್ಬನೇ ಯಜಮಾನ
ಗಂಡು : ನೀನೇ ನೀನೇ ರಾಜ ರಾಜ ನರಸಿಂಹ ಲೋಕ ಕಾಯೋ ನೀನೇ ಹರಿಹರಬ್ರಹ್ಮ

ಗಂಡು : ಹಸಿವಿನಲು ನಿನ್ನ ಹೆಸರಿದೆ ಅನ್ನದಲ್ಲೂ ನಿನ್ನ ನೆನಪಿದೆ
            ನೋವಿರಲು ನಿನ್ನ ಉಸಿರಿದೆ ನಗುವಿನಲೂ ನಿನ್ನ ನೆರೆಳಿದೆ
            ನಿನ್ನ ಮನಸು ಮುದ್ದಾದ  ಮಗುವಂತೆ ದಿನ ಹರಸು ನಾವೆಲ್ಲಾ ನಗುವಂತೆ
            ನೀನೇ ... ನಮ್ಮ ಬಂಧು ಎಂದೂ ನೀನೇ ನಮ್ಮ ಬಂಧು
            ನಿನ್ನ ಮುಂದೆ ನಾವೆಲ್ಲಾ ಒಂದು ಶಕ್ತಿ ನಿನದು ಭಕ್ತಿ ನಮದು ಮುಕ್ತಿ ನೀಡಯ್ಯಾ
ಕೋರಸ್ : ನೀನೇ ನೀನೇ ರಾಜ ರಾಜ ನರಸಿಂಹ ಲೋಕ ಕಾಯೋ ನೀನೇ ಹರಿಹರಬ್ರಹ್ಮ ಅಹ್ಹಹ್ಹಾ..

ಗಂಡು : ಮನಸಿನಲಿ ಶುದ್ದಿಯಾ ಕೊಡು ಬದುಕಿನಲಿ ಬುದ್ದಿಯಾ ಕೊಡು
            ಅನ್ಯಾಯ ಮೆಟ್ಟಿ ನಡೆಯುವ ಅಪರೂಪ ಶಕ್ತಿಯಾ ಕೊಡು
            ನಿನ್ನ ಹೆಸರನ್ನ ಉಳಿಸುವೆ ನಾ ಕಣ್ಣೀರಿನ ಮಾತನ್ನೇ ಅಳಿಸುವೆ ನಾ
            ನೀನೇ...  ತಂದೆ ತಾಯಿ ಎಂದೂ ನೀನೇ ತಂದೆ ತಾಯಿ
            ನಮ್ಮ ಕಾಯೋ ಮಹಾಮಾಯಿ ಕರುಣಾಳು ನಿನ್ನ ಕರುಣೆ ಮುಂದೆ ಕರವು ನಾನಯ್ಯಾ
           ನೀನೇ ನೀನೇ ರಾಜ ರಾಜ ನರಸಿಂಹ ಅಹ್ಹಹ್ಹಾ ಲೋಕ ಕಾಯೋ ನೀನೇ ಹರಿಹರಬ್ರಹ್ಮ
           ದಿಕ್ಕು ನೀನಯ್ಯಾ ದಾರಿ ನೀನಯ್ಯಾ ದಾರಿ ದೀಪಾನೂ ನೀನೇ
ಕೋರಸ್ : ಯಜಮಾನ ಯಜಮಾನ ಜಗಕೆ ಒಬ್ಬನೇ ಯಜಮಾನ
--------------------------------------------------------------------------------------------------------------------------

No comments:

Post a Comment