1074. ಮರಳಿ ಗೂಡಿಗೆ (1984)

ಮರಳಿ ಗೂಡಿಗೆ ಚಿತ್ರದ ಹಾಡುಗಳು 
  1. ಹೊಸ ಬಾಳಿನ ಹೊಸ ಬಂಧನಾ 
  2. ಯಾರು ನನ್ನ ಎಂದು ಹೀಗೆ ನೋಡಲಿಲ್ಲವೋ 
  3. ವರವಾಗಿ ಬಂದೆಯಾ ಶುಭಯೋಗ ತಂದೆಯಾ 
  4. ನೀ ನುಡಿಯದಿರಲೇನು ಬಯಲಾಗಿಹುದು ಎಲ್ಲ 
ಮರಳಿ ಗೂಡಿಗೆ (1984) - ಹೊಸ ಬಾಳಿನ ಹೊಸ ಬಂಧನಾ 
ಸಂಗೀತ : ರಾಜನ್ ನಾಗೇಂದ್ರ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಜಾನಕೀ, ಎಸ್.ಪಿ.ಬಿ.

ಹೆಣ್ಣು : ಹೊಸ ಬಾಳಿನಾ ಹೊಸ ಬಂಧನಾ
           ಹೊಸ ಬಾಳಿನಾ ಹೊಸ ಬಂಧನಾ ತಂದ ಆನಂದ ಹೀತವಾಗಿದೆ
            ಕಂಡ ಕನಸೆಲ್ಲ ನಿಜವಾಗಿದೆ
ಗಂಡು : ಹೊಸ ಬಾಳಿನಾ ಹೊಸ ಬಂಧನಾ
            ಹೊಸ ಬಾಳಿನಾ ಹೊಸ ಬಂಧನಾ ತಂದ ಆನಂದ ಹೀತವಾಗಿದೆ
            ಕಂಡ ಕನಸೆಲ್ಲ ನಿಜವಾಗಿದೆ

ಹೆಣ್ಣು : ಜೊತೆಯಾಗಿ ನೀನು ಇರುವಾಗ ನನ್ನಾ ಬಾಳೆಲ್ಲಾ ಒಂದು ಸಂಗೀತ ತಾನೇ
ಗಂಡು : ಹೇಹೇ ... ಹಾ.. ಹಗಲಾದರೇನು ಇರುಳಾದರೇನು ಬದುಕೆಲ್ಲ ಇನ್ನೂ ಉಲ್ಲಾಸ ತಾನೇ
ಹೆಣ್ಣು : ಕಹಿಯೆಂಬ ಮಾತಿಲ್ಲಾ    ಗಂಡು : ಸಿಹಿ ಇನ್ನೂ ಬಾಳೆಲ್ಲಾ
ಇಬ್ಬರು : ಸಂತೋಷ ಸಂತೋಷ ಎಂದೆಂದೂ
ಗಂಡು : ಹೊಸ ನೋಟಕೆ ಹೊಸ ಸ್ನೇಹಕೆ
            ಹೊಸ ನೋಟಕೆ ಹೊಸ ಸ್ನೇಹಕೆ ಸೋತೆ ನಾನಿಂದು ಸಂಗಾತಿಯೇ
            ನನ್ನ ಬಾಳಿನ್ನೂ ನಿನಗಾಗಿಯೇ
ಹೆಣ್ಣು : ಹೊಸ ಬಾಳಿನಾ ಹೊಸ ಬಂಧನಾ ತಂದ ಆನಂದ ಹೀತವಾಗಿದೆ
             ಕಂಡ ಕನಸೆಲ್ಲ ನಿಜವಾಗಿದೆ 

ಗಂಡು : ಸೊಗಸಾದ ನಿನ್ನ ಕಣ್ಣಲ್ಲಿ ನನ್ನ ಹೊಸ ಬಾಳಿನಾಸೆ ನಾ ಕಂಡೆ ಚಿನ್ನ .. 
ಹೆಣ್ಣು : ಆಹ್ಹಾ.. ಹ್ಹಾ .. ಲಲ್ಲಲ್ಲ
           ಹಿತವಾದ ನಿನ್ನ ಸವಿ ಮಾತು ಚೆನ್ನ ನನ್ನ ಬಯಕೆ ಮೊಗ್ಗು ಹೂವಾಯ್ತು ಚೆನ್ನ 
ಗಂಡು : ಈ ನಮ್ಮ ಅನುರಾಗ          ಹೆಣ್ಣು : ನೀ ತಂದ ಶುಭಯೋಗ 
ಇಬ್ಬರು : ಸಂತೋಷ ಸಂತೋಷ ಎಂದೆಂದೂ
ಹೆಣ್ಣು : ಹೊಸ ರಾಗಕೆ ಹೊಸ ತಾಳಕೆ
            ಹೊಸ ರಾಗಕೆ ಹೊಸ ತಾಳಕೆ ನನ್ನ ಮನಸಿಂದು ಓಲಾಡಿದೇ
           ನನ್ನ ಬದಕೊಂದು ಹಾಡಾಗಿದೆ
ಗಂಡು: ಹೊಸ ಬಾಳಿನಾ (ಆಆಆ) ಹೊಸ ಬಂಧನಾ (ಆಆಆ)
             ತಂದ ಆನಂದ ಹೀತವಾಗಿದೆ (ಆಆಆ ) ಆಆಆ..ಆಹ್ಹಾಹಾ
--------------------------------------------------------------------------------------------------------------------------

ಮರಳಿ ಗೂಡಿಗೆ (1984) - ಯಾರು ನನ್ನ ಎಂದು ಹೀಗೆ ನೋಡಲಿಲ್ಲವೋ 
ಸಂಗೀತ : ರಾಜನ್ ನಾಗೇಂದ್ರ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಜಾನಕೀ, 

ಯಾರು ನನ್ನ ಎಂದೂ ಹೀಗೆ ನೋಡಲಿಲ್ಲವೋ
ನೋಟದಲ್ಲಿ ಯಾರು ಹೀಗೆ ಕೊಲ್ಲಲಿಲ್ಲವೋ ಚೆಲುವಾ ಬಲ್ಲೆಯಾ
ನನ್ನಾಣೆ ಸುಳ್ಳಲ್ಲ ಈ ದೇಹ ನಿನ್ನದು
ನೀ ನನ್ನ ಮರೆತಾಗ ಈ ಜೀವ ಜೀವ ನಿಲ್ಲದೂ
ಯಾರು ನನ್ನ ಎಂದೂ ಹೀಗೆ ನೋಡಲಿಲ್ಲವೋ
ನೋಟದಲ್ಲಿ ಯಾರು ಹೀಗೆ ಕೊಲ್ಲಲಿಲ್ಲವೋ ಚೆಲುವಾ ಬಲ್ಲೆಯಾ
ನನ್ನಾಣೆ ಸುಳ್ಳಲ್ಲ ಈ ದೇಹ ನಿನ್ನದು
ನೀ ನನ್ನ ಮರೆತಾಗ ಈ ಜೀವ ಜೀವ ನಿಲ್ಲದೂ

ಇರುಳೆಲ್ಲಾ ಈ ಕಣ್ಣು ಮುಚ್ಚಲಿಲ್ಲವೋ ಹೊರಳಾಡಿ ಹೊರಳಾಡಿ ನಿದ್ದೆ ಇಲ್ಲವೋ 
ಸಂಗಾತಿಯಾ ಬಳಿ ಸೇರುವ ಬಯಕೆ ಬಲೆ ಬಿಸಿ ಸೆರೆ ಹಾಕಿತು
ಮೆದುವಾದ ತಲೆದಿಂಬು ಕಲ್ಲಿನಂತಾಯಿತು
ತಂಗಾಳಿ ಬಿಸಿಯಾಗಿ ಬೆವರು ಬಂದಾಯ್ತು
ಹಿತವಾಗಿ ಮೈ ಹೂವಾಗುತ ಚಪಲ ಎದೆಯಲಿ ತೇಲಾಡಿತು
ಅದಕೆ ಬಂದೆ ನಾ.. ನಾ.. ನಾ.. ನಾ.. ಅಯ್ ಲವ್ ಯೂ ಅಯ್ ಲವ್ ಯೂ
ಒಮ್ಮೆ ನನ್ನಾ ಹೊನ್ನ ಮೈಯ ಮುಟ್ಟಬಾರದೇ
ಕೆನ್ನೆ ಮೇಲೆ ಕೆನ್ನೆ ಇಟ್ಟು ಒತ್ತಬಾರದೇ ಚೆಲುವಾ ಈಗಲೇ
ನಿನ್ನಿಂದ ಈ ವಿರಹ ನಾ ತಾಳಲಾರೆನು
ಇನ್ನೆಂದು ನಿನ್ನಿಂದ ನಾ ದೂರ ಹೋಗೆನು
ಯಾರು ನನ್ನ ಎಂದೂ ಹೀಗೆ ನೋಡಲಿಲ್ಲವೋ
ನೋಟದಲ್ಲಿ ಯಾರು ಹೀಗೆ ಕೊಲ್ಲಲಿಲ್ಲವೋ ಚೆಲುವಾ ಬಲ್ಲೆಯಾ
ನನ್ನಾಣೆ ಸುಳ್ಳಲ್ಲ ಈ ದೇಹ ನಿನ್ನದು
ನೀ ನನ್ನ ಮರೆತಾಗ ಈ ಜೀವ ಜೀವ ನಿಲ್ಲದೂ
ತರತತ ತರತತ ತರತತ ತರತತ

ಮೃದುವಾದ ಹಸಿರಾದ ಹುಲ್ಲು ಹಾಸಿಗೆ ತಂಪಾದ ಹಿತವಾದ ಗಾಳಿ ಬೀಸಿದೆ
ನನ ಸೇರದೇ ಸುಖ ಹೊಂದದೆ ಸಮಯ ಹೀಗೇಕೆ ನೀ ನೂಕುವೇ
ಹೊಸ ಸ್ನೇಹ ಹೊಸ ಆಸೆ ಸೇರಿ ಬಂತಲ್ಲ
ಹೊಸ ಮೋಹ ಸವಿಯಾದ ನೋವು ತಂತಲ್ಲ
ಹೊಸ ಲೋಕವ ಹೊಸ ನಾಕವ ನಿನಗೇ ನಿಂತಲ್ಲೇ ನಾ ತೋರುವೇ
ಅದಕೆ ಬಂದೆ ನಾ.. ಐ ಲೈಕ್ ಯೂ
ಬೇಡ ಎಂದು ದೂರ ತಳ್ಳು ಕೋಪ ಮಾಡೆನು
ಏನೇ ಹೇಳು ಏನೇ ಮಾಡು ನಾನು ಕೇಳೆನು
ನನ್ನಾ ಗೆಳೆಯನೇ ನಿನ್ನನ್ನು ಕಂಡಂದೇ ನಾ ಸೋತು ಹೋದೆನು
ನಿನ್ನಿಂದ ಹುಚ್ಚಾಗಿ ಓಡೋಡಿ ಬಂದೆನು
ಯಾರು ನನ್ನ ಎಂದೂ ಹೀಗೆ ನೋಡಲಿಲ್ಲವೋ
ನೋಟದಲ್ಲಿ ಯಾರು ಹೀಗೆ ಕೊಲ್ಲಲಿಲ್ಲವೋ ಚೆಲುವಾ ಬಲ್ಲೆಯಾ
ನನ್ನಾಣೆ ಸುಳ್ಳಲ್ಲ ಈ ದೇಹ ನಿನ್ನದು
ನೀ ನನ್ನ ಮರೆತಾಗ ಈ ಜೀವ ಜೀವ ನಿಲ್ಲದೂ
ಯಾರು ನನ್ನ ಎಂದೂ ಹೀಗೆ ನೋಡಲಿಲ್ಲವೋ
--------------------------------------------------------------------------------------------------------------------------

ಮರಳಿ ಗೂಡಿಗೆ (1984) - ವರವಾಗಿ ಬಂದೆಯಾ ಶುಭಯೋಗ ತಂದೆಯಾ 
ಸಂಗೀತ : ರಾಜನ್ ನಾಗೇಂದ್ರ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ.

ವರವಾಗಿ ಬಂದೆಯಾ ಶುಭಯೋಗ ತಂದೆಯಾ ಬದುಕು ಬಂಗಾರ ಮಾಡಿ
ಪ್ರತಿ ನಿಮಿಷ ಹೊಸ ಹರುಷ ಕಂದಾ ನೀ ತಂದೆಯಾ
ವರವಾಗಿ ಬಂದೆಯಾ ಶುಭಯೋಗ ತಂದೆಯಾ ಬದುಕು ಬಂಗಾರ ಮಾಡಿ 
ಪ್ರತಿ ನಿಮಿಷ ಹೊಸ ಹರುಷ ಕಂದಾ ನೀ ತಂದೆಯಾ
ವರವಾಗಿ ಬಂದೆಯಾ ಶುಭಯೋಗ ತಂದೆಯಾ ಬದುಕು ಬಂಗಾರ ಮಾಡಿ

ತಾಯ್ ನುಡಿಯೇ ಜೀವ ತಾಯಿಯೇ  ನಿನ್ನ ದೈವ
ಈ ನಿಜವಾ ಅರಿತು ಎಂದೂ ನಡೆದಾಗ ಬಾಳೆ ಸ್ವರ್ಗ
ಪ್ರೀತಿಯಿಂದಲಿ ಜನರ ಸ್ನೇಹಗಳಿಸೋ ಕಂದ 
ಎಲ್ಲರಲಿ ಪ್ರೇಮದಿಂದ ಬೆರೆತಾಗ ಬದುಕೇ ಚೆಂದ
ಬೆರೆತಾಗ ಬದುಕೇ ಚೆಂದ 
ವರವಾಗಿ ಬಂದೆಯಾ ಶುಭಯೋಗ ತಂದೆಯಾ ಬದುಕು ಬಂಗಾರ ಮಾಡಿ 
ಪ್ರತಿ ನಿಮಿಷ ಹೊಸ ಹರುಷ ಕಂದಾ ನೀ ತಂದೆಯಾ
ವರವಾಗಿ ಬಂದೆಯಾ ಶುಭಯೋಗ ತಂದೆಯಾ ಬದುಕು ಬಂಗಾರ ಮಾಡಿ 

ಇಂದು ನೀ ಪುಟ್ಟ ಮಗುವೂ ನಾಳೆ ಅರುಳುವ ಹೂವೂ 
ನೀ ಹಿರಿಯನಾದ ಮೇಲೆ ನಮಗೆ ನೆರಳಾಗಿರೂ 
ದೇಶ ಭಕ್ತಿಯ ಕಲಿತು ಧೀರನಾಗುತ ಬೆಳೆದು 
ತಾಯ್ನಾಡಿಗಾಗಿ ಜೀವ ಮುಡಿಪಾಗಿ ನೀ ಇಡು 
ಮುಡಿಪಾಗಿ ನೀ ಇಡು 
ವರವಾಗಿ ಬಂದೆಯಾ ಶುಭಯೋಗ ತಂದೆಯಾ ಬದುಕು ಬಂಗಾರ ಮಾಡಿ
ಪ್ರತಿ ನಿಮಿಷ ಹೊಸ ಹರುಷ ಕಂದಾ ನೀ ತಂದೆಯಾ
ವರವಾಗಿ ಬಂದೆಯಾ ಶುಭಯೋಗ ತಂದೆಯಾ ಬದುಕು ಬಂಗಾರ ಮಾಡಿ 
--------------------------------------------------------------------------------------------------------------------------

ಮರಳಿ ಗೂಡಿಗೆ (1984) - ನೀ ನುಡಿಯದಿರಲೇನೋ ಬಯಲಾಗಿಹುದು ಎಲ್ಲಾ 
ಸಂಗೀತ : ರಾಜನ್ ನಾಗೇಂದ್ರ ಸಾಹಿತ್ಯ : ಕೆ.ಎಸ್.ನಿಸಾರ್ ಮಹಮ್ಮದ ಗಾಯನ : ಎಸ್.ಪಿ.ಬಿ.

ನೀ ನುಡಿಯದಿರಲೇನು ಬಯಲಾಗಿಹುದು ಎಲ್ಲ
ಕಣ್ಣಂಚಿನಾ ಕೊನೆಯಾ ಭಾವದಲ್ಲಿ ಬಗೆ ನೋವಕ್ಕೆ
ಬಳಲಿರುವ ಮೊಗವಿಹುದು ಕಾರ್ಮೋಡದಾಗಸದ ರೀತಿಯಲ್ಲಿ
ನೀ ನುಡಿಯದಿರಲೇನು ಬಯಲಾಗಿಹುದು ಎಲ್ಲ 

ಬಾಡಿರುವ ಮೊಗದಲ್ಲಿ ಕಳೆಯಿರದ ಕಣ್ಣಲ್ಲಿ 
ನಿನ್ನ ಸಿರಿವಂತಿಕೆಯಾ ಕಾಣುವಾಸೇ... ಹ್ಹಾಂ.. 
ಬಾಡಿರುವ ಮೊಗದಲ್ಲಿ ಕಳೆಯಿರದ ಕಣ್ಣಲ್ಲಿ 
ನಿನ್ನ ಸಿರಿವಂತಿಕೆಯಾ ಕಾಣುವಾಸೇ... ಹ್ಹಾಂ.. 
ಸಾರವಿರದ ತುಟಿಯಲ್ಲಿ ತೂಗಿರುವ ನಗೆಯಲ್ಲಿ 
ಚೆಲುಗನಸಿರುಳುಗಳಾ ಹುಡುಕುವಾಸೇ 
ನೀ ನುಡಿಯದಿರಲೇನು ಬಯಲಾಗಿಹುದು ಎಲ್ಲ 

ಅರೆಘಳಿಗೆ ಸುಖ ಸ್ವಪ್ನ ಬರಲಾರದೆ ನಮ್ಮೊಡನೇ 
ವಾತ್ಸವತೇ ಗಹಗಹಿಸಿ  ಸೆಳೆಯಲಿಹುದು.. ಹ್ಹಾಂ... 
ಅರೆಘಳಿಗೆ ಸುಖ ಸ್ವಪ್ನ ಬರಲಾರದೆ ನಮ್ಮೊಡನೇ 
ವಾತ್ಸವತೇ ಗಹಗಹಿಸಿ  ಸೆಳೆಯಲಿಹುದು.... 
ಮರೆತಲ್ಲಿ ಕೊನೆಗೊಮ್ಮೆ ಮನ ಬಿಚ್ಚಿ ನಕ್ಕು ಬೀಡು 
ಬೇರೆ ಹಾದಿಯ ನಾವೂ ಹಿಡಿಯಬಹುದೂ... 
ನೀ ನುಡಿಯದಿರಲೇನು ಬಯಲಾಗಿಹುದು ಎಲ್ಲ
ಕಣ್ಣಂಚಿನಾ ಕೊನೆಯಾ ಭಾವದಲ್ಲಿ ಬಗೆ ನೋವಕ್ಕೆ
ಬಳಲಿರುವ ಮೊಗವಿಹುದು ಕಾರ್ಮೋಡದಾಗಸದ ರೀತಿಯಲ್ಲಿ
ನೀ ನುಡಿಯದಿರಲೇನು ಬಯಲಾಗಿಹುದು ಎಲ್ಲ 
--------------------------------------------------------------------------------------------------------------------------

No comments:

Post a Comment