ನೆಂಟರೋ ಗಂಟು ಕಳ್ಳರೋ ಚಿತ್ರದ ಹಾಡುಗಳು
- ನನ್ನ ಆಸೆ ನೂರೆಂಟು ನಿನ್ನ ಆಸೆ ಏನುಂಟು
- ಮನಸೇ ಮನಸೇ ಬಾಳು ಸುಂದರ
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಗೀತಪ್ರಿಯ ಗಾಯನ : ಎಸ್.ಪಿ.ಬಿ., ಎಸ್. ಜಾನಕೀ
ಗಂಡು : ನನ್ನ ಆಸೆ ನೂರೆಂಟು ನಿನ್ನ ಆಸೆ ಏನುಂಟು
ನನ್ನ ಆಸೆ ನೂರೆಂಟು ನಿನ್ನ ಆಸೆ ಏನುಂಟು
ಕಣ್ಣು ಕಣ್ಣು ಕೂಡಿ ಕೂಡಿ
ಕಣ್ಣು ಕಣ್ಣು ಕೂಡಿ ಕೂಡಿ ಆಡೋ ಆಟ ನೋಡೋ ನೋಟ ನೂರಾಹದಿನೆಂಟೂ
ಹೆಣ್ಣು : ನನ್ನ ಆಸೆ ನೂರೆಂಟು ನಿನ್ನ ಆಸೆ ಏನುಂಟು
ನನ್ನ ಆಸೆ ನೂರೆಂಟು ನಿನ್ನ ಆಸೆ ಏನುಂಟು
ಕಣ್ಣು ಕಣ್ಣು ಕೂಡಿ ಕೂಡಿ
ಕಣ್ಣು ಕಣ್ಣು ಕೂಡಿ ಕೂಡಿ ಆಡೋ ಆಟ ನೋಡೋ ನೋಟ ನೂರಾಹದಿನೆಂಟೂ
ಗಂಡು : ನನ್ನೇಕೇ ಕುಟುಕಿದೇ`ನೀ ಕಣ್ಣು ಮಿಟುಕಿ
ನಾ ಸಿಕ್ಕೊಂಡೇ ನಿನ್ನ ಕೈಗೇ ಹೀಗೆ ಏಟುಕಿ
ಹೆಣ್ಣು : ನೀ ಚೆಲ್ಲಾಟ ಆಡಬ್ಯಾಡ ನನ್ನ ಕೆಣಕಿ
ಗಂಡು : ನಿನಗಾಗಿ ಬೇರೆ ಮನೆ ಬೇಕೇ ಹುಡುಗಿ
ನನ್ನ ಮನದಲ್ಲೇ ಬಿಡತೀಯಾ ಹೂಡು ಬೆಡಗಿ
ಹೆಣ್ಣು : ನನ್ನ ಹಿಂದೆ ಹಿಂದೆ ಏಕೆ ಬರುವೇ ನನ್ನ ಹುಡುಕಿ ನನ್ನ ಮನಸ್ ಕಲಕಿ
ಗಂಡು : ಯೋಚಿಸಿ.. ಪ್ರೀತಿಸಿ.. ಯಾಚಿಸೀ ನಿನ್ನ ಹೆಸರನ್ನೇ ಜಪಿಸಿದ್ದು ಉಂಟು
ನನ್ನ ಆಸೆ ನೂರೆಂಟು ನಿನ್ನ ಆಸೆ ಏನುಂಟು
ಅಂದು ಇಂದು ಇಂದು ಅಂದು
ಅಂದು ಇಂದು ಇಂದು ಅಂದು ಮುಂದು ಎಂದೂ ಎಂದು ಎಂದೂ
ನಂಟು ನಮ್ಮದುಂಟು
ಹೆಣ್ಣು : ಲಾ.. ಲಾ..ಲಾ..ಲಾ..ಲಲಲಲ ಲಾ..ಲಾ..ಲಾ ಲಲಲಲ ಲಾ
ಹೀಗೆಲ್ಲಾ ಆಡಿ ನನ್ನ ಕೆಣಕಬೇಡಾ ನನ್ನ ಮನಸಿಗೇ ನೀ ಕನ್ನ ಕೊರೆಯಬೇಡಾ
ಗಂಡು : ನೀ ಕನಸಲ್ಲಿ ಎಲ್ಲಾನೂ ಮೆಲ್ಲಬೇಡಾ
ಹೆಣ್ಣು : ಎಲ್ಲೆಯಾ ನೀ ಇಲ್ಲಿ ಮೀರಬೇಡಾ ನಿನ್ನ ವಿಷಯವನ್ನು ಇಲ್ಲೇ ಬಿಸಿ ಮಾಡಬೇಡಾ
ಗಂಡು : ನೀ ಕಬ್ಬಿಣ ಕಾದಿದೇ ಎನ್ನಬೇಡಾ ಹಾಗನ್ನಬೇಡಾ
ಹೆಣ್ಣು : ಆಗಲೂ ಈಗಲೂ ನಿನ್ನ ಈ ನಾ ತುಂಟಾಟ ಕಂಡಿದ್ದೂ ಉಂಟು
ನನ್ನ ಆಸೆ ನೂರೆಂಟು ನಿನ್ನ ಆಸೆ ಏನುಂಟು
ಅಲ್ಲೇ ಇದ್ರೂ (ಊಹೂಂಹೂಂ) ಇಲ್ಲೇ ಇದ್ರೂ (ಹ್ಹಾಹ್ಹಾಹಾ )
ಅಲ್ಲೇ ಇದ್ರೂ ಇಲ್ಲೇ ಇದ್ರೂ ಎಲ್ಲೇ ಹೋದ್ರೂ ಎಲ್ಲೇ ಬಂದ್ರೂ ಬಿಡಲಾರದ ನಂಟೂ
--------------------------------------------------------------------------------------------------------------------------
ನೆಂಟರೋ ಗಂಟು ಕಳ್ಳರೋ (೧೯೭೯) - ಮನಸೇ ಮನಸೇ ಬಾಳು ಸುಂದರ
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಗೀತಪ್ರಿಯ ಗಾಯನ : ಎಸ್.ಪಿ.ಬಿ., ಎಸ್. ಜಾನಕೀ
ಮನಸೇ ಮನಸೇ ಬಾಳು ಸುಂದರ ಕವಿತೆ ರಸಕವಿತೆ
ವೀರಸವೇ ಇಲ್ಲಿ ಸರಸವೂ ಈ ಆಟವೆಂದೂ ಆನಂದವೂ... ಆನಂದವೂ
ಮನಸೇ ಮನಸೇ
ನಾನಾಗಿ ಓಡಿ ಬಂದೇ ನೀ ದೂರ ಹೋದರೂ ಕಣ್ಣಲ್ಲಿ ಕೂಡಿ ಕನಸಲ್ಲಿ ಕಾಡಿ
ನಾನಾಗಿ ಓಡಿ ಬಂದೇ ನೀ ದೂರ ಹೋದರೂ ಕಣ್ಣಲ್ಲಿ ಕೂಡಿ ಕನಸಲ್ಲಿ ಕಾಡಿ
ನೆನಪಲ್ಲಿ ನಿಂತೇ ನೀ ಏನೇನೋ ಮೋಡಿ ಮಾಡಿ
ನೆನಪಲ್ಲಿ ನಿಂತೇ ನೀ ಏನೇನೋ ಮೋಡಿ ಮಾಡಿ
ಈ ಮೋಹ ದಾಹವೆಲ್ಲೋ ಸಾಕಾಗದಾಗಿದೆ
ಮನಸೇ ಮನಸೇ ಬಾಳು ಸುಂದರ ಕವಿತೆ ರಸಕವಿತೆವೀರಸವೇ ಇಲ್ಲಿ ಸರಸವೂ ಈ ಆಟವೆಂದೂ ಆನಂದವೂ... ಆನಂದವೂ
ನೀ ಬಿಟ್ಟ ಬಾಣದಿಂದ ನಾ ಸೋತು ಹೋದರೂ..
ಒಲವೊಂದು ಇರಲೂ ಸೋಲಲ್ಲೇ ಗೆಲ್ಲುವು
ನೀ ಬಿಟ್ಟ ಬಾಣದಿಂದ ನಾ ಸೋತು ಹೋದರೂ..
ಒಲವೊಂದು ಇರಲೂ ಸೋಲಲ್ಲೇ ಗೆಲ್ಲುವು
ಸಂತೋಷ ಕಂಡೇ ನಾ ಸಂಕೋಚ ದೂರ ದೂಡಿ
ಸಂತೋಷ ಕಂಡೇ ನಾ ಸಂಕೋಚ ದೂರ ದೂಡಿ
ಈ ಆಟ ಪ್ರಿತಿಯ ಪಂದ್ಯಾಟವಾಗಿದೇ
ಮನಸೇ ಮನಸೇ ಬಾಳು ಸುಂದರ ಕವಿತೆ ರಸಕವಿತೆ
ವೀರಸವೇ ಇಲ್ಲಿ ಸರಸವೂ ಈ ಆಟವೆಂದೂ ಆನಂದವೂ... ಆನಂದವೂ
ಮನಸೇ ಮನಸೇ
--------------------------------------------------------------------------------------------------------------------------
No comments:
Post a Comment