ತಪ್ಪಿದ ತಾಳ ಚಿತ್ರದ ಹಾಡುಗಳು
- ತಪ್ಪಿದ ತಾಳಗಳು
- ಯಾತರ ವಿಚಿತ್ರ ಬಾಳು
- ಒಲವಿಂದ ನಾಳೆ ಮನವ ತುಂಬಲು
ಸಂಗೀತ : ವಿಜಯ ಭಾಸ್ಕರ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ.
ತಪ್ಪಿದ ತಾಳಗಳು ಗುರಿ ತಿಳಿಯದ ನಡತೆಗಳೂ
ಇದು ಬಾಳಿನ ಕಂಟಕವೂ ವಿಧಿ ಹೂಡಿದ ನಾಟಕವೂ
ದೊರಕಿದ ಲಾಭಗಳೋ ಇವ ಗಳಿಸಿದ ಪಾಪಗಳೋ
ಆಸೆಯ ರಾಗಗಳೋ ಬರೀ ಅಪಶೃತಿ ಗೀತೆಗಳೂ
ತಪ್ಪಿದ ತಾಳಗಳು ಗುರಿ ತಿಳಿಯದ ನಡತೆಗಳೂ
ಇದು ಬಾಳಿನ ಕಂಟಕವೂ ವಿಧಿ ಹೂಡಿದ ನಾಟಕವೂ
ಸತಿಯಾಗಿ ತಾಯಾಗೋ ಗರತಿ ಹಣಕ್ಕಾಗಿ ಮೈ ಚಾಚೋ ಗೆಳತೀ
ಉಸಿರಾಡೋ ಈ ಬಾಳ ಚಿಂತೇ ಸತಿ ಶೀಲ ಮಾರಾಟವಂತೇ
ನಾನಾ ಇಂತೇ ನೋವುಗಳೂ ನಾನಾ ಪಾಪದ ಆಟಗಳೋ
ಇದೇ .. ವಿಧಿ.. ಗತಿಯೇನೂ ಎಂತೂ
ತಪ್ಪಿದ ತಾಳಗಳು ಗುರಿ ತಿಳಿಯದ ನಡತೆಗಳೂ
ಇದು ಬಾಳಿನ ಕಂಟಕವೂ ವಿಧಿ ಹೂಡಿದ ನಾಟಕವೂ
ದೊರಕಿದ ಲಾಭಗಳೋ ಇವ ಗಳಿಸಿದ ಪಾಪಗಳೋ
ಆಸೆಯ ರಾಗಗಳೋ ಬರೀ ಅಪಶೃತಿ ಗೀತೆಗಳೂ
ಇವರಂಥ ನೂರಾರು ಜನರೂ ನಾಡಲ್ಲಿ ಎಲ್ಲೆಲ್ಲೂ ಇಹರೂ
ಒಳಗುಟ್ಟು ಬಯಲಾಗೋ ತನಕ ಇವನೊಬ್ಬ ಮೇಧಾವಿ ನಾಯಕ
ಇವ ಮಾಡೋ ಪಾಪಗಳೂ ಜನಕೆಲ್ಲಾ ಪಾಠಗಳೂ

--------------------------------------------------------------------------------------------------------------------------
ತಪ್ಪಿದ ತಾಳ (೧೯೭೮) - ಯಾತರ ವಿಚಿತ್ರ ಬಾಳು
ಸಂಗೀತ : ವಿಜಯ ಭಾಸ್ಕರ ಸಾಹಿತ್ಯ : ಹುಣುಸೂರು ಕೃಷ್ಣಪೂರ್ತಿ, ಗಾಯನ : ಎಸ್.ಪಿ.ಬಿ.
ಉಂ ... ತೂರುತ್ತೂತೂ...
ಯಾತರ ವಿಚಿತ್ರ ಬಾಳೂ ಹ್ಹಾ..
ಯಾತರ ವಿಚಿತ್ರ ಬಾಳೂ ಯಾತಕ್ಕಿಂತ ಜನ್ಮ ಕೊಟ್ಟಳೋ ಅಮ್ಮಾ...
ಯಾರಿಗೇನು ಉಪಯೋಗ ಉಂಟಾ ಯ ತಮ್ಮಾ
ಇದಕೆಲ್ಲಾ ಕಳವಳ ಯಾಕೋ.. ಆ.. ಅಹ್ಹಹ್ಹಹ್ಹಾ
ಇದಕೆಲ್ಲಾ ಕಳವಳ ಯಾಕೋ..
ಯಾತರ ವಿಚಿತ್ರ ಬಾಳೂ... ಯಾತರ ವಿಚಿತ್ರ ಬಾಳೂ
ನೂರಾರು ನೋವಿನ ಸಂತೇ ಮಾರೋದು ಚಿಂತೆಯ ಕಂತೆ
ಲೋಕದಾ ಅಗತಿ ಇದೇನಂತೆ ಹೆದರದಂಥ ನಾವೇ ಮೇಲಂತೆ
ಆಟವ ಆಡುವ ತನಕ ಆಡೋ.. ಹ್ಹೂ ಆಡಿ ಆಟವ ಮುಗಿಸಿ ಓಡೋ ..
ಇದಕೆಲ್ಲಾ ಕಳವಳ ಯಾಕೋ.. ಯಾಕೋ...ಇದಕೆಲ್ಲಾ ಕಳವಳ ಯಾಕೋ..
ಯಾತರ ವಿಚಿತ್ರ ಬಾಳೂ... ಯಾತರ ವಿಚಿತ್ರ ಬಾಳೂ
ಓದುವಾಸೆ ಓಡಿ ಹೋಯ್ತು.. ಓಡಿಹೋಯ್ತು...
ದುಡಿಯೇ ದಾರಿ ದೂರಾ ಆಯಿತೋ... ಅಹ್ಹಹ್ಹ ..
ಬದುಕೋ ರೀತಿ ನೀತಿ ತೋರದೇ ಬಯಸಿದಂತೇ ದಾರಿ ಹಿಡಿದೇ
ಇದಕ್ಕೇ ಕಾರಣ ಕೇಳೋ ತಮ್ಮಾ.. ಹಿಂದೆ ಮಾಡಿದ ಪಾಪದ ಕರ್ಮಾ
ಇದಕೆಲ್ಲಾ ಕಳವಳ ಯಾಕೋ.. ಹೇ ...ಇದಕೆಲ್ಲಾ ಕಳವಳ ಯಾಕೋ..
ಯಾತರ ವಿಚಿತ್ರ ಬಾಳೂ... ಯಾತರ ವಿಚಿತ್ರ ಬಾಳೂ... ಓಓಓ...
ನಾನಂತೇ ರೌಡಿ ಬೀಡಿ ಯ್ಯಾ... ಯ್ಯಯ್ಯ ಯಾಕದೇನು ಇಷ್ಟು ದಿನ ನೋಡಿ
ನಾಡಲ್ಲಿ ಯೋಗ್ಯರು ಯಾರೋ... ಯಾರೋ... ಅಹ್ಹಹ್ಹ... ಎಲ್ಲರೂ ಮೋಸಗಾರರರು
ಸಮಯ ಸಿಕ್ಕಿದರೇ ದೋಚಿಕೋ... ದಕ್ಕದೇ ಹೋದರೇ ದೂರ ಹೋಗಿಕೋ
ಇದಕೆಲ್ಲಾ ಕಳವಳ ಯಾಕೋ.. ಓಓ ...ಇದಕೆಲ್ಲಾ ಕಳವಳ ಯಾಕೋ.. ಹೇಹೇ...
ಯಾತರ ವಿಚಿತ್ರ ಬಾಳೂ... ಯಾತರ ವಿಚಿತ್ರ ಬಾಳೂ
ಯಾತಕ್ಕಿಂತ ಜನ್ಮ ಕೊಟ್ಟಳೋ ಅಮ್ಮಾ... ಯಾತಕೋಯಾರಿಗೇನು ಉಪಯೋಗ ಉಂಟಾ ಯ ತಮ್ಮಾ
ಇದಕೆಲ್ಲಾ ಕಳವಳ ಯಾಕೋ.. ಆ.. ಅಹ್ಹಹ್ಹಹ್ಹಾ
ಇದಕೆಲ್ಲಾ ಕಳವಳ ಯಾಕೋ..ಹೂಹೂಹೂ
ಯಾತರ ವಿಚಿತ್ರ ಬಾಳೂ... ಯಾತರ ವಿಚಿತ್ರ ಬಾಳೂ
--------------------------------------------------------------------------------------------------------------------------
ತಪ್ಪಿದ ತಾಳ (೧೯೭೮) - ಒಲವಿಂದ ನಲ್ಲೇ ಮನವ ತುಂಬಲು
ಸಂಗೀತ : ವಿಜಯ ಭಾಸ್ಕರ ಸಾಹಿತ್ಯ : ಹುಣುಸೂರು ಕೃಷ್ಣಪೂರ್ತಿ, ಚಿ.ಉದಯಶಂಕರ ಗಾಯನ : ವಾಣಿಜಯರಾಂ
ಒಲವಿಂದ ನಲ್ಲೇ ಮನವ ತುಂಬಲು ಗೆಲುವಿಂದ ನಲ್ಲಾ ಮಡಿಲ ತುಂಬಿದಾ
ಉಲ್ಲಾಸ ಸಂತೋಷವೂ ಜೋಗುಳ ಹಾಡಿರಲು

ಮದುವೆಯು ಮುಗಿದು ಮಕ್ಕಳ ಪಡೆದು ಸುಖ ಕಾಣುವುದೂ ಎಲ್ಲರ ಬಾಳು
ಮಕ್ಕಳ ಪಡೆದು ಮದುವೆಯು ನಡೆದು ಸುಖ ನೋಡಲಿಗೆ ಇವಳ ಬಾಳು
ದೇವರಿಲ್ಲಿ... ಆಆಆ...ಆಆಆ ದೇವರು ವರವ ನೀಡುವ ಏನುವಾ
ನಿಜ ನುಡಿವೇ ಕೈ ಹಿಡಿದೇ ಸುಖ ತಂದೇ
ಒಲವಿಂದ ನಲ್ಲೇ ಮನವ ತುಂಬಲು ಗೆಲುವಿಂದ ನಲ್ಲಾ ಮಡಿಲ ತುಂಬಿದಾ
ಹರಿಯುವ ನೀರೂ ಕೆಸರಾಗಿರಲೀ ಪೂಜ್ಯರೂ ಬಂದು ಗಂಗೆ ಎನಲಿ
ಒಳ್ಳೆಯ ಕಾಲ ಬರುವುದು ಅಂದೇ ಕುಡಿವರೂ ಎಲ್ಲಾ ಪಾವನವೆಂದೇ
ಮೌನದೀ... ಆಆಆ...ಆಆಆ... ಮುಗಿಯ ಹಾಗೇ ನಾನಿರುವಾಗ
ಆಡಿಸಿದೇ ಹಾಡಿಸಿದೇ ಒಂದಾಗಿ
ಒಲವಿಂದ ನಲ್ಲೇ ಮನವ ತುಂಬಲು ಗೆಲುವಿಂದ ನಲ್ಲಾ ಮಡಿಲ ತುಂಬಿದಾ
ಕನಸುಗಳೆಲ್ಲಾ ನನಸಾದಂತೇ ಬಾಡಿದ ಲತೆಯೂ ಹೂವು ಕೊಡುವಂತೇ
ಬಂಜೆಯ ಬಾಳು ಬೆಳಕಾದಾಗ ಜೀವನವೆಲ್ಲಾ ಹೊಸ ಹೊಸ ರಾಗ
ತಾಯಿಯಾ... ಆಆಆ...ಆಆಆ.. ತಾಯಿಯ ಬಯಕೆ ತುಂಬಿರೇ ಮನಕೆ
ಹೊಸತನವ ನನಗೆಂದೇ ನೀ ತಂದೆ
ಒಲವಿಂದ ನಲ್ಲೇ ಮನವ ತುಂಬಲು ಗೆಲುವಿಂದ ನಲ್ಲಾ ಮಡಿಲ ತುಂಬಿದಾ
ಉಲ್ಲಾಸ ಸಂತೋಷವೂ ಜೋಗುಳ ಹಾಡಿರಲೂ....
--------------------------------------------------------------------------------------------------------------------------
ಕನಸುಗಳೆಲ್ಲಾ ನನಸಾದಂತೇ ಬಾಡಿದ ಲತೆಯೂ ಹೂವು ಕೊಡುವಂತೇ
ಬಂಜೆಯ ಬಾಳು ಬೆಳಕಾದಾಗ ಜೀವನವೆಲ್ಲಾ ಹೊಸ ಹೊಸ ರಾಗ
ತಾಯಿಯಾ... ಆಆಆ...ಆಆಆ.. ತಾಯಿಯ ಬಯಕೆ ತುಂಬಿರೇ ಮನಕೆ
ಹೊಸತನವ ನನಗೆಂದೇ ನೀ ತಂದೆ
ಒಲವಿಂದ ನಲ್ಲೇ ಮನವ ತುಂಬಲು ಗೆಲುವಿಂದ ನಲ್ಲಾ ಮಡಿಲ ತುಂಬಿದಾ
ಉಲ್ಲಾಸ ಸಂತೋಷವೂ ಜೋಗುಳ ಹಾಡಿರಲೂ....
--------------------------------------------------------------------------------------------------------------------------
No comments:
Post a Comment