1081. ಮುಗಿಲ ಮಲ್ಲಿಗೆ (೧೯೮೫)

ಮುಗಿಲ ಮಲ್ಲಿಗೆ ಚಿತ್ರದ ಹಾಡುಗಳು 
  1. ಪ್ರತಿದಿನ ಹೊಸ ಕವಿತೆಯು 
  2. ಒಪ್ಪಿದೆ ಕಣ್ಣು ಏತಕೆ ನಾಚಿದೆ ಹೆಣ್ಣು 
  3. ನಿಮಗಿದೀನ ನಾ ಹಾಕುವೇ ಕಣ್ಣೀರಿನ ಸಂಕೋಲೆಯ 
  4. ಸಾಕು ಸಾಕು ಹೋಗೆ 
ಮುಗಿಲ ಮಲ್ಲಿಗೆ (೧೯೮೫) - ಪ್ರತಿದಿನ ಹೊಸ ಕವಿತೆಯ
ಸಂಗೀತ : ವಿ.ಎಸ್.ನರಸಿಂಹನ ಸಾಹಿತ್ಯ : ಆರ್.ಏನ್.ಜಯಗೋಪಾಲ ಗಾಯನ : ಪಿ.ಸುಶೀಲಾ

ಪ್ರತಿ ದಿನ ಹೊಸ ಕವಿತೆಯು ಹೊಸ ಹೊಸ ಅನುಭವ ಚರಿತೆಯು
ಪ್ರತಿ ದಿನ ಹೊಸ ಕವಿತೆಯು ಹೊಸ ಹೊಸ ಅನುಭವ ಚರಿತೆಯು
ಆನಂದದ ನವಚಂದವೇ  ಈ ಕಾವ್ಯ ಹಾಡಾಗಿ ಹೃದಯ ಮಿಡಿಯುತಿದೆ
ಪ್ರತಿ ದಿನ ಹೊಸ ಕವಿತೆಯು ಹೊಸ ಹೊಸ ಅನುಭವ ಚರಿತೆಯು

ಸರಿಗಮಪ ರಿಗಮಪದ ದಮಪದನಿ ನಿಸಗರಿಗಮಪದನಿಸ
ಈ ಪ್ರೀತಿ ಬನದಾ ಹೂಗಳೇ ಈ ಸ್ವರ್ಗಧಾಮದ ಕಂಗಳೇ
ಹೂಂಹುಂಹುಂ ಲಲಾಲಾಲ
ಚೆಲುವನ್ನು ಚೆಲ್ಲೋ ಬೆಳದಿಂಗಳೇ ನನ್ನಾಸೆ ಎಲ್ಲಾ ನಿಮ್ಮದೇ..
ಅಹ್ಹಹ್ಹಹಹ .. ಮುದ್ದು ಮುದ್ದು ಮಳೆಯೋ ನಗು ನಿನ್ನದು
ಹಾಲುಜೇನೋ ಹೊಳೆಯೋ ಮಾತು ನಿನ್ನದೂ
ಕಪಟ ಇಲ್ಲದ ಮನಸೀದು ನಿಜವಾ ನಗುವಾ ನೆಲೆಯಿದು
ದೈವವೇ ಬಂದು ಮನೆಯ ಹರಸುತಿದೆ
ಪ್ರತಿ ದಿನ ಹೊಸ ಕವಿತೆಯು ಹೊಸ ಹೊಸ ಅನುಭವ ಚರಿತೆಯು

ಆಧಾರ ಸಿಗಲು ಬಳ್ಳಿಗೆ ಗರಿಯೊಂದು ಮೂಡಿತು ಆಸೆಗೆ
ಉಂಹೂಂಹೂಂ  ಲಲ್ಲಲಾ 
ಹೂವಾಗಿ ನಿಂತ ಮಲ್ಲಿಗೆ ಆಣಿಯಾಗಿ ಕಾದಿದೆ ಪೂಜೆಗೆ 
ಇರು ಜೋಡಿ ಇಲ್ಲದ ಮನೆ ನಮ್ಮದು  ಬೇಡಿ ಬಂದ ಯಾರಿಗೆ ಇಲ್ಲ ಎನ್ನದೂ 
ಸುಖವಾ ಹರಿವಾ ಹೊನಲು ಮಮತೆ ಹೊನ್ನು ಕಡಲಿದು 
ಮನುಜ ದೈವಗಳು ಬಾಳು ಗುಡಿ ಇದುವೇ 
ಪ್ರತಿ ದಿನ ಹೊಸ ಕವಿತೆಯು ಹೊಸ ಹೊಸ ಅನುಭವ ಚರಿತೆಯು
ಆನಂದದ ನವ ಛಂದವೇ  ಈ ಕಾವ್ಯ ಹಾಡಾಗಿ ಹೃದಯ ಮಿಡಿಯುತಿದೆ
ಪ್ರತಿ ದಿನ ಹೊಸ ಕವಿತೆಯು ಹೊಸ ಹೊಸ ಅನುಭವ ಚರಿತೆಯು
ಉಂಹೂಂಹೂಂ  ಉಂಹೂಂಹೂಂ ಉಂಹೂಂಹೂಂ ಉಂಹೂಂಹೂಂ 
-------------------------------------------------------------------------------------------------------------------------

ಮುಗಿಲ ಮಲ್ಲಿಗೆ (೧೯೮೫) - ಒಪ್ಪಿದೆ ಕಣ್ಣು ಏತಕೆ ನಾಚಿದೆ ಹೆಣ್ಣು
ಸಂಗೀತ : ವಿ.ಎಸ್.ನರಸಿಂಹನ ಸಾಹಿತ್ಯ : ಆರ್.ಏನ್.ಜಯಗೋಪಾಲ ಗಾಯನ : ಪಿ.ಸುಶೀಲಾ, ಜಯಚಂದ್ರನ

ಹೆಣ್ಣು : ಹೂಂಹೂಂಹೂಂಹೂಂ ಹೂಂಹೂಂಹೂಂಹೂಂ
ಗಂಡು : ಲಾಲಲಲ ಲಲ್ಲಲ್ಲಲಾಲಾ... ಒಪ್ಪಿದೆ ಕಣ್ಣು ಏತಕೆ ನಾಚಿದೆ ಹೆಣ್ಣು
            ಒಪ್ಪಿದೆ ಕಣ್ಣು ಏತಕೆ ನಾಚಿದೆ ಹೆಣ್ಣು
ಹೆಣ್ಣು : ಲಲ್ಲಲ್ಲಲಾಲಾ ಲಲ್ಲಲ್ಲಲಾಲಾ
ಗಂಡು : ಮನಸಿನ್ನೂ ತಾಳದು ಈ ಬೇಗೆ ವಯಸಿದು ಕಾಯದು
           ನಿನಗಾಗಿ ಈ ಜೀವ ಇದು ಉಳಿದಿದೆ 
ಹೆಣ್ಣು : ಒಪ್ಪಿದೆ ಕಣ್ಣು ಆದರೂ ನಾಚಿದೆ ಹೆಣ್ಣು 
ಗಂಡು : ಒಪ್ಪಿದೆ ಕಣ್ಣು ಏತಕೆ ನಾಚಿದೆ ಹೆಣ್ಣು
            ಒಪ್ಪಿದೆ ಕಣ್ಣು ಏತಕೆ ನಾಚಿದೆ ಹೆಣ್ಣು
           ಮನಸಿನ್ನೂ ತಾಳದು ಈ ಬೇಗೆ ವಯಸಿದು ಕಾಯದು
          ನಿನಗಾಗಿ ಈ ಜೀವ ಇದು ಉಳಿದಿದೆ
         ಒಪ್ಪಿದೆ ಕಣ್ಣು ಏತಕೆ ನಾಚಿದೆ ಹೆಣ್ಣು

ಹೆಣ್ಣು : ಜೀವನದ ಪುಸ್ತಕ ಹಾಳೆಯಲು ನೀ ತಂದ ಕಾವ್ಯವೇ
          ಪ್ರತಿ ಪುಟದಲೂ ನಿನ್ನಾ ಹೆಸರನೇ ನಾನು  ನೋಡಿದೆ 
ಗಂಡು : ಹಾಳೆಗಳ ತಿರುಗಿಸಿ ಓದಿದರೆ ಅಲ್ಲೊಂದು ಮಲ್ಲಿಗೆ 
           ಘಮ ಘಮಿಸುತಾ ನಿನ್ನಾ ನೆನಪೇ ನನಗೆ ಕಂಡಿದೆ  
ಹೆಣ್ಣು : ಸನಿಹ                   ಗಂಡು : ಸಿಹಿಯು  
ಹೆಣ್ಣು ; ವಿರಹ                   ಗಂಡು : ಕಹಿಯು  
ಹೆಣ್ಣು : ಇದು ನ್ಯಾಯವಲ್ಲ    ಗಂಡು : ಬಲ್ಲೆ ಎಲ್ಲ ತಾಳ್ಮೆಯಿಲ್ಲ 
ಹೆಣ್ಣು : ಒಪ್ಪಿದೆ ಕಣ್ಣು ಆದರೂ ನಾಚಿದೆ ಹೆಣ್ಣು
          ಮನಸಲ್ಲಿ ಅಂಜಿಕೆ ನನ್ನಲ್ಲಿ ಹಿರಿಯರ ಹೆದರಿಕೆ
          ನಿನ್ನ ಸೇರಿ ಈ ಜೀವ ಇದು ಬಯಸಿದೆ 
          ಒಪ್ಪಿದೆ ಕಣ್ಣು ಆದರೂ ನಾಚಿದೆ ಹೆಣ್ಣು

ಗಂಡು : ಕೈ ಬಳೆಯ ನಾದವು ಕೆಣಕುತಿದೆ ಬಳಿಗೆನ್ನ ಕೂಗಿದೆ  
           ನನ್ನೊಡತಿಗೇ ಎಂದು ನೀನೇ ಜೋಡಿ ಎಂದಿದೆ 
ಹೆಣ್ಣು : ಈ ಬಿಸಿಲು ತಂಪಗೆ ತೋರುತಿದೆ ನೀನಿರುವ ತಾಣದೆ 
          ಮೈ ಬೆವತರು ಮನಕೆ ಎಂಥ ಹಾಯಿ ಎಂದಿದೆ 
ಗಂಡು : ಒಲವೇ                ಹೆಣ್ಣು : ಚೆಲುವು 
ಗಂಡು : ಮನಕೆ                 ಹೆಣ್ಣು : ನಲಿವು 
ಗಂಡು : ಈ ಮಾತು ಚೆನ್ನ ಬಳಿಗೆ ಇನ್ನ ಬಾರೆ ಚಿನ್ನ 
            ಒಪ್ಪಿದೆ ಕಣ್ಣು ಏತಕೆ ನಾಚಿದೆ ಹೆಣ್ಣು
            ಮನಸಿನ್ನೂ ತಾಳದು ಈ ಬೇಗೆ ವಯಸಿದು ಕಾಯದು
            ನಿನಗಾಗಿ ಈ ಜೀವ ಇದು ಉಳಿದಿದೆ 
            ಒಪ್ಪಿದೆ ಕಣ್ಣು ಏತಕೆ ನಾಚಿದೆ ಹೆಣ್ಣು
            ಹುಂಹೂಂ ಹುಂಹೂಂ ಹುಂಹೂಂ
-------------------------------------------------------------------------------------------------------------------------

ಮುಗಿಲ ಮಲ್ಲಿಗೆ (೧೯೮೫) - ನಿಮಗಿದೀನ ನಾ ಹಾಕುವೇ ಕಣ್ಣೀರಿನ
ಸಂಗೀತ : ವಿ.ಎಸ್.ನರಸಿಂಹನ ಸಾಹಿತ್ಯ : ಆರ್.ಏನ್.ಜಯಗೋಪಾಲ ಗಾಯನ : ವಾಣಿಜಯರಾಂ, ಜಯಚಂದ್ರನ

ಹೆಣ್ಣು : ಮುತ್ತಿಗೆ ಹೋರಾಟ ಮುಷ್ಕರ ಕಾದಾಟ
ಕೋರಸ್ :  ಮುತ್ತಿಗೆ ಹೋರಾಟ ಮುಷ್ಕರ ಕಾದಾಟ
ಹೆಣ್ಣು : ನಿಮಗಿದೀನ ನಾ ಹಾಕುವೇ ಕಣ್ಣೀರಿನಾ ಸಂಕೋಲೆಯ
          ಎದೆಯಲ್ಲಿ ಸೆರೆ ಮಾಡುವೆ....  ಬಿಡೆನಾ ದಾರಿ ಕೊಡೆ ನಾ ಜಾಗ
          ತಡೆ ಹಾಕ್ತಿನಿ ಇದೋ ಬೇಡ್ತಿನಿ
          ನಿಮಗಿದೀನ ನಾ ಹಾಕುವೇ ಕಣ್ಣೀರಿನಾ ಸಂಕೋಲೆಯ
          ಎದೆಯಲ್ಲಿ ಸೆರೆ ಮಾಡುವೆ
ಕೋರಸ್ :  ಮುತ್ತಿಗೆ ಹೋರಾಟ ಮುಷ್ಕರ ಕಾದಾಟ

ಗಂಡು :  ಕಿರಿಯರು ನಡೆಸೋ ಈ ಕಾದಾಟ ಹಿರಿಯರ ಪೇಚಾಟ
            ಪ್ರೀತಿಯ ತೋರೊ ಹೃದಯದಲೇಕೆ ಈ ಹೋರಾಟ
ಹೆಣ್ಣು :  ಕಿರಿಯರು ನಡೆಸೋ ಈ ಕಾದಾಟ ಹಿರಿಯರ ಪೇಚಾಟ
ಗಂಡು : ಪ್ರೀತಿಯ ತೋರೊ ಹೃದಯದಲೇಕೆ ಈ ಹೋರಾಟ 
ಹೆಣ್ಣು : ತಾಯಿ ಬೇಕು ಮಗುವಿಗೆ ತಾಳ ಬೇಕು ಹಾಡಿಗೆ 
ಕೋರಸ್ : ಅಕ್ಕನು ಎಂದು ಜೊತೆಗಿರಬೇಕು ಅಕ್ಕನ ಪ್ರೀತಿ ಸಿಗಲೇಬೇಕು 
ಗಂಡು : ಕಾಡ ತೋಟ ಮಾಡಿ ಬೆಳೆದೆ ಪ್ರೀತಿ ನೀನು 
ಹೆಣ್ಣು : ಅಕ್ಕನು ಹೋದರೆ ಬಳಿಕ ನಾವು ಊಟ ಮಾಡೋಲ್ಲ 
          ಬಿಡೆನಾ ದಾರಿ ಕೊಡೆ ನಾ ಜಾಗ ತಡೆ ಹಾಕ್ತಿನಿ ಇದೋ ಬೇಡ್ತಿನಿ
          ನಿಮಗಿದೀನ ನಾ ಹಾಕುವೇ ಕಣ್ಣೀರಿನಾ ಸಂಕೋಲೆಯ
          ಎದೆಯಲ್ಲಿ ಸೆರೆ ಮಾಡುವೆ
ಕೋರಸ್ :  ಮುತ್ತಿಗೆ ಹೋರಾಟ ಮುಷ್ಕರ ಕಾದಾಟ

ಹೆಣ್ಣು : ,ಸೀತೆಯ ನಂತರ ಮಿಥಿಲಾ ನಗರ ಮುಂದಕೆ ಏನಾಯ್ತು
ಗಂಡು : ಶಾಂತಲೆ ನಂತರ ಹೊಯ್ಸಳ ಕಲೆಯ ಪ್ರಗತಿ ಏನಾಯ್ತು
ಹೆಣ್ಣು : ,ಸೀತೆಯ ನಂತರ ಮಿಥಿಲಾ ನಗರ ಮುಂದಕೆ ಏನಾಯ್ತು
ಗಂಡು : ಶಾಂತಲೆ ನಂತರ ಹೊಯ್ಸಳ ಕಲೆಯ ಪ್ರಗತಿ ಏನಾಯ್ತು
ಹೆಣ್ಣು : ಗಂಧ ಬೇಕು ಸುಮದಲಿ ದೈವ ಬೇಕು ಗುಡಿಯಲಿ
ಕೋರಸ್ : ಅಕ್ಕನು ಎಂದು ಜೊತೆಗಿರಬೇಕು ಅಕ್ಕನ ಪ್ರೀತಿ ಸಿಗಲೇಬೇಕು 
ಗಂಡು : ಕಾವ್ಯ ಬರೆಯದಂತ ಹಾಳೆಗೆ ಬೆಲೆ ಏನು 
ಹೆಣ್ಣು : ಕಮಲಾ ಅಕ್ಕ ಇಲ್ಲದೆ ಮನೆಯು ಗತಿ ಏನು 
          ಬಿಡೆನಾ ದಾರಿ ಕೊಡೆ ನಾ ಜಾಗ ತಡೆ ಹಾಕ್ತಿನಿ ಇದೋ ಬೇಡ್ತಿನಿ
          ನಿಮಗಿದೀನ ನಾ ಹಾಕುವೇ ಕಣ್ಣೀರಿನಾ ಸಂಕೋಲೆಯ
          ಎದೆಯಲ್ಲಿ ಸೆರೆ ಮಾಡುವೆ
ಕೋರಸ್ :  ಮುತ್ತಿಗೆ ಹೋರಾಟ ಮುಷ್ಕರ ಕಾದಾಟ
-------------------------------------------------------------------------------------------------------------------------

ಮುಗಿಲ ಮಲ್ಲಿಗೆ (೧೯೮೫) - ಸಾಕು ಸಾಕು ಹೋಗೇ
ಸಂಗೀತ : ವಿ.ಎಸ್.ನರಸಿಂಹನ ಸಾಹಿತ್ಯ : ಆರ್.ಏನ್.ಜಯಗೋಪಾಲ ಗಾಯನ : ಪಿ.ಸುಶೀಲಾ, ವಾಣಿಜಯರಾಂ,

ಸಾಕು ಸಾಕು ಹೋಗೆ ಬಲ್ಲೆ ನಾ ಆಟವೆಲ್ಲ ನೀನಾಡೋ ಅಟದಾ ಅರ್ಥವೆಲ್ಲ
ಹುಚ್ಚಿ ಹಾಗೆ ಆಡಬೇಡ ಬೆಪ್ಪು ಎಂದು ತಿಳಿಯಬೇಡ
ಸಾಕು ಸಾಕು ....  ಸಾಕು ಸಾಕು ಹೋಗೆ ನಾನೇನು ಮಂಕಳಲ್ಲ ನೀನಾಡೋ ನಾಟಕ ಬಲ್ಲೆ ಎಲ್ಲ
ಜಾಣೆ ನೀನು ಒಬ್ಬಳೇ ಅಲ್ಲ ನನ್ನ ಮನಸು ನೀ ತಿಳಿದಿಲ್ಲಾ 
ಸಾಕು ಸಾಕು... ಸಾಕು ಸಾಕು ಹೋಗೆ ಬಲ್ಲೆ ನಾ ಆಟವೆಲ್ಲ ನೀನಾಡೋ ಅಟದಾ ಅರ್ಥವೆಲ್ಲ

ನೆನೆದ ಕಾರ್ಯ ಮುಗಿಸಿ ನಿಂತೇ ಎದೆಯ ಭಾರ ಇಳಿಸಿ ನಿಂತೇ 
ನೆನೆದ ಕಾರ್ಯ ಮುಗಿಸಿ ನಿಂತೇ ಎದೆಯ ಭಾರ ಇಳಿಸಿ ನಿಂತೇ 
ನೆರಳ ಅರಸೊ ಬಯಕೆ ಇಲ್ಲ ಮುಗಿದ ಕಥೆಯು ಬೆಳೆಯೋದಿಲ್ಲ 
ಬರೆದಂತ ಬ್ರಹ್ಮ ನಿದಿರೆ ಹೋದ ಕಥೆಯು ಅಂದು ತಪ್ಪಿ ಬರೆದ 
ಅದನ್ನು ತಿದ್ದಿ ಬರೆಯೆ ಬಂದೆ ಇಂದು ನಾನು 
ಸಾಕು ಸಾಕು ಹೋಗೆ ನಾನೇನು ಮಂಕಳಲ್ಲ ನೀನಾಡೋ ನಾಟಕ ಬಲ್ಲೆ ಎಲ್ಲ
ಹುಚ್ಚಿ ಹಾಗೆ ಆಡಬೇಡ ಬೆಪ್ಪು ಎಂದು ತಿಳಿಯಬೇಡ
ಸಾಕು ಸಾಕು... ಸಾಕು ಸಾಕು ಹೋಗೆ ಬಲ್ಲೆ ನಾ ಆಟವೆಲ್ಲ ನೀನಾಡೋ ಅಟದಾ ಅರ್ಥವೆಲ್ಲ

ಕಣ್ಣಿಗೆ ರೆಪ್ಪೆಯು ಸನಿಹದೇ ಉಂಟು ಕಾಣದ ಕಂಗಳು ರೆಪ್ಪೆಯ ನಂಟು 
ಕಣ್ಣಿಗೆ ರೆಪ್ಪೆಯು ಸನಿಹದೇ ಉಂಟು ಕಾಣದ ಕಂಗಳು ರೆಪ್ಪೆಯ ನಂಟು 
ಈ ಉಪಮಾನ ತೀರಾ ಹೊಸದು ಆ ಅನುಮಾನ ತೀರಾ ಹಳದೂ 
ದೀಪದ ಕೆಳಗೆ ನೆರಳದು ಹೆಚ್ಚು ದೂರದೇ ಇರಲು ಬೆಳಕಿಗೆ ನೆಚ್ಚು 
ಬೆಳಕು ನೀನು ನೆರಳು ಎಂದು ಇನ್ನು ನಾನು 
ಸಾಕು ಸಾಕು ಹೋಗೆ ಬಲ್ಲೆ ನಾ ಆಟವೆಲ್ಲ ನೀನಾಡೋ ಅಟದಾ ಅರ್ಥವೆಲ್ಲ
ಹುಚ್ಚಿ ಹಾಗೆ ಆಡಬೇಡ ಬೆಪ್ಪು ಎಂದು ತಿಳಿಯಬೇಡ
ಸಾಕು ಸಾಕು... ಸಾಕು ಸಾಕು ಹೋಗೆ ಬಲ್ಲೆ ನಾ ಆಟವೆಲ್ಲ ನೀನಾಡೋ ಅಟದಾ ಅರ್ಥವೆಲ್ಲ
-------------------------------------------------------------------------------------------------------------------------

No comments:

Post a Comment