1082. ನಮ್ಮಮ್ಮನ ಸೊಸೆ (೧೯೮೦)

ನಮ್ಮಮ್ಮನ ಸೊಸೆ ಚಲನಚಿತ್ರದ ಹಾಡುಗಳು 
  1. ಮದುವೆ ಮಾರ್ಕೆಟ್ 
  2. ಧಕ ಧಕ ನಿನ್ನದೇ ಮಿಡಿತ 
  3. ಮುತ್ತಿನ ಹಾರ 
  4. ರಮ್ಮಿ ಇಲ್ಲದೆ 
ನಮ್ಮಮ್ಮನ ಸೊಸೆ (೧೯೮೦) -ಮದುವೆ ಮಾರ್ಕೆಟ್ 
ಸಂಗೀತ : ವಿಜಯ ಭಾಸ್ಕರ, ಆರ್.ಏನ್.ಜಯಗೋಪಾಲ್ ಗಾಯನ : ರವಿ 

ಮಾರ್ಕೆಟ್ ಮದುವೆ ಮಾರ್ಕೆಟ್ ಗಂಡುಗಳಾ ಕೊಳ್ಳೋ ಮಾರ್ಕೆಟ್
ಜೇಬಿಗೇ ತಕ್ಕ ಜೋಡಿ ಬೇಕೇ ಬ್ಯೂಟಿಗೇ ತಕ್ಕ ಬಾಡಿ ಬೇಕೇ
ಎಲ್ಲ ಬಗೆಯ ಗಂಡು ಉಂಟೂ ಗಂಟೊಂದ್ದಿದರೇ ಉಂಟೂ ನಂಟು
ಮಾರ್ಕೆಟ್ ಮದುವೆ ಮಾರ್ಕೆಟ್ ಗಂಡುಗಳಾ ಕೊಳ್ಳೋ  ಮಾರ್ಕೆಟೂ.....

ಹುಡುಗನ ಅಪ್ಪಾ ಎಂಎಲ್ ಎ  ಅಮ್ಮಾ ಎಂಪಿ ಮಗಳಲ್ಲವೇ
ಇದುವೇ ಇವನ ಪೇ ಡಿಗ್ರೀ ಬೇಕೇ ಬೇರೇ ಡಿಗ್ರೀ
ಲಾಯರ್ ಗಂಡಿಗೆ ಸ್ಕೂಟರ್ ಬೇಕೂ ಕಾಲೇಜ್ ಮೇಷ್ಟ್ರೆಗೇ ಸೈಕಲ್ಲೇ ಸಾಕೂ
ಡಾಕ್ಟರ್ ಗಂಡಿಗೆ ಕಾರೇ ಬೇಕೋ ಅದರ ಜೊತೆಗೇ ಕ್ಯಾಶೂ ಬೇಕೂ
ಮಾರ್ಕೆಟ್ ಮದುವೆ ಮಾರ್ಕೆಟ್ ಗಂಡುಗಳಾ ಕೊಳ್ಳೋ  ಮಾರ್ಕೆಟೂ.....

ಗಂಡನ್ನ್ ನಗರ ನೋಡಿ ಬಂದಾ  ಲಕ್ಕನ್ ಹಳ್ಳಿ ಬೆಕ್ಕಾ..
ಲಕ್ಷ ಕೈಗೇ ಕೊಟ್ಟರೇ ಕತ್ತೆಗೂ ತಾಳಿ ಕಟ್ಟಲು ಸಿದ್ದ
ದಕ್ಷಿಣೇ ಹಣದಿ ಮೈಯ ಬೆಳೆಸಿದ ವರನಿಗೂ ಬೇಕೂ ವರದಕ್ಷಿಣೆ
ಹುಡುಗಿ ಹೆತ್ತ ತಪ್ಪಿಗೇ ನೀವೂ ಹಾಕಿ ಇವನಿಗೇ ಪ್ರದಕ್ಷಿಣೇ
ಮಾರ್ಕೆಟ್ ಮದುವೆ ಮಾರ್ಕೆಟ್ ಗಂಡುಗಳಾ ಕೊಳ್ಳೋ  ಮಾರ್ಕೆಟೂ.....

ಇವನ ಹೆಸರೂ ಗೌರಿಶಂಕರ ಗೌರಿ ಶಂಕರ ಖಂಡಿತ ಅಲ್ಲಾ 
ಎಂಜಲ ಕಾಸಿಗೇ ತನ್ನ ಮಾನ ಎಂದೂ ಮಾರೋನಲ್ಲಾ 
ಅಂದದ ಹುಡುಗಿ ಬೇಕೆಂದಿಲ್ಲಾ ಜಾತಿ ಗೀತಿ ಮಾತೇ ಇಲ್ಲಾ 
ಖಾಯಂ ಕೆಲಸ ಸಿಕ್ಕಿರಬೇಕೂ ಸಂಬಳ ಸಾವಿರ ತಂದರೇ ಸಾಕೂ 
ಮಾರ್ಕೆಟ್ ಮದುವೆ ಮಾರ್ಕೆಟ್ ಗಂಡುಗಳಾ ಕೊಳ್ಳೋ ಮಾರ್ಕೆಟ್
ಜೇಬಿಗೇ ತಕ್ಕ ಜೋಡಿ ಬೇಕೇ ಬ್ಯೂಟಿಗೇ ತಕ್ಕ ಬಾಡಿ ಬೇಕೇ
ಎಲ್ಲ ಬಗೆಯ ಗಂಡು ಉಂಟೂ ಗಂಟೊಂದ್ದಿದರೇ ಉಂಟೂ ನಂಟು
ಮಾರ್ಕೆಟ್ ಮದುವೆ ಮಾರ್ಕೆಟ್ ಆಹ್ಹಾ ಗಂಡುಗಳಾ ಕೊಳ್ಳೋ  ಮಾರ್ಕೆಟೋ...  
--------------------------------------------------------------------------------------------------------------------------

ನಮ್ಮಮ್ಮನ ಸೊಸೆ (೧೯೮೦) -ಧಕ ಧಕ ನಿನ್ನದೇ ಮಿಡಿತ
ಸಂಗೀತ : ವಿಜಯ ಭಾಸ್ಕರ, ಆರ್.ಏನ್.ಜಯಗೋಪಾಲ್ ಗಾಯನ : ಜಯಚಂದ್ರನ

ಧಕ್ಕ ಧಕ್ಕ ಧಕ್ಕ ಧಕ್ಕ ಧಕ್ಕ ಧಕ್ಕ ಧಕ್ಕ
ನಿನ್ನದೇ ಮಿಡಿತ ನನ್ನದೇ ಬಡಿತ ತಾಳಕೇ ತಾಳ
ಸೇರಿದ ಕಾಲ ಮನಗಳ ಬೆರೆತು ಆಡಿದ ಮಾತು
ಆಯ್ ಲವ್ ಯೂ ಯೂ ಲವ್ ಮೀ
ಆಯ್ ಲವ್ ಯೂ ಯೂ ಲವ್ ಮೀ

ತಾಳೇನೂ ವಿರಹದ ಬಿಸಿ ಬಿಸಿ ಮೈಯಲ್ಲಿ ಏನೋ ಕಸಿವಿಸಿ
ತೆರೆಯಲಿ ಗಾಳಿಯ ನೀ ಬೀಸಿ ನೆರಳಲಿ ತಂಪಿನ ಹೂ ಹಾಸಿ
ಕೋಡು ಕೋಡು ಕುಡಿ ಕುಡಿ ಎನುತಿದೆ ಹೂಗಳೂ ಕೈ ಬೀಸಿ
ಆಯ್ ಲವ್ ಯೂ ಯೂ ಲವ್ ಮೀ
ಆಯ್ ಲವ್ ಯೂ ಯೂ ಲವ್ ಮೀ
ನಿನ್ನದೇ ಮಿಡಿತ ನನ್ನದೇ ಬಡಿತ ತಾಳಕೇ ತಾಳ
ಸೇರಿದ ಕಾಲ ಮನಗಳ ಬೆರೆತು ಆಡಿದ ಮಾತು
ಆಯ್ ಲವ್ ಯೂ ಯೂ ಲವ್ ಮೀ
ಆಯ್ ಲವ್ ಯೂ ಯೂ ಲವ್ ಮೀ 

ಹೆಣ್ಣಿಗೆ ಹರೆಯ ಮೈ ಭಾರ  ಒಡಲಿಗೆ ಬೇಕು ಆಧಾರ 
ತೋಳಿನ ಆಸರೆ ಹೊತ್ತಾಗ ನಾಚುತ ನಿಲ್ಲುವೇ ಏಕೀಗ 
ಕಲಿ ಕಲಿ ನಲಿ ನಲಿ ಎನುತಿದೆ ಬಳ್ಳಿಯು ನೋಡೀಗ 
ಆಯ್ ಲವ್ ಯೂ ಯೂ ಲವ್ ಮೀ
ಆಯ್ ಲವ್ ಯೂ ಯೂ ಲವ್ ಮೀ
ನಿನ್ನದೇ ಮಿಡಿತ ನನ್ನದೇ ಬಡಿತ ತಾಳಕೇ ತಾಳ
ಸೇರಿದ ಕಾಲ ಮನಗಳ ಬೆರೆತು ಆಡಿದ ಮಾತು
ಆಯ್ ಲವ್ ಯೂ ಯೂ ಲವ್ ಮೀ
ಆಯ್ ಲವ್ ಯೂ ಯೂ ಲವ್ ಮೀ 
--------------------------------------------------------------------------------------------------------------------------

ನಮ್ಮಮ್ಮನ ಸೊಸೆ (೧೯೮೦) -ಮುತ್ತಿನ ಹಾರ ಬೇಕೇ ಚೆನ್ನ ನಿನಗೆ ಉಡುಗೋರೇ..   
ಸಂಗೀತ : ವಿಜಯ ಭಾಸ್ಕರ, ಆರ್.ಏನ್.ಜಯಗೋಪಾಲ್ ಗಾಯನ : ವಾಣಿಜಯರಾಂ

ಮುತ್ತಿನ ಹಾರ ಬೇಕೇ ಚೆನ್ನ ನಿನಗೆ ಉಡುಗೋರೇ..
ನನ್ನನೇ ತರುವೇ ನಿನಗೆ ನಾನು ಬಳಿಗೆ ಬಾ ದೊರೆ
ಮುತ್ತಿನ ಹಾರ ಬೇಕೇ ಚೆನ್ನ

ನಿನ್ನಯ ಒಲವೇ ನನ್ನಯ ಒಡವೇ ನೆಮ್ಮದಿ ನೀಡಿದೆ ನಿನ್ನಯ ನಗುವೇ
ನಿನ್ನಯ ಒಲವೇ ನನ್ನಯ ಒಡವೇ ನೆಮ್ಮದಿ ನೀಡಿದೆ ನಿನ್ನಯ ನಗುವೇ
ನನ್ನಲ್ಲಿ ನೀನೂ ತೋರಿದ ಪ್ರೀತಿ ಬಾಳಿನ ದಾರಿ ನೀ ಬೆಳಗುವ ಜ್ಯೋತಿ 
ಬೆಳಗುವ ಜ್ಯೋತಿ.. ಮುತ್ತಿನ ಹಾರ ಬೇಕೇ ಚೆನ್ನ 

ಆದರ ತೋರಿದೇ ಆಸರೇ ನೀಡಿದೇ ಆಸೆಯ ಬಳ್ಳಿಗೇ ನೀರ ನೀ ಎರೆದೇ 
ಆದರ ತೋರಿದೇ ಆಸರೇ ನೀಡಿದೇ ಆಸೆಯ ಬಳ್ಳಿಗೇ ನೀರ ನೀ ಎರೆದೇ 
ಈ ವಜ್ರವ ಕಲ್ಲೆಂದು ತಿಳಿದೇನೂ ನಾನೂ ಅರಿಯದ ತಪ್ಪನೂ ಮನ್ನಿಸಿ ನೀನೂ 
ಮನ್ನಿಸಿ ನೀನೂ
ಮುತ್ತಿನ ಹಾರ ಬೇಕೇ ಚೆನ್ನ ನಿನಗೆ ಉಡುಗೋರೇ..
ನನ್ನನೇ ತರುವೇ ನಿನಗೆ ನಾನು ಬಳಿಗೆ ಬಾ ದೊರೆ ಹ್ಹೂಂ ಬಳಿಗೆ ಬಾ ದೊರೆ
--------------------------------------------------------------------------------------------------------------------------

ನಮ್ಮಮ್ಮನ ಸೊಸೆ (೧೯೮೦) - ರಮ್ಮಿಯಾಂಡ್ ಶೋ 
ಸಂಗೀತ : ವಿಜಯ ಭಾಸ್ಕರ, ಆರ್.ಏನ್.ಜಯಗೋಪಾಲ್ ಗಾಯನ : ವಾಣಿಜಯರಾಂ, ಎಸ್.ಪಿ.ಬಿ.

ಗಂಡು : ರಮ್ಮಿ ಯಾಂಡ್ ಶೋ
           ರಮ್ಮಿ ಇಲ್ಲದೇ ಶೋ ಇಲ್ಲಾ ಶೋ ಇಲ್ಲದೇ ರಮ್ಮಿ ಇಲ್ಲಾ
           ರಮ್ಮಿಗಾಗಿ ಶೋ ಶೋ ಗಾಗೀ ರಮ್ಮಿ
           ರಮ್ಮಿ ಶೋ ರಮ್ಮಿ ಶೋ  ರಮ್ಮಿ ಮತ್ತು ಶೋ
ಹೆಣ್ಣು : ರಮ್ಮಿ ಯಾಂಡ್ ಶೋ
         ರಮ್ಮಿ ಇಲ್ಲದೇ ಶೋ ಇಲ್ಲಾ ಶೋ ಇಲ್ಲದೇ ರಮ್ಮಿ ಇಲ್ಲಾ
         ರಮ್ಮಿಗಾಗಿ ಶೋ ಶೋ ಗಾಗೀ ರಮ್ಮಿ
         ರಮ್ಮಿ ಶೋ ರಮ್ಮಿ ಶೋ  ರಮ್ಮಿ ಮತ್ತು ಶೋ

ಗಂಡು : ಯಾವಾಗ ಬರಲೀ (ಯಾತಕ್ಕೇ )  ನಿಮ್ಮಪ್ಪನ ನೋಡೋಕೇ.. ಹೇಹೇಹೇ .. (ಯಾತಕ್ಕೇ )
            ಹೆಣ್ಣು ಕೇಳೋಕೆ (ಯಾತಕ್ಕೇ ) ಮದುವೇ ಆಗೋಕೇ (ಹ್ಹಾಂ ) ಹ್ಹಾ...
ಹೆಣ್ಣು : ಹೆಣ್ಣು ಕೇಳೋಕೆ ನಿಮ್ಮ ಅಪ್ಪ ಅಮ್ಮ ಬರಬೇಕು
          ಕೈಯಲ್ಲಿ ಹೂವೂ ಹಣ್ಣು ತರಬೇಕು ಹೆಣ್ಣನ್ನೂ ದುರುದುರು ನೋಡಬೇಕು
         ನನ್ನ ಹಾಡು ಎಂದು ಕೇಳಬೇಕು ಸನಿದಪಮಗರಿಸ ಸನಿಪದನಿಸ (ಆಗ ನಾನು )
         ಗಂಡು ಗುಮ್ಮಂತೇ ಕೂತಿರಬೇಕು ಸ್ವೀಟು ಖಾರ ತಿಂತೀರಬೇಕು
         ನನ್ನ ಕದ್ದು ಕದ್ದು ನೋಡುತ್ತಿರಬೇಕು (ಹೊಯ್ ಹೊಯ್ )
        ಟೊರಿನೋ ಕುಡಿತಾ ಇರಬೇಕು  ನೀನು ಟೊರಿನೋ ಕುಡಿತಾ ಇರಬೇಕು
ಗಂಡು : ಓಹೋಹೋ.. ಹೊಯ್.. ಆಗ.. ಆಗ.. ಆಗ.. ಆಗ... (ಅಯ್ಯೋ ನಾಚಿಕೆ ಆಗತ್ತೇ)
           ರಮ್ಮಿ ಯಾಂಡ್ ಶೋ
           ರಮ್ಮಿ ಇಲ್ಲದೇ ಶೋ ಇಲ್ಲಾ ಶೋ ಇಲ್ಲದೇ ರಮ್ಮಿ ಇಲ್ಲಾ
           ರಮ್ಮಿಗಾಗಿ ಶೋ ಶೋ ಗಾಗೀ ರಮ್ಮಿ
           ರಮ್ಮಿ ಶೋ ರಮ್ಮಿ ಶೋ  ರಮ್ಮಿ ಮತ್ತು ಶೋ
ಹೆಣ್ಣು : ರಮ್ಮಿ ಯಾಂಡ್ ಶೋ
         ರಮ್ಮಿ ಇಲ್ಲದೇ ಶೋ ಇಲ್ಲಾ ಶೋ ಇಲ್ಲದೇ ರಮ್ಮಿ ಇಲ್ಲಾ
         ರಮ್ಮಿಗಾಗಿ ಶೋ ಶೋ ಗಾಗೀ ರಮ್ಮಿ
         ರಮ್ಮಿ ಶೋ ರಮ್ಮಿ ಶೋ  ರಮ್ಮಿ ಮತ್ತು ಶೋ
      
ಹೆಣ್ಣು : ಹೋಗೋಣ ಹೊರಗೇ  (ಯಾತಕ್ಕೆ )   ಮಾವಿನಕಾಯಿ ಕೊಳ್ಳೊಕ್ಕೆ (ಹ್ಹಹ್ಹ.. ಯಾತಕ್ಕೇ )
          ಕಚ್ಚಿ ತಿನ್ನೋಕೇ (ಯಾತಕ್ಕೇ ) ಬಯಕೆ ತೀರಸೋಕೆ
ಗಂಡು : ಹ್ಹಾಂ ... ನಿಂಗೇ ಸೀಮಂತ ಮಾಡಿಸಬೇಕು ನಾನು ಹೂವನ್ನೂ ಮೂಡಿಸಲೇಬೇಕು
          ಕೈಗೇ ಗಾಜಿನ ಬಳೆ ತೊಡಿಸಿರಬೇಕು ನೀನು ಮುಸಿ ಮುಸಿ ನಗುತಿರಬೇಕು
ಹೆಣ್ಣು : ಆಮೇಲೆ ನಾನು ಕೂವಾ ಕೂವಾ ಕೂವಾ
ಗಂಡು : ಮಗುನ ಟೋರಿನೋ ಕುಡಿಸಿರಬೇಕೂ
ಹೆಣ್ಣು : ಛೀ.. ಹಾಲನ್ನು ಕುಡಿಸಿರಬೇಕೂ
ಗಂಡು ; ತೊಟ್ಟಿಲ ತೂಗಿರಬೇಕೂ ಲೋಳೋಳಳಳ   ಜೋಗುಳ ಹಾಡಿರಬೇಕೂ
            ಮುತ್ತೊಂದ ಕೊಡೀತಿರಬೇಕೂ ನೀ..ನೂ   ಮುತ್ತೊಂದ ಕೊಡೀತಿರಬೇಕೂ
ಹೆಣ್ಣು : ಹೂಂ ಹೂಂ ಹೂಂ ಹೂಂ ಹೂಂ ಅಬ್ಬಾ... ಏನ್ ಆಸೇ
ಗಂಡು : ರಮ್ಮಿ ಇಲ್ಲದೇ ಶೋ ಇಲ್ಲಾ.. ಹ್ಹಾಹ್ಹಹ್ಹಾ..
ಹೆಣ್ಣು :   ಶೋ ಇಲ್ಲದೇ ರಮ್ಮಿ ಇಲ್ಲಾ.. ಅಹ್ಹಹ್ಹಾ..
ಗಂಡು : ರಮ್ಮಿಗಾಗಿ ಶೋ
ಹೆಣ್ಣು : ಶೋ ಗಾಗೀ ರಮ್ಮಿ
ಗಂಡು :  ರಮ್ಮಿ ಶೋ
ಹೆಣ್ಣು : ರಮ್ಮಿ ಶೋ
ಇಬ್ಬರು : ರಮ್ಮಿ ಮತ್ತು ಶೋ
ಹೆಣ್ಣು : ರಮ್ಮಿ ಯಾಂಡ್ ಶೋ
--------------------------------------------------------------------------------------------------------------------------

No comments:

Post a Comment