ಹೆಂಡ್ತಿಗ್ಹೇಳಬೇಡಿ ಚಿತ್ರದ ಹಾಡುಗಳು
- ಮಧುರಮಯ ರಮ್ಯ ತಾಣ
- ರಾತ್ರಿ ಭಯ
- ನಂಬು ನನ್ನ ನಲ್ಲೆ
- ನೀ ಮುರಿದೇ ಬಾಳನು
ಸಂಗೀತ : ವಿಜಯಾನಂದ ಸಾಹಿತ್ಯ : ಸು.ರುಧ್ರಮೂರ್ತಿ ಶಾಸ್ತ್ರೀ, ಗಾಯನ : ಎಸ್.ಪಿ.ಬಿ. ಚಿತ್ರಾ
ಗಂಡು : ಮಧುರಮಯಾ... ರಮ್ಯ ತಾಣ
ಹೆಣ್ಣು : ಒಲಿದ ಮನ ಪ್ರೇಮಗಾನಾ
ಗಂಡು : ರಾಗ ಮೋಹನ ಅನುರಾಗ ಜೀವನ
ಹೆಣ್ಣು : ಭಾವ ಬಂಧನ ಎದೆಯಾಸೆ ಚೇತನ
ಗಂಡು : ನೀನೇ ಮಿಡಿಯುವ ಮನಸಿಗೆ ಒಲುಮೆಯ ಕನಸಿಗೆ ಬೆಳಕಿನ ಸವಿ ಕಿರಣ
ಹೆಣ್ಣು :ಗಗ ಮಪಮಗ ಮಪಮಗ ಮಪಮಗ ಮಪಮಗ ಗಗಗಗ ಗಗಗಸ
ಗಂಡು : ಮಧುರಮಯಾ... ರಮ್ಯ ತಾಣ
ಹೆಣ್ಣು : ಒಲಿದ ಮನ ಪ್ರೇಮಗಾನಾ
ಗಂಡು : ಹಕ್ಕಿ ಬಾನಲ್ಲಿ ಬಯಲಲಿ ನಲಿದು ಹಾರಾಡಿದೆ
ಹೆಣ್ಣು : ಚೆಲುವಿಗೆ ಜಗದೊಲವಿಗೆ ಸುಮಗಳು ನಗುತಿವೆ
ಗಂಡು : ಬಳುಕುತ ಕುಣಿಕುಣಿಯುತ ಅಲೆಗಳು ನುಡಿದಿವೆ
ಹೆಣ್ಣು : ಉಲಿಯುವಾ ನಲಿಯುವಾ
ಗಂಡು: ತನು ಮನ ಮರೆಯುವಾ
ಹೆಣ್ಣು : ಕನಸಲಿ ಕರಗುವ ಸುಖದಲಿ ಜಗಮೆರೆವಾ
ಗಂಡು : ಮಧುರಮಯಾ ರಮ್ಯ ತಾಣ
ಹೆಣ್ಣು : ಒಲಿದ ಮನ ಪ್ರೇಮಗಾನಾ
ಗರಿಗ ಗರಿಗ ಪಮಪ ಪಮಪ ಗರಿಗ ಗರಿಗ ಪಮಪ ಪಮಪ
ಸರಿಸರಿ ಪಮಪಮ ಗರಿಗರಿ ಸಗಮಪ
ಗಂಡು : ಆಸೆ ನೂರಾರು ಅರಳಿದೆ ಮನಸು ಓಲಾಡಿದೆ
ಹೆಣ್ಣು : ಮೋಹದಾವೇಷ ಕೆರಳಿವೆ ಜೊತೆಯು ಬೇಕಾಗಿದೆ
ಗಂಡು : ಕುದಿಯುವಾ ಬಿಸಿ ಬಯಕೆಗೆ ಒಲವಿನ ಅರಗಿದೆ
ಹೆಣ್ಣು : ಹರೆಯದ ಹಸಿ ಮನದಲಿ ಮದನನ ಬಲೆಯಿದೆ
ಗಂಡು : ನಯನದ ಕರೆಯಲಿ
ಹೆಣ್ಣು : ಹರುಷದ ಹೊಳೆಯಲಿ
ಗಂಡು : ಮುಳುಗುತ ನಲಿಯುತ ಸುಖದಲಿ ಜಗ ಮರೆವಾ
ಮಧುರಮಯಾ ರಮ್ಯ ತಾಣ
ಹೆಣ್ಣು : ಒಲಿದ ಮನ ಪ್ರೇಮಗಾನಾ
ಗಂಡು : ರಾಗ ಮೋಹನ ಅನುರಾಗ ಜೀವನ
ಹೆಣ್ಣು : ಭಾವ ಬಂಧನ ಎದೆಯಾಸೆ ಚೇತನ
ಗಂಡು : ನೀನೇ ಮಿಡಿಯುವೇ ಮನಸಿಗೆ ಒಲುಮೆಯ ಕನಸಿಗೆ ಬೆಳಕಿನ ಸವಿ ಕಿರಣ
ಹೆಣ್ಣು :ಗಗ ಮಪಮಗ ಮಪಮಗ ಮಪಮಗ ಮಪಮಗ ಗಗಗಗ ಗಗಗಸ
ಗಂಡು : ಮಧುರಮಯಾ... ರಮ್ಯ ತಾಣ
ಹೆಣ್ಣು : ಒಲಿದ ಮನ ಪ್ರೇಮಗಾನಾ
-------------------------------------------------------------------------------------------------------------------------
ಹೆಂಡ್ತಿಗ್ಹೇಳಬೇಡಿ (೧೯೮೯) - ರಾತ್ರಿ ಭಯ
ಸಂಗೀತ : ವಿಜಯಾನಂದ ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಎಸ್.ಪಿ.ಬಿ.
ಕೇಳಿದೆಯಾ, ರಾತ್ರಿ ಭಯಂಕರ ಮಳೆ,
ಗುಡುಗು ಮಿಂಚು ಸಿಡಿಲು.. ಮಿಯಾಂವ್...
ಒಂದು ಪುಟ್ಟ ಬೆಕ್ಕಿನ ಮರಿ ಸಿಡಿಲಿನ ಶಬ್ದಕ್ಕೆ ಹೆದರಿ
ದಡಾರಂತ... ಚರಂಡಿಯಲ್ಲಿ ಬಿತ್ತು ನೀರಲ್ಲಿ ಈಜ್ತಾ ಬಂತು
ಅಲ್ಲೊಂದು ಪೈಪು, ಹತ್ತಿ ನೋಡ್ತು ಬರೀ ಕತ್ತಲೇ
ಹೆದರಿ ಗಡಗಡಾಂತ ನಡಗ್ತಾ (ಎನ್ಮಾಡ್ತು)
ಅಹ್ಹಹ್ಹ... ಅಮ್ಮ ಎಲ್ಲಿ ನೀ ನನ್ನ ಬಳಿಗೆ ಬಾ
ನಡು ನಡುಗುತಾ ತಿರುಗಿದೆ ದಾರಿ ತಿಳಿಯದೆ
ಮನೆ ಎಲ್ಲಿ ಅರಿಯದೆ ಮರಿ ಇಲ್ಲಿ ಅಳುತಿದೆ
ಚಳಿಯು ನಾನು ತಾಳಲಾರೆ ಬಂದು ಅಪ್ಪು ನೀ
ಈ ಹಸಿವ ನಾನು ತಾಳಲಾರೇ ತಿಂಡಿ ನೀಡು ನೀ
ನಿನ ಕಂದನಾ ಅಳುವಿದು ನಿನಗೆ ಕೇಳದೇ ಹ್ಹಾ....
ಪಾಪ ಹ್ಹುಂಹ್ಹುಂಹ್ಹುಂ ಪಕ್ಕದ್ದಲ್ಲೊಂದು ಘಮಾ ಘಮಾ ವಾಸನೆ
ನೋಡ್ತು ರೊಟ್ಟಿ ತುಂಡು ಮರಿಗೋ ಯಮ ಹಸಿವು
ಸಂತೋಷ ಆಗ್ಹೋಯ್ತು ಇನ್ನೇನು ರೊಟ್ಟಿಗೆ ಬಾಯ್ ಹಾಕ್ಬೇಕು
ಅಹ್ಹಹ್ಹಹ್ಹಹ್ಹ .... ಭಯಂಕರ ನಗು, ನೋಡ್ತು ರಾಕ್ಷಸ ಇಲಿ
ಯಾರದೂ ...ಬೆಕ್ಕಿನ ಮರಿ ಎದೆ ನಡಗಹೊಯ್ತು
ಆಹ್ಹಹ್ಹ ಯಾರದು ಬಂದೋರು ನನ್ನ ಕೋಟೆಗೆ ಹ್ಹಾ..
ಅಪ್ಪಣೆ ಕೊಟ್ಟೋರು ಯಾರು ನಿನಗೆ ಬಂದೋರಿಲ್ಲಿ ಹೋಗೋದಿಲ್ಲ
ಸುಮ್ಮನೇ ನಾ ಬಿಡೋದಿಲ್ಲಾ ಮಾಡ್ತೀನಿ ಶಾಸ್ತಿ ನಿನಗೇ ಹ್ಹಾಂ ! (ಆಮೇಲೆ)
ಇಲಿ ಹಾರಿತು ಬೆಕ್ಕಿನ ಮರಿ ಹಿಡಿತು ಮರಿ ಬಿಡಿಸ್ಕೊಳ್ಳೋಕ್ಕಾಗದೇ ಒದ್ದಾಡತು ಮಿಯಾಂವ್...
ಇಲಿ ಹತ್ರ ಬೇಡ್ಕೊಳ್ತು ಬಿಡು ನನ್ನನ್ನು
ಇಲಿ ಅಣ್ಣನೇ ನಾ ಬೇಡುವೆ ಬಿಡು ಸುಮ್ಮನೆ ದೆಯೇ ಎಂಬುದು ನಿನಗಿಲ್ಲವೇ
ಬಡಪಾಯಿ ಮೇಲಿಂದು ಈ ಕೋಪವೇ
ಇಲ್ಲಿ ಹೀಗಾದ್ರೇ ಅಲ್ಲಿ ತಾಯಿ ಬೆಕ್ಕು ಮರಿ ಕಾಣದೇ ಹುಡುಕ್ತಾ ಬಂತು
ಎಲ್ಲಿ ನನ್ನ ಮರಿ ಕಾಣೆನೆ ಅದು ಅಲ್ಲಿ ಎಲ್ಲಿ ಹೋಯ್ತು ನಾನು ತಿಳಿಯನೇ
ಎಲ್ಲೇ ಇದ್ದರು ನೀನು ಬೇಗ ಬಾ ನನ್ನ ಮುದ್ದಿನ ಪುಟ್ಟ ಕಂದನೇ ತಾಯಿ ಬಳಿ ಓಡಿ ಓಡಿ ಬಾ
ಹುಡುಕ್ತಾ ಬರ್ತಿದ್ದ ತಾಯಿ ಬೆಕ್ಕನ್ ನೋಡ್ತು ಮರಿ ಬೆಕ್ಕು ಇಲಿ ಕೈಲಿ ಸಿಕ್ಕೊಂಡಿದೆ
ಏಯ್ ಬಿಡು ನನ್ನ ಮರೀನಾ ಅಂತೂ ಅದಕ್ ಇಲಿ ಹೇಳ್ತು
ಏಯ್ ! ಇದುವರಗೂ ನೀವು ನಮ್ಮನ್ ತಿಂದ್ಹಾಕ್ತಾ ಇದ್ರೀ
ಇವತ್ತೂ ನಾವೂ ನಿಮ್ಮನ್ನ ಕೊಂದ್ಹಾಕ್ತಿವಿ ಅಹ್ಹಹ್ಹಹ್ಹ ಇಲಿ ನೇಗಿತು ಬೆಕ್ಕು ಹಾರಿತು
ಯುದ್ಧ.....
ಕಡೆಗೆ ಇಲಿ ಹೆದರಿಕೊಂಡ ಓಡಿ ಹೋಯ್ತು ಮರಿ ಸಂತೋಷದಿಂದಾ ಅಮ್ಮನ್ ತಬ್ಬಕೊಂಡು
ಲಾಲಾಲಾ ಲಾಲಾಲಾ ಹೇಹೇಹೇಹೇಹೇ ಓಹೋಹೊಹೋ
ನಾನು ನೀನು ಒಂದು ಸೇರಿ ಆಡುವಾ ಪ್ರೀತಿಯಿಂದ ಅಪ್ಪಿಕೊಂಡು ಹಾಡುವಾ
ಅಮ್ಮ ನಿನ್ನಯಾ ಮಾತು ತಪ್ಪೇನು ನಾನು ಎಲ್ಲೂ ದೂರ ಹೋಗೆನು
ರಂಪರಂಪ ರಂಪಪ್ಪಪ್ಪ ರಂಪರಂಪ ರಂಪಪ್ಪಪ್ಪ ರಂಪರಂಪ ರಂಪಪ್ಪಪ್ಪ
ರಂಪಪ್ಪಪ್ಪ ರಂಪಪ್ಪಪ್ಪ ರಂಪಪ್ಪಪ್ಪ ...
--------------------------------------------------------------------------------------------------------------------------
ಹೆಂಡ್ತಿಗ್ಹೇಳಬೇಡಿ (೧೯೮೯) - ನಂಬು ನನ್ನ ನಲ್ಲೆ
ಸಂಗೀತ : ವಿಜಯಾನಂದ ಸಾಹಿತ್ಯ : ಸು.ರುಧ್ರಮೂರ್ತಿ ಶಾಸ್ತ್ರೀ, ಗಾಯನ : ಎಸ್.ಪಿ.ಬಿ.
ನಂಬು ನನ್ನ ನಲ್ಲೆ ಕೋಪ ಏತಕೆ...
ನಿನ್ನನು ಬಿಟ್ಟರೆ ಇಲ್ಲವೇ ನನ್ನಯ ಬಾಳು
ತಪ್ಪನು ಮನ್ನಿಸಿ ನನ್ನೀ ಮೋರೆಯಾ ಕೇಳು
ಸಂಗ ಬಿಡದೆ ಮಾತಾಡೇ ಬೇಗ ಒಲಿದು ದಯೆತೋರೆ
ಭೂಮಿ ತಾಯಿ ಆಣೆ ಬಾಷೆ ಕೊಡುವೇ ಬಾ ಬಾರೆ
ಅಕ್ಕ ತಂಗಿ ತಾಯಿ ಹಾಗೆ ಬೇರೆ ನಾರಿ ನನ್ನ ಪಾಲಿಗೆ..
ನಂಬು ನನ್ನ ನಲ್ಲೆ... ಕೋಪ ಏತಕೆ
ಪ್ರೀತಿಯಿಂದ ಒಲಿದೊಳೆ ಕಣ್ಣು ಏಕೆ ಕೆಂಪಾಯ್ತು
ಸುಖದ ಸುಗ್ಗಿ ತಂದೋಳೆ ಮನಸು ಏಕೆ ಕಲ್ಲಾಯ್ತು
ಬೇಡ ಇಂಥ ಅನುಮಾನವೂ...
ಬಾಳದಾರಿಯಲ್ಲಿ ಎಂದೂ ನಡೆವೆ ನೀನು ನುಡಿದಂತೇ
ದೇವಿ ನೀನು ದಾಸ ನಾನು ನಲ್ಲೇ ಇನ್ನೂ ಬೀಡು ಚಿಂತೇ
ಒಳಗೇ ನೀನು ಹೊರಗೆ ನಾನು ಕರುಣೆ ನಿನಗೇ ಬಾರದೇನೂ
ನಂಬು ನನ್ನ ನಲ್ಲೇ..... ಕೋಪ ಏತಕೆ
ತೋಳಿನಲ್ಲಿ ನೀ ಬಂದೆ ತಂಪು ಗಾಳಿ ಬಂದಂತೆ
ಬಾಳದಾರಿಯಲ್ಲಿ ಎಂದೂ ನಡೆವೆ ನೀನು ನುಡಿದಂತೇ
ದೇವಿ ನೀನು ದಾಸ ನಾನು ನಲ್ಲೇ ಇನ್ನೂ ಬೀಡು ಚಿಂತೇ
ಒಳಗೇ ನೀನು ಹೊರಗೆ ನಾನು ಕರುಣೆ ನಿನಗೇ ಬಾರದೇನೂ
ನಂಬು ನನ್ನ ನಲ್ಲೇ..... ಕೋಪ ಏತಕೆ
ಜೀವ ಭಾವ ಒಂದಾಯ್ತು ಹೂವು ಕಂಪು ಬೆರೆತಂತೆ
ಒಲವೇ ನಮ್ಮ ಬದುಕಾಗಿದೆ
ಏಳು ಹೆಜ್ಜೆ ಇಟ್ಟ ನಾವು ಏಳು ಜನ್ಮ ಸಂಗಾತಿ
ಏಳು ಲೋಕ ನಾಚಬೇಕು ನೋಡಿ ನಮ್ಮ ಈ ಪ್ರೀತಿ
ಏಳು ಸ್ವರವು ಸೇರಿದಂತೇ ಬಾಳು ಮಧುರ ಗೀತೆಯಂತೇ...
ನಂಬು ನನ್ನ ನಲ್ಲೆ ಕೋಪ ಏತಕೆ
ನಿನ್ನನು ಬಿಟ್ಟರೆ ನನ್ನಯ ಬಾಳು
ನಿನ್ನನು ಬಿಟ್ಟರೆ ನನ್ನಯ ಬಾಳು
ತಪ್ಪನು ಮನ್ನಿಸಿ ನನ್ನೀ ಮೋರೆಯಾ ಕೇಳು
ಸಂಗ ಬಿಡದೆ ಮಾತಾಡೇ ಬೇಗ ಬಂದು ದಯೆತೋರೆ
ಭೂಮಿ ತಾಯಿ ಆಣೆ ಬಾಷೆ ಕೊಡುವೇ ಬಾ ಬಾರೆ
ಅಕ್ಕ ತಂಗಿ ತಾಯಿ ಹಾಗೆ ಬೇರೆ ನಾರಿ ನನ್ನ ಪಾಲಿಗೆ
-------------------------------------------------------------------------------------------------------------------------
ಸಂಗ ಬಿಡದೆ ಮಾತಾಡೇ ಬೇಗ ಬಂದು ದಯೆತೋರೆ
ಭೂಮಿ ತಾಯಿ ಆಣೆ ಬಾಷೆ ಕೊಡುವೇ ಬಾ ಬಾರೆ
ಅಕ್ಕ ತಂಗಿ ತಾಯಿ ಹಾಗೆ ಬೇರೆ ನಾರಿ ನನ್ನ ಪಾಲಿಗೆ
-------------------------------------------------------------------------------------------------------------------------
ಹೆಂಡ್ತಿಗ್ಹೇಳಬೇಡಿ (೧೯೮೯) - ನೀ ಮುರಿದೆ ಬಾಳನು
ಸಂಗೀತ : ವಿಜಯಾನಂದ ಸಾಹಿತ್ಯ : ಸು.ರುಧ್ರಮೂರ್ತಿ ಶಾಸ್ತ್ರೀ, ಗಾಯನ : ಚಿತ್ರಾ
(ಆಆಆಆಅ... ಆಆಆಆ.....ಆಆಆಆ )
ಆಆಆಆಅ...
ನೀ.. ನೇ ಮುರಿದೆ ಬಾಳನು ನೀ.. ನೇ ಕರೆದೆ ಸಾವನು
ಬಾಯಾರಿದಾ ಕಾಮದಾ ಪಾಶಕೆ
ನೀ ನೂಕಿದೆ ನನ್ನನು ಕೊಲ್ಲುವಾ ಉರಿಯಾಗಿದೆ
ನೀ.. ನೇ ಮುರಿದೆ ಬಾಳನು ನೀ.. ನೇ ಕರೆದೆ ಸಾವನು
ಬಾಳಿಗಾಗಿ ಬಂದೆ ಬಾಗಿಲಲಿ ನಿಂದೆ
ನೀನೇ ದೇವರೆಂದು ನಾನು ನಂಬಿಕೊಂಡೇ
ಮಾನ ಪ್ರಾಣ ಎಲ್ಲ ನಿನ್ನ ಕೈಯಲೆಯಿಟ್ಟೆನಲ್ಲ
ಹಿತ ನೀಡಿದ ಮೇಲೆ ಕಹಿ ಜೀವನ ತಂದೆ
ದಯೆ ತೋರಿದ ನೀನೇ ಕೊಲೆ ಪಾತಕಿಯಾದೆ
ನೀನೇ ಬದುಕಲು ಬಂದ ಸಿರಿಯಾದೆ
ನೀ.. ನೇ ಮುರಿದೆ ಬಾಳನು ನೀ.. ನೇ ಕರೆದೆ ಸಾವನು
ಹೂವಿನಂಥ ಜೀವ ನಂದಿ ಹೋಯಿತಲ್ಲ
ಕ್ರೂರ ಬೆಂಕಿಯಲ್ಲಿ ಬೆಂದು ಹೋಯಿತಲ್ಲ
ಜೀವ ಹೋದರೇನು ನಾನು ದೂರವಾಗಲಾರೆ
ಮಿಣುಕಾಡಿದರೇನು ಕಡಲಾಗುವೆ ನಿಲ್ಲಿ
ಉರಿ ತಾಕಿದ ಮೇಲೆ ಬರಿ ಸಾವಿನ ಲೀಲೆ
ನೀನೇ ಕಟುಕನು ನೀನೇ ಯಮನಾದೆ
ನೀ.. ನೇ ಮುರಿದೆ ಬಾಳನು ನೀ.. ನೇ ಕರೆದೆ ಸಾವನು
ಬಾಯಾರಿದಾ ಕಾಮದಾ ಪಾಶಕೆ ನೀ ನೂಕಿದೆ
ನನ್ನನು ಕೊಲ್ಲುವಾ ಉರಿಯಾಗಿದೆ
------------------------------------------------------------------------------------------------------------------------- ಬಾಯಾರಿದಾ ಕಾಮದಾ ಪಾಶಕೆ ನೀ ನೂಕಿದೆ
ನನ್ನನು ಕೊಲ್ಲುವಾ ಉರಿಯಾಗಿದೆ
No comments:
Post a Comment