ಒಂದೇ ಕುಲ ಒಂದೇ ದೈವ ಚಲನಚಿತ್ರದ ಹಾಡುಗಳು
- ಯಾರ ಎದೆಯ ತಂತಿ ಮಿಡಿದು ಯಾರ ಸೋಲಿಸಿ
- ಗಾಂಧೀ ತಾತನ ಸನ್ನಿಧಿಗೊಂದು
- ಹತ್ತರ ಮೇಲೆ ಆರು ಇದು ಸೇರಿದರೇ ಹದಿನಾರೂ
ಒಂದೇ ಕುಲ ಒಂದೇ ದೈವ (೧೯೭೧) - ಯಾರ ಎದೆಯ ತಂತಿ ಮಿಡಿದು ಯಾರ ಸೋಲಿಸಿ
ಸಂಗೀತ : ರಾಜನ್ ನಾಗೇಂದ್ರ ಸಾಹಿತ್ಯ : ಹುಣುಸೂರು ಕೃಷ್ಣಮೂರ್ತಿ ಗಾಯನ : ಪಿ.ಬಿ.ಎಸ್. ಎಸ್ ಜಾನಕೀ
ಗಂಡು : ಯಾರ ಎದೆಯ ತಂತಿ ಮಿಡಿದು ಯಾರ ಸೋಲಿಸಿ ಹೆಣ್ಣು : ಆಆಆ....
ಯಾರ ಎದೆಯ ತಂತಿ ಮಿಡಿದು ಯಾರ ಸೋಲಿಸಿ
ಯಾವ ರಾಗ ನುಡಿಸಲೆಂದು ಬಂದೆ ಹೇಳೇ ಪ್ರೇಯಸಿ... ಬಂದೆ ಹೇಳೇ ಪ್ರೇಯಸಿ
ಹೆಣ್ಣು : ನೀನೇ ತಂತಿ ನೀನೇ ರಾಗ ನೀನೇ ತಾಳವು
ನಿನ್ನ ಕೈಯೊಳಾಡುವಂಥ ಬೊಂಬೆ ನನ್ನ ಪ್ರಾಣವು... ಬೊಂಬೆ ನನ್ನ ಪ್ರಾಣವು
ಗಂಡು : ನಾನು ನೀನು ಬೇರೆ ಬೇರೆ ಎಂಬುದೀಗ ಎಲ್ಲಿದೆ
ನಾನು ನೀನು ಬೇರೆ ಬೇರೆ ಎಂಬುದೀಗ ಎಲ್ಲಿದೆ
ದೇಹ ಎರಡು ಪ್ರಾಣ ಒಂದು ಅನ್ನೋ ಭಾವ ಮೂಡಿದೆ
ಹೆಣ್ಣು : ಜಾತಿ ನೀತಿ ಕುಲದ ಕಟ್ಟು ಪ್ರೇಮಕಿಲ್ಲವೆಂದು
ಸತ್ಯವೆಂದು ತಿಳಿಯಿತಿಂದು ಸಾಕು ದೂರ ಇರುವುದು
ಸತ್ಯವೆಂದು ತಿಳಿಯಿತಿಂದು ಸಾಕು ದೂರ ಇರುವುದು
ಗಂಡು : ಯಾರ ಎದೆಯ ತಂತಿ ಮಿಡಿದು ಯಾರ ಸೋಲಿಸಿ ಹೆಣ್ಣು : ಆಆಆ....
ಯಾವ ರಾಗ ನುಡಿಸಲೆಂದು ಬಂದೆ ಹೇಳೇ ಪ್ರೇಯಸಿ... ಬಂದೆ ಹೇಳೇ ಪ್ರೇಯಸಿ.. ಆಆಆ.. ಲಲಲಲಾ ... ಆಆಆ
ಹೆಣ್ಣು : ಯಾರು ಏನು ಯಾಕೆ ಎಂಬ ಭಯ ಇಲ್ಲವಾಯಿತು
ಗಂಡು : ಬಾಷೆ ಸೋತು ಆಸೆ ಮೊಳಿತು ಮನಸು ಮೇರೇ ದಾಟಿತು
ಹೆಣ್ಣು : ನಾಡಿಗೆಲ್ಲಾ ನಮ್ಮದೊಂದು ರೀತಿ ನೀತಿ ತೋರುವಾ
ಗಂಡು : ಜೋಡಿ ಹಕ್ಕಿಯಂತೆ ಕೂಡಿ ಪ್ರೇಮ ಸುಧೆಯು ಹೀರುವ
ಇಬ್ಬರು : ಜೋಡಿ ಹಕ್ಕಿಯಂತೆ ಕೂಡಿ ಪ್ರೇಮ ಸುಧೆಯು ಹೀರುವ
ಹೆಣ್ಣು : ನೀನೇ ತಂತಿ ನೀನೇ ರಾಗ ನೀನೇ ತಾಳವು
ನಿನ್ನ ಕೈಯೊಳಾಡುವಂಥ ಬೊಂಬೆ ನನ್ನ ಪ್ರಾಣವು... ಬೊಂಬೆ ನನ್ನ ಪ್ರಾಣವು
ಒಂದೇ ಕುಲ ಒಂದೇ ದೈವ (೧೯೭೧) - ಗಾಂಧಿ ತಾತನ ಸನ್ನಿದಿಗೊಂದು
ಸಂಗೀತ : ರಾಜನ್ ನಾಗೇಂದ್ರ ಸಾಹಿತ್ಯ : ಹುಣುಸೂರು ಕೃಷ್ಣಮೂರ್ತಿ ಗಾಯನ : ಬಿ.ಕೆ.ಸುಮಿತ್ರಾ
ಗಂಡು : ಯಾರ ಎದೆಯ ತಂತಿ ಮಿಡಿದು ಯಾರ ಸೋಲಿಸಿ ಹೆಣ್ಣು : ಆಆಆ....
ಯಾರ ಎದೆಯ ತಂತಿ ಮಿಡಿದು ಯಾರ ಸೋಲಿಸಿ
ಯಾವ ರಾಗ ನುಡಿಸಲೆಂದು ಬಂದೆ ಹೇಳೇ ಪ್ರೇಯಸಿ... ಬಂದೆ ಹೇಳೇ ಪ್ರೇಯಸಿ
ಹೆಣ್ಣು : ನೀನೇ ತಂತಿ ನೀನೇ ರಾಗ ನೀನೇ ತಾಳವು
ನಿನ್ನ ಕೈಯೊಳಾಡುವಂಥ ಬೊಂಬೆ ನನ್ನ ಪ್ರಾಣವು... ಬೊಂಬೆ ನನ್ನ ಪ್ರಾಣವು
ಗಂಡು : ನಾನು ನೀನು ಬೇರೆ ಬೇರೆ ಎಂಬುದೀಗ ಎಲ್ಲಿದೆ
ನಾನು ನೀನು ಬೇರೆ ಬೇರೆ ಎಂಬುದೀಗ ಎಲ್ಲಿದೆ
ದೇಹ ಎರಡು ಪ್ರಾಣ ಒಂದು ಅನ್ನೋ ಭಾವ ಮೂಡಿದೆ
ಹೆಣ್ಣು : ಜಾತಿ ನೀತಿ ಕುಲದ ಕಟ್ಟು ಪ್ರೇಮಕಿಲ್ಲವೆಂದು
ಸತ್ಯವೆಂದು ತಿಳಿಯಿತಿಂದು ಸಾಕು ದೂರ ಇರುವುದು
ಸತ್ಯವೆಂದು ತಿಳಿಯಿತಿಂದು ಸಾಕು ದೂರ ಇರುವುದು
ಗಂಡು : ಯಾರ ಎದೆಯ ತಂತಿ ಮಿಡಿದು ಯಾರ ಸೋಲಿಸಿ ಹೆಣ್ಣು : ಆಆಆ....
ಯಾವ ರಾಗ ನುಡಿಸಲೆಂದು ಬಂದೆ ಹೇಳೇ ಪ್ರೇಯಸಿ... ಬಂದೆ ಹೇಳೇ ಪ್ರೇಯಸಿ.. ಆಆಆ.. ಲಲಲಲಾ ... ಆಆಆ
ಗಂಡು : ಬಾಷೆ ಸೋತು ಆಸೆ ಮೊಳಿತು ಮನಸು ಮೇರೇ ದಾಟಿತು
ಹೆಣ್ಣು : ನಾಡಿಗೆಲ್ಲಾ ನಮ್ಮದೊಂದು ರೀತಿ ನೀತಿ ತೋರುವಾ
ಗಂಡು : ಜೋಡಿ ಹಕ್ಕಿಯಂತೆ ಕೂಡಿ ಪ್ರೇಮ ಸುಧೆಯು ಹೀರುವ
ಇಬ್ಬರು : ಜೋಡಿ ಹಕ್ಕಿಯಂತೆ ಕೂಡಿ ಪ್ರೇಮ ಸುಧೆಯು ಹೀರುವ
ಹೆಣ್ಣು : ನೀನೇ ತಂತಿ ನೀನೇ ರಾಗ ನೀನೇ ತಾಳವು
ನಿನ್ನ ಕೈಯೊಳಾಡುವಂಥ ಬೊಂಬೆ ನನ್ನ ಪ್ರಾಣವು... ಬೊಂಬೆ ನನ್ನ ಪ್ರಾಣವು
ಇಬ್ಬರು : ಆಆಆ.... ಆಆಆ.... ಲಲಲಲಾ
--------------------------------------------------------------------------------------------------------------------------ಒಂದೇ ಕುಲ ಒಂದೇ ದೈವ (೧೯೭೧) - ಗಾಂಧಿ ತಾತನ ಸನ್ನಿದಿಗೊಂದು
ಸಂಗೀತ : ರಾಜನ್ ನಾಗೇಂದ್ರ ಸಾಹಿತ್ಯ : ಹುಣುಸೂರು ಕೃಷ್ಣಮೂರ್ತಿ ಗಾಯನ : ಬಿ.ಕೆ.ಸುಮಿತ್ರಾ
ಗಾಂಧೀ ತಾತನ ಸನ್ನಿಧಿಗೊಂದು ಬಾಲಕಿ ಬರೆದ ವಿನಂತಿ ..
ಗಾಂಧೀ ತಾತನ ಸನ್ನಿಧಿಗೊಂದು ಬಾಲಕಿ ಬರೆದ ವಿನಂತಿ ..
ವಂದಿಸಿ ಮೊದಲು ನಿನ್ನಡಿಗಿಂದು ತಿಳಿಸುವೆನಿಲ್ಲಿಯ ರೀತಿ
ಗಾಂಧೀ ತಾತನ ಸನ್ನಿಧಿಗೊಂದು ಬಾಲಕಿ ಬರೆದ ವಿನಂತಿ ..
ಉತ್ತರ ದಕ್ಷಿಣ ಪೂರ್ವ ಬೇರೆ ಅನ್ನುವ ಲಟಾಪಟಿ
ಉತ್ತರ ದಕ್ಷಿಣ ಪೂರ್ವ ಬೇರೆ ಅನ್ನುವ ಲಟಾಪಟಿ
ತುಂಬಿದೆ ತಾತಾ ಬಂದ ನೋಡು ನಿನ್ನ ಮಕ್ಕಳ ಪೈಪೋಟಿ
ತಾಯಿ ಒಬ್ಬಳೇ ಎಂಬುದು ಮರೆತು
ಪ್ರಾಂತ್ಯ ಪ್ರಾಂತ್ಯಕೂ ಜಗಳವಿಲ್ಲ
ಭಾಷೇ ಭಾಷೆಗೂ ತಕರಾರಿಲ್ಲ ಸರಹದ್ದೆನುವ ಹೆಸರಿನಲ್ಲಿ
ಗಾಂಧೀ ತಾತನ ಸನ್ನಿಧಿಗೊಂದು ಬಾಲಕಿ ಬರೆದ ವಿನಂತಿ ..
ಲಾಠಿ ಏಟು ಗುಂಡಿನ ಏಟು ಬಿದ್ದರೂ ನೀನು ಜಗ್ಗಲಿಲ್ಲ
ವಂದೇ ಮಾತರಂ.... ವಂದೇ ಮಾತರಂ... ಅನ್ನೋ ಘೋಷ
ಬದುಕಿರುವ ತನಕ ಬಿಡಲಿಲ್ಲ
ಅಂದು ನೀನು ಮಾಡಿದ ತ್ಯಾಗ ಇಂದಿನ ಪ್ರಜೆಗಳು ತಿಳಿದಿಲ್ಲ
ಒಂದಾಗಿ ಬಾಳುವ ಬುದ್ಧಿಯಂತೂ ಇನ್ನೂ ಇವರಿಗೆ ಹುಟ್ಟಿಲ್ಲ
ಗಾಂಧೀ ತಾತನ ಸನ್ನಿಧಿಗೊಂದು ಬಾಲಕಿ ಬರೆದ ವಿನಂತಿ ..
ಭಾರತ ದೇಶದ ವಾಸಿಗಳೆಲ್ಲ ಒಂದೇ ಕುಲವೆಂದ್ಹೇಳಿದೇ
ಹೇಳಿದಂತೆ ಆಚರಿಸಿ ಸ್ವಾತಂತ್ರ್ಯ ತಂದು ನೀಡಿದೇ
ನೀನು ಮತ್ತು ಚಾಚಾ ನೆಹರು ಕಟ್ಟಿದ ಈ ಸಾಮ್ರಾಜ್ಯ
ಗಾಳಿಗೆ ಹೆದರೋ ಕಾಲ ಬಂತು ಬುದ್ದಿ ಹೇಳಿ ಬಾರೋ ತಾತಾ
ಗಾಂಧೀ ತಾತನ ಸನ್ನಿಧಿಗೊಂದು ಬಾಲಕಿ ಬರೆದ ವಿನಂತಿ ..
ವಂದಿಸಿ ಮೊದಲು ನಿನ್ನಡಿಗಿಂದು ತಿಳಿಸುವೆನಿಲ್ಲಿಯ ರೀತಿ
ಗಾಂಧೀ ತಾತನ ಸನ್ನಿಧಿಗೊಂದು ಬಾಲಕಿ ಬರೆದ ವಿನಂತಿ ..
--------------------------------------------------------------------------------------------------------------------------ಒಂದೇ ಕುಲ ಒಂದೇ ದೈವ (೧೯೭೧) - ಹತ್ತರ ಮೇಲೆ ಆರು ಇದು ಸೇರಿದರೇ ಹದಿನಾರು
ಸಂಗೀತ : ರಾಜನ್ ನಾಗೇಂದ್ರ ಸಾಹಿತ್ಯ : ಹುಣುಸೂರು ಕೃಷ್ಣಮೂರ್ತಿ ಗಾಯನ : ಎಸ್ ಜಾನಕೀ
ಹತ್ತರ ಮೇಲೆ ಆರು ಇದು ಸೇರಿದರೇ ಹದಿನಾರೂ
ಹತ್ತರ ಮೇಲೆ ಆರು ಇದು ಸೇರಿದರೇ ಹದಿನಾರೂ
ಈ ವಯಸ್ಸು ತುಂಬಲೂ ಹೆಣ್ಣಿಗೇ ಪ್ರಾಯ...
ಈ ಪ್ರಾಯ ತುಂಬಾ ಅಪಾಯ
ಈ ಪ್ರಾಯ ತುಂಬಾ ಅಪಾಯ
ಹತ್ತರ ಮೇಲೆ ಆರು ಇದು ಸೇರಿದರೇ ಹದಿನಾರೂ
ಮೈಯ್ಯೊಳಗೆಲ್ಲಾ ಮಿಂಚೂ ಮಾತುಳಗೆಲ್ಲಾ ಸಂಚೂ
ಮೈಯ್ಯೊಳಗೆಲ್ಲಾ ಮಿಂಚೂ ಮಾತುಳಗೆಲ್ಲಾ ಸಂಚೂ
ಹಂಚಿ ಹಂಚಿ ಕಣ್ಣಂಚಿನಲ್ಲಿ ಅಹ್ಹ್... ಜೋಡಿ ಹುಡುಕುವ ಸಂಚೂ ...
ಈ ಪ್ರಾಯ ತುಂಬಾ ಅಪಾಯ
ಹತ್ತರ ಮೇಲೆ ಆರು ಇದು ಸೇರಿದರೇ ಹದಿನಾರೂ
ಆಆಆ...ಆಆಆ...ಆ...ಆ....ಆ ಆಆಆ ಆಆಆ...ಆಆಆ...ಆ...ಆ....ಆ ಆಆಆ
ನಿದ್ದೆಯ ಕೆಡಿಸುವ ಕನಸೂ ಅಲ್ಲಿ ಕಾಣುವನೊಬ್ಬ ಆರಸೂ
ನಿದ್ದೆಯ ಕೆಡಿಸುವ ಕನಸೂ ಅಲ್ಲಿ ಕಾಣುವನೊಬ್ಬ ಆರಸೂ
ಆಸೆಯಿಂದ ಮಾತಾಡಿಸುತ ಸ್ನೇಹವ ಕೆಣಕುವ ಸೊಗಸೂ
ಈ ಪ್ರಾಯ ತುಂಬಾ ಅಪಾಯ
ಹತ್ತರ ಮೇಲೆ ಆರು ಇದು ಸೇರಿದರೇ ಹದಿನಾರೂ
ಯೌವ್ವನ ತುಂಬಿದ ಹೆಣ್ಣೂ ರಸಪೂರಿ ಮಾವಿನ ಹಣ್ಣೂ
ಯೌವ್ವನ ತುಂಬಿದ ಹೆಣ್ಣೂ ರಸಪೂರಿ ಮಾವಿನ ಹಣ್ಣೂ
ತಿನ್ನಲ್ಲೆಲ್ಲಾ ಕಾಮಣ್ಣರಿಗೂ ಪೇಳಗಿಯ ಮೇಲೆ ಕಣ್ಣೂ ..
ಈ ಪ್ರಾಯ ತುಂಬಾ ಅಪಾಯ ಅಹ್.. ಅಹ್.. ಅಹ್..
ಹತ್ತರ ಮೇಲೆ ಆರು ಇದು ಸೇರಿದರೇ ಹದಿನಾರೂ
ಈ ವಯಸ್ಸು ತುಂಬಲೂ ಹೆಣ್ಣಿಗೇ ಪ್ರಾಯ...
ಈ ಪ್ರಾಯ ತುಂಬಾ ಅಪಾಯ
ಈ ಪ್ರಾಯ ತುಂಬಾ ಅಪಾಯ
ಹತ್ತರ ಮೇಲೆ ಆರು ಇದು ಸೇರಿದರೇ ಹದಿನಾರೂ
--------------------------------------------------------------------------------------------------------------------------
No comments:
Post a Comment