1720. ಕಾಂತಾರ (೨೦೨೨)



ಕಾಂತಾರ ಚಲನಚಿತ್ರದ ಹಾಡುಗಳು 
  1. ಕರ್ಮದ ಕಲ್ಲನು ಎಡವಿದ ಮನುಜನಸಿ
  2. ವರಾಹ ರೂಪಂ ದೈವ ವರಿಷ್ಟಂ
  3. ಏ ಸಿಂಗಾರ ಸಿರಿಯೇ ಅಂಗಾಲಿನಲೇ
  4. ರೆಬೆಲ್ 
ಕಾಂತಾರ (೨೦೨೨) - ಕರ್ಮದ ಕಲ್ಲನು ಎಡವಿದ ಮನುಜನಸಿ
ಸಂಗೀತ : ಬಿ.ಅಜನೀಶ್ ಲೋಕನಾಥ್, ಸಾಹಿತ್ಯ : ತ್ರಿಲೋಕ ತ್ರಿವಿಕ್ರಮ, ಗಾಯನ : ವೆಂಕಟೇಶ 


ಕರ್ಮದ ಕಲ್ಲನು ಎಡವಿದ ಮನುಜನಸಿ ಬೆರಳಿನ ಗಾಯವು ಮಾಯದು
ಹಗೆಯಲಿ ಕೋವಿಗೆ ತಲೆ ಕೊಡೊ ಮರುಳರ ಗುಡಿಯಲಿ ದೈವವು ಕಾಯದು
ಕತ್ತಲನು ಮನಿಸೋಕೆ ಹಚ್ಚಿ ಇತ್ತ ದೀಪ ಊರನ್ನೇ ಸುಡುವಂತ ಜ್ವಾಲೆ ಆಯಿತೇನೋ?

ಒಹ್ ಗರ್ಭದಲ್ಲೇ ಆದ ಗಾಯ, ಹಣೆಬರಹ ಬದುಕಿಡಿ ಮದ್ದು ಹುಡುಕಿ ಅಲೆದಾಡುವೆ
ಯಾರ ಜೊತೆ ಯರಿಯದೆ ನಿನ್ನ ಕಲಹ ನಿನ್ನನ್ನೇ ನೀನು ಹುಡುಕಿ ಕಳೆದೊಗುವೆ

ನುಂಗಿಕೊಂಡರುನು ಮಾಡೋ ಪಾಪನೆಲ್ಲ ಗಂಗೆ ಬಿಟ್ಟು ಹೋಗುತಾಳೆ ಪಶ್ಚತಾಪ ನಂಗೆ ನಿಂಗೆ
ಗರ್ಭದಲ್ಲೇ ಮೆರೆವಾಗ ತೊಟ್ಟ ಹೂವ ಮಾಲೆ ನಾಳೆಗೆ ಹೂ ಉದುರಿ ಕುಣಿಕೆಯಾಗದೇನೋ?
-------------------------------------------------------------------------------------------------

ಕಾಂತಾರ (೨೦೨೨) - ವರಾಹ ರೂಪಂ ದೈವ ವರಿಷ್ಟಂ
ಸಂಗೀತ : ಬಿ.ಅಜನೀಶ್ ಲೋಕನಾಥ್, ಸಾಹಿತ್ಯ : ಶಶಿರಾಜ ಕವೂರ್, ಗಾಯನ : ಸಾಯಿ ವಿಘ್ನೇಶ 

ವರಾಹ ರೂಪಂ ದೈವ ವರಿಷ್ಟಂ
ವರಾಹ ರೂಪಂ ದೈವ ವರಿಷ್ಟಂ ವರಸ್ಮಿತ ವದನಂ..
ವಜ್ರ ದಂತಧರ ರಕ್ಷಾ ಕವಚಂ

ಶಿವ ಸಂಭೂತ ಭುವಿ ಸಂಜಾತ
ನಂಬಿದವ ಗಿಮ್ಬು ಕೊಡುವವನೀತ
ಸಾವಿರ ದೈವದ ಮನ ಸಂಪ್ರೀತ
ಬೇಡುತ ನಿನ್ದೆವು ಆರಾಧಿಸುತ..
--------------------------------------------------------------------------------------------------

ಕಾಂತಾರ (೨೦೨೨) - ಏ ಸಿಂಗಾರ ಸಿರಿಯೇ ಅಂಗಾಲಿನಲೇ
ಸಂಗೀತ : ಅಜನೀಶ್, ಸಾಹಿತ್ಯ : ಪ್ರಮೋದ ಮಾರವಂತೆ, ಗಾಯನ : ವಿಜಯ ಪ್ರಕಾಶ, ಅನನ್ಯ ಭಟ್ಟ, ನಾಗರಾಜ ಪನರ   

ಬತ್ತಾತೊಳು ಕೈಗೆ ಮಡಿ ಉಳೆಸಿದ ಮದ್ವಿ ಹೋದಣ್ಣ ಬರಲಿಲ್ಲ
ಮದ್ವಿ ಹೋದಣ್ಣ ಬರಲಿಲ್ಲ ಬಸರೂರ ಹೂವ ಗಂಟನ್ನ ತೆಗೆದೀಡ
ಏ ಸಿಂಗಾರ ಸಿರಿಯೇ ಅಂಗಾಲಿನಲೇ ಬಂಗಾರ ಆಗೆ ಬಾ ಮಾಯೇ
ಗಾಂಧಾರಿಯಂತೆ ಕಣ್ಮುಚ್ಚಿ ಹೊಂಗನಸ ಅರಸು ಛಾಯೇ
ಮಂದಹಾಸಾ ಆಹಾ ನಲುಮೆಯಾ ಶ್ರಾವಣ ಮಾಸಾ

ಮುದ್ದಾದ ಮಾಯಾಂಗೆ ಮೌನದ ಸಾರಂಗೆ
ಮೋಹದ ಮದರಂಗೆ ನನ್ನ ಹಾಕಿದೆ ಮುಂಗುರುಳ ಸೋಕೆ
ಮಾತಾಡುವಾ ಮಂದಾರವೇ ಕಂಗೊಳಿಸಬೇಡಾ ಹೇಳದೇ
ನಾನೇತಕೆ ನಿನಗ್ಹೇಳಲಿ ನಿನ್ನ ಮೈಯ ತುಂಬಾ ಕಣ್ಣಿದೆ
ಮನದಾಳದ ರಸ ಮಂಚದೀ ರಂಗೇರಿ ನಿನ್ನ ಕಾದಿದೆ
ಪಿಸುಮಾತಿನ ಪಂದ್ಯಾವಳಿ ಆಕಾಶವಾಣಿ ಆಗಿದೆ
ಸಂಜೆಯ ಕೆನ್ನೆಯ ಮೇಲೆ ಬಂದು ನಾಟಿದೆ ನಾಚಿಕೆ ಮುಳ್ಳು
ಮನದಾ ಮಗು ಹಠಮಾಡಿದೆ ಮಾಡುಬಾ ಕೊಂಗಾಟವಾ
ಕಣ್ಣಿಗೆ ಕಾಣೋ ಹೂಗಳೆಲ್ಲ ಏನೋ ಕೇಳುತಿವೆ
ನಿನ್ನಯಾ ನೆರಳ ಮೇಲೆ ನೂರು ಚಾಡಿ ಹೇಳುತಿವೆ
ಏ ಸಿಂಗಾರ ಸಿರಿಯೇ ಅಂಗಾಲಿನಲೇ ಬಂಗಾರ
ಆಗೆ ಬಾ ಮಾಯೇ ಗಾಂಧಾರಿಯಂತೆ ಕಣ್ಮುಚ್ಚಿ
ಹೊಂಗನಸ ಅರಸು ಛಾಯೇ

ಶೃಂಗಾರದ ಸೋಬಾನೆಯ ಕಣ್ಣಾರೆ ನೀನು ಹಾಡಿದೆ
ಈ ಹಾಡಿಗೆ ಕುಣಿದಾಡುವ ಸಾಹಸವ ಯಾಕೆ ಮಾಡುವೆ
ಸೌಗಂಧದ ಸುಳಿಯಾಗಿ ನೀ ನನ್ನೆದೆಗೆ ಬೇಲಿ ಹಾಕಿದೆ
ನಾ ಕಾಣುವಾ ಕನಸಲ್ಲಿಯೇ ನೀನ್ಯಾಕೆ ಬೇಲಿ ಹಾರುವೆ
ಸಂಜೆಯ ಕೆನ್ನೆಯ ಮೇಲೆ ಬಂದು ನಾಟಿದೆ ನಾಚಿಕೆ ಮುಳ್ಳು
ಮನದಾ ಮಗು ಹಠಮಾಡಿದೆ ಮಾಡುಬಾ ಕೊಂಗಾಟವಾ
ಸುಂದರವಾದ ಸೋಜಿಗವೆಲ್ಲಾ ಕಣ್ಣಾ ಮುಂದೆ ಇದೆ
ಬಣ್ಣಿಸಬಂದಾ ರೂಪಕವೆಲ್ಲಾ ತಾನೇ ಸೋಲುತಿದೆ
ಏ ಮಂದಹಾಸಾ ಆಹಾ ನಲುಮೆಯಾ ಶ್ರಾವಣ ಮಾಸಾ
--------------------------------------------------------------------------------------------------

ಕಾಂತಾರ (೨೦೨೨) - ರೆಬೆಲ್ 
ಸಂಗೀತ : ಬಿ.ಅಜನೀಶ್ ಲೋಕನಾಥ್, ಸಾಹಿತ್ಯ : ಶಶಿರಾಜ್ ಕವೂರ್, ಗಾಯನ : ಮಿಮೆ ರಾಮದಾಸ್, ರಿಷಭ ಶೆಟ್ಟಿ  


--------------------------------------------------------------------------------------------------

No comments:

Post a Comment