ಪ್ರೇಮ ಪ್ರೇಮ ಪ್ರೇಮ ಚಲನಚಿತ್ರದ ಹಾಡುಗಳು
- ಮದುವೇ ಎಂಬ ಮೂರಕ್ಷರದಲಿ ಎಂಥ ಒಲವಿದೇ ..
- ಹೇ.. ಹುಡುಗೀ .. ಹೇ ಬೆಡಗಿ ಹೇಳೂ ಏನಾಯ್ತು
- ನನಗೆ ನಿನ್ನಾ ಆಸರೇ ..
- ನಮ್ಮಮ್ಮಾ ಈ ಭೂಮಿಯಾಣೆ
- ಹಿರಿಯರೂ ಎಂದರೇ ..
ಸಂಗೀತ : ರಾಜನ್ ನಾಗೇಂದ್ರ ಸಾಹಿತ್ಯ : ರುಧ್ರಮೂರ್ತಿ ಶಾಸ್ತ್ರಿ ಗಾಯನ : ಎಸ್.ಪಿ.ಬಿ, ಅನುರಾಧ ಶ್ರೀರಾಮ್
ಗಂಡು : ಹೊಸ ಬಾಳ ಹಾದಿಯಲಿ ಸುಖ ಹುಡುಕಿ ಹೊರಟಿರುವ ನವದಂಪತಿಗಳೇ..
ಕಿವಿ ಮಾತೊಂದ ಹೇಳುವೇ ಕೇಳಿ ಮದುಮಕ್ಕಳೇ...
ಮದುವೇ ಎಂಬ ಮೂರಕ್ಷರದಲಿ ಎಂಥ ಒಲವಿದೇ ..
ಸುಖ ಸಂಸಾರದ ಗುಟ್ಟನ್ನೂ ತಿಳಿಸುವ ಅರ್ಥದ ಕಣಜವಿದೇ ..
ಮದುವೇ ಎಂಬ ಮೂರಕ್ಷರದಲಿ ಎಂಥ ಒಲವಿದೇ ..
ಹೆಣ್ಣು : ಕಿರುನಗೆ ಸವಿನುಡಿ ಅಪ್ಪುಗೆಯಿಂದ ನೂರಾರು ಚಿಂತೆಯೂ ಮರೆವನೂ ಗಂಡೂ
ಗಂಡು : ಕೊಂಕ ಬಿಂಕವ ತೋರಿದರೇ .. ಹುಡುಕುವನಾತನೂ ಚಿಕ್ಕಮನೇ ..
ಹೆಣ್ಣು : ಅತ್ತೇ ಮಾವ ನಾದಿನಿ ಮೈದುನ ಎಲ್ಲರ ಆತ್ಮವ ನೀನಾಗೂ
ಗಂಡು : ಸಹನೆ ಕರುಣೆಯ ಕಡಲೊಳಗೇ ಸೇರಿದ ಮನೆಯ ಬೆಳಕಾಗೂ ..
ಸಹನೆ ಕರುಣೆಯ ಕಡಲೊಳಗೇ ಸೇರಿದ ಮನೆಯ ಬೆಳಕಾಗೂ ..
ಹೆಣ್ಣು : ಮದುವೇ ಎಂಬ ಮೂರಕ್ಷರದಲಿ ಎಂಥ ಒಲವಿದೇ ..
ಸುಖ ಸಂಸಾರದ ಗುಟ್ಟನ್ನೂ ತಿಳಿಸುವ ಅರ್ಥದ ಕಣಜವಿದೇ ..
ಮದುವೇ ಎಂಬ ಮೂರಕ್ಷರದಲಿ ಎಂಥ ಒಲವಿದೇ ..
ಕೋರಸ್ : ಪನಿಸಮಗಮಗನಿಸ ಸನಿಸಗಮಗ ಸಗಗಗಮಗ ಮದಸರಿದ ಆಆಆ..
ಗಂಡು : ಗಂಡು ಮೇಲಲ್ಲಾ.. ಹೆಣ್ಣೂ ಕೀಳಲ್ಲಾ.. ಸೇವೆಗೇ ಬಂದ ಸ್ವತ್ತವಳಲ್ಲಾ..
ಕರೆದಾಗ ಬರುವಾ ಕುರಿಯಲ್ಲಾ... ಹೆರುವಾ ಯಂತ್ರವೂ ಅವಳಲ್ಲಾ..
ಹೆಣ್ಣು : ನಿನ್ನಂತೇ ಅವಳಿಗೂ ಮನಸಿದೇ ಎಂದೂ ಅವಳಲೂ ಹಲವಾರು ಕನಸಿದೇ ಎಂದೂ
ಗೌರವ ಕೊಡುವುದ ಕಲಿಯಯ್ಯಾ.. ಪ್ರೀತಿಸಿ ಪ್ರೀತಿಯ ಪಡೆಯಯ್ಯಾ..
ಗೌರವ ಕೊಡುವುದ ಕಲಿಯಯ್ಯಾ.. ಪ್ರೀತಿಸಿ ಪ್ರೀತಿಯ ಪಡೆಯಯ್ಯಾ..
ಗಂಡು : ಮದುವೇ ಎಂಬ ಮೂರಕ್ಷರದಲಿ ಎಂಥ ಒಲವಿದೇ ..
ಹೆಣ್ಣು : ಮದುವೇ ಎಂಬ ಮೂರಕ್ಷರದಲಿ ಎಂಥ ಒಲವಿದೇ ..
ಗಂಡು : ಅನುಭವ ಇಲ್ಲದ ಮೂರ್ತೆಯೂ ಇವಳೂ ಸರಿತಪ್ಪು ತಿಳಿಸಲೂ ಕಲಿವಳು ಇವಳೂ
ಅತ್ತೆ ಮಾವರಾಗಿ ಕಾಡದೀರಿ.. ಹೆತ್ತಮಗಳಂತೇ ಭಾವಿಸಿರೀ ..
ಹೆಣ್ಣು : ತವರನು ತೊರೆದೂ ನಿಮ್ಮವಳೆಂದೂ ಸಾವಿರ ಬಯಕೆಯ ಎದೆಯಲಿ ತುಂಬಿ
ಗೃಹಲಕ್ಷ್ಮಿಯಾಗಿ ಬಂದವಳೂ.. ವಂಶದ ಕುಡಿಯ ಬೆಳೆಸುವಳೂ
ಗಂಡು : ಗೃಹಲಕ್ಷ್ಮಿಯಾಗಿ ಬಂದವಳೂ.. ವಂಶದ ಕುಡಿಯ ಬೆಳೆಸುವಳೂ
ಹೆಣ್ಣು : ಮದುವೇ ಎಂಬ ಮೂರಕ್ಷರದಲಿ ಎಂಥ ಒಲವಿದೇ ..
ಗಂಡು : ಮದುವೇ ಎಂಬ ಮೂರಕ್ಷರದಲಿ ಎಂಥ ಒಲವಿದೇ ..
ಹೆಣ್ಣು : ಕಾರು ಬಂಗಲೇ ದುಡ್ಡು ಕಾಸೂ ಟಿವಿ ಫ್ರಿಡ್ಜ್ ವಸ್ತ್ರ ಒಡವೆಯ ಬೆನ್ನತ್ತಿ ಓಡುವ ಮರುಳರೇ..
ಅವುಗಳೂ ಸುಖದಾ ಸಾಧನವಲ್ಲ..
ಗಂಡು : ಒಬ್ಬರನೊಬ್ಬರೂ ಸರಿಯಾಗಿ ಅರಿತು ಸುಖದುಃಖದಲಿ ಸಮನಾಗಿ ಬೆರೆತೂ
ಸಾಗಲೂ ಸ್ವರ್ಗ ನಿಮ್ಮ ಬಾಳೂ ಇಲ್ಲದೇ ಹೋದರೇ ಬರಿಗೋಳು..
ಹೆಣ್ಣು : ಸಾಗಲೂ ಸ್ವರ್ಗ ನಿಮ್ಮ ಬಾಳೂ ಇಲ್ಲದೇ ಹೋದರೇ ಬರಿಗೋಳು..
ಇಬ್ಬರು : ಮದುವೇ ಎಂಬ ಮೂರಕ್ಷರದಲಿ ಎಂಥ ಒಲವಿದೇ ..
ಸುಖ ಸಂಸಾರದ ಗುಟ್ಟನ್ನೂ ತಿಳಿಸುವ ಅರ್ಥದ ಕಣಜವಿದೇ ..
ಮದುವೇ ಎಂಬ ಮೂರಕ್ಷರದಲಿ ಎಂಥ ಒಲವಿದೇ ..
-----------------------------------------------------------------------------------------------------------
ಪ್ರೇಮ ಪ್ರೇಮ ಪ್ರೇಮ (೧೯೯೯) - ಹೇ.. ಹುಡುಗೀ .. ಹೇ ಬೆಡಗಿ ಹೇಳೂ ಏನಾಯ್ತು
ಸಂಗೀತ : ರಾಜನ್ ನಾಗೇಂದ್ರ ಸಾಹಿತ್ಯ : ರುಧ್ರಮೂರ್ತಿ ಶಾಸ್ತ್ರಿ ಗಾಯನ : ಎಸ್.ಪಿ.ಬಿ, ಅನುರಾಧ ಶ್ರೀರಾಮ್
ಗಂಡು : ಹೇ.. ಹುಡುಗೀ .. ಓ.. ಬೆಡಗಿ ಹೇಳೂ ಏನಾಯ್ತು
ಹೆಣ್ಣು : ಅಯ್ಯಯ್ಯೋ ನನ್ನ ಹೃದಯ ಎಲ್ಲೋ ಕಳೆದೋಹೋಯ್ತು
ಇಲ್ಲೂ ಇಲ್ಲಾ.. ಓ..ಅಲ್ಲೂ ಇಲ್ಲಾ ಹೋಗು ರಾಮ ರಾಮ ಮಾತೂ ಎಲ್ಲೂ ಇಲ್ಲಾ
ಹೇ.. ಹುಡುಗ ಓ..ತುಡುಗ ಹೇಳೂ ಏನಾಯ್ತು
ಗಂಡು : ನಿನ್ನಂತೇ ನನ್ನ ಹೃದಯ ಎಲ್ಲೋ ಕಳೆದೋಹೋಯ್ತು
ಇಲ್ಲೂ ಇಲ್ಲಾ.. ಓ..ಅಲ್ಲೂ ಇಲ್ಲಾ ಶಿವಶಿವ ಅದು ಎಲ್ಲೂ ಇಲ್ಲಾ
ಹುಡುಕೂ ನೀ ನನ್ನ ಹೃದಯವ ನಾ ಹುಡುಕುವೇ ನಿನ್ನ ಹೃದಯವ
ಕೋರಸ್ : ತರ್ ತಾರೋ ರತ್ ತಾರೋ ರತ್ ತಾರೋ
ಚುಂ ಚುಮಾ ಚುಂ ಚುಂ ಚುಮಾ ಚುಂ ಚುಂ ಚುಂ
ಹೆಣ್ಣು : ಹುಡುಗ ಹುಡುಗಿಯ ಹುಡುಕುವನೂ ಹಿಂಬಾಲಿಸುತಾ ನಡೆಯುವನೂ
ಗಂಡು : ಹುಡುಗಿ ಹುಡುಗನ ಹುಡುಕುವಳೂ ನಾಚಿಕೆ ನಾಟಕವಾಡುವಳೂ
ಹೆಣ್ಣು : ಹರೆಯವೂ ಮೆರೆಸಲೂ ಮನಸುಗಳ ಒಲವಿನ ಸವಿಯನೂ ಹುಡುಕುವಳೂ
ಗಂಡು : ಆತುರ.. ಕಾತರ.. ಆತುರ ಕಾತರ ಉದ್ವೇಗ .. ಬಿಸಿಬಿಸಿ ಬಿಸಿಯಾನಾವೇಗ
ಹೆಣ್ಣು : ಸೋಕುವಾ.. ತಾಕುವಾ ಸೋಕುವ ತಾಕುವ ಬಯಕೆಯೂ ತುಟಿಗಳ ಬೆಸೆಯುವ ತವಕವೂ
ಗಂಡು : ಪ್ರೇಮಾ ಅಂದರೇ ಇದೇನಾ.. ಹೆಣ್ಣು : ಆಹಾ.. ಎಂಥ ರೋಮಾಂಚನ
ಗಂಡು : ಹೇ.. ಹುಡುಗೀ .. ಓ.. ಬೆಡಗಿ ಹೇಳೂ ಏನಾಯ್ತುಹೆಣ್ಣು : ಅಯ್ಯಯ್ಯೋ ನನ್ನ ಹೃದಯ ಎಲ್ಲೋ ಸೇರಹೋಯ್ತು
ಇಲ್ಲೂ ಇಲ್ಲಾ.. ಓ..ಅಲ್ಲೂ ಇಲ್ಲಾ ರಾಮ ರಾಮ ಅದೂ ಎಲ್ಲೂ ಇಲ್ಲಾ
ಹುಡುಕೂ ನೀ ನನ್ನ ಹೃದಯವ ನಾ ಹುಡುಕುವೇ ನಿನ್ನ ಹೃದಯವ
ಕೋರಸ್ : ಜೀ ಜೀ ಜೀ ಜೀ ಜಿಚ್ ಜೀ ಜೀ ಜೀ ಜೀ ಜಿಚ್ ರತ್ತತ್ತತ್ತತ್ತಾ ರತ್ತತ್ತತ್ತತ್ತಾ ರತ್ತತ್ತತ್ತತ್ತಾ ರತ್ತತ್ತತ್ತತ್ತಾ
ಗಂಡು : ಹುಡುಕಿ ಕೊಡುವೇನೂ ಹೃದಯವನೂ ಏನೂ ಕೊಡುವೇ ನೀ ಬದಲಾಗಿ
ಹುಡುಕಿ ಕೊಡುವೇನೂ ಹೃದಯವನೂ ಏನೂ ಕೊಡುವೇ ನೀ ಬದಲಾಗಿ
ಹೆಣ್ಣು : ಉಡುಗೊರೆಯಾಗಿ ನನ್ನ ಕೊಡುವೇ ನನ್ನ ಹೃದಯವ ನಿನಗಾಗಿ
ಗಂಡು : ನಿನ್ನಯ.. ಹೃದಯವ .. ನಿನ್ನಯ ಹೃದಯವೂ ನನ್ನಲ್ಲಿದೇ ..
ಹೆಣ್ಣು : ನಿನ್ನ ಹೃದಯವೂ ನನ್ನಲ್ಲಿದೇ ..
ಗಂಡು : ಸಿಕ್ಕಿದೇ .. ಫೈಲ್ ಗೇ .. ಸಿಕ್ಕಿದೇ .. ಫೈಲ್ ಗೇ .. ಲೇ.. ಕಳ್ಳೀ..
ಹೆಣ್ಣು : ನೀನೂ ಕಳ್ಳನೇ.. ಓ ಮಲ್ಲ..
ಹೆಣ್ಣು : ಪ್ರೀತಿಯ ಬೆಸುಗೆ ಇದೇನಾ.. ಗಂಡು : ಆಹಾ.. ಎಂಥಾ ರೋಮಾಂಚನ
ಹೆಣ್ಣು : ಹೇ.. ಹುಡುಗ ಓ..ತುಡುಗ ಹೇಳೂ ಏನಾಯ್ತು
ಗಂಡು : ನಿನ್ನ ಹೃದಯ ನನ್ನ ಹೃದಯ ಸೇರಿ ಒಂದಾಯ್ತುಹೆಣ್ಣು : ಲಲ್ಲಲ್ಲಲ್ಲಾ.. ಲಲಲ್ಲಲಲ ಲಲ್ಲಲ್ಲಲ್ಲಾ.. ಲಲಲ್ಲಲಲ ಲಲ್ಲಲ್ಲಲ್ಲಾ.. ಲಲಲ್ಲಲಲ ಲಲ್ಲಲ್ಲಲ್ಲಾ.. ಲಲಲ್ಲಲಲ
-----------------------------------------------------------------------------------------------------------
ಪ್ರೇಮ ಪ್ರೇಮ ಪ್ರೇಮ (೧೯೯೯) - ನನಗೆ ನಿನ್ನಾ ಆಸರೇ ..
ಸಂಗೀತ : ರಾಜನ್ ನಾಗೇಂದ್ರ ಸಾಹಿತ್ಯ : ಜೆ.ಎಂ.ಪ್ರಲ್ಹಾದ ಗಾಯನ : ಎಸ್.ಪಿ.ಬಿ, ಅನುರಾಧ ಶ್ರೀರಾಮ್
ಹೆಣ್ಣು : ನನಗೇ ನಿನ್ನಾ ಆಸರೇ ನಿನಗೇ ನನ್ನಾ ಆಸರೇ ..
ನನಗೇ ನಿನ್ನಾ ಆಸರೇ ನಿನಗೇ ನನ್ನಾ ಆಸರೇ ..
ನಾನೂ ನೀನೂ ಸೇರಲೂ ಪ್ರೇಮಾ ಒಂದೇ ಆಸರೇ ..
ಪ್ರೇಮಾ... ಪ್ರೇಮಾ ... ಪ್ರೇಮಾ
ಗಂಡು : ನನಗೇ ನಿನ್ನಾ ಆಸರೇ ನಿನಗೇ ನನ್ನಾ ಆಸರೇ ..
ನಾನೂ ನೀನೂ ಸೇರಲೂ ಪ್ರೇಮಾ ಒಂದೇ ಆಸರೇ ..
ಪ್ರೇಮಾ... ಪ್ರೇಮಾ ... ಪ್ರೇಮಾ
ಹೆಣ್ಣು : ರಾರಾರೀ ರಾ ರಿರೀ ರಾರಾರೀ ರಾ ರಿರೀ ರಾರಾ
ಗಂಡು : ರಾರಾರೀ ರಾ ರಿರೀ ರಾರಾರೀ ರಾ ರಿರೀ ರಾರಾ
ಹೆಣ್ಣು : ನೋಡುವ ಕಣ್ಣೂ ಹೃದಯದ ಬಾಷೇ ಮಿಲನಕೆ ಆಸರೇ ..
ನೋಡುವ ಕಣ್ಣೂ ಹೃದಯದ ಬಾಷೇ ಮಿಲನಕೆ ಆಸರೇ ..
ಗಂಡು : ಮೈಯನೂ ಬಳಸೀ ಮುತ್ತಿಡುವಾಸೇ ವಯಸ್ಸಿನ ಆಸರೇ
ಹೆಣ್ಣು : ಅಂದಕೆ ಪ್ರಾಯ ಚೆಂದದ ಸೊಗಸೂ ಕನಸಿಗೇ ಆಸರೇ ..
ಹೆಣ್ಣೂ ಗಂಡೂ .. ಹರುಷದಿ ಬಾಳಲೂ
ಹೆಣ್ಣೂ ಗಂಡೂ .. ಹರುಷದಿ ಬಾಳಲೂ ಪ್ರೇಮ ಒಂದೇ ಆಸರೇ ..
ಪ್ರೇಮಾ... ಪ್ರೇಮಾ ... ಪ್ರೇಮಾ
ಗಂಡು : ನನಗೇ ನಿನ್ನಾ ಆಸರೇ ನಿನಗೇ ನನ್ನಾ ಆಸರೇ ..
ನನಗೇ ನಿನ್ನಾ ಆಸರೇ ನಿನಗೇ ನನ್ನಾ ಆಸರೇ ..
ನಾನೂ ನೀನೂ ಸೇರಲೂ ಪ್ರೇಮಾ ಒಂದೇ ಆಸರೇ ..
ಪ್ರೇಮಾ... ಪ್ರೇಮಾ ... ಪ್ರೇಮಾ
ರಾರಾರೀ ರಾ ರಿರೀ ರಾರಾರೀ ರಾ ರಿರೀ ರಾರಾ
ಹೆಣ್ಣು : ರಾರಾರೀ ರಾ ರಿರೀ ರಾರಾರೀ ರಾ ರಿರೀ ರಾರಾ
ಗಂಡು : ವಂಶದ ಕುಡಿಗೇ ತಂದೆಯೇ ನನಗೇ ನಿನ್ನಯಾ ಆಸರೇ ..
ವಂಶದ ಕುಡಿಗೇ ತಂದೆಯೇ ನನಗೇ ನಿನ್ನಯಾ ಆಸರೇ ..
ಹೆಣ್ಣು : ತಾಳಿಯ ಭಾಗ್ಯಕೇ ತಾಯ್ತನ ಬಯಕೆಗೇ ನಿನ್ನಯ ಆಸರೇ ..
ಗಂಡು : ಮುಪ್ಪಿನ ಕಾಲಕೇ ನೆಮ್ಮದಿ ಬದುಕಿಗೇ ಮಕ್ಕಳಾಸರೇ ..
ನಾಡಿನ ಸುಖಕೇ .. ಹೆಣ್ಣು : ವಿಶ್ವದ ಶಾಂತಿಗೇ....
ಇಬ್ಬರು : ನಾಡಿನ ಸುಖಕೇ .. ವಿಶ್ವದ ಶಾಂತಿಗೇ .. ಪ್ರೇಮ ಒಂದೇ ಆಸರೇ ..
ಪ್ರೇಮಾ... ಪ್ರೇಮಾ ... ಪ್ರೇಮಾ
ಹೆಣ್ಣು : ನನಗೇ ನಿನ್ನಾ ಆಸರೇ ಗಂಡು : ನಿನಗೇ ನನ್ನಾ ಆಸರೇ ..
ಇಬ್ಬರು : ನನಗೇ ನಿನ್ನಾ ಆಸರೇ ನಿನಗೇ ನನ್ನಾ ಆಸರೇ ..
ನಾನೂ ನೀನೂ ಸೇರಲೂ ಪ್ರೇಮಾ ಒಂದೇ ಆಸರೇ ..
ಪ್ರೇಮಾ... ಪ್ರೇಮಾ ... ಪ್ರೇಮಾ
ಹೂಂಹೂಂಹೂಂ.. ಹೂಂಹೂಂಹೂಂ.. ಹೂಂಹೂಂಹೂಂ..
ಹೂಂಹೂಂಹೂಂ.. ಹೂಂಹೂಂಹೂಂ.. ಹೂಂಹೂಂಹೂಂ..
-----------------------------------------------------------------------------------------------------------
ಪ್ರೇಮ ಪ್ರೇಮ ಪ್ರೇಮ (೧೯೯೯) - ನಮ್ಮಮ್ಮಾ ಈ ಭೂಮಿಯಾಣೆ
ಸಂಗೀತ : ರಾಜನ್ ನಾಗೇಂದ್ರ ಸಾಹಿತ್ಯ : ದೊಡ್ಡರಂಗೇಗೌಡ ಗಾಯನ : ಜಿ.ವಿ.ಅತ್ರಿ, ಸಂಗೀತಕಟ್ಟಿ, ಕೋರಸ್
ಗಂಡು : ನಮ್ಮಮ್ಮಾ ಈ ಭೂಮಿಯಾಣೆ ನಮ್ಮಪ್ಪ ಆ ಸೂರ್ಯನಾಣೆ ..
ನನ್ನ ಮನದನ್ನೇ ನೀನೇ ನಿನ್ನ ಮನದನ್ನ ನಾನೇ ....
ಓ.. ನನ್ನ ಪ್ರೇಮ ಗಂಗೇ ನೀನಾದೇ ಸಿರಿ ತುಂಗೇ
ನನ್ನೊಳಗೇ ನೀ ಹರಿದೂ ಬಾ.. ಹರಿದೂ ಬಾ..
ಹೆಣ್ಣು : ನಮ್ಮಮ್ಮಾ ಈ ಭೂಮಿಯಾಣೆ ನಮ್ಮಪ್ಪ ಆ ಸೂರ್ಯನಾಣೆ ..
ನನ್ನ ಮನದನ್ನ ನೀನೇ ನಿನ್ನ ಮನದನ್ನೇ ನಾನೇ ....
ನೀ.. ಜೇನ ಹನಿಯಾಗಿ ಹನಿ ಹನಿಯೂ ಹೊಳೆಯಾಗಿ
ಒಲವಾಗಿ ನೀ ಹರಿದೂ ಬಾ.. ಹರಿದೂ ಬಾ..
ಗಂಡು : ನಮ್ಮಮ್ಮಾ ಈ ಭೂಮಿಯಾಣೆ ಹೆಣ್ಣು : ನಮ್ಮಪ್ಪ ಆ ಸೂರ್ಯನಾಣೆ ..
ಗಂಡು : ನನ್ನ ಮನದನ್ನೇ ನೀನೇ ಹೆಣ್ಣು : ನನ್ನ ಮನದನ್ನ ನೀನೇ ....
ಕೋರಸ್ : ಧೀಮ್ ಧಿಮಧಿಮ್ ಧೀಮ್ ಧಿಮಧಿಮ್ ಧೀಮ್ ಧಿಮಧಿಮ್
ತಾರಾರಾರ ತರರರರ ತರತರ ತರರರರ ತರರರರ ತಾರಾರಾರ
ಹೆಣ್ಣು : ನಿನ್ನ ಮೊಗದಾಗೇ ಮಿಸೆನ್ನ ಕುಣೀತೇ .. ನಿನ್ನ ನಡೆಯಾಗೇ ಮಹಾರಾಜನ ಗತ್ತೈತೇ
ಆ ಗತ್ತೇ ಮನ ಕದೈತೇ ...
ಗಂಡು : ಉರಳ ಅಂದಕೇ .. ಮಲ್ಲಿಗೇ ನಾಚ್ಯತೇ.. ನಿನ್ನ ಕಿವಿಯಾಗೇ .. ಜುಮ್ಮಕಿ ಮಿಂಚೈತೇ
ನಿನ್ನ ರೂಪ ಸೆರೆ ಹಾಕೈತೇ ...
ಹೆಣ್ಣು : ಎಲ್ಲಿ ಹೋಗಲೀ.. ನಿನ್ನ ನೆನಪಾಗತೈತೀ .. ನೆನಪು ಬಂದರೇ ಮೈ ಬಿಸಿಯಾಗತೈತೇ ..
ಉಸಿರೂ ಉಸಿರಲಿ ನಿನ್ನ ಹೆಸರಿನ ಹಸೀ ಬರಿದೈತೀ ..
ಗಂಡು : ನಮ್ಮಮ್ಮಾ ಈ ಭೂಮಿಯಾಣೆ ನಮ್ಮಪ್ಪ ಆ ಸೂರ್ಯನಾಣೆ ..
ನನ್ನ ಮನದನ್ನೇ ನೀನೇ ನಿನ್ನ ಮನದನ್ನ ನಾನೇ ....
ಹೆಣ್ಣು : ನೀ.. ಜೇನ ಹನಿಯಾಗಿ ಹನಿ ಹನಿಯೂ ಹೊಳೆಯಾಗಿ
ಒಲವಾಗಿ ನೀ ಹರಿದೂ ಬಾ.. ಹರಿದೂ ಬಾ..
ಕೋರಸ್ : ಹೋಯ್ ಹೋಯ್ ಹೋಯ್ ಹೋಯ್ ದುಂತಲಕಡಿ ಜುಮ್ಮ ಜುಮ್ಮ್ ಜುಮ್ಮ್ ಜುಮ್ಮ್ ಜುಮ್ಮ್
ದುಂತಲಕಡಿ ಜುಮ್ಮ ಜುಮ್ಮ್ ಜುಮ್ಮ್ ಜುಮ್ಮ್ ಜುಮ್ಮ್
ಗಂಡು : ಘಮಘಮಘಮಿಸೋ ಹೂವ ಅರಳೈತೇ.. ಆ ಹೂವ ಒಳಗೇ ನಿನ್ನ ಮೊಗ ಕಂಡೈತೇ..
ಆ.. ಮೊಗವೇ ನನ್ನ ಸೆಳೆದೈತೇ ..
ಹೆಣ್ಣು : ಝುಳೂ ಝುಳೂ ಹಾಗೇ ತುಂಗೇ ಹರಿದೈತೇ.. ಗಂಡು : ಕಾಡೂ ....
ಹೆಣ್ಣು : ಆ ನದಿಯೊಳಗೇ ನಿನ್ನ ಧನಿ ಮೊಳಗೈತೇ.. ಆ ಧನಿಯೇ ನನ್ನ ಕರದೈತೇ ...
ಗಂಡು : ರಾಶಿ ರಾಶಿ ಹೂ ಸುರಿಯೇ ಆಸೇ ಆಗೈತೇ .. ಹೂವ ಹಾಸಲೀ ಮಲಗೋ ಮನಸಾಗ್ಯಾತೀ ..
ಬೆಳದಿಂಗಳ ತಿಳಿಬೆಳಕಲೀ ಸೊಗಸೊಗಸೈತೆ
ಹೆಣ್ಣು : ನಮ್ಮಮ್ಮಾ ಈ ಭೂಮಿಯಾಣೆ ಗಂಡು : ನಮ್ಮಪ್ಪ ಆ ಸೂರ್ಯನಾಣೆ ..
ಹೆಣ್ಣು : ನನ್ನ ಮನದನ್ನೇ ನೀನೇ ಗಂಡು : ನನ್ನ ಮನದನ್ನ ನೀನೇ ....
ಇಬ್ಬರು : ಆಹಾಹಾ ಆಹಾಹಾ .. ಆಹಾಹಾ ಆಹಾಹಾ .. ಆಹಾಹಾ ಆಹಾಹಾ ..
-----------------------------------------------------------------------------------------------------------
ಪ್ರೇಮ ಪ್ರೇಮ ಪ್ರೇಮ (೧೯೯೯) - ಹಿರಿಯರೂ ಎಂದರೇ ..
ಸಂಗೀತ : ರಾಜನ್ ನಾಗೇಂದ್ರ ಸಾಹಿತ್ಯ : ದೊಡ್ಡರಂಗೇಗೌಡ ಗಾಯನ : ಎಸ್.ಪಿ.ಬಿ, ಅನುರಾಧಶ್ರೀರಾಮ್, ಸಂಗೀತಕಟ್ಟಿ
ಗಂಡು : ಹಿರಿಯರೂ ಎಂದರೇ ಹೀಗಿರಬೇಕೂ..
ಹಿರಿಯರೂ ಎಂದರೇ ಹೀಗಿರಬೇಕೂ.. ವಿಶಾಲ ಹೃದಯವ ಹೊಂದಿರಬೇಕೂ
ಹಿರಿಯರ ಮನಸನ ಅರಿಯಲೂ ಬೇಕೂ ಕಾಲಕ್ಕೆ ತಕ್ಕಂತೇ ನಡೆ ನುಡಿ ಬೇಕೂ ..
ಹಿರಿಯರೂ ಎಂದರೇ ಹೀಗಿರಬೇಕೂ.. ವಿಶಾಲ ಹೃದಯವ ಹೊಂದಿರಬೇಕೂ
ಕೋರಸ್ : ಲಾಲಲಲಲಾಲಾಲಲಲ ಲಾಲಲಲಲಾಲಾಲಲಲ ಲಾಲಲಲಲಾಲಾಲಲಲ
ಗಂಡು : ನದಿಯೂ ಹರಿವಂತೇ .. ಹೂವೂ ಬೀರೀವಂತೇ ಹರೆಯಕೆ ಪ್ರೇಮದ ಮೊದಲಂತೇ
ನದಿಯೂ ಹರಿವಂತೇ .. ಹೂವೂ ಬೀರೀವಂತೇ ಹರೆಯಕೆ ಪ್ರೇಮದ ಮೊದಲಂತೇ
ಪ್ರೇಮಿಸಿದವರನೇ ಮದುವೇ ಆದರೇ ಸುಖಸಂತೋಷದ ಆ.. ಅಮೃತಧಾರೇ ..
ಕೋರಸ್ : ಸುಖಸಂತೋಷದ ಆ.. ಅಮೃತಧಾರೇ ..
ಗಂಡು : ಪ್ರೇಮಿಗಳನೂ ದೂರ ಮಾಡಿದರೇ ನರಕದ ನೋವೇ ಉಡುಗೊರೆ
ಹೆಣ್ಣು : ಹಿರಿಯರೂ ನಮ್ಮ ಹಿರಿಯರೂಆಹಾ ಹಿರಿಯರೂ ಎಂದರೇ ಹೀಗಿರಬೇಕೂ.. ವಿಶಾಲ ಹೃದಯವ ಹೊಂದಿರಬೇಕೂ
ಹಿರಿಯರ ಮನಸನ ಅರಿಯಲೂ ಬೇಕೂ ಕಾಲಕ್ಕೆ ತಕ್ಕಂತೇ ನಡೆ ನುಡಿ ಬೇಕೂ ..
ಕೋರಸ್ : ಹಿರಿಯರೂ ಎಂದರೇ ಹೀಗಿರಬೇಕೂ.. ವಿಶಾಲ ಹೃದಯವ ಹೊಂದಿರಬೇಕೂ
ಕೋರಸ್ : ನಮ್ ತನನ ನಮ್ ತನನ ನಮ್ ತನನ ನಮ್ ತನನ ಆಆಆ..
ಹೆಣ್ಣು : ಮನವ ಒಬ್ಬರಿಗೇ ತನುವ ಒಬ್ಬರಿಗೇ ಒಪ್ಪಿಸಿ ಅದುವೇ ವ್ಯಭಿಚಾರ
ಮೂಕವೇದನೇ ಉಂಡು ನಲುಗಿಹವೂ ನನ್ನಂತೇ ನೂರಾರೂ ಸಂಸಾರ
ಕೋರಸ್ : ಆಆಆ.. ಆಆಆ.. ಆಆಆ.. ಆಆಆ.. ಆಆಆ..
ಹೆಣ್ಣು : ಮನವ ಒಬ್ಬರಿಗೇ ತನುವ ಒಬ್ಬರಿಗೇ ಒಪ್ಪಿಸಿ ಅದುವೇ ವ್ಯಭಿಚಾರ
ಮೂಕವೇದನೇ ಉಂಡು ನಲುಗಿಹವೂ ನನ್ನಂತೇ ನೂರಾರೂ ಸಂಸಾರ
ಜಾತಿಮತಗಳ ಆಸ್ತಿ ಅಂತಸ್ತಿನ ಸ್ವಾರ್ಥದೀ ಪ್ರೇಮಿಗಳ ಕೋಲಬೇಡಿ ..
ಗಂಡು : ಹಿರಿಯರೂ ನಮ್ಮ ಹಿರಿಯರೂ ಆಹಾ ಹಿರಿಯರೂ ಎಂದರೇ ಹೀಗಿರಬೇಕೂ..ಹೆಣ್ಣು : ವಿಶಾಲ ಹೃದಯವ ಹೊಂದಿರಬೇಕೂ
ಗಂಡು : ಹಿರಿಯರ ಮನಸನ ಅರಿಯಲೂ ಬೇಕೂ
ಹೆಣ್ಣು : ಕಾಲಕ್ಕೆ ತಕ್ಕಂತೇ ನಡೆ ನುಡಿ ಬೇಕೂ ..
ಇಬ್ಬರು : ಹಿರಿಯರೂ ಎಂದರೇ ಹೀಗಿರಬೇಕೂ.. ವಿಶಾಲ ಹೃದಯವ ಹೊಂದಿರಬೇಕೂ
ಹಿರಿಯರ ಮನಸನ ಅರಿಯಲೂ ಬೇಕೂ ಕಾಲಕ್ಕೆ ತಕ್ಕಂತೇ ನಡೆ ನುಡಿ ಬೇಕೂ ..
ಹಿರಿಯರೂ ಎಂದರೇ ಹೀಗಿರಬೇಕೂ.. ವಿಶಾಲ ಹೃದಯವ ಹೊಂದಿರಬೇಕೂ
-----------------------------------------------------------------------------------------------------------
No comments:
Post a Comment