ಗೆಲುವು ನನ್ನದೆ ಚಲನಚಿತ್ರದ ಹಾಡುಗಳು
- ನಗಬೇಕು ನಗಬೇಕು
- ರೋಜಾ ಹೂವೇ ತಾಜಾ ಮಾವೇ
- ತೋಮ್ ತನಮ್ ತನಮ್
- ಗೆಲುವು ನನ್ನದೇ
ಗೆಲುವು ನನ್ನದೆ (೧೯೮೩) - ನಗಬೇಕು ನಗಬೇಕು
ಸಂಗೀತ : ಟಿ.ಜೆ.ಲಿಂಗಪ್ಪ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ, ಎಸ್.ಜಾನಕೀ
ಗಂಡು : ಕಮ್ ಆನ್ ಎವ್ರಿ ಬಡೀ ಚೀರ್ ಆಫ್ ಆಯ್ ಸೇ ಚೀರ್ ಆಫ್..
ಕೋರಸ್ : ಅಹ್ಹಹ್ಹಹ್ಹ... ಲಲಲಲಲ್ಲಲ್ಲಲ್ಲಲಾಲಾ ಲಲಲ ಲಲಲಲಲ್ಲಲ್ಲಲ್ಲಲಾಲಾಲಾ ಲಲಲಲ
ಗಂಡು : ಕಮ್ ಆನ್ ನಗಬೇಕೂ ಹ್ಹಾ.. ನಗಬೇಕೂ ಅಹ್ಹಹ್ಹಾ..
ಹೆಣ್ಣು : ನಗಬೇಕೂ ಅಹ್ಹಹ್ಹಹ್ಹ .. ನಗಬೇಕೂ ಅಹ್ಹಹ್ಹಹ್ಹಹ್ಹ ..
ಗಂಡು : ನಗುವುದ ಕಲಿಯಲೇ ಬೇಕೂ ..
ಹೆಣ್ಣು : ನೋವನೇ ನುಂಗಿ ನಗುತಾ ಬಾಳುವ ರೀತಿಯ ಅರಿಯಲೇಬೇಕು
ಹೆಣ್ಣು : ಅಹ್ಹಹ್ಹಹ್ಹ ... ನಗಬೇಕೂ.. ನಗಬೇಕೂ ಅಹ್ಹಹ್ಹಹ್ಹಹ್ಹ ..
ಕೋರಸ್ : ಲಲಲಲ ಲ್ಲಲ್ಲಲ್ಲ ಲಾಲಾಲಲಲ ಲಲ್ಲಲ್ಲಲ್ಲಲಾ ಲಲಲಲ ಲಲ್ಲಲ್ಲಲ್ಲಲಾ
ಹೆಣ್ಣು : ಬೆಳಗಿನ ಸೂರ್ಯನ ಹಾಗೇ ನೀನೂ ನಗುತಾ ಬರಬೇಕು
ಗಂಡು : ಸೂರ್ಯನ ಕಂಡ ತಾವರೆಯಂತೇ ಮೊಗವೂ ಇರಬೇಕೂ
ಹೆಣ್ಣು : ತರತರ ತರತರ ಗಂಡು : ರಪ್ಪಪಪ ಪಪಪಪ ಪಪಪ
ಹೆಣ್ಣು : ಬೆಳಗಿನ ಸೂರ್ಯನ ಹಾಗೇ ನೀನೂ ನಗುತಾ ಬರಬೇಕು
ಗಂಡು : ಸೂರ್ಯನ ಕಂಡ ತಾವರೆಯಂತೇ ಮೊಗವೂ ಇರಬೇಕೂ
ಹೆಣ್ಣು : ತಾವರೇ ಕಂಡ ದುಂಬಿಯ ಹಾಗೇ ಹಾಡುತಲಿರಬೇಕೂ
ಗಂಡು : ದುಂಬಿಯೂ ಹುಂಬಲಿ ನಲಿಯುವ ಹಾಗೇ ಸಂತಸ ಪಡಬೇಕೂ
ಹೆಣ್ಣು : ಹೇ.. ನಗಬೇಕೂ ಅಹ್ಹಹ್ಹಹ್ಹ .. ನಗಬೇಕೂ ಅಹ್ಹಹ್ಹಹ್ಹಹ್ಹ ..
ಗಂಡು : ನಗಬೇಕೂ ಅಹ್ಹಹ್ಹಹ್ಹ .. ನಗಬೇಕೂ ಖೂರ್.....
ಕೋರಸ್ : ಲಲಲಲ ಲ್ಲಲ್ಲಲ್ಲ ಲಾಲಾಲಲಲ ಲಲ್ಲಲ್ಲಲ್ಲಲಾ ಲಲಲಲ ಲಲ್ಲಲ್ಲಲ್ಲಲಾ
ಗಂಡು : ಕತ್ತಲೇ ಎಂಬ ದುಃಖವ ನುಂಗೋ ಬೆಳಕೇ ಈ ನಗುವೂ
ಹೆಣ್ಣು : ವೇದನೇ ಎಂಬ ಬೆಂಕಿಯ ಆರಿಸ ನೀರೇ ಈ ನಗುವೂ .. ಅಹ್ಹಹ್ಹಹ್ಹ
ಗಂಡು : ಲಲಲ್ಲಲ್ಲಾ.. ಲಲಲ್ಲಲ್ಲಾ ಹೆಣ್ಣು : ಲಲಲಲಲ್ಲಲ್ಲಾ.. ಲಲಲ್ಲಲ್ಲಾ
ಗಂಡು : ಕತ್ತಲೇ ಎಂಬ ದುಃಖವ ನುಂಗೋ ಬೆಳಕೇ ಈ ನಗುವೂ.. ಅಹ್ಹಹ್ಹ
ಹೆಣ್ಣು : ವೇದನೇ ಎಂಬ ಬೆಂಕಿಯ ಆರಿಸ ನೀರೇ ಈ ನಗುವೂ .. ಅಹ್ಹಹ್ಹಹ್ಹ
ಗಂಡು : ಬಂದ ಕಷ್ಟಕೂ ಕಣ್ಣಿರಲ್ಲೀ ಕರಗುವುದೂ .. ಗೊತ್ತೇನೂ
ಹೆಣ್ಣು : ಎಲ್ಲರ ನಗಿಸೀ ನಗುವಾ ಜೀವಿಗೇ ವೈರಿಗಳೂ ಉಂಟೇನೂ
ಗಂಡು : ಎವ್ರಿ ಬಡಿ ನಗಬೇಕೂ ಹೋಯ್ . ನಗಬೇಕೋ..
ಹೆಣ್ಣು : ನಗಬೇಕೂ ಹೋಯ್ .. ನಗಬೇಕೂ ಅಹ್ಹಹ್ಹಹ್ಹಹ್ಹ ..
ಗಂಡು : ನಗುವುದ ಕಲಿಯಲೇಬೇಕೂ ..
ಹೆಣ್ಣು : ನೋವನೇ ನುಂಗಿ ನಗುತಾ ಬಾಳುವ ರೀತಿಯ ಅರಿಯಲೇಬೇಕು
ಗಂಡು : ಕಮ್ ಆನ್ ನಗಬೇಕೂ ಅಹ್ಹಹ್ಹಹ್ಹಾ.. ನಗಬೇಕೋ ಅಹ್ಹಹ್ಹಾ..
ಹೆಣ್ಣು : ಅಹ್ಹಹ್ಹಹ್ಹ ... ನಗಬೇಕೂ.. ನಗಬೇಕೂ ಅಹ್ಹಹ್ಹಹ್ಹಹ್ಹ .. ಅಹ್ಹಹ್ಹಹಹ
----------------------------------------------------------------------------------------------------
ಗೆಲುವು ನನ್ನದೆ (೧೯೮೩) - ರೋಜಾ ಹೂವೇ ತಾಜಾ ಮಾವೇ
ಸಂಗೀತ : ಟಿ.ಜೆ.ಲಿಂಗಪ್ಪ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ,
ಬಂಗಾರೀ ನನ್ನ ಸಿಂಗಾರೀ .. ಅಹ್ಹಹ್ಹ
ಬಂಗಾರೀ ನನ್ನ ಸಿಂಗಾರೀ ಬಿದ್ಯಲ್ಲೇ ನೀನೂ ವಯ್ಯಾರೀ
ರೋಜಾ ಹೂವೇ ತಾಜಾ ಮಾವೇ
ರೋಜಾ ಹೂವೇ ತಾಜಾ ಮಾವೇ ಚೀರ್ರಂತ ಸಿಡುಕೋದು ಏಕಮ್ಮಾ
ನೀ ನನ್ನಿಂದ ತಪ್ಪಿಸೋಕೇ ಆಗೋಲಮ್ಮಾ
ರೋಜಾ ಹೂವೇ ತಾಜಾ ಮಾವೇ ಚೀರ್ರಂತ ಸಿಡುಕೋದು ಏಕಮ್ಮಾ
ಆಕಾಶಕ್ಕೇ ಏಣಿ ಹಾಕೋ ನೋಡ್ತೀಯಾ
ನೀ ಭೂಮಿ ಮೇಲೆ ದೋಣಿ ನಡಿಸಿ ಓಡ್ತೀಯಾ..ಹ್ಹಾ ಹ್ಹಾಹ್ಹಾಹ್ಹಾ
ಆಕಾಶಕ್ಕೇ ಏಣಿ ಹಾಕೋ ನೋಡ್ತೀಯಾ
ನೀ ಭೂಮಿ ಮೇಲೆ ದೋಣಿ ನಡಿಸಿ ಓಡ್ತೀಯಾ..
ಈ ನನ್ನ ಕಣ್ಣಿಗೇ ಮಣ್ಣ ಹಾಕ್ತಿಯಾ ನೀ ನನ್ನ ಪಾಲಿಗೇ ಮುಳ್ಳಾಗ್ತಿಯಾ ಹ್ಹಾ ಹ್ಹಾಹ್ಹಾಹ್ಹಾ
ಈ ನನ್ನ ಕಣ್ಣಿಗೇ ಮಣ್ಣ ಹಾಕ್ತಿಯಾ..ಹ್ಹಾ ನೀ ನನ್ನ ಪಾಲಿಗೇ ಮುಳ್ಳಾಗ್ತಿಯಾ
ಬೀಡೂ ನಿನ್ನ ಕೋಪಾ ಕೋಡಬೇಡ ಶಾಪ ಇದಕೆಲ್ಲಾ ಹೆದರೋಲ್ಲಾ ನೋಡಿ ಭೂಪ
ತರರೀರೀ... ತರರೀರೀ.. ತರರರರರರರರರರ
ರೋಜಾ ಹೂವೇ ತಾಜಾ ಮಾವೇ ಚೀರ್ರಂತ ಸಿಡುಕೋದು ಏಕಮ್ಮಾ
ಬಾಳೆದಿಂಡೂ ದಂತದ ತುಂಡೂ ಈ ಕೈಯ್ಯ ನೋಡೂ
ಉಳಿಸೋದೀಟೂ ದೇವರೇ ಗತಿ ನಿನ್ನ ಪಾಡೂ ..ಆಆಆ
ಬಾಳೆದಿಂಡೂ ದಂತದ ತುಂಡೂ ಈ ಕೈಯ್ಯ ನೋಡೂ
ಉಳಿಸೋದೀಟೂ ದೇವರೇ ಗತಿ ನಿನ್ನ ಪಾಡೂ ..
ಹೂವಂತ ಪಾದಕ್ಕೇ ನೋವಾದೀತೋ ಕಣ್ಣೀರೂ ಉಕ್ಕೀ ನದಿಯಾದೀತೋ .. ತೋತೋತೋತೋ
ಹೂವಂತ ಪಾದಕ್ಕೇ ನೋವಾದೀತೋ.. ಅಯ್ಯೋ ಕಣ್ಣೀರೂ ಉಕ್ಕೀ ನದಿಯಾದೀತೋ ..
ಹಠವೇಕೆ ಚಿನ್ನಾ.. ಬೀಡೇ ನಾನೂ ನಿನ್ನ ಈ ಗಂಡೂ ಸಿಡಿಗುಂಡೂ ತಿಳಿ ನೀ ನನ್ನಾ
ಲರಾರೇರೇ.. ಲರಾರೀರೀ.. ಲರಾರರಾ ರರಾರರಾ ರಂಪಂಪಂಪಪ
ಬಂಗಾರೀ ನನ್ನ ಸಿಂಗಾರೀ .. ಅಹ್ಹಹ್ಹಹ್ಹಾ
ಬಂಗಾರೀ ನನ್ನ ಸಿಂಗಾರೀ ಬಿದ್ಯಲ್ಲೇ ನೀನೂ ವಯ್ಯಾರೀ
ರೋಜಾ ಹೂವೇ ತಾಜಾ ಮಾವೇ
ರೋಜಾ ಹೂವೇ... ತಾಜಾ ಮಾವೇ ... ಚೀರ್ರಂತ ಸಿಡುಕೋದು ಏಕಮ್ಮಾ
ನೀ ನನ್ನಿಂದ ತಪ್ಪಿಸೋಕೇ ಆಗೋಲಮ್ಮಾ.. ಹೇ.. ಹೇ.. ಹೇಹೇಹೇಹೇ ಕೂರ್ರ್ ಕೂರ್ರ್ ಕೂರ್ರ್
ಕೂರೂಕ್ ಕೂರ್ರ್ ಕೂರೂಕ್ ಕೂರ್ರ್ ಕೂಕ್ಕೂ ಕೂರ್ರ್ ಕೂಕ್ಕೂ
----------------------------------------------------------------------------------------------------
ಸಂಗೀತ : ಟಿ.ಜೆ.ಲಿಂಗಪ್ಪ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಏನ್.ಸುರೇಂದ್ರನ್ , ಎಸ್.ಜಾನಕೀ
ಹೆಣ್ಣು : ಆಆಆ.. ಆಆಆ ಗಂಡು : ಆಆಆ.. ಆಆಆ
ಹೆಣ್ಣು : ಆಆಆ.. ಆಆಆ ಆಆಆ ಗಂಡು : ಆಆಆ.. ಆಆಆ ಆಆಆ ಆಆ ಆಅ
ಹೆಣ್ಣು : ತೋಮ್ ತನನನಮ್ ತನನನಮ್ ತನನನಮ್ ಎಂದೂ ಹೃದಯವೂ ಹಾಡುತಿರೇ
ಒಲವಿನ ರಾಗವೂ ಸಂತಸ ತುಂಬೀ ತಾರಕ ಸೇರುತಿದೆ
ಗಂಡು : ತೋಮ್ ತನನನಮ್ ತನನನಮ್ ತನನನಮ್ ಎಂದೂ ಹೃದಯವೂ ಹಾಡುತಿದೇ
ಒಲವಿನ ರಾಗವೂ ಸಂತಸ ತುಂಬೀ ತಾರವ ಸೇರುತಿದೆ
ತೋಮ್ ತನನನಮ್ ತನನನಮ್ ತನನನಮ್ ಎಂದೂ ಹೃದಯವೂ ಹಾಡುತಿದೇ
ಹೆಣ್ಣು : ಹೃದಯವೂ ಹಾಡುತಿದೇ
ಹೆಣ್ಣು : ಹರಿವ ನೀರಿನಲೀ ಹಕ್ಕಿ ಹಾಡಿನಲೀ ಹೊಸದು ಹೊಸದು ರಾಗ
ಗಂಡು : ಆಡೋ ಮೋಡದಲಿ ತೂಗೋ ತೆಂಗಿನಲೀ ಏನೋ ಒಂದೂ ವೇಗ..
ಹೆಣ್ಣು : ಹರಿವ ನೀರಿನಲೀ ಹಕ್ಕಿ ಹಾಡಿನಲೀ ಹೊಸದು ಹೊಸದು ರಾಗ
ಗಂಡು : ಆಡೋ ಮೋಡದಲಿ ತೂಗೋ ತೆಂಗಿನಲೀ ಏನೋ ಒಂದೂ ವೇಗ..
ಹೆಣ್ಣು : ಆಆಆ.. ಜಗವೇ ನಲಿವ ಸುಖದ ಚೆಲುವ ಹೂತೋಟ
ಗಂಡು : ಆಆಆ... ನಗುವ ಹಣತೆ ಚೆಲುವೇ ನಿನ್ನ ಕಣ್ಣೋಟ..
ಹೆಣ್ಣು : ಹರುಷದ ಉಯ್ಯಾಲೇ ಗಂಡು : ಪ್ರೀತಿಗೇ ಕರೆಯೋಲೇ ..
ಹೆಣ್ಣು : ಹರುಷದ ಉಯ್ಯಾಲೇ ಗಂಡು : ಪ್ರೀತಿಗೇ ಕರೆಯೋಲೇ ..
ಹೆಣ್ಣು : ನನ್ನಲ್ಲಿ ನೀ.. ನಿನ್ನಲ್ಲಿ ನಾ... ಗಂಡು : ಈ ಪ್ರೇಮ ಆನಂದ ಆಲಾಪನಾ ..
ಹೆಣ್ಣು : ತೋಮ್ ತನನನಮ್ ತನನನಮ್ ತನನನಮ್ ಎಂದೂ ಹೃದಯವೂ ಹಾಡುತಿದೇ
ಗಂಡು : ಹೃದಯವೂ ಹಾಡುತಿದೇ
ಗಂಡು : ಬೀಸೋ ಗಾಳಿಯಲೀ ತುಟಿಯ ಚುಂಬಿಸಲೂ ಅರಿಯದೊಂದು ಭಾವ..
ಹೆಣ್ಣು : ಎದುರೂ ನೀನಿರಲೂ ಆಸೇ ಹೊಮ್ಮಿರಲೂ ತಾಳದಾಯ್ತು ಜೀವಾ..
ಗಂಡು : ಬೀಸೋ ಗಾಳಿಯಲೀ ತುಟಿಯ ಚುಂಬಿಸಲೂ ಅರಿಯದೊಂದು ಭಾವ..
ಹೆಣ್ಣು : ಎದುರೂ ನೀನಿರಲೂ ಆಸೇ ಹೊಮ್ಮಿರಲೂ ತಾಳದಾಯ್ತು ಜೀವಾ..
ಗಂಡು : ಆಆಆ.. ಒಲವ ಸೆಳೆತ ಅಮರ ಮಧುರ ಸುಖ ಗಾನ
ಹೆಣ್ಣು : ಆಆಆ... ಮದುವೇ ಎನುವಾ ಶುಭದ ಮಾತೇ ಸವಿತಾನಾ
ಗಂಡು : ಹರೆಯದ ಸಂದೇಶ ಹೆಣ್ಣು : ಮರೆಯದ ಸಂತೋಷ
ಗಂಡು : ಹರೆಯದ ಸಂದೇಶ ಹೆಣ್ಣು : ಮರೆಯದ ಸಂತೋಷ
ಗಂಡು : ಸಂಕೋಚವೇ ಸಂದೇಹವೇ ಹೆಣ್ಣು : ಇಂದೇಕೇ ಮೈಯ್ಯೆಲ್ಲಾ ರೋಮಾಂಚನಾ ..
ಗಂಡು : ತೋಮ್ ತನನನಮ್ ತನನನಮ್ ತನನನಮ್ ಎಂದೂ ಹೃದಯವೂ ಹಾಡುತಿದೇ
ಹೆಣ್ಣು : ಒಲವಿನ ರಾಗವೂ ಸಂತಸ ತುಂಬೀ ತಾರವ ಸೇರುತಿದೆ
ಇಬ್ಬರು : ತೋಮ್ ತನನನಮ್ ತನನನಮ್ ತನನನಮ್ ಎಂದೂ ಹೃದಯವೂ ಹಾಡುತಿದೇ
ಹೃದಯವೂ ಹಾಡುತಿದೇ
----------------------------------------------------------------------------------------------------
ಗೆಲುವು ನನ್ನದೆ (೧೯೮೩) - ಗೆಲುವು ನನ್ನದೇ
ಸಂಗೀತ : ಟಿ.ಜೆ.ಲಿಂಗಪ್ಪ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ, ಎಸ್.ಏನ್.ಸುರೇಂದ್ರನ್
ಗಂಡು : ಗೆಲುವೂ ನನ್ನದೇ ಗೆಲುವೂ ನನ್ನದೇ
ಎಸ್ಪಿಬಿ : ಗೆಲುವೂ ನನ್ನದೇ ಗೆಲುವೂ ನನ್ನದೇ
ನೀ ಏನೇ ಮಾಡೂ ಕೊನೆಗೂ ಗೆಲುವೂ ನನ್ನದೇ ಸೋಲು ನಿನ್ನದೇ.. ಅಹ್ಹಹ್ಹಹ್ಹಾ
ಗಂಡು : ಗೆಲುವೂ ನನ್ನದೇ ಗೆಲುವೂ ನನ್ನದೇ
ಎಸ್ಪಿಬಿ : ಗೆಲುವೂ ನನ್ನದೇ ಗೆಲುವೂ ನನ್ನದೇ
ಗಂಡು : ನೀ ಏನೇ ಮಾಡೂ ಕೊನೆಗೂ ಗೆಲುವೂ ನನ್ನದೇ ಸೋಲು ನಿನ್ನದೇ..
ಗಂಡು : ರಕುತವ ಕುಡಿದ ಆ ರಣಹದ್ದನೂ ನಾನೂ ಕೊಲ್ಲುವೇ ..
ಎಸ್ಪಿಬಿ : ಕೊಲ್ಲುವ ಮುಂಚೇ ಬಲೆಯನು ಬೀಸಿ ನಾನೂ ಹಿಡಿಯುವೇ ಅಹ್ಹಹ್ಹ..
ಗಂಡು : ರಕುತವ ಕುಡಿದ ಆ ರಣಹದ್ದನೂ ನಾನೂ ಕೊಲ್ಲುವೇ ..
ಎಸ್ಪಿಬಿ : ಕೊಲ್ಲುವ ಮುಂಚೇ ಬಲೆಯನು ಬೀಸಿ ನಾನೂ ಹಿಡಿಯುವೇ
ಗಂಡು : ಆ ವಿಷಸರ್ಪವೂ ಕಣ್ಣಿಗೇ ಬಿದ್ದರೇ ಅಲ್ಲೇ ಮುಗಿಸುವೇ.. ಹ್ಹಾ..
ಆ ವಿಷಸರ್ಪವೂ ಕಣ್ಣಿಗೇ ಬಿದ್ದರೇ ಅಲ್ಲೇ ಮುಗಿಸುವೇ...
ಎಸ್ಪಿಬಿ : ಹಾವಾಡಿಗನ ನಾ ವಿಷಸರ್ಪವಾ ಮೊದಲೇ ಹಿಡಿಯುವೇ ಹ್ಹಾ..
ಗಂಡು : ಗೆಲುವೂ ನನ್ನದೇ ಗೆಲುವೂ ನನ್ನದೇ
ಎಸ್ಪಿಬಿ : ಗೆಲುವೂ ನನ್ನದೇ ಗೆಲುವೂ ನನ್ನದೇ
ಗಂಡು : ನೀ ಏನೇ ಮಾಡೂ ಕೊನೆಗೂ ಗೆಲುವೂ ನನ್ನದೇ
ಎಸ್ಪಿಬಿ : ಸೋಲು ನಿನ್ನದೇ. ಅಹ್ಹಹ್ಹ ಹ್ಹ ಹ್ಹಾ .
ಎಸ್ಪಿಬಿ :ಛಲದಲೀ ನಿಂತರೇ ಸಿಡಿಲನೇ ಎದುರಿಸೀ ಗೆದ್ದೂ ಬರುವೇನೂ
ಗಂಡು : ಬಲದಲಿ ಹೆಬ್ಬುಲಿ ಹಾರೀ ಬಂದರೂ ಕೊಂದೂ ಬಿಡುವೇನೂ .. ಹ್ಹಾ
ಎಸ್ಪಿಬಿ :ಛಲದಲೀ ನಿಂತರೇ ಸಿಡಿಲನೇ ಎದುರಿಸೀ ಗೆದ್ದೂ ಬರುವೇನೂ
ಗಂಡು : ಬಲದಲಿ ಹೆಬ್ಬುಲಿ ಹಾರೀ ಬಂದರೂ ಕೊಂದೂ ಬಿಡುವೇನೂ
ಎಸ್ಪಿಬಿ : ಗೆಳೆಯನೇ ನೀ ಕೊಲೆಗಾರನಾದರೇ ನಾನೂ ಸಹಿಸೇನೂ ಹ್ಹಾ.. ಹ್ಹಾ.. ಹಾ
ಗಂಡು : ಹಾಗೇ ನೀ ಕೊಲೆಗಾರನಾದರೇ ನಾನೂ ಸಹಿಸೇನೂ
ನಿನ್ನ ಸ್ನೇಹದ ಮಾತಿನ ಬಲೆಗೆ ನಾನೂ ಬೀಳೇನೂ ಅಹ್ಹಹ್ಹಾ..
ಎಸ್ಪಿಬಿ : ಗೆಲುವೂ ನನ್ನದೇ ಗೆಲುವೂ ನನ್ನದೇ
ಗಂಡು : ಗೆಲುವೂ ನನ್ನದೇ ಗೆಲುವೂ ನನ್ನದೇ
ಎಸ್ಪಿಬಿ : ನೀ ಏನೇ ಮಾಡೂ ಕೊನೆಗೂ ಗೆಲುವೂ ನನ್ನದೇ... ನನ್ನದೇ
ಗಂಡು : ಸೋಲು ನಿನ್ನದೇ.
ಎಸ್ಪಿಬಿ : ಗೆಲುವೂ ನನ್ನದೇ ಗಂಡು : ಸೋಲು ನಿನ್ನದೇ.
ಎಸ್ಪಿಬಿ : ಗೆಲುವೂ ನನ್ನದೇ ಗಂಡು : ಸೋಲು ನಿನ್ನದೇ.
---------------------------------------------------------------------------------------------------
No comments:
Post a Comment