1422. ಸೇಡಿನ ಸಂಚು (೧೯೮೬)



ಸೇಡಿನ ಸಂಚು ಚಲನಚಿತ್ರದ ಹಾಡುಗಳು
  1. ಕೋಗಿಲೆ ಕಾಯುವುದೂ
  2. ಇರಬೇಕೂ ಜಗಳ ಇರಬೇಕು
  3. ಈ ಸಾಗರದ ಕನೈಯೂ
  4. ಎಲ್ಲಿಂದ ಬಂದೇ ನೀನೂ
ಸೇಡಿನ ಸಂಚು (೧೯೮೬) - ಕೋಗಿಲೆ ಕಾಯುವುದೂ
ಸಂಗೀತ : ಸತ್ಯಂ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಜಾನಕೀ 

ಕೋಗಿಲೇ ಕಾಯುವುದೂ ಮಧುಮಾಸವೂ ಬರುವ ತನಕ 
ನೈದಿಲೇ ಕಾಯುವುದೂ ಶಶಿ ಚಂದ್ರಿಕೇ ಚೆಲ್ಲುವ ತನಕ 
ಇನಿಯನ ಸವಿನೆನಪಲ್ಲಿ ನಾ ಕಾಯುವೇ ಸಾವಿರ ವರುಷ...  
ಕೋಗಿಲೇ ಕಾಯುವುದೂ ಮಧುಮಾಸವೂ ಬರುವ ತನಕ 
ನೈದಿಲೇ ಕಾಯುವುದೂ ಶಶಿ ಚಂದ್ರಿಕೇ ಚೆಲ್ಲುವ ತನಕ 

ಚೆಲುವ ನಿನ್ನ ಆ ಬಿಂಬವೇ ಈ ಕಣ್ಣಲೀ ನಿಂತಿರುವಾಗ 
ಇನಿಯೂ ನಿನ್ನ ಆ ರೂಪವೇ ನನ್ನದೆಯನೂ ತುಂಬಿರುವಾಗ 
ವಿರಹದಲ್ಲಿಯೂ ಅನುಕ್ಷಣವೂ ಸುಖವಾ ಕಾಣುವೇ 
ನಾನೂ ಸುಖವಾ ಕಾಣುವೇ  
ಕೋಗಿಲೇ ಕಾಯುವುದೂ ಮಧುಮಾಸವೂ ಬರುವ ತನಕ 
ನೈದಿಲೇ ಕಾಯುವುದೂ ಶಶಿ ಚಂದ್ರಿಕೇ ಚೆಲ್ಲುವ ತನಕ 

ಗೆಳೆಯ ಬಿಡದಿರೂ ಛಲವನೂ ನಾನಿರುವೇ ನಿನ್ನ ಜೊತೆಯಾಗಿ 
ಕಲ್ಲುಮುಳ್ಳಲೇ ನಡೆದರೂ ನಾ ಬರುವೇ ನಿನ್ನ ನೆರಳಾಗಿ 
ನೋವಿನಲ್ಲಿಯೂ ನಗುತಿರುವೇ ಶಕ್ತಿ ನೀಡುವೇ 
ನಿನಗೇ ಶಾಂತೀ ನೀಡುವೇ 
ಕೋಗಿಲೇ ಕಾಯುವುದೂ ಮಧುಮಾಸವೂ ಬರುವ ತನಕ 
ನೈದಿಲೇ ಕಾಯುವುದೂ ಶಶಿ ಚಂದ್ರಿಕೇ ಚೆಲ್ಲುವ ತನಕ 
ಇನಿಯನ ಸವಿನೆನಪಲ್ಲಿ ನಾ ಕಾಯುವೇ ಸಾವಿರ ವರುಷ...  
ಕೋಗಿಲೇ ಕಾಯುವುದೂ ಮಧುಮಾಸವೂ ಬರುವ ತನಕ 
ನೈದಿಲೇ ಕಾಯುವುದೂ ಶಶಿ ಚಂದ್ರಿಕೇ ಚೆಲ್ಲುವ ತನಕ 
-------------------------------------------------------------------------------------------------------------
 
ಸೇಡಿನ ಸಂಚು (೧೯೮೬) - ಇರಬೇಕೂ ಜಗಳ ಇರಬೇಕು
ಸಂಗೀತ : ಸತ್ಯಂ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ. ಬಿ.ಆರ್.ಛಾಯ 

ಇರಬೇಕೂ ಜಗಳ ಇರಬೇಕೂ  (ಹೂಹೂಂ)
ಇರಬೇಕೂ ಜಗಳ ಇರಬೇಕೂ 
ಸಪ್ಪೆಯಾದ ಈ ಸಂಸಾರದಲೀ ಉಪ್ಪಿನಕಾಯಿ ತಿಂದಹಾಗೇ 
ಇರಬೇಕೂ ಜಗಳ ಇರಬೇಕೂ...  ಏನ್ ಹೆಳ್ತೀ ... 
(ಹೂಹೂಂ .. ನಾನ್ ಒಪ್ಪಲ್ಲಪ್ಪಾ) ಹ್ಹಾಂ ... 

ಪಕ್ಕದಮನೆಯ ರಾಧಾಬಾಯಿಯನೂ ನೋಡಿದೇಯಾ .. 
ಈ ಮುಂದಿನ ಮನೆಯ ಕೂಗಾಟವನೂ ಕೇಳಿದೇಯಾ 
ಸತಿಯೂ ಸಿಡಿದು ನಿಂತಾಗ ಮತಿಯೂ ಕೆಟ್ಟೂ ಹೋದಾಗ 
ತಪ್ಪು ಮಾಡಿದೇ ನಲ್ಲೇ ಎನುತಲಿ ಮುದ್ದಿಸಬೇಕೂ ಪ್ರೀತಿಯಿಂದ 
(ಅಯ್ಯಯ್ಯೋ ಅದಕ್ಕೇ ) ಅದಕ್ಕೇ .. 
ಇರಬೇಕೂ ಜಗಳ ಇರಬೇಕೂ  (ಬೇಡಾ) 
ಇರಬೇಕೂ ಅಹಹ್ಹ್ ಜಗಳ ಇರಬೇಕೂ ಬೇಕೂ ಬೇಕೂ 

ನಿನ್ನ ತವರಿಗೇ ಕಳಿಸುವೇನೆಂದೂ ತಿಳಿಸಿದರೇ .. (ತಿಳಿದರೇ )
ನೀ ನನ್ನ ಮೇಲಿನ ರೋಷದಿ ಕಂಬನಿ ಸುರಿಸಿದರೇ (ಸುರಿಸಿದರೇ )
ಸರಸದಿಂದ ಬಳಿ ಬರುವೇ (ಆ) ಶಂಕೆಯಿಂದ ಕೈಯ್ಯಿ ಹಿಡಿವೇ (ಓಓ )
ರಾತ್ರಿಯೆಲ್ಲಾ ಬಳಿಯಲಿ ಇರಲೂ ತೋಳಲಿ ನೀನೂ ಸೆರೆಯಾಗಿರಲೂ 
(ಹೂಂ.. ಅದಲ್ಲ ಬೇಡ) ಬ್ಯಾಡ ಅಂದರೂ .. 
ಇರಬೇಕೂ ಜಗಳ ಇರಬೇಕೂ  
ಇರಬೇಕೂ ಜಗಳ ಇರಬೇಕೂ (ಬೇಡಾಂದ್ರೆ ಹೇಳೇ )
ಸಪ್ಪೆಯಾದ ಈ ಸಂಸಾರದಲೀ ಉಪ್ಪಿನಕಾಯಿ ತಿಂದಹಾಗೇ 
ಇರಬೇಕೂ (ಬೇಡ) ಜಗಳ ಇರಬೇಕೂ...
ಇರಬೇಕೂ  ಜಗಳ ಇರಬೇಕೂ..(ಬೇಡ).(ಹ್ಹಾಂಹ್ಹಾಹಾ 
-------------------------------------------------------------------------------------------------------------
 
ಸೇಡಿನ ಸಂಚು (೧೯೮೬) - ಈ ಸಾಗರ ಕನೈಯೂ
ಸಂಗೀತ : ಸತ್ಯಂ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಜಾನಕೀ 

ಈ ಸಾಗರ ಕನ್ಯೆಯೂ ನಾನೂ ಅಪರೂಪದ ಹೊನ್ನಿನ ಮೀನೂ 
ಬಲೆ ಬೀಸಿಸಲೂ ಬಳಿ ದ್ವೀಪುಗಳೂ ಚೆನ್ನ ನಿನಗಾಗಿ  ನಾ ಬಂದೇ.. ಓಓಓಓ  
ಈ ಸಾಗರ ಕನ್ಯೆಯೂ ನಾನೂ ಅಪರೂಪದ ಹೊನ್ನಿನ ಮೀನೂ 
ಬಲೆ ಬೀಸಿಸಲೂ ಬಳಿ ಬಿಸೊಗಳು ಚೆನ್ನ ನಿನಗಾಗಿ  ನಾ ಬಂದೇ.. ಓಓಓಓ  
ಈ ಸಾಗರ ಕನ್ಯೆಯೂ ನಾನೂ

ಹಗಲು ಬರಲೂ ನಲ್ಲ ಮಾತಾಡೆನು ಇರುಳೂ ನಮದು ಸಾಕಿಗೆನ್ನನ್ನೂ... 
ಹಗಲು ಬರಲೂ ನಲ್ಲ ಮಾತಾಡೇನು ಇರುಳೂ ನಮದು ಸಾಕಿಗೆನ್ನನ್ನೂ... 
ಸುಖ ಕೈ ಚಾಚಿದೇ ನಿನ್ನ ಬಾ ಎಂದಿದೇ ಇನ್ನೂ ತಡವೇಕೆ ಬಾ ಜೀವ...  ಓಓಓಓಓಓಓ .. 
ಈ ಸಾಗರ ಕನ್ಯೆಯೂ ನಾನೂ ಅಪರೂಪದ ಹೊನ್ನಿನ ಮೀನೂ 

ಕಡಲ ಹವಳ ಈ ತುಟಿಯಾಗಿದೆ ಹೊಳೆವ ಮುತ್ತು ನನ್ನ ಬಳಿಯಲ್ಲಿದೇ....   
ಕಡಲ ಹವಳ ಈ ತುಟಿಯಾಗಿದೆ ಹೊಳೆವ ಮುತ್ತು ನನ್ನ ಬಳಿಯಲ್ಲಿದೇ  
ಮುತ್ತೂ ಬೇಕೆಂದರೇ ಬಳಿ ನೀ ಬಂದರೇ ನಿನ್ನ ತನುವೆಲ್ಲಾ ಮುತ್ತಿಂದ.... ಅಆಆಆ 
ಈ ಸಾಗರ ಕನ್ಯೆಯೂ ನಾನೂ ಅಪರೂಪದ ಹೊನ್ನಿನ ಮೀನೂ 
ಬಲೆ ಬೀಸಿಸಲೂ ಬಳಿ ದ್ವೀಪುಗಳೂ ಚೆನ್ನ ನಿನಗಾಗಿ  ನಾ ಬಂದೇ.. ಓಓಓಓ  
ಈ ಸಾಗರ ಕನ್ಯೆಯೂ ನಾನೂ ಅಪರೂಪದ ಹೊನ್ನಿನ ಮೀನೂ 
ಬಲೆ ಬೀಸಿಸಲೂ ಬಳಿ ಬಿಸೊಗಳು ಚೆನ್ನ ನಿನಗಾಗಿ  ನಾ ಬಂದೇ.. ಓಓಓಓ  
ಈ ಸಾಗರ ಕನ್ಯೆಯೂ ನಾನೂ ಅಪರೂಪದ ಹೊನ್ನಿನ ಮೀನೂ 
------------------------------------------------------------------------------------------------------------
 
ಸೇಡಿನ ಸಂಚು (೧೯೮೬) - ಎಲ್ಲಿಂದ ಬಂದೇ ನೀನೂ
ಸಂಗೀತ : ಸತ್ಯಂ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ರಮೇಶ, ಕೋರಸ್ 

ಕೋರಸ್ : ಆಹಾಹಾ.. ಹೈಹಹಾ..  ಹೈಹಹಾ..  ಹೈಹಹಾ..  
ಗಂಡು : ಎಲ್ಲಿಂದ ಬಂದೇ ನೀನೂ ಹೇಳೇ ಗಂಗಮ್ಮಾ 
            ಯಾರನ್ನೂ ಹುಡುಕುತಲಿರುವೇ ನನಗೇ ಹೇಳಮ್ಮಾ... 
            ಗಂಗಮ್ಮಾ... (ಆಆಆ)   ಗಂಗಮ್ಮಾ... (ಆಆಆ)   
           ಎಲ್ಲಿಂದ ಬಂದೇ ನೀನೂ ಹೇಳೇ ಗಂಗಮ್ಮಾ 
           ಯಾರನ್ನೂ ಹುಡುಕುತಲಿರುವೇ ನನಗೇ ಹೇಳಮ್ಮಾ... 

ಕೋರಸ್ : ಹೋಯ್ಯಾರೇ ಹೋಯ್ಯಾ ಹೋಯ್ಯಾ ಹೋಯ್ಯಾರೇ ಹೋಯ್ಯಾ ಹೋಯ್ಯಾ 
ಗಂಡು : ನಗು ನಗು ಏಕೇ ನನ್ನಲ್ಲಿ ಇಂದೂ ಕೋಪವೇನೋ.. (ಓಓಓ)
            ಮನಸ್ಸಿನ ಮಾತನೂ ಹೇಳಲು ನಾಚಿಕೇ ಬಂದಿತೇನೂ (ಓಓಓ)
            ಚಂಚಲವಾದ ಕಣ್ಣಲ್ಲಿ ಹೊಳೆವ ಮಿಂಚಿದೇನೋ (ಓಓಓ)
            ಕೆಂದುಟಿಯಲ್ಲಿ ತೇಲುವ ಚೆಲುವಾ ಹೂ ನಗೆಯೇನೋ (ಓಓಓ)
            ಯಾರಿಗೋ ನಾನೋ ಹೇಳೇನೋ ಗೆಳತೀ    
            ಯಾರಿಗೋ ನಾನೋ ಹೇಳೇನೋ ಗೆಳತೀ    
            ಸನಿಹಕೆ ಬಂದಿಲ್ಲಿ ಕಿವಿಯಲೀ ಹೇಳಮ್ಮಾ 
           ಎಲ್ಲಿಂದ ಬಂದೇ ನೀನೂ ಹೇಳೇ ಗಂಗಮ್ಮಾ 
           ಯಾರನ್ನೂ ಹುಡುಕುತಲಿರುವೇ ನನಗೇ ಹೇಳಮ್ಮಾ... 

ಕೋರಸ್ : ಓ.. ಓಓಓಓಓ  ಓ.. ಓಓಓಓಓ 
ಗಂಡು : ಆರಿತೇನೂ ನಿನ್ನಾ ಎದೆಯಲ್ಲಿರುವ ಆಸೆಯನ್ನೂ (ಓಓಓ )
            ಕಂಗಳ ಕನ್ನಡಿಯಾಗಿ ಹೇಳಿದೆ ಎಲ್ಲವನ್ನೂ (ಓಓಓ ) 
            ಕನಸಲಿ ಕಾಡುವ ಪ್ರಿಯತಮನೇಲ್ಲಿ ಬಲ್ಲೆಯೇನೂ (ಓಓಓ ) 
            ಕಡಲಲಿ ಅವನೂ ಇಲ್ಲ ಗೆಳತೀ ನಂಬೂ ನೀನೂ (ಓಓಓ )
            ನೀ ಹುಡುಕಿರುವ ಆ ಶಿವನಿರುವಾ              
            ನೀ ಹುಡುಕಿರುವ ಆ ಶಿವನಿರುವಾ ಮಂಜಿನ ಮಳೆಯಲಿ ಅರಿತೆಯಾ ಗಂಗಮ್ಮಾ 
           ಎಲ್ಲಿಂದ ಬಂದೇ ನೀನೂ ಹೇಳೇ ಗಂಗಮ್ಮಾ 
           ಯಾರನ್ನೂ ಹುಡುಕುತಲಿರುವೇ ನನಗೇ ಹೇಳಮ್ಮಾ... 
            ಗಂಗಮ್ಮಾ... (ಆಆಆ)   ಗಂಗಮ್ಮಾ... (ಆಆಆ)   (ಆಆಆ)   (ಆಆಆ)   (ಆಆಆ)   
-------------------------------------------------------------------------------------------------------------

No comments:

Post a Comment