ಕಾನೂನಿಗೆ ಸವಾಲ್ ಚಲನಚಿತ್ರದ ಹಾಡುಗಳು
- ನಡೆಯೋ ನಡೆಯೋ ನೆಟ್ಟಗೇ
- ಕನ್ನಡ ನಾಡಲ್ಲಿ
- ಪಪ್ಪಾ ಮಮ್ಮಿ ಎಂದೂ ನನ್ನಾ
- ಪಪ್ಪಾ ಮಮ್ಮಿ ಎಂದೂ ನನ್ನಾ
ಕಾನೂನಿಗೆ ಸವಾಲ್ (೧೯೮೪) - ನಡೆಯೋ ನಡೆಯೋ ನೆಟ್ಟಗೇ
ಸಂಗೀತ : ಕಲ್ಯಾಣ ವೆಂಕಟೇಶ, ಸಾಹಿತ್ಯ : ವಿಜಯನಾರಸಿಂಹ, ಗಾಯನ : ಎಸ್.ಪಿ.ಬಿ,
ಸಂಗೀತ : ಕಲ್ಯಾಣ ವೆಂಕಟೇಶ, ಸಾಹಿತ್ಯ : ವಿಜಯನಾರಸಿಂಹ, ಗಾಯನ : ಎಸ್.ಪಿ.ಬಿ,
ನಡೆಯೋ ನಡೆಯೋ ನೆಟ್ಟಗೇ ಭಯವೂ ಇನ್ನೇತಕೇ
ಹಾಡೂ ಬ್ರದರ್ ಹಾಡೂ ಹಾಡೂ ನನ್ನ ಚಿನ್ನಾ... ಉಮ್.. (ಪಪ್ಪಾ )
ನಡೆಯೋ ನಡೆಯೋ ನೆಟ್ಟಗೇ ಭಯವೂ ಇನ್ನೇತಕೇ
ನಡೆಯೋ ನಡೆಯೋ ನೆಟ್ಟಗೇ ಭಯವೂ ಇನ್ನೇತಕೇ
ಗುಂಡಿನ ಮತ್ತೇರಲೂ ಗುಂಡಿಗೇ ಒದ್ದಾಡ್ತಿದೇ
ಈ ದಾರಿ ತಾನ್ ಹೋಗದೇ ... ನಮ್ಮನ್ನೂ ಹೋಗೆಂದಿದೇ ..
ಆಯ್ ಡೋಂಟ್ ಕೇರ್ ಮೈ ಲೈಫ್ (ಪಪ್ಪಾ)
ಬಟ್ ಆಯ್ ಲವ್ ಯೂ ಯುವರ್ ಮಮ್ಮಿ ಪಾಲೀ ..
ನಡೆಯೋ ನಡೆಯೋ ನೆಟ್ಟಗೇ ಭಯವೂ ಇನ್ನೇತಕೇ
ನಡೆಯೋ ನಡೆಯೋ ನೆಟ್ಟಗೇ ಭಯವೂ ಇನ್ನೇತಕೇ
ಥಾ ಥಾ ಶಬ್ಬಾಷ್ ..
ಇಲ್ಲೊಬ್ಬ ನಿಂತೂ ಹಾಡ್ತಿದ್ದಾನೇ .. ಸಂಗೀತ ಕಚೇರಿ ಮಾಡ್ತಿದ್ದಾನೇ ..
ಇಲ್ಲೊಬ್ಬ ನಿಂತೂ ಹಾಡ್ತಿದ್ದಾನೇ .. ಪದ ನಿಸ ದಪಮಗ ಸಂಗೀತ ಕಚೇರಿ ಮಾಡ್ತಿದ್ದಾನೇ ..
ಇವನಿಗೇ ನೋಡೀ ನಾಲ್ಕೂ ಕಾಲೂ ನಂಗೆರಡು ಮಾತ್ರ ಅಹ್ಹ.. ಯಾರಿಲ್ಲಿ ಮೇಲೂ
ಹೇ ದೇವ್ರೇ ಯಾಕೋ ಹೀಗ್ ಮಾಡಿದೇ .. ದ್ಯಾವ್ರೇ..
ಹೇ ದೇವ್ರೇ ಯಾಕೋ.. ಹೀಗ್ ಮಾಡಿದೇ ..
ಆಯ್ ಡೋಂಟ್ ಕೇರ್ ಮೈ ವೈಫ್ (ಕತ್ತೆ ಧ್ವನಿ)
ನಡೆಯೋ ನಡೆಯೋ ನೆಟ್ಟಗೇ ಭಯವೂ ಇನ್ನೇತಕೇ
ನಡೆಯೋ ನಡೆಯೋ ನೆಟ್ಟಗೇ ಭಯವೂ ಇನ್ನೇತಕೇ
ಗುಂಡಿನ ಮತ್ತೇರಲೂ ಗುಂಡಿಗೇ ಒದ್ದಾಡ್ತಿದೇ
ಈ ದಾರಿ ತಾನ್ ಹೋಗದೇ ... ಅಹ್ಹಹ್ಹ ನಮ್ಮನ್ನೂ ಹೋಗೆಂದಿದೇ ..
ಆಯ್ ಡೋಂಟ್ ಕೇರ್
---------------------------------------------------------------------------------------------------------------------
ಕಾನೂನಿಗೆ ಸವಾಲ್ (೧೯೮೪) - ಕನ್ನಡ ನಾಡಲ್ಲಿ
ಕಾನೂನಿಗೆ ಸವಾಲ್ (೧೯೮೪) - ಪಪ್ಪಾ ಮಮ್ಮಿ ಎಂದೂ ನನ್ನಾ
ಸಂಗೀತ : ಕಲ್ಯಾಣ ವೆಂಕಟೇಶ, ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ಎಸ್.ಪಿ.ಬಿ,
ಗಂಡು : ಕನ್ನಡ ನಾಡಲಿ ಶೌರ್ಯವ ತೋರುತ ಕನ್ನಡ ವೀರನ ಕಥೆ ಕೇಳಿ
ಕೋರಸ್ : ಕನ್ನಡ ವೀರನ ಕಥೆ ಕೇಳಿ
ಗಂಡು : ಕನ್ನಡ ದಾಳಿಗೇ ಹುಲಿಯಾಗಿ ಕಾಡಿದ ಸ್ವಾತಂತ್ರ್ಯ ವೀರನ ಕಥೆ ಕೇಳಿ
ಕೋರಸ್ : ಸ್ವಾತಂತ್ರ್ಯ ವೀರನ ಕಥೆ ಕೇಳಿ
ಗಂಡು : ಈಶ್ವರಿ ದಯೇ ಪಡೆದೂ ಈ ಮಣ್ಣಿನ ಮಗನಾದ
ನಿಜ ದಂಡೆದ್ದು ಮೇಲ್ಲೆದ್ದ ಕಡು ವೈರಿಗೇ ಎದುರಾದ
ಸುರಪುರದ ರಣಧೀರ ರಾಜಾ ವೆಂಕಟಪ್ಪಾ ..
ಕೋರಸ್ : ರಾಜಾ ವೆಂಕಟಪ್ಪಾ ..
ಗಂಡು : ಬಿಳಿ ಜನರ ಕುತಂತ್ರಕೇ ಸಿಡಿದೆದ್ದ ಕಲಿ ಭೂಪ
ಕೋರಸ್ : ಸಿಡಿದೆದ್ದ ಕಲಿ ಭೂಪ
ಗಂಡು : ಅಂಜದೇ ಅಳುಕದೇ ಯುದ್ಧಕ್ಕೇ ಸಜ್ಜಾದ
ಸೈನ್ಯವ ಸೇರಿಸಿ ಸಂಗ್ರಾಮ ಘೋಷಿಸಿದ
ಗಂಡು : ರಣಘೋಷ ಮಾಡಾಯ್ತು ರಣಕಹಳೆ ಉದಾಯ್ತು ಕೋಟಿ ಸಿಂಹಗಳಾಗೀ ನುಗ್ಗೋಣ
ಆ ಮದಿಸಿದ ಆನೆಗಳ ಮಸ್ತಕವ ಬಗೆಯೋಣ
ಎಲ್ಲಿಂದಲೋ ಬಂದ ಆ ಕೆಂಪೂ ಮೊಸಡಿಗಳು
ನಮ್ಮ ನೆಲದಲಿ ನಿಂತೂ ನಮ್ಮನ್ನೂ ಆಳುವುದೇ
ನಮ್ಮ ಖಡ್ಗವ ಹಿಡಿದೂ ನಮ್ಮದೇಗೆ ನಾಟುವುದೇ... ಹ್ಹಾ...
ಆ ಗುಳ್ಳೆನರಿಗಳನ್ನ ನರನರವ ಹರೀಬೇಕೂ
ಆ ಕೆಂಪು ಕುನ್ನಿಗಳ ಹೆಣ ಒಟ್ಟಬೇಕು
ಪರದಾಸ್ಯ ಶುಂಕಲೆಯ ಕಿತ್ತೂ ಒಗೆಯಬೇಕೂ
ಕನ್ನಡಿಗರ ಎದೆಬಲವ ಜಗ ನೋಡಬೇಕೂ
ಸ್ವಾತಂತ್ರ್ಯ ಜ್ಯೋತಿಯನೂ ಹಚ್ಚಲೇಬೇಕೂ
ನುಗ್ಗಿ ನಡೆಯಿರೀ ಶೂರರೇ ನುಗ್ಗಿ..
ಜೈ ಕನ್ನಡಾಂಬೆ ಜೈ ಭುವನೇಶ್ವರೀ ..
ಕೋರಸ್ : ನುಗ್ಗಿ.. ನುಗ್ಗಿ.. ನುಗ್ಗಿ.. ನೋಡಿಲ್ಲಿ ರಕ್ತವ... ಹ್ಹಾಂ .. ಹ್ಹಾ..
ಜೈ ಕನ್ನಡಾಂಬೆ ಜೈ ಭುವನೇಶ್ವರೀ ..
ಜೈ ಕನ್ನಡಾಂಬೆ ಜೈ ಭುವನೇಶ್ವರೀ ..
ಗಂಡು : ಹೋರಾಡಿದಂತ ಸುರಪುರ ವೀರ ಸೆರೆಯಾಗಿ ಹೋದ ಒಮ್ಮೆಗೇ ..
ಕೋರಸ್ : ಸೆರೆಯಾಗಿ ಹೋದ ಒಮ್ಮೆಗೇ ..
ಗಂಡು : ಸಂಗಾತಿಯಾದ ರಾಣಿ ಗಂಗಮ್ಮಾ ಕಂಗಾಲಾದಳು ಆ ಸುದ್ದಿಗೇ
ಕೋರಸ್ : ಕಂಗಾಲಾದಳು ಆ ಸುದ್ದಿಗೇ
ಗಂಡು : ನಲಿದಾಡಿಕೊಂಡ ಎರಡೂ ಕಂದಮ್ಮಾ.... ಆಆಆ ಗೋಳಾಡಲು
ಒಡನಾಡಿದಂತ ಪರಿವಾರ ಕೂಡಾ... ಆಆಆ ದೂರಾದವೂ .
ಸೆರೆಮನೆ ವಾಸ ರಾಜನಿಗೇ ಬಲು ಪರಿಹಾಸ ಆಂಗ್ಲರಿಗೇ
ಕೋರಸ್ : ಸೆರೆಮನೆ ವಾಸ ರಾಜನಿಗೇ ಬಲು ಪರಿಹಾಸ ಆಂಗ್ಲರಿಗೇ
ಗಂಡು : ಆಂಗ್ಲಾಧಿಕಾರೀ ಠೇಕಾಂರದಿಂದ ದೌರ್ಜನ್ಯ ತೋರಿದ ಅಡಿಗಡಿಗೇ
ಕೋರಸ್ : ದೌರ್ಜನ್ಯ ತೋರಿದ ಅಡಿಗಡಿಗೇ
ಗಂಡು : ಬಂಡಾಯ ತೋರಿದ ಕೇಸರಿಯಿಂದು ತೊಳಲಾಡಿ ಬೆಂದ ಒಳಗೊಳಗೇ
ಕೋರಸ್ : ತೊಳಲಾಡಿ ಬೆಂದ ಒಳಗೊಳಗೇ
ಗಂಡು : ಸಾಮ್ರಾಜ್ಯಶಾಹೀ ಮೆರೆದಾಟ ನೋಡೀ ... ನಂಜೇರಿದಾ
ರಾಷ್ಟ್ರಾಭಿಮಾನೀ ಅಸಹಾಯನಾಗೀ.. ಪೇಚಾಡಿದಾ..
ಚಿಂತಾಕ್ರಾಂತನೂ ತಾನಾಗೀ ಬಳಲುತ ನಿಂತನೂ ತಾ ಕುಗ್ಗಿ
ಕೋರಸ್ : ಚಿಂತಾಕ್ರಾಂತನೂ ತಾನಾಗೀ ಬಳಲುತ ನಿಂತನೂ ತಾ ಕುಗ್ಗಿ
ಆಂಗ್ಲ : ವೆಂಕಟಪ್ಪನಾಯಕ ಹೇಹೇ ನಾಯಕ ನಾಯೀ .. ಡಾಗ್.. ನಾಯೀ
ಗಂಡು : ಮುಚ್ಚೂ ಬಾಯೀ.. ನೀನೂ ನಾಯೀ
ಭಾರತದ ಎಂಜಲೂ ತಿಂದೂ ಬದುಕುವ ಬೀದಿಯ ನಾಯೀ
ಆಂಗ್ಲ : ವೆಂಕಟಪ್ಪನಾಯಕ ನೀನೂ ನಮ್ಮ ಸೆರೆಯಾಳು
ನಮ್ಮ ವಿರೋಧ ಕಟ್ಟಿಕೊಂಡರೇ ಕೊಲ್ಲಿಸುತ್ತೇವೇ
ವಿಶ್ವಾಸ ಬೆಳೆಸಿದರೇ ಕಿಂಗ್ ಮಾಡುತ್ತೇವೆ ರಾಜ ರಾಜ ಆಗಬಹುದೂ
ಗಂಡು : ಹ್ಹಾ.... ಸೂಡು ನಿನ್ನ ಗುಲಾಮ ಸಿಂಹಾಸನವನ್ನೂ
ನನಗೇ ಗೊತ್ತಿದೇ ನೀವೆಂಥ ನರಿಗಳೆಂದೂ ಸ್ವತಂತ್ರನಾಗಿ ಸಿಂಹದಂತೇ ಬಾಳಲು ಹೋರಾಡಿದೇ
ಸತ್ತಿದ್ದರೇ ಸಂತೋಷ ಪಡುತ್ತಿದೆ ಆಅಹ್ ಸೆರೆಯಾಳಾಗಿ ಹೋದೇ ಆದರೇ ಒಂದೂ ನೆನಪಿನಲ್ಲಿ ಇಡೂ
ಈ ಕನ್ನಡದ ಮಣ್ಣ ಮಗನ ಮೈಯಲ್ಲಿ ಹನಿ ರಕ್ತವಿರುವ ವರೆಗೇ ನಾ ಸೋಲನ್ನ ಒಪ್ಪುವುದಿಲ್ಲಾ
ಶರಣಾಗತನಾಗುವುದಿಲ್ಲಾ... ಶರಣಾಗತನಾಗುವುದಿಲ್ಲಾ
ಆಂಗ್ಲ : ಶಟ್ ಅಪ್ ಟೆಕ್ ಹಿಮ್ ಟೂ ಸೆಂಡ್ ಪಿಕ್ ದ ಜೈಲ್
ಗಂಡು : ಸೈನ್ಯಾಧಿಕಾರೀ ಕ್ಯಾಂಬೆಲ್ ಆಜ್ಞೆಯ ರೇಸಿಡೆಂಟ್ ಸಾಹೇಬ್ ಅನುಸರಿಸೀ
ಕೋರಸ್ : ರೇಸಿಡೆಂಟ್ ಸಾಹೇಬ್ ಅನುಸರಿಸೀ
ಗಂಡು : ಜಂಗಲ್ ಪೇಟೆ ಬಂಧೀಖಾನೆಗೇ ಕರಕೊಂಡು ಹೊರಟನು ಅಬ್ಬರಿಸಿ
ಕೋರಸ್ : ಕರಕೊಂಡು ಹೊರಟನು ಅಬ್ಬರಿಸಿ
ಗಂಡು: ಇಲ್ಲಾ.. ಇಲ್ಲಾ.. ನಾನೂ ಹುಟ್ಟಿದ ಕನ್ನಡದ ಮಣ್ಣಲ್ಲೇ ಮಣ್ಣಾಗಬೇಕು
ಅದ್ಯಾವ ಪಾಪ ಬಂದರೂ ಸರೀ, ನಾನಿಲ್ಲೇ ಮಣ್ಣಾಗಬೇಕು
ನಾನಿಲ್ಲೇ ಮಣ್ಣಾಗಬೇಕು... ಜೈ ಕರ್ನಾಟಕ ಮಾತೇ.. ಜೈ ಕರ್ನಾಟಕ...
ಮಕ್ಕಳು: ಅಪ್ಪಾಜೀ ..ಅಪ್ಪಾಜೀ .. ಅಪ್ಪಾಜೀ ..
---------------------------------------------------------------------------------------------------------------------
ಸಂಗೀತ : ಕಲ್ಯಾಣ ವೆಂಕಟೇಶ, ಸಾಹಿತ್ಯ : ಗೀತಪ್ರಿಯ, ಗಾಯನ : ಎಸ್.ಜಾನಕೀ
ಪಪ್ಪಾ ಮಮ್ಮಿ ಎಂದೂ ನನ್ನಾ ಜೊತೆಯಲಿ ಇರಬೇಕೂ
ನಗುತಾ ನಗುತಾ ಲವಲೀ ಪಾಲೀ ಅಂತಾ ಅನ್ನಬೇಕೂ
ಪಪ್ಪಾ ಮಮ್ಮಿ ಎಂದೂ ನನ್ನಾ ಜೊತೆಯಲಿ ಇರಬೇಕೂ
ನಗತಾ ನಗತಾ ಲವಲೀ ಪಾಲೀ ಅಂತಾ ಅನ್ನಬೇಕೂ
ಟೂ ಟೂ ಬೇಕಿಲ್ಲಾ ಸಂಗ ಬೇಕಲ್ಲಾ..
ಟೂ ಟೂ ಬೇಕಿಲ್ಲಾ ಸಂಗ ಬೇಕಲ್ಲಾ..
ನಿದ್ದೆನೂ ಮಾಡೋಣ ಎದ್ದಾಗ ಆಡೋಣ ಒಂದೇ ಜೊತೆಯಾಗಿ
ಒಂದೇ ಜೊತೆಯಾಗಿ
ಪಪ್ಪಾ ಮಮ್ಮಿ ಎಂದೂ ನನ್ನಾ ಜೊತೆಯಲಿ ಇರಬೇಕೂ
ನಗತಾ ನಗತಾ ಲವಲೀ ಪಾಲೀ ಅಂತಾ ಅನ್ನಬೇಕೂ
ನಿನ್ನಿಂದ ನಾನೂ ನನ್ನಿಂದ ನೀನೂ ನಮಗಿಲ್ಲ ನೋವೂ ನಾ ಪುಟ್ಟ ಹೂವೂ
ನಿನ್ನಿಂದ ನಾನೂ ನನ್ನಿಂದ ನೀನೂ ನಮಗಿಲ್ಲ ನೋವೂ ನಾ ಪುಟ್ಟ ಹೂವೂ
ಹಾಯಾಗೀ ಆಡೋಣ ಸುಖದಲಿ ನಲಿಯೋಣ
ಹಾಯಾಗೀ ಆಡೋಣ ಸುಖದಲಿ ನಲಿಯೋಣ
ಸಂತೋಷ ಬಂದಾಗ ಒಂದಾಗಿ ಕುಣಿದಾಡುವಾ
ಪಪ್ಪಾ ಮಮ್ಮಿ ಎಂದೂ ನನ್ನಾ ಜೊತೆಯಲಿ ಇರಬೇಕೂ
ನಗತಾ ನಗತಾ ಲವಲೀ ಪಾಲೀ ಅಂತಾ ಅನ್ನಬೇಕೂ
ಟೂ ಟೂ ಬೇಕಿಲ್ಲಾ ಸಂಗ ಬೇಕಲ್ಲಾ..
ಟೂ ಟೂ ಬೇಕಿಲ್ಲಾ ಸಂಗ ಬೇಕಲ್ಲಾ..
ನಿದ್ದೆನೂ ಮಾಡೋಣ ಎದ್ದಾಗ ಆಡೋಣ ಒಂದೇ ಜೊತೆಯಾಗಿ
ಒಂದೇ ಜೊತೆಯಾಗಿ
ಪಪ್ಪಾ ಮಮ್ಮಿ ಎಂದೂ ನನ್ನಾ ಜೊತೆಯಲಿ ಇರಬೇಕೂ
ನಗತಾ ನಗತಾ ಲವಲೀ ಪಾಲೀ ಅಂತಾ ಅನ್ನಬೇಕೂ
ನಿಮ್ಮಾಟವೆಲ್ಲಾ ನಾ ಬಲ್ಲೇನಲ್ಲಾ ಈ ನಿಮ್ಮ ಸುಳ್ಳೂ ನನಗಂತೂ ಮುಳ್ಳೂ ..
ನಿಮ್ಮಾಟವೆಲ್ಲಾ ನಾ ಬಲ್ಲೇನಲ್ಲಾ ಈ ನಿಮ್ಮ ಸುಳ್ಳೂ ನನಗಂತೂ ಮುಳ್ಳೂ ..
ಸ್ಮೈಲ್ ಪಪ್ಪಾ.. ಸ್ಮೈಲ್ ನಗು ಮಮ್ಮಿ ನಗೂ ಆ..
ಹೀಗೇನೇ ಆಡೋಣ ದಿನ ದಿನ ಕಳೆಯೋಣ
ಹೀಗೇನೇ ಆಡೋಣ ದಿನ ದಿನ ಕಳೆಯೋಣ
ಯಾರಿಲ್ಲಾ ಬೇಕೆಂದೂ ಎಲ್ಲಾರೂ ನಗೆ ಚೆಲ್ಲುವಾ
ಲಲ್ಲಾ ಲಲ್ಲಾ ಲಲ್ಲಾ ಲಲ್ಲಾ ಲಲ್ಲಾ ಲಲ್ಲಲ್ಲಲಾ
ಲಲ್ಲಾ ಲಲ್ಲಾ ಲಲ್ಲಾ ಲಲ್ಲಾ ಲಲ್ಲಾ ಲಲ್ಲಲ್ಲಲಾ
---------------------------------------------------------------------------------------------------------------------
ಕಾನೂನಿಗೆ ಸವಾಲ್ (೧೯೮೪) - ಪಪ್ಪಾ ಮಮ್ಮಿ ಎಂದೂ ನನ್ನಾ (ದುಃಖ)
ಸಂಗೀತ : ಕಲ್ಯಾಣ ವೆಂಕಟೇಶ, ಸಾಹಿತ್ಯ : ಗೀತಪ್ರಿಯ, ಗಾಯನ : ಎಸ್.ಪಿ.ಬಿ, ಪಿ.ಸುಶೀಲಾ
ಗಂಡು : ಪಪ್ಪಾ ಮಮ್ಮಿ ಎಂದೂ ನಿನ್ನಾ ಜೊತೆಯಲಿ ಇರಬೇಕೂ
ನಗತಾ ನಗತಾ ಲವಲೀ ಪಾಲೀ ಅಂತಾ ಅನ್ನಬೇಕೂ
ಹೆಣ್ಣು : ಟೂ ಟೂ ಬೇಕಿಲ್ಲಾ ಸಂಗ ಬೇಕಲ್ಲಾ..
ಟೂ ಟೂ ಬೇಕಿಲ್ಲಾ ಸಂಗ ಬೇಕಲ್ಲಾ..
ನಿದ್ದೆನೋ ನೀಗೋಣ ಎದ್ದಾಗ ಆಡೋಣ
ಒಂದೇ ಜೊತೆಯಾಗಿ ಒಂದೇ ಉಸಿರಾಗೀ
ಗಂಡು : ಒಂದೇ ಜೊತೆಯಾಗಿ ಒಂದೇ ಉಸಿರಾಗೀ
ಗಂಡು : ನಿನ್ನಿಂದ ನಾವೂ ನಮ್ಮಿಂದ ನೀನೂ ನೀ ಪುಟ್ಟ ಹೂವೂ ಬಂತೀಗ ನೋವೂ
ಹೆಣ್ಣು : ನೀ ಕಣ್ಣ ಮುಚ್ಚಿ.. ಹ್ಹಹ್ಹಹ್ಹ ನಾನಾದೇ ಹುಚ್ಚಿ ಓ ನನ್ನ ಪ್ರಾಣ ಸಾಕಿನ್ನೂ ಮೌನ.. ಹ್ಹಹ್ಹಹಹ
ಗಂಡು : ಎದ್ದೇಳೂ ಆಡೋಣ ಜೊತೆಯಲಿ ನಲಿಯೋಣ
ಹೆಣ್ಣು : ಎದ್ದೇಳೂ ಆಡೋಣ ಜೊತೆಯಲಿ ನಲಿಯೋಣ
ಇಬ್ಬರು : ಸಂತೋಷ ತಂದಾಗ ಒಂದಾಗಿ ಕುಣಿದೂ.. ಅಹ್ಹಹ್ಹಹ್ಹಹ್ಹಹಹ
---------------------------------------------------------------------------------------------------------------------
No comments:
Post a Comment