1431. ಗುರುರಾಯರ ಸೊತ್ತು



ಗುರುರಾಯರ ಸೊತ್ತು ಚಲನಚಿತ್ರದ ಹಾಡುಗಳು 
  1. ಹೂವಂಥ ಹೆಣ್ಣೂ 
  2. ಈ ಜೀವ ನನದೂ 
  3. ನನ್ನ ಮಗುವ ತಂದೇ 
  4. ನಿನ್ನ ನಂಬಿ ಬಂದೇ 
  5. ರಾಯರ ಸೊತ್ತಮ್ಮಾ 
ಗುರುರಾಯರ ಸೊತ್ತು - ಹೂವಂಥ ಹೆಣ್ಣೂ 
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ. 

ಹೂವಂತ ಹೆಣ್ಣೂ ಹಾವಾಗ ಬೇಕೇ  ನನ್ನನ್ನೂ ನೋಡೀ ಹೋಗೆನ್ನ ಬೇಕೇ 
ಅನುರಾಗದ.. ಮಾತನ್ನೂ ಆಡದೇ 
ಎದುರಾಗಲೂ ನನ ವಯಸ್ಸೂ ಸೊಗಸೂ ಕನಸೂ ಮನಸೂ ಅಣುಕಿರೇ 
ಹೂವಂತ ಹೆಣ್ಣೂ ಹಾವಾಗ ಬೇಕೇ  ನನ್ನನ್ನೂ ನೋಡೀ ಹೋಗೆನ್ನ ಬೇಕೇ 
ಅನುರಾಗದ.. ಮಾತನ್ನೂ ಆಡದೇ 
ಎದುರಾಗಲೂ ನನ ವಯಸ್ಸೂ ಸೊಗಸೂ ಕನಸೂ ಮನಸೂ ಅಣುಕಿರೇಯೇ  

ನಿನ್ನ ಅಂದಕೆ ಇಷ್ಟ ಅಪರಂಜಿಯೇನೇ ಹಣದಲೀ ಮನವನೂ ಇಡಬೇಡವೇ 
ನನ್ನ ಪ್ರೀತಿಗಿಂತ ಬಂಗಾರವೇನೇ ನಿಜವನೂ ಅರಿಯದೇ ಅಹ್ಹಹ್ಹ ಕೆಡಬೇಡವೇ 
ಹೆಣ್ಣಿಗೇ ಸೌಭಾಗ್ಯವೂ ಕುಂಕುಮ ಕಾಲುಂಗುರ ಮಾಂಗಲ್ಯ ಕಟ್ಟಿದಾ ಈ ಗಂಡನ 
ನೀ ಬಡವನೆನುತ ಮನೆಯ ಹೊರಗೇ ಕಳಿಸಿರುವೇ.. 
ಹೂವಂತ ಹೆಣ್ಣೂ ಅಹ್ಹಹ್ಹಹ್ಹ ಹಾವಾಗ ಬೇಕೇ  

ಹನುಮಂತನೇಕೆ ಸತಿಯಿಲ್ಲದಾಗ ಎನುವುದ ಆರಿತೇನೂ ಅಹ್ಹಹ್ಹ ನಾನೀ ದಿನ... ಹೌದೂ 
ಗಣಪತಿಯೂ ಏಕೇ ಜೊತೆಬೇಡವೆಂದಾ ಕಾರಣ ತಿಳಿದೇನೂ ನಾ ಈ ಕ್ಷಣ.. 
ಹೆಣ್ಣಿನ ಸೌಂದರ್ಯಕೇ ಸೋತರೇ ಈ ಬಾಳಲೀ ಬದುಕೆಲ್ಲಾ ಕಂಬನಿ ಬಿಸಿಕಂಬನಿ 
ಬರಿ ಹಗಲೂ ಇರುಳೂ ಕುಡಿದೂ ಕುಡಿದೂ ಸಾಯುವುದೇ... 
ಹೂವಂತ ಹೆಣ್ಣೂ ಅಹ್ಹಹ್ಹ ಹಾವಾಗ ಬೇಕೇ  ನನ್ನನ್ನೂ ನೋಡೀ..  ಹ್ಹಾ ಹೋಗೆನ್ನ ಬೇಕೇ 
ಅನುರಾಗದ.. ಮಾತನ್ನೂ ಆಡದೇ ಎದುರಾಗಲೂ 
ನನ ವಯಸ್ಸೂ ಸೊಗಸೂ ಕನಸೂ ಮನಸೂ ಅಣುಕಿರೇ.. ಊಹೂಂ.. ಹ್ಹಹ್ಹಹ್ಹಹ್ಹ   
----------------------------------------------------------------------------------------------

ಗುರುರಾಯರ ಸೊತ್ತು - ಈ ಜೀವ ನನದೂ 
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ, ಸಂಗೀತ ಕಟ್ಟಿ . 

ಗಂಡು : ಈ ಜೀವ ನನದೂ             ಹೆಣ್ಣು : ಈ ಪ್ರಾಣ ನನದೂ 
ಗಂಡು : ನಿನ್ನನ್ನೂ ನಾನೂ ಕಂಡಾಗ ಮೇಲೆ ನನ್ನಲ್ಲೀ ನೀನೂ ಒಂದಾದ ಮೇಲೆ 
            ಸಾವಿರ ಸಲ ಚಿನ್ನ ಚಿನ್ನ ಎನುತ ನಿನ್ನ ಕೆನ್ನೆಗೇ ಮುತ್ತೂ ಕೊಡುವ ಬಯಕೇ 
ಹೆಣ್ಣು : ಈ ಜೀವ ನನದೂ            ಗಂಡು  : ಈ ಪ್ರಾಣ ನನದೂ 
ಹೆಣ್ಣು  : ನಿನ್ನನ್ನೂ ನಾನೂ ಕಂಡಾಗ ಮೇಲೆ ನನ್ನಲ್ಲೀ ನೀನೂ ಒಂದಾದ ಮೇಲೆ 
            ಸಾವಿರ ಸಲ ಚೆನ್ನ ಎನ್ನ ಎನುತ ನಿನ್ನ ಕೆನ್ನೆಗೇ ಮುತ್ತೂ ಕೊಡುವ ಬಯಕೇ 
ಗಂಡು : ಈ ಜೀವ ನನದೂ             
  
ಹೆಣ್ಣು : ಒಲವಿನಲೀ ನನ್ನ ಬಳಿಗೆ ಬರುತಲಿರೇ.. ನೀನೂ 
          ಆ ಮದನ ಸುಮಬಾಣ ಮನ್ಮಥನಾ ನೆನಪೂ 
ಗಂಡು : ನಗುನಗುತಾ ಕುಣಿಕುಣಿದೂ ಬರುತಲಿರೇ.. ನೀನೂ 
            ಆ ನನ್ನ ಶೃತಿ ನಲಿಯುತಿಹ ಅರಿನೀರದೇ ನೆನಪೂ 
ಹೆಣ್ಣು : ಮನವೂ.. ಅರಳಿರುವಾಗ            ಗಂಡು : ತನುವೂ.. ಪುಳುಕಿರುವಾಗ  
ಹೆಣ್ಣು : ನಿಂತ ತಾಣ ಸ್ವರ್ಗದಂತೇ ಇನ್ನೂ ಏಕೇ ಚಿಂತೇ ನಮಗೇ 
ಗಂಡು : ಈ ಜೀವ ನನದೂ             ಹೆಣ್ಣು : ಈ ಪ್ರಾಣ ನನದೂ 

ಗಂಡು : ಅಅ ಆಆಆ ಆಆಆ            ಹೆಣ್ಣು : ಓಓ ಓಓಓಓಓಓಓ 
ಗಂಡು : ಲಲಲ                            ಹೆಣ್ಣು :  ಲಲಲ 
ಗಂಡು : ಲಲಲ                            ಹೆಣ್ಣು :  ಲಲಲ 
ಗಂಡು : ಭುವಿಯೊಳಗೇ ಬರುತಿರಲೂ ದೇವರನೂ.. ಕಂಡೇ 
            ಸನಿಹದಲೇ ನಗುತಿರುವ ದೇವತೆಯ ಕಂಡೇ 
ಹೆಣ್ಣು : ಬಯಸಿರಲೂ ಬೇಡಿರಲೂ ನೀಡಿದನೋ..  ನಿನ್ನ 
          ಮರೆಯದಲೇ ವರಿಸಿದೇನೂ ಈ ದಿನ ನಾ.. ಚೆನ್ನಾ.. 
ಗಂಡು : ನೀನೂ ... ನಡೆಯಲೂ ಚೆಂದಾ.. 
ಹೆಣ್ಣು : ನಿನ್ನಾ... ನುಡಿಗಳೂ ಚೆಂದಾ... 
ಗಂಡು : ಜೋಡಿಯಾಗಿ ಸೇರಲೂ ಇಂದೂ ನನ್ನಾ ನಿನ್ನ ಬಾಳೂ ಅಂದಾ 
ಹೆಣ್ಣು : ಈ ಜೀವ ನನದೂ            ಗಂಡು  : ಈ ಪ್ರಾಣ ನನದೂ 
ಹೆಣ್ಣು  : ನಿನ್ನನ್ನೂ ನಾನೂ ಕಂಡಾಗ ಮೇಲೆ 
ಗಂಡು : ನನ್ನಲ್ಲೀ ನೀನೂ ಒಂದಾದ ಮೇಲೆ 
ಹೆಣ್ಣು : ಸಾವಿರ ಸಲ            ಗಂಡು : ಚಿನ್ನ ಚಿನ್ನ ಎನುತ ನಿನ್ನ  
ಹೆಣ್ಣು : ನಿನ್ನ ಕೆನ್ನೆಗೇ ಮುತ್ತೂ ಕೊಡುವ ಬಯಕೇ 
ಇಬ್ಬರು: ಈ ಜೀವ ನನದೂ  ಈ ಪ್ರಾಣ ನನದೂ            
----------------------------------------------------------------------------------------------

ಗುರುರಾಯರ ಸೊತ್ತು - ನನ್ನ ಮಗುವ ತಂದೇ 
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ. ಸಂಗೀತ ಕಟ್ಟಿ 

ಹೆಣ್ಣು : ನನ್ನ ಮಗುವಾ ತಂದೆಯಾಗು ಓ ಚೆನ್ನಕೇಶವಾ 
          ನನ್ನ ಮಗುವಾ ತಂದೆಯಾಗು ಓ ಚೆನ್ನಕೇಶವಾ 
          ಜೊತೆಯಾಗಿ ಸಾಗಿಸೋಣ ಈ ಸಂಸಾರವಾ.. 
          ಓ... ನನ್ನ ಹ್ಹ.. ಈ ಮೌನವೇನೂ ಈ ಕೆನ್ನೆಗೇ.. ಮುತ್ತೊಂದ ನೀನೂ 
          ಕೊಡುವ ತನಕ ನಾ ನಿನ್ನನೂ ಬಿಡಲಾರೇನೂ... ಹ್ಹಾ 
          ನನ್ನ ಮಗುವಾ ತಂದೆಯಾಗು ಓ ಚೆನ್ನಕೇಶವಾ 
          ಜೊತೆಯಾಗಿ ಸಾಗಿಸೋಣ ಈ ಸಂಸಾರವಾ.. 

ಹೆಣ್ಣು : ನನ್ನಲ್ಲೀ ಮೋಹ ನಿನ್ನಲ್ಲೀ ಸ್ನೇಹ ನಿನ್ನಲ್ಲೀ ನನ್ನ ಪ್ರೀತಿ 
          ನಿನ್ನಲ್ಲೀ ಮನಸ್ಸೂ ನಿನ್ನದೇ ಕನಸೂ ಪ್ರಿತಿಸೂ ಬೇಗ ಚೆನ್ನ ನನ್ನ  
          ಚಿಂತೆಯೇ ಚಿನ್ನ ರಾತ್ರಿಯ ಹೊತ್ತೂ ಮಂಚಕೇ ನಲ್ಲ ಹೊತ್ತೂ 
          ತೋಳಲಿ ನನ್ನ ಅಪ್ಪಿಕೋ ಬೇಗ ನಾನೂ ನಿನ್ನ ಸೊತ್ತೂ 
          ಕಲ್ಲಿನಂತೇ ನಿಲ್ಲಬೇಡ ನಲ್ಲ ನನ್ನ ಕೊಲ್ಲಬೇಡ 
          ಕಲ್ಲಿನಂತೇ ನಿಲ್ಲಬೇಡ ನಲ್ಲ ನನ್ನ ಕೊಲ್ಲಬೇಡ ದಿಂಬನ್ನೂ ಅಪ್ಪಿ ಸಾಕಾಗಿದೇ .. ಹ್ಹಾ 
          ನನ್ನ ಮಗುವಾ ತಂದೆಯಾಗು ಓ ಚೆನ್ನಕೇಶವಾ 
          ಜೊತೆಯಾಗಿ ಸಾಗಿಸೋಣ ಈ ಸಂಸಾರವಾ.. 

ಗಂಡು : ನನ್ನ ಮಗುವಾ ತಾಯಿಯಾಗೂ ಬಾ ಪ್ರೇಮದರಗಣಿ 
            ನನ್ನ ಮನೆಯ ದೀಪವಾಗೂ ನೀ ಕಾಮನರಗಣಿ 
            ಓ ಸುಂದರೀ .. ಈ ಮೌನವೇನೇ ಆ ದೇವರೇ.. ತಂದಂತ ಹೆಣ್ಣೇ 
            ತಾಳಿಯನ್ನೂ ನಾ ಕಟ್ಟದೇ ಬಿಡಲಾರೆನೇ...  
            ನನ್ನ ಮಗುವಾ ತಾಯಿಯಾಗೂ ಬಾ ಪ್ರೇಮದರಗಣಿ.. ಒಳಳಳಳಳಾಯೀ   

ಗಂಡು : ನಿನ್ನೆಯ ಹಾಗೇ ನಿನ್ನನ್ನೇ ಕೆನ್ನೇ ಕೆಂಪನೇ ಬಣ್ಣ ಕಂಡೇ 
            ಕಾಮನೂ ಬಿಟ್ಟ ಹೂವಿನ ಬಾಣ ನಾಟಲೂ ಎದೆಗೇ ಸೋತೂ ಹೋದೇ 
            ನಿನ್ನನೂ ಕಂಡ ಕಣ್ಣಲೀ ಇನ್ನೂ ಯಾರನೂ ನೋಡೇ ನಾನೂ 
            ರಾಮನ ಹಾಗೇ ಒಬ್ಬಳೇ ಪತ್ನಿ ನಂಬೂ ನನ್ನ ನೀನೂ           
            ವರ್ಷದಲ್ಲಿ ಲಾಲೀ ಲಾಲೀ ಹಾಡು ಹಾಗೇ ನಾನೂ ಮಾಡೀ 
            ವರ್ಷದಲ್ಲಿ ಲಾಲೀ ಲಾಲೀ ಹಾಡು ಹಾಗೇ ನಾನೂ ಮಾಡೀ ಸಂಭ್ರಮ ಬಾಳಲೀ ತುಂಬುವೇ ...     
            ನನ್ನ ಮಗುವಾ ತಾಯಿಯಾಗೂ ಬಾ ಪ್ರೇಮದರಗಣಿ 
            ನನ್ನ ಮನೆಯ ದೀಪವಾಗೂ ನೀ ಕಾಮನರಗಣಿ 
            ಓ ಸುಂದರೀ .. ಈ ಮೌನವೇನೇ ಹ್ಹಾ.. ಆ ದೇವರೇ.. ತಂದಂತ ಹೆಣ್ಣೇ 
            ತಾಳಿಯನ್ನೂ ನಾ ಕಟ್ಟದೇ ಬಿಡಲಾರೆನೇ...ಹ್ಹಾ   
----------------------------------------------------------------------------------------------

ಗುರುರಾಯರ ಸೊತ್ತು - ನಿನ್ನ ನಂಬಿ ಬಂದೇ 
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಸಂಗೀತ ಕಟ್ಟಿ 

ನಿನ್ನ ನಂಬಿ ಬಂದೇ ದಯ ತೋರೋ ಎಂದೇ 
ನಿನ್ನ ನಂಬಿ ಬಂದೇ ದಯ ತೋರೋ ಎಂದೇ 
ಹೊನ್ನಂತ ಮನಸ್ಸೂ ನಿನ್ನದೂ ಹೂವಂತ ಹೃದಯ ನಿನ್ನದೂ ಕಾಪಾಡು ನನ್ನ ತಂದೇ... 
ನಿನ್ನ ನಂಬಿ ಬಂದೇ ದಯ ತೋರೋ ಎಂದೇ 
 
ಅದು ಬೇಕೂ ಎಂದೂ ಇದೂ ಬೇಕೂ ಎಂದೂ ಕಾಡಿ ಬೇಡಿದೆ 
ಹಣವೊಂದೇ ಎಲ್ಲಾ ಹಣದಿಂದ ಎಲ್ಲಾ ಎಂದೂ ನಂಬಿದೇ 
ಅದು ಬೇಕೂ ಎಂದೂ ಇದೂ ಬೇಕೂ ಎಂದೂ ಕಾಡಿ ಬೇಡಿದೆ 
ಹಣವೊಂದೇ ಎಲ್ಲಾ ಹಣದಿಂದ ಎಲ್ಲಾ ಎಂದೂ ನಂಬಿದೇ 
ಮನದಿಂದ ಎಂದೂ ಸುಖಶಾಂತಿ ಇಲ್ಲ ನಿಜವಾ ಅರಿತೆನೂ 
ಮನದಿಂದ ಎಂದೂ ಸುಖಶಾಂತಿ ಇಲ್ಲ ನಿಜವಾ ಅರಿತೆನೂ 
ನನ್ನ ಹತ್ರ ಬಂದೂ ದಯತೋರೋ ಎಂದೂ ಬಳಿಗೆ ಬಂದೇನೂ.. ಬಳಿಗೆ ಬಂದೇನೂ  
ನಿನ್ನ ನಂಬಿ ಬಂದೇ ದಯ ತೋರೋ ಎಂದೇ 

ಕನಸಲ್ಲೂ ನಾನೂ ನಿನ್ನ ಸೊತ್ತೂ ಬೇಕು ಎಂದೂ ಬಯಸೇನೂ 
ಆ ದೇವರಿಟ್ಟ ಮುತ್ತೊಂದೇ ಸಾಕೂ ಉಳಿಸುತೀ ಬಂದೂ 
ಕನಸಲ್ಲೂ ನಾನೂ ನಿನ್ನ ಸೊತ್ತೂ ಬೇಕು ಎಂದೂ ಬಯಸೇನೂ 
ಆ ದೇವರಿಟ್ಟ ಮುತ್ತೊಂದೇ ಸಾಕೂ ಉಳಿಸುತೀ ಬಂದೂ 
ಈ ಹೆಣ್ಣಿನ ಆಕ್ರಂದನ ನಿನಗೇ ಕೇಳದೇನೂ 
ಈ ತಾಯಿಯ ಕಣ್ಣಿರಿಗೇ ಮನಸ್ಸೂ ಕರಗದೇನೂ 
ಈ ವೇದನೇ ಈ ಶೋಧನೇ ಸಾಕೂ ಸಾಕೂ ಇನ್ನೂ 
ಓ ಗುರುವರ ಓ ಶುಭಕರ ಇನ್ನೂ ಮೌನವೇನೂ 
ಆ ಬ್ರಹ್ಮನೂ ಆ ವಿಷ್ಣುವೂ ಶ್ರೀಕಂಠ ನೀನೂ 
ಈ ಪಾದವ ಬಿಟ್ಟ ಎಲ್ಲಿಗೇ ಹೋಗಲಯ್ಯಾ ನಾನ್ಯೂ ರಾಘವೇಂದ್ರಾ... 
ರಾಘವೇಂದ್ರಾ... ರಾಘವೇಂದ್ರಾ... 
----------------------------------------------------------------------------------------------

ಗುರುರಾಯರ ಸೊತ್ತು - ರಾಯರ ಸೊತ್ತಮ್ಮಾ 
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಸಂಗೀತ ಕಟ್ಟಿ 

ರಾಯರ ಸೊತ್ತಮ್ಮಾ ಗುರುರಾಯರ ಸೊತ್ತಮ್ಮಾ ಅದು ದೇವರ ಪಾಲಮ್ಮಾ 
ಮುಟ್ಟದಿರೂ ಅದ್ ಮುಟ್ಟದಿರೂ ಈ ದಿಟ್ಟತನವೂ ಸರಿಯಲ್ಲಮ್ಮಾ 
ರಾಯರ ಸೊತ್ತಮ್ಮಾ ಅದೂ ಭಕುತರ ಪಾಲಮ್ಮಾ 
ಮುಟ್ಟಿದರೇ ಇದ್ ಮುಟ್ಟಿದರೇ ನಾನ್ ಎಂದಿಗೂ ತಪ್ಪೇ ಇಲ್ಲಮ್ಮಾ.. 
ರಾಯರ ಸೊತ್ತಮ್ಮಾ ಅದೂ ಭಕುತರ ಪಾಲಮ್ಮಾ 

ದೇವರ ಹಣವೂ ಬೆಂಕಿಯ ಹಾಗೇ ಕೈಯಲ್ಲಿ ಮುಟ್ಟುವರೇ ಕಾಲೆಯನೂ 
ದೇವರ ಹಣವೂ ಬೆಂಕಿಯ ಹಾಗೇ ಕೈಯಲ್ಲಿ ಮುಟ್ಟುವರೇ ಕಾಲೆಯನೂ 
ಎಲ್ಲರ ಆಸೇ ತೀರಿಸುವಾತ ಕೈಯಲ್ಲಿ ಮುಟ್ಟುವನೇ ಹಣವನ್ನೂ 
ಈ ಬಗೇ ಹಠವೂ ಸರಿಯಲ್ಲಾ.. ನಿನಗ ಉಪದೇಶ ಬೇಕಿಲ್ಲ.. 
ಕೆಟ್ಟ ಕಾಲವೂ ಬಂದಿರುವಾಗ ಹಿತಉಪದೇಶ ಹಿಡಿಸೋಲ್ಲಾ... 
ರಾಯರ ಸೊತ್ತಮ್ಮಾ ಅದು ದೇವರ ಪಾಲಮ್ಮಾ 
ಮುಟ್ಟದಿರೂ ಅದ್ ಮುಟ್ಟದಿರೂ ಈ ದಿಟ್ಟತನವೂ ಸರಿಯಲ್ಲಮ್ಮಾ 
ರಾಯರ ಸೊತ್ತಮ್ಮಾ ಅದು ದೇವರ ಪಾಲಮ್ಮಾ 

ದೇವರ ಮುಂದೇ ನೈವ್ಯದ್ಯವಾಗಿಡೇ ಅವನೂ ತಿನ್ನುವನೇ ಅನ್ನವನೂ 
ದೇವರ ಮುಂದೇ ನೈವ್ಯದ್ಯವಾಗಿಡೇ ಅವನೂ ತಿನ್ನುವನೇ ಅನ್ನವನೂ 
ಸ್ವಾಮಿಯ ಮುಂದೇ ದೀಪವನೀಡುವೇ ಅವನೂ ಕಾಣಲೇ ಬೆಳಕನ್ನೂ 
ಈ ಬಗೆ ವಾದ ಸರಿಯಲ್ಲಾ.. ಈ ಮಾತುಗಳೂ ನೀನಗಲ್ಲಾ 
ನನ್ನ ಮುಕ್ತಿಗೇ ಮೆಚ್ಚಿರುವಾಗ ಸುಮ್ಮನಿರಲೂ ನಾ ಹೊಂದಲ್ಲ 
ರಾಯರ ಸೊತ್ತಮ್ಮಾ ಗುರುರಾಯರ ಸೊತ್ತಮ್ಮಾ ಅದೂ ಭಕುತರ ಪಾಲಮ್ಮಾ 
ಮುಟ್ಟಿದರೇ ಇದ್ ಮುಟ್ಟಿದರೇ ನಾನ್ ಎಂದಿಗೂ ತಪ್ಪೇ ಇಲ್ಲಮ್ಮಾ.. 
ರಾಯರ ಸೊತ್ತಮ್ಮಾ ಅದೂ ಭಕುತರ ಪಾಲಮ್ಮಾ..  ಅದೂ ಭಕುತರ ಪಾಲಮ್ಮಾ 
----------------------------------------------------------------------------------------------

No comments:

Post a Comment