1439. ಅಮರಜೀವಿ (೧೯೬೫)

ಅಮರಜೀವಿ / ಹಳ್ಳಿಯ ಹುಡುಗಿ ಚಲನಚಿತ್ರದ ಹಾಡುಗಳು
  1. ಇದೇ ಇದೇ ಇದೇ ನೋಡು ಬಾಳಿನ ಸಾರ 
  2. ಭಲಾರೆ ಹೆಣ್ಣೇ ಕಿಲಾಡಿ ಹೆಣ್ಣೇ 
  3. ಹಳ್ಳಿಯೂರ ಹಮ್ಮಿರ ಹಳ್ಳಿ ಬನದ ಸಿಂಗಾರ 
  4. ಸೋ ಸೋ ಸೊಬಾನೇ ಸೊಬಾಲಕ್ಕಿ 
  5. ಸುಬ್ಬಾ ಬಂದಾ ಹಬ್ಬ ತಂದಾ 

ಅಮರಜೀವಿ (೧೯೬೫) - ಇದೇ ಇದೇ ಇದೇ ನೋಡು ಬಾಳಿನ ಸಾರ 
ಸಂಗೀತ : ವಿಜಯ ಭಾಸ್ಕರ, ಸಾಹಿತ್ಯ :ಕಣಗಾಲ್ ಪ್ರಭಾಕರ ಶಾಸ್ತ್ರೀ   ಗಾಯನ : ಪಿ.ಬಿ.ಶ್ರೀನಿವಾಸ 

-----------------------------------------------------------------------------------------------

ಅಮರಜೀವಿ (೧೯೬೫) - ಭಲಾರೆ ಹೆಣ್ಣೇ ಕಿಲಾಡಿ ಹೆಣ್ಣೇ 
ಸಂಗೀತ : ವಿಜಯ ಭಾಸ್ಕರ, ಸಾಹಿತ್ಯ : ಗೀತಪ್ರಿಯ  ಗಾಯನ : ಪಿ.ಬಿ.ಶ್ರೀನಿವಾಸ 

ಆಆಆ... ಓಓಓಓಓ ... ಆ.. ಆಆಆ ಆಹಾಹಾ...ಆಆಆ 
ಆಹ್ಹಾ.. ಭಲಾರೆ ಹೆಣ್ಣೇ ಕಿಲಾಡಿ ಹೆಣ್ಣೇ ಚೆಂದುಳ್ಳಿ ಚೆನ್ನೆ ಬಾ 
ಕಣ್ಣ ಹಸಿರೇ ಕಾದಲುಸಿರೆ ಬಾಳಿನಾಸರೇ ಬಾ ಓಡಿ ಬಾ...  ಓಡಿ ಬಾ 

ಘಲ್ ಘಲ್ ಕಂಕಣ ಕಾಲ್ನಡೆಯಲ್ಲೇ ನನ್ನೆದೆ ತಲ್ಲಣ ಕೆರಳಿಸ ಬಲ್ಲೆ 
ಘಲ್ ಘಲ್ ಕಂಕಣ ಕಾಲ್ನಡೆಯಲ್ಲೇ ನನ್ನೆದೆ ತಲ್ಲಣ ಕೆರಳಿಸ ಬಲ್ಲೆ 
ದೂರ ದೂರ ನೀನೀರಲೊಲ್ಲೆ ನಾ ಬಲ್ಲೆ ಬಾ ನಲ್ಲೆ 
ತಗಾದೆ ಮಾಡದೆ ಬಾರೆ ತರಳೆ ಬಾ ಓಡಿ ಬಾ...  ಓಡಿ ಬಾ 
ಆಹ್ಹಾ.. ಭಲಾರೆ ಹೆಣ್ಣೇ ಕಿಲಾಡಿ ಹೆಣ್ಣೇ ಚೆಂದುಳ್ಳಿ ಚೆನ್ನೆ ಬಾ 
ಕಣ್ಣ ಹಸಿರೇ ಕಾದಲುಸಿರೆ ಬಾಳಿನಾಸರೇ ಬಾ ಓಡಿ ಬಾ...  ಓಡಿ ಬಾ 

ಹೊಮ್ಮುವ ಹೊಳಪಿನ ಹೊಮ್ಮುಗಿಲೇರಿ ಚಿಮ್ಮುವ ಜೇನಿನ ಚಿಲುಮೆಗೆ ಜಾರೀ 
ಹೊಮ್ಮುವ ಹೊಳಪಿನ ಹೊಮ್ಮುಗಿಲೇರಿ ಚಿಮ್ಮುವ ಜೇನಿನ ಚಿಲುಮೆಗೆ ಜಾರೀ 
ನೂರು ಬಾರಿ ಒಲವಿನ ದಾರಿ ಅರಸೋಣ ವರಿಸೋಣ 
ನಿರಾಳ ಜೀವನ ಸಾಗಿಸೋಣ ಓಡಿ ಬಾ...  ಓಡಿ ಬಾ 
ಆಹ್ಹಾ.. ಭಲಾರೆ ಹೆಣ್ಣೇ ಕಿಲಾಡಿ ಹೆಣ್ಣೇ ಚೆಂದುಳ್ಳಿ ಚೆನ್ನೆ ಬಾ 
ಕಣ್ಣ ಹಸಿರೇ ಕಾದಲುಸಿರೆ ಬಾಳಿನಾಸರೇ ಬಾ ಓಡಿ ಬಾ...  ಓಡಿ ಬಾ 
----------------------------------------------------------------------------------------------

ಅಮರಜೀವಿ (೧೯೬೫) - ಹಳ್ಳಿಯೂರ ಹಮ್ಮಿರ ಹಳ್ಳಿ ಬನದ ಸಿಂಗಾರ 
ಸಂಗೀತ : ವಿಜಯ ಭಾಸ್ಕರ, ಸಾಹಿತ್ಯ : ಕುರಾಸೀ  ಗಾಯನ : ಪಿ.ಬಿ.ಶ್ರೀನಿವಾಸ, ಬೆಂಗಳೂರು ಲತಾ  

ಹಳ್ಳಿಯೂರ ಹಮ್ಮಿರ ಬಳ್ಳಿ ಬನದ ಸಿಂಗಾರ
ಬಲ್ಲೆ ಬಲ್ಲೆ ನಾ ಪೂರ ಸೊಗಸುಗಾರ ಸರದಾರ

ದಿಲ್ಲಿ ಪ್ಯಾಟೆ ಅಲೆದೋನಲ್ಲ ಸುಳ್ಳು ಕಪಟ ಆಡೋನಲ್ಲ
ಬೇವು ಬೆಲ್ಲ ತಿಂದೋನಲ್ಲ ನೋವು ನಗೆಯ ತಿಳಿದೋನಲ್ಲ
ಹಳ್ಳಿಯೂರ ಹಮ್ಮಿರ ಬಳ್ಳಿ ಬನದ ಸಿಂಗಾರ
ಬಲ್ಲೆ ಬಲ್ಲೆ ನಾ ಪೂರ ಸೊಗಸುಗಾರ ಸರದಾರ

ಚಾಡಿ ಚೋಡಿ ಮಾಡೋನಲ್ಲ ದಾಡಿಮೀಸೆ ಜೋಗಿಯಲ್ಲ 
ಕಾಡಿ ಬೇಡಿ ಬಾಳೋನಲ್ಲ ದುಡಿದು ದುಡಿದು ದಣಿಯೋನಲ್ಲ 
ಹಳ್ಳಿಯೂರ ಹಮ್ಮಿರ ಬಳ್ಳಿ ಬನದ ಸಿಂಗಾರ
ಬಲ್ಲೆ ಬಲ್ಲೆ ನಾ ಪೂರ ಸೊಗಸುಗಾರ ಸರದಾರ 

ಹೆಣ್ಣು ಹೆಜ್ಜೆ ಹಾಕೋನಲ್ಲ ಕಣ್ಣು ಮಿಸುಕಿ ಕರೆಯೊನಲ್ಲ 
ಇನ್ನೇನೂ ಕಲಿಯೋನಲ್ಲ ಕನ್ನಡ ಭಾಷೆ ಮರೆಯೋದಿಲ್ಲ 
ಹಳ್ಳಿಯೂರ ಹಮ್ಮಿರ ಬಳ್ಳಿ ಬನದ ಸಿಂಗಾರ
ಬಲ್ಲೆ ಬಲ್ಲೆ ನಾ ಪೂರ ಸೊಗಸುಗಾರ ಸರದಾರ 
-----------------------------------------------------------------------------------------------

ಅಮರಜೀವಿ (೧೯೬೫) - ಸೋ ಸೋ ಸೊಬಾನೇ ಸೊಬಾಲಕ್ಕಿ 
ಸಂಗೀತ : ವಿಜಯ ಭಾಸ್ಕರ, ಸಾಹಿತ್ಯ : ಗೀತಪ್ರಿಯ  ಗಾಯನ : ಎಲ್.ಆರ್.ಈಶ್ವರಿ 

-----------------------------------------------------------------------------------------------

ಅಮರಜೀವಿ (೧೯೬೫) - ಸುಬ್ಬಾ ಬಂದಾ ಹಬ್ಬ ತಂದಾ 
ಸಂಗೀತ : ವಿಜಯ ಭಾಸ್ಕರ, ಸಾಹಿತ್ಯ : ಗೀತಪ್ರಿಯ  ಗಾಯನ : ಪೀಠಾಪುರಂ ನಾಗೇಶ್ವರಾವ್  

ಸುಬ್ಬ ಬಂದಾ .. ಹೊಯ್  ಹಬ್ಬ ತಂದಾ ... ಹೊಯ್ 
ಸುಬ್ಬ ಬಂದಾ ಹಬ್ಬ ತಂದಾ  ಮಿಠಾಯಿ ಮಾರುತ ಮಂದ್ಯಾಗೇ  
ಮಿಠಾಯಿ ಮಾರುತ ಮಂದ್ಯಾಗೇ  
ಸುಬ್ಬ ಬಂದಾ ಹಬ್ಬ ತಂದಾ  ಮಿಠಾಯಿ ಮಾರುತ ಮಂದ್ಯಾಗೇ  
ಮಿಠಾಯಿ ಮಾರುತ ಮಂದ್ಯಾಗೇ  
ಮಂಡ್ಯ ಸಕ್ರೇ ದಂಡ್ಯಾಗ ಬೆರೆಸಿ
ಮಂಡ್ಯ ಸಕ್ರೇ ದಂಡ್ಯಾಗ ಬೆರೆಸಿ ತಂದ್ವಿನಿ ನಿಮ್ಗೆ ನಿಮ್ಮಗಾಗೇ 
ತಂದ್ವಿನಿ ನಿಮ್ಗೆ ನಿಮ್ಮಗಾಗೇ 
ಸುಬ್ಬ ಬಂದಾ ಹಬ್ಬ ತಂದಾ  ಮಿಠಾಯಿ ಮಾರುತ ಮಂದ್ಯಾಗೇ  
ಮಿಠಾಯಿ ಮಾರುತ ಮಂದ್ಯಾಗೇ  

ಓ ಹೋಯ್ ಓ ಓ ಹೋಯ್ 
ಇದೋ ನೋಡಿ ರಂಭಾ ಮಿಠಾಯಿ ವ್ಹಾರೇ ನೋಟ ಕಣ್ಣಾಗದೇ ಕಣ್ಣಿಗೇ ಕಟ್ಟೋ ಬಣ್ಣ ಐತೇ 
ಇದನ್ನು ತಿಂದ್ರೇ ಹಲ್ಲ ಇಲ್ಲದಿರದ್ದರೂ ಬಾಯ್ ನಾಗೇ ಹಾಂಗೇ ಕರಗ ಹೋಗತೈತೇ 
ಬಾಯ್ ನಾಗೇ ಹಾಂಗೇ ಕರಗ ಹೋಗತೈತೇ 
ಹನುಮ ತಿಂದ ಗುಡ್ಡವ ತಂದ ಭೀಮ ತಿಂದ ಕೀಚಕನ್ ಕೊಂದ ಅದನೇ ತಂದ್ವಿನೀ ನಿಮಗಾಗೆ 
ಅದನೇ ತಂದ್ವಿನೀ ನಿಮಗಾಗೆ 
ಸುಬ್ಬ ಬಂದಾ ಹಬ್ಬ ತಂದಾ  ಮಿಠಾಯಿ ಮಾರುತ ಮಂದ್ಯಾಗೇ  
ಮಿಠಾಯಿ ಮಾರುತ ಮಂದ್ಯಾಗೇ  

ಇದೋ ನೋಡಿ ಕಡ್ಡಿ ಚಿಕ್ಕ ಇವನೂ ಬಲೂ ಘಾಟಿ ಪಕ್ಕ ಇವನನ್ನ ಬಿಟ್ರೇ ಮತ್ತೆ ಸಿಕ್ಕ 
ಕುದುರೆ ಬೇಕೋ ಆನೆ ಬೇಕೋ ಮರ ಏರೋ ಮಂಗ ಬೇಕೋ ಇಲ್ವೇ ಜಂಭದ್ ಕೋಳಿ ಬೇಕೋ 
ಇಂಗ ತಿಂದು ಸಂಗ ಬಿಟ್ಟ ಮುದ್ದೆ ತಿನ್ನೋಕೆ ಒದ್ದಾಡಿಬಿಟ್ಟಾ.. ಮತ್ತೇ ಸಿಗದು ಮುಗುದ ಹೋದ ಮ್ಯಾಲೇ .. 
ಮತ್ತೇ ಸಿಗದು ಮುಗುದ ಹೋದ ಮ್ಯಾಲೇ .. 
ಸುಬ್ಬ ಬಂದಾ ಹಬ್ಬ ತಂದಾ  ಮಿಠಾಯಿ ಮಾರುತ ಮಂದ್ಯಾಗೇ  
ಮಿಠಾಯಿ ಮಾರುತ ಮಂದ್ಯಾಗೇ  
ಮಂಡ್ಯ ಸಕ್ರೇ ದಂಡ್ಯಾಗ ಬೆರೆಸಿ
ಮಂಡ್ಯ ಸಕ್ರೇ ದಂಡ್ಯಾಗ ಬೆರೆಸಿ ತಂದ್ವಿನಿ ನಿಮ್ಗೆ ನಿಮ್ಮಗಾಗೇ 
ತಂದ್ವಿನಿ ನಿಮ್ಗೆ ನಿಮ್ಮಗಾಗೇ 
ಸುಬ್ಬ ಬಂದಾ ಹಬ್ಬ ತಂದಾ  ಮಿಠಾಯಿ ಮಾರುತ ಮಂದ್ಯಾಗೇ  
ಮಿಠಾಯಿ ಮಾರುತ ಮಂದ್ಯಾಗೇ  
-----------------------------------------------------------------------------------------------

No comments:

Post a Comment