1442. ಪೈಲ್ವಾನ (2019)




ಪೈಲ್ವಾನ ಚಲನಚಿತ್ರದ ಹಾಡುಗಳು
  1. ಬಾರೋ ಪೈಲ್ವಾನ್
  2. ಧೀರನೇ
  3. ದೋರೆಸಾನೇ
  4. ನಾನು ನೀನು
  5. ಧೃವತಾರೇ
  6. ಕಣ್ಷಮಣಿಯೇ
  7. ಬಂದ ನೋಡು ಪೈಲ್ವಾನ
ಪೈಲ್ವಾನ (೨೦೧೯) - ಬಾರೋ ಪೈಲ್ವಾನ್
ಸಂಗೀತ : ಅರ್ಜುನ ಜನೈ, ಸಾಹಿತ್ಯ:ವಿ.ನಾಗೆಂದ್ರ ಪ್ರಸಾದ, ಗಾಯನ: ವಿಜಯ ಪ್ರಕಾಶ, ಚಂದನಶೆಟ್ಟಿ, ಕೈಲಾಶಖೈರ,

ಗೆದ್ದ ಗೆದ್ದ ಕುಸ್ತಿಯ ಗೆದ್ದ ಎದುರಿಲ್ಲ ಪೈಲ್ವಾನಿಗೆ
ಎದ್ದ ಎದ್ದ ಮಣ್ಣಲಿ ಎದ್ದ ಎದುರಾದ ಬಿರುಗಾಳಿಗೆ
ಹೇ ನಾಯಕ ಈ ಭಜರಂಗಿ ಕಣ್ಣಲ್ ಕಣ್ಣು ಇಡಲೇ ಬೇಡ
ಕವ್ವಾತ ನೋಡೋನಿಗೆ ಜಗ್ಗೊ ಕುಗ್ಗೊ ಆಳೆ ಅಲ್ಲ
ಬಾದ್ ಶಾ ಕಣೊ ಕರುನಾಡಿಗೆ ಧೂಳಿನ ಕಣ ಇಲ್ಲ ಈ ಮೀಸೆಗೆ
ಬಾರೋ ಪೈಲ್ವಾನ್ ಬಾರೋ ಪೈಲ್ವಾನ್
ಗೆದ್ದ ಗೆದ್ದ ಕುಸ್ತಿಯ ಗೆದ್ದ ಎದುರಿಲ್ಲ ಪೈಲ್ವಾನಿಗೆ
ಎದ್ದ ಎದ್ದ ಮಣ್ಣಲಿ ಎದ್ದ ಎದುರಾದ ಬಿರುಗಾಳಿಗೆ

ಹೇ ಮಲ್ಲ ಮಲ್ಲ ಜಗಜಟ್ಟಿ ಮಲ್ಲ
ಹೇ ಇಲ್ಲ ಇಲ್ಲ ಭಯ ಭೀತಿ ಇಲ್ಲ
ರಾಯಣ್ಣ ಸಿಂಧೂರ ಲಕ್ಷ್ಮಣ ಹುಟ್ಟಿದ ಮಣ್ಣಿಂದ ಬಂದಾನ
ವಾಹ್ ರೆ ವಾಹ್ ನೋಡಿರೋ ಚಂದನಾ
ಧೈರ್ಯಕೆ ಚಿಹ್ನೆ ಕಣೋ ನಮ್ ಪೈಲ್ವಾನ
ಬಾರೊ ಪೈಲ್ವಾನ್ ಬಾರೊ ಪೈಲ್ವಾನ್

ಹೇ ಅಂಗ ಅಂಗ ಮಿಂಚೇರಿದಂಗ
ಹೇ ರಂಗ ರಂಗ ರಂಗೇರಿದಂಗ
ಮಂಡಕ್ಕಿ ಮಿರ್ಚಿಯ ಖಾರನ ಕಣ್ಣಾಗ ತೋರವ ಮಸ್ತಾನ
ಹನುಮಾನೆ ಇವನಿಗೆ ಒಲಿದಾನ ಹಾಡಿರೋ ಎಲ್ಲಾರು ಬಹು ಪರಾಕ್
ಬಾರೋ ಪೈಲ್ವಾನ್.. ಬಾರೋ ಪೈಲ್ವಾನ್!
-------------------------------------------------------------------------------

ಪೈಲ್ವಾನ (೨೦೧೯) - ಧೀರನೇ
ಸಂಗೀತ : ಅರ್ಜುನ ಜನೈ, ಸಾಹಿತ್ಯ:ವಿ.ನಾಗೆಂದ್ರ ಪ್ರಸಾದ, ಗಾಯನ: ವಿಜಯ ಪ್ರಕಾಶ, ಸಿರ್ಧಾತ ಬಸರೂರ

ಧೀರನೇ! ಧೀರನೆ! ಗೆಲುವೆ ನೀನೇನೆ... ನೀನೆನೆ ನೀನೆನೆ ಈ ಲೋಕ ನಿಂದೆನೆ 
ಭೂಮಿ ಸಿಡಿಯಲಿ ಭಾನು ನಡುಗಲಿ ನೀನು ಹೆದರದೆ ಎದುರಿಸು ಜಗವ 
ಗುರಿ ಇಡೊನೆ! ಗುರುತಗೋಡು ಮನಸಿದೋನೆ!ಮೆಲ್ಲೆರೊಡು 
ಜಯಶಾಲಿ..ಆಗೋ ಆಗೋ ಆಗೋ .. 
ನುಗ್ಗೋ... ನುಗ್ಗೋ...ನುಗ್ಗೋ... ನೀನೆನೆ ನೀನೆನೆ ಈ ಲೋಕ ನಿಂದೆನೆ

ನುಗ್ಗು ಏಳರ ಹಿಂದೆ ತಾಳುತ ಮುಂದೆ ನುಗ್ಗಿದವ ಶಕ್ತಿವಂತ 
ನೀನಾಳಾಗಿದೆ ಚಂಡಮಾರುತ ಎದ್ದೇಳೋ 
ಸವಿಗಿಂತಲು ಸೋಲು ದೊಡ್ಡದು ವೀರನೆಂದಿಗು ಸೋಲಬಾರದು 
ವೀರ ಹನುಮಾನ ಅಂಶ ನೀನ್ನದು ಎದ್ದೇಳೋ 
ಯಾರ ಚರಿತೆಯ ಯಾರು ಮುರಿವರೋ ಯಾರು ತಿಳಿಯರು ನಾಳೇ 
ನಿನ್ನ ಚರಿತೆಯ ನೀನೆ ಬರೆದುಕೋ ಭೀಮ ಬಲವಿದೆ ನೀನ್ನಲೇ!
ಗುರಿ ಇಡೋನೆ! ಗುರುತಗೋಡು ಮನಸಿದೋನೆ! ಮೆಲ್ಲೇರೋಡು 
ಜಯಶಾಲಿ...ಆಗೋ ಆಗೋ ಆಗೋ ನುಗ್ಗೋ ನುಗ್ಗೋ ... 
ನೀನೆನೆ ನೀನೆನೆ ಈ ಲೋಕ ನಿಂದೆನೆ

ಬದುಕು ಎಂದರೆ ಕಡಲಿನ ಪಯಣ ಸಿಡಿಲು ಮಳೆಯು ಸಹಜ 
ಈಜುತ ದಢವ ಸೇರುವ ಗುಂಡೆ ಇದ್ದರೆ ಬದುಕುವ ಮನುಜ 
ಗೆಲ್ಲೋರ ಅಧಿಯಾಳು ಕಲಿಯುಗ ನಿಂಗೀಗ 
ನೀನೇ ಗುರು ಗೆಲ್ಲೋದು ನಿಲ್ಲೋದು ಕಲಿ ಮಗ ಇಲ್ಲಿಂದ ಎಲ್ಲ ಶುರು 
ಗುರಿ ಇಡೋನೆ! ಗುರುತಗೋಡು ಮನಸಿದೋನೆ! ಮೆಲ್ಲೇರೋಡು 
ಜಯಶಾಲಿ...ಆಗೋ... ಆಗೋ ... ಆಗೋ...  ನುಗ್ಗೋ....  ನುಗ್ಗೋ... 
ನೀನೆನೆ ನೀನೆನೆ ಈ ಲೋಕ ನಿಂದೆನೆ
---------------------------------------------------------------------------

ಪೈಲ್ವಾನ (೨೦೧೯) - ದೋರೆಸಾನೇ
ಸಂಗೀತ : ಅರ್ಜುನ ಜನೈ, ಸಾಹಿತ್ಯ:ವಿ.ನಾಗೆಂದ್ರ ಪ್ರಸಾದ, ಗಾಯನ: ವಿಜಯ ಪ್ರಕಾಶ,


ಸಾದ ಸೀದ, ಗಂಡು ಹೈದ,  ನಿನ್ನ ನೋಡಿ ಬೆಂಡು ಆದ
ಮೊದಲ ಬಾರಿ, ಥಂಡ ಹೊಡೆದ
ನನ್ನ ದೊರಸ್ಸಾನಿ ದೊರಸ್ಸಾನಿ ನೀನೇನೆ
ನನ್ನ ಮನಸ್ಸೀಗ ಮನಸ್ಸೀಗ ನಿಂದೇನೆ{೨)
ಸಾದ ಸೀದ, ಗಂಡು ಹೈದ,  ನಿನ್ನ ನೋಡಿ ಬೆಂಡು ಆದ
ಮೊದಲ ಬಾರಿ, ಥಂಡ ಹೊಡೆದ
ನನ್ನ ದೊರಸ್ಸಾನಿ ದೊರಸ್ಸಾನಿ ನೀನೇನೆ
ನನ್ನ ಮನಸ್ಸೀಗ ಮನಸ್ಸೀಗ ನಿಂದೇನೆ


ಖುಷಿಗಳ ಕಚಗುಳಿ, ಇದ್ದರೆ ನೀ ಪಕ್ಕದಲಿ
ನನ್ನ ಪುಟ್ಟ ಎದೆಯಲಿ, ಚಿಟ್ಟೆಗಳ ಕಥಕ್ಕಳಿ.
ಒಲವೇ, ನೀನೇನೆ ನನ್ನ ಬಲವೇ
ಚೆಲುವೇ, ನೀನಿದ್ದ ಮೇಲೆ ಗೆಲುವೇ
ಈ ಊರ ಜಟ್ಟಿ, ನಾ ಭಾರೀ ಗಟ್ಟಿ ನಿನ್ನೆದುರು ಸೋತೆ ಚೂಟಿ
ಹೇ! ನನ್ನ ದೊರಸ್ಸಾನಿ ದೊರಸ್ಸಾನಿ ನೀನೇನೆ
ನನ್ನ ಮನಸ್ಸೀಗ ಮನಸ್ಸೀಗ ನಿಂದೇನೆ


ಅನುಮತಿ ಪಡೆಯದೆ, ಭುಜಗಳ ಡಿಕ್ಕಿಸಿದೆ
ತರುಣನ ಹೃದಯವ, ಒಲವಲಿ ಸಿಕ್ಕಿಸಿದೆ
ಜಗವೇ, ನೀನಿರುವ ದಿವ್ಯ ಭವನ
ಬರೆವೆ, ನಿನ್ನ ಹೆಜ್ಜೆಗೊಂದು ಕವನ
ನಾ ಖಾಲಿ ಇದ್ದೆ, ನೀ ನುಗ್ಗಿ ಬಂದೆ ನನ್ನೊಳಗೆ ತುಂಬಿ ಹೋದೆ,
ನನ್ನ ದೊರಸ್ಸಾನಿ ದೊರಸ್ಸಾನಿ ನೀನೇನೆ
ನನ್ನ ಮನಸ್ಸೀಗ ಮನಸ್ಸೀಗ ನಿಂದೇನೆ
---------------------------------------------------------------------------

ಪೈಲ್ವಾನ (೨೦೧೯) - ನಾನು ನೀನು
ಸಂಗೀತ : ಅರ್ಜುನ ಜನೈ, ಸಾಹಿತ್ಯ:ವಿ.ನಾಗೆಂದ್ರ ಪ್ರಸಾದ, ಗಾಯನ: ನರೇಶ ಅಯ್ಯರ, ಶೃತಿ ಶಶಿಧರನ


ನಾನು ನೀನು, ನೀನು ನಾನು ಒಂದೇ ಇನ್ನು ಅನ್ನೋದನ್ನು
ಒಪ್ಪಿಕೊಂತು ಈ ಹೃದಯ!
ಬೇರೆ ಏನು, ಬೇಡ ಇನ್ನು ಪ್ರೀತಿ ಏನು ಅನ್ನೋದನ್ನು
ಹೇಳಿಕೊಟ್ಟೆ ಈ ಸಮಯ!
ಜೊತೆಯಲೇ.. ಇರುವೆನು ಖುಷಿಯನೆ.. ತರುವೆನು
ಅರೆ! ಈ ಜನ್ಮ ಮರುಜನ್ಮ ನಾ ನಿನ್ನ ನೆರಳಲ್ಲವೇ..!
ನಾನು ನೀನು, ನೀನು ನಾನು ಒಂದೇ ಇನ್ನು ಅನ್ನೋದನ್ನು
ಒಪ್ಪಿಕೊಂತು ಈ ಹೃದಯ!
ಬೇರೆ ಏನು, ಬೇಡ ಇನ್ನು ಪ್ರೀತಿ ಏನು ಅನ್ನೋದನ್ನು
ಹೇಳಿಕೊಟ್ಟೆ ಈ ಸಮಯ!

ಅಪ್ಪಿಕೊಂಡು ದಿನವು ಪ್ರೇಮಿಸೋಣ
ಪ್ರೀತಿಯಲ್ಲಿ ಸರಸ ಪಾಲಿಸೋಣ!
ಕಷ್ಟವನ್ನು ಹೊಡೆದು ಸೋಲಿಸೋಣ
ಎಲ್ಲರಂತೆ ಬದುಕಿ ತೋರಿಸೋಣ!
ಋತುಮಾನ.. ಬಹುಮಾನ..
ಹೊಸ ಗೂಡಲ್ಲಿ ಮಾಡೋಣ ದಾಂಪತ್ಯದ ಔತಣ!
ನಾನು ನೀನು, ನೀನು ನಾನು ಒಂದೇ ಇನ್ನು ಅನ್ನೋದನ್ನು
ಒಪ್ಪಿಕೊಂತು ಈ ಹೃದಯ!
ಬೇರೆ ಏನು, ಬೇಡ ಇನ್ನು ಪ್ರೀತಿ ಏನು ಅನ್ನೋದನ್ನು
ಹೇಳಿಕೊಟ್ಟೆ ಈ ಸಮಯ!

ಕಷ್ಟ ಇಲ್ಲಿ ಹೇಳು ಯಾರಿಗಿಲ್ಲ
ಪ್ರೀತಿಸೋರಿಗೇನು ಕಮ್ಮಿ ಇಲ್ಲ!
ಬಾಳುತೀವಿ ನಾವು ಸೋಲೇ ಇಲ್ಲ
ಹೊಟ್ಟೆ ಕಿಚ್ಚು ಈಗ ಲೋಕಕೆಲ್ಲಾ!
ಅನುಗಾನ.. ಅನುರಾಗ..
ಪ್ರತಿ ಮುಂಜಾನೆ ಮುಸ್ಸಂಜೆ ಮಳೆಗಾಲ ಶುರುವಾಗಲಿ!
ನಾನು ನೀನು, ನೀನು ನಾನು ಒಂದೇ ಇನ್ನು ಅನ್ನೋದನ್ನು
ಒಪ್ಪಿಕೊಂತು ಈ ಹೃದಯ!
ಬೇರೆ ಏನು, ಬೇಡ ಇನ್ನು ಪ್ರೀತಿ ಏನು ಅನ್ನೋದನ್ನು
ಹೇಳಿಕೊಟ್ಟೆ ಈ ಸಮಯ!
---------------------------------------------------------------------------

ಪೈಲ್ವಾನ (೨೦೧೯) - ಧೃವತಾರೇ
ಸಂಗೀತ : ಅರ್ಜುನ ಜನೈ, ಸಾಹಿತ್ಯ:ವಿ.ನಾಗೆಂದ್ರ ಪ್ರಸಾದ, ಗಾಯನ: ಅರ್ಮಾನ ಮಲ್ಲಿಕ,


ಧೃವತಾರೆ.. ಧೃವತಾರೆ..ಸಾವಿರಾರು ಧೃವತಾರೆ
ಭೂಮಿ ಮೇಲು ಇರುತಾರೆ ಮಿಂಚಲು ಆಗದೆ ನೊಂದಿರೋ
ಧೃವತಾರೆ.. ಧೃವತಾರೆ..ಕಾಲದ ಚಕ್ರದ ಅಡಿಯಲ್ಲಿ ಸಿಗುತಾರೆ
ಸಿಗುತಾರೆ.. ಸಿಗುತಾರೆ..ಯಾತಕೋ ಕಾಣೆ ಈ ಉಡುಗೊರೆ!

ಕಣ್ಣು ಚುಚ್ಚಿ ಕಣ್ಣೆದುರು ಕನ್ನಡಿ ಹಿಡಿಯೋ ವ್ಯಂಗ್ಯಾನ
ಏನು ಹೇಳಲಿ ಹೇಗೆ ತಾಳಲಿ ಬೆಟ್ಟ ಹತ್ತೋ ಆಸೆನ
ಕೊಟ್ಟು ಮುರಿದ ಪ್ರಾಣನ ಅವನ ಜೂಜಲಿ ನಾವೆಲ್ಲಾ ಬಲಿ
ಪ್ರತಿ ಸ್ವಾತಿ ಮಳೆ ಹನಿಯು ಮುತ್ತು ಆಗಬೇಕು 
ಮನುಜತ್ವ ಮೆರೆಯುವ ಕಾಲ ಬರಲೇಬೇಕು
ಸಮಪಾಲಿನ ಜೀವನ ಬೇಕು ಈ ದಿನ..!
ಧೃವತಾರೆ.. ಧೃವತಾರೆ..ಕಾಲದ ಚಕ್ರದ ಅಡಿಯಲ್ಲಿ ಸಿಗುತಾರೆ
ಸಿಗುತಾರೆ.. ಸಿಗುತಾರೆ..ಯಾತಕೋ ಕಾಣೆ ಈ ಉಡುಗೊರೆ!

ಚಂದ್ರ ಬೀದಿ ಹುಡುಗಾನೆ ಸತ್ತು ಮತ್ತೆ ಹುಟ್ತಾನೆ
ಕೋಟಿ ತಾರೆಗಳು ಮೌನ ಪ್ರೇಕ್ಷಕ
ಬೆಳೆಯೋ ಪೈರು ಮೊಳಕೆಲಿ ಚಿವುಟ್ಟೋರಿಲ್ಲಿ ಮಾಮೂಲಿ
ಬ್ರಹ್ಮ ಗೀಚಿದ, ಇಂತ ಜಾತಕ 
ಇಡಿ ಭೂಮಿ ಎತ್ತುವ ಶಕ್ತಿ ಇರುವ ಧೀರ ಹಸಿವಿಂದ ಸತ್ತರೆ
ಕನಸು ಹೆಣದ ಭಾರ ಇದು ಶಾಪವೋ ಲೂಪವೋ? ಯಾರ ಪಾಪವೋ?
ಧೃವತಾರೆ.. ಧೃವತಾರೆ.. ಕಾಲದ ಚಕ್ರದ ಅಡಿಯಲ್ಲಿ ಸಿಗುತಾರೆ
ಸಿಗುತಾರೆ.. ಸಿಗುತಾರೆ..ಯಾತಕೋ ಕಾಣೆಈ ಉಡುಗೊರೆ
---------------------------------------------------------------------------

ಪೈಲ್ವಾನ (೨೦೧೯) - ಕಣ್ಷಮಣಿಯೇ
ಸಂಗೀತ : ಅರ್ಜುನ ಜನೈ, ಸಾಹಿತ್ಯ:ವಿ.ನಾಗೆಂದ್ರ ಪ್ರಸಾದ, ಗಾಯನ: ಸಂಜಿತ ಹೆಗ್ಡೆ


ಕಣ್ಮಣಿಯೆ ಕಣ್ಣು ಹೊಡೆಯೆ  ಕೈಯ ಹಿಡಿಯೆ ಕನ್ಯಾ ಮಣಿಯೆ
ಕಣ್ಣ ಮಣಿಯೆ ಕಣ್ಣು ಹೊಡೆಯೆ  ಕೈಯ ಹಿಡಿಯೆ ಕನ್ಯಾ ಮಣಿಯೆ
ಉಸಿರಾಡಲು ಜಾಗವೆ ಇಲ್ಲ  ಬಿಸಿ ಎಷ್ಟಿದೆ ದೇವರೆ ಬಲ್ಲ
ಎನಾದರೂ ನನ್ನ ಕೈಲಿಲ್ಲ
ಕಣ್ಮಣಿಯೆ ಕಣ್ಣು ಹೊಡೆಯೆ  ಕೈಯ ಹಿಡಿಯೆ ಕನ್ಯಾ ಮಣಿಯೆ
ಕಣ್ಮಣಿಯೆ ಕಣ್ಣು ಹೊಡೆಯೆ  ಕೈಯ ಹಿಡಿಯೆ ಕನ್ಯಾ ಮಣಿಯೆ

ಕುಡಿನೋಟದ ಮಾಟದ ಚೋರಿ ನನ್ನ ಕಣ್ಣೊಳಗೇ ಜಾರಿ
ಶುರುವಾಯಿತು ಲವ್ ಸ್ಟೋರಿ  ಇದು ಸುಖವಾದ ದಾರಿ
ಬಳೆ ಜುಮ್ಕಿಗೆ ಎಳೆ ಹುಡುಗನ ತಲೆ ಕೆಡುತ್ತೆ ಹೋ
ಉಸಿರಿಸಿರಿಗೆ ನರನರದಲ್ಲಿ 
ಪತ್ರಾಂಗಿಯೆ ಚಿತ್ರಾಂಗಿಯೆ ಕೊಡುವೆ ಹೂ ಮುಡಿಯೆ...
ಕಣ್ಮಣಿಯೆ ಕಣ್ಣು ಹೊಡೆಯೆ ಕೈಯ ಹಿಡಿಯೆ ಕನ್ಯಾ ಮಣಿಯೆ
ಕಣ್ಮಣಿಯೆ ಕಣ್ಣು ಹೊಡೆಯೆ ಕೈಯ ಹಿಡಿಯೆ ಕನ್ಯಾ ಮಣಿಯೆ

ಕಾವಿಡುತ್ತಿದೆ ಮುಂದಕ್ಕೆ ಹೋಗದಂತೆ ಕಾಲವೇ
ಮೈ ಸೋಕುತ ನೀ ಬಂದೆಯೆಲ್ಲ ಚಿನ್ನ ಮಿಂಚು ಬಂದ ಹಾಗೆ
ಧೂಳ್ ಹಿಡಿದಿದೆ ನೋಡಿಲ್ಲಿ ಬ್ರಹ್ಮಚಾರಿ ಪ್ರಾಯವೇ
ತೊಡೆ ತಟ್ಟಿ ತಟ್ಟಿ ಎದ್ದು ಬಂದ ಜಗಮೊಂಡ
ನಿನ್ನ ಟಚ್ಚಿನಿಂದ ಧೈರ್ಯಾನೇ ಕಳಕೊಂಡ
ಕಲ್ಯಾಣಿಯೆ ಕಸ್ತೂರಿಯೆ ಬಾರೆ ಕೈ ಹಿಡಿಯೆ
ಕಣ್ಮಣಿಯೆ (ಕಣ್ಣ ಮಣಿಯೆ) ಕಣ್ಣು ಹೊಡೆಯೆ (ಕಣ್ಣು ಹೊಡೆಯೆ)
ಕೈಯ ಹಿಡಿಯೆ (ಕೈಯ ಹಿಡಿಯೆ)ಕನ್ಯಾ ಮಣಿಯೆ ( ಕನ್ಯಾ ಮಣಿಯೆ
---------------------------------------------------------------------------

ಪೈಲ್ವಾನ (೨೦೧೯) - ಬಂದ ನೋಡು ಪೈಲ್ವಾನ
ಸಂಗೀತ : ಅರ್ಜುನ ಜನೈ, ಸಾಹಿತ್ಯ:ವಿ.ನಾಗೆಂದ್ರ ಪ್ರಸಾದ, ಗಾಯನ: ವ್ಯಾಸರಾಜ

ರೀಬ ರೀಬ ರೀಬ ರಾಬ ರೀಬ ರೀಬ ರೀಬ ರಾಬ
ರೀಬ ರೀಬ ರೀಬ ರಾಬ ರೀಬ ರೀಬ ರೀಬ ರಾಬ
ರೀಬ ರೀಬ ರೀಬ ಹೋಯ್
ರೀಬ ರೀಬ ರೀಬ ರಾಬ ರೀಬ ರೀಬ ರೀಬ ರಾಬ
ರೀಬ ರೀಬ ರೀಬ ರಾಬ ರೀಬ ರೀಬ ರೀಬ ರಾಬ
ರೀಬ ರೀಬ ರೀಬ ಹೋಯ್
ಪೈಲ್ವಾನ್... ಪೈಲ್ವಾನ್ ...
ತೋಳು ನೋಡು ಉಕ್ಕು ಒಂದೇ ಏಟು ಸಾಕು
ದೇವ್ರೆ ನಿಂಗೆ ದಿಕ್ಕು ಬಂದ ನೋಡು ಪೈಲ್ವಾನ್
ಪೈಲ್ವಾನ್ ಪೈಲ್ವಾನ್ ಪೈಲ್ವಾನ್

ನೋಡು ಇವನ ಗತ್ತು ಕುಸ್ತೀಗ್ ಬಂದೋನ್ ಚಿತ್ತು ಪ್ರಾಣಕ್ಕೇನೆ ಕುತ್ತು
ಬಂದ ನೋಡು ಪೈಲ್ವಾನ್ ಪೈಲ್ವಾನ್ ಪೈಲ್ವಾನ್ ಪೈಲ್ವಾನ್
ರೀಬ ರೀಬ ರೀಬ ರಾಬ ರೀಬ ರೀಬ ರೀಬ ರಾಬ
ರೀಬ ರೀಬ ರೀಬ ರಾಬ ರೀಬ ರೀಬ ರೀಬ ರಾಬ
ರೀಬ ರೀಬ ರೀಬ ಹೋಯ್
ರೀಬ ರೀಬ ರೀಬ ರಾಬ ರೀಬ ರೀಬ ರೀಬ ರಾಬ
ರೀಬ ರೀಬ ರೀಬ ರಾಬ ರೀಬ ರೀಬ ರೀಬ ರಾಬ
ರೀಬ ರೀಬ ರೀಬ ಹೋಯ್
ತೋಳು ನೋಡು ಉಕ್ಕು ಒಂದೇ ಏಟು ಸಾಕು
ದೇವ್ರೆ ನಿಂಗೆ ದಿಕ್ಕು ಬಂದ ನೋಡು ಪೈಲ್ವಾನ್
ಪೈಲ್ವಾನ್ ಪೈಲ್ವಾನ್ ಪೈಲ್ವಾನ್
ನೋಡು ಇವನ ಗತ್ತು ಕುಸ್ತೀಗ್ ಬಂದೋನ್ ಚಿತ್ತು
ಪ್ರಾಣಕ್ಕೇನೆ ಕುತ್ತು ಬಂದ ನೋಡು ಪೈಲ್ವಾನ್
ಪೈಲ್ವಾನ್ ಪೈಲ್ವಾನ್ ಪೈಲ್ವಾನ್
---------------------------------------------------------------------------

No comments:

Post a Comment