1443. ಮನೆ ಕಟ್ಟಿ ನೋಡು ( ೧೯೬೬)

ಮನೆ ಕಟ್ಟಿ ನೋಡು ಚಲನಚಿತ್ರದ ಹಾಡುಗಳು 
  1. ಬೆಳೆದಿದೆ ನೋಡ ಬೆಂಗಳೂರು ನಗರ
  2. ಜಯನಗರ ವಿಜಯನಗರ 
  3. ಬಾಳಿನಲೀ ಒಂದೊಂದೇ ಶುಭದಿನ 
  4. ಕಂಡೇ ಕಂಡೇ ಕಂಡೇ 
  5. ಜಾರಿ ಬಿದ್ದ ಜಾಲಕೇ 
  6. ಮನೆ ಕಟ್ಟಿ ನೋಡೂ 
  7. ಚಾಮರಾಜ ಪೇಟೇಲಿ  
ಮನೆ ಕಟ್ಟಿ ನೋಡು ( ೧೯೬೬) - ಬೆಳೆದಿದೆ ನೋಡ ಬೆಂಗಳೂರು ನಗರ
ಸಂಗೀತ : ಆರ್.ರತ್ನ, ಸಾಹಿತ್ಯ : ಸಿ.ವಿ.ಶಿವಶಂಕರ, ಗಾಯನ : ಪಿ.ಬಿ.ಶ್ರೀನಿವಾಸ 

ಗಂಗಾಧರಾ.. ಗೌರೀವರ.. ಬಸವನ ಗುಡಿಯ ಬಸವೇಶ್ವರ.. 
ಬೆಂಗಳೂರಿನ ಹಿರಿ ಶಿಲ್ಪಿ ಕೆಂಪಯ್ಯ ಗೌಡ... 
ಬೆಳೆದಿದೆ ನೋಡ ಬೆಂಗಳೂರು ನಗರ ಸಂಸ್ಕೃತಿ ಕಲೆಗಳ ಹೆಮ್ಮೆಯ ನಗರ 
ಕಣ್ಣಿಗೆ ಕಾಣುವ ಅಂದದ ಸೌಧ ಕನ್ನಡ ನಾಡಿನ ವಿಧಾನ ಸೌಧ 
ಬೆಳೆದಿದೆ ನೋಡ ಬೆಂಗಳೂರು ನಗರ ಸಂಸ್ಕೃತಿ ಕಲೆಗಳ ಹೆಮ್ಮೆಯ ನಗರ 
ಕಣ್ಣಿಗೆ ಕಾಣುವ ಅಂದದ ಸೌಧ ಕನ್ನಡ ನಾಡಿನ ವಿಧಾನ ಸೌಧ 
ಬೆಳೆದಿದೆ ನೋಡ ಬೆಂಗಳೂರು ನಗರ

ವಿದ್ಯಾಶಾಲೆಯ ಕೀರ್ತಿಯ ಗೋಪುರ..  ಕೈಗಾರಿಕೆಗಳ ವ್ಯಾಪಕ ನಗರ 
ವಿದ್ಯಾಶಾಲೆಯ ಕೀರ್ತಿಯ ಗೋಪುರ..  ಕೈಗಾರಿಕೆಗಳ ವ್ಯಾಪಕ ನಗರ 
ಕನ್ನಡ ಹೆಂಗಳ ಸವಿಗಾನದಲಿ ಸುಂದರ ತೋಟದ ಮಡಿಲಲ್ಲಿ 
ಬೆಳೆದಿದೆ ನೋಡ ಬೆಂಗಳೂರು ನಗರ ಸಂಸ್ಕೃತಿ ಕಲೆಗಳ ಹೆಮ್ಮೆಯ ನಗರ 
ಕಣ್ಣಿಗೆ ಕಾಣುವ ಅಂದದ ಸೌಧ ಕನ್ನಡ ನಾಡಿನ ವಿಧಾನ ಸೌಧ
ಬೆಳೆದಿದೆ ನೋಡ ಬೆಂಗಳೂರು ನಗರ

ಪ್ರವಾಸಿ ಜನಗಳ ಮೋಹಕ ನಗರ...  ಕನ್ನಡ ಕವಿಗಳ ಮೆಚ್ಚಿನ ನಗರ 
ಪ್ರವಾಸಿ ಜನಗಳ ಮೋಹಕ ನಗರ...  ಕನ್ನಡ ಕವಿಗಳ ಮೆಚ್ಚಿನ ನಗರ 
ಭಾರತಮಾತೆಯ ಮಕುಟದಲಿ ಬೆಳಗುವ ರತ್ನದ ತೆರದಲ್ಲಿ
ಭಾರತಮಾತೆಯ ಮಕುಟದಲಿ ಬೆಳಗುವ ರತ್ನದ ತೆರದಲ್ಲಿ
ಬೆಳಗುವ ರತ್ನದ ತೆರದಲ್ಲಿ
ಬೆಂಗಳೂರು ನಗರ ಬೆಳೆದಿದೆ ನೋಡ ಸಂಸ್ಕೃತಿ ಕಲೆಗಳ ಹೆಮ್ಮೆಯ ನಗರ 
ಕಣ್ಣಿಗೆ ಕಾಣುವ ಅಂದದ ಸೌಧ ಕನ್ನಡ ನಾಡಿನ ವಿಧಾನ ಸೌಧ 
ಬೆಂಗಳೂರು ನಗರ ಬೆಳೆದಿದೆ ನೋಡ... 
ಬೆಂಗಳೂರು ಕನ್ನಡಿಗರ ಕೈಗನ್ನಡಿ ಇದು ನಿನ್ನದೆಂದು ಹೆಮ್ಮೆಪಡು ನೀ ನೋಡಿ .... 
-------------------------------------------------------------------------------------------------------
 
ಮನೆ ಕಟ್ಟಿ ನೋಡು ( ೧೯೬೬) - ಜಯನಗರ ವಿಜಯನಗರ 
ಸಂಗೀತ : ಆರ್.ರತ್ನ, ಸಾಹಿತ್ಯ : ಸಿ.ವಿ.ಶಿವಶಂಕರ, ಗಾಯನ :  ರೇಣುಕಾ, ಬೆಂಗಳೂರು ಲತಾ, ಪಿ.ರಾಮಚಂದ್ರ, 

ಹೆಣ್ಣು : ಜಯನಗರ....  ವಿಜಯನಗರ...   
ಎಲ್ಲರು : ಜಯನಗರ ವಿಜಯನಗರ ಕನ್ನಡಿಗರ ಕಣ್ಣಾದ ಬೆಂಗಳೂರು ನಗರ 
            ನಾವೇಲ್ಲಾರೂ ಒಂದೇ ನಮ್ಮೆಲ್ಲರ ಗುರಿ ಒಂದೇ 
            ಎಲ್ಲಾದರೂ ಇರೂ ನೀ ಹೇಗಾದರೂ ಇರೂ ನೀ ಬಾಳೆಲ್ಲ ಕನ್ನಡವಾಗಿರಲೀ ... 
            ಜಯನಗರ ವಿಜಯನಗರ

ಗಂಡು : ಭಾರತದ ಮಕ್ಕಳೇನ್ನೀ ಭಾಗ್ಯವಿದು ನಮ್ಮದೇನ್ನೀ  
ಹೆಣ್ಣು : ತಾಯ್ನಾಡ ಕಾಣಬನ್ನೀ.. ನೀವೇಲ್ಲರೂ ಒಂದಾಗೀ .. 
ಗಂಡು : ಭಾರತದ ಮಕ್ಕಳೇನ್ನೀ ಭಾಗ್ಯವಿದು ನಮ್ಮದೇನ್ನೀ  
ಹೆಣ್ಣು : ತಾಯ್ನಾಡ ಕಾಣಬನ್ನೀ.. ನೀವೇಲ್ಲರೂ ಒಂದಾಗೀ .. 
          ಲಾಲ್ಲಲಲ್ಲಲಾ (ಲಾರಲ್ಲಲಲಲಾಲಾಲ ಲಲ್ಲಾ ) ಲ್ಲಲ್ಲ ಲ್ಲಲ್ಲ  ಲ್ಲಲ್ಲ  
          ಲಾಲ್ಲಲಲ್ಲಲಾ (ಲಾರಲ್ಲಲಲಲಾಲಾಲ ಲಲ್ಲಾ ) ಲ್ಲಲ್ಲ ಲ್ಲಲ್ಲ  ಲ್ಲಲ್ಲ  
ಎಲ್ಲರು : ಜಯನಗರ ವಿಜಯನಗರ 

ಗಂಡು : ಹಾಲು ಹರಿದ ನಾಡಿದು ನಾಡಾಗಲೀ ಚಿನ್ನದ ಮಳೆಗಿನ್ನೊಮ್ಮೆ ಗುರುತೂ ಹರಿಯಲೀ ... 
           ಹಾಲು ಹರಿದ ನಾಡಿದು ನಾಡಾಗಲೀ ಚಿನ್ನದ ಮಳೆಗಿನ್ನೊಮ್ಮೆ ಗುರುತೂ ಹರಿಯಲೀ ... 
ಹೆಣ್ಣು : ಭಾರತದ ಇತಿಹಾಸ ಹೊಳೆದು ಬೆಳಗಲೀ .. ಬಾಳುತಿಹ ಜನರೆಲ್ಲಾ ಒಂದಾಗಲೀ 
          ಭಾರತದ ಇತಿಹಾಸ ಹೊಳೆದು ಬೆಳಗಲೀ .. ಬಾಳುತಿಹ ಜನರೆಲ್ಲಾ ಒಂದಾಗಲೀ  
ಎಲ್ಲರು : ಜಯನಗರ ವಿಜಯನಗರ ಕನ್ನಡಿಗರ ಕಣ್ಣಾದ ಬೆಂಗಳೂರು ನಗರ 
            ನಾವೇಲ್ಲಾರೂ ಒಂದೇ ನಮ್ಮೆಲ್ಲರ ಗುರಿ ಒಂದೇ 
            ಎಲ್ಲಾದರೂ ಇರೂ ನೀ ಹೇಗಾದರೂ ಇರೂ ನೀ ಬಾಳೆಲ್ಲ ಕನ್ನಡವಾಗಿರಲೀ ... 
            ಆಗಿರಲೀ...ಆಗಿರಲೀ...ಆಗಿರಲೀ... ಆಗಿರಲೀ...ಆಗಿರಲೀ...ಆಗಿರಲೀ...                       
------------------------------------------------------------------------------------------------------

ಮನೆ ಕಟ್ಟಿ ನೋಡು ( ೧೯೬೬) - ಬಾಳಿನಲೀ ಒಂದೊಂದೇ ಶುಭದಿನ 
ಸಂಗೀತ : ಆರ್.ರತ್ನ, ಸಾಹಿತ್ಯ : ಸಿ.ವಿ.ಶಿವಶಂಕರ, ಗಾಯನ : ಎಸ್.ಜಾನಕೀ 

ಆಹಾಹ್ಹಾಹಾ  ಲಲಲಾ ಹೂಂಹೂಂಹೂಂಹೂಂ 
ಓಓಓ ಬಾಳಿನಲಿ ಒಂದೊಂದೇ ಶುಭದಿನ ಇಂಬು ತುಂಬಿರಲೀ ಆನಂದ ಚಿರನೂತನ 
ಬಾಳಿನಲಿ ಒಂದೊಂದೇ ಶುಭದಿನ ಇಂಬು ತುಂಬಿರಲೀ ಆನಂದ ಚಿರನೂತನ 
ಬಾಳಿನಲಿ ಒಂದೊಂದೇ ಶುಭದಿನ.. 
ಆಆಆ ಆಆ ಓಓಓಓಓ ಓಓ  ಲಲ್ಲಲಾ ಲಲ್ಲಲಾ ಆಆಆ.. ಆಆಆ 

ಹರುಷದಿ ಹಾರೈಕೆ ಬೆಳಗುವ ಈ ದಿನ ತಾನೇ ಓಲೈಸಿ ಬರುವಂತೇ ಸುಖದಿನ 
ಹರುಷದಿ ಹಾರೈಕೆ ಬೆಳಗುವ ಈ ದಿನ ತಾನೇ ಓಲೈಸಿ ಬರುವಂತೇ ಸುಖದಿನ 
ಅದುವೇ.. ಮನಕೆ.. ಆನಂದ ಪಾನ.. 
ಬಾಳಿನಲಿ ಒಂದೊಂದೇ ಶುಭದಿನ ಇಂಬು ತುಂಬಿರಲೀ ಆನಂದ ಚಿರನೂತನ 
ಬಾಳಿನಲಿ ಒಂದೊಂದೇ ಶುಭದಿನ.. 

ಗಗನಕೆ ಸೌಂದರ್ಯ ಚಂದ್ರನ ಬಿಂಬ.. ಹೂವಿಗೇ ತಾರುಣ್ಯ ಮಧು ತಂದ ಸೌರಭ.. 
ಗಗನಕೆ ಸೌಂದರ್ಯ ಚಂದ್ರನ ಬಿಂಬ.. ಹೂವಿಗೇ ತಾರುಣ್ಯ ಮಧು ತಂದ ಸೌರಭ.. 
ಅದುವೇ.. ಮನಕೆ.. ಆನಂದ ಪಾನ.. 
ಬಾಳಿನಲಿ ಒಂದೊಂದೇ ಶುಭದಿನ ಇಂಬು ತುಂಬಿರಲೀ ಆನಂದ ಚಿರನೂತನ 
ಆಆಆ ಆಆ ಓಓಓಓಓ ಓಓ ಆಆಆ ಆಆ ಓಓಓಓಓ ಓಓ ಹೂಂಹೂಂಹೂಂಹೂಂ 
-------------------------------------------------------------------------------------------------------

ಮನೆ ಕಟ್ಟಿ ನೋಡು ( ೧೯೬೬) - ಕಂಡೇ ಕಂಡೇ ಕಂಡೇ 
ಸಂಗೀತ : ಆರ್.ರತ್ನ, ಸಾಹಿತ್ಯ : ಸಿ.ವಿ.ಶಿವಶಂಕರ, ಗಾಯನ : ಬೆಂಗಳೂರು ಲತಾ, ಪಿ.ರಾಮಚಂದ್ರ, 

ಹೆಣ್ಣು : ಕಂಡೇ ಕಂಡೇ (ನಿಂತೇ ನಿಂತೇ ) ಕಂಡೇ ಕಂಡೇ ಈ ನಯನದಲೀ 
ಗಂಡು : ನಿಂತೇ ನಿಂತೇ ಈ ಹುದುಕಿನಲೇ 

ಹೆಣ್ಣು : ನಗುಮುಖವ ಕಂಡೇನೇ ಮೈಮರೆತು ನಿಂದೇನೇ ಕಾಲ ಬಣ್ಣ ನೋಟವಿದ ಕಂಡೇನೇ 
          ನಗುಮುಖವ ಕಂಡೇನೇ ಮೈಮರೆತು ನಿಂದೇನೇ ಕಾಲ ಬಣ್ಣ ನೋಟವಿದ ಕಂಡೇನೇ 
          ಗೆಳೆತನ ಬಯಸುತ ಸಿರಿತನ ಮರೆಯುತ ಮನ ತುಂಬೀ ಮೊಗ ತುಂಬೀ ಬಳಿ ಜಾರಿದೇನೇ   
ಗಂಡು : ಆಹಾಹಾ ಆಹಾಹ ಆಹಾಹಾಹ  ಆಹಾಹ   ಆಹಾಹಾ ಆಹಾಹ   
ಹೆಣ್ಣು : ಕಂಡೇ ಕಂಡೇ (ನಿಂತೇ ನಿಂತೇ ) ಕಂಡೇ ಕಂಡೇ ಈ ಮನಸಿನಲೀ  
ಗಂಡು : ನಿಂತೇ ನಿಂತೇ ಈ ಮನಸಿನಲೀ  

ಗಂಡು : ಧರೆಗಿಳಿದೂ ಬಂದಿಹೇ ಸುಮರಾಶಿ ತಂದಿಹೇ ಹಾಡಿನಿಂದ ಕೋಗಿಲೆಯ ಕಂಡೇನೇ 
            ಧರೆಗಿಳಿದೂ ಬಂದಿಹೇ ಸುಮರಾಶಿ ತಂದಿಹೇ ಹಾಡಿನಿಂದ ಕೋಗಿಲೆಯ ಕಂಡೇನೇ 
            ಚೆಲುವನೂ ಸವಿಯುತ ಜಗವನೂ ಮರೆಯುತ ವನರಾಣಿ ನಿನಗಿಂದೂ ಕರೆ ನೀಡಿದೆನೇ..  
ಹೆಣ್ಣು : ಆಹಾಹಾ ಆಹಾಹ ಆಹಾಹಾಹ  ಆಹಾಹ   ಆಹಾಹಾ ಆಹಾಹ   
          ಕಂಡೇ ಕಂಡೇ (ನಿಂತೇ ನಿಂತೇ ) ಕಂಡೇ ಕಂಡೇ ಈ ಮನಸಿನಲೀ  
ಗಂಡು : ನಿಂತೇ ನಿಂತೇ ಈ ಮನಸಿನಲೀ  

ಹೆಣ್ಣು : ಸವಿಗನಸ ಕಾಣುವೇ ಮನ ನಿಲ್ಲಿಸೀ ಕೇಳುವೆ ಯಾರ ಕಂಡು ಓಡಿ ಬಂದೇ ಹೇಳೂ ನೀ 
          ಸವಿಗನಸ ಕಾಣುವೇ ಮನ ನಿಲ್ಲಿಸೀ ಕೇಳುವೆ ಯಾರ ಕಂಡು ಓಡಿ ಬಂದೇ ಹೇಳೂ ನೀ  
ಇಬ್ಬರು : ರಸಮಯ ಜೀವನ ನಗುವಿನ ನಂದನ ನಮಗಿಂದೂ ಚೆಲುವನ್ನೂ ಜೊತೆಗೂಡಿದೆಯೇ           
             ಆಹಾಹಾ ಆಹಾಹ ಆಹಾಹಾಹ  ಆಹಾಹ   ಆಹಾಹಾ ಆಹಾಹ   
ಹೆಣ್ಣು : ಕಂಡೇ ಕಂಡೇ (ನಿಂತೇ ನಿಂತೇ ) ಕಂಡೇ ಕಂಡೇ ಈ ಮನಸಿನಲೀ  
ಗಂಡು : ನಿಂತೇ ನಿಂತೇ ಈ ಮನಸಿನಲೀ  
ಇಬ್ಬರು : ಆಹಾಹಾ ಆಹಾಹ ಆಹಾಹಾಹ  ಆಹಾಹ   ಆಹಾಹಾ ಆಹಾಹ ಹೂಂಹೂಂಹೂಂಹೂಂ   
-------------------------------------------------------------------------------------------------------

ಮನೆ ಕಟ್ಟಿ ನೋಡು ( ೧೯೬೬) - ಜಾರಿ ಬಿದ್ದ ಜಾಲಕೇ 
ಸಂಗೀತ : ಆರ್.ರತ್ನ, ಸಾಹಿತ್ಯ : ಸಿ.ವಿ.ಶಿವಶಂಕರ, ಗಾಯನ : ಎಲ್.ಆರ್.ಈಶ್ವರಿ 

ಹೆಣ್ಣು : ಹ್ಹಹ್ಹಾ.. ಜಾರೀ ಬಿದ್ದೇ ಜಲಕ್ಕೇ ಲಜ್ಜೇ ಇಲ್ಲ ಮುಖಕ್ಕೇ 
          ಒರಗಿ ನಿಲ್ಲೂ ಮರಕ್ಕೇ ಓ..ಜಾಣ ಎಲ್ಲೀ ಬಿಟ್ಟೇ ನಿನ್ನ ಪ್ರಾಣ  
ಗಂಡು : ಆಹಾ.. ನಿನ್ನ ಮೆಚ್ಚಿ ಛಲಕ್ಕೇ ಕಣ್ಣು ಸೋತೇ ಕೆಳಕ್ಕೇ 
           ಸಿಕ್ಕಿ ಬಿದ್ದೇ ಮನಕ್ಕೇ ಓ...ರಾಣೀ... ಹೋಗೋದೇಲ್ಲೇ ಈ ಪ್ರಾಣೀ ಆಹಾಹಾಹಾ ಲಲ್ಲಲಾಹ 

ಹೆಣ್ಣು : ಓಹೋ ಓಹೋ ಓಹಹೋ ಓಹೋ ಓಹೋ ಓಹೋ ಓಹೋ 
          ನೀ ಬೇಲಿ ಹಾರೀ ಬಂದದ್ದೂ ಏಕೇ .. ನೀ ಮೋಡಿ ಹಾಕೀ ನಿಂತಿದ್ದೇ ಜೋಕೇ 
          ನೀ ಬೇಲಿ ಹಾರೀ ಬಂದದ್ದೂ ಏಕೇ .. ನೀ ಮೋಡಿ ಹಾಕೀ ನಿಂತಿದ್ದೇ ಜೋಕೇ 
ಗಂಡು : ಓಹೋ ಓಹೋ ಓಹಹೋ ಓಹೋ ಓಹೋ ಓಹೋ ಓಹೋ 
            ಈ ಕಣ್ಣ ಜಾಲ ಬೀಸಿದ್ದೂ ಏಕೇ ಈ ಥಳಕೂ ಬಳುಕು ಬೇಡಿನ್ನೂ ಸಾಕೇ 
ಹೆಣ್ಣು : ಅಹ್ಹಹ್ಹಾ.. ನಿನ್ನ ಜೋಡಿ ನಾನಲ್ಲ... ಇನ್ನೂ ಮಾತೂ ಬೇಕಿಲ್ಲ.. ನನ್ನ ನಿನ್ನ ಸಂಬಂಧವಿಲ್ಲ .. 
ಗಂಡು : ಓ .. ನಿನ್ನ ಮೆಚ್ಚಿ ಛಲಕ್ಕೇ ಕಣ್ಣು ಸೋತೇ ಕೆಳಕ್ಕೇ 
           ಸಿಕ್ಕಿ ಬಿದ್ದೇ ಮನಕ್ಕೇ ಓ...ರಾಣೀ... ಹೋಗೋದೇಲ್ಲೇ ಈ ಪ್ರಾಣೀ 
ಹೆಣ್ಣು : ಓ ಜಾರೀ ಬಿದ್ದೇ ಜಲಕ್ಕೇ ಲಜ್ಜೇ ಇಲ್ಲ ಮುಖಕ್ಕೇ 
          ಒರಗಿ ನಿಲ್ಲೂ ಮರಕ್ಕೇ ಓ..ಜಾಣ ಎಲ್ಲೀ ಬಿಟ್ಟೇ ನಿನ್ನ ಪ್ರಾಣ ಆಹಾಹಾಹಾ ಅಹ್ಹಹ್ಹಹಹಹ 

ಗಂಡು : ಅಹ್ ಅಹ್  ಅಹಹ್  ಅಹ್ ಅಹ್  ಅಹ್  ಹ ಹ ಹ ಹ  
           ನೀ ಕನಸಲ್ಲಿ ಬರುತ್ತಿದ್ದೇ ಏಕೇ ನನ್ನ ಮನಸೆಲ್ಲ ಕೆಡಿಸಿದ್ದೂ ಸಾಕೇ 
           ನೀ ಕನಸಲ್ಲಿ ಬರುತ್ತಿದ್ದೇ ಏಕೇ ನನ್ನ ಮನಸೆಲ್ಲ ಕೆಡಿಸಿದ್ದೂ ಸಾಕೇ 
ಹೆಣ್ಣು : ಓಹೋ ಓಹೋ ಓಹಹೋ ಓಹೋ ಓಹೋ ಓಹೋ ಓಹೋ 
          ನೀ ಬೇರೇ ಯಾರನೋ ನೋಡಿದ್ದೀ ಮಂಕೇ ನಿನ್ನ ಬುದ್ದಿಕೆಟ್ಟು ಹಾಳಾಗ್ತೀ ಜೋಕೇ 
ಗಂಡು : ಹ್ಹಹ್ಹಾ... ನನ್ನ ಜೋಡಿ ನೀ ತಾನೇ ಇನ್ನೂ ಬೇರೆ ನಾ ಕಾಣೇ ನನ್ನ ಮನಸ್ಸ ಕದ್ದಂಥ ಹೆಣ್ಣೇ 
ಹೆಣ್ಣು : ಟೂರರರ್.. ಓ ಜಾರೀ ಬಿದ್ದೇ ಜಲಕ್ಕೇ ಲಜ್ಜೇ ಇಲ್ಲ ಮುಖಕ್ಕೇ 
          ಒರಗಿ ನಿಲ್ಲೂ ಮರಕ್ಕೇ ಓ..ಜಾಣ ಎಲ್ಲೀ ಬಿಟ್ಟೇ ನಿನ್ನ ಪ್ರಾಣ 
ಗಂಡು : ಓ .. ನಿನ್ನ ಮೆಚ್ಚಿ ಛಲಕ್ಕೇ ಕಣ್ಣು ಸೋತೇ ಕೆಳಕ್ಕೇ 
           ಸಿಕ್ಕಿ ಬಿದ್ದೇ ಮನಕ್ಕೇ ಓ...ರಾಣೀ... ಹೋಗೋದೇಲ್ಲೇ ಈ ಪ್ರಾಣೀ 
           ಆಹಾಹಾಹಾ ಲಲ್ಲಲಾ ಓಹೋಹೋಹೊಹೋ ಲಲ್ಲಲಾ (ಲಾಲಾಲ ಲಲ್ಲಲಾ )
  -------------------------------------------------------------------------------------------------------

ಮನೆ ಕಟ್ಟಿ ನೋಡು ( ೧೯೬೬) - ಮನೆ ಕಟ್ಟಿ ನೋಡೂ 
ಸಂಗೀತ : ಆರ್.ರತ್ನ, ಸಾಹಿತ್ಯ : ಸಿ.ವಿ.ಶಿವಶಂಕರ, ಗಾಯನ : ಪಿ.ಬಿ.ಶ್ರೀನಿವಾಸ 

ಇಲ್ಲಿಗೇ...  ಋಣವೂ ತೀರಿತೂ ನೀನೂ ಕಟ್ಟಿದ ಈ ಮನೆಯಾ... 
ಮನೆ ಕಟ್ಟಿ ನೋಡೂ ಮದುವೇ ಮಾಡಿ ನೋಡೂ ಕನ್ನಡದ ಗಾದೆಯಿದೋ ತಿಳಿಯಲಾರೇಯಾ...   
ಮನೆ ಕಟ್ಟಿ ನೋಡೂ 

ಆಸೆಗಳೋ.. ನೂರೆಂಟೂ ಕಾಡಿರಲೂ ಈ ನಂಟೂ .. 
ಆಸೆಗಳೋ.. ನೂರೆಂಟೂ ಕಾಡಿರಲೂ ಈ ನಂಟೂ .. 
ನಂಬಿದೇ ನೀ ಗೆಳೆಯರನೂ  
ನಂಬಿದೇ ನೀ ಗೆಳೆಯರನೂ ನಂಬಿಸೀ ನಡೆದ ಮನುಜರನೂ 
ಮನೆ ಕಟ್ಟಿ ನೋಡೂ ಮದುವೇ ಮಾಡಿ ನೋಡೂ ಕನ್ನಡದ ಗಾದೆಯಿದೋ ತಿಳಿಯಲಾರೇಯಾ...   
ಮನೆ ಕಟ್ಟಿ ನೋಡೂ 

ಎಲ್ಲಿಹುದೂ ನಿನ್ನ ಪಾಲೂ ಇರುಳಾಯ್ತೇ ಸವಿಬಾಳೂ 
ಎಲ್ಲಿಹುದೂ ನಿನ್ನ ಪಾಲೂ ಇರುಳಾಯ್ತೇ ಸವಿಬಾಳೂ 
ಸ್ನೇಹವದೂ ಮಣ್ಣಾಯ್ತು   
ಸ್ನೇಹವದೂ ಮಣ್ಣಾಯ್ತು ಹಣವೇ ಜನಗಳ ಮನವಾಯ್ತು 
ಮನೆ ಕಟ್ಟಿ ನೋಡೂ ಮದುವೇ ಮಾಡಿ ನೋಡೂ ಕನ್ನಡದ ಗಾದೆಯಿದೋ ತಿಳಿಯಲಾರೇಯಾ...   
ಮನೆ ಕಟ್ಟಿ ನೋಡೂ 

ಬದುಕಿದರೂ ಬಾಳೆಲ್ಲಾ ನೀನಿರಲೂ ಮನೆಯಿಲ್ಲಾ 
ಬದುಕಿದರೂ ಬಾಳೆಲ್ಲಾ ನೀನಿರಲೂ ಮನೆಯಿಲ್ಲಾ 
ಯಾರ ಮನ ಯಾರ ಮನೆ 
ಯಾರ ಮನ ಯಾರ ಮನೆ ಮಸಣ ಅದುವೇ ಮನೆಯಲ್ಲಾ 
ಮನೆ ಕಟ್ಟಿ ನೋಡೂ ಮದುವೇ ಮಾಡಿ ನೋಡೂ ಕನ್ನಡದ ಗಾದೆಯಿದೋ ತಿಳಿಯಲಾರೇಯಾ...   
ಮನೆ ಕಟ್ಟಿ ನೋಡೂ 
-------------------------------------------------------------------------------------------------------

ಮನೆ ಕಟ್ಟಿ ನೋಡು ( ೧೯೬೬) - ಚಾಮರಾಜ ಪೇಟೇಲಿ  
ಸಂಗೀತ : ಆರ್.ರತ್ನ, ಸಾಹಿತ್ಯ : ಸಿ.ವಿ.ಶಿವಶಂಕರ, ಗಾಯನ : ಕೆ.ಎಸ್.ಎಲ್.ಸ್ವಾಮಿ, ಲತಾ 

ಗಂಡು : ಚಾಮರಾಜ ಪೇಟೇಲಿ ಚಾಮರದಂತೇ ತಲೇ ಬೀಸೀ ಚಿಗರಿಯಂತೇ ಮಿಂಚೀ ಹೋದ ಹೆಣ್ಣೇ   
           ನನಗಿಂತ ನೀ ಚೆಂದ ಮಕರಂದ ನಿನ್ನನ್ನೂ ಹುಡುಕುತ್ತ ಕವಿ ಬಂದ 
           ನೀನೊಮ್ಮೆ ನಕ್ಕರೇ ಆನಂದ.. ಸವಿಯುವೇ ಒಲವಿನ ನಿನ್ನಂದ.. 
           ನೀನೊಮ್ಮೆ ನಕ್ಕರೇ ಆನಂದ.. ಸವಿಯುವೇ ಒಲವಿನ ನಿನ್ನಂದ.. 
ಹೆಣ್ಣು : ಓಹೋಹ್ಹಹ್ಹಹೋ.. ಬಸವನ ಗುಡಿಯಲ್ಲಿ ಭಕ್ತಿಗಾಗಿ ಕಾದೋ ಕಾದೋ ಬೇಸತ್ತ ನಡೆದರೋಮಿಯೋ.. ಓ.. 
         ನಿನ್ನ ಕಂಡೂ ನನಗೇ ನಗು ಬಂತೋ ನಿನ್ನ ಬುದ್ದೀ ಏಕೆ ಹೀಗೇ ಮಣ್ಣು ತಿಂತೋ 
         ಬಿಡುದಾರಿ ಆ ಹೆಣ್ಣೇ ಹೊತ್ತಾಯ್ತು ಯಾವತ್ತಗೋ ನಿನ್ನ ಚಿಂತೇ ನನಗಾಯ್ತು 
         ಬಿಡುದಾರಿ ಆ ಹೆಣ್ಣೇ ಹೊತ್ತಾಯ್ತು ಯಾವತ್ತಗೋ ನಿನ್ನ ಚಿಂತೇ ನನಗಾಯ್ತು 
ಗಂಡು : ಮಾರ್ಕೆಟ್ಟೂ ಹೂವೇಲ್ಲಾ ತಲೇ ತುಂಬ ... ಚಿಕ್ಕಪೇಟೆ ಲೈಲಾನೂ ಮೈತುಂಬಾ 
           ಬಳೇಪೇಟೆ ಪೌಡರ ಮುಖ ತುಂಬ.. ನಿನ್ನ ರೂಪ ನಿಂತಿದೇ ಕಣ್ಣತುಂಬ.. 
           ಬಳೇಪೇಟೆ ಪೌಡರ ಮುಖ ತುಂಬ.. ನಿನ್ನ ರೂಪ ನಿಂತಿದೇ ಕಣ್ಣತುಂಬ.. 
           ನಿನ್ನ ರೂಪ ನಿಂತಿದೇ ಕಣ್ಣತುಂಬ.. 
ಹೆಣ್ಣು : ನಮ್ಮ ಬ್ರ್ಯಾಂಡು ವಾಚೂ ಕೈಯ್ಯಲ್ಲೀ.. ನಮ್ಮ ಸೀರೇ ಫ್ಯಾಶನ್ನೂ ಮೈಮೇಲೇ  
          ಕಾಲೇಜೂ ಹುಡುಗೀರೂ ಕಂಡಲ್ಲೀ.. ಮೈಲೇಜೂ ನೆನೆಪಿರಲೀ ಪ್ರೀತೀಲೀ      
          ಮೈಲೇಜೂ ನೆನೆಪಿರಲೀ ಪ್ರೀತೀಲೀ     
ಗಂಡು : ಶೇಷಾಧ್ರಿಪುರದಲ್ಲಿ (ಆಹಾ) ಸಿಪ್ಪೇ ಜಾರೀ ಬಿದ್ದಾಗ.. (ಆ..) ಬಿಕ್ಕಿ ಬಿಕ್ಕಿ ಅಳುತಿದ್ದ ಹೆಣ್ಣೇ... 
ಹೆಣ್ಣು : ಶ್ರೀರಾಮಪುರದಲ್ಲಿ ಸಿಟಿ ಹಾಕಿ ಬಂದಾಗ ಏಟು ತಿಂದೂ ಓಡಿ ಹೋದ ರೋಮಿಯೋ.. 
ಗಂಡು : ಅಲಸೂರು ಪೇಟೇಲಿ ಆರೇಂಜ್ ತಿನ್ನುತ್ತಾ.. ಆಕಳಿಸಿ ಮಾಯಾವಾದ ಹೆಣ್ಣೇ.. 
            ಕಣ್ಣ ಮೀಟಿಸಿ ಮೈ ಕುಲುಕಿ ಬರುತಿದ್ರೇ ಓಲಾಡಿ ಜಡೇ ಬೀಸಿ ನಗುತಿದ್ರೇ 
            ತಲೆವೇಷ ಹೆಚ್ಚಾಗಿ ಕಾಣ್ತಿದ್ರೇ ಹುಡುಗರೂ ನೋಡದೇ ಬಿಡ್ತಾರೇ ...  
            ತಲೆವೇಷ ಹೆಚ್ಚಾಗಿ ಕಾಣ್ತಿದ್ರೇ ಹುಡುಗರೂ ನೋಡದೇ ಬಿಡ್ತಾರೇ ...  
ಹೆಣ್ಣು  : ಕಬ್ಬನ್ನೂ ಪೇಟೆಲೀ ಕಣ್ಣು ಮಿಟುಕಿಸೀ ಕರೆವಾಗ.. ಕಾಫೀ ನೀಡಿ ಕರೆಸಿಕೊಂಡ ರೋಮಿಯೋ...  (ಹ್ಹಾಂ)
           ಹಲ್ಲಗಿಂಜೀ ಹಿಂದಿಂದೇ ಬರುತಿದ್ರೇ ನಿನ್ನ ನೋಡಿ ಜನರೆಲ್ಲಾ ನಗ್ತಾರೇ 
           ಕೈಯ್ಯ್ ಬೀಸೀ ಕಣ್ಣ ಹಾರಿಸೀ ಕರೀತಿದ್ರೇ.. ಹುಡುಗೀರೂ ಬೈಯ್ಯದೇ ಬಿಡ್ತಾರೇ .. 
           ಕೈಯ್ಯ್ ಬೀಸೀ ಕಣ್ಣ ಹಾರಿಸೀ ಕರೀತಿದ್ರೇ.. ಹುಡುಗೀರೂ ಬೈಯ್ಯದೇ ಬಿಡ್ತಾರೇ .. 
           ಹುಡುಗೀರೂ ಬೈಯ್ಯದೇ ಬಿಡ್ತಾರೇ .. 
------------------------------------------------------------------------------------------------------

No comments:

Post a Comment