1444. ಮದುವೆ ಮಾಡಿ ನೋಡು (೧೯೬೫)

ಮದುವೆ ಮಾಡಿ ನೋಡು ಚಲನಚಿತ್ರದ ಹಾಡುಗಳು 
  1. ಯಾರ್ ಬರ್ತಾರ ನೋಡೋಣ 
  2. ಮದುವೆ ಮಾಡಿ ನೋಡೋಣ 
  3. ಈ  ಜಗವೆಲ್ಲ ಒಂದು ನಾಟಕರಂಗ 
  4. ಮದುವೆ ಮಾಡಿಕೊಂಡೂ ಮನೆಯ ಹೂಡಿಕೊಂಡೂ
  5. ಮನಸೇ ನಾ  ಯಾರೋ ನೀನೂ ಬಲ್ಲೆಯಾ 
  6. ಓ ಮನಸನಾಳೋ ಮನಸೇ 
  7. ವೆಂಕಟಾಚಲವಾಸ ಹೇ ಶ್ರೀನಿವಾಸ
  8. ಅಳಬೇಡ ಅಳಬೇಡ 
  9. ಭಯವೇತಕೆ ಪುಟ್ಟಿ ಭಯವೇತಕೆ 
  10. ಏನಮ್ಮಾ ಮುಂದೇನಮ್ಮಾ 
  11. ಯಾರೋ ಯಾರೋ 
  12. ಬ್ರಹ್ಮಯ್ಯ ಓ ಬ್ರಹ್ಮಯ್ಯ, ಎಲ್ಲಿರುವೆ ಪ್ರೀಯೆ ಹಾಗು ಅಮ್ಮಾ ವೇದನೆ ಈ ೦೩ ಹಾಡುಗಳ ಸಾಹಿತ್ಯ ಲಭ್ಯವಿರುವುದಿಲ್ಲ   
ಮದುವೆ ಮಾಡಿ ನೋಡು (೧೯೬೫) - ಯಾರ್ ಬರ್ತಾರ ನೋಡೋಣ 
ಸಂಗೀತ : ಘಂಟಸಾಲ, ಸಾಹಿತ್ಯ : ಹುಣುಸೂರು ಕೃಷ್ಣಮೂರ್ತಿ, ಗಾಯನ : ರಾಘವಲು 

ಗಂಡು : ಯಾರ್ ಬರ್ತಾರೋ ನೋಡೋಣ ಪೋಟಿ ಯಾರ್ ಬರ್ತಾರೋ ನೋಡೋಣ
            ಯಾರ್ ಬರ್ತಾರೋ ನೋಡೋಣ ಪೋಟಿ ಯಾರ್ ಬರ್ತಾರೋ ನೋಡೋಣ
            ಪುಟ್ಟಮ್ಮ ನನ್ನ ಹೆಂಡತೀ ನೀ ಹುಟ್ಟಿದ್ದೇ ನನಗಾಗಿ 
            ಮೀಸೆ ಇಟ್ಟಿದ್ದೇ ನಿನಗಾಗಿ ಪಲ್ಟಿ ಹೊಡೆಯೋದೇ ನಮ್ಮ ಮದುವೆಗಾಗೀ.. ಹ್ಹಾ.. ಹ್ಹಾ  
            ಯಾರ್ ಬರ್ತಾರೋ ನೋಡೋಣ ಪೋಟಿ ಯಾರ್ ಬರ್ತಾರೋ ನೋಡೋಣ
            ಜಿಗಿ ಜಿಗಿ ಜಿಗಿ ಜಿಗಿ ಜಿಗಿ ಜಿಗಿ ಜಿಗಿ ಜಿಗಿ ಜಿಂಪಂಪ ಜಿಗಿ ಜಿಗಿ ಜಿಗಿ ಜಿಗಿ ಜಿಗಿ ಜಿಗಿ ಜಿಗಿ ಜಿಗಿ ಜಿಂಪಂಪ 
            ಜಿಗಿ ಜಿಗಿ ಜಿಗಿ ಜಿಗಿ ಜಿಗಿ ಜಿಗಿ ಜಿಗಿ ಜಿಗಿ ಜಿಂಪಂಪ ಜಿಗಿ ಜಿಗಿ ಜಿಗಿ ಜಿಗಿ ಜಿಗಿ ಜಿಗಿ ಜಿಗಿ ಜಿಗಿ ಜಿಂಪಂಪ 
            ಜಿಗಿ ಜಿಗಿ ಜಿಂಪಂಪ ಜಿಗಿ ಜಿಗಿ ಜಿಂಪಂಪ ಜಿಗಿ ಜಿಗಿ ಜಿಂಪಂಪ ಜಿಗಿ ಜಿಂಪಂಪ ಜಿಗಿ ಜಿಂಪಂಪ 
            ಜಿಂಪಂಪ  ಜಿಂಪಂಪ  ಜಿಂಪಂಪ ಫ.. 
ಹೆಣ್ಣು : ಅಬ್ಬಾ ಅಬ್ಬಾ ಭಯವಾಗುತ್ತೇ ಅಪ್ಪ ಅಮ್ಮ ಬೈತಾರಲ್ಲಾ 
           ಅಬ್ಬಾ ಅಬ್ಬಾ ಭಯವಾಗುತ್ತೇ ಅಪ್ಪ ಅಮ್ಮ ಬೈತಾರಲ್ಲಾ ಬರ್ತಾನಲ್ಲಾ ನಾಳೇ ಮದುಮಗ 
           ನೋಡೋಣ ನೀ ಏನ್ ಮಾಡ್ತೀಯೋ 
ಗಂಡು : ಏನ್ ಮಾಡ್ತೀನಿ..  ಬರಲೀ ಬರಲೀ ಕುಸ್ತಿ ಹಿಡಿದೂ ಎತ್ತೀ ಬಡಿದೂ 
            ಗೋಡೆ ಹೊರಗೇ ಎಸೀಯೀತ್ತೇನೇ.. ಅಷ್ಟೇ 
            ಭೀಮಣ್ಣನಿಗೇ ಕೋಪವೇ ಬರದೂ ಅಂದರೇ ಎದೆ ಸುಮ್ಮನೇ ಇರದೂ 
            ಯಾರ್ ಬರ್ತಾರೋ ನೋಡೋಣ ಪೋಟಿ ಯಾರ್ ಬರ್ತಾರೋ ನೋಡೋಣ
            ಯಾರ್ ಬರ್ತಾರೋ ನೋಡೋಣ ಪೋಟಿ ಯಾರ್ ಬರ್ತಾರೋ ನೋಡೋಣ
            ಯಾರ್ ಬರ್ತಾರೋ ನೋಡೋಣ 
------------------------------------------------------------------------------------------------------
 
ಮದುವೆ ಮಾಡಿ ನೋಡು (೧೯೬೫) - ಮದುವೆ ಮಾಡಿ ನೋಡೋಣ 
ಸಂಗೀತ : ಘಂಟಸಾಲ, ಸಾಹಿತ್ಯ : ಹುಣುಸೂರು ಕೃಷ್ಣಮೂರ್ತಿ, ಗಾಯನ : ಘಂಟಸಾಲ 

ಇಬ್ಬರು : ಮದುವೆ ಮಾಡಿ ನೋಡೋಣ ನಾವೇ ದೊಡ್ಡ ಮನುಷ್ಯರೇನಿಸೋಣ 
             ನಾವೇ ದೊಡ್ಡ ಮನುಷ್ಯರೇನಿಸೋಣ 
ಗಂಡು : ಬೆಂಗಳೂರು ಬೆಳಗಾಂವ ಹುಬ್ಬಳ್ಳಿ ನೋಡಿ (ಹುಬ್ಬಳ್ಳಿ ನೋಡಿ) 
             ಮೆಂಗಳೂರು ಮೈಸೂರೂ ಮಥನವ ಮಾಡಿ (ಮಥನವ ಮಾಡಿ)
             ಬೆಂಗಳೂರು ಬೆಳಗಾಂವ ಹುಬ್ಬಳ್ಳಿ ನೋಡಿ ಮೆಂಗಳೂರು ಮೈಸೂರೂ ಮಥನವ ಮಾಡಿ 
             ದೊರಕಿದ ಗಂಡೂ ದಕ್ಷಿಣೆಯಂದರೆ ನೋಟಿನ ಕಂತೆ ಕೈಯ್ ಮೇಲೇಸೇದೂ 
ಇಬ್ಬರು : ಮದುವೆ ಮಾಡಿ ನೋಡೋಣ ನಾವೇ ದೊಡ್ಡ ಮನುಷ್ಯರೇನಿಸೋಣ 
             ನಾವೇ ದೊಡ್ಡ ಮನುಷ್ಯರೇನಿಸೋಣ 

ಗಂಡು : ಇಂಗ್ಲೀಷ ಹಿಂದಿ ಕನ್ನಡ ಕಲಿತೂ ರೀತಿ ನೀತಿ ಎಲ್ಲವನರಿತೂ (ಆಹಾಹಹಹಹ... ವ್ಹಾಹರೇ ವ್ಹಾ )
            ಇಂಗ್ಲೀಷ ಹಿಂದಿ ಕನ್ನಡ ಕಲಿತೂ ರೀತಿ ನೀತಿ ಎಲ್ಲವನರಿತೂ 
             ದುಮ್ಮನೇವಿರುವ ಜಂಭದ ವರವ ಜಬರದಸ್ತಿಲೀ ನಾವಳೇ ತಂದೂ 
ಇಬ್ಬರು : ಮದುವೆ ಮಾಡಿ ನೋಡೋಣ ನಾವೇ ದೊಡ್ಡ ಮನುಷ್ಯರೇನಿಸೋಣ 
             ನಾವೇ ದೊಡ್ಡ ಮನುಷ್ಯರೇನಿಸೋಣ 
------------------------------------------------------------------------------------------------------

ಮದುವೆ ಮಾಡಿ ನೋಡು (೧೯೬೫) - ಈ  ಜಗವೆಲ್ಲ ಒಂದು ನಾಟಕರಂಗ 
ಸಂಗೀತ : ಘಂಟಸಾಲ, ಸಾಹಿತ್ಯ : ಹುಣುಸೂರು ಕೃಷ್ಣಮೂರ್ತಿ, ಗಾಯನ : ಘಂಟಸಾಲ 

------------------------------------------------------------------------------------------------------

ಮದುವೆ ಮಾಡಿ ನೋಡು (೧೯೬೫) - ಮದುವೆ ಮಾಡಿಕೊಂಡೂ ಮನೆಯ ಹೂಡಿಕೊಂಡೂ
ಸಂಗೀತ : ಘಂಟಸಾಲ, ಸಾಹಿತ್ಯ : ಹುಣುಸೂರು ಕೃಷ್ಣಮೂರ್ತಿ, ಗಾಯನ : ಘಂಟಸಾಲ 

ಓಓಓಓ ಓ ಭಾವೀ ಭಾರತ ಭಾಗ್ಯ ವಿಧಾತರೇ... ಯುವತೀ ಯುವಕರೇ.. 
ಅನುಭವದಲೀ ಹೇಳೋ... ನನ್ನ ಸಂದೇಶವಿದೇ... 
(ವ್ಹಾಹಾರೇ ವ್ಹಾ   ತದ್ಧಿನ ತಕಧಿನ ತಂಗ್ ತರಕಿಡಿತ ತರಕಿಡಿತ ತೊಂ )   
ಮದುವೆ ಮಾಡಿಕೊಂಡೂ ಮನೆಯ ಹೂಡಿಕೊಂಡೂ ಮಡದಿಯ ಜೊತೆಯಲೀ ಇರಬೇಕೋ 
ಮಾನವ ಜನ್ಮದ ಸವಿ ಹೀರಿ ನೀವೆಲ್ಲರೂ ಹಾಯಿಗೇ ಇರಬೇಕೋ  
ಮದುವೆ ಮಾಡಿಕೊಂಡೂ.. 
ಮದುವೆ ಮಾಡಿಕೊಂಡೂ ಮನೆಯ ಹೂಡಿಕೊಂಡೂ ಮಡದಿಯ ಜೊತೆಯಲೀ ಇರಬೇಕೋ 
ಮಾನವ ಜನ್ಮದ ಸವಿ ಹೀರಿ ನೀವೆಲ್ಲರೂ ಹಾಯಿಗೇ ಇರಬೇಕೋ  
 
ವರದಕ್ಷಿಣೆಯ ವ್ಯಾಮೋಹದಲೀ ಹೆಣ್ಣು ಹಡೆದವರ ಜೀವ ಹಿಂಡಿ 
ಸಂಸಾರಗಳ ನಾಶ ಮಾಡೋ ಘನವಂತರಿಗೇ ಶಾಸ್ತಿ ಮಾಡೀ 
ಹಾಳಾದ ರೂಢಿಯ ಮೂಲದೀ ಕಿತ್ತೊಸೆದೂ 
ನಮ್ಮ ತತ್ವ ಅನುಸರಿಸಿ ಜನರೂ ಸುಖ ಪಡಲೂ ಓಓಓಓಓಓಓ   
(ವ್ಹಾಹಾರೇ ವ್ಹಾ   ತದ್ಧಿನ ತಕಧಿನ ತಂಗ್ ತರಕಿಡಿತ ತರಕಿಡಿತ ತೊಂ )   
ಒಳಗೂ ಹೊರಗೂ ಒಳ್ಳೆಯತನವದೂ ಬಾಳಲಿ ತುಂಬಿರಲೂ ತರಪಂಪಂ 
ಒಳಗೂ ಹೊರಗೂ ಒಳ್ಳೆಯತನವದೂ ಬಾಳಲಿ ತುಂಬಿರಲೂ 
ಚಿನ್ನದಂತಹ ದಂಪತಿಯೆನಿಸೀ ಎರಡೇ ಮಕ್ಕಳೂ ನಿಮಗಿರಲೂ 
ಚಿನ್ನದಂತಹ ದಂಪತಿಯೆನಿಸೀ ಎರಡೇ ಮಕ್ಕಳೂ ನಿಮಗಿರಲೂ 
ಮದುವೆ ಮಾಡಿಕೊಂಡೂ.. 
ಮದುವೆ ಮಾಡಿಕೊಂಡೂ ಮನೆಯ ಹೂಡಿಕೊಂಡೂ ಮಡದಿಯ ಜೊತೆಯಲೀ ಇರಬೇಕೋ 
ಮಾನವ ಜನ್ಮದ ಸವಿ ಹೀರಿ ನೀವೆಲ್ಲರೂ ಹಾಯಿಗೇ ಇರಬೇಕೋ  

ನವಭಾವದಲೀ ನವರಾಗದಲೀ ಆಆಆಆ... ಆಆಆ ನವಜೀವನವ ನಡೆಸಿ....ರೋ 
ನವಭಾವದಲೀ ನವರಾಗದಲೀ ನವಜೀವನವ ನಡೆಸಿರೋ 
ಎಲ್ಲರ ಏಳಿಗೇ ಬಯಸುತ ಬದುಕುವ ದೇಸೊನ್ನುತಿಯೂರಿ ಇರಿಸಿರೋ 
ಎಲ್ಲರ ಏಳಿಗೇ ಬಯಸುತ ಬದುಕುವ ದೇಸೊನ್ನುತಿಯೂರಿ ಇರಿಸಿರೋ 
ಮದುವೆ ಮಾಡಿಕೊಂಡೂ.. 
ಮದುವೆ ಮಾಡಿಕೊಂಡೂ ಮನೆಯ ಹೂಡಿಕೊಂಡೂ ಮಡದಿಯ ಜೊತೆಯಲೀ ಇರಬೇಕೋ 
ಮಾನವ ಜನ್ಮದ ಸವಿ ಹೀರಿ ನೀವೆಲ್ಲರೂ ಹಾಯಿಗೇ ಇರಬೇಕೋ  
ಹಾಯಿಗೇ ನೀ ಇರಬೇಕೋ  
------------------------------------------------------------------------------------------------------

ಮದುವೆ ಮಾಡಿ ನೋಡು (೧೯೬೫) - ಮನಸೇ ನಾ  ಯಾರೋ ನೀನೂ ಬಲ್ಲೆಯಾ 
ಸಂಗೀತ : ಘಂಟಸಾಲ, ಸಾಹಿತ್ಯ : ಹುಣುಸೂರು ಕೃಷ್ಣಮೂರ್ತಿ, ಗಾಯನ : ಪಿ.ಸುಶೀಲಾ 

ಮನಸೇ.. ನಾ ಯಾರೋ ನೀನು ಬಲ್ಲೆಯ 
ಮನಸೇ.. ನಾ ಯಾರೋ ನೀನು ಬಲ್ಲೆಯ ನೀನು ಬಲ್ಲೆಯ ಮನಸೇ ಮನಸೇ 

ವೇದವನೋದಿದ ಪುರಾಣ ಹೇಳಿದೇ ಓಓಓಓಓ... ಮನಸೇ 
ವೇದವನೋದಿದ ಪುರಾಣ ಹೇಳಿದೇ 
ಒಳಗಿನ ಮರ್ಮವ ತಿಳಿದಾಗೇ ನಾ ಎಸೆದ ಸಾಲದಲೇ ಸೆರೆಯಾದೇ  
ಮನಸೇ.. ನಾ ಯಾರೋ ನೀನು ಬಲ್ಲೆಯ ನೀನು ಬಲ್ಲೆಯ ಮನಸೇ ಮನಸೇ 

ಸುತ್ತಿ ನಿಂತಿಹ ಸತ್ಯವ ತಿಳಿಯದೇ... ಆಆಆಆ.. ಆಆಆ  
ಸುತ್ತಿ ನಿಂತಿಹ ಸತ್ಯವ ತಿಳಿಯದೇ ಚಿತ್ತನೇ ತಪ್ಪೇನೂತಿಹೆಯಲ್ಲಾ ಕಲಗತ್ತವರಿಯದಾಗ್ಯಲ್ಲಾ  
ಮನಸೇ.. ನಾ ಯಾರೋ ನೀನು ಬಲ್ಲೆಯ ನೀನು ಬಲ್ಲೆಯ ಮನಸೇ ಮನಸೇ 

ಪ್ರಕೃತಿ ಪುರುಷರು ಒಂದೇ ಎಂಬುವಾ... ಆಆಆ ಆಆಆ 
ಪ್ರಕೃತಿ ಪುರುಷರು ಒಂದೇ ಎಂಬುವಾ ಪರಮರಹಸ್ಯವ ಮರೆತೆಲ್ಲಾ 
ಸದ್ಗುರು ಭೋಧೆಯ ಒಲ್ಲೈಲ್ಲಾ. 
ಮನಸೇ.. ನಾ ಯಾರೋ ನೀನು ಬಲ್ಲೆಯ ನೀನು ಬಲ್ಲೆಯ ಮನಸೇ ಮನಸೇ ಮನಸೇ 
------------------------------------------------------------------------------------------------------

ಮದುವೆ ಮಾಡಿ ನೋಡು (೧೯೬೫) - ಓ ಮನಸನಾಳೋ ಮನಸೇ  
ಸಂಗೀತ : ಘಂಟಸಾಲ, ಸಾಹಿತ್ಯ : ಹುಣುಸೂರು ಕೃಷ್ಣಮೂರ್ತಿ, ಗಾಯನ : ಪಿ.ನಾಗೇಶ್ವರಾವ 

ಓ.. ಮನಸನಾಳೋ ಮನಸೇ.. ಹೇಹೇಹೇಹೇ .. ಏನಿದೂ ಈ ವರಸೇ ... 
ಏನಿದೂ ಈ ವರಸೇ ಓ ಮನಸಾನಾಳೋ ಮನಸೇ 
ಏನಿದೂ ಈ ವರಸೇ ಓ ಮನಸಾನಾಳೋ ಮನಸೇ ಏನಿದೂ ಈ ವರಸೇ

ಎಲ್ಲರಲೀ ಈ ಸಲಿಗೇ...... ಹೇಹೇಹೇಹೇ 
ಎಲ್ಲರಲೀ ಈ ಸಲಿಗೇ ಸಲ್ಲದೂ ಬಿಡೂ ಮನೆಯೊಳಗೇ 
ಮೌನವಾಗಿ ಸಂಸಾರವ ನಡೆಸುವಂಥ ಗುಡಿಯಿರಿಸೇ 
ಏನಿದೂ ಈ ವರಸೇ ಓ ಮನಸಾನಾಳೋ ಮನಸೇ ಏನಿದೂ ಈ ವರಸೇ

ನಿಜವೂ ಬಯಲು ಕಾಣುವನಕ ನನ್ನ ನಿನ್ನ ನಾಟಕ 
ನಿಜವೂ ಬಯಲು ಕಾಣುವನಕ ನನ್ನ ನಿನ್ನ ನಾಟಕ 
ಅಸಲು ರೂಪ ಹೊರ ಬೀಳಲು ಎಲ್ಲರಿಗೂ ಸಂಕಟ 
ಏನಿದೂ ಈ ವರಸೇ ಓ ಮನಸಾನಾಳೋ ಮನಸೇ ಏನಿದೂ ಈ ವರಸೇ

ನೇರಮೀರಿ ಆಡುವರೇ ಮೈಯ್ಯ ಮರೆತೂ ಹರಟುವರೇ 
ನೇರಮೀರಿ ಆಡುವರೇ ಮೈಯ್ಯ ಮರೆತೂ ಹರಟುವರೇ 
ಮೂಢತನವ ನೀ ತೋರಿಸಿ ಜೀವನದಾ...  ಸುಖ ಕೆಡಿಸುವರೇ     
ಏನಿದೂ ಈ ವರಸೇ ಓ ಮನಸಾನಾಳೋ ಮನಸೇ ಏನಿದೂ ಈ ವರಸೇ
------------------------------------------------------------------------------------------------------

ಮದುವೆ ಮಾಡಿ ನೋಡು (೧೯೬೫) - ವೆಂಕಟಾಚಲವಾಸ ಹೇ ಶ್ರೀನಿವಾಸ
ಸಂಗೀತ : ಘಂಟಸಾಲ, ಸಾಹಿತ್ಯ : ಹುಣುಸೂರು ಕೃಷ್ಣಮೂರ್ತಿ, ಗಾಯನ : ಪಿ.ಸುಶೀಲಾ, 

ಹೆಣ್ಣು : ವೆಂಕಟಾಚಲವಾಸ ಹೇ ಶ್ರೀನಿವಾಸ... ಆಆಆ... ಆಆಆ 
          ವೆಂಕಟಾಚಲವಾಸ ಹೇ ಶ್ರೀನಿವಾಸ ಸದ್ದೂ ಮಾಡದೇ ನೀನು ನಿದುರೇ ಮಾಡಯ್ಯ 
          ಕ್ಷೀರಸಾಗರದಲೆಯ ಬೆಳ್ಳಿ ಮಂಚವ ನಿರಿಸಿ ಹುಣ್ಣಿಮೆ ತಂಬೆಳಕ ಹಾಸಿಗೆ ಹಾಸೀ 
          ಕ್ಷೀರಸಾಗರದಲೆಯ ಬೆಳ್ಳಿ ಮಂಚವ ನಿರಿಸಿ ಹುಣ್ಣಿಮೆ ತಂಬೆಳಕ ಹಾಸಿಗೆ ಹಾಸೀ 
          ಒಲವು ತುಂಬಿದ ಕಣ್ಣ ಕಣ್ಣೀರಗುಂಡಿ ಕಾದಿಹಳು ಸೇವಿಸಲು ಪದುಮಾವತಿ ಅರಸೀ 
          ವೆಂಕಟಾಚಲವಾಸ ಹೇ ಶ್ರೀನಿವಾಸ ಸದ್ದೂ ಮಾಡದೇ ನೀನು ನಿದುರೇ ಮಾಡಯ್ಯ 

ಹೆಣ್ಣು : ಈ ದೇಹ ಪ್ರಾಣಗಳ ಸೂತ್ರಧಾರೀ ನೀನೂ ನಿನ್ನ ಕೈಯ್ಯಲ್ಲಿ ಆಡುವ ನರಬೊಂಬೆ ನಾನೂ .. 
          ಈ ದೇಹ ಪ್ರಾಣಗಳ ಸೂತ್ರಧಾರೀ ನೀನೂ ನಿನ್ನ ಕೈಯ್ಯಲ್ಲಿ ಆಡುವಾ ನರಬೊಂಬೆ ನಾನೂ .. 
          ಬೀದಿನಾಚರಮ್ಮ ಹೊಂಚಿ ಕಾದಿಹಳಯ್ಯ  
          ಬೀದಿನಾಚರಮ್ಮ ಹೊಂಚಿ ಕಾದಿಹಳಯ್ಯ ಸಂಚು ಮಾಡದೇ ಈಗ ಸುಮ್ಮನೇ ಮಲಗಯ್ಯ 
          ವೆಂಕಟಾಚಲವಾಸ ಹೇ ಶ್ರೀನಿವಾಸ ತಂಟೇ ಮಾಡದೇ ಕಳ್ಳ ನಿದುರೇ ಮಾಡಯ್ಯ 
------------------------------------------------------------------------------------------------------

ಮದುವೆ ಮಾಡಿ ನೋಡು (೧೯೬೫) - ಅಳಬೇಡ ಅಳಬೇಡ ಮುದ್ದು ಕಂದಯ್ಯ .. 
ಸಂಗೀತ : ಘಂಟಸಾಲ, ಸಾಹಿತ್ಯ : ಹುಣುಸೂರು ಕೃಷ್ಣಮೂರ್ತಿ, ಗಾಯನ : ಪಿ.ಸುಶೀಲಾ, ಸುಮಿತ್ರಾ, ರಘುವಲು  

ಗಂಡು : ಲೋಳಲಲಲಲಲಳಾ ಆಯೀ  ಅಳಬೇಡ ಅಳಬೇಡ ಮುದ್ದು ಕಂದಯ್ಯ .. ಅಳಲೇ 
            ಅತ್ತೂ ನನ್ನದೇ ಹಾಲು ಕೇಳದಿರೂ ನನ್ನಯ್ಯ ದೊರೆಯ ತಾತಯ್ಯ 

ಗಂಡು : ಇವನಂಥ ಕಂದನೆಲ್ಲೂ...  ಜನಿಸಲೇ ಇಲ್ಲವಯ್ಯಾ  
            ರಪ್ಪೆಯೇ ಆಡ್ಸೋದಿಲ್ಲ... ಈ ತರದ ಕಣ್ಣು ಬ್ಯಾರೇ ಯಾರಿಗಿಲ್ಲ 
            ಗದ್ದಲ ಮಾಡೋದಿಲ್ಲ ಗುದ್ದಿದರೂ ಸದ್ದು ಇಲ್ಲ.. 
            ಬಲು ಮುದ್ದಿನಿಂದ ಬೆಳೆದ ಈ ಕಂದ ಬಲು ಹದ್ದೂ ಮೀರಿ ಹೋದ 
            ಹಾಯೀ ಹಾಯೀ ಹಾಯೀ ಹಾಯೀ ಹಾಯೀ 

ಹೆಣ್ಣು : ಅತ್ತೆಯನು ನೋಡಿ ನಗುತ ಕೈಚಾಚಿ ಎತ್ತಿಕೋ ಎನಬೇಡವೋ 
          ಅತ್ತೆಯನು ನೋಡಿ ನಗುತ ಕೈಚಾಚಿ ಎತ್ತಿಕೋ ಎನಬೇಡವೋ 
          ಸುತ್ತಲೂ ಕೆಲಸವನ್ನೇ ನಾದಿನಿಗೇ ಸಿರಿತನ ಹೆಚ್ಚಿತಂತೇ 
          ಹುರಿ ಮೀಸೆ ಬಿಡುವ ಮಗನ ಓ ಅತ್ತೇ ಹಡೆದನೆಂದು ಉರಿಬೇಡವೇ     
          ಹುರಿ ಮೀಸೆ ಬಿಡುವ ಮಗನ ಓ ಅತ್ತೇ ಹಡೆದನೆಂದು ಉರಿಬೇಡವೇ     
          ಸೊಸೆಯಳು ಬಂದ ಮೇಲೆ ನಿನ ಜಂಭ ಮೂಲೆಯನು ಸೇರುವುದಲ್ಲೇ  
          ಆ ಭಯವೂ ನನಗೇ ಇರದೂ ಸೊಸೆಗೆ ನಿನ್ನ ಗುಣವೆಂದು ಬರದೂ 
          ಆ ಭಯವೂ ನನಗೇ ಇರದೂ ಸೊಸೆಗೆ ನಿನ್ನ ಗುಣವೆಂದು ಬರದೂ 
          ಕಂದವು ನಿನಗಾದರೇ ನೋಡೋಣ ಹೆಣ್ಣ ಹಡೆದು ಕೊಡು ಬೇಗನೇ 
          ಕೊಡು ಬೇಗನೇ ಕೊಡು ಬೇಗನೇ ಹೆಣ್ಣು ಕೊಡು ಬೇಗನೇ 
------------------------------------------------------------------------------------------------------

ಮದುವೆ ಮಾಡಿ ನೋಡು (೧೯೬೫) - ಭಯವೇತಕೆ ಪುಟ್ಟಿ ಭಯವೇತಕೆ 
ಸಂಗೀತ : ಘಂಟಸಾಲ, ಸಾಹಿತ್ಯ : ಹುಣುಸೂರು ಕೃಷ್ಣಮೂರ್ತಿ, ಗಾಯನ : ರಘುವಲು  

ಗಂಡು : ಭಯವ್ಯಾತಕೆ ಪುಟ್ಟೀ ಭಯವ್ಯಾತಕೆ 
            ಭಯವ್ಯಾತಕೆ ಪುಟ್ಟೀ ಭಯವ್ಯಾತಕೆ ಭೀಮಣ್ಣ ಇರುವಾಗ ಭಯವ್ಯಾತಕೆ
            ಭೀಮಣ್ಣ ಇರುವಾಗ ಭಯವ್ಯಾತಕೆ 
            ಭಯವ್ಯಾತಕೆ ಪುಟ್ಟೀ ಭಯವ್ಯಾತಕೆ ಪುಟ್ಟೀ ಭಯವ್ಯಾತಕೆ 

ಗಂಡು : ತಾಳಿ ಕಟ್ಟಾಯ್ತು ನನ್ನ ಹೆಂಡ್ತೀ ನೀನಾಯ್ತು 
            ತಾಳಿ ಕಟ್ಟಾಯ್ತು ನನ್ನ ಹೆಂಡ್ತೀ ನೀನಾಯ್ತು 
            ತಂದೆಯಾಕೇ ಅವರ ತಾತ ಬಂದರೂ ನಮಗೇ 
            ಭಯವ್ಯಾತಕೆ ಪುಟ್ಟೀ ಭಯವ್ಯಾತಕೆ 

ಗಂಡು : ಪಂಚಾಯತಿಗ ಹೋದ್ರೂ ಪ್ರೆಸಿಡೆಂಟ್ ನಮ್ಮೋರೂ...  
            ಪಂಚಾಯತಿಗ ಹೋದ್ರೂ ಪ್ರೆಸಿಡೆಂಟ್ ನಮ್ಮೋರೂ 
            ಹೈಕೋರ್ಟಿಗ ಹೋದರೂ ಯಾರಿಲ್ಲ ಗೆಲ್ಲೋರೂ 
            ಭಯವ್ಯಾತಕೆ ಪುಟ್ಟೀ ಭಯವ್ಯಾತಕೆ 

ಗಂಡು : ಮಾಡಿ ಮೇಲ್ಗಡೆ ಇರಿಸಿ ಮೆರೆದಾಡಿಸೀ ಚಿನ್ನ 
            ಮಾಡಿ ಮೇಲ್ಗಡೆ ಇರಿಸಿ ಮೆರೆದಾಡಿಸೀ ಚಿನ್ನ 
            ಮಾತಮೀರದ ಹಾಗೇ ನೀ ಪೀಳೇ ನಗಿಸ್ತೀನಿ  
            ಭಯವ್ಯಾತಕೆ ಪುಟ್ಟೀ ಭಯವ್ಯಾತಕೆ 
            ಭಯವ್ಯಾತಕೆ ಪುಟ್ಟೀ ಭಯವ್ಯಾತಕೆ ಭೀಮಣ್ಣ ಇರುವಾಗ ಭಯವ್ಯಾತಕೆ
            ಭೀಮಣ್ಣ ಇರುವಾಗ ಭಯವ್ಯಾತಕೆ 
            ಭಯವ್ಯಾತಕೆ ಪುಟ್ಟೀ ಭಯವ್ಯಾತಕೆ ಪುಟ್ಟೀ ಭಯವ್ಯಾತಕೆ 
-----------------------------------------------------------------------------------------------------

ಮದುವೆ ಮಾಡಿ ನೋಡು (೧೯೬೫) - ಏನಮ್ಮಾ ಮುಂದೇನಮ್ಮಾ 
ಸಂಗೀತ : ಘಂಟಸಾಲ, ಸಾಹಿತ್ಯ : ಹುಣುಸೂರು ಕೃಷ್ಣಮೂರ್ತಿ, ಗಾಯನ : ಘಂಟಸಾಲ 

ಗಂಡು : ಏನಮ್ಮಾ ಮುಂದೇನಮ್ಮಾ ಏನಮ್ಮಾ ಮುಂದೇನಮ್ಮಾ ಬಂದುಗಗುವ ಗತಿ ಏನಮ್ಮಾ 
            ಏನಮ್ಮಾ ಮುಂದೇನಮ್ಮಾ 

ಗಂಡು : ಹಾಲಿನಂಥ ನಿನ್ನ ಸಂಸಾರಕೆ ಹಾಲಾಹಲವನೂ  ಹಾಕಿದರೇ .. ಆಆಆ 
            ಹಾಲಿನಂಥ ನಿನ್ನ ಸಂಸಾರಕೆ ಹಾಲಾಹಲವನೂ  ಹಾಕಿದರೇ  
            ಈ ಅನ್ಯಾಯವ ಈ ಅಧರ್ಮವ ನಾಶವ ಮಾಡುವ ಯಾರಮ್ಮಾ   
            ಏನಮ್ಮಾ ಮುಂದೆ ಏನಮ್ಮಾ ಬಂದುದೂಗುವ ಗತಿ ಏನಮ್ಮಾ    
            ಏನಮ್ಮಾ ಮುಂದೆ ಏನಮ್ಮಾ   

ಗಂಡು : ಕಾಸಿನ ಆಸೆಗೆ ಕುಸ್ತಿಗೆ ಮುದಿಯೋ ಕಠಿಣರದೇಯಿ ಯುಗವಮ್ಮಾ.. ಆಆಆಅ ಆಆಆ  
            ಕಾಸಿನ ಆಸೆಗೆ ಕುಸ್ತಿಗೆ ಮುದಿಯೋ ಕಠಿಣರದೇಯಿ ಯುಗವಮ್ಮಾ.. 
            ನೂರು ಬೆಗೆಗಳ ದಾರುಣ ಕರ್ಮ ನಾರೀ ಭೋಗಿಸಬೇಕಮ್ಮಾ 
            ಏನಮ್ಮಾ ಮುಂದೆ ಏನಮ್ಮಾ ಬಂದುದೂಗುವ ಗತಿ ಏನಮ್ಮಾ    
            ಏನಮ್ಮಾ ಮುಂದೆ ಏನಮ್ಮಾ   
-----------------------------------------------------------------------------------------------------

ಮದುವೆ ಮಾಡಿ ನೋಡು (೧೯೬೫) - ಯಾರೋ ಯಾರೋ 
ಸಂಗೀತ : ಘಂಟಸಾಲ, ಸಾಹಿತ್ಯ : ಹುಣುಸೂರು ಕೃಷ್ಣಮೂರ್ತಿ, ಗಾಯನ : ಪಿ.ಸುಶೀಲಾ, ಘಂಟಸಾಲ 

------------------------------------------------------------------------------------------------------

No comments:

Post a Comment