1458.ಯುವರತ್ನ (೨೦೨೧)



ಯುವರತ್ನ ಚಲನಚಿತ್ರದ ಹಾಡುಗಳು 
  1. ಯುವ… ಯುವ…ಜಾಗೋ ಜಾಗೋರೆ ಜಾಗೋ
  2. ನಿನ್ನ ಜೊತೆ ನನ್ನ ಕಥೆ
  3. ಊರಿಗೊಬ್ಬ ರಾಜ   
  4. ಪಾಠಶಾಲಾ.. ಪಾಠಶಾಲಾ
  5. ಫೀಲ್ ಆಫ್ ದಿ ಪವರ್ 
ಯುವರತ್ನ (೨೦೨೧) - ಯುವ… ಯುವ…ಜಾಗೋ ಜಾಗೋರೆ ಜಾಗೋ
ಸಂಗೀತ : ಎಸ್‌. ತಮನ್ನ, ಸಾಹಿತ್ಯ : ಸಂತೋಷ ಅಂಡ್ರಾಮ, ಗಾಯನ: ನಕಾಶ ಅಜೀಜ

ಯುವ… ಯುವ… ಯುವ… ಯುವ… ಜಾಗೊ ಜಾಗೋರೆ ಜಾಗೊ
ನಿನ್ನ ಕನಸು ನೀನಾಗು ಮುಟ್ಟು ಗುರಿಯನ್ನ ಯುವ
ನುಗ್ಗು ನುಗ್ಗು ನೀ ನುಗ್ಗು ನಿನ್ನ ಸೈನ್ಯ ನೀನಾಗು 
ಬಿಟ್ಟು ಭಯವನ್ನ ಯುವ 
ಗೆಲ್ಲಬೇಕು ನೀ ನಿಲ್ಲೋವರೆಗೂ ನಿಲ್ಲಬೇಕು ನೀ ಗೆಲ್ಲೋವರೆಗೂ
ನಿನ್ನ ಬದುಕಿಗೆ ನೀನೆ ಕನ್ನಡಿ ನಿನ್ನ ನಂಬಿ ಸಾಗು
ಹೆಸರು ಮಾಡು ಹಸಿರಾಗೋ ಹಾಗೆ
ಉಸಿರು ಹೋದರು ಹೆಸರಿರೋ ಹಾಗೆ
ಆ ಚರಿತ್ರೆಗೆ ನೀನ್ ಮುನ್ನುಡಿ ನೂರು ಸಾರಿ ಕೂಗು
ಪವರ್ ಆಫ್ ಯೂಥ್ ಪವರ್ ಆಫ್ ಯೂಥ್
ಪವರ್ ಆಫ್ ಯೂಥ್ ಪವರ್ ಆಫ್ ಯೂಥ್
ಯುವ… ಯುವ…

ಚಾಲೆಂಜ್ ಯಾವುದೇ ಬರಲಿ ಚಾಲೆಂಜ್ ಯಾರದೇ ಇರಲಿ
ಎದುರಿಸು ನೀನು ಎದುರಾಳಿಯನು ಹಿಂದೆ ತಿರುಗಿ ನೋಡದೆ ಯುವ
ಗೆಲುವು ಯಾರಪ್ಪನದಲ್ಲ ಯಶಸ್ಸು ಒಬ್ಬನದಲ್ಲ
ಪಟ್ಟರೆ ಶ್ರಮವ ಒಳ್ಳೆಯ ದಿನವ ಕಾಣುವೆ ನೀನು ನಡಿ-ನಡಿ ಯುವ
ಹೇ ಯುವ ಯುವ (ಹೇ) ಹೇ ಯುವ ಯುವ (ಹೇ)
ಕಾಲು ಎಳೆಯೋ ಜನರ ನಡುವೆ ಕಾಲರ ಎತ್ತುವ
ಹೇ ಯುವ ಯುವ (ಹೇ) ಹೇ ಯುವ ಯುವ (ಹೇ)
ಅನುಮಾನ ಪಟ್ಟ ಜನರ ಫೋನಲಿ ಡಿ.ಪಿ. ಆಗುವ
ಗೆಲ್ಲಬೇಕು ನೀ ನಿಲ್ಲೋವರೆಗೂ ನಿಲ್ಲಬೇಕು ನೀ ಗೆಲ್ಲೋವರೆಗೂ
ಛಲದಿಂದ ನಿಲ್ಲು ನಗುವಲ್ಲೇ ಕೊಲ್ಲು ಅವಮಾನ ಮಾಡಿದವರಾ
ಪವರ್ ಆಫ್ ಯೂಥ್ ಪವರ್ ಆಫ್ ಯೂಥ್

ಕಾಮೆಂಟು ಮಾಡೋವ್ರೆಲ್ಲ ಕೆಲಸಾನ ಮಾಡೋವ್ರಲ್ಲ
ಟೀಕೆಗಳಿಗೆ ಕಿವಿಕೊಡಬೇಡ ನಿನಗೆ ಅವರು ಹೋಲಿಕೆ ಅಲ್ಲ
ಹೇ ಯುವ ಯುವ (ಹೇ) ಹೇ ಯುವ ಯುವ (ಹೇ)
ನಾವ್ ಸೋಲಲಿ ಅಂತ ಕಾಯುತ್ತಿರುವ ಕಾಯ್ಸುತ್ತ ಇರುವ
ಹೇ ಯುವ ಯುವ (ಹೇ) ಹೇ ಯುವ ಯುವ (ಹೇ)

ಪರೀಕ್ಷೆಯಲ್ಲಿ ಫೇಲ್ ಆಗೋರು ಬದುಕು ಕಟ್ಟುವ
ಹೇ ಹೆಸರು ಮಾಡು ಹಸಿರಾಗೋ ಹಾಗೆ
ಉಸಿರು ಹೋದರು ಹೆಸರಿರೋ ಹಾಗೆ
ಆ ಚರಿತ್ರೆಗೆ ನೀನ್ ಮುನ್ನುಡಿ ನೂರು ಸಾರಿ ಕೂಗು
ಪವರ್ ಆಫ್ ಯೂಥ್ ಪವರ್ ಆಫ್ ಯೂಥ್
ಪವರ್ ಆಫ್ ಯೂಥ್ ಪವರ್ ಆಫ್ ಯೂಥ್
---------------------------------------------------------------------------

ಯುವರತ್ನ (೨೦೨೧) - ನಿನ್ನ ಜೊತೆ ನನ್ನ ಕಥೆ
ಸಂಗೀತ : ಎಸ್‌. ತಮನ್ನ, ಸಾಹಿತ್ಯ :  ಗೌಸ ಪೀರ,  ಗಾಯನ:  ಅರ್ಮಾನ ಮಲ್ಲಿಕ, ಶ್ರೇಯಾಘೋಶಾಲ

ನಿನ್ನ ಜೊತೆ ನನ್ನ ಕಥೆ ಒಂದೊಂದು ಸಾಲು ಜೀವಿಸಿದೆ
ನನ್ನ ಜೊತೆ ನಿನ್ನ ಕಥೆ ಬೇರೊಂದು ಲೋಕ ಸೃಷ್ಟಿಸಿದೆ
ಎಂದು ಹೀಗೆ ಆಗೇ ಇಲ್ಲ ಏನು ಇದರ ಸೂಚನೆ
ನೂರು ವಿಷಯ ಇದ್ದರೂನು ನಿನ್ನದೊಂದೇ ಯೋಚನೆ
ಇಬ್ಬರಲ್ಲ ಒಬ್ಬರೀಗ ನಾನಿನ್ನು ನಿನಗರ್ಪಣೆ
ನೀನಾದೆ ನಾ ನೀನಾದೆ ನಾ ನಿನ್ನೊಂದಿಗೆ ಈ ಜೀವನ
ನೀನಾದೆ ನಾ ನೀನಾದೆ ನಾ ನಿನ್ನೊಂದಿಗೆ ಈ ಜೀವನ
ನಿನ್ನ ಜೊತೆ ನನ್ನ ಕಥೆ ಒಂದೊಂದು ಸಾಲು ಜೀವಿಸಿದೆ
ನನ್ನ ಜೊತೆ ನಿನ್ನ ಕಥೆ ಬೇರೊಂದು ಲೋಕ ಸೃಷ್ಟಿಸಿದೆ

ನೀನು ದೂರ ನಾನು ದೂರ ಆದರೂ ಇಲ್ಲೇ ಈ ಕ್ಷಣದಲ್ಲೇ
ತಿರುಗುವ ಭುವಿಯಲಿ ಇರಲಿ ನಾನೆಲ್ಲೇ ಇರುವೆ ನಿನ್ನಲ್ಲೇ
ಎದೆಯ ಬಡಿತ ಹೃದಯ ತುಂಬಿ ಉಸಿರಾಡುವಾಗ ವಿಪರೀತವೀಗ
ಒಂಟಿತನಕೆ ನೀನೆ ತಾನೇ ಸರಿಯಾದ ಸಿಹಿಯಾದ ಪರಿಹಾರ ಈಗ
ಉಕ್ಕಿ ಬರುವ ಅಕ್ಕರೆಗೆ ನಿನ್ನ ನೆರಳೇ ಉತ್ತರ
ಯಾವ ದೃಷ್ಟಿ ತಾಕದಂತೆ ನಿನ ಕಣ್ಣೇ ನನ ಕಾವಲು
ನೀನಾದೆ ನಾ ನೀನಾದೆ ನಾ ನಿನ್ನೊಂದಿಗೆ ಈ ಜೀವನ 
ನೀನಾದೆ ನಾ ನೀನಾದೆ ನಾ ನಿನ್ನೊಂದಿಗೆ ಈ ಜೀವನ
ನಿನ್ನ ಜೊತೆ ನನ್ನ ಕಥೆ ಒಂದೊಂದು ಸಾಲು ಜೀವಿಸಿದೆ
ನನ್ನ ಜೊತೆ ನಿನ್ನ ಕಥೆ ಬೇರೊಂದು ಲೋಕ ಸೃಷ್ಟಿಸಿದೆ
ಎಂದು ಹೀಗೆ ಆಗೇ ಇಲ್ಲ ಏನು ಇದರ ಸೂಚನೆ
ನೂರು ವಿಷಯ ಇದ್ದರೂನು ನಿನ್ನದೊಂದೇ ಯೋಚನೆ
ಇಬ್ಬರಲ್ಲ ಒಬ್ಬರೀಗ ನಾನಿನ್ನು ನಿನಗರ್ಪಣೆ
ನೀನಾದೆ ನಾ ನೀನಾದೆ ನಾ ನಿನ್ನೊಂದಿಗೆ ಈ ಜೀವನ
ನೀನಾದೆ ನಾ ನೀನಾದೆ ನಾ ನಿನ್ನೊಂದಿಗೆ ಈ ಜೀವನ
ನೀನಾದೆ ನಾ ನೀನಾದೆ ನಾ ನಿನ್ನೊಂದಿಗೆ ಈ ಜೀವನ
ನೀನಾದೆ ನಾ ನೀನಾದೆ ನಾ ನಿನ್ನೊಂದಿಗೆ ಈ ಜೀವನ
------------------------------------------------------------------------

ಯುವರತ್ನ (೨೦೨೧) - ಊರಿಗೊಬ್ಬ ರಾಜ
ಸಂಗೀತ : ಎಸ್‌. ತಮನ್ನ, ಸಾಹಿತ್ಯ : ಸಂತೋಷ ಅಂಡ್ರಾಮ, ಗಾಯನ: ಪುನೀತರಾಜಕುಮಾರ, ರಮ್ಯ ಬೆಹರ,

ಊರಿಗೊಬ್ಬ ರಾಜ ಆ ರಾಜಗ್ಒಬ್ಬಳು ರಾಣಿ
ಆ ರಾಜ ರಾಣಿ ಮದ್ವೆ ಆದ್ರೆ ಹಾಲು ಜೇನು…
ಈ ಮದ್ವೆ ಮಾರುತಿ ವ್ಯಾನು ಕಾರ್ ಒಳ್ಗಡೆ ನೇ ಜಾಮು
ಹೇ ಅಜ್ಜಿ ತಾತ ಅಪ್ಪ ಅಮ್ಮ ಮಕ್ಳು ಇನ್ನು…

ಬೇಗ ಬುಕ್ಕು ಮಾಡಿ ಒಂದ್ ಒಳ್ಳೆ ಛತ್ರ
ರಿಸೆಪ್ಶನ್ ಗೆ ಆರ್ಕೆಷ್ಟ್ರಾ ಸಾಂಗು ಕೇಳಿ
ಸ್ಟೇಜು ಹತ್ತಿ ಖಾಲಿ ಕೈಲಿ ಮದ್ವೇಗ್ ಬರೋರಿಗೆ ಎಂಟ್ರಿ ಇಲ್ಲ
ಊರಿಗೊಬ್ಬ ರಾಜ ಆ ರಾಜಗ್ಒಬ್ಬಳು ರಾಣಿ
ಆ ರಾಜ ರಾಣಿ ಮದ್ವೆ ಆದ್ರೆ ಹಾಲು ಜೇನು…
ಈ ಮದ್ವೆ ಮಾರುತಿ ವ್ಯಾನು ಕಾರ್ ಒಳ್ಗಡೆ ನೇ ಜಾಮು
ಹೇ ಅಜ್ಜಿ ತಾತ ಅಪ್ಪ ಅಮ್ಮ ಮಕ್ಳು ಇನ್ನು…

ಹನಿ ಮೂನಿನಲ್ಲಿ ಹುಡುಗ ರೋಮ್ಯಾಂಟಿಕ್ ಹೀರೋ ತರ
ಸಂಸಾರದಲ್ಲಿ ಅವನೇ ಆಕ್ಷನ್ ಹೀರೋ ತರ
ಈ ಲವ್ವು ಫೈಟು ಎರಡು ಇದ್ರೆ ಲೈಫು ಮಜಾ
ನಿಮ್ ಹೆಣ್ತಿ ಬರ್ತಡೇಗೆ ಮರಿದೆ ಹಾಕಿ ರಜಾ
ತಂದೆ ತಾಯಿ ಬಿಟ್ಟು ನಾವು ಬರ್ತೀವಲ್ಲ
ಫ್ರೆಂಡ್ಸು ಡ್ರಿಕ್ಸು ಬಿಡೋಕೆ ಆಗಲ್ವ?
ಥಿಂಕು ಮಾಡಿ ತಾಳಿ ಕಟ್ಟಿ ರೀಸನ್ ಇಲ್ದೆ
ಮದ್ವೆ ಆಗೋದು ಒಳ್ಳೇದಲ್ಲ!
ಊರಿಗೊಬ್ಬ ರಾಜ ಆ ರಾಜಗ್ಒಬ್ಬಳು ರಾಣಿ
ಆ ರಾಜ ರಾಣಿ ಮದ್ವೆ ಆದ್ರೆ ಹಾಲು ಜೇನು…
ಈ ಮದ್ವೆ ಮಾರುತಿ ವ್ಯಾನು ಕಾರ್ ಒಳ್ಗಡೆ ನೇ ಜಾಮು
ಹೇ ಅಜ್ಜಿ ತಾತ ಅಪ್ಪ ಅಮ್ಮ ಮಕ್ಳು ಇನ್ನು…
ಬೇಗ ಬುಕ್ಕು ಮಾಡಿ ಒಂದ್ ಒಳ್ಳೆ ಛತ್ರ
ರಿಸೆಪ್ಶನ್ ಗೆ ಆರ್ಕೆಷ್ಟ್ರಾಸಾಂಗು ಕೇಳಿ
ಸ್ಟೇಜು ಹತ್ತಿ ಖಾಲಿ ಕೈಲಿ ಮದ್ವೇಗ್ ಬರೋರಿಗೆ ಎಂಟ್ರಿ ಇಲ್ಲ
---------------------------------------------------------------------------------------------------------------------

ಯುವರತ್ನ (೨೦೨೧) - ಪಾಠಶಾಲಾ.. ಪಾಠಶಾಲಾ
ಸಂಗೀತ : ಎಸ್‌. ತಮನ್ನ, ಸಾಹಿತ್ಯ : ಸಂತೋಷ ಅಂಡ್ರಾಮ, ಗಾಯನ: ವಿಜಯಪ್ರಕಾಶ 

ದೇಶಕ್ಕೆ ಯೋಧ ನಾಡಿಗೆ ರೈತ ಬಾಳಿಗೆ ಗುರುವೊಬ್ಬ ತಾನೇ
ಅಕ್ಷರ ಕಲಿಸೋ ಅಜ್ನ್ಯಾನ ಅಳಿಸೋ ಅವನೂನು ಅನ್ನದಾತನೇ
ತಪ್ಪು ಸರಿಯಾ ತಿದ್ದಿ ತಿಳಿ ಹೇಳಿ ಸಮಬುದ್ಧಿ ನಮ್ಮ ಚಿತ್ತ ಶುದ್ಧಿ ಆಗೋ ಹಾದಿ
ಎಷ್ಟೇ ದೂರ ಹೋದ್ರು ಮರೀಬೇಡ ನಿನ ಬೇರು ನಿನ್ನ ಸಾಧನೆಗೆಲ್ಲ ಇದುವೇ ಆದಿ
ಪಾಠಶಾಲಾ.. ಪಾಠಶಾಲಾ.. ಪಾಠಶಾಲಾ.. ಪಾಠಶಾಲಾ..
ದೇಶಕ್ಕೆ ಯೋಧ ನಾಡಿಗೆ ರೈತ ಬಾಳಿಗೆ ಗುರುವೊಬ್ಬ ತಾನೇ
ಅಕ್ಷರ ಕಲಿಸೋ ಅಜ್ನ್ಯಾನ ಅಳಿಸೋ ಅವಾನೂನು ಅನ್ನದಾತನೇ

ಪ್ರತಿಯೊಂದು ಮಾತು ಕಲಿತ ಜಾಗ ಪ್ರತಿ ಹೆಜ್ಜೆ ಗುರುತು ಅರಿತ ಜಾಗ
ಕನಸುಗಳ ಜೊತೆಗೆ ನಡೆದ ಜಾಗ ಸ್ನೇಹಿತರ ಪ್ರೀತಿ ಪಡೆದ ಜಾಗ
ಎಲ್ಲರು ಒಂದೇ ಇಲ್ಲಿ ಮೇಲು ಕೀಳಿಲ್ಲ ಜ್ಞಾನದ ಹಸಿವಿದ್ದಾಗ ಮೊದಲು ಕೊನೆಯಿಲ್ಲ
ಮನೆಯೇ ಮೊದಲ ಶಾಲೆ ತಾಯಿಯೇ ಗುರುವು ತಾಯಿಗೂ ಪಾಠ ಹೇಳಿದ ಗುರುವೇ ಅರಿವು
ಎಲ್ಲ ದಾನಕು ಶ್ರೇಷ್ಠ ವಿದ್ಯೆ ಎನ್ನುವುದನ್ನು ತಿಳಿದ ದೇಶ ನಮ್ಮದು ವಿಶ್ವದ ಕಣ್ಣು
ಮುಂದೆ ಗುರಿ ಇರಬೇಕು ಹಿಂದೆ ಗುರು ಇರಬೇಕು ನಂಬಿ ನಡೆದರೆ ಸಾಕು ಸಾರ್ಥಕ ಬದುಕು
ಪಾಠಶಾಲಾ.. ಪಾಠಶಾಲಾ.. ಪಾಠಶಾಲಾ.. ಪಾಠಶಾಲಾ..

ಬೆರೆಯೋದು ಹೇಗೆ ಕಂಡಿದ್ದಿಲ್ಲಿ ಜೊತೆಯಾಗಿ ಹಂಚಿ ತಿಂದಿದ್ದಿಲ್ಲಿ
ಹಿರಿಯರಿಗೆ ತಲೆಬಾಗಿ ನಿಂತಿದ್ದಿಲ್ಲಿ ಬದುಕುವ ರೀತಿ ಕಲಿತಿದ್ದಿಲ್ಲಿ
ಶಿಕ್ಷಣೆ ಶಿಕ್ಷೆ ಅಲ್ಲ, ನಮ ಕಾಯುವ ರಕ್ಷೆ ಪುಸ್ತಕ ಹಿಡಿದ ಕೈಯಿ ಸರಿದಾರಿಯ ನಕ್ಷೆ
ತಂದೆ ತಾಯಿ ದುಡಿಮೆ ನಮ್ಮ ಬೆಳವಣಿಗೆ ತಿದ್ದೋ ಗುರುವಿನ ತಾಳ್ಮೆ ನಮ್ಮ ಬರವಣಿಗೆ
ಓದಿಸುವವರಿಗೆ ಮಾತ್ರ ಸಿರಿತನ ಬಡತನ ಎಲ್ಲ ಓದೋ ಮನಗಳಿಗೆ ಯಾವುದು ಇಲ್ಲ
ಪದವಿ ಅಂಕೆ ಇದ್ದರೆ ನೀ ಗೆದ್ದ ಹಾಗಲ್ಲ ವಿನಯ ಮೌಲ್ಯ ಇಂದಿಗೂ ಸೋಲುವುದಿಲ್ಲ
ಪಾಠಶಾಲಾ.. ಪಾಠಶಾಲಾ.. ಪಾಠಶಾಲಾ.. ಪಾಠಶಾಲಾ..
-----------------------------------------------------------------------------------------------------------------

ಯುವರತ್ನ (೨೦೨೧) - ಫೀಲ್ ಆಫ್ ದಿ ಪವರ್ 
ಸಂಗೀತ : ಎಸ್‌. ತಮನ್ನ, ಸಾಹಿತ್ಯ : ಸಂತೋಷ ಅಂಡ್ರಾಮ, ಗಾಯನ: ಶಶಾಂಕ ಶೇಷಗಿರಿ 

ಬ್ರಾಂಡ್ ಇದು ಬರಬೇಡ ನೀ ಅಡ್ಡಕ್ಕೆ 
ಸೌಂಡ್ ಇದು ನಿಲ್ಲಲ್ಲ ನಡಿ ಪಕ್ಕಕ್ಕೆ
ಯಾರು ಬೇಕಿಲ್ಲ ಮುನ್ನುಗೊಕ್ಕೆ
ಇಲ್ ಯಾರು ಎದುರಾಳಿ ಈ ವೇಗಕ್ಕೆ
ದಮ್ ಇದೆ ಅನ್ಬೇಡ ದಮಕಿ ಕೊಡಬೇಡ
ಮೈ ಮರೆತು ಕರಿಬೇಡ ನೆನಪಿಡು ನಾ ಸೈಲೆಂಟ್ ಅಂತ
ನಾ ಸ್ಮೈಲಿಂಗ್ ಅಂತ ದಾರೀಲಿ ಸಿಗಬೇಡ
ಡ ಡ ಡ.. ಫೀಲ್ ದಿ ಪವರ್! ಡ ಡ ಡ.. ಫೀಲ್ ದಿ ಪವರ್!
ಡ ಡ ಡ.. ಫೀಲ್ ದಿ ಪವರ್! ಡ ಡ ಡ.. ಫೀಲ್ ದಿ ಪವರ್!
ಬ್ರಾಂಡ್ ಇದು ಬರಬೇಡ ನೀ ಅಡ್ಡಕ್ಕೆ ಸೌಂಡ್ ಇದು ನಿಲ್ಲಲ್ಲ ನಡಿ ಪಕ್ಕಕ್ಕೆ 
ಯಾರು ಬೇಕಿಲ್ಲ ಮುನ್ನುಗೊಕ್ಕೆ
ಇಲ್ ಯಾರು ಎದುರಾಳಿ ಈ ವೇಗಕ್ಕೆ

ಯಾರೇ ಬಂದ್ರು ನಿಲ್ಲೋನು ಯಾರೇ ಗೆದ್ರು ನಿಂತೋನು
ಭೂಮಿ ಮೇಲೆ ನಿನ್ನ ಮಾರ್ಕು ಅಳಿಸಕ್ಕಾಗತ್ತ?
ಶೋ ಆಫ್ ಇಲ್ಲ ಶೋ ಮ್ಯಾನು ಅನ್ಸಿದ್ದನ್ನೇ ಹೇಳೋನು
ನಿನ್ನ ನುಡಿ ಬೆಂಕಿ ಕಿಡಿ ಆರಿಸಕ್ಕಾಗತ್ತ?
ಫಾಲೋ ಯಾರನು ಮಾಡೇ ಇಲ್ಲ ಕೊನೆ ತನಕ ನಮ್ದೆ ದಾರಿ
ಫಾಲೋಯಿಂಗ್ ಅದೇ ತರ ರೆವೋಲುಶನರಿ
ಕೌಂಟರ್ ಇಗೆ ಎನ್ಕೌಂಟರ್ ಈ ಕೆಣಕಿ ನೋಡು ಒಂದು ಸಾರಿ
ಬ್ರೇಕಿಂಗ್ ನ್ಯೂಸ್ ಇದೆ ಗೈಡ್ ಲೈನ್ ಫಾಲೋ ಮಾಡಿ
ರೂಲು ಒಬ್ಬಂದೆ ರೂಲ್ಸು ಒಬ್ಬಂದೆ ಎಂದಿಗೂ ಮರಿಬೇಡ
ನೆನಪಿಡು ನೀ ದೊಡ್ಡೋನ್ ಆದ್ರು ನೀ ದುಡ್ದೊನ್ ಆದರು ಈ ಹಿಸ್ಟರಿ ಮರಿಬೇಡ
ಡ ಡ ಡ.. ಫೀಲ್ ದಿ ಪವರ್! ಡ ಡ ಡ.. ಫೀಲ್ ದಿ ಪವರ್! 
ಡ ಡ ಡ.. ಫೀಲ್ ದಿ ಪವರ್! ಡ ಡ ಡ.. ಫೀಲ್ ದಿ ಪವರ್! 
ಬ್ರಾಂಡ್ ಇದು ಬರಬೇಡ ನೀ ಅಡ್ಡಕ್ಕೆ ಸೌಂಡ್ ಇದು ನಿಲ್ಲಲ್ಲ ನಡಿ ಪಕ್ಕಕ್ಕೆ 
ಯಾರು ಬೇಕಿಲ್ಲ ಮುನ್ನುಗೊಕ್ಕೆ ಇಲ್ ಯಾರು ಎದುರಾಳಿ ಈ ವೇಗಕ್ಕೆ
-----------------------------------------------------------------------------------------------------------------

No comments:

Post a Comment