1459.ಪೊಗರು (೨೦೨೧)

ಪೊಗರು ಚಲನಚಿತ್ರದ ಹಾಡುಗಳು 
  1. ಕರಾಬು ಬಾಸು ಕರಾಬು
  2. ಬಂದೇ ಬತ್ತಾಳೇ 
  3. ಪೊಗರು 
  4. ಜೀವ ಕೊಟ್ಟವಳು
ಪೊಗರು (೨೦೨೧) - ಕರಾಬು ಬಾಸು ಕರಾಬು
ಸಂಗೀತ : ಸಾಹಿತ್ಯ : ಗಾಯನ : ಚಂದನಶೆಟ್ಟಿ, 

ಕರಾಬು ಬಾಸು ಕರಾಬು ಸುಮ್ನೆ ಓಡೋಗು ನಿಲ್ಲಬೇಡ ಓಡೋಗೇ ಓಡೇಗು
ಕರಾಬು ಬಾಸು ಕರಾಬು ಸುಮ್ನೆ ಓಡೋಗು ನಿಲ್ಲಬೇಡ ಓಡೋಗೇ ಓಡೇಗು
ಡಾನುಗಳು ರೌಡಿಗಳು ಫಿದಾ ಆಗವ್ರೆ ನನ್ನ ಭೇಟಿ ಮಾಡೋಕೆ ಮುಗಿ ಬಿದ್ದವ್ರೆ
ಫೀಲ್ಡಲ್ಲಿ ನನ್ನ ಕಿಂಗು ಅಂತವ್ರೆ ನನ್ನ ಕಟ್ಕಂಡೂ ನೀ ಕ್ವೀನು ಆಗು ಬಾರೆ

ನೀನು ಕರೆದಲ್ಲಿ ಬರ್ತೀನಿ ನಡಿ ನಾ ರೆಡಿ  ನಾನು ಮಾಡ್ತಾ ಇಲ್ಲ ಕಣೆ ಈಗ ಕಾಮಿಡಿ
ಯಾರಗೂ ಹೆದರಬೇಡ ಗೊತ್ತಲ್ಲ ನಾನು ರೌಡಿ 
ತಪ್ಪಿ ನಂಗೆ ನೀನು ಬ್ಯಾಡ ಅಂದ್ರೆ ಎಲ್ಲ ಪುಡಿ ಪುಡಿ
ಸಿಕ್ಕಾಪಟ್ಟೆ ಸೈತಾನು ನೋಡೋಕ್ ಇವ್ನು ಪೈತಾನು
ಟಕ ಟಕ ಟಕ ಟಾಂಗು ಟಕರ್ ಡಿಂಗ್ ಟಾಕುರ್ ಕಿಟ್ಟಾಕೆ ರಾಂಗಾ ಟಾ ಟಾಕರ್ ಕಿಟ್ಟ ಕಿಟ್ಟ ಕಿಟ್ಟಾಕೆ
ಅಣ್ಣ ಬಂದ ಬಾಸು ಬಂದ ಎದ್ದು ಎಲ್ಡು ಸ್ಟೆಪ್ಪಾಕೆ 
ಕರಾಬು ಕರಾಬು ನಾ ನಿನ್ನ ನವಾಬು ಬೀಡ ಅಂಗ್ದಿ ಬಾಬು ಒಂದ್ ಬೀಡ ಹಾಕು
ಕೊಡ್ತೀನ್ ನೋಡು ಇವಳಿಗೆ ಕರೆಂಟ್ ಶಾಕು ಹೇಳಿ ಕೇಳಿ ಮೊದ್ಲೆ ನಾನ್ ಚೂರು ಕ್ರ್ಯಾಕು
ನಾ ಸ್ಟಾರ್ಟ್ ಅದ್ಮೇಲ್ ಸ್ಟಾಪೆ ಇಲ್ಲ ಒಂದೇ ಟೇಕು ಓಡೋಗೇ ನೀ ನಿಲ್ಲಬೇಡ ಓಡೋಗೇ
ಓಡು ಓಡು ಓಡು
ಯಾರು ಹೇಳಂಗೂ ಇಲ್ಲ ನನ್ನ ಕೇಳಂಗೂ ಇಲ್ಲ ನಾನು ಮುಟ್ಟುದ್ ಮೇಲೇ ನಂದೇನೆ
ಕರಾಬು ಬಾಸು ಕರಾಬು ಸುಮ್ನೆ ಓಡೋಗು ನಿಲ್ಲಬೇಡ ಓಡೋಗೇ ಓಡೇಗು
ಕರಾಬು ಬಾಸು ಕರಾಬು ಸುಮ್ನೆ ಓಡೋಗು ನಿಲ್ಲಬೇಡ ಓಡೋಗೇ ಓಡೇಗು

ಪಾಪಿಗಳ ಪಾಪಿ ಅಂತ ಶಾಪ ಹಾಕ್ತಾರೆ ಬರಿ ಗುಂಡನೂ ಪಂಟನೂ ಅಂತ ಅಂತಾರೆ
ಅಬ್ಬಬ್ಬ ರಾಕ್ಷಸ ಬಂದ ಅಂತಾರೆ ಎಲ್ಲ ಎದ್ದು ಬಿದ್ದು ಮನೆ ಸೇರಿ ಕೊಳ್ತಾರೆ
ನೀನು ಕೇಳ್ಬೇಡ ನನ್ ಹತ್ರ ಕ್ವಾಲಿಫಿಕೇಸನ್ 
ನಾನು ಮಾಡಲ್ಲ ಯಾವ್ ಕೆಲ್ಸ ವಿತೌಟ್ ಕಮಿಸನ್
ನಿಂಗೆ ಕೊಡ್ತೀನಿ ನಾನು ಸ್ಪೆಸಲ್ ಪರ್ಮೀಸನ್
ಬರ್ಕೊ ಗಂಡನ್ ಹೆಸರು ಶಿವ ಆನ್ ಅಪ್ಲಿಕೇಸನ್
ಮಸ್ತಾನ್ ಪೇಟೆ ಮಸ್ತಾನು ಅಕ್ಕಿ ಪೇಟೆ ಹೈವಾನು
ಟಕ ಟಕ ಟಕ ಟಾಂಗು ಟಕರ್ ಡಿಂಗ್ ಟಾಕುರ್ ಕಿಟ್ಟಾಕೆ
ರಾಂಗಾ ಟಾ ಟಾಕರ್ ಕಿಟ್ಟ ಕಿಟ್ಟ ಕಿಟ್ಟಾಕೆ
ಅಣ್ಣ ಬಂದ ಬಾಸು ಬಂದ ಎದ್ದು ಎಲ್ಡು ಸ್ಟೆಪ್ಪಾಕೆ
ಬಾಸು ಕರಾಬು ಬಾಸು ಕರಾಬು
---------------------------------------------------------------------------------------------------------------

ಪೊಗರು (೨೦೨೧) - ಬಂದೇ ಬತ್ತಾಳೇ
ಸಂಗೀತ : ಸಾಹಿತ್ಯ : ಚಂದನಶೆಟ್ಟಿ ಗಾಯನ : ವಿಜಯ ಪ್ರಕಾಶ

ಬೆಡ್ರೂಮ್ ಇಲ್ಲೂ ಗದ್ದೆ ಬೈಲು ಗುಡ್ಡದ್ ಕಲ್ಲು ಗುದ್ಲಿ ನೆಗ್ಲು
ಎಲ್ರು ಮೇಲು ಆಣೆ ಮಾಡಿ ಹೇಳ್ತೀನಿ ಕೇಳ್ರಿ
ಅವಳು ಟೀಚರ್ ನಾನು ಟಾರ್ಚರ್ 
ಅವಳು ಬೂನ್ದಿ ನಾನು ಸಿಂದಿ 
ಒಪ್ಪೋಸಿಟ್ಟು ಕ್ಯಾರೆಕ್ಟರೇ ಸೂಪರ್ ಜೋಡಿ
ಜಂತಿ ಆಗೋ ಹೊತ್ತಲಿ ಒಂಟಿ ಮಾಡಿ ಒಂಟೇ ಹೋದಳು
ಬಂದೆ ಬತ್ತಾಳೆ ಅವಳು ಬಂದೆ ಬತ್ತಾಳೆ
ಸಿಕ್ಕೇ ಸಿಗ್ತಾಳೆ ನಂಗೆ ಸಿಕ್ಕೇ ಸಿಗ್ತಾಳೆ

ಝಂ ಅಂತದೇ ಬಂದ ಧಮ್ ಅಂತದೇ 
ಇವಳ್ನ ನೋಡಿದಾಗ್ ಎಲ್ಲ ಗುಂಡಿಗೆ ಒಳಗೆ ಢುಮ್ ಅಂತದೇ
ನಿರ್ರ್ ಅಂತಾಳೆ ಸಿಕ್ದಾಗ್ ಸುರ್ ಅಂತಾಳೆ 
ನಾನು ಎಷ್ಟೇ ಇಷ್ಟ ಪಟ್ರು ನಂ ಮೇಲ್ ಗುರ್ರ್ ಅಂತಾಳೆ
ಡಾಕ್ಟ್ರನ್ನೇ ಕರೆಸು ಹೃದಯಾನೆ ಬಗೆಸು
ಅದರೊಳಗೂ ನಿನ್ನೆ ಜೋಪಾನ ಮಾಡಿವ್ನಿ
ಮಗುವಂತ ಮನಸು ನಿನಗ್ಯಾಕೆ ಮುನಿಸು
ದೇವ್ರಾಣೆ ನಿನ್ ಮ್ಯಾಲೆ ನಾನ್ ಪ್ರಾಣ ಮಡಗಿವ್ನಿ
ಬಂದೆ ಬತ್ತಾಳೆ ಅವ್ಳು ಬಂದೆ ಬತ್ತಾಳೆ 
ಕೈಯಲ್ ತಾಳಿ ಕೊಟ್ಟು ಅವ್ಳು ಕಟ್ಟು ಅಂತಾಳೆ

ಕೈ ತುತ್ತು ತಿಂದಿಲ್ಲ ಲಾಲಿ ಹಾಡು ಹಾಡಿಲ್ಲ
ತಾಯಿ ಪ್ರೀತಿ ಅಂದ್ರೆ ಏನು ಅಂತ ನಂಗೆ ಗೊತ್ತಿಲ್ಲ
ಹಬ್ಬ ಮಾಡಿಲ್ಲ ಒಳ್ಳೆ ಬಟ್ಟೆ ಹಾಕಿಲ್ಲ
ನಂಗೆ ಬಂದು ಬಳಗ ಯಾರು ಇಲ್ಲ, ನೀನ್ ನನಗೆಲ್ಲಾ
ಈ ಪಾಟಿ ನೋವಾ, ಈ ಪಾಪಿ ಜೀವ
ಒಳಗೆ ಇಟ್ಕೊಂಡು ಇನ್ನು ಬದುಕೈತೆ
ನಾ ಬಯಸಿದ್ದೆಲ್ಲ ನಂಗ್ ಸಿಗಲೇ ಇಲ್ಲ
ನೀನೂನೂ ನನ ಬಿಟ್ಟು ಹೋಗಬೇಡವೇ
ಬಂದೆ ಬತ್ತಾಳೆ ಅವಳು ಬಂದೆ ಬತ್ತಾಳೆ
ಕಾಲಿಗ್ ಬಿದ್ದು ನೀನೆ ನನ್ನ ಗಂಡ ಅಂತಾಳೆ
---------------------------------------------------------------------------------------------------------------

ಪೊಗರು (೨೦೨೧) - ಪೊಗರು
ಸಂಗೀತ : ಸಾಹಿತ್ಯ : ಗಾಯನ : ಚಂದನಶೆಟ್ಟಿ, ಶಶಾಂಕ ಶೇಷಗಿರಿ, ಅನಿರುದ್ಧಶಾಸ್ತ್ರೀ

ನಟೋರಿಯಸ್! ಕಾಲಿಗ್ ಹವಾಯ್ ಮೆತ್ತುಕೊಂಡು
ಉಡುದಾರ ಕಟ್ಟುಕೊಂಡು ಗಡ್ಡ ಮೀಸೆ ಬಿಟ್ಟುಕೊಂಡು ಬರ್ತವ್ನ್ ನೋಡಲೇ ಅಣ್ಣ ಬಂದ  ನೋಡಲೇ
ಜಿದ್ದಾ ಜಿದ್ದಿ ಮಾಡಿಕೊಂಡು ಮೈಮೇಲ್ ಧೂಳು ಕೆದ್ರುಕೊಂಡು
ಸಿಂಹ ನಡ್ಕೊಂಡ್ ಬಂದಂಗ್ ಅಣ್ಣ ಬರ್ತವ್ನ್ ನೋಡಲೇ ಅಣ್ಣ ಬಂದ ನೋಡಲೇ
ಪೊಗರು! ಅಣ್ಣನಿಗೆ ಪೊಗರೋ ಪೊಗರು ಯಗರು! ಅಣ್ಣ ಬಂದ ಯಗರೋ ಯಗರು
ಪೊಗರು! ಅಣ್ಣನಿಗೆ ಪೊಗರೋ ಪೊಗರು ಯಗರು! ಅಣ್ಣ ಬಂದ ಯಗರೋ 
ಯಗರ್ ಕಣಲೇ! ನಟೋರಿಯಸ್!
ತಾಕತ್ ಇದ್ರೆ ಬಂದು ನನ್ನ ಮುಂದೆ ನಿಲ್ತಿಯ
ನಾ ಹೊಡೆಯೋ ಹೊಡೆತ ಅಯ್ಯೋ ಪಾಪ ಹೆಂಗೋ ತಡಿತಿಯ
ಪೊಗರು! ಅಣ್ಣ ಬಂದ ಯಗರೋ ಯಗರು

ಎಲ್ಲೊ ಕದ್ದು ಕೂತು ನಂಗೆ ಸ್ಕೆಚ್ಚು ಹಾಕ್ತಿಯ 
ಕಣ್ಣ ಮುಂದೆ ಮಾತ್ರ ಬರ್ಲೆ ಬೇಡ ಸತ್ತೇ ಹೋಯ್ತಿಯ
ಸಂಘನಾದ್ರು ಕಟ್ತೀನಿ ನಾ ಊರು ತುಂಬಾ ಮೆರಿತಿನಿ
ಕಣ್ ಕೊಲ್ಲುತಲೆ ಬಾಳ್ತಿನಿ ಅದು ನಿಂಗೆ ಯಾಕಲೇ
ಇಷ್ಟ ಬಂದಂಗ್ ಇರ್ತಿನಿ ನಾ ಕಿರಿ ಕಿರಿ ಮಾಡ್ತೀನಿ ನಾ
ಬೇಕಾದಂಗೆ ಬಾಳ್ತಿನಿ ನಾ ನಂಬಿರೋದು ಆಂಜನೇಯನೇ
ಪೊಗರು! ಅಣ್ಣನಿಗೆ ಪೊಗರೋ ಪೊಗರು ಯಗರು! ಅಣ್ಣ ಬಂದ ಯಗರೋ ಯಗರು
ಪೊಗರು! ಅಣ್ಣನಿಗೆ ಪೊಗರೋ ಪೊಗರು ಯಗರು! ಅಣ್ಣ ಬಂದ ಯಗರೋ ಯಗರ್ ಕಣಲೇ!
ವಿದ್ಯೆ ಬುದ್ಧಿ ಓದು ಬರಹ ಬುಟ್ಟೆ ಬುಟ್ಟೆ ನಾ
ಒಂಟಿ ಸಲಗದಂಗೆ ಬೆಳ್ಕಂಡ ಬುಟ್ಟೆ
ಪೊಗರು! ಅಣ್ಣ ಬಂದ ಯಗರೋ ಯಗರು

ಪುಣ್ಯೇ ಗಿಂತ ಜಾಸ್ತಿ ಪಾಪ ಮಾಡೇ ಬುಟ್ಟೆ
ಪಾಪಿ, ನೀಚ, ಕ್ರೂರಿ ಅನ್ನೋ ಪಟ್ಟ ಕಟ್ಕೊಂಡ್ ಬುಟ್ಟೆ
ಕೋಪ ಬಂದ್ರೆ ಕಟುಕನೆ ನಾ ದಯೆ ಇಲ್ಲದ ದುಷ್ಟನೇ ನಾ
ಎದ್ರಾಕೊಂಡ್ರೆ ನಾನ್ ಅವ್ನಕ್ಕನ್ ಸಿಗ್ದಾಕ್ತಿನಿ
ಕಾಸು ಕೊಟ್ರೆ ಹೊಡಿತೀನಿ ನಾ ಯಾರೇ ಬಂದ್ರು ಬಡಿತಿನಿ ನಾ
ಊರೇ ಬಂದ್ರು ತಡಿತೀನಿ ನಾ ಕಾಲ್ ಇಟ್ಟಮೇಲೆ ಎಲ್ಲ ಕಾಲಡಿ
ಪೊಗರು! ಅಣ್ಣನಿಗೆ ಪೊಗರೋ ಪೊಗರು ಯಗರು! ಅಣ್ಣ ಬಂದ ಯಗರೋ ಯಗರು
ಪೊಗರು! ಅಣ್ಣನಿಗೆ ಪೊಗರೋ ಪೊಗರು ಯಗರು! ಅಣ್ಣ ಬಂದ ಯಗರೋ
ಯಗರ್ ಕಣಲೇ!
---------------------------------------------------------------------------------------------------------------

ಪೊಗರು (೨೦೨೧) - ಜೀವ ಕೊಟ್ಟವಳು
ಸಂಗೀತ : ಜಿ.ವಿಜಯ ಸಾಹಿತ್ಯ : ಅನಿರುದ್ಧ ಶಾಸ್ತ್ರಿ ಗಾಯನ : ಅನಿರುದ್ಧ ಶಾಸ್ತ್ರೀ, ಧ್ರುವಸರ್ಜಾ, ರಶ್ಮಿಕಾ ಮಂದಣ್ಣ

ಜೀವ ಕೊಟ್ಟವಳು ತುತ್ತು ಇಟ್ಟವಳು ಭೂಮಿ ಮೇಲೆ ಒಬ್ಬಳೆ
ಪ್ರಾಣ ಒತ್ತೆ ಇಟ್ಟು ಜನ್ಮ ನೀಡುವಳು ತಾಯಿ ಇಲ್ಲಿ ಒಬ್ಭಳೆ
ಕಾಣುವ ದೈವವೆ ಕಂಬನಿ ಇಟ್ಟರೆ ಬದುಕಿಗೆ ಅರ್ಥ ಎಲ್ಲಿದೆ
ಕರುಣೆ ಕಣಜವೆ ಕೊರಗಿ ನಿಂತರೆ ನನ್ನುಸಿರೆ ನನ್ನ ಕೊಂದಿದೆ
ಜೀವ ಕೊಟ್ಟವಳು ತುತ್ತು ಇಟ್ಟವಳು ಭೂಮಿ ಮೇಲೆ ಒಬ್ಬಳೆ
ಪ್ರಾಣ ಒತ್ತೆ ಇಟ್ಟು ಜನ್ಮ ನೀಡುವಳು ತಾಯಿ ಇಲ್ಲಿ ಒಬ್ಭಳೆ
ಕಾಣುವ ದೈವವೆ ಕಂಬನಿ ಇಟ್ಟರೆ ಬದುಕಿಗೆ ಅರ್ಥ ಎಲ್ಲಿದೆ
ಕರುಣೆ ಕಣಜವೆ ಕೊರಗಿ ನಿಂತರೆ ನನ್ನುಸಿರೆ ನನ್ನ ಕೊಂದಿದೆ

ಋಣಿಯೇ ನಿನಗೆ ನಾನು ಅಮ್ಮ ಕಂದ ಕೂಗು ಕರೆ ಅಮ್ಮ
ನಿನ್ನ ಮಡಿಲಲಿ ಮಲಗುವಾಸೆ ಮನದಲಿ ನಾ ಕೂಸೇ
ನಿನ್ನ ಬಿಟ್ಟು ನಾನು ಎಲ್ಲೂ ಹೋಗಲಾರೆ ನೀನೆ ನನ್ನ ಜಗವೇ
ಕೈಯನು ಹಿಡಿದು ನೀ ನನ್ನನ್ನು ನಡೆಸಿದೆ ಕುರುಡನೆ ನಾನು ಅಮ್ಮ
ಹಾದಿಯ ಕಾಣದ ನನ್ನಯ ಪಯಣದಿ ಧ್ರುವತಾರೆ ನೀನಮ್ಮ
ನೋವಾ ಮರೆಸೋ ನಗುವೇ ಅಮ್ಮ

ಜೋಜೋ ಲಾಲಿಯಲ್ಲಿ ಜಗವನ್ನೇ ಮರೆಸುವ ದೇವತೆ ಅಮ್ಮ
ಎಷ್ಟೇ ತಪ್ಪು ಮಾಡಿದರು ಕ್ಷಮಿಸುವ ಜೀವಿ ನೀನೆ ಅಮ್ಮ
ಸ್ವಾರ್ಥವೇ ಇಲ್ಲದ ಅರ್ಥಕು ಮೀರಿದ ಭಾವನೆಯೇ ನೀನಮ್ಮ
ಜೀವವೇ ಹೋದರು ಕೊನೆಯ ಉಸಿರಲು ನಿನ್ನ ಕಾಯುವೆನಮ್ಮ
ಋಣಿಯೇ ನಿನಗೆ ನಾನು ಅಮ್ಮ 
---------------------------------------------------------------------------------------------------------------

No comments:

Post a Comment