- ಯಾರೇ ನೀನು ನಿನ್ನ ನೋಡಿ ಮಾರು ಹೋದೆ ನಾ
- ಪ್ರತಿಯೊಬ್ಬ ಹುಡುಗನ ಹಿಂದೆ
- ಅಸಲು ವಿಷಯ ಏನೆಂದರೇ
ಖಾಕಿ (೨೦೨೦) - ಯಾರೇ ನೀನು ನಿನ್ನ ನೋಡಿ ಮಾರು ಹೋದೆ ನಾ
ಸಂಗೀತ : ರಿತ್ವಿಕ ಮುರುಳೀಧರ, ಸಾಹಿತ್ಯ : ವಿ.ನಾಗೇಂದ್ರಪ್ರಸಾದ, ಗಾಯನ : ರಿತ್ವಿಕ ಮುರುಳೀಧರ, ಸಂಜಿತ ಹೆಗಡೆ. ಇಶಾ ಸುಚ್ಚಿ
ಯಾರೇ ನೀನೂ ಯಾರೇ ನೀನೂ ನಿನ್ನ ನೋಡಿ ಮಾರು ಹೋದೆ ನಾ
ಯಾರೇ ನೀನೂ ಯಾರೇ ನೀನೂ ನಿನ್ನ ನೋಡಿ ಜಾರಿ ಹೋದೆ
ನಯನ ಬಿಡದೇ ನೋಡಿದೆ ಕವನ ಕವಿತೆ ಹಾಡಿದೆ
ಸಜನಾ ನೀನೇ ಎಂದಿದೆ ನೀನು ತಂದ ಮೋಡಿಯಿಂದ
ಬಾಳು ಇನ್ನೂ ಚೆಂದ ಚಂದ ಇದೇನು ಸಲುಗೆಯೋ ಇದೇನಾ ಪ್ರೀತಿಯೂ ...
ನಿನ್ನ ಜೊತೆ ಇದ್ದರೇ ಮಾತು ಕೇಳುತ್ತಿದ್ದರೇ
ನನ್ನ ಕಣ್ಣು ಎಂದು ಕೂಡ ಮೋಚು ನೋಡದು
ಬೈಕಿನಲ್ಲಿ ಕೂತರೇ ನಿನ್ನ ಸ್ಪರ್ಷವಿದ್ದರೇ
ಯಾಕೋ ನನ್ನ ಕಾಲು ಭೂಮಿ ಮೇಲೆ ನಿಲ್ಲದೂ ..
ಆಕಾಶವೇ ತೇಲಾಡಿದೇಯಾ ಮೋಹವಿದು ಮೆರವಣಿಗೆ
ನಾ ಮೌನದ ಗೂಡಾಗುವೇ ನೀ ನೋಡುತಿರೋ ಪ್ರತಿ ಘಳಿಗೆ
ನಮ್ಮ ಜೋಡಿ ನೋಡಿ ಕಣ್ಣು ಹಾಕಬೇಡಿ
ಅಂತ ನಾವೂ ಊರಿಗೆಲ್ಲ ಮನವಿ ಮಾಡುವ
ನಯನ ಬಿಡದೇ ನೋಡಿದೆ ಕವನ ಕವಿತೆ ಹಾಡಿದೆ
ಸಜನಾ ನೀನೇ ಎಂದಿದೆ ನೀನು ತಂದ ಮೋಡಿಯಿಂದ
ಬಾಳು ಇನ್ನೂ ಚೆಂದ ಚಂದ ಇದೇನು ಸಲುಗೆಯೋ ಇದೇನಾ ಪ್ರೀತಿಯೂ ...
----------------------------------------------------------------------------
ಖಾಕಿ (೨೦೨೦) - ಪ್ರತಿಯೊಬ್ಬ ಹುಡುಗನ ಹಿಂದೆ
ಸಂಗೀತ : ರಿತ್ವಿಕ ಮುರುಳೀಧರ, ಸಾಹಿತ್ಯ : ಯೋಗರಾಜ ಭಟ್ಟ, ಗಾಯನ : ರಿತ್ವಿಕ ಮುರುಳೀಧರ, ನವೀನ ಸಜ್ಜು
ಪ್ರತಿಯೊಬ್ಬ ಹುಡುಗನ ಹಿಂದೆ ಹುಡುಗಿ ಇರ್ತಾಳಂತೇ
ಅವಳಿಂದ ಹುಡುಗನ ಜೀವನ ಚೆನ್ನಾಗಿರ್ತದಂತೇ
ಪ್ರತಿಯೊಬ್ಬ ಹುಡುಗನ ಹಿಂದೆ ಹುಡುಗಿ ಇರ್ತಾಳಂತೇ
ಅವಳಿಂದ ಹುಡುಗನ ಜೀವನ ಚೆನ್ನಾಗಿರ್ತದಂತೇ
ಕ್ರೆಡಿಟೂ ಪೂರ್ತಿ ಹುಡುಗೀರದ್ದೂ ಹುಡುಗರೂ ಡಬ್ಬ ನನ್ ಮಕ್ಕಳೂ
ಹೆಂಗೋ ಬದುಕಿ ಉಳ್ಕೋತೀವಿ ಹಿಂದಿಂದ ತಬ್ಬಕೊಂಡರೇ ಹೆಣ್ಣ್ ಮಕ್ಕಳೂ
ಹಿಂದಿಂದ ತಬ್ಬಕೊಂಡರೇ ಹೆಣ್ಣ್ ಮಕ್ಕಳೂ
ಬೀದಿ ಸುತ್ತೋ ಜನುಮ ನಂದೂ ನೀವೇ ಕಾಪಾಡ್ರಮ್ಮಾ
ಜಾಸ್ತಿ ಲವ್ ಮಾಡ್ರಮ್ಮಾ
ಹುಡುಗಿನ ಕಂಡ್ರೇ ಫೋಕಸ್ ಎಲ್ಲಾ ಶಿಫ್ಟ್ ಆಗ್ ಹೋಗುತ್ತರಮ್ಮಾ
ನನ್ನ ಕಣ್ಣ ಗುಡ್ಡೇ ಕಿತ್ತಾಕರಮ್ಮಾ
ಹುಟ್ಟಿದ ಟೈಮ್ಮೂ ನಾವಾಗಿದ್ದೀವಿ ತುಂಬಾ ಒಳ್ಳೆ ಚಿಕ್ಕ ಮಕ್ಕಳೂ
ಹುಡುಗೀರ್ ನೋಡ್ತಾ ನೋಡ್ತಾ ಬೆಳೆದು ಅಗೋದ್ವಿ ಕಳ್ ನನ್ನ ಮಕ್ಕಳೂ
ಅಗೋದ್ವಿ ಕಳ್ ನನ್ನ ಮಕ್ಕಳೂ
ನಾವೂ ಎಷ್ಟೇ ಡೀಸೆಂಟಾಗಿ ಇದ್ರೂ ಕೂಡ ವೆಸ್ಟೂ
ನೀವೇ ಎಲ್ಲದರಲ್ಲೂ ಫಸ್ಟೂ
ಅಬ್ಬೇಪಾರಿ ಗಂಡು ಜನುಮ ಎಡವಟ್ಟಲ್ ಎಡವಟ್ಟೂ
ನೀವೇ ಇಡ್ಕೋ ಬೇಕು ಜುಟ್ಟು ಲೋಕಲ್ ಯಾವ್ದು ನಮದಾಗಲ್ಲ
ನಾವೂ ಇಂಟರ್ ನ್ಯಾಷನಲ್ಲೂ ತಿಳಿಸಿ ಹೇಳೋಕಿರಲೇ ಬೇಕೂ
ಲೈಫಲ್ ಒಬ್ಬಳೂ ಫೀಮೇಲೂ..
ಲೈಫಲ್ ಒಬ್ಬಳೂ ಫೀಮೇಲೂ ಪ್ರತಿಯೊಬ್ಬ ಹುಡುಗನ ಹಿಂದೇ
ಹುಡುಗಿ ಇರ್ತಾಳಂತೇ ಅವಳಿಂದ ಹುಡುಗನ ಜೀವನ ಚೆನ್ನಾಗಿರ್ತದಂತೇ
ಕ್ರೆಡಿಟೂ ಪೂರ್ತಿ ಹುಡುಗೀರದ್ದೂ ಹುಡುಗರೂ ಡಬ್ಬ ನನ್ ಮಕ್ಕಳೂ
ಹೆಂಗೋ ಬದುಕಿ ಉಳ್ಕೋತೀವಿ ಹಿಂದಿಂದ ತಬ್ಬಕೊಂಡರೇ ಹೆಣ್ಣ್ ಮಕ್ಕಳೂ
ಹಿಂದಿಂದ ತಬ್ಬಕೊಂಡರೇ ಹೆಣ್ಣ್ ಮಕ್ಕಳೂ
------------------------------------------------------------------------
ಸಂಗೀತ : ರಿತ್ವಿಕ ಮುರುಳೀಧರ, ಸಾಹಿತ್ಯ : ಕವಿರಾಜ, ಗಾಯನ : ಚೇತನ ನಾಯ್ಕ ಈಶ ಸುಚ್ಚಿ
ಅಸಲು ವಿಷಯ ಏನೆಂದ್ರೆ ಅಮಲು ನಂಗೆ ನೀನೇದರೇ
ನೀ ಹೀಗೆ ಕಣ್ಣ ಮುಂದೆ ನಿಂತರೇ ಹೃದಯ ಹೊರಗೆ ಹಾರೋ ತೊಂದರೆ
ನಿನ್ನಿಂದಲೇ ನನ್ನೀ ಲೋಕ ಮೋಹಕ
ನೀ ಬಂದ್ರೇ ನನಗೆಂದೆಂದೂ ಕೌತಕ ಸೆಳೆವೆ ಕಣೆ ಎಗ್ಗಿಲ್ಲದೇ
ನೀನೊಂದು ಚುಂಬಕ
ಮೆಲ್ಲ ಮೆಲ್ಲ ನನ್ನನ್ನೆಲ್ಲಾ ಮಾಯೆಯಂತೆ ನೀ ಉಪಾಪಿಸಿ
ಏನು ಇಲ್ಲ ನಾನು ಇಲ್ಲ ನೀನೇ ಎಲ್ಲಾ ಓ ರೂಪಸಿ
ನೀನೊಮ್ಮೆ ನಗಲೂ ನನ್ನ ಎಲ್ಲ ದಿಗಿಲೂ
ದೂರಾಯಿತು ಒಮ್ಮೆಗೆ ಗೊತ್ತಿಲ್ಲ ಹೇಗೆಂದೂ
ಈ ನಿನ್ನ ನೆರಳು ನನ್ನ ಸೋಕುತಿರಲು
ರೋಮಾಂಚನ ಓ ತರ ಕಂಡಿಲ್ಲ ಹಿಂದೆಂದೂ
ಇನ್ನೇಕೆ ಬೇಕೂ ಕನ್ನಡಿ ಈ ನಿನ್ನ ಕಣ್ಣಲೀ ನಾ ನನ್ನ ನೋಡಿಕೊಳ್ಳುವ
------------------------------------------------------------------------
No comments:
Post a Comment