1464. ನಾನು ಮತ್ತು ಗುಂಡ (೨೦೨೦)


ನಾನು ಮತ್ತು ಗುಂಡ ಚಲನಚಿತ್ರದ ಹಾಡುಗಳು 
  1. ನಾನು ಮತ್ತು ಗುಂಡ
  2. ಅಯ್ಯಯೋ ರಾಮ ಯಾವ ಜನ್ಮವಾದ್ದೋ 
  3. ಕವಲೊಡೆದ ನದಿ ಒಂದು 
  4.  ಮೌನ... ಮೌನ ಮಾತಿಗೂ ಮೌನವೇ ಬೇಕು 
  5.  ಮೌನ... ಮೌನ ಮಾತಿಗೂ ಮೌನವೇ ಬೇಕು (ಹೆಣ್ಣು) 
  6. ಬೆಳಕೊಂದು ಕತ್ತಲಲ್ಲಿ ಕರಗೋಯ್ತು 
ನಾನು ಮತ್ತು ಗುಂಡ (೨೦೨೦) - ನಾನು ಮತ್ತು ಗುಂಡ
ಸಂಗೀತ :ಕಾರ್ತಿಕ ಶರ್ಮಾ, ಸಾಹಿತ್ಯ : ರೋಹಿತ  ರಾಮನ, ಗಾಯನ : ಸೋನು ನಿಗಮ್, 

ಗೆಳೆಯನೋ ಬಂಧುವೋ ಯಾರಿವನು
ನಗುವಲೇ ಜಗವನೇ ಮರೆಸುವನು
ಬೆನ್ನಿಗೆ ಕೂಸಿವನು ಹೆಗಲಿಗೆ ತೇರಿವನು
ತುಂಟ ಪುಟ್ಟ ನಡಿಗೆ ಹೂವ ಮುತ್ತು ಎದೆಗೆ
ಮರಳ ಜನನ ಮರಳಿ ಮರಳಿ ಬಂದರೂ
ನಾನೇ ಮಗುವು ಇವನೇ ನನಗೆ ತಂದೆಯು
ನಾನು ಮತ್ತು ಗುಂಡ ನಾನು ಮತ್ತು ಗುಂಡ
ನಾನು ಮತ್ತು ಗುಂಡ ನಾನು ಮತ್ತು ಗುಂಡ

ಬದುಕಿನ ಪಥದೀ ನೀನೊಂದು ಸುಂದರ ಕಿನ್ನರ ಜಗವು
ಜೊತೆಯಲಿ ಇರೆ ನೀ ಏಕೀ ಜಗವೂ ಮಾತು ನಿಂದು ತೊದಲು
ಏನೇನೋ ಅರ್ಥವು ತಿಳಿಯೆನು ನಾನು ನಾ ಅಜ್ಞಾನಿ ನೀ ಜಾಣ 
ನೀನೆ ದೊರೆ, ನೀನೆ ಧಣಿ ಪಲ್ಲಕ್ಕಿಯ ಮೇಲೆ ಹೊತ್ತು ಮೆರೆಸುವೆನು
ಏ ನನ್ನ ಗುಂಡ, ನೀನ್ ಚಂದ್ರನ್ ತುಂಡ
ಮೋಡಗಳ ಸರಿಸಿ ಬೆಳಕನು ತಂದೆ ನೀ
ತಾಯಿ ಮಾನಸ ಕರುವೋ ದಂಡಿಸದ ಗುರುವೋ
ನಾನು ಮತ್ತು ಗುಂಡ ನಾನು ಮತ್ತು ಗುಂಡ
ನಾನು ಮತ್ತು ಗುಂಡ ನಾನು ಮತ್ತು ಗುಂಡ

ಕರೆಯದೇ ಬರುವ, ಮಳೆಯು ಭೂಮಿಯ ಸೇರಿದ ಹಾಗೆ
ಸುಳಿವನು ಕೊಡದೆ ಎದೆಯೊಳಗಿಳಿದೆ
ಕಣ್ಣ ರೆಪ್ಪೆ ಬಡಿದು ನೀ ಹೇಳೋ ಕವನ ಅರಿಯೆ ನಾನು
ನಾ ಕೇಳುಗನು ನೀ ಕವಿಯು ನೀನೆ ಇಂದ್ರ ನೀನೆ ಸುಂದ್ರ
ದೃಷ್ಟಿ ಆಗದಂತ ದೃಷ್ಟಿ ಬೊಟ್ಟು ನಾನು 
ನನ್ನ ಗುಂಡ, ನೀನ್ ಚಂದ್ರನ್ ತುಂಡ
ಕತ್ತಲನು ಸರಿಸಿ ಹರುಷವ ತಂದೆ ನೀ
ಕಂಬನಿಗೂ ನಗುವ, ನಗುವಿನಲೇ ತರುವ
ನಾನು ಮತ್ತು ಗುಂಡ ನಾನು ಮತ್ತು ಗುಂಡ
ನಾನು ಮತ್ತು ಗುಂಡ ನಾನು ಮತ್ತು ಗುಂಡ
---------------------------------------------------------------------------------------------------------------------

ನಾನು ಮತ್ತು ಗುಂಡ (೨೦೨೦) - ಅಯ್ಯಯೋ ರಾಮ ಯಾವ ಜನ್ಮವಾದ್ದೋ 
ಸಂಗೀತ :ಕಾರ್ತಿಕ ಶರ್ಮಾ, ಸಾಹಿತ್ಯ : ರೋಹಿತ  ರಾಮನ, ಗಾಯನ : ಕಾರ್ತಿಕ ಶರ್ಮ 

ಅಯ್ಯಯ್ಯೋ ರಾಮ ರಾಮ ರಾಮ ರಾಮ 
ಯಾವ ಜನುಮವದ್ದೋ ಈ ಕರ್ಮ ಕರ್ಮ ಕರ್ಮ ಕರ್ಮ 
ನನ್ ಪಾಡಿಗ ನಾನೂ ಆರಾಮಾಗಿದ್ದೇ ... 
ಎಲ್ಲಿಂದ ಬಂದೆ ನನ್ ಹಿಂದೆ ಯಾಕ್ ಬಿದ್ದೆ  
 ಈ ಬೆಳ್ಳಬೆಳ್ಳಗಿರೋ ಮುದ್ದು ಪ್ರಾರಬ್ದ 
ಬೌ ಬೌ ಅಂತಾ ನಂಗ್ಯಾಕ ಜೋತು ಬಿದ್ದ
ಹೇ ಕುತ್ತೇ ಕನ್ವರ ನಾನೀಮ್ ಓನರ್ ನಹೀ ಲಾ..    

ಬಡಪಾಯೀ ಶಂಕರ ಆಟೋ ರಿಕ್ಷಾವಾಲ 
ನೀನ್ ಮಗನಾಗ್ ಹುಟ್ಟುತ್ತೀನಿ ತಂದೆ 
ನನ್ ಪಾಡಿಗ ನನ್ನ ಬಿಟ್ಟು ಹೋಗ್ ಹಿಂದೆ   
ಬನ್ನೂ ಬಿಸ್ಕಟ್ ಹಿಂದೆ ತಿಂದೆ 
ನಿನ್ ಸೌಭಾಗ್ಯ ಸಾಕ್ ಹೋಗು ಮುಂದೆ 
ಬಾಲ ಅಲ್ಲಾಡುಸುತ ಬತ್ತಿಯಾ 
ಎಷ್ಟ್ ಬೈದ್ರೂ.. ಕೇರ್ ಮಾಡದೇ ನಗ್ತೀಯಾ 

ಹಳೆ ಸಾಲಯಾದರೂ ಕೊಟ್ಟಿದೀಯಾ 
ನನ್ ಪ್ರಾಣ ಯಾಕಿಂಗೇ ತಿಂತೀಯಾ 
ಬ್ಯಾಡ ಬ್ಯಾಡ  ಬ್ಯಾಡ ಬ್ಯಾಡ ಬ್ಯಾಡ ಬ್ಯಾಡಲೇ 
ಸಾಕೂ ನಂಗೆ ನೀ ಈ ಕ್ವಾಟಲೇ 

ಕಾಮಿಡಿ ಪಿಸು ಅನ್ಕೊಂಡಿದ್ಯಾ ಪಾಪ 
ಕೆರಳಸತ್ತಿದೀಯಾ ಒಳಗಿರೋ ನನ್ ಕ್ವಾಪ 
ಕಿಲಾಡಿ ಅಂದ್ರೂ ನಾನು ಕೇಡಿ ಲೇ 
ರೌಡಿಸಂ ಮಾಡಿರೋ ರೌಡಿ 
ನನ್ ತಾಳ್ಮೆನ್ ಟೆಸ್ತ ಮಾಡಬ್ಯಾಡ 
ನೀನ್ ಮೂತಿನ ಮತ್ತೆ ತೋರಿ ಬ್ಯಾಡ್ 
ಅಪ್ಪಿ ತಪ್ಪಿಕೂಡ  ಸಿಕ್ಕಬ್ಯಾಡ್ 
ಸಿಕ್ಕಬುಟ್ರು ಬೌ ಬೌ ಅಂತಾ ಕೂಗಬ್ಯಾಡ್ 
ಬ್ಯಾಡ ಬ್ಯಾಡ  ಬ್ಯಾಡ ಬ್ಯಾಡ ಬ್ಯಾಡ ಬ್ಯಾಡಲೇ 
ಸಾಕೂ ನಂಗೆ ನೀ ಈ ಕ್ವಾಟಲೇ 
--------------------------------------------------------------------------

ನಾನು ಮತ್ತು ಗುಂಡ (೨೦೨೦) - ಕವಲೊಡೆದ ನದಿ ಒಂದು 
ಸಂಗೀತ :ಕಾರ್ತಿಕ ಶರ್ಮಾ, ಸಾಹಿತ್ಯ : ರೋಹಿತ  ರಾಮನ, ಗಾಯನ : ಚಿನ್ಮಯಿ ಶ್ರೀಪಾದ ಅರುಣಾ ಕಾಮತ 

ಕವಲೊಡೆದ ನದಿ ಒಂದು ಮರಳಿ ಬರಸೆಳೆದು ಬಿಗಿದಪ್ಪಿದೆ ಬಂದು
ಮುನಿದೆದ್ದ ಮನ ಒಂದು ಮಿಡಿದು ಬೆರಳಿಡಿದು ಜೊತೆ ಗೂಡಿದೆ ಇಂದು

ಆನಂದಕ್ಕೂ ಸಂಭ್ರಮದ ಔತಣವಾ ಬಡಿಸುತಲಿದೆ ಬಂಧನವು
ಆ ಸ್ವರ್ಗಕ್ಕೂ ಸಂತಸದ ಸುಖಿಯಾ ಕಡಕೊಡುತಿದೆ ಈ ಪ್ರೇಮವೂ
ಕಾವ್ಯಕ್ಕೂ ಕಟ್ಟಲಾಗದ ಬಣ್ಣಕ್ಕೂ ಬೆತ್ತಲಾಗದ
ಸಂಖ್ಯೆಗೂ ಎಣಿಸಲಾಗದ ಅಂತ್ಯಕ್ಕೂ ಅಳಿಸಲಾಗದ
ಸುಂದರ ಅಮರ ಮಧುರ ಸುಮಧುರ ಈ ಸಂಸಾರ
---------------------------------------------------------------------------------

ನಾನು ಮತ್ತು ಗುಂಡ (೨೦೨೦) - ಮೌನ... ಮೌನ ಮಾತಿಗೂ ಮೌನವೇ ಬೇಕು 
ಸಂಗೀತ :ಕಾರ್ತಿಕ ಶರ್ಮಾ, ಸಾಹಿತ್ಯ : ರೋಹಿತ  ರಾಮನ, ಗಾಯನ : ವಾರಿಜಾಶ್ರೀ ವೇಣುಗೋಪಾಲ 

ಮೌನ... ಮೌನ ಮಾತಿಗೂ ಮೌನವೇ ಬೇಕು ಮೌನಕೇ ತಾನೇ ಸಾಕು
ಮೌನದಿ ಮಾತೇ ಮೂಕಾದಾಗ ಬಿಗು ಮೌನ
ಮೌನ ಮೌನ ಮೌನವಾಗೆಯ ಮಾತು ಆಡಲು ಮಾತ ನೀಡೆಯ
--------------------------------------------------------------------------------------------------------------------

ನಾನು ಮತ್ತು ಗುಂಡ (೨೦೨೦) - ಮೌನ... ಮೌನ ಮಾತಿಗೂ ಮೌನವೇ ಬೇಕು 
ಸಂಗೀತ :ಕಾರ್ತಿಕ ಶರ್ಮಾ, ಸಾಹಿತ್ಯ : ರೋಹಿತ ರಾಮನ, ಗಾಯನ : ಕಾರ್ತಿಕ ಶರ್ಮ 

ಮೌನ... ಮೌನ
ಮಾತಿಗೂ ಮೌನವೇ ಬೇಕು ಮೌನಕೆ ಕಾಣೇ ಸಾಕೂ 
ಮೌನವೇ ಮಾತು ಮುಖದ ಬಿಗುಮಾನ 
ಮೌನ ಮೌನ ಮೌನವಾಗೆಯ ಮಾತು ನೀಡಲು ಮಾತ ನೀಡೆಯ.... 
--------------------------------------------------------------------------------------------------------------------

ನಾನು ಮತ್ತು ಗುಂಡ (೨೦೨೦) - ಬೆಳಕೊಂದು ಕತ್ತಲಲ್ಲಿ ಕರಗೋಯ್ತು 
ಸಂಗೀತ :ಕಾರ್ತಿಕ ಶರ್ಮಾ, ಸಾಹಿತ್ಯ : ರೋಹಿತ ರಾಮನ, ಗಾಯನ : ಪ್ರೇಮ 

ಬೆಳಕೊಂದು ಕತ್ತಲಲ್ಲಿ ಕರಗೋಯಿತು 
ನಗುವೊಂದು ಮಗುವನ್ನು ಆಗಲೋಯಿತು 
ಎದೆಗೂಡಿನ ಉರಿಗೆ ಬೆಂಕಿಯು ಬಿತ್ತೂ 
ಹಸಿರ ಮನೆ ಉರಿದು ಬೂದಿ ಆಯಿತು 
ಅಯ್ಯೋ ತಪ್ಪೆಂದೂ ಭಗವಂತ ಅಳುತ ಮರೆಯಲಿ ಕುಳಿತ 
ನಾ ದೇವರು ಎಂಬುದನ್ನೇ ಮರೆತ 
ತನಗೆ ಕ್ಷಮೆ ಇಲ್ಲ ಎಂದು ಅರಿತ  
ಬೆಳಕೊಂದು ಕತ್ತಲಲ್ಲಿ ಕರಗೋಯಿತು 
ನಾ ನಾ.... ದರರೇ  ನಾ... ಓಓಓಓಓ ನಾನೀ .. ನಾ  

ಮೌನ ಒಂದೂ ಬಿಕ್ಕಳಿಸುತ ನಿಂತಿದ್ದೇ 
ಪ್ರಾಣ ಒಂದೂ ಜೀವ ಇದ್ದೂ ಸತ್ತಿದ್ದೇ 
ಬಂಧ ಒಂದೂ ವಿಧಿಯು ಕಾಡಿದ್ದು ನಕ್ಕಿದ್ದೇ 
ಬೆಂದೂ ನೊಂದ ಈ ಕರುವ ಕರಳು ಕೂಗಿದೇ 
ದೂರವಾಗಲೆಂದು ಕೂಡಿ ಹತ್ತಿರವಾದನೋ ಅವನೂ 
ಒಂಟಿಯಾಗಲೆಂದೂ ಜೋಡಿ ಸೇರಿಕೊಂಡನೋ ಇವನೂ 
ಹುಟ್ಟಿ ನೋಡೋ ದೇವ ಒಮ್ಮೆ ಜೀವ ಹೊತ್ತು ಭೂಮಿಯಲೀ 
ಬಿಟ್ಟೂ ಹೊಡಿ ಹೊಂಗೆ ತಾಳಲಾರೆ ನೋವ ಎನುತಲಿ 
ಬೆಳಕೊಂದು ಕತ್ತಲಲ್ಲಿ ಕರಗೋಯಿತು 
--------------------------------------------------------------------------------------------------------------------

No comments:

Post a Comment