ಮಾಲ್ಗುಡಿ ಡೇಸ್ ಚಲನಚಿತ್ರದ ಹಾಡುಗಳು
- ಭರವಸೆಯ ಬೆಳಕ ಬಿತ್ತಿ
- ಊರೊಂದು ಕರೆದಂತೆ ಹಿಂದೇನು ಮರೆತಂತೆ
- ಕನಸಿನ ಕನ್ಯೆಯೇ ಕಣ್ಣಮುಂದೆ
- ನೆನಪಿನ ದೋಣಿಯಲಿ ನಾವೆಲ್ಲ ನಾವಿಕರು
- ಕಣ್ಣೀರು ಕೆನ್ನೆಯೇ ಮೇಲೆ
- ನೂರು ನೂರು ಆಸೆ ಹೊತ್ತ ಕಣ್ಣಲ್ಲಿ
- ಭರವಸೆಯ ಬೆಳಕ ಬಿತ್ತಿ (ಹೆಣ್ಣು)
- ಹೂ ಮಳೆಗೆ ಮನಸು ಮಾಗಿದೆ
ಮಾಲ್ಗುಡಿ ಡೇಸ್ (೨೦೨೦) - ಭರವಸೆಯ ಬೆಳಕ ಬಿತ್ತಿ
ಸಂಗೀತ : ಗಗನ ಬಡೇರಿಯ, ಸಾಹಿತ್ಯ : ಕಿಶೋರ ಮೂಡುಬಿದಿರೆ, ಗಾಯನ : ರಘು ದೀಕ್ಷಿತ
ಭರವಸೆಯ ಬೆಳಕ ಬಿತ್ತಿ ಕನಸ.. ಕುದುರೆ ಹತ್ತಿ
ತಿರುವು ದಾಟಿ ಬೆಟ್ಟ ಏರಿ.. ತುದಿಯ ಬೇಗ ಮುಟ್ಟಿ
ಗೆಲುವ... ನಗೆಯ ಬೀರಿ ಜಗವೆಲ್ಲ ಕಾಲ ಕೆಳಗೆ ಸೇರಿ
ಅಮ್ಮ ನಿನ್ನ ನೆನಪೊಂದೇ ಸ್ಮೃತಿಯೊಳಗೇ
ನನ್ನೊಳಗಿನ ಮೌನ ನನ್ನುಸಿರಿನ ಧ್ಯಾನ
ನೀನೇ ಧೈರ್ಯ.. ನೆರಳಾಗೋ ಶೌರ್ಯ
ಜಗ ಬೆಳಗೋ ಹಣತೆ ನೀನಮ್ಮಾ...
ದೇವಕಿಗೆ ಕೃಷ್ಣ ದೇವರಲ್ಲಾ.. ಕೌಶಲ್ಯಗೇ ರಾಮ ದೇವರಲ್ಲಾ
ದೇವರನ್ನೇ ಹೆತ್ತ ಅಮ್ಮ ದೇವರಲ್ಲವೇ..
ಮತ್ತೊಂದು ಬಾಲ್ಯ ಬೇಡುತಾ ಬೆಚ್ಚನೆ ಮಡಿಲಲ್ಲಿ ಮಗುವಾಗುವೆ ನಾನು ಅಮ್ಮಾ
ಅಮ್ಮ ನಿನ್ನ ಬಾಳಲ್ಲಿ ನಗುವಾಗುವೇನಮ್ಮಾ
ನನ್ನ ಅಮ್ಮಾ ನನ್ ಅಮ್ಮಾ ಜಗ ಕಾಯೋ ದೈವ
ನನ್ನ ಜೀವ ನೀನೇ ನನ್ನ ಭಾವ ನೀನೇ
ನೀನೇ ಧೈರ್ಯ ನೆರಳಾಗೋ ಶೌರ್ಯ ಜಗ ಬೆಳಗೋ ಹಣತೆ ನೀನಮ್ಮಾ...
ಧೀರನ... ಅಮ್ಮಾ ಅಮ್ಮಾ ಅಮ್ಮಾ ಅಮ್ಮಾ
---------------------------------------------------------------------------------------------------------------------
ಮಾಲ್ಗುಡಿ ಡೇಸ್ (೨೦೨೦) - ಊರೊಂದು ಕರೆದಂತೆ ಹಿಂದೇನು ಮರೆತಂತೆ
ಸಂಗೀತ : ಗಗನ ಬಡೇರಿಯ, ಸಾಹಿತ್ಯ : ಕಿಶೋರ ಮೂಡುಬಿದಿರೆ, ಗಾಯನ : ರಘು ದೀಕ್ಷಿತ, ವೈಷ್ಣವಿ ರವಿ
ಊರೊಂದು ಕರೆದಂತೆ ಹಿಂದೇನೂ ಮರೆತಂತೇ
ದಾರಿಯು ಹಸನಾಗಿದೇ ಮುಂಜಾನೆ ರಂಗೇರಿ
ನಸುಕಿನ ಮಂಜಲ್ಲಿ ಕ್ಷಣಗಳು ಹಿಗ್ಗಲ್ಲಿ
ನೆನಪಿನ ಹಂಗಲೀ ಪಯಣವು ಸಾಗಲೀ ...
ನಿನ್ನೆಯ ಕವಿತೆಗಳ ಸಾಲು ಹೊಮ್ಮಿದೆ ಹಾಡಾಗಿ
ಬರೆದಿರೋ ಕಥೆಗಳು ಊರ ಮುಗಿಲನು ಬೇಡಿದೆ
ಅವಿತಿರೋ ಮಳೆಹನಿ ಬಯಸಲು ಊರ ಪ್ರೇಮದಿ
ಭೂಮಿ ತಬ್ಬಿ ನಿಂತ ಮಾರ ಏನೋ ಹೇಳಿದಂತೆ
ಏನೇ ಬಂದರೂನು ಬೆಳಿತಿರು ಹೀಗೆ ಕಾದ ಮೌನ ಹಾಡಾಗಿ
ಮಳೆಯಾದ ಹಾಗೆ ಊರದಾರಿಯು ಕರೆದಿದೆ
ಹೆಣ್ಣು : ಭೂಮಿ ತಬ್ಬಿ ನಿಂತ ಮಾರ ಏನೋ ಹೇಳಿದಂತೆ
ಹೆಣ್ಣು : ಭೂಮಿ ತಬ್ಬಿ ನಿಂತ ಮಾರ ಏನೋ ಹೇಳಿದಂತೆ
ಏನೇ ಬಂದರೂನು ಬೆಳಿತಿರು ಹೀಗೆ
ಊರೊಂದು ಕರೆದಂತೆ ಹಿಂದೇನೂ ಮರೆತಂತೆ
ಗಂಡು : ದಾರಿಯು ಹಸನಾಗಿದೆ.... ಮುಂಜಾನೆ ರಂಗೇರಿ
ನಸುಕಿನ ಮಂಜಲ್ಲಿ.. ಕನಸುಗಳು ಹಿಗ್ಗಲಿ...
---------------------------------------------------------------------------------------------------------------------ಮಾಲ್ಗುಡಿ ಡೇಸ್ (೨೦೨೦) - ಕನಸಿನ ಕನ್ಯೆಯೇ ಕಣ್ಣಮುಂದೆ
ಸಂಗೀತ : ಗಗನ ಬಡೇರಿಯ, ಸಾಹಿತ್ಯ : ಕಿಶೋರ ಮೂಡುಬಿದಿರೆ, ಗಾಯನ : ಸಂಜಿತ ಹೆಗಡೆ, ನಿನಾದ ನಾಯಕ
ಕನಸಿನ ಕನ್ಯೆ ಕಣ್ಣ್ಮುಂದೆ.. ನೋಡುತ ನಿಂತೇ ಮಗುವಿನಂತೇ
ಪರಿಚಿಯ ಮೀರಿ ಪ್ರೇಮವಾಗಿ ಕೂಡುತ ಹೆಜ್ಜೆ ನೆಡೆದೆ
ಸೆಳೆದು ಒಲವೊಂದು ಹೃದಯ ಸೋಲುತ
ಮಿಡಿದು ನವಗಾನ ಗಮನ ನಿನ್ನದೇ
ನೀನಾದೇ ನೀನಾದೇ ನನ್ನಲೀ ನನ್ನಲೀ ಬೆರೆತು
ನಾನಾದೇ ನಾನಾದೇ ನಿನ್ನಲೀ ನಿನ್ನಲೀ ಅರಿತು
ಆ ನಿನ್ನ ನಗುವು ಆ ನಿನ್ನ ನಯನ ಅರಿಯದೆ ಶುರುವಾಗಿರುವ ಈ ಪಯಣ ಆ ಮುಗುಳು ನಗೆಯೇ ಈಗ ಕಾರಣ
ನಿನ್ನ ಆಲೋಚನೆಯಲ್ಲಿಯೇ ಈ ಜೀವನ ಹೇ... ಎಲ್ಲೇ ಹೋಗಲೀ ..
ಬಂದು ನಿಲ್ಲುವೆ ನೀ ನನ್ನ ಹಾದಿಲೀ ಹೂ... ಏನೇ ಮಾಡಲೀ
ಕೂತುಕೊಂಡಿರುವೇ ನೀ ನನ್ನ ಎದೆಯಲ್ಲಿ
ತಂಗಾಳಿ ಹಾಗೆ ನೀ ನನ್ನ ಸೋಕಿ ಮನಸೆಲ್ಲಾ ಹೀಗೆ ಇನ್ನೇನು ಬಾಕಿ
ಮಳೆಯಾದೆ ನೀನು ಹಸಿರಾದೆ ನಾನು ಪ್ರೀತಿಯ ಮುಂಜಾನೆ ಶುರುವಾಯಿತು
ಸಾಹಿತ್ಯ ನೀನು ಸಂಗೀತ ನಾನು ಇಂಪಾದ ನಾಳೆಗಳು ನಮಗಿಲ್ಲವೇನೂ
ಸಜನಾ ಅಭಿಜಾ ಸಜನಾ ಅಭಿಜಾ ಸನಿಹ ಮಧುರ ಸಲುಗೆ ಸದರ
ಇಳಿಜಾರು ಮನದಲ್ಲಿ ನಿನ್ನದೇ ಚರ್ಚೆಯು ಮುದ್ದಿಸು
ಕಿರುಬೆರಳ ಕೈಚಾಚು ಹಿಡಿಯುವೆ ನಡೆಯುವೆ ಪ್ರಿತಿಸೂ ...
---------------------------------------------------------------------------------------------------------------------
ಮಾಲ್ಗುಡಿ ಡೇಸ್ (೨೦೨೦) - ನೆನಪಿನ ದೋಣಿಯಲಿ ನಾವೆಲ್ಲ ನಾವಿಕರು
ಸಂಗೀತ : ಗಗನ ಬಡೇರಿಯ, ಸಾಹಿತ್ಯ : ಗಾಯನ : ಮಾಧುರಿ ಶೇಷಾದ್ರಿ
ಇದಾದಕೋ ಅದಾದಕೋ ತೇಲಾಡಿದವೋ
ನಿನ್ನೆಯ ದಾರಿಯನು ಹುಡುಕುತ ಹೊರಟೆವೋ
ತೆರೆದಿಡುತ ಒಂದೊಂದೇ ಪುಟವನ್ನೂ
ಮಾಯೆಯ ಬಲೆಯಲ್ಲಿ ಕಾಡುವ ನೆನಪೋ
ಭಾವದ ನೆನೆಪಲ್ಲಿ ಅಲೆಯುವ ನೆನಪೋ
ಮಾಯೆಯ ಬಲೆಯಲ್ಲಿ ಕಾಡುವ ನೆನಪು
ಪ್ರೀತಿಯ ಬಲೆಯಲಿ ನಮ್ಮ ಕಾಡೋ ನೆನಪೋ
ಚಂದ ಬಾಲೇ ಚೆಂದ ಚೂರು ಖುಷಿಯಿರುವಾಗ
ಬಂದ ಎಲ್ಲರ ಬಂಧ ಬೇಕು ಉಸಿರಿರುವ ತನಕ
ಸಣ್ಣ ಪುಟ್ಟ ಕುತುಹೂಲ ಮುದ್ದಾದ ಮನಸೋ.. ಹೋಯ್ ...
ಆಟಕ್ಕುಂಟು ಲೆಕ್ಕಕ್ಕಿಲ್ಲ ಅರಿಯದ ವಯಸ್ಸೂ
ಇಟ್ಟು ಬಂದ ಹೆಜ್ಜೆಗಳ ಗುರುತುಗಳೆಲ್ಲಾ ಹುಡುಕಿ
ಬಿಟ್ಟು ಹೋದ ಪ್ರಯಣವ ಮತ್ತೇ ನೀ ಅರಸು
ನೆನಪಿನ ದೋಣಿಯಲಿ ನಾವೆಲ್ಲ ನಾವಿಕರು
ಇದಾದಕೋ ಅದಾದಕೋ ತೇಲಾಡಿದವೋ
---------------------------------------------------------------------------------------------------------------------
ಮಾಲ್ಗುಡಿ ಡೇಸ್ (೨೦೨೦) - ಕಣ್ಣೀರು ಕೆನ್ನೆಯೇ ಮೇಲೆ
ಸಂಗೀತ : ಗಗನ ಬಡೇರಿಯ, ಸಾಹಿತ್ಯ : ಕಿಶೋರಿ ಮೂಡುಬಿದಿರೆ ಗಾಯನ : ಸಂಜಿತ ಹೆಗಡೆ
ಕಣ್ಣೀರೂ ಕೆನ್ನೆಯ ಮೇಲೆ ಕಾಣದಂತೆ ಕೈಯ್ಯ ಬೆರಳ
ಮೊದಲ ಮೌನ ಮಾತು ಹುಡುಕಾಡಿ ಈ ತೀರವನ್ನ ಕ್ಷಮಿಸಂದೂ ಬೇಡಿ
ಮರುಜನ್ಮ ಮತ್ತೆ ಮರಳಿ ಜನಿಸುವೆ ಗೆಳೆಯನಾಗಿ
ಸಿಗುವೆ ಎಲ್ಲ ಮನ್ನಿಸು ಸಜನಾ... (ಸಜನಾ)
ಕಥೆಯನು ಬರೆದ ಲೇಖನಿ ಮರೆತಂತೆ ಮೊದಲು ಸಾಲು
ರತಿಯಾದ ನೆನಪ ಬಣ್ಣ ಮಾಸಿ ಹೊರೆಯಾಗಿ ಹರಿದು ಸಾವು
ಮರೆತ ಉಸಿರೊಂದು ತಾನಾಗಿ ಏನು ಅನ್ನೂ
ಇರಲಿ ಕೊನೆಯ ಸಾಲು ಮತ್ತೊಮ್ಮೆ ಸಿಗುವೇನೆಂದು
ಕಣ್ಣೀರು ಕೆನ್ನೆಯ ಮೇಲೆ ಕಾದಂತೆ ಕೈಯ್ಯ ಬೆರಳ
ಕೊನೆಯ ಮೌನ ಮಾತು ಮತ್ತೊಮ್ಮೆ ಸಿಗುವೇನೆಂದೂ
---------------------------------------------------------------------------------------------------------------------
ನೂರು ನೂರು ಆಸೆ ಹೊತ್ತ ಕಣ್ಣಲ್ಲಿ ಎಂದು ನಿನ್ನ ಗುರಿಯೇ ಕಾಣಲಿ..
ಮಾಲ್ಗುಡಿ ಡೇಸ್ (೨೦೨೦) - ನೂರು ನೂರು ಆಸೆ ಹೊತ್ತ ಕಣ್ಣಲ್ಲಿ
ಸಂಗೀತ : ಗಗನ ಬಡೇರಿಯ, ಸಾಹಿತ್ಯ : ಪ್ರಮೋದ ಮಾರವಂತೆ ಗಾಯನ : ಸುಪ್ರಿಯ ಲೋಹಿತ, ಮಧುರಗೌಡ
ನೂರು ನೂರು ಆಸೆ ಹೊತ್ತ ಕಣ್ಣಲ್ಲಿ ಎಂದು ನಿನ್ನ ಗುರಿಯೇ ಕಾಣಲಿ..
ನಗುವನು ನೀಡು ಬಾ ಕಚ್ಚುಗುಳಿ ಜೀವನ
ಮರೆತರೆ ನೋವನು ಅನುಕ್ಷಣ ನೂತನ
ನಡೆ ನಡೆ ಸಮಾನವಾಗಿ ಸಿಹಿ ಕಹಿ ಸಮಾನವಾಗಿ
ಬೆವರನು ಹರಿಸಿ ಗೆಲ್ಲುವುದೇ ಮಜ
ಒಳಿತಿಗೆ ಸನಿಹವಾಗಿ ಕೆಡುಕಿಗೆ ವಿರೋಧವಾಗಿ
ಶ್ರಮಿಸು ಕೊಡದೇ ರಜಾ ನೀ ಅರಳುವ ಹೂವಾಗೂ
ಮಳೆಹನಿ ನೀರಾಗು ಸುಡುವ ಕಿಡಿಯೇ ಆಗು
ಸೂರ್ಯನ ಬೆಳಕಾಗು ಚಂದ್ರನ ಹೊಳಪಾಗು ಹೊಳೆಯ ತಾರೆಯಾಗೂ ..
ನೂರು ನೂರು ಆಸೆ ಹೊತ್ತ ಕಣ್ಣಲ್ಲಿ ಎಂದು ನಿನ್ನ ಗುರಿಯೇ ಕಾಣಲಿ..
ಹೆಣ್ಣು ಅಂದ್ರೆ ನೆಗಲೇಟ ಮಾಡಬೇಡಿ ನೀವೂ
ಸಾಧಿಸೋರ ಹಿಂದೆ ನಿಲ್ಲುವಳೂ ಹೆಣ್ಣು
ಹೆಣ್ಣು ಖಾಲಿ ಕೂತರೇ ತಿನ್ನಬೇಕು ಮಣ್ಣೂ
ಶಕ್ತಿಗೇನೂ ಕಮ್ಮಿ ಯುಕ್ತಿಗೇನೂ ಕಮ್ಮಿ
ಮನಸೂ ಮಾಡಿ ನಿಂತರೇ ಗಂಡು ಕೂಡ ಡಮ್ಮಿ
ತೊಟ್ಟಿಲು ತೂಗೋ ಕೈಗಳೆಂದೂ ತುಂಬಾ ಸ್ಟ್ರಾಂಗೂ..
ಬೀಳುತಾವೇ ಗೂಸಾ ಆಗೋರಿಗೆ ರಾಂಗೂ
ನೀ ಕಾಣದೇನೆ ನೆನಪಿಗಿಲ್ಲ ಜೀವನೇ
ನೀ ಕಾಣದೇನೆ ನೆನಪಿಗಿಲ್ಲ ಜೀವನೇ
ಈ ಮೌನದಲ್ಲೂ ಕೇಳೋ ಮಾತು ನಿಂದೇನೇ ..
ಹರಸುವೇನು ದೀನನ ನಾನೂ
ನಿನ್ನ ಕನಸಿನ ದಾರಿ ಮರಳಿಸು ಬದುಕನ್ನೂ
ನನ್ನ ಉಸಿರನು ಸೇರಿ ನಗುವನು ನೀಡುವ ಕಚುಗುಳಿ ಜೀವನ
ಮರೆತರೇ ನೋವನು ಅನುಕ್ಷಣ ನೂತನ
ನೂರು ನೂರು ಆಸೆ ಹೊತ್ತ ಕಣ್ಣಲ್ಲಿ ಎಂದು ನಿನ್ನ ಗುರಿಯೇ ಕಾಣಲಿ..
ನೂರು ನೂರು ಆಸೆ ಹೊತ್ತ ಕಣ್ಣಲ್ಲಿ ಎಂದು ನಿನ್ನ ಗುರಿಯೇ ಕಾಣಲಿ..
---------------------------------------------------------------------------------------------------------------------
ಮಾಲ್ಗುಡಿ ಡೇಸ್ (೨೦೨೦) - ಭರವಸೆಯ ಬೆಳಕ ಬಿತ್ತಿ
ಸಂಗೀತ : ಗಗನ ಬಡೇರಿಯ, ಸಾಹಿತ್ಯ : ಕಿಶೋರ ಮೂಡುಬಿದಿರೆ, ಗಾಯನ : ಅಶ್ವಿನಿ ಶರ್ಮ
ಭರವಸೆಯ ಬೆಳಕ ಬಿತ್ತಿ ಕನಸ.. ಕುದುರೆ ಹತ್ತಿ
ತಿರುವು ದಾಟಿ ಬೆಟ್ಟ ಏರಿ.. ತುದಿಯ ಬೇಗ ಮುಟ್ಟಿ
ಗೆಲುವ... ನಗೆಯ ಬೀರಿ ಜಗವೆಲ್ಲ ಕಾಲ ಕೆಳಗೆ ಸೇರಿ
ಅಮ್ಮ ನಿನ್ನ ನೆನಪೊಂದೇ ಸ್ಮೃತಿಯೊಳಗೇ
ನನ್ನೊಳಗಿನ ಮೌನ ನನ್ನುಸಿರಿನ ಧ್ಯಾನ
ನೀನೇ ಧೈರ್ಯ.. ನೆರಳಾಗೋ ಶೌರ್ಯ
ಜಗ ಬೆಳಗೋ ಹಣತೆ ನೀನಮ್ಮಾ...
ದೇವಕಿಗೆ ಕೃಷ್ಣ ದೇವರಲ್ಲಾ.. ಕೌಶಲ್ಯಗೇ ರಾಮ ದೇವರಲ್ಲಾ
ದೇವರನ್ನೇ ಹೆತ್ತ ಅಮ್ಮ ದೇವರಲ್ಲವೇ..
ಮತ್ತೊಂದು ಬಾಲ್ಯ ಬೇಡುತಾ ಬೆಚ್ಚನೆ ಮಡಿಲಲ್ಲಿ ಮಗುವಾಗುವೆ ನಾನು ಅಮ್ಮಾ
ಅಮ್ಮ ನಿನ್ನ ಬಾಳಲ್ಲಿ ನಗುವಾಗುವೇನಮ್ಮಾ
ನನ್ನ ಅಮ್ಮಾ ನನ್ ಅಮ್ಮಾ ಜಗ ಕಾಯೋ ದೈವ
ನನ್ನ ಜೀವ ನೀನೇ ನನ್ನ ಭಾವ ನೀನೇ
ನೀನೇ ಧೈರ್ಯ ನೆರಳಾಗೋ ಶೌರ್ಯ ಜಗ ಬೆಳಗೋ ಹಣತೆ ನೀನಮ್ಮಾ...
ಧೀರನ... ಅಮ್ಮಾ ಅಮ್ಮಾ ಅಮ್ಮಾ ಅಮ್ಮಾ
---------------------------------------------------------------------------------------------------------------------ಮಾಲ್ಗುಡಿ ಡೇಸ್ (೨೦೨೦) - ಹೂ ಮಳೆಗೆ ಮನಸು ಮಾಗಿದೆ
ಸಂಗೀತ : ಗಗನ ಬಡೇರಿಯ, ಸಾಹಿತ್ಯ : ಕಿಶೋರ ಮೂಡುಬಿದಿರೆ, ಗಾಯನ : ಅಶ್ವಿನಿ ಶರ್ಮ
ಹೂ ಮಳೆಗೆ... ಮನಸು ಮಾಗಿದೆ ಈ ಧಾರೆಯ ಚೆಲುವು ಮೀರಿದೆ
ಈ ಸ್ನೇಹ ಸಿಹಿ ಇದೆ ಮೌನದಲೂ ಮಾತಿದೇ
ಮಳೆಹನಿ ಚಿಟಪಟ ಮುಗಿಲ ಸ್ನೇಹ ನಾದ
ಮನಸನು ಬೆಸೆಯುವ ಮಳೆಯೇ ಒಂದು ವೇದ
ಕೊನೆಯ ಜನುಮ ಸಿಗುವ ಪುಣ್ಯ ಒಲಿದ ಸ್ನೇಹ ನಾನೇ ಧನ್ಯ
ನೀನಾಡೋ ಮಾತೆಲ್ಲಾ ಮಳೆ ಅಂತೇ ಜಿನುಗಿ
ಮಧುವಾಗೇ ಮನದಲ್ಲಿ ಹನಿಯಂತೆ ಮಿನುಗಿ
ನನ್ನೆಲ್ಲ ಕ್ಷಣಗಳಿಗೆ ನೀನಿನ್ನೂ ಗೆಳೆಯ
ಕೊನೆಯವರೆಗೂ ಕಾಯುವೇನು ನಿನಗಾಗೇ ಹೃದಯ
ಸುರಿಯೇ.. ನೀ ಮಳೆ ಮನದ ತೆರೆಯ ಸರಿಯೇ..
ಧುಮುಕಿ ನೀ ಜಾರಿವೇ .. ಕೊಳಲ ನಾದ ಮರೆಯೇ
ಬರೆದಂತ ಪದಗಳಲಿ ನಿನ್ನ ಖುಷಿಯೇ ಮೊದಲೂ
ಮಧುವಂತ ಈ ಸ್ನೇಹಕೇ ಸರಿಗಮಗಳೇ ತೋಡರೂ
ಹೂ ಮಳೆಗೆ... ಮನಸು ಮಾಗಿದೆ ಈ ಧಾರೆಯ ಚೆಲುವು ಮೀರಿದೆ
ಈ ಸ್ನೇಹ ಸಿಹಿ ಇದೆ ಮೌನದಲೂ ಮಾತಿದೇ
---------------------------------------------------------------------------------------------------------------------
No comments:
Post a Comment