1469. ಜಂಟಲಮನ್ (೨೦೨೦)



ಜಂಟಲಮನ್ ಚಲನಚಿತ್ರದ ಹಾಡುಗಳು 
  1. ಮರಳಿ ಮನಸಾಗಿದೆ ಸಾಗಿದೆ ನಿನ್ನಾ ಹೃದಯಕೆ..
  2. ಅರೆರೇ ಶುರುವಾಯಿತು ಹೇಗೆ 
  3. ಎದ್ದೇಳೂ ಭಾರತೀಯ 
  4. ನಡುಗುತಿದೆ ಎದೆಗೂಡು  
ಜಂಟಲಮನ್ (೨೦೨೦) - ಮರಳಿ ಮನಸಾಗಿದೆ ಸಾಗಿದೆ ನಿನ್ನಾ ಹೃದಯಕೆ..
ಸಂಗೀತ: ಅಜನೀಶ ಲೋಕನಾಥ, ಸಾಹಿತ್ಯ: ನಾಗಾರ್ಜುನಶರ್ಮ,ಕಿನ್ನಾಳ ರಾಜ, ಗಾಯನ:ಸಂಜಿತ ಹೆಗಡೆ, ಸಿ.ಆರ್.ಬಾಬ್ಬಿ     

ಮರಳಿ ಮನಸಾಗಿದೆ ಸಾಗಿದೆ ನಿನ್ನಾ ಹೃದಯಕೆ..
ಪಯಣ ಶುರುವಾಗಿದೆ ಕೋರಿದೆ ಪ್ರೀತಿ ಕಾಣಿಕೆ..
ಮತ್ತೆ ಮತ್ತೆ ಮನಸು ಶರಣಾದ ಹಾಗಿದೆ
ಕಿರು ಬೆರಳು ಬಯಸಿದೆ ಸಲುಗೆ ಇರಬೇಕು ಜೊತೆಯಾಗಿ ನಿನ್ನಲಿ ನಾ ..
ಮಿಂಚುತ್ತಿದೆ.. ಮಿಂಚುತ್ತಿದೆ.. ನಿನ್ನಿಂದ ಕನಸೆಲ್ಲಾ ಹೆಚ್ಚುತ್ತಿದೆ!
ಮಿಂಚುತ್ತಿದೆ.. ಇದು ಮಿಂಚುತ್ತಿದೆ.. ಹೃದಯಕೆ ಬಿರುಸಾಗಿ ಬಂತು ಕಾಣೆ!
ಮರಳಿ ಮನಸ್ಸಾಗಿದೆ ಸಾಗಿದೆ ನಿನ್ನಾ ಹೃದಯಕೆ..
ಪಯಣ ಶುರುವಾಗಿದೆ ಕೋರಿದೆ ಪ್ರೀತಿ ಕಾಣಿಕೆ..

ಸಂಭ್ರಮ ದುಪ್ಪಟ್ಟು ಆದಂತ್ತಿದೆ ನೀನೊಂಥರಾ ನಯನ ಅದ್ಭುತ.. ಹೈ..
ಆಗಮ.. ಉಸಿರೊಂದು ಉಸಿರಾಗಿದೆ
ತಪ್ಪಾದರೆ ಬಚ್ಚಾಯಿಸು, ಪ್ರೀತಿಲಿ ಗೂರಾಯಿಸು ಹಗಲೆ ಹಗೆಯದ ಈ ಜೀವಕೆ
ಬೆಳಕು ನೀನಾಗಿಯೆ .. ಬದುಕು ಕುರುಡಾದ ಈ ಮೋಸಕೆ ಉಸಿರು ನೀನಾಗಿಯೆ ..
ಮತ್ತೆ ಮತ್ತೆ ಮನಸು ಶರಣಾದ ಹಾಗಿದೆ ಕಿರು ಬೆರಳು ಬಯಸಿದೆ ಸಲುಗೆ
ಇರಬೇಕು ಜೊತೆಯಾಗಿ ನಿನ್ನಾಲಿ ನಾ ..
ಮಿಂಚುತ್ತಿದೆ.. ಮಿಂಚುತ್ತಿದೆ.. ನಿನ್ನಿಂದ ಕನಸೆಲ್ಲಾ ಹೆಚ್ಚುತ್ತಿದೆ!
ಮಿಂಚುತ್ತಿದೆ.. ಇದು ಮಿಂಚುತ್ತಿದೆ.. ಹೃದಯಕೆ ಬಿರುಸಾಗಿ ಬಂತು ಕಾಣೆ!

----------------------------------------------------------------------------------------------------------

ಜಂಟಲಮನ್ (೨೦೨೦) - ಅರರೇ ಶುರುವಾಯಿತು ಹೇಗೆ 
ಸಂಗೀತ: ಅಜನೀಶ ಲೋಕನಾಥ, ಸಾಹಿತ್ಯ: ಜಯಂತ ಕಾಯ್ಕಿಣಿ, ಗಾಯನ: ವಿಜಯ ಪ್ರಕಾಶ 

ಅರೆರೇ ಶುರುವಾಯಿತು ಹೇಗೆ ಪದವೇ ಸಿಗದಾಯಿತು ಹೇಗೆ 
ಹೃದಯ ಕಳುವಾಯಿತು ಹೇಗೆ ಒಂದು ಮಾತು ಆಡದೇ ... 

ಮೊದಲೇ ಬೆಳಗಾಯಿತು ಹೇಗೆ ಕನಸೇ ಎದುರಾಯಿತು ಹೇಗೆ 
ಋತುವೇ ಬದಲಾಯಿತು ಹೇಗೆ ಹಿಂದೆ ಮುಂದೆ ನೋಡದೇ ... 

ಕಣ್ಣಲ್ಲೇ ನೂರು ಮಾತು ಆಡುತ ಮುಂದೆ ಕೂತು 
ಜೀವದಲ್ಲಿ ಛಾಪು ಹೀಗೆ ಬೀರಿಲ್ಲಾ ಇನ್ನ ಯಾರು 
ಆಗಿದೆ ಜೀವ ಹೂವು ಆದಾದ್ರೂ ಏನು ನೋವು 
ಭಾವಗಳ ಕಾಟ ಹೀಗೆ ನೀನಿಲ್ಲ ಇನ್ನ್ಯಾರು 
ಆಗಿದೆ ಜೀವ ಹೂವು ಆದಾದ್ರೂ ಏನು ನೋವು 
ಭಾವಗಳ ಕಾಟ ಹೀಗೆ ನೀನಿಲ್ಲ ಇನ್ನ್ಯಾರು 

ಹೂಂ...  ತಂಗಾಳಿ ಬೀಸೋವಾಗ ಎಲ್ಲೆಲ್ಲೂ ನಿಂದೆ ಮಾರ್ಧನಿ 
ಗುಟ್ಟಾಗಿ ಕೂಡಿಸಿಟ್ಟ ಈ ಪ್ರೀತಿ ಒಂದೇ ಠೇವಣಿ 
ನೀ ಎಲ್ಲೇ ಇದ್ದರು ಅಂತರಂಗದಿ ಚಿತ್ರ ಮೂಡಿದೆ 
ಈ ಜೀವ ನಿನ್ನನ್ನು ಸಂತೆಯಲ್ಲಿಯೂ ಪತ್ತೆ ಮಾಡಿದೆ 
ನಾ ಹೇಗೆ ಇರಲೀ ಹೇಳು ನೀನು ಮುದ್ದು ಮಾಡದೇ 
ಕಣ್ಣಲ್ಲೇ ನೂರು ಮಾತು ಆಡುತ ಮುಂದೆ ಕೂತು 
ಜೀವದಲ್ಲಿ ಛಾಪು ಹೀಗೆ ಬೀರಿಲ್ಲಾ ಇನ್ನ ಯಾರು 
ಜೀವ ಹೂವು ಏನು ನೋವು ಭಾವಗಳ ಕಾಟ ಹೀಗೆ 
ನೀನಿಲ್ಲ ಇನ್ನ್ಯಾರು 
----------------------------------------------------------------------------------------------------------

ಜಂಟಲಮನ್ (೨೦೨೦) - ಎದ್ದೇಳೋ ಭಾರತೀಯ
ಸಂಗೀತ: ಅಜನೀಶ ಲೋಕನಾಥ, ಸಾಹಿತ್ಯ: ಯೋಗರಾಜ ಭಟ್ಟ, ಗಾಯನ: ಆಂಥೋನಿ ದಾಸನ್

ಎದ್ದೇಳೊ ಭಾರತೀಯ ಅರೆ ಎದ್ದೇಳೋ ಭಾರತೀಯ
ಎದ್ದೇಳು ಅಂತ ದೊಡ್ಡೋರ್ ಹೇಳಿದ್ರು
ಎಸ್ಟೋತ್ತಿಗೇಳಬೇಕು ಹೇಳಲಿಲ್ಲ ಅದಕಾಗೆ ನಮ್ ಹುಡ್ಗ ಏಳಲಿಲ್ಲ…….
ಎದ್ದೇಳೋ ಭಾರತೀಯ ಅರೆ ಎದ್ದೇಳೋ ಭಾರತೀಯ
ಅರೆ ಎದ್ದೇಳೋ ಭಾರತೀಯ
ಅರೆ ಎದ್ದೇಳೋ ಭಾರತೀಯ

ಏಳೆಂಟು ತಾಸು ನಿದ್ದೆ ಮಾಡೊರ್ಗೆ ಡಾಕ್ಟರೇ ಹೇಳುತ್ತಾರಪ್ಪ
ಆದ್ರೆ ನಮ್ ಹೀರೊ ಹದಿನೆಂಟು ಗಂಟೆ ಬಿದ್ಕೊಂಡೆ ಇರ್ತಾನೆ ಈ ಭೂಪ
ಎದ್ದೇಳೋ ಭಾರತೀಯ ಜೆಂಟಲ್ ಮ್ಯಾನ್ ಕುಂಬಕರ್ಣ ಮಲ್ಗವ್ನಂತೆ ಸುಮ್ಕಿರಣ್ಣ 
ಅರೆ ಎದ್ದೇಳೋ ಭಾರತೀಯ ಜೆಂಟಲ್ ಮ್ಯಾನ್ ಕುಂಬಕರ್ಣ
ಮಲ್ಕಂಡವ್ನೆ ಸುಮ್ಕಿರಣ್ಣ

ಮೊಬೈಲ್ ಫೋನ್ ಬಂದಮ್ಯಾಲೆ ನಿದ್ದೆಯು ಸತ್ತು ಹೋಗಿದೆ
ಮೂವತ್ತಕ್ಕೆ ಸಾಯೋದಕ್ಕೆ ಜೆನ್ ರೇಷನ್ ರೆಡಿಯಾಗಿದೆ
ಪರಪಂಚ ರೆಸ್ಟಿಲ್ದೆ ಸುತ್ತೋವಾಗ ಇಲ್ಲೊಬ್ಬ ಮಲ್ಗವ್ನೆ ನೋಡ್ರೋ
ಬ್ಯಾಂಕಲ್ಲಿ ಸಾಲನ ಕೇಳೋತರ ನಿದ್ದೆ ಸಾಲ ಕೊಡ್ತಾನ ಕೇಳ್ರೋ
ಎದ್ದೇಳೋ ಜೆಂಟಲ್ ಮ್ಯಾನ್ ಕುಂಬಕರ್ಣ ಮಲ್ಕಂಡವ್ನೆ ಸುಮ್ಕಿರೋ…. 
ಅರೆ ಎದ್ದೇಳೋ….. ಜೆಂಟಲ್ ಮ್ಯಾನ್ ಕುಂಬಕರ್ಣ ಮಲ್ಕಂಡವ್ನೆ ಸುಮ್ಕಿರಣ್ಣ
ಏಳೆಂಟು ತಾಸು ನಿದ್ದೆ ಮಾಡೋಕೆ ಡಾಕ್ಟರೆ ಹೇಳುತ್ತಾರಪ್ಪ 
ಆದ್ರೆ ನಮ್ ಹೀರೊ ಹದಿನೆಂಟು ಗಂಟೆ ಬಿದ್ಕೊಂಡೆ ಇರ್ತಾನೆ ಈ ಭೂಪ
ಎದ್ದೇಳೋ ಭಾರತೀಯ ಅರೆ ಎದ್ದೇಳೋ ಭಾರತೀಯ
ಅರೆ ಎದ್ದೇಳೋ ಭಾರತೀಯ
----------------------------------------------------------------------------------------------------------

ಜಂಟಲಮನ್ (೨೦೨೦) - ನಡುಗುತಿದೆ ಎದೆಗೂಡು
ಸಂಗೀತ: ಅಜನೀಶ ಲೋಕನಾಥ, ಸಾಹಿತ್ಯ: ಧನಂಜಯ ದೀಡೀಗ, ಗಾಯನ: ವಶಿಷ್ಠ ಸಿಂಹ

ನಡುಗುತಿದೆ ಎದೆಗೂಡು ಸುಡುಗಾಡು ಬರಿ ಮೌನ
ತೆವಳುತಿದೆ ವಾತ್ಸಲ್ಯ ಬರೀ ಮೋಸ ದ್ವೇಷ ಇದೆ ಜಮಾನಾ

ಬದುಕು ನೋವನ್ನು ಮಾರುವ ತಾಣ ಒತ್ತೆ ಇಡು ಇಲ್ಲಿ ನಿನ್ನ ತನವನ
ಹೊತ್ತು ಅಲೆದಾಡು ನಿನ್ನ ನೆನಪನ್ನ ನಿಲಬೇಡ ನೀ

ಕತ್ತಿ ಮಸೆಯುತಾರೆ ಅನುಮಾನವೇಕೆ
ಸುರಿದು ಹೋದ ರಕ್ತಕಿಲ್ಲಿ ಅಳತೆ ಯಾಕೆ
ಹರಿದ ದಾರಿ ಹೊಲಿದು ತೇಪೆ ಹಾಕಬೇಕೆ
ನೆನ್ನೆಯಲೆ ನಾಳೆ ಇದೆ ಹುಡುಕು ಮಂಕೇ

ಇಡೀ ಮನುಕುಲ ಇಂತ ದುಷ್ಟತನಕೆ ನಲುಗಿದೆ
ಯುಗ ಮುಗಿದರೂ ದ್ವೇಷಕೆ ಉಳಿಯುವಂತ ಬಲವಿದೆ

ನೀನು ಅತ್ತರೆ ನಗುವ ಜಗಕೆ ಇಲ್ಲ ಯಾವ ಯಾತನೆ
ಒಮ್ಮೆ ನಿನ್ನನ್ನು ಮುರಿದು ಕಟ್ಟು ನಿನಗೆ ನೀನೇ ಪ್ರೇರಣೆ
ನೀ ಸಿಡಿದು ನಿಂತಾಗ ದುಷ್ಟರಿಗೆ ಏರುವುದು ಎದೆ ಬಡಿತ ಹಾ ಹಾ

ಕತ್ತಿ ಮಸೆಯುತಾರೆ ಅನುಮಾನವೇಕೆ
ಸುರಿದು ಹೋದ ರಕ್ತ ಕಿಲ್ಲಿ ಅಳತೆ ಯಾಕೆ
ಹರಿದ ದಾರಿ ಹೊಲಿದು ತೇಪೆ ಹಾಕಬೇಕೆ
ನೆನ್ನೆಯಲೆ ನಾಳೆ ಇದೆ ಹುಡುಕು ಮಂಕೇ
---------------------------------------------------------------------------------------------------------

No comments:

Post a Comment