1473. ಕನ್ನಡ ಗೊತ್ತಿಲ್ಲ (೨೦೧೯)


ಕನ್ನಡ ಗೊತ್ತಿಲ್ಲ ಚಲನಚಿತ್ರದ ಹಾಡುಗಳು 
  1. ಕಲಿಯೋ ನೀ ಕನ್ನಡ... ಕನ್ನಡ... ಕನ್ನಡ 
  2. ಕನ್ನಡ ಗೊತ್ತಿಲ್ಲ 
  3. ಜಯ ಭಾರತ ಜನನಿಯ ತನುಜಾತೇ
ಕನ್ನಡ ಗೊತ್ತಿಲ್ಲ (೨೦೧೯) - ಕಲಿಯೋ ನೀ ಕನ್ನಡ... ಕನ್ನಡ... ಕನ್ನಡ 
ಸಂಗೀತ : ನಕುಲ ಅಭಯಂಕರ, ಸಾಹಿತ್ಯ : ಹರಿ ಪರಾಕ, ಗಾಯನ : ರಘು ದೀಕ್ಷಿತ   
 
ಹೇ ಪರದೇಸಿ ಬಾಬುಗಳೇ ಪರಭಾಷೆ ಬಂಧುಗಳೇ ಮಾತಾಡ್ರೋ ಮುದ್ದಾದ ಕನ್ನಡ 
ಕನ್ನಡ ಬರದಿದ್ರೆ ಮಾತಲ್ಲಿ ಉಪ್ಪಿಲ್ಲ ಅಂತಹ ರುಚಿ ಕಣ್ರೋ ಕನ್ನಡ
ಮಾತಲ್ಲಿ ಗತ್ತಿಲ್ಲ, ಕನ್ನಡ ಗೊತಿಲ್ಲ ಕಲಿಯೋಕೆ ಹೊತಿಲ್ಲ ಅನ್ಬೇಡ
ನಾಲಿಗೆ ತೊಳೆದುಕೊಂಡು ಮನಸಿಗೆ ಇಳಿಸಿಕೊಂಡು ಮೆದುಳಿಗೆ ಕಲಿಸಿಕೊಡು ಕನ್ನಡ 
ನಿಲ್ಸೋ ನೀ ಬೊಂಬಡಾ ನಿನ್ನ ಭಾಷೆ ಸಂಗಡಾ 
ಕಲಿಯೋ ನೀ ಕನ್ನಡ... ಕನ್ನಡ... ಕನ್ನಡ (ಕನ್ನಡ ಕಾಪಾಡಿ)

ಮಾಡೋಕ್ಕೆ ಕೆಲಸವಿಲ್ಲ ಅಂತ ಎಲ್ಲ ಬರ್ತೀರಲ್ಲ ಬಂದ್ಮೇಲೂ ಕಲಿಬಾರ್ದೆ ಕನ್ನಡ
ಕೆಲಸ ಕೈ ಕೊಟ್ಟಾಗ ನಡುನೀರಲ್ ಬಿಟ್ಟಾಗ ಕೆಲಸಕ್ಕೆ ಬರೋದೇ ಕನ್ನಡ
ಕನ್ನಡ ಬೇಕಿಲ್ಲ ಬೆಂಗ್ಳೂರ್ ಮಾತ್ರ ಬೇಕಲ್ಲ ಆಹಾ ನೀವು ಭಾರಿ ಪಾಕಡಾ
ಕುತ್ತಿಗೆಗೆ ಬಂದಾಗ ಹೊರಡಲೇಬೇಕಲ್ಲ ಗಂಟಲಲ್ಲಿ ಸ್ವಲ್ಪ ಕನ್ನಡ
ನಿಲ್ಸೋ ನೀ ಬೊಂಬಡಾ ನಿನ್ನ ಭಾಷೆ ಸಂಗಡಾ
ಕಲಿಯೋ ನೀ ಕನ್ನಡ... ಕನ್ನಡ... ಕನ್ನಡ
ಕನ್ನಡ... ಕನ್ನಡ... ಕನ್ನಡ... ಕನ್ನಡ ಕನ್ನಡ... ಕನ್ನಡ... ಕನ್ನಡ
ಕನ್ನಡ... ಕನ್ನಡ... ಕನ್ನಡ... ಕನ್ನಡ ಕನ್ನಡ... ಕನ್ನಡ
-----------------------------------------------------------------------------------------------------------------

ಕನ್ನಡ ಗೊತ್ತಿಲ್ಲ (೨೦೧೯) - ಕನ್ನಡ ಗೊತ್ತಿಲ್ಲ 
ಸಂಗೀತ : ನಕುಲ ಅಭಯಂಕರ, ಸಾಹಿತ್ಯ : ವಾಸುಕಿ ವೈಭವ, ಗಾಯನ : ನಕುಲ ಅಭಯಂಕರ, ಐಶ್ವರ್ಯ ರಂಗರಾಜನ್, ಅನೀಶ ಕೇಶವರಾವ್, ಕಲ್ಯಾಣ ಎಂ, ಯುಗದರ್ಶಿನಿ    

ನಮ್ಮೂರಿಗ ಬಂದು ಎಷ್ಟು ವರ್ಷ ಆದ್ರೂ ಹೇಳ್ತಿರಲ್ಲಾ ನಾಚ್ಕೆ ಇಲ್ದೇ 
ಕನ್ನಡ ಗೊತ್ತಿಲ್ಲ ಕನ್ನಡ ಗೊತ್ತಿಲ್ಲ 
ಸೀಮೇಗಿಲ್ಲದ ಶೋಕೀ ಯಾರಿಗೇ ಬೇಕೂ ಹೇಳ್ ಗುರೂ  
ಮಾತಿಗ್ ಮಂಚೇ ಹೇಳ್ತೀರಲ್ಲ  ಕನ್ನಡ ಗೊತ್ತಿಲ್ಲ ಕನ್ನಡ ಗೊತ್ತಿಲ್ಲ 

ಪ್ರೀತಿ ಶಾಂತಿಗೇ ಹೆಸರೂ ನಮ್ದು  ಕೆಣಕದೆ ಕನ್ನಡ ಕಲಿತು ಮಾತಾಡಿ 
ಬೇಡ ಲೇವಡಿ ಯಾಕೇ ಸುಮ್ನೇ ರಾವಡಿ  ಕೇಳ್ರಿ ಒಳ್ಳೆ ಮಾತಲ್ ದಯಮಾಡಿ 
ಇನ್ಮೇಲಂತೂ ಮುಲಾಜಿಲ್ಲ ಯಾವತ್ತಿಗೂ ಹೇಳಬೇಡಿ ಕನ್ನಡ ಗೊತ್ತಿಲ್ಲ ಕನ್ನಡ ಗೊತ್ತಿಲ್ಲ 
ಕನ್ನಡ ಗೊತ್ತಿಲ್ಲ ಕನ್ನಡ ಗೊತ್ತಿಲ್ಲ 
ಕನಸು ಕೊಟ್ಟಿದ್ದು ಇದೆ ತಾನೇ ನಮ್ಮೂರೂ  ಕೆಲಸ ಕೊಟ್ಟಿದು ಇಲ್ಲೇ ತಾನೇ ನಮ್ಮೂರು 
ಆದ್ರೇ...  ಕನ್ನಡ ಗೊತ್ತಿಲ್ಲ ಕನ್ನಡ ಗೊತ್ತಿಲ್ಲ 

ನಮ್ಮೂರು ನೀರು ಮಲಗೋಕೆ ಸೂರು ಕೊಟ್ಟ ಮೇಲೆ 
ಹೇಳಿದ್ರೂ ಮುಂಚೆ ಬುದ್ದಿ ಬರೋದೇ ಕೆಟ್ಟ ಮೇಲೆ 
ಆದ್ರೇ...  ಕನ್ನಡ ಗೊತ್ತಿಲ್ಲ ಕನ್ನಡ ಗೊತ್ತಿಲ್ಲ 
ಕರುನಾಡಿನಲ್ಲಿ ಎಂದು ಕನ್ನಡಿಗನೇ ಸಾರ್ವಭೌಮ 
ಕಣ ಕಣಕೂ ಕನ್ನಡವೇ ಬುನಾದಿ 
ಧುಮುಕಿ ಹರಿಯೋ ನದಿಯು ಸುಳಿದಾಡೋ ಗಾಳಿ ಕೂಡ 
ನಲಿದಾಡುತಿವೆ ಕನ್ನಡ ಮಾತಾಡಿ 
ಬೆರಳು ತೋರಲು ಹಸ್ತ ನುಂಗುವ ಬುದ್ಧಿ ಎಂದು ಸರಿಯಲ್ಲ 
ತಾಯಿ ಹೋಲುವ ಸ್ವಚ್ಛ ಭಾಷೆ ನಮ್ದು ಧಕ್ಕೆ ಆದ್ರೇ ಸಹಿಸೋಲ್ಲ 
ಉಪ್ಪು ತಿಂದು ಎರಡು ಬಗೆದು ಯಾವತ್ತಿಗೂ ಹೇಳಿಬೇಡಿ 
ಕನ್ನಡ ಗೊತ್ತಿಲ್ಲ ಕನ್ನಡ ಗೊತ್ತಿಲ್ಲ 
-----------------------------------------------------------------------------------------------------------------

ಕನ್ನಡ ಗೊತ್ತಿಲ್ಲ (೨೦೧೯) - ಜಯ ಭಾರತ ಜನನಿಯ ತನುಜಾತೇ ಜಯಹೇ ಕರ್ನಾಟಕ ಮಾತೇ
ಸಂಗೀತ : ನಕುಲ ಅಭಯಂಕರ, ಸಾಹಿತ್ಯ : ಕುವೆಂಪು , ಗಾಯನ : ನಕುಲ ಅಭಯಂಕರ, ರಮ್ಯಾ ಭಟ್ಟ ಅಭಯಂಕರ,

ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ!
ಜಯ ಸುಂದರ ನದಿ ವನಗಳ ನಾಡೇ, ಜಯ ಹೇ ರಸಋಷಿಗಳ ಬೀಡೆ!
ಭೂದೇವಿಯ ಮಕುಟದ ನವಮಣಿಯೆ, ಗಂಧದ ಚಂದದ ಹೊನ್ನಿನ ಗಣಿಯೆ;
ರಾಘವ ಮಧುಸೂದನರವತರಿಸಿದ
ಭಾರತ ಜನನಿಯ ತನುಜಾತೆ ! ಜಯ ಹೇ ಕರ್ನಾಟಕ ಮಾತೆ!

ಜನನಿಯ ಜೋಗುಳ ವೇದದ ಘೋಷ, ಜನನಿಗೆ ಜೀವವು ನಿನ್ನಾವೇಶ,
ಹಸುರಿನ ಗಿರಿಗಳ ಸಾಲೇ, ನಿನ್ನಯ ಕೊರಳಿನ ಮಾಲೆ,
ಕಪಿಲ ಪತಂಜಲ ಗೌತಮ ಜಿನನುತ, 
ಭಾರತ ಜನನಿಯ ತನುಜಾತೆ ! ಜಯ ಹೇ ಕರ್ನಾಟಕ ಮಾತೆ!

ಶಂಕರ ರಾಮಾನುಜ ವಿದ್ಯಾರಣ್ಯ, ಬಸವೇಶ್ವ ಮಧ್ವರ ದಿವ್ಯಾರಣ್ಯ
ರನ್ನ ಷಡಕ್ಷರಿ ಪೊನ್ನ, ಪಂಪ ಲಕುಮಿಪತಿ ಜನ್ನ
ಕುಮಾರವ್ಯಾಸರ ಮಂಗಳ ಧಾಮ, ಕವಿ ಕೋಗಿಲೆಗಳ ಪುಣ್ಯಾರಾಮ
ನಾನಕ ರಾಮಾ ನಂದ ಕಬೀರರ 
ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ!

ತೈಲಪ ಹೊಯ್ಸಳರಾಳಿದ ನಾಡೇ, ಡಂಕಣ ಜಕಣರ ನೆಚ್ಚಿನ ಬೀಡೆ
ಕೃಷ್ಣ ಶರಾವತಿ ತುಂಗಾ, ಕಾವೇರಿಯ ವರ ರಂಗಾ
ಚೈತನ್ಯ ಪರಮಹಂಸ ವಿವೇಕರ, 
ಭಾರತ ಜನನಿಯ ತನುಜಾತೆ ! ಜಯ ಹೇ ಕರ್ನಾಟಕ ಮಾತೆ!

ಸರ್ವ ಜನಾಂಗದ ಶಾಂತಿಯ ತೋಟ, ರಸಿಕರ ಕಂಗಳ ಸೆಳೆಯುವ ನೋಟ
ಹಿಂದೂ ಕ್ರೈಸ್ತ ಮುಸಲ್ಮಾನ, ಪಾರಸಿಕ ಜೈನರುದ್ಯಾನ
ಜನಕನ ಹೋಲುವ ದೊರೆಗಳ ಧಾಮ, ಗಾಯಕ ವೈಣಿಕರಾರಾಮ
ಕನ್ನಡ ನುಡಿ ಕುಣಿದಾಡುವ ಗೇಹ, ಕನ್ನಡ ತಾಯಿಯ ಮಕ್ಕಳ ದೇಹ
ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ
ಜಯ ಸುಂದರ ನದಿ ವನಗಳ ನಾಡೇ, ಜಯ ಹೇ ರಸಋಷಿಗಳ ಬೀಡೆ!
ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ!
-----------------------------------------------------------------------------------------------------------------

No comments:

Post a Comment