ಮಾಯಾಬಜ಼ಾರ್ ಚಲನಚಿತ್ರದ ಹಾಡುಗಳು
- ಲೋಕ ಮಾಯಾಬಜ಼ಾರು
- ನೀನ್ಯಾರೋ ಅರೆರೇರೇ ನಾನ್ ಯಾರೋ
- ಕೊನೆಯಿಲ್ಲಾ ಮೊದಲಿಲ್ಲಾ ರೌಂಡು ಪ್ರಪಂಚ
ಮಾಯಾಬಜ಼ಾರ್ (೨೦೧೬ ) - ಲೋಕ ಮಾಯಾಬಜ಼ಾರು
---------------------------------------------------------------------------------------------------ಸಂಗೀತ: ಮಿಧುನ್ ಮುಕುಂದನ, ಸಾಹಿತ್ಯ : ಯೋಗರಾಜ್ ಭಟ್, ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ
ತಾರಾ ತಿಗಡಿ ಪಾತಾಳ್‌ಗರಡಿ ತಳಕು ಬಳಕು ಬೆಳ್ಳಂಬೆಳಕು
ಲಕಲಕ ಲಕಲಕ ಲೋಕ ನಮ್ದು ಮಾಯಾಬಜ಼ಾರು
ಬಣ್ಣದ ಬಾಳು ಬೆಣ್ಣೆ ಮಾತು ನೀರಿನ ಮ್ಯಾಲೆ ದೋಣಿ ತೂತು
ಸುಳ್ಳಿನ ಸಂತೆಯಲ್ಲಿ ಸತ್ಯ ಡುಮ್ಕಿಡಮಾರು
ಭಗವಂತಂಗೆ ಕೆಳಗೆ ಕರೆದು ಬುದ್ಧಿ ಹೇಳೋಣ
ನಾಳೆ ಇಂದ ನಾವೇ ದೇವರಾಗಿ ಬಿಡೋಣ
ಯಾವ್ದು ಹೆಂಗಾನ ಹಾಳಾಗೋಗ್ಲಿ ಕಾಸು ಮಾಡೋಣ
ಅನ್ಕೊಂಡಿದ್ದೆಲ್ಲ, ಯಾವತ್ತೂ ಆಗಲ್ಲ ಬಂದಂಗೆ ಬದುಕೋಕೆ ಇಲ್ಲಿ ಯಾರೂ ರೆಡಿ ಇಲ್ಲ
ಲೈಫಲ್ಲೇನಾದ್ರೂ, ಕಿತ್ತು ದಬ್ಬಾಕು ಆಗಿಲ್ಲ ಅಂದ್ರೆ ಹೇಳು ಲೋಕ ಚೂರೂ ಸರಿ ಇಲ್ಲ
ದುಡ್ಡು ಎಂಬುದು ದಡ್ಡರ ರೋಗ ಆರು ಮೂರಡಿ ಅಂತಿಮ ಜಾಗ
ಆದರೂ, ಹೆಂಗಾದರೂ ಒಂದೊಳ್ಳೆ ಸೈಟು ಬುಕ್ಕು ಮಾಡೋಣ
ನಿಮಗೂ ಗೊತ್ತು ನಮಗೂ ಗೊತ್ತು ಕಾಲ ಎಂದೋ ಕುಲಗೆಟ್ಟೋಯ್ತು
ಲಕ್ಕಿ ಆಫರ್ ಲೋಕ ನಮ್ದು ಮಾಯಾಬಜ಼ಾರು
ಬಣ್ಣದ ಬಾಳು ಬೆಣ್ಣೆ ಮಾತು ನೀರಿನ ಮ್ಯಾಲೆ ದೋಣಿ ತೂತು
ಸುಳ್ಳಿನ ಸಂತೆಯಲ್ಲಿ ಸತ್ಯ ಡುಮ್ಕಿಡಮಾರು
ಭಗವಂತಂಗೆ ಬುದ್ಧಿ ಇಲ್ಲ ನಾವೇನ್ ಮಾಡೋಣ

ಮಾಯಾಬಜ಼ಾರ್ (೨೦೧೬ ) - ನೀನ್ಯಾರೋ ಅರೆರೇರೇ ನಾನ್ ಯಾರೋ
ಸಂಗೀತ: ಮಿಧುನ್ ಮುಕುಂದನ, ಸಾಹಿತ್ಯ : ಕೆ.ಬಿ.ಪವನ, ಗಾಯನ: ಮಿಧುನ ಮುಕಂದನ, ಚೈತ್ರಾ ಜೆ ಆಚಾರ
ನೀನ್ಯಾರೋ ಅರೆರೇ .. ನಾನ್ ಯಾರೋ ಆದರೆ ಬೆಳಕಂತೆ ನೀ ಬಂದೆ ಬದುಕಲ್ಲಿ
ತಿಳಿಯದೇ ಹಿಂದೇನೋ ಅರೆರೇ ... ಮುಂದೇನೋ ಬೆರೆತೆಯೋ ತಂಗಾಳಿ ಬೆರೆವಂತೆ ಉಸಿರಲ್ಲಿ
ಹೊಸ ಬಣ್ಣ ಹಚ್ಚಿಕೊಂಡಂತೇ ಈ ಬಾಳು ಅಳು ನಗು ಎಲ್ಲಾ ಇನ್ನೂ ಸಮಪಾಲು
ಜೊತೆಯಾಗೋಣ ಶುರು ಮಾಡೋಣ ಹೊಸ ಸಂಚಾರ ಯಾವ ಗುರಿಯು ಇರದೇ ದಾರಿ ಹಿಡಿದು
ನೀನ್ಯಾರೋ ಅರೆರೇ .. ನಾನ್ ಯಾರೋ ಆದರೆ ಬೆಳಕಂತೆ ನೀ ಬಂದೆ ಬದುಕಲ್ಲಿ
ತಿಳಿಯದೇ ಹಿಂದೇನೋ ಅರೆರೇ ... ಮುಂದೇನೋ ಬೆರೆತೆಯೋ ತಂಗಾಳಿ ಬೆರೆವಂತೆ ಉಸಿರಲ್ಲಿ
ಹೂವೂ ಆದರೇ ನೀನು ಆಗುವೆ ನಾನು ನೇಸರ
ಅಲೆಯೇ ಆದರೆ ನೀನು ಆಗುವೆ ನಾನು ಸಾಗರ
ನಿನ್ನ ಕೈಯ್ಯ ಬೆರಳ ಹಿಡಿದು ತುಸು ದೂರ ಹಾಗೆ ನಡೆದು ಹೊಸ ಜನ್ಮವನ್ನು ಪಡೆದು ಬಂದೆ
ಅಲೆಮಾರಿ ಹುಂಬ ನಾನು ಗುರುವಾಗಿ ಬಂದೆ ನೀನು ಒಲವೆಂಬ ಪಾಠವನ್ನುಕಲಿತೇ
ಜೊತೆಯಾಗೋಣ ಶುರು ಮಾಡೋಣ ಹೊಸ ಸಂಚಾರ ಯಾವ ಗುರಿಯು ಇರದೇ ದಾರಿ ಹಿಡಿದು
ನೀನ್ಯಾರೋ ಅರೆರೇ .. ನಾನ್ ಯಾರೋ ಆದರೆ ಬೆಳಕಂತೆ ನೀ ಬಂದೆ ಬದುಕಲ್ಲಿ
ತಿಳಿಯದೇ ಹಿಂದೇನೋ ಅರೆರೇ ... ಮುಂದೇನೋ ಬೆರೆತೆಯೋ ತಂಗಾಳಿ ಬೆರೆವಂತೆ ಉಸಿರಲ್ಲಿ
---------------------------------------------------------------------------------------------------
ಮಾಯಾಬಜ಼ಾರ್ (೨೦೧೬ ) - ಕೊನೆಯಿಲ್ಲಾ ಮೊದಲಿಲ್ಲಾ ರೌಂಡು ಪ್ರಪಂಚ
ಸಂಗೀತ: ಮಿಧುನ್ ಮುಕುಂದನ, ಸಾಹಿತ್ಯ : ಕೆ.ಬಿ.ಪವನ, ಗಾಯನ: ನಿತಿನ್ ರಾಜಾರಾಮ, ಶಾಸ್ತ್ರಿ
ಕೊನೆಯಿಲ್ಲ ಮೊದಲಿಲ್ಲ ರೌಂಡು ಪರಪಂಚ ಅಲೆದಾಡಿ ಪರದಾಡಿ ಹುಡುಕೋನೆ ಹುಚ್ಚ
ಆ ದೇವರು ಭೂಮಿಗೆ ಬಂದ್ರೆ ಒಂದ್ ನಿಮಿಷ ಅವನನ್ನೇ ಬರಬಾದು ಮಾಡ್ತಾನೆ ಮನುಷ್ಯ
ಬದುಕು ಅನ್ನೋದು ದೇವ್ರೇ ಬುಕ್ಕೂ ಮಾಡಿರೋ ಒಳಹತ್ತಿ ಇಳಿಯುತ್ತಿರಬೇಕು ಯಾವುದು ಪರಮೆಂಟ್ ಅಲ್ಲ
ಯಾರೂನೂ ನಂಬೋ ಹಂಗಿಲ್ಲ ಕೆಟ್ಟು ಹೋಗಿದೆ ಕಾಲ
ಎಲ್ಲರೂ ಮಂಗಗಳೇ ಇಲ್ಲಿ ಇಲ್ಲದಿರೋ ಬಾಲ ಲೈಫೂ ಒಂದು ಬಹುಮಾನ ಯಾತಕೆ ಅನುಮಾನ
ಹಾಕದೇ ರಜಾ ಮಾಡುತ ಮಜಾ ಮುಗಿಸಿಬಿಡಿ ಜರ್ನಿ ನಾ
ನಂಬಿರೀ ಮಾತನ್ನ ಹಾಕಿರೀ ಓಟ್ ಅನ್ನ ಹಾಕದೇ ರಜಾ ಮಾಡದೇ ವಜಾ ಮುಗಿಸ್ತೀವಿ ಕೆಲಸನಾ
ಕೊನೆಯಿಲ್ಲ ಮೊದಲಿಲ್ಲ ರೌಂಡು ಪರಪಂಚ ಅಲೆದಾಡಿ ಪರದಾಡಿ ಹುಡುಕೋನೆ ಹುಚ್ಚ
ಆ ದೇವರು ಭೂಮಿಗೆ ಬಂದ್ರೆ ಒಂದ್ ನಿಮಿಷ ಅವನನ್ನೇ ಬರಬಾದು ಮಾಡ್ತಾನೆ ಮನುಷ್ಯ
ಆ ದೇವರಾಣೆಗೂ ಹೇಳ್ತಿನಿ ನಾನೂ ನಿಮ್ಮ ನೌಕರ..
ನಮ್ಮ ದುಡ್ಡಲ್ಲಿ ಮಾಡಸೋದಿಲ್ಲ ಹೆಂಡ್ತೀಗೇ ಕಾಸಿನ ಸರ
ಪಟ್ಟಾಕಿ ಪಟ್ಟಾಕಿ ನಮ ಪಾರ್ಟಿ ಸಿಂಬಲ್ಲೂ ಟೇನಷನೂ ಬಿಟ್ಟಾಕೀ ಇನ್ನೂ ಬೆಳಕೇ ಎಲ್ಲೆಲ್ಲೂ
ತೋಳೆಯೋ ಕೈಯ್ಯ ತೋರು ಬೆರಳಿಗೆ ಹಚ್ಚಿಕೊಂಡು ಬಿಡಿ ಇಂಕ್ ಆನ್ನೂ
ಹೋಗೋದೇನಿದೆ ಒಮ್ಮೆ ಒತ್ತಿರಿ ನಮ್ಮ ಪಕ್ಷದ ಬಟನ್ನೂ
ಬಿಟ್ಟೀ ಓಟೂ ಕೇಳೋದಿಲ್ಲ ಫಿಕ್ಸೂ ಮಾಡುತೀವಿ ಪೇಮೆಂಟೂ
ಬಸ್ಸಿಗೇ ಪಾಸೂ.. ಅಡುಗೆಗೇ ಗ್ಯಾಸೂ.. ಊಟಕೆ ರೇಷನ್.. ಮುದುಕರ ಪೆನ್ಷನ್
ಕುಡಿಯಲೂ ಬೀರೂ .. ರಸ್ತೆಗೇ ಟಾರೂ ...
ಇನ್ನೂ ಪರ್ಮನೆಂಟು ಚಿಂತೆಯ ಸುಟ್ಟಾಕಿ ಹಚ್ಚಿರೀ ಪಟಾಕಿ
ಏನೇ ಬಂದರೂ... ಏನೇ ಹೋದರೂ ... ನಮಗೆ ನೀವ್ ಓಟ್ ಹಾಕೀ
ಚಿಂತೆಯ ಸುಟ್ಟಾಕಿ ಹಚ್ಚಿರೀ ಪಟಾಕಿ
ಏನೇ ಬಂದರೂ... ಏನೇ ಹೋದರೂ ... ನಮಗೆ ನೀವ್ ಓಟ್ ಹಾಕೀ
---------------------------------------------------------------------------------------------------
No comments:
Post a Comment