ಜಿಗಿ ಜಿಗಿದು ಹಾಡುವೆ ಕಣ ಕಣವು ನಿನ್ನದೇ
ಜಿಗಿ ಜಿಗಿದು ಹಾಡುವೆ ಕಣ ಕಣವು ನಿನ್ನದೇ
ಹಣೆಗಾಗು ಸಿಂಧೂರ ನನಗಾಗು ಸರದಾರ
ಸರಸದಲಿ ನನ್ನ ಸೇರು ಬಾ
ಜಿಗಿ ಜಿಗಿದು ಹಾಡುವೆ ಕಣ ಕಣವು ನಿನ್ನದೇ
ಬಳುಕೊ ಕಾವೇರಿ ಕುಳುಕೊ ವಯ್ಯಾರಿ ಹೃದಯ ನಿಂದೇನೆ ದೋಚಿಕೊ
ಹಣತೆ ಕಣ್ಣೋಳೆ ಮನವ ಕದ್ದೋಳೆ ಸನಿಹ ನೀ ಬಂದು ನಾಚಿಕೊ
ಮಿಡಿತವೆ ಹೂ ಮರ ಚಿತ್ತ ಸಿಂಹಾಸನ
ಮಿಡಿತವೇ ಹೂ ಮರ ಚಿತ್ತ ಸಿಂಹಾಸನ
ಉಸಿರಲೆ ಚಾಮರ ಬೀಸುವೆ ಭಾಸ್ಕರ
ಅರಸನೆ ನನ್ನ ಆಳು ಬಾ
ಹೇ ಜಿಗಿ ಜಿಗಿದು ಹಾಡುವೆ ಕಣ ಕಣವು ನಿನ್ನದೇ
ಹೂವು ನಾನಾದೆ ದುಂಬಿ ನೀನಾದೆ ಅಬ್ಬಿ ನೀ ಜೇನ ಹೀರಿಕೊ
ಹೃದಯ ನಾನಾದೆ ಉಸಿರು ನೀನಾದೆ ಬಂದು ನನ್ನಲ್ಲಿ ಸೇರಿಕೋ
ಕಾಣಿಸದು ಲೋಕವೂ ಕಾದಿಹುದು ಜೀವವೂ
ಕಾಣಿಸದು ಲೋಕವೂ ಕಾದಿಹುದು ಜೀವವು
ಪರಿ ಪರಿಯ ಭಾವನೆ ತಡೆ ತಡೆದು ಸೋತೆನೆ
ಕೋಗಿಲೆಯೆ ನನ್ನ ಸೇರು ಬಾ
ಜಿಗಿ ಜಿಗಿದು ಹಾಡುವೆ ಕಣ ಕಣವು ನಿನ್ನದೇ
-------------------------------------------------------------------------------------------------------

No comments:
Post a Comment