ಹೀರೋ ಚಲನಚಿತ್ರದ ಹಾಡುಗಳು
- ನೆನಪಿನ ಹುಡುಗಿಯೇ… ಕೊನೆಯಲಿ ನುಡಿಯುವೆ
- ಬಾನಂಚಿಗೆ ಓಡುವ ಬಾರಾ
- ಎದೆಯಿಂದ ದೂರವಾಗಿ ಉಸಿರೇ
- ಕನಸಿಂದ ಬಂದ ಹಾಗೇ
ಹೀರೋ (೨೦೨೧) - ನೆನಪಿನ ಹುಡುಗಿಯೇ… ಕೊನೆಯಲಿ ನುಡಿಯುವೆ
ಸಂಗೀತ : ಬಿ.ಅಜನೀಶ ಲೋಕನಾಥ, ಸಾಹಿತ್ಯ : ಯೋಗರಾಜ ಭಟ್ಟ, ಗಾಯನ : ವಿಜಯ ಪ್ರಕಾಶ
ಕನಸಿನ ಕೆಲಸವು… ಮುಗಿದರು ಅನುವೆನು ನಾ ನಿನ್ನ ಅನುರಾಗಿ
ಈ ಮುಗಿಯದ ಕಥೆಯಲ್ಲಿ ಮೊದಲ ಸಾಲು ನನದೆ
ಕೊನೆ ಸಾಲು ಕೂಡ ನನದೆ, ನಿಂದೇನಿದೆ
ವಿದಾಯವೇ ಉಲ್ಲಾಸವು ವಿಷಾದವೆಂಬುದೀಗ ಸಂತೋಷವು
ಎಷ್ಟಂದರೂನು ನಿನ್ನ ನಲ್ಲ ನಾನು ಏಕಾಂತ ಗೀತೆಯ… ಸಾಥಿ ನೀನು
ಹಳೆ ಬಯಕೆಯ ಬಳ್ಳಿಯಲ್ಲಿ… ಹೂವೆಲ್ಲವು ನಿನದೆ
ಮುಳ್ಳು ಕೂಡ ನಿನದೆ… ನಂದೇನಿದೆ
ನೆನಪಿನ ಹುಡುಗಿಯೇ… ಕೊನೆಯಲಿ ನುಡಿಯುವೆ ಕೇಳಿಬಿಡು ಸರಿಯಾಗಿ
ಕನಸಿನ ಕೆಲಸವು… ಮುಗಿದರು ಅನುವೆನು ನಾ ನಿನ್ನ ಅನುರಾಗಿ
ನಿನ್ನುಸಿರಿನ ಬಿಸಿಯನ್ನು… ದಯಪಾಲಿಸು ನೀನು ಸರಿ ಹೋಗುವೆ ನಾನು… ಇನ್ನೇನಿದೆ
---------------------------------------------------------------------------------------------------------
ಹೀರೋ (೨೦೨೧) - ಬಾನಂಚಿಗೆ ಓಡುವ ಬಾರಾ
ಸಂಗೀತ : ಬಿ.ಅಜನೀಶ ಲೋಕನಾಥ, ಸಾಹಿತ್ಯ : ಯೋಗರಾಜ ಭಟ್ಟ, ಗಾಯನ : ವಾಸುಕೀ ವೈಭವ
ದಟ್ಟಡವಿಯ ದಾರಿಯೇ ಘೋರ ಬಾ ಸೇರುವ ಆ ಕಡೆ ಊರ
ನಾಕೆಜ್ಜೆ ನಾಕೆ ಹೆಜ್ಜೆ ಆಮೇಲೆ ಬಾಳೋಣ ಹೆಂಗೋ
ಕಿತ್ತೋದ ನಿನ ಗೆಜ್ಜೆ ಕೈಯ್ಯಾರೆ ಕಟ್ತೀನಿ ಹೆಂಗೋ
ಊರಾಚೆ ಸ್ವರ್ಗಾನೆ ಕಾಯುತೈತೆ
ಅಲ್ನೋಡು ಸಂತೋಷ ಕಾಣುತೈತೆ
ಬಾನಂಚಿಗೆ ಓಡುವ ಬಾರಾ ಕೈ ಚಾಚು ತುಸುವೇ ದೂರ
ದಟ್ಟಡವಿಯ ದಾರಿಯೇ ಘೋರ ಬಾ ಸೇರುವ ಆ ಕಡೆ ಊರ
ತೂಗುಗತ್ತಿ ನೆತ್ತಿ ಮ್ಯಾಲೆ ಬೆನ್ನ ಹಿಂದೆ ಬೆಂಕಿ ಬಲೆ
ಹೂ ಚೆಲ್ಲಿದ ದಾರಿ ಮುಂದಿದೆ ಈ ಜೀವವು ನನ್ನ ಕೈ ಇರಲಿ
ಇದು ಒಂದೇ ಆಸೆ ನಂಗಿದೆ
ಬಾನಂಚಿಗೆ ಓಡುವ ಬಾರಾ ಕೈ ಚಾಚು ತುಸುವೇ ದೂರ
ದಟ್ಟಡವಿಯ ದಾರಿಯೇ ಘೋರ ಬಾ ಸೇರುವ ಆ ಕಡೆ ಊರ
ನಾಕೆಜ್ಜೆ ನಾಕೆ ಹೆಜ್ಜೆ ಆಮೇಲೆ ಬಾಳೋಣ ಹೆಂಗೋ
ಕಿತ್ತೋದ ನಿನ ಗೆಜ್ಜೆ ಕೈಯ್ಯಾರೆ ಕಟ್ತೀನಿ ಹೆಂಗೋ
ಊರಾಚೆ ಸ್ವರ್ಗಾನೆ ಕಾಯುತೈತೆ
ಅಲ್ನೋಡು ಸಂತೋಷ ಕಾಣುತೈತೆ.
---------------------------------------------------------------------------------------------------------
ಎದೆಯಿಂದ ದೂರವಾಗಿ ಉಸಿರೇ ನೀ ಹೋಗುತಿರುವೇ
ಇನ್ನೇನು ಬೇಡ ನೀನೊಮ್ಮೆ ನಿಂತು ನನ್ನ ನೋಡು ಜೀವವೇ
ಅಲ್ಲಿಂದಲೇನೇ ಮೂಡಿತು ಒಂದು ದಿವ್ಯ ಸೇತುವೆ
ಮದ್ಯಾಂತರ ಇನ್ನೆತಕೆ ? ಕಣ್ ಮುಂದಿರೋ ಅಧ್ಯಾಯಕೆ?
ನಾ ಅರಿಯ ಬಯಸುವೆ ನಿನ್ನ ಭಾವನೆ
ಆ ಈ ಸೇಳತ ಕೊಡುತಿದೆ ಘಾಸ ವೇದನೆ
ಯಾವುದೇ ತಡೆಯು ಬಂದರು ಸಹ ನಾನಿಹೆ ನಿನ್ನ್ ಒಡನೆ
ಅತಿಯಾದ ಪ್ರೀತಿಯಿಂದ ಅಸಹಾಯ ನಾಗುತಿರುವೆ
ಈ ಯಾನದಲ್ಲಿ ಆಗಾಗ ಈ ಪರೀಕ್ಷೆ ಏತಕೆ?
ನನ್ನನ್ನು ಈಗ ನೀ ಕೂಗಿದಂತೆ ಭಾಸವೆತಕೆ?
ಇಲ್ಲಿಂದಲೇ ಬೇರೆ ಕಥೆ ನೀ ಬಂದರೆ ನನ್ನ ಜೊತೆ
---------------------------------------------------------------------------------------------------------
ಹೀರೋ (೨೦೨೧) - ಎದೆಯಿಂದ ದೂರವಾಗಿ ಉಸಿರೇ
ಸಂಗೀತ: ಬಿ.ಅಜನೀಶಲೋಕನಾಥ, ಸಾಹಿತ್ಯ: ಜಯಂತ್ ಕಾಯ್ಕಿಣಿ, ಗಾಯನ : ಹರ್ಷಿಕದೇವನಾಥನ, ನಾರಾಯಣ ಶರ್ಮಾ
ಎದೆಯಿಂದ ದೂರವಾಗಿ ಉಸಿರೇ ನೀ ಹೋಗುತಿರುವೇ
ಇನ್ನೇನು ಬೇಡ ನೀನೊಮ್ಮೆ ನಿಂತು ನನ್ನ ನೋಡು ಜೀವವೇ
ಅಲ್ಲಿಂದಲೇನೇ ಮೂಡಿತು ಒಂದು ದಿವ್ಯ ಸೇತುವೆ
ಮದ್ಯಾಂತರ ಇನ್ನೆತಕೆ ? ಕಣ್ ಮುಂದಿರೋ ಅಧ್ಯಾಯಕೆ?
ನಾ ಅರಿಯ ಬಯಸುವೆ ನಿನ್ನ ಭಾವನೆ
ಆ ಈ ಸೇಳತ ಕೊಡುತಿದೆ ಘಾಸ ವೇದನೆ
ಯಾವುದೇ ತಡೆಯು ಬಂದರು ಸಹ ನಾನಿಹೆ ನಿನ್ನ್ ಒಡನೆ
ಅತಿಯಾದ ಪ್ರೀತಿಯಿಂದ ಅಸಹಾಯ ನಾಗುತಿರುವೆ
ಈ ಯಾನದಲ್ಲಿ ಆಗಾಗ ಈ ಪರೀಕ್ಷೆ ಏತಕೆ?
ನನ್ನನ್ನು ಈಗ ನೀ ಕೂಗಿದಂತೆ ಭಾಸವೆತಕೆ?
ಇಲ್ಲಿಂದಲೇ ಬೇರೆ ಕಥೆ ನೀ ಬಂದರೆ ನನ್ನ ಜೊತೆ
---------------------------------------------------------------------------------------------------------
ಹೀರೋ (೨೦೨೧) - ಕನಸಿಂದ ಬಂದ ಹಾಗೇ
ಸಂಗೀತ: ಬಿ.ಅಜನೀಶಲೋಕನಾಥ, ಸಾಹಿತ್ಯ: ತ್ರಿಲೋಕ ತ್ರಿವಿಕ್ರಮ, ಗಾಯನ : ಹರ್ಷಿಕದೇವನಾಥನ,
ಕನಸಿಂದ ಬಂದ ಹಾಗೆ ಜೊತೆಯಾಗಿ ನಡೆಯೋ ಹೀಗೆ
ಹೀರೋ (೨೦೨೧) - ಕನಸಿಂದ ಬಂದ ಹಾಗೇ
ಸಂಗೀತ: ಬಿ.ಅಜನೀಶಲೋಕನಾಥ, ಸಾಹಿತ್ಯ: ತ್ರಿಲೋಕ ತ್ರಿವಿಕ್ರಮ, ಗಾಯನ : ಹರ್ಷಿಕದೇವನಾಥನ,
ಕನಸಿಂದ ಬಂದ ಹಾಗೆ ಜೊತೆಯಾಗಿ ನಡೆಯೋ ಹೀಗೆ
ಮನದ ಮೇಘ ಸರಿಯುವಾಗ ಪ್ರೇಮ ತುಂತುರೂ
ಆ... ನಲುಮೆಯಿಂದ ಬೆರೆಯೋ ದೆಸೆಯೂ
ಎಲ್ಲಿ ನಿಂತರೂ ಇನ್ನೇನಿದೆ ಮುಚ್ಚು ಮರೇ ನೀನಾದರೇ... ನನ್ನಾ ದೊರೇ ... ಹೇ...
ಬಾ ಕತ್ತಲ ತೋಳಿನಲಿ ಸರೆ ಹಾಗುವ...
ಒಲವ ನವಿರು ಮಂಪರಲಿ... ದೂರ ಸಾಗುವ
ಕಲ್ಪನೆ ಕಾಣದ ಭಾವಾದ ತಾಣವ ಸೇರಲಿ ಪಯಣ
ಕನಸಿಂದ ಬಂದ ಹಾಗೆ ಜೊತೆಯಾಗಿ ನಡೆಯೋ ಹೀಗೆ
ಮನದ ಮೇಘ ಸರಿಯುವಾಗ ಪ್ರೇಮ ತುಂತುರೂ
ಆ... ನಲುಮೆಯಿಂದ ಬೆರೆಯೋ ದೆಸೆಯೂ
ಎಲ್ಲಿ ನಿಂತರೂ ಇನ್ನೇನಿದೆ ಮುಚ್ಚು ಮರೇ ನೀನಾದರೇ... ನನ್ನಾ ದೊರೇ ... ಹೇ...
---------------------------------------------------------------------------------------------------------
No comments:
Post a Comment