1513. ಮುಂದಿನ ನಿಲ್ದಾಣ (೨೦೨೧)

ಮುಂದಿನ ನಿಲ್ದಾಣ ಚಲನಚಿತ್ರದ ಹಾಡುಗಳು 

ಮುಂದಿನ ನಿಲ್ದಾಣ (೨೦೨೧)

ಇನ್ನೂನು ಬೇಕಾಗಿದೆ, ಒಲವು ಇನ್ನೂನು ಬೇಕಾಗಿದೆ..

ಸೋಕಿ ನಿನ್ನ ಮೌನ,
ತಂಗಾಳೀನು ಹಾಡಾಗಿದೆ!
ಇನ್ನೂನು ಹೇಳೋದಿದೆ, ನನಗೆ ಇನ್ನೂನು ಕೇಳೋದಿದೆ..

ಭಾವಗಳ ಬೀಸಣಿಗೆ, ಬೀಸೋ ಮಾಯಾವಿ ನೀನು
ನಿನ್ನುಸಿರ ಧ್ಯಾನಿಸುವ, ತೀರ ಸಾಮಾನ್ಯ ನಾನು
ಆಕಾಶದಲ್ಲಿ, ನೀ ದೀಪವಾದೇ!
ಇರುಳಾಗಿ ನಾನು, ನಿನಗಾಗಿ ಕಾದೆ!

ಈ ಮೌನಕೀಗ, ಮಾಧುರ್ಯವಾದೆ!
ಹೊರತಾಗಿ ನಿನ್ನ, ನಾ ಖಾಲಿ ಹಾಳೆ!
ಸಿಹಿ ಕಹಿ ಏನಾದರು..
ಪ್ರತಿ ಕ್ಷಣ ಜೊತೆಯಾಗಿರು..

ಇನ್ನೂನು ಬೇಕಾಗಿದೆ, ಒಲವು ಇನ್ನೂನು ಬೇಕಾಗಿದೆ..
ಇನ್ನೂನು ಬೇಕಾಗಿದೆ, ಒಲವು ಇನ್ನೂನು ಬೇಕಾಗಿದೆ..
ಸೋಕಿ ನಿನ್ನ ಮೌನ,
ತಂಗಾಳೀನು ಹಾಡಾಗಿದೆ!
ಇನ್ನೂನು ಹೇಳೋದಿದೆ, ನನಗೆ ಇನ್ನೂನು ಕೇಳೋದಿದೆ..
ಇನ್ನೂನು ಹೇಳೋದಿದೆ, ನನಗೆ ಇನ್ನೂನು ಕೇಳೋದಿದೆ..

No comments:

Post a Comment