1617. ದೊಡ್ಮನೇ ಹುಡುಗ (೨೦೧೬)


ದೊಡ್ಮನೇ ಹುಡುಗ ಚಲನಚಿತ್ರದ ಹಾಡುಗಳು 
  1. ಕನಸಿವೆ ನೂರಾರು
  2. ನಗುವ ನಂಜುಂಡ
  3. ಬೆಡಗು ಭಿನ್ನಾಣ.
  4. ತ್ರಾಸ್ ಅಕ್ಕತಿ
  5. ಅಭಿಮಾನಿಗಳೇ ನಮ್ಮನೆದೇವ್ರು
ದೊಡ್ಮನೇ ಹುಡುಗ (೨೦೧೬) - ಕನಸಿವೆ ನೂರಾರು
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ಜಯಂತ ಕಾಯ್ಕಣಿ, ಗಾಯನ : ಕಾರ್ತಿಕ, ಶ್ವೇತಾ ಮೋಹನ 
 
ಗಂಡು :- ಪರಿಚಯವೇ ಇಲ್ಲದ ಪರಿಣಾಮ ನಿನ್ನದು ಪರಿಮಿತಿಯೇ ಇಲ್ಲದ ಪರದಾಟ ನನ್ನದು
            ಇರು ಇರು ಇರು ಚೂರು ಜೊತೆಗಿರು ಕನಸಿವೆ ನೂರಾರು
           ನಗು ನಗು ನಗು ನೀನು ನಗದಿರೆ ಬೆಳಕಿಗೂ ಬೇಜಾರು
ಹೆಣ್ಣು :- ಪರಿಚಯವೇ ಇಲ್ಲದ ಪರಿಣಾಮ ನಿನ್ನದು ಪರಿಮಿತಿಯೇ ಇಲ್ಲದ ಪರದಾಟ ನನ್ನದು

ಹೆಣ್ಣು :- ಸೆಳೆತವು ಅತೀಯಾಗಿರುವಾಗ ಉಳಿಯುವ ಸ್ಥಿತಿ ಎಲ್ಲಿದೆ ಹೇಳು? 
           ಒಲವಿನ ಅಲೆಯಲ್ಲಿ ಸಿಲುಕುವುದೇ ಮೇಲು..
ಗಂಡು :- ಕನಸಿನ ಹೊಸ ಬೀದಿಗಳಲ್ಲಿ ಚಲಿಸುವೆ ಜೊತೆ ಕೂರಿಸಿಕೊಂಡು 
             ಕಿವಿಯಲಿ ಪಿಸುಮಾತು ಗುನುಗುವೆಯಾ ಒಂದು
             ಬದಲಾಗಿಯೇ ಹೋಗಿದೆ ಈಚೆಗೆ ಹೃದಯದ ಕೆಲಸವೂ
ಹೆಣ್ಣು :- ಸಿಗು ಸಿಗು ಸಿಗು ನೀನು ಸಿಗದಿರೆ ಅಲೆಯುವೆ ಊರೂರು
           ನಗು ನಗು ನಗು ನೀನು ನಗದಿರೆ ಬೆಳಕಿಗೂ ಬೇಜಾರು

ಗಂಡು :- ನಡೆಯುವ ಬರಿಗಾಲಿಗೆ ಈಗ ಎಡವಿದೆ 
             ಸಿಹಿ ಮಿಂಚಿನ ಬಳ್ಳಿ ಬಿದ್ದರೆ ನಾನೀಗ ನಿನ್ನದೆ ತೋಳಲ್ಲಿ
ಹೆಣ್ಣು :- ಮುತ್ತಿನ ರುಜು ಒತ್ತಿದ ಮೇಲೂ, ಸಭ್ಯನ ತರ ನೋಡುವೆ ಏಕೆ? 
            ಅಪಹರಿಸುವ ಮುನ್ನ ಅನುಮತಿಯು ಬೇಕೇ?
ಗಂಡು :- ಇದಕಿಂತಲೂ ಚಂದದ ಕಾರಣ ಸಿಗುವುದೇ ಬದುಕಲು
             ಶುರು ಶುರು ಶುರು ಈಗ ಪ್ರಕರಣ ತಡೆಯಲು ನಾ ಯಾರು
             ಇರು ಇರು ಇರು ಚೂರು ಜೊತೆಗಿರು ಕನಸಿವೆ ನೂರಾರು…
--------------------------------------------------------------------------------------------------------------------

ದೊಡ್ಮನೇ ಹುಡುಗ (೨೦೧೬) - ನಗುವ ನಂಜುಂಡ
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ವಿ.ನಾಗೇಂದ್ರಪ್ರಸಾದ, ಗಾಯನ : ಚಿಂತನ ವಿಕಾಸ 

ಹರ ಹರ ಹರ ಹರ ಹರ ಹರ ಹರ ಹರ ಹರ
ನಿಂತವನೇ ತೇರಾ ಏರಿ ನಗುವ ನಂಜುಂಡ , 
ಕೈಮುಗಿದು ಬೇಡಿರೋ ಹೊರಡುವನು ನಂಜುಂಡ
ತಂದೆ ನೀನೇ ತಾಯಿ ನೀನೇ ಊರ ದೋರೆ ನೀನೇ
ಬಂಧು ನೀನೇ ಬಳಗ ನೀನೇ ನಮ್ಮ ಜಿವಾನೇ 

ಇವನು ಭವನ ಘನ ಗುಡುಗೋ ಇವನು ಬರುವ ನೀ ಜರುಗೊ
ಅಗ್ನಿ ಪುಂಜ ಕಣ್ಣೊಳಗೂ ಕೋಟಿ ಸೂರ್ಯನ ಬೆಳಗೋ
ನಮ್ಮ ಕಲಿಯುಗ ಕಾಯೋ ಢಮರುಗ ಶಿವನೇ ಇವನೇ ಹರನೇ ನಂಜುಂಡ 
ಹರ ಹರ ಪರಶಿವ ಹರ ಹರ ಪರಶಿವ ಹರ ಹರ ಪರಶಿವ ಹರಶಿವ 

ಹೊಂಟವೆನೆ ರಥಬೀದೀಲಿ ರಾಜ ನಂಜುಂಡ ಭಕ್ತರ ಕೊರಿಕೆ ನಡೆಸೋಕೆ ನಂಜುಂಡ
ನಂಬಿ ಬಂದೆ ಇಂದು ನೀಡೋ ಶಂಭೋ ಶಿವ ಶಂಭೋ
ದವನ ಬಾಳೆ ತಂದೆ ಪಡೆಯೋ ಶಂಭೋ ಶಿವ ಶಂಭೋ
ತಿಮಿಲ ದಹನ ಶಿವ ಶರಣಂ ಅತಳ ಸುತಳ ತವ ಚರಣಂ
ಭಸ್ಮ ಭೂಷ ಹವ ಹರಣಂ ಢಮರು ಢಮರು ನಾದ ಶಿವಂ
ಶೂಲಂ ತಿರುಗಿಸೋ ಕಾಲಂ ಕದಲಿಸೋ
ಶಿವನೇ ಇವನೇ ಹರನೇ ನಂಜುಂಡ
----------------------------------------------------------------------------------------------------

ದೊಡ್ಮನೇ ಹುಡುಗ (೨೦೧೬) - ಬೆಡಗು ಭಿನ್ನಾಣ.
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ಯೋಗರಾಜ ಭಟ್ಟ, ಗಾಯನ : ಟಿಪ್ಪು, ಸಂಗೀತಾ ರವೀಂದ್ರನಾಥ   

ಹೆಣ್ಣು :- ಬೆಡಗು ಭಿನ್ನಾಣ ಬುರ್ನಾಸು ಬೂದ್ಗುಂಬಳ ಬೊಟ್ಟು ಬೈತಲೆ ಮೇಕಪ್ಪು ಸಾಕೇನ್ಲಾ
ಗಂಡು :- ಕಮರ್ ಕಟ್ ಕಮಲಾಕ್ಷಿ ಕಲರ್ ಕಲರ್ ಕಾಮಣ್ಣಿ ಕೆನ್ನೆ ಕಿತಬಿಟ್ಟು ಯೂಟ್ಯೂಬಗ್ ಹಾಕ್ಬುಡ್ಲಾ
ಹೆಣ್ಣು :- ಒಮ್ಮೆ ನಿನ್ನ ನಾ ವಜ್ರಮುನಿ ಅನ್ನಲೇ
ಗಂಡು :- ಒಂದರ್ಧಗಂಟೆ ನನ್ನವಳೇ ಮಲ್ಕಳೆ ನನ್ನಂತ ಸ್ಯಾಂಪಲ್ಲು 
            ಸಿಕ್ಕಲ್ಲ ನಿಂಗೆಲ್ಲೂ ಕೆರಾಫು ದೊಡ್ಮನೆ ಕಟ್ಕೋಳ್ಳೆ ಸುಮ್ಮನೆ
ಹೆಣ್ಣು :- ಬೆಡಗು ಭಿನ್ನಾಣ ಬುರ್ನಾಸು ಬೂದ್ಗುಂಬಳ ಬೊಟ್ಟು ಬೈತಲೆ ಮೇಕಪ್ಪು ಸಾಕೇನ್ಲಾ
ಗಂಡು :- ಕಮರ್ ಕಟ್ ಕಮಲಾಕ್ಷಿ ಕಲರ್ ಕಲರ್ ಕಾಮಣ್ಣಿ ಕೆನ್ನೆ ಕಿತಬಿಟ್ಟು ಯೂಟ್ಯೂಬಗ್ ಹಾಕ್ಬುಡ್ಲಾ

ಗಂಡು :- ಮೇಕೆ ಮರಿಯೊಂದು ಮ್ಯಾವ್ ಮ್ಯಾವ್ ಅಂದಂಗೆ ಪ್ರೇಮ ಸುರುವಾಗಿ 
             ನಾಮ ಹಾಕ್ಕೊಂಡೆ ನಿನ್ನ ಸವಾಸ ಮೂರಹೊತ್ತು ಉಪವಾಸ
ಹೆಣ್ಣು :- ಹುಡುಗಿ ಮೀಟರು ಹುಡುಗ ತಡೆಯೊಲ್ಲ ತಡಕೋ ಧಮ್ಮಿದ್ರೆ 
           ನನ್ನ ಸ್ಪೀಡನ್ನ ನನ್ನ ಸವಾಸ ಡೈರೆಕ್ಟು ಕೈಲಾಸ
ಗಂಡು :- ವಾಟ್ಸಪ್ಪಲ್ಲೆ ಹೇಳೋದು ಎದುರೆದುರೇ ಹೇಳ್ತಿಯಲ್ಲೇ 
             ಜಾಯಿಂಟು ಫ್ಯಾಮಿಲಿ ಮುಂದೇನೆ ತಬ್ಕೊಂಡು ನಿಲ್ತಿಯಲ್ಲೇ
ಹೆಣ್ಣು :- ನನ್ನಮಾವ ರಿಬ್ಬನ್ನು ನಾನದಕು ಡಬ್ಬಲ್ಲು ಕೆರಾಫು ದೊಡ್ಮನೆ ಮುದ್ಮಾಡು ಸುಮ್ಮನೆ
ಹೆಣ್ಣು :- ಬೆಡಗು ಭಿನ್ನಾಣ ಬುರ್ನಾಸು ಬೂದ್ಗುಂಬಳ ಬೊಟ್ಟು ಬೈತಲೆ ಮೇಕಪ್ಪು ಸಾಕೇನ್ಲಾ
ಗಂಡು :- ಕಮರ್ ಕಟ್ ಕಮಲಾಕ್ಷಿ ಕಲರ್ ಕಲರ್ ಕಾಮಣ್ಣಿ ಕೆನ್ನೆ ಕಿತಬಿಟ್ಟು ಯೂಟ್ಯೂಬಗ್ ಹಾಕ್ಬುಡ್ಲಾ

ಗಂಡು :- ಮಾಗಿ ಚಳಿಯಲ್ಲಿ ಮೂತಿ ಊಪಿಸು ಮಾರು ದೂರಕ್ಕೆ ನಿಂತವಳೆ ಪಾಪಿ 
              ಬಾರೆ ಇತ್ತಿತ್ತ ಚೂರ್ ಚೂರ್ ನಾಚುತ
ಹೆಣ್ಣು :- ಕೂಳು ಮೂರ್ ಹೊತ್ತು ಬಾಳು ನೋರ್ ಹೊತ್ತು 
           ತೋಳು ತೋಳಲ್ಲಿ ಪ್ರೀತಿ ಯಾವತ್ತೂ ನಿಂದು ಸಾಸ್ವತ ನಂದಿನ್ನೂ ಸಾಸ್ವತ
ಗಂಡು :- ಇನ್ನು ಮೂರ್ ಗಂಟಾಕಿಲ್ಲ ಎಮೋಷನಲ್ ಆಗ್ಬಿಟಿಯಲ್ಲೇ
ಹೆಣ್ಣು :- ಕಣ್ಣೀರು ಕಂಡ್ರೆ ನೀವು ಹೇಳಿದ್ದು ಮಾಡ್ತೀರ ಲೇ
ಗಂಡು :- ಕರಿಮಣಿ ಕಟ್ಬುಟ್ಟು ಹಂಗೆ ಇರ್ತೀನಿ ಕೆರಾಫು ದೊಡ್ಮನೆ ಇನ್ಮುಂದೆ ಹಿಂಗೇನೆ
ಹೆಣ್ಣು :- ಬೆಡಗು ಭಿನ್ನಾಣ ಬುರ್ನಾಸು ಬೂದ್ಗುಂಬಳ ಬೊಟ್ಟು ಬೈತಲೆ ಮೇಕಪ್ಪು ಸಾಕೇನ್ಲಾ
ಗಂಡು :- ಕಮರ್ ಕಟ್ ಕಮಲಾಕ್ಷಿ ಕಲರ್ ಕಲರ್ ಕಾಮಣ್ಣಿ ಕೆನ್ನೆ ಕಿತಬಿಟ್ಟು ಯೂಟ್ಯೂಬಗ್ ಹಾಕ್ಬುಡ್ಲಾ
-----------------------------------------------------------------------------------------------------

ದೊಡ್ಮನೇ ಹುಡುಗ (೨೦೧೬) -  ತ್ರಾಸ್ ಅಕ್ಕತಿ
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ಯೋಗರಾಜ ಭಟ್ಟ, ಗಾಯನ : ವಿ.ಹರಿಕೃಷ್ಣ, ಇಂಧೂ ನಾಗರಾಜ 

ಹೆಣ್ಣು :- ಯಾಕೋ ಹುಡುಗ ಮೈಯಾಗ ಹೆಂಗೈತಿ ನಾಕು ಜನುಮ ಧಿಮಾಕು ನಿಂಗೈತಿ
ಗಂಡು :- ನಂದು ಧಾರವಾಡ ಹೆಚ್ಚಿಗೆ ಮಾತು ಬ್ಯಾಡ
ಹೆಣ್ಣು :- ಮೊದಲ ತಲೆ ಕೆಟ್ಟಯತಿ ಹಂಗನಬ್ಯಾಡ ಇಟೀಟ ಹುಚ್ಚು ಹಿಡಿಸಿದ ಮಗನ 
            ಪೂರ್ತಿ ಹಿಡಿಸಕ ಆಗಲ್ಲೆನಲೆ ನಿನಗ ಒಮ್ಮ್ಯಾರ ನಕ್ಕುಬಿಡುಪಾ ಕೆನ್ನಿಯ ಕಚ್ಚಿಬಿಡುಪಾ 
            ಇಲ್ಲಾ ತ್ರಾಸ್ ಅಕ್ಕತಿ ಜೀವಕ ತ್ರಾಸ್ ಅಕ್ಕತಿ
ಗಂಡು :- ಯಾಕ್ ಅಕ್ಕತಿ ತ್ರಾಸು ಯಾಕ್ ಅಕ್ಕತಿ
ಗಂಡು :- ಯಾಕೋ ಹುಡುಗಿ ಮೈಯಾಗ ಹೆಂಗೈತಿ ನಾಕು ಜನುಮ ಧಿಮಾಕು ನಿಂಗೈತಿ

ಗಂಡು :- ಇಳಿ ಸಂಜೆಗೆ ಗಂಡಸರೋಳ್ಳೆತನ ಹೆಚ್ಚಿಗೆ ಇರಬಾರ್ದು 
            ಕೆಟ್ಟರು ಕಡಿಮೆ ಕೆಡ್ಬೇಕು ನಮ್ಮ ನಾಚಿಕೆಗೇಲ್ರಪ್ಪ ಬೆಲೆಐತಿ 
            ಗಂಡಸರಾಗಹುಟ್ಟಿ ಬಾಯಿ ಮುಚ್ಚಿಕ್ಯಾಂಡ ಇರಬೇಕು
            ಅರೆಹದಗೆಟ್ಟರು ಸುಮ್ ಸುಮ್ಕ ಬೇಜಾರ ಬೇಜಾರ ಮರೆತು ಮೈಮುಟ್ಟು 
            ಹೋಗ್ಲಿತಗಾ ಹೆಂಗಾರ ಹೆಂಗಾರ ಒಂದಾರ ಹೆಜ್ಜೆ ಮುಂದಕ ಇಡು 
            ನೀ ವಯಸು ಮೀರಿ ಬಿಳಿ ದಾಡಿ ಮೂಡದಾರೊಳಗ ನಂಗಾರ ಮೈನಡುಕ ಹೆಂಗಾರ ಕೈಹಿಡುಕ
            ಇಲ್ಲಾ ತ್ರಾಸ್ ಅಕ್ಕತಿ ಜೀವಕ ತ್ರಾಸ್ ಅಕ್ಕತಿ
ಗಂಡು :- ಯಾಕ್ ಅಕ್ಕತಿ ತ್ರಾಸು ಯಾಕ್ ಅಕ್ಕತಿ

ಗಂಡು :- ಹದಿನೆಂಟರ ಕ್ವಾಲಿಟಿ ಕನಸೊಂದು ಹಿಡ್ಕಂಡೀನಿತಡದು ಅಗದಿ ಹತ್ತರ ಬರಬ್ಯಾಡ
             ನಿನ್ನ ಅಂದದ ಬೆಂಕಿಗೆ ಮೈಮನಸು ಸುಟ್ಕೊಂಡುವ ನಮ್ಮದು ಇನ್ನು ಹೆಚ್ಚಿಗೆ ಸುಡುಬ್ಯಾಡ
ಹೆಣ್ಣು :- ಮಳೆ ಬಂದಾಗ ಬಿತ್ತಬೇಕು ಇಲ್ಲಿ ಕೇಳಾ ಇಲ್ಲಿ ಕೇಳಾ ತೆನೆ ಬಂದಾಗ ತಟ್ಟಬೇಕು 
            ಇಲ್ಲಿ ಕೇಳಾ ಇಲ್ಲಿ ಕೇಳಾ ಜೇನು ತುಟಿಯಾಗ ಐತಂತಾರ ಟೆಸ್ಟು ನೋಡಾಕ ಹೇಳ 
            ಬೇಕೇನ ನಿನಗ? ನನ್ನಲಿ ನಿನ್ನ ಕಳಕ ನಿನ್ನನ ನೀನ ಪಡಕ
           ಇಲ್ಲಾ ತ್ರಾಸ್ ಅಕ್ಕತಿ ನಿಂಗು ತ್ರಾಸ್ ಅಕ್ಕತಿ
ಗಂಡು :- ಹಾಳಗೈತಿ ಅಲರೆಡಿ ಭಾಳ್ ಆಗೈತಿ
ಹೆಣ್ಣು :- ಯಾಕೋ ಹುಡುಗ ಮೈಯಾಗ ಹೆಂಗೈತಿ
-----------------------------------------------------------------------------------------------------------------

ದೊಡ್ಮನೇ ಹುಡುಗ (೨೦೧೬) -  ಅಭಿಮಾನಿಗಳೇ ನಮ್ಮನೆದೇವ್ರು
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ಯೋಗರಾಜ ಭಟ್ಟ, ಗಾಯನ : ಪುನೀತರಾಜಕುಮಾರ, ಶಿವರಾಜಕುಮಾರ 

ಒಂದೂರಲ್ಲಿದ್ದ ಒಬ್ಬ ರಾಜ ಇಗ್ಲೂನೂ ಅವನೇ ನಮ್ಮ ರಾಜ ಮುತ್ತುನೂ 
ಇವನು ತಾನೇ ರಾಜ ಆಜಾ ಆಜಾ ಲೆಟ್ಸ್ ಡ್ಯಾನ್ಸ್ ಆಜಾ
ಹಿಡ್ಕೊಂಡ್ ಹೇಳುವೆ ಅನ್ನದ ತುತ್ತು ಕನ್ನಡ ತಾಯಿಗೆ ನನ್ನ ನಿಯತ್ತು 
ದೊಡ್ಡವ್ರ ಹೇಳವ್ರೆ ನಿಮಗೆ ಗೊತ್ತು
ಅಭಿಮಾನಿಗಳೇ ನಮ್ಮನೆದೇವ್ರು ನಿಮ್ಮಿಂದನೇ ನಮ್ಮೆದೆ ಉಸಿರು
ಅಭಿಮಾನಿಗಳೇ ನಮ್ಮನೆದೇವ್ರು ನಿಮ್ಮಿಂದನೇ ನಮ್ಮೆದೆ ಉಸಿರು

ನಿಮ್ಮನ್ನು ಪೂಜಿಸುವ ಭಾಗ್ಯ ನನ್ನದು ಯಾವತ್ತೂ ಕೈಮುಗಿಯುವೆ ಮಹಸ್ವಾಮಿ
ನಂಗ್ಯಾವ ಅಡ್ರೆಸ್ಸು ಬೇಕಾಗಿಲ್ಲ ನಾನೆಂದು ಕನ್ನಡದ ಆಸಾಮಿ
ತಂದೆಗೆ ತಕ್ಕ ಮಗನು ಊರಿಗೂ ತಕ್ಕವನು ಕಾಪಾಡಿ ನನ್ನ ನೀವೇ ನಾನಿನ್ನು ಚಿಕ್ಕವನು
ನೋಡಿ ನಿಮ್ಮ ಈ ಸೇವಕನನ್ನು ನೆಟ್ಟು ಹೇಳುವೆ ಬಾವುಟವನ್ನು
ಒಟ್ಟು ಕನ್ನಡದ ಮಾವುತ ನಾನು 
ಅಭಿಮಾನಿಗಳೇ ನಮ್ಮನೆದೇವ್ರು ನೀವೇ ನಂಗೆ ಹೆಸರಿಟ್ಟರು
ಅಭಿಮಾನಿಗಳೇ ನಮ್ಮನೆದೇವ್ರು ನೀವೇ ನಂಗೆ ಹೆಸರಿಟ್ಟರು

ನೀವೆಲ್ಲಾ ತೂರಿರುವ ಚಿಲ್ಲರೆಯನ್ನು ಹಣೆಲಿ ಎತ್ತಿಕೊಂಡ ಮಗ ನಾನು
ತೊಟ್ಟಿಲು ತೂಗಿ ನನ್ನ ಬೆಳೆಸಿದಿರಮ್ಮ ನಿಜ್ವಾಗ್ಲೂ ನಿಮ್ಮ ಮನೆ ಮಗ ನಾನು
ಎಲ್ಲೋಗಿಲ್ಲ ಜೊತೆಗೆ ಅವ್ರೆ ನಮ್ಮ ನಿಮ್ಮ ಅಣ್ಣಾವ್ರು
ಅಭಿಮಾನಿನ ದೇವ್ರು ಅಂತಾ ಮೊದಲು ಅವ್ರೆ ಅಂದೋರು
ತೊಟ್ಟು ಪ್ರೀತಿಯೇ ನಮಗೆ ಆಸ್ತಿ ಬಿಟ್ಟು ಬೇರೇನೂ ಬ್ಯಾಡಾ ಜಾಸ್ತಿ
ಇರಲಿ ಕೊನೆತನಕ ಹಿಂಗೇ ದೋಸ್ತಿ
ಅಭಿಮಾನಿಗಳೇ ನಮ್ಮನೆದೇವ್ರು ನಿಮ್ಮಿಂದನೆ ಬಾಳಿದು ಹಸಿರು
ಅಭಿಮಾನಿಗಳೇ ನಮ್ಮನೆದೇವ್ರು ನಿಮ್ಮಿಂದನೆ ಬಾಳಿದು ಹಸಿರು .
----------------------------------------------------------------------------------------------------------------

No comments:

Post a Comment