1518. ಶ್ರೀ ಕೃಷ್ಣ ಯ್ಯಾಟ್ ಜೀಮೇಲ್ ಡಾಟ್ ಕಾಮ್ (೨೦೨೧)

ಶ್ರೀ ಕೃಷ್ಣ ಯ್ಯಾಟ್ ಜೀಮೇಲ್ ಡಾಟ್ ಕಾಮ್ ಚಲನಚಿತ್ರದ ಹಾಡುಗಳು 
  1. ಕುಡಿ ನೋಟದ ಕಿಡಿ ಸೋಕಿಸಿ
  2. ನಮಗೆಲ್ಲಾ ಯಾರ್ ಬೀಳ್ತಾರೇ 
  3. ಭೇಟಿಯಾದೇ ಯಾಕೇ ನನ್ನ 
  4. ನೀ ಜೀವಕೂ 
ಶ್ರೀ ಕೃಷ್ಣ ಯ್ಯಾಟ್ ಜೀಮೇಲ್ ಡಾಟ್ ಕಾಮ್ (೨೦೨೧) ಕುಡಿ ನೋಟದ ಕಿಡಿ ಸೋಕಿಸಿ
ಸಂಗೀತ : ಅರ್ಜುನಜನ್ಯ ಸಾಹಿತ್ಯ : ಕವಿರಾಜ್ ಗಾಯನ : ಸಂಜಿತ ಹೆಗಡೆ 

ಕುಡಿ ನೋಟದ ಕಿಡಿ ಸೋಕಿಸಿ ಸುಡಬೇಡವೇ ನನ್ ಈ ತರ
ತುಸು ಕರುಣೆ ತೋರಿಸು ಬಡಪಾಯಿಗೆ ಅತಿಯಾಗಿದೆ ಆಕರ್ಷಣೆ 
ಏನಾದರೂ ನೀನೇ ಹೊಣೆ ಇರಲಾರೆ ಸುಮ್ಮನೆ
ತುಸು ಕರುಣೆ ತೋರಿಸು ಬಡಪಾಯಿಗೆ

ನನ್ನ ಅಂಗೈಯ್ಲಿ ನೀಡು ನಿನ್ನ ಮುಂಗೈನ ಭೂಮಿನೇ ಏಳು ಸುತ್ತು ಸುತ್ತೋಣ
ನಿನ್ನ ಮುಂದೆ ಮಂಡಿಯೂರಿ ನಿನ್ನನ್ನೇ ನೋಡುತ ಕಳೆವಾಸೆ ಸಂಪೂರ್ಣ ಈ ಜೀವಿತ
ಎದುರಲ್ಲಿ ನೀ ನಿಂತು ನಗುವಾಗ ನಾನಂತೂ ಅಸಹಾಯಕ
ತುಸು ಕರುಣೆ ತೋರಿಸು ಬಡಪಾಯಿಗೆ 

ಸಿದ್ದ ನಾನಿನ್ನು ನೂರು ಸಾರಿ ಸಾಯೋಕೆ ನಿನ್ನನ್ನು ಒಮ್ಮೆ ಬೇಟಿ ಮಾಡೋಕೆ
ಈ ಜೀವ ಮಣ್ಣಿನಲ್ಲೇ ಮಣ್ಣಾಗಿ ಹೋದರು ಬಾ ಎಂದು ನೀ ಕೂಗು ನಾ ಹಾಜರು
ನೀ ಮುಂದೆ ಬಂದಾಗ ಮಾತಿಲ್ಲ ನಾ ಮೂಗ ಅಸಹಾಯಕ
ತುಸು ಕರುಣೆ ತೋರಿಸು ಬಡಪಾಯಿಗೆ
-----------------------------------------------------------------------------------------------------------------

ಶ್ರೀ ಕೃಷ್ಣ ಯ್ಯಾಟ್ ಜೀಮೇಲ್ ಡಾಟ್ ಕಾಮ್ (೨೦೨೧) - ನಮ್ ಹಾರ್ಟ್ ಹರಿದು ಊರ್ ಬಾಗ್ಲು ಆಗದೆ
ಸಂಗೀತ : ಅರ್ಜುನಜನ್ಯ ಸಾಹಿತ್ಯ : ಕವಿರಾಜ್ ಗಾಯನ :ನವೀನ ಸಜ್ಜು 

ನಮ್ ಹಾರ್ಟ್ ಹರಿದು ಊರ್ ಬಾಗ್ಲು ಆಗದೆ
ಮ್ಯಾಲ್ ಮ್ಯಾಲೆ ನಗ್ತಿದ್ರು ಒಳಗೆಲ್ಲ ನೋವದೆ
ಯಾಕೋ ನಮ್ಮ ನೆರಳು ಬಿದ್ರೆ ಹುಡೀರ್ ಸೋಶಿಯಲ್ ಡಿಸ್ಟೆನ್ಸಿಂಗ್
ಮಾಸ್ಕ್ ಹಿಂದೆ ಇರುವ ಮುಖವು ಹೆಂಗಾಯ್ತನೋ ಕನ್‌ಫ್ಯಸಿಂಗ್
7 ನೇ ಕ್ಲಾಸ್ ಮಂಜುಳಾನ ನೆನಪು ಕ್ಯೂತಾದೇ 
ನಮ್ಮೆಲ್ಲಾ ಯಾರ್ ಬೀಳ್ತಾರೆ  ನಮ್ಮೆಲ್ಲಾ ಯಾರ್ ಬೀಳ್ತಾರೆ
ನಮ್ಮೆಲ್ಲಾ ಯಾರ್ ಬೀಳ್ತಾರೆ ನಮ್ಮೆಲ್ಲಾ ಯಾರ್ ಬೀಳ್ತಾರೆ

ಫೇಸ್ ಬುಕ್ಕಲ್ ನಮ್ಮ ಫೋಟೋ ನಾಯೀ ಕೂಡ ಮೂಸೋದಿಲ್ಲ
ನಮ್ ಹಳೇ ಡವ್ ಫೋಟೋಗೆ ನಮ್ ಅಪ್ಪನೂ ಲೈಕ್ ಕೊಡ್ತಾವ್‌ನಲ್ಲ
ನಮ್ಮೆಲ್ಲಾ ಯಾರ್ ಬೀಳ್ತಾರೆ ನಮ್ಮೆಲ್ಲಾ ಯಾರ್ ಬೀಳ್ತಾರೆ

ಮಂದಾಕಿನಿ ಮಗಳು ಮದುವೆ ಮೈಯ್ಲಿಗೆ ಬಂದವಳಂತೆ
ನಮ್ಮ ಮೊಬೈಲಲ್ ಇನ್ನೂ ಸನ್ನೀ ಲೀಯೋನ್ ದೆ ಸಂತೆ
ಅಯ್ಯೋ ಕುಂಡಿಲಿ ಒಂದ್ ಕುರ ಎದ್ದುಟ್ಟು
ನಮ್ಮೆಲ್ಲಾ ಯಾರ್ ಬೀಳ್ತಾರೆ ನಮ್ಮೆಲ್ಲಾ ಯಾರ್ ಬೀಳ್ತಾರೆ
ನಮ್ಮೆಲ್ಲಾ ಯಾರ್ ಬೀಳ್ತಾರೆ ನಮ್ಮೆಲ್ಲಾ ಯಾರ್ ಬೀಳ್ತಾರೆ

ಆಗಾಗ ಸೈಟ್ ಕೊಡ್ತಿದ್ದು ನಮ್ಮೂರ ಮೇಷ್ಟ್ರು ಮಗಳು
ಮೊನ್ನೆ ಹಾಯ್ ಬೇಬೀ ಅಂದ್ರೆ ಹೌ ಆರ್ ಯೂ ಅಣ್ಣಾ ಅಂದ್ಬುಟ್ಟು
ನಮ್ಮೆಲ್ಲಾ ಯಾರ್ ಬೀಳ್ತಾರೆ ನಮ್ಮೆಲ್ಲಾ ಯಾರ್ ಬೀಳ್ತಾರೆ

ನನ್ ತಮ್ಮ ಇನ್ನೂ ಚೈಲ್ಡ್ ಅವನೀಗು ಗರ್ಲ್ ಫ್ರೆಂಡ್
ಬಾತ್ ರೂಮಲ್ ಬಾಗ್ಲಾಕೊಂಡು ಅಲ್ಲೀನಿ ಬಾಯ್ ಬಡ್ಕೊಂಡು
ಸಿಂಗಲ್ ಆಗೆ ಸಾಯ್ತಿವೇನೋ ಅಂತ ಡೌಟ್ ಇದೆ
ನಮ್ಮೆಲ್ಲಾ ಯಾರ್ ಬೀಳ್ತಾರೆ ನಮ್ಮೆಲ್ಲಾ ಯಾರ್ ಬೀಳ್ತಾರೆ
ನಮ್ಮೆಲ್ಲಾ ಯಾರ್ ಬೀಳ್ತಾರೆ ನಮ್ಮೆಲ್ಲಾ ಯಾರ್ ಬೀಳ್ತಾರೆ....
-------------------------------------------------------------------------------------------------------------------

ಶ್ರೀ ಕೃಷ್ಣ ಯ್ಯಾಟ್ ಜೀಮೇಲ್ ಡಾಟ್ ಕಾಮ್ (೨೦೨೧) - ಭೇಟಿಯಾದೇ ಯಾಕೇ ನನ್ನ
ಸಂಗೀತ : ಅರ್ಜುನಜನ್ಯ ಸಾಹಿತ್ಯ : ಕವಿರಾಜ್ ಗಾಯನ :ಸೋನು ನಿಗಮ್,  ಸೈನಂಧ್ವಿ 

ಇಷ್ಕ್ ಹುವಾ ಮುಜೇ ಮೋರ್ ಪೀಯಾ 
ಇಷ್ಕ್ ಹುವಾ ಮುಜೇ ಮೋರ್ ಪೀಯಾ 
ಭೇಟಿಯಾದೆ ಯಾಕೆ ನನ್ನ ಹೋಗಬೇಕೆ ಬಿಟ್ಟು ನಿನ್ನ
ತಲುಪದೇನೆ ತಂಗುದಾಣ ಮಧ್ಯದಲ್ಲಿ ಮುಗಿಸಿ ಪಯಣ
ಕುದಿವ ಮೌನ ಕೊಲುವ ಮುನ್ನ ತಿರುಗಿ ಒಮ್ಮೆ ನೋಡು ನನ್ನ
ಹೇಳು ಹೇಗೆ ಬದುಕಲಿ ದೂರಾಗಿ ನಿನ್ನಿಂದ ನಾ
ಭೇಟಿಯಾದೆ ಯಾಕೆ ನನ್ನ ಹೋಗ ಬೇಕೇ ಬಿಟ್ಟು ನಿನ್ನ

ಇಷ್ಕ್ ಹುವಾ ಮುಜೇ ಮೋರ್ ಪೀಯಾ 
ಇಷ್ಕ್ ಹುವಾ ಮುಜೇ ಮೋರ್ ಪೀಯಾ 
ಕಿರು ಗೆಜ್ಜೆಯ ಮರೆತಿರುವೆನು ಮರಳಿ ಬಾರೋ ನೆಪವೊಂದಕೆ
ಹಣೆ ಬಿಂದಿಯಾ ಉಳಿಸಿರುವೆನು ಕನ್ನಡಿಯಲಿ ನೆನಪೊಂದಕೆ
ನೀ ನೀಡುವ ಪ್ರತಿ ನೋವನು ಖುಷಿಯಾಗಿಯೇ ಸ್ವೀಕರಿಸುವೆ
ಕುದಿವ ಮೌನ ಕೊಲುವ ಮುನ್ನ ತಿರುಗಿ ಒಮ್ಮೆ ನೋಡು ನನ್ನ
ಹೇಳು ಹೇಗೆ ಬದುಕಲಿ ದೂರಾಗಿ ನಿನ್ನಿಂದ ನಾ

ಬೀಳ್ಕೊಡುಗೆಗೆ ಬಂದವನಿಗೆ ಬರಿದಾಗುವ ಭಯವಾಗಿದೆ
ಬೊಗಸೆಯಲಿರೋ ಬೆಳದಿಂಗಳ ಅರಿವಿಲ್ಲದೆ ಕೈ ಚೆಲ್ಲಿದೆ
ಎದೆಯಲ್ಲಿರೋ ನೋವೆಲ್ಲವ ಹುಸಿ ನಗುವಲೆ ಮರೆಮಾಚಿದೆ
ಕುದಿವ ಮೌನ ಕೊಲುವ ಮುನ್ನ ತಿರುಗಿ ಒಮ್ಮೆ ನೋಡು ನನ್ನ
ಹೇಳು ಹೇಗೆ ಬದುಕಲಿ ದೂರಾಗಿ ನಿನ್ನಿಂದ ನಾ
ಭೇಟಿಯಾದೆ ಯಾಕೆ ನನ್ನ ಹೋಗ ಬೇಕೇ ಬಿಟ್ಟು ನಿನ್ನ
-------------------------------------------------------------------------------------------------------------------

ಶ್ರೀ ಕೃಷ್ಣ ಯ್ಯಾಟ್ ಜೀಮೇಲ್ ಡಾಟ್ ಕಾಮ್ (೨೦೨೧) - ನೀ ಜೀವಕೂ
ಸಂಗೀತ : ಅರ್ಜುನಜನ್ಯ ಸಾಹಿತ್ಯ : ಕವಿರಾಜ್ ಗಾಯನ : ಅನುರಾಧ ಭಟ್ಟ 

ನೀ ಜೀವಕೂ ಮೀರಿದ ಆತ್ಮದ ಸ್ನೇಹಿತ
ಬಿಡದೆ ಸುಳಿವೇ ಎದೆಯಲ್ಲಿ ಮತ್ತೆ ಮತ್ತೆ ಹಿತವಾದ ಸಾವಿನಂತೆ
ನೀ ಜೀವಕೂ ಮೀರಿದ ಆತ್ಮದ ಸ್ನೇಹಿತ

ನಿನ್ನ ಹೆಗಲ ಒರಗಿ ಒಂದು ಸಲ ಸುಳ್ಳೇ ನಾ ನಿದಿರೆ ಹೋಗಲಾ ಒಂದುಸಲ
ನೀನೇ ಸರಿಸು ಆಗ ಮುಂಗುರುಳ ಹುಚ್ಚು ಹುಡುಗಿಯ ಹಂಬಲ 
ನನ್ನ ಹೃದಯದಿ ನಿನ್ನ ಮೊಹರಿದೆ 
ಬಿಡದೆ ಸುಳಿವೇ ಎದೆಯಲ್ಲಿ ಮತ್ತೆ ಮತ್ತೆ
ಹಿತವಾದ ಸಾವಿನಂತೆ

ಕೇಳೋ ವೇಳೆ ನಿನ್ನ ಮಾತುಗಳ ರೆಪ್ಪೆ ಬಡಿವುದೆ ಮರೆವೆನು
ಖುಷಿಗೆ ಹೃದಯ ನಿಂತೆಬಿಡುವುದು ಚಿವುಟು ಹಾಗಾಗ ನನ್ನನು
ನನ್ನ ಕನಸಿಗೂ ನಿನದೇ ಕನಸಿದೆ ಬಿಡದೆ ಸುಳಿವೆ
ಎದೆಯಲ್ಲಿ ಮತ್ತೆ ಮತ್ತೆ ಹಿತವಾದ ಸಾವಿನಂತೆ
ನೀ ಜೀವಕೂ ಮೀರಿದ ಆತ್ಮದ ಸ್ನೇಹಿತ ಹಾ..
-------------------------------------------------------------------------------------------------------------------

No comments:

Post a Comment