ಆಕ್ಟ್ ೧೯೭೮ (೨೦೨೦) - ತೇಲಾಡೊ ಮುಗಿಲೆ ನೀನೆಂದು ಬರುವೆ
ಸಂಗೀತ : ರಾಹುಲ ಶಿವಕುಮಾರ, ಸಾಹಿತ್ಯ : ಜಯಂತ ಕಾಯ್ಕಣಿ, ಗಾಯನ : ಕಡಬಗೆರೆ ಮುನಿರಾಜು
ತೇಲಾಡೊ ಮುಗಿಲೆ ನೀನೆಂದು ಬರುವೆ
ಭೂಮಿಯ ಮಡಿಲನು ಮುದ್ದಿಸಲೂ….?
ತಂಗಾಳಿ ಅಲೆಯೆ ನೀನೇನು ತರುವೆ
ಸ್ಪೂರ್ತಿಯ ಕಿಡಿಯನು ಹೊತ್ತಿಸಲೂ..?
ಮೌನದ ಸಿಡಿಲೆ ನೀನೆಂದು ಸಿಡಿವೆ ಸತ್ತೆಯ ಮದವನು ಮರ್ಧಿಸಲೂ..
ನಿತ್ಯದ ನುಡಿಯೆ ನೀನೇನು ಕೊಡುವೆ ಸತ್ಯದ ಬಲವನೂ ವರ್ಧಿಸಲು…
ಬಂದರೂ ಯಾವುದೇ ಚಂಡಮಾರುತ ಬೀಳೆವು ನಾವಿನ್ನು
ಬಿದಿರಿನ ಮೆಳೆಯಂತೆ ತಬ್ಬಿ ನಿಲ್ಲುತ್ತಾ …
ಬಾಳುವ ನಾವಿನ್ನು ಗಾಳಿ ಮತ್ತು ಬೆಳಕಿಗೂ ಹಾಕದುಂಟೆ ಅರ್ಜಿಯಾ
ನಮ್ಮ ನಮ್ಮ ಹಕ್ಕಿಗೂ ಕಾಯೋದುಂಟೆ ಮರ್ಜಿಯಾ
ಲೋಕವು ನೀಡಿದೆ ಕಂಬನಿಯಾ … ಉಜ್ಜಲು ಆತ್ಮದ ಕನ್ನಡಿಯಾ
ಒಂದೇ ಒಂದು ಪ್ರೀತಿಯ ನೋಟ ಸಾಕು
ಗೀಚಲು ನಾಳೆಯ ಮುನ್ನುಡಿಯಾ ಇದು ನನ್ನ ಹಕ್ಕು ಇದು ನನ್ನ ಸ್ವತ್ತು

ಇದು ನನ್ನ ಹಕ್ಕು ಇದು ನನ್ನ ಸ್ವತ್ತು
ಇದು ನನ್ನ ಹಕ್ಕು ಇದು ನನ್ನ ಸ್ವತ್ತು
ಇದು ನನ್ನ ಹಕ್ಕು ಇದು ನನ್ನ ಸ್ವತ್ತು
ತೇಲಾಡೊ ಮುಗಿಲೆ ನೀನೆಂದು ಬರುವೆ
ಭೂಮಿಯ ಮಡಿಲನು ಮುದ್ದಿಸಲೂ..?
ತಂಗಾಳಿ ಅಲೆಯೆ ನೀನೇನು ತರುವೆ
ತಂಗಾಳಿ ಅಲೆಯೆ ನೀನೇನು ತರುವೆ
ಸ್ಪೂರ್ತಿಯ ಕಿಡಿಯನು ಹೊತ್ತಿಸಲು…?
ಬಂದರೂ ಯಾವುದೇ ಚಂಡಮಾರುತ
ಬಂದರೂ ಯಾವುದೇ ಚಂಡಮಾರುತ
ಬೀಳೆವು ನಾವಿನ್ನು ಬಿದಿರಿನ ಮೆಳೆಯಂತೆ
ತಬ್ಬಿ ನಿಲ್ಲುತ್ತಾ ಬಾಳುವ ನಾವಿನ್ನು…
ತಬ್ಬಿ ನಿಲ್ಲುತ್ತಾ ಬಾಳುವ ನಾವಿನ್ನು…
------------------------------------------------------------------------------------------------------------
No comments:
Post a Comment