1523. ರಾಜಹಂಸ (೨೦೧೭)




ರಾಜಹಂಸ ಚಲನಚಿತ್ರದ ಹಾಡುಗಳು 
  1. ಬಾರಮ್ಮಾ ಬಾರೇ ಭಾರತೀ 
  2. ಪೀ ಪೀ  ಪೀ  ಪೀ 
  3. ಈ ಭಾನುವಾರ 
  4. ಮೂಲ ಮೂಲ 
  5. ಬುಡುಬುಡುಕೆ 
  6. ಜನ ಗಣ ಮನ  
ರಾಜಹಂಸ (೨೦೧೭) - ಬಾರಮ್ಮಾ ಬಾರೇ ಭಾರತೀ 
ಸಂಗೀತ :ಜೋಶ್ವಾ ಶ್ರೀಧರ, ಸಾಹಿತ್ಯ : ಧನಂಜಯ ದಿಡಗಾ ಗಾಯನ : ಚಂದನ ಶೆಟ್ಟಿ 

ಬಾರಮ್ಮಾ ಬಾರೇ ಭಾರತೀ ಬಾರಮ್ಮಾ ನೀನೇ ಆರತೀ 
ಹೀಗ್ಯಾಕ್ ಆಡ್ತೀ ಲೀಲಾವತಿ ಬರಿ ಮುನಿಸೇಕೆ ಮೈನಾವತಿ 
ಹೇಗೆ ಕರೆಯಲೀ ನಿನ್ನ ಹೇಳೇ ಜಯಂತಿ 
ಗಂಡು ಭೀರಿ ಮಂಜುಳಾ ಯಾಕೇ ಹಿಂಗಾಡ್ತೀ ಯಾಕಿಂಗೇ ಲುಕ್ಕೂ ಕೊಡ್ತೀ 

ನಮ್ಮ ಇಂಡಿಪೆಂಡೆನ್ಸ್ ಡೇನಲ್ಲಿ ನಾ ಇಂಡಿಯನ್ ಆಗಿ ಕರೆವೇನು 
ಈ ಸಂಡೆ ಫ್ರೆಂಡಶಿಪ್ ಡೇ ನಲ್ಲಿ ಫ್ರೆಂಡ್ ಆಗೂ ರೋಡಲ್ಲಿ 
ಹೇ... ವಿಶ್ವ ಶಾಂತಿ ದಿನದಲ್ಲಿ ಹೊಸ ಕ್ರಾಂತಿನೇ ನಡೆದೊಗಲೀ 
ಹೇಯ್ ಪರಿಸರ ದಿನದ ಹಸಿರಲಿ ಬಡಿಸರು ಭರದಲಿ 
 
ಹುಡುಗರ ಕಣ್ಣೀರು ಮುನ್ಸಿಪಾಲ್ಟಿ ಉಪ್ಪುನೀರು 
ವೆಸ್ಟ್ ಆದರೂ ಕೇಳೋರ್ ಯಾರು ಇಲ್ಲ 
ಹುಡುಗೀರ್ ಕಣ್ಣೀರೂ ಕಾವೇರಿ ಸಿಹಿ ನೀರು 
ನೀರಿಗಾಗಿ ವಾರೇ ನಡೀತಲ್ಲ... 
ಕರೆದು ಕರೆದು ಸಾಕಾಗಿದೇ 
ನಿನ್ನ ಕಿವಿಯು ಮ್ಯೂಟ್ ಆಗಿದೇ ನಾಲಿಗೆ ಸೀದೋಗಿದೆ 
ಆಹ ವಿಶ್ವ ರಕ್ತ ದಿನದಲ್ಲಿ ನಾ ಬ್ಲಡೂ ನೀಡಿ ಬರೆವೆನೇ 
ಆ ವಯಸ್ಸನ್ ನಾ ಸಿಗರೇಟ್ ಬಿಡೇವೇನೆ 
ಆಹ ವಿಶ್ವ ಯೋಗ ದಿನದಲೀ ಹುಡುಗೀರ್ ಕೊಬ್ಬು ಕರಗಲೀ 
ಪರದಾಡೋ ಹುಡುಗರ ಹೆಸರಲೀ ದಿನ ಒಂದು ಹುಟ್ಟಲಿ 
ಬಾರಮ್ಮಾ ಬಾರೇ ಭಾರತೀ ಬಾರಮ್ಮಾ ನೀನೇ ಆರತೀ 
ಹೀಗ್ಯಾಕ್ ಆಡ್ತೀ ಲೀಲಾವತಿ ಬರಿ ಮುನಿಸೇಕೆ ಮೈನಾವತಿ 

ಹುಡುಗಿರದೇ ಸರ್ಕಾರ ಮಾಡಕೊಂಡು ದರ್ಬಾರ 
ಹುಡುಗ ಪ್ರಜೆಯ ಹಕ್ಕು ಕಿತ್ತುಕೊಂಡರಲ್ಲಾ 
ಹಿಟ್ಲರೂ ಹುಡುಗೀರೂ ನಾವು ಗಾಂಧಿ  ವಂಶಜರೂ 
ನಮ್ಮ ಮಧ್ಯ ಯುದ್ಧ ನಿಲ್ಲೋದಿಲ್ಲ 
ಹಿಂದೇ ಅಲೆಯುವ ಯೋಗಿ ನಾ ತಿರುಗಿ ಸೊರಗಿದ ರೋಗಿ ನಾ 
ಕೊಡೆ ಹುಡುಗಿ ಆಸ್ತಿ ಮಾತನ್ನ 
ನಮ್ಮ ಹಂಸಲೇಖ ಹಾಡಲಿ ನಾ ಕಿನ್ನರಿ ಊದಿ ಕರೆಯಲೇ... 
ಆ ಕೀರವಾಣಿ ಸ್ವರದಲೀ ಮೀರಾವೇ ಅನ್ನಲೇ.. 
ಆ ರೆಹಮಾನ್ ಮೋಹನ ರಾಗದಿ ಹೇ ರೋಜಾ ಆಜಾ ಅನ್ನಲೇ.. 
ನಮ್ಮ ಇಳೆಯರಾಜ ಧ್ವನಿಯಲಿ ನೀವೆಂಗ ಎನ್ನಲೇ... 
ಬಾರಮ್ಮಾ ಬಾರೇ ಭಾರತೀ ಬಾರಮ್ಮಾ ನೀನೇ ಆರತೀ 
ಹೀಗ್ಯಾಕ್ ಆಡ್ತೀ ಲೀಲಾವತಿ ಬರಿ ಮುನಿಸೇಕೆ ಮೈನಾವತಿ 
-------------------------------------------------------------------------------------------------------

ರಾಜಹಂಸ (೨೦೧೭) - ಪೀ ಪೀ ಪೀ ಹ್ಯಾಪೀ ಶಾಪ್ ಅಲ್ಲಿ ಸಿಗದ ಪೀಪೀ 
ಸಂಗೀತ:ಜೋಶ್ವಾ ಶ್ರೀಧರ, ಸಾಹಿತ್ಯ: ಧನಂಜಯ ದಿಡಗ ಗಾಯನ: ಶ್ರೀನಿವಾಸ, ಸಂತೋಷ ಹರಿಹರನ್, ರಜಿನಿ ರಾಘವನ್ 

ಪೀ ಪೀ ಪೀ ಹ್ಯಾಪಿ ಶಾಪಲ್ಲಿ ಸಿಗದ ಪೀಪೀ 
ಉದೋಕೇ ಬರದ ಪೀಪೀ ಇದ ಕಲಿತರೇ ಜಗ ಹ್ಯಾಪಿ 
ನೀ ನಿನ್ನೆಗೇ ಬೀಗವ ಹಾಕಿತ್ತು ನಾಳೆಯ ಗೋಳನ್ನೂ ಅಡಚಿಟ್ಟು 
ಹಿಂದಿನ ಇರವನು ಅರಿತು ಬದಕುವನು ಬದಿಗಿಟ್ಟು 

ಹರಿಯುವ ತುಂಗೆಯ ವೈಯ್ಯಾರವ ಭುವಿಗೆ ಮಳೆಹನಿ ಸಿಂಗಾರ 
ರಂಗು ರಂಗಿನ ಮಲೆನಾಡು ನಲಿದು ಕುಣಿದಾಡು 
ಮಲ್ಲಿಗೇ ಸಂಪಿಗೇ ಮಂದಾರ ಪರಿಮಳವಿರಲೀ ಮನೆ ಪೂರ 
ಹೊಸದೊಂದು ಖುಷಿ ಈಗ ಮೂಡಿರಲು ಮುಡಣದಲ್ಲಿ  
ಉದಯ  ಉದಯ  ಉದಯ ಈ ಮನಸಿಗೆ ಬೆಸುಗೆ ಸಮಯ 
ಉದಯ  ಉದಯ  ಉದಯ ಸಂಸಾರದ ರವಿ  ಉದಯ 
ಕುಣಿಯೋ ಕುಣಿಯೋ ಕುಣಿಯೋ ಮನಸಾರೆ ನಲಿಯುತ ದಣಿಯೋ 
ಕುಣಿಯೋ ಕುಣಿಯೋ ಕುಣಿಯೋ ನಲಿದಾಡಿ ನೀ ದಣಿಯೋ 

ಈ ಹಳ್ಳಿಯ ಬೇರು ನಮ್ಮ ನಗರದ ಚಿಗುರು 
ಕೂಡಿದರೇ ಹಸಿರು ಸಂಬಂಧಕ್ಕೆ ಉಸಿರು 
ಇದು ಬದುಕಿನ ಶಾಲೆ ಅದು ಅನುಭವ ಮಾಲೇ 
ಠೀವಿಗಿಟ್ಟ ಮನಸೇನೆ ಈ ಮನಸಿಗೆ ಬಂದನೇ 
ಬದುಕೊಂದು ಸವಿಯ ಜೇನು ಅರಿತೆನು ನಿಮ್ಮ ಕಂಡಮೇಲೆ 
ಹಾಲು ಜೇನು ಬೆರೆತಂತಾಯಿತು ನಿಮ್ಮನೂ ನೋಡಿ ತಿಳಿದ ಮೇಲೆ 
ನೋವಿಗೆ ಕಾರಣ ಒಂದೇ ಖುಷಿಗೆ ನೂರು ಕಾರಣ ಇಲ್ಲಿ 
ಹಳೇ ಗೋಳು ಬದುಕಿನಲ್ಲಿ ಹೊಸತನವ ಹುಡುಕಿಕೊಳ್ಳು 
ಉದಯ ಉದಯ ಉದಯ  ಈ ಮನಸಿಗೆ ಬೆಸುಗೆ ಸಮಯ 
ಪೀ ಪೀ ಪೀ ಹ್ಯಾಪಿ ಶಾಪಲ್ಲಿ ಸಿಗದ ಪೀಪೀ 
ಉದೋಕೇ ಬರದ ಪೀಪೀ ಇದ ಕಲಿತರೇ ಜಗ ಹ್ಯಾಪಿ 
ನೀ ನಿನ್ನೆಗೇ ಬೀಗವ ಹಾಕಿತ್ತು ನಾಳೆಯ ಗೋಳನ್ನೂ ಅಡಚಿಟ್ಟು 
ಹಿಂದಿನ ಇರವನು ಅರಿತು ಬದಕುವನು ಬದಿಗಿಟ್ಟು 
ಹರಿಯುವ ತುಂಗೆಯ ವೈಯ್ಯಾರವ ಭುವಿಗೆ ಮಳೆಹನಿ ಸಿಂಗಾರ 
ರಂಗು ರಂಗಿನ ಮಲೆನಾಡು ನಲಿದು ಕುಣಿದಾಡು 
ಮಲ್ಲಿಗೇ ಸಂಪಿಗೇ ಮಂದಾರ ಪರಿಮಳವಿರಲೀ ಮನೆ ಪೂರ 
ಹೊಸದೊಂದು ಖುಷಿ ಈಗ ಮೂಡಿರಲು ಮುಡಣದಲ್ಲಿ  
ಉದಯ  ಉದಯ  ಉದಯ ಸಂಸಾರದ ರವಿ  ಉದಯ 
ಕುಣಿಯೋ ಕುಣಿಯೋ ಕುಣಿಯೋ ಮನಸಾರೆ ನಲಿಯುತ ದಣಿಯೋ 
ಕುಣಿಯೋ ಕುಣಿಯೋ ಕುಣಿಯೋ ನಲಿದಾಡಿ ನೀ ದಣಿಯೋ 
-------------------------------------------------------------------------------------------------------

ರಾಜಹಂಸ (೨೦೧೭) -  ಈ ಭಾನುವಾರ ಇದೇಕೆ ಹೀಗೆ ಕಾಡಿದೆ 
ಸಂಗೀತ:ಜೋಶ್ವಾ ಶ್ರೀಧರ, ಸಾಹಿತ್ಯ: ಧನಂಜಯ ದಿಡಗ ಗಾಯನ: ಸಂತೋಷವೆಂಕಿ, ಅನುರಾಧ ಭಟ್ಟ 

ಈ ಭಾನುವಾರ ಇದೇಕೆ ಹೀಗೆ ಕಾಡಿದೆ 
ಅಪರಾತ್ರಿಯ ಅಪಹರಿಸಿದ ಹಾಡ ಗುನಗ ಬೇಕಿದೆ 
ಹುಟ್ಟುತ್ತಿರುವ ಸೂರ್ಯನನ್ನ ಪೂರ್ವ ನೇಣು ಹಾಕಿದೇ 
ನೀ ನೀಡಿದ ಮುತ್ತು ಒಂದು ಗಂಟಲಲ್ಲಿ ನಿಂತಿದೆ 
 
ಜೊತೆಜೊತೆಯಲಿ ಕೂಡಿ ತೆರೆದ ನಮ ಒಲವಿನ ಜಂಟಿ ಖಾತೆ 
ಪ್ರೀತಿ ಕಂತು ಕಟ್ಟಾದೇನೇ ವಜಾವಾಗಿದೆ 
ಮನಸ ಬೆಸೆದ ದೂರವಾಣಿಯು ಪಾವತಿಸದೇ ಶುಲ್ಕವನ್ನು 
ಹೃದಯದ ಕರೆ ರಿಂಗಣಿಸದೇ ಮುನಿಸಿಕೊಂಡಿದೇ 
ಈ ಭಾನುವಾರ ಇದೇಕೆ ಹೀಗೆ ಕಾಡಿದೆ 
ಅಪರಾತ್ರಿಯ ಅಪಹರಿಸಿದ ಹಾಡ ಗುನಗ ಬೇಕಿದೆ 

ನೆನಪಿಗೆ ಮರೆವಿಲ್ಲ ಹೃದಯವು ಮರೆತಿಲ್ಲ ಮರೆವಿನ ವರ ಬೇಕಿದೇ 
ಕೊಡುವವರಿಲ್ಲ ಎದೆಯ ತಿಜೋರಿಯ ಕೀ ನೇ ಸಿಗುತ್ತಿಲ್ಲ 
ನಿಂತಿದೇ ಒಲವ ರೈಲು ಚಾಲಕರಿಲ್ಲ 
ಈ ಭಾನುವಾರ ಇದೇಕೆ ಹೀಗೆ ಕಾಡಿದೆ 
ಅಪರಾತ್ರಿಯ ಅಪಹರಿಸಿದ ಹಾಡ ಗುನಗ ಬೇಕಿದೆ 
ಹುಟ್ಟುತ್ತಿರುವ ಸೂರ್ಯನನ್ನ ಪೂರ್ವ ನೇಣು ಹಾಕಿದೇ 
ನೀ ನೀಡಿದ ಮುತ್ತು ಒಂದು ಗಂಟಲಲ್ಲಿ ನಿಂತಿದೆ 
ಜೊತೆಜೊತೆಯಲಿ ಕೂಡಿ ತೆರೆದ ನಮ ಒಲವಿನ ಜಂಟಿ ಖಾತೆ 
ಪ್ರೀತಿ ಕಂತು ಕಟ್ಟಾದೇನೇ ವಜಾವಾಗಿದೆ 
ಮನಸ ಬೆಸೆದ ದೂರವಾಣಿಯು ಪಾವತಿಸದೇ ಶುಲ್ಕವನ್ನು 
ಹೃದಯದ ಕರೆ ರಿಂಗಣಿಸದೇ ಮುನಿಸಿಕೊಂಡಿದೇ 
-------------------------------------------------------------------------------------------------------

ರಾಜಹಂಸ (೨೦೧೭) -  ಮುಳ ಮುಳ ಮುಳ ಅಂತೈತೇ 
ಸಂಗೀತ:ಜೋಶ್ವಾ ಶ್ರೀಧರ, ಸಾಹಿತ್ಯ: ಧನಂಜಯ ದಿಡಗ ಗಾಯನ: ಹರಿಚರಣ 

ಮೂಳ ಮೂಳ ಮೂಳ ಮೂಳ ಅಂತೈತೇ ಕಂಬಳಿ ಹುಳ ಹರಿದಂಗೈತೆ 
ಲಾಡು ಬಂದು ಬಾಯಿಗೇ ಬಿದ್ದಂಗೈತೇ ಲವ್ವ್ ವೈರಸ್ಸೂ ಎಂಟ್ರಾಗೈತೇ 
ಲೈಫ್ ಸಿಸ್ಟಮ್ ಹ್ಯಾಂಗ್ ಆಗೈತೇ ಮನಸ್ಯಾಕೋ ಕ್ರ್ಯಾಷಾಗಿ ಹೋಯ್ತೆ 

ಅಯ್ಯೋ ವೋಲ್ಟೇಜ್ ಹೆಚ್ಚಾಯ್ತು ಪ್ರಾಯದ ಫ್ಯೂಸೇ ಹೋಯ್ತು  
ನನ್ನ ಎದೆಗ್ಯಾಕೋ ಕನ್ನ ಬಿದ್ದು ಹಂಡ್ರೆಡಗೇ ಫೋನು ಹೋಯ್ತು 
ನೆಮ್ಮದಿಲ್ಲಿದ್ದ ಹುಡುಗನ  ಮೆದುಳಿಗೆ ಬೆಂಕಿ ಬಿತ್ತು 
ಈ ಕಣ್ಣೀರಿನ ಫೈರ್ ಇಂಜಿನ್ ಆರಿಸೋಕಂತ ಬಂತೂ 
ಮೂಳ ಮೂಳ ಮೂಳ ಮೂಳ ಅಂತೈತೇ ಕಂಬಳಿ ಹುಳ ಹರಿದಂಗೈತೆ 
ಲಾಡು ಬಂದು ಬಾಯಿಗೇ ಬಿದ್ದಂಗೈತೇ

ಅವಳ ಕನಸು ಕಾಡಿದೆ ನನ್ನ ನಿದಿರೆಗವಳ ನಗುವಿನ ಗುನ್ನ 
ಆಗೋದಂಗೇ ನೋವಿನ ಈ ಸಾಲ  ಮನ್ನಾ 
ಈ ಹುಡುಗಿ ಪಡಕೊಂಡವಳೇ ನನ್ನ ಕೊಲ್ಲೋ ಕಾಂಟ್ರಾಕ್ಟನ್ನ 
ಇವಳ ಮೇಲೆ ಹಾಕಲೇ ಬೇಕು ಎಫ್ ಆಯ್ ಆರ್ ಅನ್ನ 
ಸಾಯೋಕಂತೂ ಆಸೇ ಇಲ್ಲ ಆದ್ರೂ ಸತ್ತಂಗ್ ಆಯ್ತಲ್ಲಾ ನಾಡಿ ಮಿಡಿತ ಕಣಿ ಹೇಳ್ತಲ್ಲ 
ತಂದಾನ ತಂದಾನ ತಂದೂ ಖುಷಿ ಆಯ್ತಲ್ಲ ಏನು ತಿಳಿತಿಲ್ಲ 
ಏಕೇ ಏನು ಏನೇನೋ ನಾನು ನಾನಲ್ಲ ಎಲ್ಲೋ ಕಳೆದೋದ್ನೇನೋ  
ಏನಾಯ್ತೋ ಏನಾಯ್ತೋ ನಂಗೇ ಹಿಂಗ್ಯಾಕೇ ಆಯ್ತು ಲವ್ ಆಯ್ತೋ 
ನೋವ ಆಯ್ತೋ ನೀ ಹೇಳು ನೀ ಇರುವಾಗ ನಗುವ ನಾನು 
ಹೋದಾಗ ಯಾತಕೋ ಪೈನೂ ಫೈನ್ಯಾಕೋ ವೈನಾಗೈತೆ ಹೇಳು 
ಅಯ್ಯೋ ವೋಲ್ಟೇಜ್ ಹೆಚ್ಚಾಯ್ತು ಪ್ರಾಯದ ಫ್ಯೂಸೇ ಹೋಯ್ತು  
ನನ್ನ ಎದೆಗ್ಯಾಕೋ ಕನ್ನ ಬಿದ್ದು ಹಂಡ್ರೆಡಗೇ ಫೋನು ಹೋಯ್ತು 
ನೆಮ್ಮದಿಲ್ಲಿದ್ದ ಹುಡುಗನ  ಮೆದುಳಿಗೆ ಬೆಂಕಿ ಬಿತ್ತು 
ಈ ಕಣ್ಣೀರಿನ ಫೈರ್ ಇಂಜಿನ್ ಆರಿಸೋಕಂತ ಬಂತೂ 
ಮೂಳ ಮೂಳ ಮೂಳ ಮೂಳ ಅಂತೈತೇ ಕಂಬಳಿ ಹುಳ ಹರಿದಂಗೈತೆ 
ಲಾಡು ಬಂದು ಬಾಯಿಗೇ ಬಿದ್ದಂಗೈತೇ ಲವ್ವ್ ವೈರಸ್ಸೂ ಎಂಟ್ರಾಗೈತೇ 
ಲೈಫ್ ಸಿಸ್ಟಮ್ ಹ್ಯಾಂಗ್ ಆಗೈತೇ ಮನಸ್ಯಾಕೋ ಕ್ರ್ಯಾಷಾಗಿ ಹೋಯ್ತೆ 
-------------------------------------------------------------------------------------------------------

ರಾಜಹಂಸ (೨೦೧೭) -  ಬುಡುಬುಡುಕೇ ಜಗ ಬುಡುಬುಡುಕೇ 
ಸಂಗೀತ:ಜೋಶ್ವಾ ಶ್ರೀಧರ, ಸಾಹಿತ್ಯ: ಧನಂಜಯ ದಿಡಗ ಗಾಯನ: ಶ್ರೀನಿವಾಸ 

ಬುಡುಬುಡುಕೇ ಜಗ ಬುಡುಬುಡುಕೇ ಬಣ್ಣ ಬಣ್ಣದ ಬಡ ಬಡಿಕೆ 
ಮನ್ಸ್ ಒಬ್ಬ ಒಣಗದ ಹಸಿ ಮಡಕೆ ಬರಿ ತೂತುಗಳೇ 
ಜೇಬಲ್ಲಿರಲೀ ಒಂದು ಮುಚ್ಚಳಿಕೆ  
ಬುಡುಬುಡುಕೇ ಜಗ ಬುಡುಬುಡುಕೇ ಬಣ್ಣ ಬಣ್ಣದ ಬಡ ಬಡಿಕೆ ಓಓಓಓಓ.. 

ಬೆಳೆದಷ್ಟ ಸುಲಭಕ್ಕಿಲ್ಲಿ ಬುದ್ದಿ ಬೆಳೆಯುತ್ತಾ ನಮ್ಮ ಟೈಮ್ ಕೆಟ್ಟಾಗ 
ವಾಚೂ ನಡೆದರೇ ಏನ್ ಯೂಸ್ ಆಗುತ್ತಾ 
ಎಲ್ಲಾ ಪ್ರಾಬ್ಲೆಮ್ಸಗೂನು ಉತ್ರ ಇದ್ದೇ ಇರುತ್ತದೇ .. 
ಪ್ರತಿಸಲ ಸಿಕ್ಕ ಉತ್ತರ ಮಾತ್ರ ತಪ್ಪಾಗಿರ್ತದೇ 
ಕೆಲಸ ಇಲ್ದೇ ಕುಂತೋನ ಮುಂದೆ ಕತ್ತರಿ ಇಡುವಾತ 
ಕುರುಡರ ಕೈಗೇ ಬೆಂಕಿ ತಣಿಸಲು ಪೆಟ್ರೋಲ್ ಕೊಡು ಬೊಂಬಾಟ್ 
ಕಪಿರಾಯನ ವಂಶದ ಕುಡಿಗಳಿಗೆ ಲಾಗ ಹಾಕೋದಷ್ಟೇ ಕೆಲಸ 
ತಾನ್ ತಾನಾನ ತಾನ್ ತಾನನನ  ಇದೇ ಬದುಕಿನ ರೂಲ್ಸ್ ಅಣ್ಣಾ... 
ಬುಡುಬುಡುಕೇ ಜಗ ಬುಡುಬುಡುಕೇ ಬಣ್ಣ ಬಣ್ಣದ ಬಡ ಬಡಿಕೆ 
ಮನ್ಸ್ ಒಬ್ಬ ಒಣಗದ ಹಸಿ ಮಡಕೆ ಬರಿ ತೂತುಗಳೇ 
ಜೇಬಲ್ಲಿರಲೀ ಒಂದು ಮುಚ್ಚಳಿಕೆ  

ದೇವರ ಜೋಡಿ ಮಾತಾಡಿದರೇ ಪ್ರಾಥನೇ ಅಂತಾರೇ 
ಆ ದೇವರೇ ನಿನ್ ಜೊತೆ ಮಾತಾಡಿದರೇ ಮರೆಯಲೀ ನಗ್ತಾರೇ 
ಎಲ್ಲಾದರಲ್ಲೂ ತಪ್ಪನ್ನೂ ಹುಡುಕೋ ನೀ ಡೈರೆಕ್ಟರೂ 
ತಪ್ಪನು ಮಾಡುತ ಸಾಗು ಅನ್ನೋ ಆ ಡೈರೆಕ್ಟರೂ 
ಡಿಸ್ಕೌಂಟ್ ಇಲ್ಲದ ದಿನಸಿ ಅಂಗಡಿ ಪ್ರಚೇಸ್ ಮಾಡುವ ಕರ್ಮ
ಇದು ಬಣ್ಣವ ಮಾರುವ ಪೇಂಟ್ ಅಂಗಡಿ ತಿಳುಕೋ 
ಬಣ್ಣದ ಮರ್ಮದ ಸ್ಟೇಜಲ್ಲಿ ನೀನಿರುವಾಗ ಕುಣಿಯೋದಷ್ಟೇ ನಿನ್ನ ಕೆಲಸ 
ತಾನ್ ತಾನಾನ ತಾನ್ ತಾನನನ  ಇದೇ ಬದುಕಿನ ಚಾಯ್ಸ್ ಅಣ್ಣಾ... 
ಬುಡುಬುಡುಕೇ ಜಗ ಬುಡುಬುಡುಕೇ ಬಣ್ಣ ಬಣ್ಣದ ಬಡ ಬಡಿಕೆ 
ಮನ್ಸ್ ಒಬ್ಬ ಒಣಗದ ಹಸಿ ಮಡಕೆ ಬರಿ ತೂತುಗಳೇ 
ಜೇಬಲ್ಲಿರಲೀ ಒಂದು ಮುಚ್ಚಳಿಕೆ  
ಬುಡುಬುಡುಕೇ ಜಗ ಬುಡುಬುಡುಕೇ
-------------------------------------------------------------------------------------------------------

ರಾಜಹಂಸ (೨೦೧೭) -  ಜನ ಗಣ ಮನ 
ಸಂಗೀತ:ಜೋಶ್ವಾ ಶ್ರೀಧರ, ಸಾಹಿತ್ಯ: ಧನಂಜಯ ದಿಡಗ ಗಾಯನ: ರಘು ದೀಕ್ಷಿತ 

ಓಓಊವ್.. ಓಓಊವ್..  ಓಓಊವ್ ... ಓಓಊವ್ ... 
ಹೇ.. ಜನ ಗಣ ಮನ ದೇಶ ಲೈಫಗೆಷ್ಟು ವೇಷ 
ತಗೋ ಥ್ರಿಲ್ಲಿನ ವೀಸಾ  ಇರಲಪ್ಪಾ ಜೋಷೂ ಉಲ್ಲಾಸ 
ಜನಮನವನು ನೋಡು ಸಣ್ಣತನವನು ಕಳೆದು ಹಾಡು 
ಪ್ರಕೃತಿಯಲಿ ಕೂಡು ಮಗುವಂತ ಆಡೂ ... 
ಜಯಹೇ... ಜಯ ಜಯಹೇ  ಜಯ ಜಯಹೇ... 
ಜಯಹೇ... ಜಯ ಜಯಹೇ  ಜಯ ಜಯಹೇ... 

ಹೇ.. ಕಣ್ಣು ಸಣ್ಣದಾದರೂ ನೋಟ ದೊಡ್ಡದೇನೇ 
ಆಕಾಶ ಭೂಮಿಗೇ ಅರ್ಥ ನಿನ್ನ ಕಣ್ಣಿಂದನೇ... 
ಓಡೋನು ಕುಂತೆ ಇದ್ದ ಅಲೆಯೋನು ದೇಶ ಗೆದ್ದ 
ಬದುಕೋನ್ನದು ಛೋಟಾ ಪ್ಯಾಕು ರಿಚಾರ್ಜು ಮಾಡ್ಸು 
ಅನುಕ್ಷಣವೂ ಕಲಿಯುತಿರು  ಜಗವೇ ನಿನ್ನ ಗುರು 
ಕಾಲಿಗೇ ಚಕ್ರ ಕಟ್ಟಿ ಅಲೆದಾಡಿ ನೋಡು 
ಮನೆಯನ್ನ ಕಟ್ಟದಿರೂ ಕೊನೆಯ ಮುಟ್ಟದಿರು ಭೂಮಿ ಪೂರ ನಮದೇ .... 
ಜಯಹೇ... ಜಯ ಜಯಹೇ  ಜಯ ಜಯಹೇ... 
ಜಯಹೇ... ಜಯ ಜಯಹೇ  ಜಯ ಜಯಹೇ... 

ತನ ಧೀರಲನ ನಾನ ತದರನ ನಾನಾ ತದರಿನ ತಾನನ ತೊಂ ತನನ ತೊಂ  
ಹೇ... ಬೆಳಕು ವೇಗಾನ್ ಅಲೆಯೋನ್ ವಿಜ್ಞಾನಿ 
ಪ್ರೀತಿ ಪ್ರೇಮದ ಅರ್ಥ ತಿಳಿದೋನೇ ಮಹಾಜ್ಞಾನಿ 
ನೋವಿನದು ಕುಂಟೋ ಕಾಲು ಖುಷಿಗಂತು ಸಾವಿರ ಕಾಲು 
ಓಡಾಡೋ ಬದುಕಿನ ಬಸ್ಸಿಗೇ ಹ್ಯಾಪಿನೇ ಡಿಸೇಲ್ಲೂ 
ನರಕನೇ ಸಿಗಲೀ ನಗು ಉಚಿತವಿರಲೀ 
ಮನಸಲ್ಲಿ ಮುನಿಸಿನ ಫೈಲನ್ನೂ ಡಿಲೀಟ್ ಮಾಡೂ .. 
ಸರಸನೇ ಜನನ  ವಿರಸನೇ ಮರಣ ಸಮರಸವೂ ಬೇಕು ನಮಗೇ 
ಜಯಹೇ... ಜಯ ಜಯಹೇ  ಜಯ ಜಯಹೇ... 
ಜಯಹೇ... ಜಯ ಜಯಹೇ  ಜಯ ಜಯಹೇ... 
ಹೇ.. ಜನ ಗಣ ಮನ ದೇಶ ಲೈಫಗೆಷ್ಟು ವೇಷ 
ತಗೋ ಥ್ರಿಲ್ಲಿನ ವೀಸಾ  ಇರಲಪ್ಪಾ ಜೋಷೂ ಉಲ್ಲಾಸ 
ಜನಮನವನು ನೋಡು ಸಣ್ಣತನವನು ಕಳೆದು ಹಾಡು 
ಪ್ರಕೃತಿಯಲಿ ಕೂಡು ಮಗುವಂತ ಆಡೂ ... 
ಓಓಊವ್.. ಓಓಊವ್..  ಓಓಊವ್ ... ಓಓಊವ್ ... 
ಓಓಊವ್.. ಓಓಊವ್..  ಓಓಊವ್ ... ಓಓಊವ್ ... 
-------------------------------------------------------------------------------------------------------

No comments:

Post a Comment