1526. ಮಾಲತಿ ಮಾಧವ (೧೯೭೧)

ಮಾಲತಿ ಮಾಧವ ಚಲನಚಿತ್ರದ ಹಾಡುಗಳು
  1. ಬೃಂದಾವನದೋಳು ಆಡುವನಾರೇ 
  2. ಮಾಡರ್ನ ಲೇಡಿ ಮಡದಿಯ ನೋಡಿ 
  3. ಜೋಪಾನ ಕಂಡೋರ ಕಣ್ಣು 
  4. ಯಾರು ನೀ ನಾರೂ 
  5. ಸೋದರಿಯೇ ತಾಯಾಗಿ ನಾನಿರುವೇ 
  6. ಆಹಾ ನಾ ಮರೆಯಲಾರೇ 
ಮಾಲತಿ ಮಾಧವ (೧೯೭೧) - ಬೃಂದಾವನದೋಳು ಆಡುವನಾರೇ 
ಸಂಗೀತ : ಟಿ.ಜೆ.ಲಿಂಗಪ್ಪ, ಸಾಹಿತ್ಯ : ಪುರಂದದಾಸ, ಗಾಯನ : ಎಸ್.ಜಾನಕೀ 

ಬೃಂದಾವನದೊಳು ಆಡುವನ್ಯಾರೇ 
ಬೃಂದಾವನದೊಳು ಆಡುವನ್ಯಾರೇ 
ಗೋಪಿ ಚಂದಿರವದನೇ ನೋಡುವ ಬಾರೇ 
ಚಂದಿರವದನೇ ನೋಡುವ ಬಾರೇ 
ಬೃಂದಾವನದೊಳು ಆಡುವನ್ಯಾರೇ 

ಅರುಣಪಲ್ಲವ ಪಾದಯುಗಳನೇ... 
ಅರುಣಪಲ್ಲವ ಪಾದಯುಗಳನೇ... 
 ದಿವ್ಯ ಮರಕತ ಮಂಜುಳಾಭರಣನೆ
ಮರಕತ ಮಂಜುಳಾಭರಣನೆ
ಸಿರಿವರ ಯದುಕುಲ ಸೋಮನೇ... 
ಇಂಥ ಪರಿಪೂರ್ಣ ಕಾಮ ನಿಸ್ಸೀಮನೇ..  
ಪರಿಪೂರ್ಣ ಕಾಮ ನಿಸ್ಸೀಮನೇ 
ಬೃಂದಾವನದೊಳು ಆಡುವನ್ಯಾರೇ 

ಮಕರಕುಂಡಲ ಕಾಂತಿಭರಿತನೇ.. 
ಮಕರಕುಂಡಲ ಕಾಂತಿಭರಿತನೇ.. 
ಅಕಳಂಕ ರೂಪ ಲಾವಣ್ಯನೇ.. 
ದಿವ್ಯ ಅಕಳಂಕ ರೂಪ ಲಾವಣ್ಯನೇ.. 
ಸಕಲರೊಳಗೆ ದೇವ ಈತನೇ ...  
ಸಕಲರೊಳಗೆ ದೇವ ಈತನೇ ...  
ನಮ್ಮ ಮುಕುತೀಶ ಪುರಂದರವಿಠಲನೇ 
ಮುಕುತೀಶ ಪುರಂದರವಿಠಲನೇ... 
ಬೃಂದಾವನದೊಳು ಆಡುವನ್ಯಾರೇ 
ಗೋಪಿ ಚಂದಿರವದನೇ ನೋಡುವ ಬಾರೆ
ಬೃಂದಾವನದೊಳು ಆಡುವನ್ಯಾರೇ... ಏಏಏಏಏ  
-------------------------------------------------------------------------------------------------------------

ಮಾಲತಿ ಮಾಧವ (೧೯೭೧) - ಮಾಡರ್ನ ಲೇಡಿ ಮಡದಿಯ ನೋಡಿ 
ಸಂಗೀತ : ಟಿ.ಜೆ.ಲಿಂಗಪ್ಪ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಲ್.ಆರ್.ಈಶ್ವರಿ, ಎ.ಎಲ್.ರಾಘವನ 

ಹೆಣ್ಣು : ಓ.. ಮಾಡ್ರನ್ ಲೇಡಿ ಮಡದಿಯ ನೋಡಿ ಕಣ್ಣ್ ಕಣ್ಣ್ ಬಿಡಬೇಡೀ.... 
          ಮಾಡ್ರನ್ ಲೇಡಿ ಮಡದಿಯ ನೋಡಿ ಕಣ್ಣ್ ಕಣ್ಣ್ ಬಿಡಬೇಡೀ.... 
          ಕುಣಿಯುವ ಕೂಡಿ ನಲಿಯುವ ಹಾಡಿ ಬೇಡ ಎನ್ನಬೇಡಿ ಡಾರ್ಲಿಂಗ್ ಬೇಡ ಎನ್ನಬೇಡಿ
ಗಂಡು : ಕಟ್ಟಿಕೊಂಡ ಹೆಂಡತಿಯೂ ಮೆಟ್ಟಿ ನಿಂತ ಮೋಹಿನಿಯೂ  
            ಕೆಟ್ಟಿದ ಕಣ್ಣೂ ದುಃಖಿದೇ ತಲೆಯೂ ಇನ್ನೇನೂ ಕಾದಿದೆಯೋ... 
ಹೆಣ್ಣು : ಓ.. ಮಾಡ್ರನ್ ಲೇಡಿ ಮಡದಿಯ ನೋಡಿ ಕಣ್ಣ್ ಕಣ್ಣ್ ಬಿಡಬೇಡೀ.... 

ಹೆಣ್ಣು : ರುಚಿ ಊಟ ಮಾಡಿಸುವೇ .. ಸವಿ ನೋಟ ತೋರಿಸುವೇ .. 
          ಹಾಸಿಗೆ ಹಾಸಿ ಗಾಳಿಯ ಬೀಸಿ ಜೋಗುಳ ಹಾಡಿ ಮಲಗಿಸುವೇ ಲಾಲೀ.... 
ಗಂಡು : ಲಾಲಾಲಾಲಾಲಾ  (ಲಾಲೀ .... )  ಲಾಲಾಲಾಲಾಲಾ 
ಹೆಣ್ಣು : ಲಾಲೀ ... ಲಲಲಲ್ಲಲ್ಲಲಾ 
ಗಂಡು : ಹಚ್ಚದ ಒಲೆಯ ಹಚ್ಚುವೇಯಾ ಮುಟ್ಟದ ಸೌಟನೂ ಮುಟ್ಟುವೇಯಾ  
            ಏನಿದೂ ಕನಸೇ ಲೋಳೆಯಿತೇ ಮೀಸೆ ಪಂಕ್ತಿಯ ನನಗೆ ಪುಟ್ಟ ಪದತೇ  
ಹೆಣ್ಣು : ಜಾಲಿಯಾಗಿ ನಾವೂ .. (ರಂ ಪಂಪಂಪಂ) ಜೋಡಿಯಾಗಿ ನಾವೂ (ವ್ವಾ..ವ್ವಾ..ವ್ವಾ....)  
ಇಬ್ಬರು : ಜಾಲಿಯಾಗಿ ನಾವೂ ಜೋಡಿಯಾಗಿ ನಾವೂ ಪಾಡಿ ಪಾಡಿ ನಲಿಯುವ ಬಾ ಬಾ 
ಹೆಣ್ಣು : ಮಾಡ್ರನ್ ಲೇಡಿ ಮಡದಿಯ ನೋಡಿ ಕಣ್ಣ್ ಕಣ್ಣ್ ಬಿಡಬೇಡೀ.... 
ಗಂಡು : ಕುಣಿಯುವ ಕೂಡಿ ನಲಿಯುವ ಹಾಡಿ ಬೇಡ ಎನ್ನಬೇಡಿ 
ಹೆಣ್ಣು : ಡಾರ್ಲಿಂಗ್ ಬೇಡ ಎನ್ನಬೇಡಿ

ಹೆಣ್ಣು : ಸೆರಗಲ್ಲಿ ಬಚ್ಚಿಡುವೇ ಕಣ್ಣಲ್ಲಿ ಮುಚ್ಚಿಡುವೇ 
           ದಿನವೂ ನಿನ್ನ ಸೇವಿಸು ಚೆನ್ನ ಪೂಜಿಸಿ ಬತ್ತಿ ಹಚ್ಚಿಡುವೇ 
ಗಂಡು : ನೀನೀಗ ಗಸ್ತಪತಿಯಾದೇ ನಾನೀಗ ಗಸ್ತಪತಿಯಾದೇ 
            ನಾನೇ ರಾಜ ನೀನೇ ರಾಣಿ ಆಳುವ ಬಾರೇ ಈ ಮನೆಯಾ   
            ಜಾಲಿಯಾಗಿ ನಾವೂ .. (ರಂ ಪಂಪಂಪಂ) ಜೋಡಿಯಾಗಿ ನಾವೂ (ವ್ವಾ..ವ್ವಾ..ವ್ವಾ...)  
ಇಬ್ಬರು : ಜಾಲಿಯಾಗಿ ನಾವೂ ಜೋಡಿಯಾಗಿ ನಾವೂ ಪಾಡಿ ಪಾಡಿ ನಲಿಯುವ ಬಾ ಬಾ 
             ಲಾಲಾಲಾಲಾ ಲಲ್ಲಲ್ಲಲ್ಲಾ ಲಾಲಾಲಾಲಾ ಲಲ್ಲಲ್ಲಲ್ಲಾ ಲಾಲಾಲಾಲಾ ಲಲ್ಲಲ್ಲಲ್ಲಾ 
-------------------------------------------------------------------------------------------------------------
 
ಮಾಲತಿ ಮಾಧವ (೧೯೭೧) - ಜೋಪಾನ ಕಂಡೋರ ಕಣ್ಣು 
ಸಂಗೀತ : ಟಿ.ಜೆ.ಲಿಂಗಪ್ಪ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಪಿ.ಬಿ.ಎಸ್, ಎಸ್.ಜಾನಕೀ 

ಹೆಣ್ಣು : ಜೋಪಾನ.. ಜೋಪಾನ ಕಂಡೋರ ಕಣ್ಣು ತಾಕೀತು... 
          ಅದನೂ ಕಂಡೂ ಈ ಹೃದಯ ನಿಂತೀತೂ 
          ಜೋಪಾನ ಕಂಡೋರ ಕಣ್ಣು ತಾಕೀತು... 
          ಅದನೂ ಕಂಡೂ ಈ ಹೃದಯ ನಿಂತೀತೂ ಜೋಪಾನ... 

ಗಂಡು : ಪ್ರಿಯರೇ ಸೋತರೇ ನಿನ್ನೀ ಅಂದಕೆ ನನ್ನಂಥವರ ಗತಿಯೇನೂ .. 
            ಪ್ರಿಯರೇ ಸೋತರೇ ನಿನ್ನೀ ಅಂದಕೆ ನನ್ನಂಥವರ ಗತಿಯೇನೂ .. 
ಹೆಣ್ಣು : ಕೊರಳಲಿ ತಾಳಿಯೂ ಬೀಳುವ ಮುನ್ನ 
          ಕೊರಳಲಿ ತಾಳಿಯೂ ಬೀಳುವ ಮುನ್ನ ಕೈಯ್ಯನೂ ಹಿಡಿವುದು ಸರಿಯೇನೂ.. 
ಗಂಡು : ಚೆಲುವನು ನೀ ಚೆಲ್ಲುತ ನಗೆಯಲಿ ನೀ ಕೊಲ್ಲುತ  ಮೆರವಣಿಗೆ ಹೊರಟಿರಲೂ ನನ್ನ ಪಾಡೇನೂ 
          ಜೋಪಾನ ಕಂಡೋರ ಕಣ್ಣು ತಾಕೀತು... 
          ಅದನೂ ಕಂಡೂ ಈ ಹೃದಯ ನಿಂತೀತೂ ಜೋಪಾನ... 

ಹೆಣ್ಣು : ಮನಸಿನ ಮಾತನು ತಿಳಿಸಲೇ ನಾನು 
ಗಂಡು : ಬಲುಕಿತು ಎಂದೋ ಹೊಸದೇನೋ .. 
ಹೆಣ್ಣು : ಮನಸಿನ ಮಾತನು ತಿಳಿಸಲೇ ನಾನು 
ಗಂಡು : ಬಲುಕಿತು ಎಂದೋ ಹೊಸದೇನೋ .. 
ಹೆಣ್ಣು : ಹೇಳುವುದೇನಿತೋ ಉಳಿದಿದೆ ಇನ್ನೂ ... 
ಗಂಡು : ಮೊದಲಿನ ರಾತ್ರಿಗೇ ಇರಲಿನ್ನೂ.. 
ಹೆಣ್ಣು : ಮಧುಚಂದ್ರನ ಬೆಳಕಲೀ..     
ಗಂಡು : ತಂಬೆಲರಿನ ಸೆರಗಲೀ 
ಹೆಣ್ಣು : ಮಧುಚಂದ್ರನ ಬೆಳಕಲೀ..     
ಗಂಡು : ತಂಬೆಲರಿನ ಸೆರಗಲೀ 
ಇಬ್ಬರು : ಹೊಸ ಕವಿತೆ ಹೊಸ ಗೀತೆ ಕೂಡಿ ಹಾಡೋಣ 
          ಜೋಪಾನ ಕಂಡೋರ ಕಣ್ಣು ತಾಕೀತು... 
          ಅದನೂ ಕಂಡೂ ಈ ಹೃದಯ ನಿಂತೀತೂ ಜೋಪಾನ... 
-------------------------------------------------------------------------------------------------------------

ಮಾಲತಿ ಮಾಧವ (೧೯೭೧) - ಯಾರು ನೀ ನಾರೂ 
ಸಂಗೀತ : ಟಿ.ಜೆ.ಲಿಂಗಪ್ಪ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಲ್.ಆರ್.ಈಶ್ವರಿ 

ಬಾಬಾ ಬಾಬಾ  ಹೊಸ ಗೆಳೆಯಾ .. ಮಾಡಿಕೋ ನನ್ನ ಪರಿಚಯ.. 
ಬಾಬಾ ಬಾಬಾ  ಹೊಸ ಗೆಳೆಯಾ .. ಮಾಡಿಕೋ ನನ್ನ ಪರಿಚಯ.. 
ಯಾರೂ ... ನೀ ನಾರೂ ... 

ಕಣ್ಣ ಮಿಂಚಿನಲಿ ನಗೆಯ ಸಂಚಿನಲಿ ನಾನು ನಿನ್ನ ಸೆಳೆವೇ... 
ತುಟಿಯ ಅಂಚಿನಲಿ ಮಧುವ ಸೇವಿಸುತೇ ಜಗವನೇನೂ ಮರೆವೇ .. 
ಕಣ್ಣ ಮಿಂಚಿನಲಿ ನಗೆಯ ಸಂಚಿನಲಿ ನಾನು ನಿನ್ನ ಸೆಳೆವೇ... 
ತುಟಿಯ ಅಂಚಿನಲಿ ಮಧುವ ಸೇವಿಸುತೇ ಜಗವನೇನೂ ಮರೆವೇ .. 
ದೇವೀರಿಸೇ ನಿನ್ನಾಸೆಯ ನಾನಿಲ್ಲಿ ಕಾದಿರುವೇ ... 
ವಿನೂತನ ವಿನೋದವ ಇಂದಿಲ್ಲಿ ನೀ ಪಡೆವೇ ... 
ಬಾಬಾ ಬಾಬಾ  ಹೊಸ ಗೆಳೆಯಾ .. ಮಾಡಿಕೋ ನನ್ನ ಪರಿಚಯ.. 
ಯಾರೂ ... ನೀ ನಾರೂ ... 

ದಾಹ ತೀರಿಸಿಕೋ ದಣಿವ ಆರಿಸಿಕೋ ಬಂದು ನನ್ನ ಬಳಿಗೇ ... 
ಸ್ನೇಹ ನೀಡಿದರೇ.. ಸರಸ ತೋರಿದರೇ .. ಏನು ನಿನ್ನ ಕೊಡುಗೆ... 
ದಾಹ ತೀರಿಸಿಕೋ ದಣಿವ ಆರಿಸಿಕೋ ಬಂದು ನನ್ನ ಬಳಿಗೇ ... 
ಸ್ನೇಹ ನೀಡಿದರೇ.. ಸರಸ ತೋರಿದರೇ .. ಏನು ನಿನ್ನ ಕೊಡುಗೆ... 
ಈ ಹೆಣ್ಣಿನ.. ಆಮಂತ್ರಣ.. ಬೇಕಿಲ್ಲವೇ.. ನಿನಗೇ.. 
ಓ ಗುಟ್ಟು ಬಾ..  ಚಳಿ ಬಿಟ್ಟು ಬಾ.. ನೀನೆನ್ನ ಬೇಡಿಕೆಗೇ ..     
ಬಾಬಾ ಬಾಬಾ  ಹೊಸ ಗೆಳೆಯಾ .. ಮಾಡಿಕೋ ನನ್ನ ಪರಿಚಯ.. 
ಬಾಬಾ ಬಾಬಾ  ಹೊಸ ಗೆಳೆಯಾ .. ಮಾಡಿಕೋ ನನ್ನ ಪರಿಚಯ.. 
ಯಾರೂ ... ನೀ ನಾರೂ ... 
-------------------------------------------------------------------------------------------------------------

ಮಾಲತಿ ಮಾಧವ (೧೯೭೧) - ಸೋದರಿಯೇ ತಾಯಾಗಿ ನಾನಿರುವೇ 
ಸಂಗೀತ : ಟಿ.ಜೆ.ಲಿಂಗಪ್ಪ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಜಾನಕೀ 

ವಿಧಾತನ ಆಟವನು ಬಲ್ಲವರೇ ಯಾರೇ... ಹೆಣ್ಣಿನ ಬಾಳೆಲ್ಲಾ.. ಕಣ್ಣೀರ ಧಾರೇ .. 
ಸೋದರಿಯೇ ತಾಯಾಗಿ ನಾನಿರುವೆ ಬಾರೇ ....  
ಸೋದರಿಯೇ ತಾಯಾಗಿ ನಾನಿರುವೆ ಬಾರೇ ....  
ನೊಂದಂಥ ಬಾಳಲ್ಲಿ ಈ ಭಾಗ್ಯ ತಾರೆ... 
ಸೋದರಿಯೇ ತಾಯಾಗಿ ನಾನಿರುವೆ ಬಾರೇ ....

ನಾನಂದೂ ಕಂಡಂಥ ಸವಿಗನಸು ನೂರೂ .... 
ನನಗಾಗುವ ಮುನ್ನ ನೂರಾರು ಚೂರು 
ನೆರೆಹೊರೆಯ ಜನರಿಂದ ನಿಂದಿಹಲಿ ನನ್ನ 
ನಿನಗಾಗಿ ತಾಳುವೇನು ಎಲ್ಲವನು ಚಿನ್ನ.. ಜೋ.... 
ಸೋದರಿಯೇ ತಾಯಾಗಿ ನಾನಿರುವೆ ಬಾರೇ ....

ಬಾಳಿನಾ ಬೆಗೆಯಲಿ ಬಳಲಿ ನಿಂದಾಗ 
ವೇದನವ ನಾ ಪಡೆವೆ ನೀ.. ನನಗುವಾಗ   
ಆಸೆಯ ದೀಪವಿದು ಆರಿರುವ ವೇಳೆ 
ನಂಬಿಕೆಯ ಬೆಳಕಾಗಿ ನೀನಿರುವೇ ಕೇಳೇ.... 
ಸೋದರಿಯೇ ತಾಯಾಗಿ ನಾನಿರುವೆ ಬಾರೇ ....
ನೊಂದಂಥ ಬಾಳಲ್ಲಿ ಈ ಭಾಗ್ಯ ತಾರೆ... 
ಸೋದರಿಯೇ ತಾಯಾಗಿ ನಾನಿರುವೆ ಬಾರೇ ....
------------------------------------------------------------------------------------------------------------- 

ಮಾಲತಿ ಮಾಧವ (೧೯೭೧) - ಆಹಾ ನಾ ಮರೆಯಲಾರೇ 
ಸಂಗೀತ : ಟಿ.ಜೆ.ಲಿಂಗಪ್ಪ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ, ಬೆಂಗಳೂರುಲತಾ 

ಈ ಹಾಡಿನ ಸಾಹಿತ್ಯ ಲಭ್ಯವಿರುವುದಿಲ್ಲ.. 
-------------------------------------------------------------------------------------------------------------

No comments:

Post a Comment