1527. ದೇವತೆ (೧೯೮೬)



ದೇವತೆ ಚಲನಚಿತ್ರದ ಹಾಡುಗಳು
  1. ಎದೆಯ ಗುಟ್ಟಾದ ಮಾತೂ
  2. ಹಾಡಬೇಕೇ ನಾ ಹಾಡಬೇಕೆ ನೀ ಕೇಳಬೇಕೆ
  3. ಅಮ್ಮಾ ಎಂಬ ಆ ಕರೆಯೂ
  4. ಈ ಮುದ್ದು ಕೃಷ್ಣನ ಹೆತ್ತ ದೇವಕಿ ತಾಯಿ 
ದೇವತೆ (೧೯೮೬) - ಎದೆಯ ಗುಟ್ಟಾದ ಮಾತೂ
ಸಂಗೀತ : ಎಂ.ಎಸ್.ವಿಶ್ವನಾಥನ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಜಾನಕೀ, ಎಸ್.ಪಿ.ಬಿ. 

ಗಂಡು : ಹಲೋ.. ಮೋಹನ ಸ್ಪೀಕಿಂಗ್... 
ಹೆಣ್ಣು : ಹಲೋ ಡಾರ್ಲಿಂಗ್ ಗುಡ್ ನ್ಯೂಸ್ (ಏನೂ ) ನೀನೇ ಗೆಸ್ ಮಾಡೂ ..   
ಗಂಡು : ಅ .. ಅಮ್ ನಿಮ್ಮ ಮನೆ ನಾಯಿ ಮರಿಗಳ್ ಹಾಕ್ತಾ.. 
ಹೆಣ್ಣು : ಅಹ್ಹಹ್ಹ..ನೋ..  ನೋ.. ರಾಂಗ್  ಗೇಸ್.. ಅಗೈನ್ 
ಗಂಡು : ಗೊತ್ತಾಗಲಿಲ್ಲ ಹೇಳೂ .. 
ಹೆಣ್ಣು : ಸಸ್ಪೆನ್ಸ್.. ಹೇಳೋಲ್ಲ... 
ಗಂಡು : ಅಯ್ಯೋ... ಡೋಂಟ್ ಗೆಸ್ ಮೈ ಪೇಷನ್ಸ್ ಆಯ್ ಸೇ   ಪ್ಲೀಸ್ ಹೇಳೂ .. 
ಹೆಣ್ಣು : ಹೂಂ..  ಹೂಂ .. ಮುಂದಿನ ತಿಂಗಳೂ ಮೂವತ್ತನೇ ತಾರೀಖು ನಂಗೂ ನಿಂಗೂ ಮದುವೇ ... 
ಗಂಡು : ಹೋಯ್ ... ಹೇಯ್ ತರರರೂರು ರೂರೂರು ರೂರೂರು ರರರರ ರರರರ ರರರರ 
            ರರರರ  ರರರರ  ರರರರ  ರರರರ  ರಂ ... 
ಹೆಣ್ಣು : ಎದೆಯ ಗುಟ್ಟಾದ ಮಾತೂ ನನಗೆ ಗೋತ್ತಾದ ಹೊತ್ತೂ 
          ಎದೆಯ ಗುಟ್ಟಾದ ಮಾತೂ ಅದು ನಿನಗೆ ಗೋತ್ತಾದ ಹೊತ್ತೂ 
          ಹೇಗೆ ಈಗ ನಿನ್ನ ಮನಸೂ ಹೇಳೂ ನೀನೂ ಬೇಗ.. 
ಗಂಡು : ಹೇ...ಏಏಏಏಏ.. ಸಂತೋಷ ಮೈ ತುಂಬಿದೆ.. ಮನ ನಿಂಗಾಗಿ ಹುಚ್ಚಾಗಿದೇ 
           ಹೇ...ಏಏಏಏಏ.. ಸಂತೋಷ ಮೈ ತುಂಬಿದೆ.. ಮನ ನಿಂಗಾಗಿ ಹುಚ್ಚಾಗಿದೇ 
           ಸೆಳೆದೂ.. ನಿನ್ನಾ ಅಪ್ಪಿ ಮುದ್ದು ಮಾಡೋ ನೂರಾಸೇ ಉಂಟಾಗಿದೇ .. (ಹ್ಹಾ) 
           ಆ... ಆಕಾಶ ಕೆಳಗಾಗಿದೇ ಈ ಭೂಮಿ ತೇಲಾಡಿದೇ ಯೂ ನೋ ದ್ಯಾಟ್ (ಆ)
           ಆಕಾಶ ಕೆಳಗಾಗಿದೇ (ಅಹ್ಹಹ್ಹಹ್ಹ) ಈ ಭೂಮಿ ತೇಲಾಡಿದೇ ಅಹ್ಹ ಹ್ 

ಹೆಣ್ಣು : ಓಓ.. ಓಓಓ..  ನಿನ್ನಂತೇ ನನಗಾಗಿದೆ ಈ ಉಸಿರಿಲ್ಲಿ ನಿಂತ ಹೋಗಿದೇ... 
          ಹೃದಯಾ.. ತಾಳ ತಪ್ಪಿ ವೇದ ಮೀರಿ ಎಲ್ಲೆಲ್ಲೂ ಓಡಾಡಿದೇ..  
          ಎದೆಯ ಗುಟ್ಟಾದ ಮಾತೂ ಅದು ನಿನಗೆ ಗೋತ್ತಾದ ಹೊತ್ತೂ 
          ಹೇಗೆ ಈಗ ನಿನ್ನ ಮನಸೂ ಹೇಳೂ ನೀನೂ ಬೇಗ.. 
ಇಬ್ಬರು : ಆಹಾ... ಆಹಾ.. 

ಗಂಡು : ನನಗೂ ನಿನಗೂ ನಡುವೆ ಎನಿತು ದೂರ ಚೆಲುವೇ .. 
            ನಿಮಿಷ ನಿಮಿಷ ಯುಗವೀಗ ದಹಿಸಿ ಬೆಂದು ಇರುವಾಗ 
ಹೆಣ್ಣು : ಆಸೆಯೂ..  ಹಕ್ಕಿಯ..  ಮೇಲೆ ನೀ..  ಹಾರಿ ಬಾ 
          ಬೇಡಿಕೆ..  ನೀಗುವೇ..ಇಲ್ಲಿಗೇ .. ಓಡಿ .. ಬಾ 
ಗಂಡು : ಹೇ.. ಏಏಏಏಏ ಈ ದಾಹ ತಂಪಾಗಿಸೂ ನೀ ನನ್ನಾಸೆ ಈಡೇರಿಸು ನಲ್ಲೇ ... 
           ನನ್ನ ನಿನ್ನ ಜೋಡಿ ಚೆನ್ನ ನನ್ನನ್ನೂ ಆಲಂಗಿಸೂ ...  
ಹೆಣ್ಣು : ಆ..ಆ ಆ ಆ ಎದೆಯ ಗುಟ್ಟಾದ ಮಾತೂ (ಉಮ್) ಅದು ನಿನಗೆ ಗೋತ್ತಾದ ಹೊತ್ತೂ (ಅಹ್ಹಹ್ಹಹ್ಹಹ್ ) 
          ಹೇಗೆ ಈಗ ನಿನ್ನ ಮನಸೂ ಹೇಳೂ ನೀನೂ ಬೇಗ.. 
ಇಬ್ಬರು : ಆಹಾ... ಆಹಾ.. 

ಹೆಣ್ಣು : ಮದುವೆ ತನಕ ಪ್ರಣಯ ಅದುವೇ ಬಳಿಕ ಪ್ರಳಯ ಓಓಓ .. 
          ಇದುವೇ ನಮಗೆ ಸುಳ್ಳಂತೆ ದಿನವೂ ಸಿಹಿಯ ಕಥೆಯಂತೇ .. 
ಗಂಡು : ಪ್ರೇಮದ ಕಾವ್ಯಕೇ .. ನೀನೇಯೇ ನಾಯಕೀ .. ನಿನ್ನಯ ಬಾಳಲೀ ನಾನೇಯೇ ನಾಯಕ.. ಹ್ಹಾ...  
ಹೆಣ್ಣು : ಓ ಓ ಓಓಓ.. ಕನಸೆಲ್ಲಾ ನನಸಾಯಿತು ಜೀವ ನಿನ್ನಲ್ಲೀ ಒಂದಾಯಿತು 
          ಬಳಿಕ ನಾನೂ ನೀನೂ ಬೇರೆ ಎಂಬ ಮಾತೆಲ್ಲಾ ಸುಳ್ಳಾಯಿತೂ .. 
ಗಂಡು : ರರರರರ..  ಎದೆಯ ಗುಟ್ಟಾದ ಮಾತೂ (ಆ..ಹ್ಹ ) ಅದು ನಿನಗೆ ಗೋತ್ತಾದ ಹೊತ್ತೂ 
ಇಬ್ಬರು :  ಹೇಗೆ ಈಗ ನಿನ್ನ ಮನಸೂ ಹೇಳೂ ನೀನೂ ಬೇಗ.. ಆಹಾ... ಆಹಾ.. 
----------------------------------------------------------------------------------------------------
 
ದೇವತೆ (೧೯೮೬) - ಹಾಡಬೇಕೇ ನಾ ಹಾಡಬೇಕೆ ಕೇಳಬೇಕೆ 
ಸಂಗೀತ : ಎಂ.ಎಸ್.ವಿಶ್ವನಾಥನ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಜಾನಕೀ, 

ಹಾಡಬೇಕೇ .. ನಾ ಹಾಡಬೇಕೇ .. 
ಹಾಡಬೇಕೇ .. ನಾ ಹಾಡಬೇಕೇ .. ಕೇಳಬೇಕೇ .. ನೀ ಕೇಳಬೇಕೇ .. 
ಕೇಳಬೇಕೇ .. ನೀ ಕೇಳಬೇಕೇ .. ನೀ ಮೀಟಿದಾಗ ಮಿಡಿವ ವೀಣೆ ನಾನೂ ... 
ನೀ ತಟ್ಟಿದಾಗ ಆಡು ಬೊಂಬೆ ನಾನೂ .. 
ಹಾಡಬೇಕೇ .. ನಾ ಹಾಡಬೇಕೇ .. ಕೇಳಬೇಕೇ .. ನೀ ಕೇಳಬೇಕೇ .. 
ನೀ ಮೀಟಿದಾಗ ಮಿಡಿವ ವೀಣೆ ನಾನೂ...  ನೀ ತಟ್ಟಿದಾಗ ಆಡು ಬೊಂಬೆ ನಾನೂ .. 
ಹಾಡಬೇಕೇ .. ನಾ ಹಾಡಬೇಕೇ .. 
 
ಲಜ್ಜೇ ಮೂಡಿ ಬಂತೂ ನೀನು ಮೆಚ್ಚಿದಾಗ ಕಾಣೆ ನಾನೇಕೋ ಏನೋ ಆವೇಗ 
ನನ್ನ ದೇಹ ಪ್ರಾಣ ನನ್ನ ಅಂದ ಚೆಂದ ನನ್ನ ಈ ಪೂಜೆ ನಿಂದೇನೇ ಈಗ 
ಯಾವ ಜನ್ಮ ಪುಣ್ಯ ನಿನ್ನ ಕಂಡ್ತು ಜನ್ಮ 
ಯಾವ ಜನ್ಮ ಪುಣ್ಯ ನಿನ್ನ ಕಂಡ್ತು ಜನ್ಮ ದೈವ ತಂದಂಥ ಈ ಸಂಯೋಗ 
ನಮ್ಮ ಜೀವಗಳ ಈ ಸಂಗಮ 
ಹಾಡಬೇಕೇ .. ನಾ ಹಾಡಬೇಕೇ .. ಕೇಳಬೇಕೇ .. ನೀ ಕೇಳಬೇಕೇ .. 
ನೀ ಮೀಟಿದಾಗ ಮಿಡಿವ ವೀಣೆ ನಾನೂ...  ನೀ ತಟ್ಟಿದಾಗ ಆಡು ಬೊಂಬೆ ನಾನೂ .. 
ಹಾಡಬೇಕೇ .. ನಾ ಹಾಡಬೇಕೇ .. 

ನಗುವೇ ರಂಗವಲ್ಲೀ .. ಮನೆಗೆ ದೀಪ ಇಲ್ಲೀ .. ಒಲವೇ ಎಂದೆಂದೂ ಶುಭ ಶೃಂಗಾರ 
ಗಂಡ ಹೆಂಡಿರೆಂದೂ ಬಾಳಿಗೆರಡು ಕಣ್ಣೂ .. ಕಣ್ಣ ಬೆಳಕೆನೇ ಮನೆಗಾಧಾರ...   
ಪ್ರೇಮ ತುಂಬಿದಾಗ ಜೀವ ಹಾಡಿದಾಗ 
ಪ್ರೇಮ ತುಂಬಿದಾಗ ಜೀವ ಹಾಡಿದಾಗ ನಿತ್ಯ ಸಂತೋಷ ಈ ಸಂಸಾರ.. 
ಹೀಗಿರಲಿನ್ನೂ ಈ ಸಂಭ್ರಮ..  
ಹಾಡಬೇಕೇ .. ನಾ ಹಾಡಬೇಕೇ .. ಕೇಳಬೇಕೇ .. ನೀ ಕೇಳಬೇಕೇ .. 
ನೀ ಮೀಟಿದಾಗ ಮಿಡಿವ ವೀಣೆ ನಾನೂ...  ನೀ ತಟ್ಟಿದಾಗ ಆಡು ಬೊಂಬೆ ನಾನೂ .. 
ಹಾಡಬೇಕೇ .. ನಾ ಹಾಡಬೇಕೇ .. 
----------------------------------------------------------------------------------------------------

ದೇವತೆ (೧೯೮೬) - ಅಮ್ಮಾ ಎಂಬ ಆ ಕರೆಯೂ 
ಸಂಗೀತ : ಎಂ.ಎಸ್.ವಿಶ್ವನಾಥನ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ವಾಣಿಜಯರಾಂ 

ಅಮ್ಮಾ... ಅಮ್ಮಾ... 
ಅಮ್ಮಾ ಎಂಬ ಆ ಕರೆಯೂ ಎನಿತು ಮಧುರವಮ್ಮಾ 
ಜಗದ ಎಲ್ಲ ಜೀವರಾಶಿ ಇದನು ತಿಳಿಯಿತಮ್ಮಾ... ಇದನು ತಿಳಿಯಿತಮ್ಮಾ... 
ಅಮ್ಮಾ ಎಂಬ ಆ ಕರೆಯೂ ಎನಿತು ಮಧುರವಮ್ಮಾ 
ಜಗದ ಎಲ್ಲ ಜೀವರಾಶಿ ಇದನು ತಿಳಿಯಿತಮ್ಮಾ... 
ಹಸಿದ ಕಂದ ಅಮ್ಮ ನೆಡೆಗೇ ಓಡಿ ಬರುವುದಮ್ಮಾ.. 
ಅಮ್ಮಾ ಎಂದೂ ಯಾರ ಬಳಿಗೆ ನಾನು ಓಡಲಮ್ಮಾ... ನಾನು ಓಡಲಮ್ಮಾ... 
ಅಮ್ಮಾ ಎಂಬ ಆ ಕರೆಯೂ ಎನಿತು ಮಧುರವಮ್ಮಾ 
ಜಗದ ಎಲ್ಲ ಜೀವರಾಶಿ ಇದನು ತಿಳಿಯಿತಮ್ಮಾ... 
(ಹೈಹೈ ಯಾರ್ ಹೈಹೈ ಯಾರ್ ಹೋಯ್ಯ್ ಹೋಯ್ಯ್ ಹೋಯ್ಯ್ ಹೋಯ್ಯ್ 
ಹೈಹೈ ಯಾರ್ ಹೈಹೈ ಯಾರ್ ಹೋಯ್ಯ್ ಹೋಯ್ಯ್ ಹೋಯ್ಯ್ ಹೋಯ್ಯ್ 
ಹೊಯ್ಯಾರ್ ಹೊಯ್ಯಾರ್ ಹೊಯ್ಯಾರ್ ಹೊಯ್ಯಾರ್  ಹೊಯ್ಯ ಹೊಯ್ಯ ಹೊಯ್ಯ 
ಹೂಂ .. ಹೂಂ .. ಹೂಂ .. )
ಹೂಂ .. ಹೂಂ .. ಹೂಂ .. ಹೂಂ .. ಹೂಂ .. ಹೂಂ .. 

ಕೂಲಿಯು ತಂದ ಆಸರೇ ಪತಿಯ ತೊರೆದ ಸೀತೆಗೆ 
ರಾಮನಾವ ಆಸರೇ.. ಅವಳಿಗುಂಟೂ ಬಾಳಿಗೇ 
ತಾಳಿ ಉಂಟೂ ಹೆಣ್ಣಿಗೇ .. ನೆನಪು ದೂರ ಕಣ್ಣಿಗೇ .. 
ಹೀಗೆ ನಾನು ಹೇಳೇ..  ತಂದೆ ಹೆಸರ ಕಂದಗೆ  
ಇದೇ ಮನೆ ಇದೇ ಸ್ವರ್ಗ ಈ ಜೀವಕೇ .. 
ಅಮ್ಮಾ ಎಂಬ ಆ ಕರೆಯೂ ಎನಿತು ಮಧುರವಮ್ಮಾ 
ಜಗದ ಎಲ್ಲ ಜೀವರಾಶಿ ಇದನು ತಿಳಿಯಿತಮ್ಮಾ... 

ತಂದೆಯಿಂದ ದೂರದಿ ಬೆಳೆದ ಭರತ ಆ ದಿನ.. 
ಅವನ ಹೆಸರಿನಿಂದಲೀ ದೇಶ ಮೆರೆವುದೀ ಈ ದಿನ 
ಕಂದ ನೀನೇ ಆಸರೇ .. ನನ್ನ ನಿನ್ನ ಪಾಲಿಗೇ .. 
ನಿನ್ನ ಮುದ್ದು ರೂಪದೇ... ಒಂದೇ ಅರ್ಥ ಬಾಳಿಗೇ ... 
ಸದಾ ಮಗು ಇದೇ ತಾಯ್ ಹಾರೈಕೆಯೂ .. 
ಅಮ್ಮಾ ಎಂಬ ಆ ಕರೆಯೂ ಎನಿತು ಮಧುರವಮ್ಮಾ 
ಜಗದ ಎಲ್ಲ ಜೀವರಾಶಿ ಇದನು ತಿಳಿಯಿತಮ್ಮಾ... ಇದನು ತಿಳಿಯಿತಮ್ಮಾ... 
ಹೂಂಹೂಂಹೂಂ  ಹೂಂಹೂಂಹೂಂ ಹೂಂಹೂಂಹೂಂ ಹೂಂಹೂಂಹೂಂ 
----------------------------------------------------------------------------------------------------

ದೇವತೆ (೧೯೮೬) - ಈ ಮುದ್ದು ಕೃಷ್ಣನ ಹೆತ್ತ ದೇವಕಿ ತಾಯಿ 
ಸಂಗೀತ : ಎಂ.ಎಸ್.ವಿಶ್ವನಾಥನ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಜಾನಕೀ, ಶಶಿರೇಖಾ 

ಗೀತಾ : ನೂರೂ ವರುಷಗಳೂ ನಲಿವನಿಂದಲೀ .. ಬಾಳು ನನ್ನ ಕಂದ... 
ಪವಿತ್ರ : ನೂರೂ ಜ್ಯೋತಿಗಳ ಬೆಳಕು ಬಾಳಲೀ ನಿನ್ನ ನಗುವಿನಿಂದಾ....ಆಆಆಅ.. 
            ಈ ಮುದ್ದು ಕೃಷ್ಣನ ಹೆತ್ತ ದೇವಕಿ ತಾಯೀ .. 
            ಈ ಮುದ್ದು ಕೃಷ್ಣನ ಹೆತ್ತ ದೇವಕಿ ತಾಯೀ  ಎನಿತು ಧನ್ಯಳೋ 
            ಅವಳೆನಿತೋ ಮಾನ್ಯಳೋ.. ಓಓಓ 
ಗೀತಾ : ಈ ತುಂಟು ಬಾಲನ ಬೆಳೆಸಿದ ಯೊಶೋಧೆ ಮಾತೇ .. 
           ಈ ತುಂಟು ಬಾಲನ ಬೆಳೆಸಿದ ಯೊಶೋಧೆ ಮಾತೇ .. 
          ಎನಿತು ಧನ್ಯಳೋ ಅವಳೆನಿತೋ ಮಾನ್ಯಳೋ.. ಓಓಓ   
ಪವಿತ್ರ  : ಈ ಮುದ್ದು ಕೃಷ್ಣನ ಹೆತ್ತ ದೇವಕಿ ತಾಯೀ  

ಪವಿತ್ರ :  ನಗೆಯ ಜೇನ ಹರಸಿದನಮ್ಮಾ ನಗೆಯ ಮುತ್ತ ಸುರಿಸಿದನಮ್ಮಾ 
             ಕುಣಿವಾ ಉಲ್ಲಾಸದ ಈ.. ನಲಿಸಿ ತುಂಟಾಟದಲೀ... 
ಗೀತಾ : ನನ್ನ ಆಧಾರ ಬಾಳ ಬಂಗಾರ ನನ್ನ ಮಡಿಲ ತುಂಬಿದ.. ಮನಕೆ ಹರುಷ ನೀಡಿದ.. 
           ಮನಕೆ ಹರುಷ ನೀಡಿದ.. 
ಪವಿತ್ರ : ಎನಿತು ಧನ್ಯಳೋ ಅವಳೆನಿತೋ ಮಾನ್ಯಳೋ.. ಓಓಓ   
ಗೀತಾ : ಈ ತುಂಟು ಬಾಲನ ಬೆಳೆಸಿದ ಯೊಶೋಧೆ ಮಾತೇ .. 
           ಈ ತುಂಟು ಬಾಲನ ಬೆಳೆಸಿದ ಯೊಶೋಧೆ ಮಾತೇ .. 
           ಎನಿತು ಧನ್ಯಳೋ ಅವಳೆನಿತೋ ಮಾನ್ಯಳೋ.. ಓಓಓ     
ಪವಿತ್ರ : ಈ ಮುದ್ದು ಕೃಷ್ಣನ ಹೆತ್ತ ದೇವಕಿ ತಾಯೀ....   

ಗೀತಾ : ಮುತ್ತಿಗೆ ನೀನೂ ಕಾಂತಿಯ ತಂದೇ .. 
              ವಿದ್ಯಾ ಜ್ಯೋತಿ ಮನಕೆ ತಂದೇ .. ಮಮತೆ ದೈವ ನಿನ್ನಮ್ಮಾ ... ಆಆಆ 
             ಇವನ ತಾಯೀ ನಿನ್ನಮ್ಮಾ .. 
ಪವಿತ್ರ : ಪ್ರೀತಿ ಹೂವನ್ನೂ ನನಗೆ ನೀ ತಂದೆ.. ಮನೆಯ ಸ್ವರ್ಗ ಮಾಡಿದೇ ...ಏಏಏಏಏ 
            ಹರುಷ ತಂದ ದೇವತೇ .. ನೀ ಹರುಷ ತಂದ ದೇವತೇ .. 
             ಎನಿತು ಧನ್ಯಳೋ ಅವಳೆನಿತೋ ಮಾನ್ಯಳೋ.. ಓಓಓ   
ಗೀತಾ : ಈ ತುಂಟು ಬಾಲನ ಬೆಳೆಸಿದ ಯೊಶೋಧೆ ಮಾತೇ .. 
           ಈ ತುಂಟು ಬಾಲನ ಬೆಳೆಸಿದ ಯೊಶೋಧೆ ಮಾತೇ .. 
           ಎನಿತು ಧನ್ಯಳೋ ಅವಳೆನಿತೋ ಮಾನ್ಯಳೋ.. ಓಓಓ     
ಪವಿತ್ರ : ಈ ಮುದ್ದು ಕೃಷ್ಣನ ಹೆತ್ತ ದೇವಕಿ ತಾಯೀ...   
---------------------------------------------------------------------------------------------------

No comments:

Post a Comment