1533. ಸುಬ್ಬಾಶಾಸ್ತ್ರಿ (೧೯೬೬)



ಸುಬ್ಬಾಶಾಸ್ತ್ರಿ ಚಲನಚಿತ್ರದ ಹಾಡುಗಳು 
  1. ಕೃಷ್ಣನ ಕೊಳಲಿನ ಕರೆ 
  2. ಕಳಬೇಡ ಕೊಲಬೇಡ 
  3. ಲೋಕಾನ್ ಉದಯನ್ 
  4. ಅರುಣೋದಯಲ್ಲೆದ್ದು  
  5. ಕೊಳಲನೂದುವ ಚದುರ ಯಾರೇ 
  6. ಕುಸುಮಾಂಜಲೀ ಹರಿ ಚರಣಕೆ 
  7. ಕರವಿಂದೇನ 
  8. ತನು ನಿನ್ನದು ಜೀವನ ನಿನ್ನದು  
  9. ಮಂಗಳ ಜಯ ಮಂಗಳ 
  10. ಶ್ರೀ ಮಂಟಪಯೋನಿಧಿ 
  11. ಏನು ಮಾಡಿದರೇನು ಭವ ಇಂಗದು 
ಸುಬ್ಬಾಶಾಸ್ತ್ರಿ  (೧೯೬೬)  - ಕೃಷ್ಣನ ಕೊಳಲಿನ ಕರೆ,
ಸಂಗೀತ: ದೊರೆಸ್ವಾಮಿ ಅಯ್ಯಂಗಾರ, ಸಾಹಿತ್ಯ: ಪು.ತಿ.ನರಸಿಂಹಾಚಾರ, ಗಾಯನ: ಶ್ರೀರಂಗಂ ಗೋಪಾಲರತ್ನಂ

ಕೃಷ್ಣನ ಕೊಳಲಿನ ಕರೆ, ಆಲಿಸು ಕೃಷ್ಣನ ಕೊಳಲಿನ ಕರೆ,
ಆಲಿಸು ಕೃಷ್ಣನ ಕೊಳಲಿನ ಕರೆ ತ್ವರೆ, ತ್ವರೆ ಕೃಷ್ಣನ ಕೊಳಲಿನ ಕರೆ

ತೊಟ್ಟಲಿನ ಹಸುಗೂಸ ಮರೆ, ಮರೆ ಪಕ್ಕದ ಗಂಡನ ತೊರೆ, ತೊರೆ
ಬೃಂದಾವನಕೆ ತ್ವರೆ, ತ್ವರೆ....  
ಕೃಷ್ಣನ ಕೊಳಲಿನ ಕರೆ ಆಲಿಸು, ಕೃಷ್ಣನ ಕೊಳಲಿನ ಕರೆ

ಮುತ್ತಿನ ಕುಪ್ಪುಸ ಹರಳೋಲೆ ಮಲ್ಲಿಗೆ ಜಾಜಿ ಮುಡಿಮಾಲೆ
ಹೆಜ್ಜೆಯ ನೇವುರ ಗೆಜ್ಜೆಯ ಪಿಲ್ಲಿ ಮರೆತೇ ಬಂದೆವೆ ಮನೆಯಲ್ಲೇ ಸಖಿ
ಕೃಷ್ಣನ ಕೊಳಲಿನ ಕರೆ ಆಲಿಸು, ಕೃಷ್ಣನ ಕೊಳಲಿನ ಕರೆ

ಹೊತ್ತಾರೆ ಹೊರೆಗೆಲಸ, ಮಿಕ್ಕರೆ ಮಿಗಲಿ ಪಕ್ಕದ ನೆರೆಹೊರೆ ನಕ್ಕರೆ ನಗಲಿ
ಬೃಂದಾವನದೋಳ್ ಆಲಿಸಿದೋ ಮುರಳೀ
ಕೃಷ್ಣನ ಕೊಳಲಿನ ಕರೆ ಆಲಿಸು, ಕೃಷ್ಣನ ಕೊಳಲಿನ ಕರೆ

ನೇಸರ ಕಿರಣ ಆಗಸದಿರುಳ ಒರೆಯಿಸುವ ರೀತಿ 
ಕೇಳೀಧರನ ಮುರಳೀ ಮಾಯೆಗೆ ಮನ ಭಿತ್ತಿತೆ ಭೀತಿ
ಇನ್ನಾಯಿತೆ ಪ್ರೀತಿ, ಇನ್ನಾಯಿತೆ ಪ್ರೀತಿ
ಕೃಷ್ಣನ ಕೊಳಲಿನ ಕರೆ ಆಲಿಸು, ಕೃಷ್ಣನ ಕೊಳಲಿನ ಕರೆ
-----------------------------------------------------------------------------------------------------------

ಸುಬ್ಬಾಶಾಸ್ತ್ರಿ  (೧೯೬೬)  - ಕಳಬೇಡ ಕೊಲಬೇಡ 
ಸಂಗೀತ: ದೊರೆಸ್ವಾಮಿ ಅಯ್ಯಂಗಾರ, ಸಾಹಿತ್ಯ: ಬಸವಣ್ಣ, ಗಾಯನ: ಬಾಲಮುರುಳಿಕೃಷ್ಣ 

ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ
ಮುನಿಯಬೇಡ ಅನ್ಯರಿಗೆ ಅಸಹ್ಯ ಪಡಬೇಡ
ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ
ಇದೇ ಅಂತರಂಗ ಶುದ್ಧಿ ಇದೇ ಬಹಿರಂಗ ಶುದ್ಧಿ
-----------------------------------------------------------------------------------------------------------

ಸುಬ್ಬಾಶಾಸ್ತ್ರಿ  (೧೯೬೬)  - ಲೋಕಾನ ಉದಯನ 
ಸಂಗೀತ: ದೊರೆಸ್ವಾಮಿ ಅಯ್ಯಂಗಾರ, ಸಾಹಿತ್ಯ: ಕನಕದಾಸರು, ಗಾಯನ: ಬಾಲಮುರುಳಿಕೃಷ್ಣ 

ಲೋಕಾನ್ ಉದಯನ್ ಶೃತೀರ್ಮುಖರನ್ ಕ್ಷೋಣೀರುಹಾನ್ ಹರ್ಷಯನ್
ಶೈಲಾನ್ ವಿದ್ರವಯನ್ ಮೃಗಾನ್ ವಿವಶಯನ್ ಗೋಬೃಂದಮಾನಂದಯನ್
ಗೋಪಾನ್ ಸಂಭ್ರಮಯನ್ ಮುನೀನ್ ಮುಕುಲಯನ್ ಸಪ್ತಸ್ವರಾನ್ ಜೃಂಬಯನ್
ಓಂಕಾರಾರ್ಥಂ ಉದೀರಯನ್ ವಿಜಯತೇ ವಂಶೀ ನಿನಾದಃ ಶಿಶೋಃ

ತನು ನಿನ್ನದು ಜೀವನ ನಿನ್ನವು ರಂಗ
ಅನುದಿನದಲಿ ಬಾಹೋ ಸುಖದು:ಖ ನಿನ್ನದಯ್ಯ
ಸವಿನುಡಿ ವೇದ ಪುರಾಣ ಶಾಸ್ತ್ರಂಗಳ
ಕಿವಿಯಿಂದ ಕೇಳುವ ಕಥೆ ನಿನ್ನದು
ನವಮೋಹನಾಂಗಿಯರ ರೂಪವ ಕಣ್ಣಿಂದ
ಎವೆಯಿಕ್ಕದೆ ನೋಡುವ ನೋಟ ನಿನ್ನದಯ್ಯ

ಮಾಯಾಪಾಶದ ಬಲೆಯೊಳಗೆ ಸಿಲುಕಿರುವಂತ
ಕಾಯ ಪಂಚೇಂದ್ರಿಯಂಗಳು ನಿನ್ನವು
ಮಾಯಾರಹಿತ ಕಾಗಿನೆಲೆಯಾದಿ ಕೇಶವ
ರಾಯ ನೀನಲ್ಲದೆ ನರರು ಸ್ವತಂತ್ರರೆ
-----------------------------------------------------------------------------------------------------------

ಸುಬ್ಬಾಶಾಸ್ತ್ರಿ  (೧೯೬೬)  - ಅರುಣೋದಯಲೆದ್ದು 
ಸಂಗೀತ: ದೊರೆಸ್ವಾಮಿ ಅಯ್ಯಂಗಾರ, ಸಾಹಿತ್ಯ: ಪುರಂದದಾಸರು, ಗಾಯನ: ಬಾಲಮುರುಳಿಕೃಷ್ಣ 

ಅರುಣೋದಯಲೆದ್ದು ಅತಿ ಸ್ನಾನಗಳ ಮಾಡಿ
ಬೆರಳೆಣಿಸಿದೆ ಅದರ ನಿಜವರಿಯದೆ
ಚರಣ ಸಾಷ್ಟಾಂಗವನು ಮಾಡಿ ನಾ ದಣಿದೆನೋ
ಹರಿ ನಿನ್ನ ಕರುಣಾಕಟಾಕ್ಷವಾಗದನಕ

ಏನು ಮಾಡಿದರೇನು ಭವ ಹಿಂಗದು
ದಾನವಾಂತಕ ನಿನ್ನ ದಯವಾಗದನಕ

ಶೃತಿಶಾಸ್ತ್ರ ಪುರಾಣಗಳನೋದಿ ಬೆಂಡಾದೆ
ಅತಿ ಶೀಲಗಳನೆಲ್ಲ ಮಾಡಿ ದಣಿದೆ
ಗತಿಯ ಪಡೆವೇನೆಂದು ಕಾಯ ದಂಡಿಸಿದೆನೋ
ರತಿಪತಿಪಿತ ನಿನ್ನ ದಯವಾಗದನಕ

ಧ್ಯಾನವನು ಮಾಡಿದೆನು ಮೌನವನು ತಾಳಿದೇ
ನಾನು ಪುರುಷಾರ್ಥಕೆ ಮನವನಿಕ್ಕಿ
ಅನಾಥ ಬಂಧು ಶ್ರೀ ಪುರಂದರವಿಠಲನ
ಧ್ಯಾನಿಸುವರೊಡಗೂಡಿ ನೆಲೆಗಾಣದನಕ
-----------------------------------------------------------------------------------------------------------

ಸುಬ್ಬಾಶಾಸ್ತ್ರಿ  (೧೯೬೬)  - ಕೊಳಲನೂದುವ ಚದುರ ಯಾರೇ 
ಸಂಗೀತ: ದೊರೆಸ್ವಾಮಿ ಅಯ್ಯಂಗಾರ, ಸಾಹಿತ್ಯ: ವ್ಯಾಸರಾಯರು, ಗಾಯನ: ಬಾಲಮುರುಳಿಕೃಷ್ಣ 

ಕೊಳಲನೂದುವ ಚದುರ ಯಾರೆ ಪೇಳಮ್ಮಯ್ಯ
ತಳಿರಂದದಿ ತಾ ಪೊಳೆವ ಕರದಿ ಪಿಡಿದು

ನಾದದಿ ತುಂಬಿತು ಗೋವರ್ಧನಗಿರಿ
ಯಾದವಕುಲ ಘನ ಒರೆದಿತು ಖಗಕುಲ
ಸಾಧಿಸಿ ನೋಡಲು ಕೃಷ್ಣನು ಈಗಲೆ
ಸಾಧ್ಯವೇ ನೀ ಬೃಂದಾವನದೊಳು

ಮೇವು ಮರೆತವು ಗೋವುಗಳೆಲ್ಲವು
ಸಾವಧಾನದಿ ಹರಿದಳು ಯಮುನೆ
ಆವು ಕಾವುತಲಿ ಗೋವಳರೆಲ್ಲರ
ಹಾವಭಾವದಲಿ ಬೃಂದಾವನದೊಳು

ಸುರರು ಸುರಿದರಾಕಾಶದಿ ಸುಮಗಳ
ಸರಿದು ಪೋಗಿ ನೋಡೆ ಬೃಂದಾವನದೊಳು
ಸಾರಿ ಸಾರಿ ಶ್ರೀಕೃಷ್ಣನು ಈಗಲು
ತುರುಗಳ ತಾ ಕಾಯ್ದ ಕದಂಬವನದೊಳು
------------------------------------------------------------------------------------------------------------

No comments:

Post a Comment