1539. ಜಾತಕ ಫಲ (೧೯೫೩)



ಜಾತಕ ಫಲ ಚಲನಚಿತ್ರದ ಹಾಡುಗಳು 
  1. ಜಾತಕ ಬಲವೇ ಬಲವಯ್ಯಾ 
  2. ಈ ಮೂಢತನವೇದೇಕೆ 
  3. ಯಾರೋ ರಮಣಿ ಸುಮಶರಣ  
ಜಾತಕ ಫಲ (೧೯೫೩) - ಜಾತಕ ಬಲವೇ ಬಲವಯ್ಯಾ 
ಸಂಗೀತ : ಟಿ.ಜಿ.ಲಿಂಗಪ್ಪ, ಸಾಹಿತ್ಯ : ಚಿ.ಸದಾಶಿವಯ್ಯ/ ಕಣಗಾಲ ಪ್ರಭಾಕರ ಶಾಸ್ತ್ರೀ ಗಾಯನ : ಪಿ.ಬಿ.ಶ್ರೀನಿವಾಸ 

ಜಾತಕ ಬಲವೇ ಬಲವಯ್ಯಾ ಗ್ರಹಗಳ ಒಲವೇ ಫಲವಯ್ಯಾ  
ಗಣಿತ ವಿಜ್ಞಾನ ವಿಲಾಸವಿದಯ್ಯಾ ಜಾಣರ ಅನುಭವ ಸತ್ಯವಿದಯ್ಯಾ 

ಮಡೆಯನ ಒಡೆತನ ಮಾಡಿಪುದಯ್ಯಾ ಮೂಢನ ಮೇಧಾವಿ ಎನ್ನಿಪುದಯ್ಯಾ 
ಬೇಡದ ಭಾಗ್ಯವ ನೀಡುವುದಯ್ಯಾ ಕಡುಗಲಿ ಪೌರುಷ ಕಲಿಸುವುದಯ್ಯಾ 
ಆಡದ ಆಟವ ಆಡಿಪುದಯ್ಯಾ ನಡೆಯದ ಕುದುರೆಯ ನಡೆಸುವುದಯ್ಯಾ 
ಜಾತಕ ಬಲವೇ ಬಲವಯ್ಯಾ ಗ್ರಹಗಳ ಒಲವೇ ಫಲವಯ್ಯಾ  
ಗಣಿತ ವಿಜ್ಞಾನ ವಿಲಾಸವಿದಯ್ಯಾ ಜಾಣರ ಅನುಭವ ಸತ್ಯವಿದಯ್ಯಾ 

ಅಡವಿಗೆ ದೂಡುತ ಅಲೆಸುವುದಯ್ಯಾ ಒಡಲುರಿ ತಾಪಡೆ ಕಾಡುವುದಯ್ಯಾ 
ಸಾಯಲು ಸಮ್ಮತಿ ಸೂಚಿಸದಯ್ಯಾ ಬಾಳಲು ಬೆಂಬಲ ತಾ ಕೊಡದಯ್ಯಾ 
ಬ್ರಹ್ಮನ ಬರಹದ ಮುನ್ನುಡಿಯಯ್ಯಾ ಭೂತ ಭವಿಷ್ಯದ ಕನ್ನಡಿಯಯ್ಯಾ 
ಜಾತಕ ಬಲವೇ ಬಲವಯ್ಯಾ ಗ್ರಹಗಳ ಒಲವೇ ಫಲವಯ್ಯಾ  
ಗಣಿತ ವಿಜ್ಞಾನ ವಿಲಾಸವಿದಯ್ಯಾ ಜಾಣರ ಅನುಭವ ಸತ್ಯವಿದಯ್ಯಾ 
---------------------------------------------------------------------------

 ಜಾತಕ ಫಲ - ಈ ಮೂಢವಿದೇಕೆ 
ಸಂಗೀತ : ಟಿ.ಜಿ.ಲಿಂಗಪ್ಪ, ಸಾಹಿತ್ಯ : ಚಿ.ಸದಾಶಿವಯ್ಯ/ ಕಣಗಾಲ ಪ್ರಭಾಕರ ಶಾಸ್ತ್ರೀ ಗಾಯನ : ಪಿ.ಬಿ.ಶ್ರೀನಿವಾಸ 

ಮೂಢತನವಿದೇಕೆ ಈ ಮೂಢತನವಿದೇಕೆ 
ಮೂಢತನವಿದೇಕೆ ಈ ಮೂಢತನವಿದೇಕೆ 
ಈ ಮೂಢನ ನಂಬಿಕೆಗೇ ನೀ ಬಲಿಯಾಗಲೇಕೆ ಮನುಜಾ.. 
ಈ ಮೂಢನ ನಂಬಿಕೆಗೇ ನೀ ಬಲಿಯಾಗಲೇಕೆ ಮನುಜಾ.. 
ಈ ಮೂಢತನವಿದೇಕೆ ಈ ಮೂಢತನವಿದೇಕೆ 
 
ಮತಿಹೀನ ಜನರ ನುಡಿಗೇ ಮತಿಗೆಡುವೇ ಏಕೆ ಮನುಜಾ 
ಮತಿಹೀನ ಜನರ ನುಡಿಗೇ ಮತಿಗೆಡುವೇ ಏಕೆ ಮನುಜಾ.. ಆಆಆ 
ಹಿತವಿಲ್ಲದಂತೇ ನುಡಿವಾ... ಸವಿಯಿಂದ ಹಾಲಿ ಜಗದೇ... ಏಏಏ..  ಹೇಹೇಹೇ  
ಗತಿಗಾಣುವವದು ನಿಜದೀ .. ಗತಿಗಾಣರವದು ನಿಜದೀ ...    
ಹಿತವಚನ ನುಡಿಯೂ ಮನುಜ ಅತಿಯಾದ ನಂಬಿಕೆಗೆ ನೀ  ಬಲಿಯಾಗಲೇಕೆ ಮನುಜಾ.. 
ಈ ಮೂಢತನವಿದೇಕೆ ಈ ಮೂಢತನವಿದೇಕೆ 

ಹುಡುಗಾಟವೆಂದು ತಿಳಿದು ಹುಸಿಯಾಗಬೇಡ ಮನುಜ 
ಹುಡುಗಾಟವೆಂದು ತಿಳಿದು ಹುಸಿಯಾಗಬೇಡ ಮನುಜ... ಆಆಆ 
ಹುಡುಗಾಟವದುವೇ ನಿಜದಿ ದೊಡ್ಡಾಟವೆನಿಸಬಹುದು..... 
ಶಕೆಗಿಂದ ಬಹುದು ಕೇಡು ಶಕೆಯಿಂದ ಬಹುದು ಕೇಡು 
ದಿಟವನ್ನು ನುಡಿಯೋ ಮನುಜ ಈ ಮೂಢನಂಬಿಕೆಗೇ ನೀ  ಬಲಿಯಾಗಲೇಕೆ ಮನುಜಾ.. 
ಈ ಮೂಢತನವಿದೇಕೆ ಈ ಮೂಢತನವಿದೇಕೆ   
--------------------------------------------------------------------------

ಜಾತಕ ಫಲ (೧೯೫೩) - ಯಾರೋ ರಮಣಿ ಸುಮಶರಣ  
ಸಂಗೀತ : ಟಿ.ಜಿ.ಲಿಂಗಪ್ಪ, ಸಾಹಿತ್ಯ : ನಾಗೇಂದ್ರರಾವ್  ಗಾಯನ : ವಸಂತಕುಮಾರಿ 


--------------------------------------------------------------------------

No comments:

Post a Comment