1541. ಆದರ್ಶ ಸತಿ (೧೯೫೫)



ಆದರ್ಶ ಸತಿ ಚಲಚಿತ್ರದ ಹಾಡುಗಳು
  1. ಓಂ ನಮೋ ನಟರಾಜ ನಮೋ
  2. ಪ್ರಭು ನನ್ನೆದೆಯ 
  3. ಪರಮೇಶನೇ ಶಿರವೇರಿದ ನಾಗದೇವ 

ಆದರ್ಶ ಸತಿ (೧೯೫೫) - ಓಂ ನಮೋ ನಟರಾಜ ನಮೋ
ಸಂಗೀತ : ಸುದರ್ಶನಂ-ಗೋದಾವರಿಮ್, ಸಾಹಿತ್ಯ : ಪರಶುರಾಮ, ಗಾಯನ : ಎಂ.ಎಲ್.ವಸಂತಕುಮಾರಿ, ಕೋರಸ್  

ಹೆಣ್ಣು :  ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ 
           ಓಂ ನಮೋ ನಮೋ ನಟರಾಜ ನಮೋ ಹರ ಜಟಾಜೂಟಧರ ಶಂಭೋ 
           ಓಂ ನಮೋ ನಮೋ ನಟರಾಜ ನಮೋ ನಮೋ ನಟರಾಜ 
ಕೋರಸ್:  ಓಂ ನಮೋ ನಮೋ ನಟರಾಜ ನಮೋ ಹರ ಜಟಾಜೂಟಧರ ಶಂಭೋ 
               ಓಂ ನಮೋ ನಮೋ ನಟರಾಜ ನಮೋ ನಮೋ ನಟರಾಜ 

ಹೆಣ್ಣು : ಗಂಗಾ ಗೌರಿ ಹೃದಯವಿಹಾರಿ         ಕೋರಸ್ :  ಗಂಗಾ ಗೌರಿ ಹೃದಯವಿಹಾರಿ 
ಹೆಣ್ಣು : ಲೀಲಾ ಕಲ್ಪಿತ ಸಂಸಾರಿ                ಕೋರಸ್ : ಲೀಲಾ ಕಲ್ಪಿತ ಸಂಸಾರಿ
ಎಲ್ಲರು : ಗಂಗಾ ಗೌರಿ ಹೃದಯವಿಹಾರಿ ಲೀಲಾ ಕಲ್ಪಿತ ಸಂಸಾರಿ
ಹೆಣ್ಣು : ಭಳಿರೇ ಭಾಸುರ ಬ್ರಹ್ಮಚಾರಿ
          ಭಳಿರೇ ಭಾಸುರ ಬ್ರಹ್ಮಚಾರಿ ಭಾವಜ ಮದ ಸಂಹಾರಿ
          ಭಾವಜ ಮದ ಸಂಹಾರಿ 
ಕೋರಸ್:  ಓಂ ನಮೋ ನಮೋ ನಟರಾಜ ನಮೋ ಹರ ಜಟಾಜೂಟಧರ ಶಂಭೋ 
               ಓಂ ನಮೋ ನಮೋ ನಟರಾಜ ನಮೋ ನಮೋ ನಟರಾಜ 

ಹೆಣ್ಣು : ಫಣಿ ಭೂಷ ಭಿಕ್ಷುಕ ವೇಷ                 ಕೋರಸ್ : ಫಣಿ ಭೂಷ ಭಿಕ್ಷುಕ ವೇಷ 
ಹೆಣ್ಣು : ಇಶಾ ತ್ರಿಭುವನ ಸಂತೋಷ           ಕೋರಸ್ : ಇಶಾ ತ್ರಿಭುವನ ಸಂತೋಷ 
ಹೆಣ್ಣು : ಅಖಿಲ ಚರಾಚರ ಅಮೃತಕಾರಿ       ಕೋರಸ್ : ಅಖಿಲ ಚರಾಚರ ಅಮೃತಕಾರಿ
ಹೆಣ್ಣು : ಹಾಲಾಹಲಗಳಾಧಾರಿ                  ಕೋರಸ್ : ಹಾಲಾಹಲಗಳಾಧಾರಿ 
ಕೋರಸ್:  ಓಂ ನಮೋ ನಮೋ ನಟರಾಜ ನಮೋ ಹರ ಜಟಾಜೂಟಧರ ಶಂಭೋ 
               ಓಂ ನಮೋ ನಮೋ ನಟರಾಜ ನಮೋ ನಮೋ ನಟರಾಜ 

ಹೆಣ್ಣು : ಮಹಾದೇವ ಜಯ ಜಯ ಶಿವ ಶಂಕರ            ಕೋರಸ್ : ಜಯ ಶಿವ ಶಂಕರ 
ಹೆಣ್ಣು : ಜಯ ತ್ರಿಶೂಲಧರ ಜಯ ಡಮರುಗಧರ        ಕೋರಸ್ : ಜಯ ಡಮರುಗಧರ 
ಹೆಣ್ಣು : ಹೇ ದೇವಾದಿ ದೇವಾ ಮಹೇಶ ಜಯ ಜಯ ಗೌರೀಶ 
          ಹೇ ದೇವಾದಿ ದೇವಾ ಮಹೇಶ ಜಯ ಜಯ ಗೌರೀಶ 
ಕೋರಸ್:  ಜಯ ಜಯ ಗೌರೀಶ 
               ಓಂ ನಮೋ ನಮೋ ನಟರಾಜ ನಮೋ ಹರ ಜಟಾಜೂಟಧರ ಶಂಭೋ 
               ಓಂ ನಮೋ ನಮೋ ನಟರಾಜ ನಮೋ ನಮೋ ನಟರಾಜ 
               ಓಂ ನಮೋ ನಮೋ ನಟರಾಜ ನಮೋ ನಮೋ ನಟರಾಜ 
              ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ 
---------------------------------------------------------------------------------------------------------

ಆದರ್ಶ ಸತಿ (೧೯೫೫) - ಪ್ರಭು ನನ್ನೆದೆಯ 
ಸಂಗೀತ : ಸುದರ್ಶನಂ-ಗೋದಾವರಿಮ್, ಸಾಹಿತ್ಯ : ಕುರಾಸೀ , ಗಾಯನ : ಪಿ.ಸುಶೀಲಾ 

ಪ್ರಭು ನನ್ನೆದೆಯೇ ನಿನ್ನಯ ಮಹಾಮಂದಿರ ನಾ ನಿನ್ನ ದಾಸಿಯು ದಯಾ ಸಾಗರ 
ಪ್ರಭು ನನ್ನೆದೆಯೇ ನಿನ್ನಯ ಮಹಾಮಂದಿರ ನಾ ನಿನ್ನ ದಾಸಿಯು ದಯಾ ಸಾಗರ 
ನಾ ನಿನ್ನ ದಾಸಿಯು ದಯಾ ಸಾಗರ 

ನೀನೇ ಉಸಿರೂ ಬಾಳಿನ ಹಸಿರು 
ನೀನೇ ಉಸಿರೂ ಬಾಳಿನ ಹಸಿರು ಹರುಷದಿ ಗೈವೇ ನಿನ್ನ ಪಾದ ಸೇವೆ 
ಹರುಷದಿ ಗೈವೇ ನಿನ್ನ ಪಾದ ಸೇವೆ ಈ ಸೇವಾ ಸೌಭಾಗ್ಯವಾ ನೀಡೇ ಎನಗೇ .. 
ಈ ಸೇವಾ ಸೌಭಾಗ್ಯವಾ ನೀಡೇ ಎನಗೇ .. 
ರೂಪವೂ ನಾ ರಮಣ ಜೀವವೂ ನಾ ಚತುರಾ ಕರುಣಾಕಾರ  
ಸದಾ ನಿನ್ನ ದರುಶನವೇ ಚಿದಾನಂದವೋ 
ಪ್ರಭು ನನ್ನೆದೆಯೇ ನಿನ್ನಯ ಮಹಾಮಂದಿರ ನಾ ನಿನ್ನ ದಾಸಿಯು ದಯಾ ಸಾಗರ 
ನಾ ನಿನ್ನ ದಾಸಿಯು ದಯಾ ಸಾಗರ 

ಮಾಗಿದ ಹಣ್ಣು ಹಾಲು ಜೇನು 
ಮಾಗಿದ ಹಣ್ಣು ಹಾಲು ಜೇನು ರುಚಿಸದು ಬಾಯಿಗೇ ಏನೇನೋ 
ರುಚಿಸದು ಬಾಯಿಗೇ ಏನೇನೋ ನಿನ್ನ ನಾಮ ಅಮೃತ ಸಾರ..  ಚಿರ ಮಧುರ..  
ನಿನ್ನ ನಾಮ ಅಮೃತ ಸಾರ.. ಚಿರ ಮಧುರ..  
ರಾಗಧರಾ.. ಸರಸ.. ಪ್ರೇಮಮಯ ಸದಯ ಉಲಿಯೋ ಧೀರ  
ಸದಾ ನಿನ್ನ ದರುಶನವೇ ಚಿದಾನಂದವೋ 
ಪ್ರಭು ನನ್ನೆದೆಯೇ ನಿನ್ನಯ ಮಹಾಮಂದಿರ ನಾ ನಿನ್ನ ದಾಸಿಯು ದಯಾ ಸಾಗರ 
ನಾ ನಿನ್ನ ದಾಸಿಯು ದಯಾ ಸಾಗರ 
---------------------------------------------------------------------------------------------------------

ಆದರ್ಶ ಸತಿ (೧೯೫೫) - ಪರಮೇಶನೇ ಶಿರವೇರಿದ ನಾಗದೇವ 
ಸಂಗೀತ : ಸುದರ್ಶನಂ-ಗೋದಾವರಿಮ್, ಸಾಹಿತ್ಯ : ಕುರಾಸೀ , ಗಾಯನ : ಎಂ.ಎಲ್. ವಸಂತಕುಮಾರಿ 

ಪರಮೇಶನೇ ಶಿರವೇರಿದ ನಾಗದೇವ 
ಸುರನೈಯಿಗೇ ಶಯನ ವೀಣೆ ನಾಗದೇವ 
ಪರಮೇಶನೇ ಶಿರವೇರಿದ ನಾಗದೇವ 
ಸುರನೈಯಿಗೇ ಶಯನ ವೀಣೆ ನಾಗದೇವ 
ನಂಬಿ ಪೂಜೆಗೈವ ಜನರ ಸೇವಾನಾಗ 
ನಂಬಿ ಪೂಜೆಗೈವ ಜನರ ಸೇವಾನಾಗ 
ಪುಂಗಿ ನಾದ ಕೇಳಿ ನೀನು ನಲಿಯೋ ನಾಗ 
ಹಾಡುವಾಗ ಆಡುವಾಗ   
ಹಾಡುವಾಗ ಆಡುವಾಗ ಪುಂಗಿ ನಾದ ಕೇಳಿ ನೀನು ನಲಿಯೋ ನಾಗ 

ಭುವನೈಷ ನಾಗಶಿವನ ಭೂಷಣ ನೀನೇ .. ಏಏಏಏಏ... ಏಏಏಏಏ 
ಭುವನೈಷ ನಾಗಶಿವನ ಭೂಷಣ ನೀನೇ 
ಕರುಣಾಮಯಿ ಗೌರಿಯರ ಶಂಕರ ನೀನೇ .. 
ಕರಶಿವತನ ಪೂಜೆಗೈದ ಸಾಧನ ನೀನೇ ..    
ಕರಶಿವತನ ಪೂಜೆಗೈದ ಸಾಧೂನನ ನೀನೇ ..    
ರವಿಚಂದ್ರರ ಪಾಲಿಗೆ ರಾಹುವೇಕೋ ನೀನೇ .. 
ಹಾಡುವಾಗ ನಲಿದಾಡುವಾಗ  
ಹಾಡುವಾಗ ನಲಿದಾಡುವಾಗ 
ಪುಂಗಿ ನಾದ ಕೇಳಿ ನಲಿದಾಡುವಾಗ 
ಪುಂಗಿ ನಾದ ಕೇಳಿ ನಲಿದಾಡುವಾಗ 
ಹಾಡುವಾಗ ನಲಿದಾಡುವಾಗ 
---------------------------------------------------------------------------------------------------------

No comments:

Post a Comment