1544. ಬಂಗಾರಿ (೧೯೬೩)


ಬಂಗಾರಿ ಚಲನಚಿತ್ರದ ಹಾಡುಗಳು 
  1. ನಾ ಹುಟ್ಟಿ ಬೆಳೆದುದು ಕನ್ನಡನಾಡು 
  2. ಕನ್ನಡದಾ ಮಗಳೇ ಬಾರೆ 
  3. ನಿನ್ನ ಕೈಬಳೆ ಝಣ ಝಣ 
  4. ಯಾರೇನ ಮಾಡುವರೋ 
  5. ತಾಯತಿಂದ ತಬ್ಬಲಿ ನೀನೆಂದು 
ಬಂಗಾರಿ (೧೯೬೩) - ನಾ ಹುಟ್ಟಿ ಬೆಳೆದುದು ಕನ್ನಡನಾಡು 
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಜಿ.ವಿ.ಅಯ್ಯರ್, ಗಾಯನ : ಜಿ.ಕೆ.ವೆಂಕಟೇಶ 

ನಾ ಹುಟ್ಟಿ ಬೆಳೆದದು ಕನ್ನಡನಾಡು 
ನಾ ಹುಟ್ಟಿ ಬೆಳೆದದು ಕನ್ನಡನಾಡು ಎನ್ನ ನರನಾಡಿ ಕರುನಾಡ ಗೂಡು 
ಕರುನಾಡ ನೆತ್ತರ ಗೂಡು 
ನಾ ಹುಟ್ಟಿ ಬೆಳೆದದು ಕನ್ನಡನಾಡು ಎನ್ನ ನರನಾಡಿ ಕರುನಾಡ ಗೂಡು 
ಕರುನಾಡ ನೆತ್ತರ ಗೂಡು 

ಶರಣರನು ಕಂಡರೆ ಶಿರಬಾಗು ನೀ ನಾಡು 
ಶರಣರನು ಕಂಡರೆ ಶಿರಬಾಗು ನೀ ನಾಡು 
ಹರಿಹರರೋಳ ಬೇಧವೇನಿಸದಮ್ಮಿ  ನಾಡು 
ಕವಿ ಮಲ್ಲ ಶಿಲ್ಪಿಗಳ ಕಲ್ಪತರು ಈ ಗೂಡು 
ಕವಿ ಮಲ್ಲ ಶಿಲ್ಪಿಗಳ ಕಲ್ಪತರು ಈ ಗೂಡು 
ಕೆಚ್ಚೆದೆಯ ವೀರರ ಸಾಹಸದ ನೆಲೆಬೀಡು... ಸಾಹಸದ ನೆಲೆಬೀಡು  
ನಾ ಹುಟ್ಟಿ ಬೆಳೆದದು ಕನ್ನಡನಾಡು ಎನ್ನ ನರನಾಡಿ ಕರುನಾಡ ಗೂಡು 
ಕರುನಾಡ ನೆತ್ತರ ಗೂಡು 

ಕರೀಮಣ್ಣ ನೆಲಹೊನ್ನು ಕಾವೇರಿ ಜಲಹೊನ್ನು 
ಕಲ್ಲುಸಕ್ಕರೆಗಿಂತ ಕನ್ನಡದ  ನುಡಿ ಚೆನ್ನು 
ಕನ್ನಡಿಗರೆದೆಯನ್ನು ಕರುಣೆಯಾ ಗುಡಿಯೆನ್ನು ಕನ್ನಡದಿ  ಮಡಿಲಲಿನ್ನೂ 
ಕನ್ನಡತಿ ಮಡಿಲಲಿನ್ನೂ ನೂರು ಜನ್ಮವಾಗಲೆನ್ನು     
ನೂರು ಜನ್ಮವಾಗಲೆನ್ನು     
ನಾ ಹುಟ್ಟಿ ಬೆಳೆದದು ಕನ್ನಡನಾಡು ಎನ್ನ ನರನಾಡಿ ಕರುನಾಡ ಗೂಡು 
ಕರುನಾಡ ನೆತ್ತರ ಗೂಡು 
----------------------------------------------------------------------------------------
 
ಬಂಗಾರಿ (೧೯೬೩) - ಕನ್ನಡದಾ ಮಗಳೇ ಬಾರೆ 
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಜಿ.ವಿ.ಅಯ್ಯರ್, ಗಾಯನ : ರಾಧಾಜಯಲಕ್ಷ್ಮಿ, ಕೋರಸ್  

ಕನ್ನಡದ ಮಗಳೇ ಬಾರೇ 
ಕನ್ನಡದ ಮಗಳೇ ಬಾರೇ  (ಬಾರೆ) 
ಕನ್ನಡಿ ಮನದಾ ಮಲ್ಲಿಗೆ ಅರಳೆ (ಮಲ್ಲಿಗೆ ಅರಳೆ )
ಕನ್ನಡದ ಮಗಳೇ ಬಾರೇ  (ಬಾರೆ) 

ಕನ್ನಡಿಗರೆದೆಯಲ್ಲಿ ಕರುನಾಡ ಗುಡಿಯಲ್ಲಿ (ಕರುನಾಡ ಗುಡಿಯಲ್ಲಿ )
ಕನ್ನಡಿಗರೆದೆಯಲ್ಲಿ ಕರುನಾಡ ಗುಡಿಯಲ್ಲಿ 
ಕನ್ನಡದ ಮಣಿದೀಪ ನೀನಾಗು ಬಾರೇ (ನೀನಾಗು ಬಾರೇ )
ಕನ್ನಡದ ನುಡಿ ಮುತ್ತ ಎಲ್ಲರಿಗೂ ನೀ ನೀಡೇ (ಎಲ್ಲರಿಗೂ ನೀ ನೀಡೇ )
ಕನ್ನಡದ ನುಡಿ ಮುತ್ತ ಎಲ್ಲರಿಗೂ ನೀ ನೀಡೇ 
ಕನ್ನಡದ ಸಿರಿದೇವಿ ನೀನಾಗೀ ಬಾರೇ (ನೀನಾಗೀ ಬಾರೇ )
ಕನ್ನಡದ ಮಗಳೇ ಬಾರೇ  (ಬಾರೆ) 
ಕನ್ನಡಿ ಮನದಾ ಮಲ್ಲಿಗೆ ಅರಳೆ  ಕನ್ನಡದ ಮಗಳೇ ಬಾರೇ  (ಬಾರೆ) 

ಹಿರಿಯವರ ಹೆಸರುಳಿಸಿ ನೆರೆಯವರ ಸಮವೆನಿಸಿ 
ಕನ್ನಡದ ಅಭಿಮಾನ ಮನೆಮನೆಗೂ ನೀ ಕಲಿಸಿ (ಮನೆಮನೆಗೂ ನೀ ಕಲಿಸಿ )
ಕನ್ನಡತಿ ಪುಣ್ಯವತೀ ಎಂಬ ಕೀರ್ತಿಯ ತಾರೇ (ಕೀರ್ತಿಯ ತಾರೇ )
ಕನ್ನಡತಿ ಪುಣ್ಯವತೀ ಎಂಬ ಕೀರ್ತಿಯ ತಾರೇ 
ರವಿಚಂದ್ರ ಇರುವತನಕ ಬೆಳಗಿಸಲು ಬಾರೇ (ಬಾರೇ ) 
ಕನ್ನಡದ ಮಗಳೇ ಬಾರೇ  (ಬಾರೆ) 
ಕನ್ನಡಿ ಮನದಾ ಮಲ್ಲಿಗೆ ಅರಳೆ  ಕನ್ನಡದ ಮಗಳೇ ಬಾರೇ  (ಬಾರೆ) 
----------------------------------------------------------------------------------------

ಬಂಗಾರಿ (೧೯೬೩) - ನಿನ್ನ ಕೈಬಳೆ ಝಣ ಝಣ 
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಜಿ.ವಿ.ಅಯ್ಯರ್, ಗಾಯನ : ಪಿ.ಬಿ.ಶ್ರೀನಿವಾಸ, ಎಸ್.ಜಾನಕೀ 

ನಿನ್ನ ಕೈ ಬಳೆ ಝಣ ಝಣ ಸದ್ದು ಮಾಡಿ ಕರೆಯಿತು 
ನಿನ್ನ ನೆನಪು ಎನ್ನ ಕಾಲ ಕುಣಿಸಿ ಕುಣಿಸಿ ತಂದಿತು 
ನಾನೇನು ಬರಲಿಲ್ಲ ಎನಗಾಸೆಯೇನಿಲ್ಲ 

ಹಾವಿನ ಕಿವಿಯವನೇ ಬಳೆಯ ಸದ್ದ ಕೇಳಿದೇಯಾ 
ಎನ್ನಾಸೆ ಕಣ್ಣಿಗೆ ಬಲೆಯ ಬೀಸೆ ಬಂದೇಯಾ 
ನಾನೇನು ಕರೆದಿಲ್ಲ ಆಯಾಸ ಬೇಕಿಲ್ಲ 
ಹಾವಿನ ಕಿವಿಯವನೇ ಬಳೆಯ ಸದ್ದ ಕೇಳಿದೇಯಾ 

ಬಾನಿನ ಚಂದ್ರನು ಎನ್ನ ಕೂಗಿ ಕರೆದನು 
ಬಂಗಾರಿ ಎನಗಿಂತ ಚೆಲುವೆಯೇನೆಂದನು 
ನಾನೇನು ಬರಲಿಲ್ಲ ಎನಗಾಸೆ ಏನಿಲ್ಲ 
ನಿನ್ನ ಕೈ ಬಳೆ ಝಣ ಝಣ ಸದ್ದು ಮಾಡಿ ಕರೆಯಿತು 

ಆಕಾಶ ಚಂದಿರನ ಅಕ್ಕರೆಯ ಚಂದಯ್ಯ 
ಏಕಾಂತದಲಿ ಅವನು ಇನ್ನೇನ ಕೇಳಿದನು 
ನಾನೇನು ಕರೆದಿಲ್ಲ ಆಯಾಸ ಬೇಕಿಲ್ಲ 
ಹಾವಿನ ಕಿವಿಯವನೇ ಬಳೆಯ ಸದ್ದ ಕೇಳಿದೇಯಾ 

ಬಂಗಾರಿ ನೆರಳೆದುರು ನಿಲ್ಲದು ಬೆಳದಿಂಗಳು 
ಬಂಗಾರಿ ನಗುವಿಗೆ ನಿನ್ನ ನೂರು ಮೊಗಗಳು 
ಈಡಾಗದೆಂದನು ತಾ ನಾಚಿ ನಿಂತನು 
ನಿನ್ನ ಕೈ ಬಳೆ ಝಣ ಝಣ ಸದ್ದು ಮಾಡಿ ಕರೆಯಿತು 

ನಾನೇನು ಬರಲಿಲ್ಲ ಎನಗಾಸೆಯೇನಿಲ್ಲ 
ಚಂದಯ್ಯ ನೀ ಎನ್ನ ಕಣ್ಣು ಮುಂದೆ ನಿಂತರೇ 
ಚಂದದ ಬಾಳಿಗೆ ಹಾಲು ಜೇನು ಸಕ್ಕರೆ 
ಸುಳ್ಳಿನ ಮಾತಿಲ್ಲ ಸಾಕ್ಷಿಯೂ ಯಾರಿಲ್ಲ 
ನಾನೇನು ಕರೆದಿಲ್ಲ ಆಯಾಸ ಬೇಕಿಲ್ಲ 
---------------------------------------------------------------------------------------

ಬಂಗಾರಿ (೧೯೬೩) - ಯಾರೇನ ಮಾಡುವರೋ 
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಜಿ.ವಿ.ಅಯ್ಯರ್, ಗಾಯನ : ರಘುನಾಥ ಪಾಣಿಗ್ರಾಹಿ 

ಯಾರೇನ ಮಾಡುವರೋ ಯಾರಿಂದಲೇನಹುದೋ 
ವಿಧಿ ಬಡಿಸಿದೂಟದಲೇ ವಿಷ ಬೆರೆಸಿ ನೀಡಿರಲು 

ಮಣ್ಣಿಂದ ಮಣ್ಣಿಗೆ ಮಾನವರ ನಂಟು 
ಪೂರ್ವಪುಣ್ಯ ಪರಿಪಾಕದ ಆ ಗಂಟು 

ಹೆತ್ತೊಡನೆ ತಾಯಿ ತಂದೆಯೂ ನಂಟು  
ಹರೆಯದೆ ಕಾಮನು ಕೆನ್ನೆಯು ನಂಟು 
ಮಂಚವು ತೊಟ್ಟಿಲು ಮದುವೆಯ ನಂಟು 
ಕಟ್ಟಿಗೆಯೂ ಕಾಡು ಸತ್ತವರಾ ನಂಟು 
----------------------------------------------------------------------------------------

ಬಂಗಾರಿ (೧೯೬೩) - ತಾಯತಿಂದ ತಬ್ಬಲಿ ನೀನೆಂದು 
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಜಿ.ವಿ.ಅಯ್ಯರ್, ಗಾಯನ : ಪಿ.ಬಿ.ಶ್ರೀನಿವಾಸ, ಎಸ್.ಜಾನಕೀ  

ತಾಯ ತಿಂದ ತಬ್ಬಲಿ ನೀನೆಂದು ಊರು ಕೂಗಲಿ 
ಅಂದಾಡುವವರು ಆಡಲಿ ಮತ್ತವರೇ ಅದಕೆ ಮರುಗಲಿ 

ತಾಯ್ ಮೊಲೆಯ ಹಾಲುಣುವ ಭಾಗ್ಯ ನೀ ತಂದಿಲ್ಲ 
ತಾಯ್ತೋಳ ತಲೆದಿಂಬ ಇಂಬು ನಿನಗಿಲ್ಲ 
ಎನ್ನೆದೆಯ ಮೇಲೋರಗು ಬಾಯೆನ್ನ ಕಂದ 
ಬಂಗಾರಿಯಿಲ್ಲಿಹಳು ಬಾಚಿ ತಬ್ಬುವಳು 

ಯಾರು ಏನೇ ಹೇಳಲಿ ಊರೆಲ್ಲ ಎನ್ನನ್ನು ದೂರಲಿ 
ಎನ್ನಾಸೆಯೆಲ್ಲಾ ತೀರಲಿ ನಾ ಬರುವೆ ನಿನ್ನ ಎದುರಲೀ 

ತಾಯಿಕರುಳ ಹಾಡಿಗೆ ತಾಳಮೇಳ ತಪ್ಪಿದೆ 
ನಿನ್ನಳುವಿನೊಂದು ಹಾಡಿಗೆ ಎನ್ನೆದೆಯ ವೀಣೆ ಕರಗಿದೆ 
ಆಸೆಯೆರಡು ಕಣ್ಣಿಗೆ ನೀ ಏಕೆ ಮಣ್ಣ ತೂರಿದೆ 
ನಾನ್ಯಾವ ಜನ್ಮ ಪೂಜೆಯಲೀ ಕಸಬೆರೆಸಿ ಹೂವ ಹಾಕಿದೆ  
---------------------------------------------------------------------------------------

No comments:

Post a Comment