- ಪ್ರಿಯತಮಾ.. ನಿನಗಿಂದು ಚಿಂತೆ ಏತಕೆ
ಚಲಿಸದ ಸಾಗರ (೧೯೮೩) - ಪ್ರಿಯತಮಾ.. ನಿನಗಿಂದು ಚಿಂತೆ ಏತಕೆ
ಸಂಗೀತ : ಸತ್ಯಂ, ಸಾಹಿತ್ಯ : ಉದಯಶಂಕರ ಗಾಯನ : ಎಸ್.ಜಾನಕೀ, ಎಸ್.ಪಿ.ಬಿ
ಸಂಗೀತ : ಸತ್ಯಂ, ಸಾಹಿತ್ಯ : ಉದಯಶಂಕರ ಗಾಯನ : ಎಸ್.ಜಾನಕೀ, ಎಸ್.ಪಿ.ಬಿ
ಹೆಣ್ಣು : ಪ್ರಿಯತಮಾ.. ನಿನಗಿಂದು ಚಿಂತೆ ಏತಕೆ ಓ... ನನ್ನಲ್ಲಿ ಕೋಪ ಏತಕೆ... ಆ..
ಕಣ್ಣಲೀ ನೀ ನಿಂತು ಏನೋ ಹುಡುಕುವೇ ಮನದಿ ಮನೆಯ ಮಾಡಿ ಎಲ್ಲಿ ಹೋಗುವೇ ..
ಗಂಡು : ಪ್ರಿಯತಮೇ .. ಏಏಏಏಏ ನನಗಿನ್ನೂ ಚಿಂತೇ ಎಲ್ಲಿದೇ .. ಓಓಓ ನೂರಾರು ಆಸೆ ಕಾದಿದೇ .. ಓಓಓ
ನನ್ನಲೀ ಏನೂ ಕಂಡು ಪ್ರೀತಿ ತೋರಿದೇ ಅರಿಯದ ಹೋಗಿ ನಿಂತು ಏಕೆ ನಟಿಸಿದೇ .
ಪ್ರಿಯತಮೇ .. ಏಏಏಏಏ ನನಗಿನ್ನೂ ಚಿಂತೇ ಎಲ್ಲಿದೇ ..
ಹೆಣ್ಣು : ನೋಟದಿ ಅಂದು ಕೂಗಲು ನೀನು ಸೋತೆನು ನಾನು ಚೆನ್ನಾ
ಮೌನದಿ ನೂರು ಪ್ರೇಮದ ಮಾತು ಆಡಿದೆಯಲ್ಲ ಜಾಣ
ನೋಟದಿ ಅಂದು ಕೂಗಲು ನೀನು ಸೋತೆನು ನಾನು ಚೆನ್ನಾ
ಮೌನದಿ ನೂರು ಪ್ರೇಮದ ಮಾತು ಆಡಿದೆಯಲ್ಲ ಜಾಣ
ಚೆಲುವನ ಸೋಕಲು ಆ ದಿನವೇ... ಬಯಕೆಗೆ ಸೇರಲು ಆ ಕ್ಷಣವೇ..
ಗಂಡು : ಬೇಡದೆ ಬಂದ ಭಾಗ್ಯವ ಕಂಡು ನಾ ಬೆರಗಾಗಿ ಜಾಣೆ
ಹೆಣ್ಣು : ಪ್ರಿಯತಮಾ.. ನಿನಗಿಂದು ಚಿಂತೆ ಏತಕೆ ಓ... ನನ್ನಲ್ಲಿ ಕೋಪ ಏತಕೆ... ಆ..
ಗಂಡು : ದೇವತೆಯಂತೆ ಬಾಳಲಿ ಬಂದೆ ಕಾಣದ ಸುಖವ ತಂದೆ
ನೋಟಕೆ ಸೋತೆ ಮಾತಿಗೆ ಸೋತೆ ಪ್ರೀತಿಗೆ ಕರಗಿ ಹೋದೆ
ದೇವತೆಯಂತೆ ಬಾಳಲಿ ಬಂದೆ ಕಾಣದ ಸುಖವ ತಂದೆ
ನೋಟಕೆ ಸೋತೆ ಮಾತಿಗೆ ಸೋತೆ ಪ್ರೀತಿಗೆ ಕರಗಿ ಹೋದೆ
ಬದುಕಲಿ ಸಂಭ್ರಮ ತುಂಬಿರುವೇ .. ಒಲವಿನ ಸಂಕಟ ತಂದಿರುವೇ ..
ಹೆಣ್ಣು : ಮಾತುಗಳಿನ್ನೂ ಏತಕೆ ಬೇಕೂ ನನ್ನವನಾಗು ಬೇಗ..
ಗಂಡು : ಪ್ರಿಯತಮೇ .. ಏಏಏಏಏ ನನಗಿನ್ನೂ ಚಿಂತೇ ಎಲ್ಲಿದೇ .. ಓಓಓ ನೂರಾರು ಆಸೆ ಕಾದಿದೇ ..ಆಆಆ
ಹೆಣ್ಣು : ಕಣ್ಣಲೀ ನೀ ನಿಂತು ಏನೋ ಹುಡುಕುವೇ ಮನದಿ ಮನೆಯ ಮಾಡಿ ಎಲ್ಲಿ ಹೋಗುವೇ ..
-----------------------------------------------------------------------------------------------------
No comments:
Post a Comment