1552. ಎಂದೂ ನಿನ್ನವನೆ (೧೯೬೬)



ಎಂದೂ ನಿನ್ನವನೆ ಚಲನಚಿತ್ರದ ಹಾಡುಗಳು
  1. ಜಗವೇ ನಗುವ ಈ ಹೂ ತೋಟ
  2. ಎಂದೂ ನಿನ್ನವನೇ ನೀನೆಂದು ನನ್ನವಳೇ 
  3. ಈ ಹರುಷ ವರ್ಷ ಧಾರೆ ಜೀವನದೇ ಮರೆಯಲಾರೆ 
  4. ಕಣ್ಣು ಕಣ್ಣು ಕಲೆತಾಗ ಕಣ್ಣಿನ ಕಾಡಿಗೆ ನಕ್ಕಾಗ 
ಎಂದೂ ನಿನ್ನವನೆ (೧೯೬೬) - ಜಗವೇ ನಗುವ ಈ ಹೂ ತೋಟ
ಸಂಗೀತ : ರಾಜನ್ ನಾಗೇಂದ್ರ ಸಾಹಿತ್ಯ : ವಿಜಯನಾರಸಿಂಹ ಗಾಯನ : ಪಿ.ಬಿ.ಎಸ್ , ಕೋರಸ್ 

ಜಗವೇ ನಗುವ ಈ ಹೂತೋಟ ಗುಲಾಬಿಗೆ ದುಂಬಿಗೆ ರಸದೂಟ 
ಗೆಲುವೆಲ್ಲ ನನ್ನ ಕೈಯಲ್ಲಿ ಎಂಬ ಛಲದಿಂದ ಫಲವ ಪಡೆವೇ .. 
ಜಗವೇ ನಗುವ ಈ ಹೂತೋಟ ಗುಲಾಬಿಗೆ ದುಂಬಿಗೆ ರಸದೂಟ 
  
ಗರಿಗೆದರಿ ವಯ್ಯಾರೀ ನಲಿದಾಡು ಆಡು ನವಿಲೇ.. 
ನೀ ಹಾಡು ಸವಿ ನೀಡು ಮನ ತುಂಬಿಸೇ ಕೋಗಿಲೇ .. 
ಸುಸಾಗರದ ಸಂಗಮಕೆ ಸವಿ ನೋಡು ನೋಡು ನಲಿಯೇ.. 
ಗಗನದಲೀ ಜಿಗಿದಾಡಿ ಸಂದೇಶ ಸಾರು ಗಿಣಿಯೇ.. 
ಸಂತೋಷ ಪಾನ ಹೀರಿ ಹೀರಿ ನಗುವೇ.. ಹೋಯ್ ... 
ಜಗವೇ ನಗುವ ಈ ಹೂತೋಟ ಗುಲಾಬಿಗೆ ದುಂಬಿಗೆ ರಸದೂಟ 
  
(ಹೋಯ್ ... ಹೊಯ್ಯ ಹೊಯ್ಯ ಮಳೆರಾಯ ಹೂವಿನ ತೋಟಕೆ ನೀರಿಲ್ಲ 
ಬಾರೋ ಬಾರೋ ಮಳೆರಾಯ ಬವಣೆಗೆ ತೋಟಕೆ ನೀರಿಲ್ಲ )
ಮಳೆರಾಯ ಬಾರಯ್ಯಾ ಮಳೆ ಕರೆದು ಬೆಳೆದು ಬೆಳೆಯಾ 
ಈ ರೈತ ಅನ್ನದಾತ ಬೆಳೆಸುವನು ನಾಡಸಿರಿಯಾ 
(ರಾಜಾಧಿ ರಾಜಾಯ ಪ್ರಸಹ್ಯ ಸಾಹಿನೇ ನಮೋ ವಯಂ ವೈಶ್ರವಣಾಯ ಕೂರ್ಮಹೇ 
 ಸ ಮೇ ಕಾಮಾನ್ ಕಾಮ ಕಾಮಾಯಾ ಮಹ್ಯಮ್ )
ಓ ಪ್ರಭುವೇ ಶರಣೆನುವೇ ಮನ ಧಾರೆ ನಮ್ಮ ಹರಸು.. 
ಒಲವಿಂದ ಒಂದಾದ ಬಾಳಲ್ಲಿ ಬೆಳಕು ಹರಿಸು.. 
ಒಡನಾಡಿಯೊಡನೇ ಕೂಡಿ ಓಡಿ ಬರುವೇ .. ಹೋಯ್ ... 
ಜಗವೇ ನಗುವ ಈ ಹೂತೋಟ ಗುಲಾಬಿಗೆ ದುಂಬಿಗೆ ರಸದೂಟ 
ಗೆಲುವೆಲ್ಲ ನನ್ನ ಕೈಯಲ್ಲಿ ಎಂಬ ಛಲದಿಂದ ಫಲವ ಪಡೆವೇ .. 
ಜಗವೇ ನಗುವ ಈ ಹೂತೋಟ ಗುಲಾಬಿಗೆ ದುಂಬಿಗೆ ರಸದೂಟ 
---------------------------------------------------------------------------------------------

ಎಂದೂ ನಿನ್ನವನೆ (೧೯೬೬) - ಎಂದೂ ನಿನ್ನವನೇ ನೀನೆಂದು ನನ್ನವಳೇ 
ಸಂಗೀತ : ರಾಜನ್ ನಾಗೇಂದ್ರ ಸಾಹಿತ್ಯ : ವಿಜಯನಾರಸಿಂಹ ಗಾಯನ : ಪಿ.ಬಿ.ಎಸ್ , ಎಸ್.ಜಾನಕೀ 

ಗಂಡು : ಎಂದೂ ನಿನ್ನವನೇ.. ನಾನೆಂದೂ ನಿನ್ನವನೇ 
            ಎಂದು ನಿನ್ನವನೇ ನೀನೆಂದು ನನ್ನವಳೇ 
           ದೇವರ ಎಣಿಕೆ ಒಲವಿನ ಕಾಣಿಕೆ ಏನೇ ಬರಲೀ ಎಂತೇ ಇರಲೀ .. 
           ಎಂದು ನಿನ್ನವನೇ ನಾನೆಂದು ನಿನ್ನವನೇ (ಹುಂಹೂಂ) 

ಹೆಣ್ಣು : ಅಹ್ಹಹಾಹಾ... ಹ್ಹಾಹಾಹಾ ಓಹೋಹೋ.. ಓಓಓ ಲಲಾ ಆಹಾ ಹುಂಹೂಂ 
ಗಂಡು : ನೀನೇ ಮಧುವಿಗೆ ಮಾದಕವೇ ನೀನೇ ಕಾವ್ಯಕೇ ರಮ್ಯತೇ .. 
ಹೆಣ್ಣು : ಅಹ್ಹಹಾಹಾ... ಹ್ಹಾಹಾಹಾ ಅಹ್ಹಹಾಹಾ... ಹ್ಹಾಹಾಹಾ  ಹುಂಹೂಂ 
ಗಂಡು : ಓಓಓ ನೀನೇ ಮಧುವಿಗೆ ಮಾದಕವೇ ನೀನೇ ಕಾವ್ಯಕೇ ರಮ್ಯತೇ .. 
           ಚೆಲುವಿಗೆ ಬೇರೆ ಹೆಸರೇ ನೀನೂ ನೀನಿರೇ ಎಲ್ಲವು ಹೂವಿಗೆ ಜೇನೂ (ಸುಮ್ಮನಿರೀ )
           ಎಂದು ನಿನ್ನವನೇ ನಾನೆಂದು ನಿನ್ನವನೇ 

ಗಂಡು : ತುಂಗೆ ಭಧ್ರೇಯ ಸಮ್ಮಿಲನ ಜನುಮ ಜನುಮದೀ ಬಂಧನ   
ಹೆಣ್ಣು : ಅಹ್ಹಹಾಹಾ... ಹ್ಹಾಹಾಹಾ ಲಾಲಾಲಲಲ್ಲಲಲ ಲಲಲಲ 
ಗಂಡು : ಓಓಓ..  ತುಂಗೆ ಭಧ್ರೇಯ ಸಮ್ಮಿಲನ ಜನುಮ ಜನುಮದೀ ಬಂಧನ   
            ಪ್ರೇಮಕೆ ಜೀವನ ಮುಡಿಪಾಗಿಡುವೇ ನಿನ್ನನ್ನೇ ನೆನೆಯುತ ನಾ ಮಡಿವೆ (ನನ್ನಾಣೆ) 
            ಎಂದು ನಿನ್ನವನೇ ನೀನೆಂದು ನನ್ನವಳೇ 
           ದೇವರ ಎಣಿಕೆ ಒಲವಿನ ಕಾಣಿಕೆ ಏನೇ ಬರಲೀ ಎಂತೇ ಇರಲೀ .. 
           ಎಂದು ನಿನ್ನವನೇ ನಾನೆಂದು ನಿನ್ನವನೇ 
----------------------------------------------------------------------------------------------

ಎಂದೂ ನಿನ್ನವನೆ (೧೯೬೬) - ಈ ಹರುಷ ವರ್ಷ ಧಾರೆ ಜೀವನದೇ ಮರೆಯಲಾರೆ 
ಸಂಗೀತ : ರಾಜನ್ ನಾಗೇಂದ್ರ ಸಾಹಿತ್ಯ : ವಿಜಯನಾರಸಿಂಹ ಗಾಯನ : ಕಲ್ಯಾಣಕುಮಾರ, ಎಸ್.ಜಾನಕೀ 

ಹೆಣ್ಣು : ಲಲಾ .. ಲಲಾ.. ಲಲಾ ಆಹಾಹಾ.. ಆಆಆ ಹೂಂಹುಂ ಹೂಂಹುಂ 
ಗಂಡು : ಹಾಡು ಉಷಿ ಹಾಡು ನನ್ನ ಹೃದಯವನೂ ಸ್ಪರ್ಶಿಸಿ 
            ಮೆಲ್ಲನೆ ತೂಗು ನಿನ್ನ ಮಧುರಗೀತೆಯನು ನಿಲ್ಲಿಸಬೇಡ.. ಹಾಡು ಉಷಿ 
ಹೆಣ್ಣು : ಈ ಹರುಷ ವರ್ಷ ಧಾರೇ ಜೀವನದೇ ಮರೆಯಲಾರೇ 
          ಏಕೋ ಏನೋ ಹೊಸ ಭಾವನೆ ಜೊತೆಯಲ್ಲಿ ನೀನಿರೇ 

ಹೆಣ್ಣು : ಮಳೆಯಿಂದ ಭೂಮಿ ನೆನೆದಿದೆ ಮನವೇನೋ ಬೇಟೆ ಆಡಿದೆ  
          ಮಳೆಯಿಂದ ಭೂಮಿ ನೆನೆದಿದೆ ಮನವೇನೋ ಬೇಟೆ ಆಡಿದೆ      
          ಆನಂದ ತಂದ ಈ ಸಂಗದಿಂದ ಉಲ್ಲಾಸ ತುಂಬಿದೇ..   ಉಲ್ಲಾಸ ತುಂಬಿದೇ..   ಅಹ್ಹಹ್ಹಹ್ಹ 
          ಈ ಹರುಷ ವರ್ಷ ಧಾರೇ ಜೀವನದೇ ಮರೆಯಲಾರೇ 
          ಏಕೋ ಏನೋ ಹೊಸ ಭಾವನೆ ಜೊತೆಯಲ್ಲಿ ನೀನಿರೇ    

ಹೆಣ್ಣು : ಹೊಸದೊಂದು ಮಿಂಚು ಮೂಡಿದೆ ಏನೇನೋ ಮೋಡಿ ಮಾಗಿದೆ 
          ಮೈಮರೆವ ತಂದ ಈ ಬಂಧದಿಂದ ರೋಮಾಂಚವಾಗಿದೆ... ರೋಮಾಂಚವಾಗಿದೆ ಅಹ್ಹಹ್ಹಹ್ಹಹ್ಹ 
ಇಬ್ಬರು : ಈ ಹರುಷ ವರ್ಷ ಧಾರೇ ಜೀವನದೇ ಮರೆಯಲಾರೇ 
          ಏಕೋ ಏನೋ ಹೊಸ ಭಾವನೆ ಜೊತೆಯಲ್ಲಿ ನೀನಿರೇ    
---------------------------------------------------------------------------------------------

ಎಂದೂ ನಿನ್ನವನೆ (೧೯೬೬) - ಕಣ್ಣು ಕಣ್ಣು ಕಲೆತಾಗ ಕಣ್ಣು ಕಾಡಿಗೆ ನಕ್ಕಾಗ 
ಸಂಗೀತ : ರಾಜನ್ ನಾಗೇಂದ್ರ ಸಾಹಿತ್ಯ : ವಿಜಯನಾರಸಿಂಹ ಗಾಯನ : ಎಲ್.ಆರ್.ಈಶ್ವರಿ 

ಕಣ್ಣು ಕಣ್ಣು ಕಲೆತಾಗ ಕಣ್ಣು ಕಾಡಿಗೆ ನಕ್ಕಾಗ  
ಕಣ್ಣು ಕಣ್ಣು ಕಲೆತಾಗ ಕಣ್ಣಿನ ಕಾಡಿಗೆ ನಕ್ಕಾಗ  
ಮೈಮೈ ಕಾಣದೆ ಸೋಕಾಗ ಆತನ ಮನದ ಆವೇಗ 
ಬಲ್ಲೆನು ಹೇಳೇ ಬೇಗ.. ಅದುವೇ ಮೋಹ ಅನುರಾಗ 

ಸಲಿಗೆ ತೋರಲು ಬಿಗುಮಾನ ಸರಸವನಾಡಲು ಅಭಿಮಾನ 
ಏನದು ಅವನಿಗೇ ಅನುಮಾನ ಅದುವೇ ಒಲವಿನ ಸಂಧಾನ 
ತಿಂಗಳ ಬೆಳಕಲಿ ಜೊತೆಯಾದ ನನ್ನಿ ಅಂದದ ಸವಿ ಸವಿದ 
ಏತಕೆ ದೂರದಿ ತಾ ನಿಂದಾ ಇದುವೇ ಪ್ರಣಯದ ಅನುಬಂಧ 
ಬ್ಯಾಸಾರ ಕಳೆಯುವ ವೇಳೆಯಲೀ ಮೈಮರವೇಕೆ ನನ್ನ ಬಳಿ 
ಅವನಾ.. ಕೋಮನಾ.. ರಂಗೂ ..   
ಕಣ್ಣು ಕಣ್ಣು ಕಲೆತಾಗ ಕಣ್ಣಿನ ಕಾಡಿಗೆ ನಕ್ಕಾಗ  
ಕೈಯ್ಯಿ ಮೈಯ್ಯಿ ಕಾಣದೆ ಸೋಕಾಗ ಆತನ ಮನದ ಆವೇಗ 
ಬಲ್ಲೆನು ಹೇಳೇ ಬೇಗ..ಹ್ಹಾ .. ಅದುವೇ ಮೋಹ ಅನುರಾಗ 

ಕನಸಲೀ ಅವನೇ ಬರುತಾನೇ ಕಂಡು ಕಾಣದೇ ನಗುತಾನೇ 
ಕಣ್ಣು ಮುಚ್ಚಾಲೇ ಇದೆಯೆನೇ ಇದುವೇ ಪ್ರೀತಿಯ ಕರೆ ಜಾಣೆ 
ಮೂಗಿನ ತುದಿಯಲಿ ಮುನಿಸೇಕೆ ಕನಸಲಿ ಕೆಣಕಿ ಕಾವಲಿಕೆ 
ತುಂಟನ ಕಾಟ ನನಗೇಕೆ ಅದುವೇ ನಿನ್ನ ಜಿಗಿ ನೋಟೇ 
ಬರೆಸೆಳೆದಪ್ಪುಗೇ ಅವನೇಕೆ ಮಧುರಕೆ ಸವಿದೆ ನೀನೇಕೆ ಅದುವೇ ಮೋಹ ಅನುರಾಗ 
ಕಣ್ಣು ಕಣ್ಣು ಕಲೆತಾಗ ಕಣ್ಣಿನ ಕಾಡಿಗೆ ನಕ್ಕಾಗ  
ಕೈಯ್ಯಿ ಮೈಯ್ಯಿ ಕಾಣದೆ ಸೋಕಾಗ ಆತನ ಮನದ ಆವೇಗ 
ಬಲ್ಲೆನು ಹೇಳೇ ಬೇಗ..ಹ್ಹಾ .. ಅದುವೇ ಮೋಹ ಅನುರಾಗ 
ಆಹ್ಹಾಹಾಹಾಹಾ ಆಆಆಆಅ ಆಆಆ ಹುಂಹೂಂಹುಮ್ 
---------------------------------------------------------------------------------------------

No comments:

Post a Comment